ತುಮಕೂರು: ನಾಡೋಜ ಡಾ. ಬರಗೂರು ಪ್ರತಿಷ್ಠಾನದ ವತಿಯಿಂದ ಫೆಬ್ರವರಿ 15ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರೊ. ಬರಗೂರರು ರಾಮಚಂದ್ರಪ್ಪ ಅವರ ಹುಟ್ಟೂರಿನ ಮನೆಯ ಮಿನಿ ಮ್ಯೂಜಿಯಂ ತೊಟ್ಟಿಲು ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಚಲನಚಿತ್ರ ಕಲಾವಿದರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಸುಂದರರಾಜ್ ಚಲನ ಚಿತ್ರನಟಿ ರೇಖಾ,ಚಲನಚಿತ್ರ ಕಲಾವಿದ ಕುಮಾರ್ ಗೋವಿಂದ್ ಭಾಗವಹಿಸುವರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಸುಂದರರಾಜ ಅರಸು ರವರು ಆಶಯ ನುಡಿಗಳನ್ನಾಡುವರು, ಪ್ರೊ. ಬರಗೂರರು ಹುಟ್ಟಿದ ಮನೆ ಮಿನಿ ಮ್ಯೂಜಿಯಂ ತೊಟ್ಟಿಲು ಕುರಿತು ಸಾಹಿತಿ ಡಾ. ರಾಜಪ್ಪದಳವಾಯಿ ಮಾತನಾಡುವರು ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಡಾ. ಶಮಿತಾ ಮಲ್ನಾಡ್‍ರವರಿಂದ ಕನ್ನಡ ಗೀತಾಗಾಯನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರತಿಷ್ಠಾನದ ಪದಾಧಿಕಾರಿಗಳು, ಬರಗೂರರ ಕುಟುಂಬ ವರ್ಗ, ಬರಗೂರಿನ ಸಮಸ್ತ ನಾಗರಿಕರು ಮನವಿ ಮಾಡಿದ್ದಾರೆ.