ಹೆಲ್ತ್

ಮನಸ್ಸಿನ ಮೇಲೆ ಹಿಡಿತ ಇಲ್ಲದಿದ್ದರೆ ಏನಾಗುತ್ತೆ?

ಮನಸನ್ನು ಯಾರೂ ನೋಡಲು ಸಾಧ್ಯವಿಲ್ಲ. ಅದು ಆತ್ಮವೇ? ನಮ್ಮೊಳಗಿನ ಬುದ್ಧಿ ಶಕ್ತಿಯೇ? ಇದು ಏಕೆ ಯಾರ ಕಣ್ಣಿಗೂ ಕಾಣುವುದಿಲ್ಲ. ಬಹುತೇಕ ಜನರಿಗೆ ಮಾತೂ ಕೇಳುವುದಿಲ್ಲ.

ಮನಸ್ಸು ಎಚ್ಚರ ತಪ್ಪದಂತೆ ನೋಡಿಕೊಳ್ಳುವುದೇ ಎಲ್ಲರ ಮುಂದಿರುವ ದೊಡ್ಡ ಸವಾಲು!

ಮನಸ್ಸು ಎಚ್ಚರ ತಪ್ಪಿದರೆ ಮನೆಯಲ್ಲಿ ಗಲಾಟೆ ಶತ ಸಿದ್ಧ. ನಮ್ಮ ಕಣ್ಣಿನ ನೇರಕ್ಕೆ ಬೇರೆಯವರು ನಡೆದುಕೊಳ್ಳುತ್ತಿಲ್ಲ, ನಡೆದುಕೊಂಡಿಲ್ಲ ಎಂಬ ಕಾರಣದಿಂದಲೇ ಬಹಳಷ್ಟು ಜನರಿಗೆ ಮನಸ್ಸು ಹಾದಿ ತಪ್ಪುವುದುಂಟು. ಇದರ ಪರಿಣಾಮ ಏನು?

ಇವರ ಹೆಸರು ಬೇಡ. ಒಳ್ಳೆಯ ವ್ಯವಹಾರಿ. ಸರಳ ವ್ಯಕ್ತಿ. ಕಾರು, ಮನೆ ಎಲ್ಲ ಇತ್ತು. ಆ ದಿನ ಸಣ್ಣ ವಿಚಾರಕ್ಕೆ ಹೆಂಡತಿ ನನ್ನ ಮಾತು ಕೇಳಲಿಲ್ಲ ಎಂದು ಕೋಪತಾಪದಲ್ಲಿ ಮನಸ್ಸು ಸಂಯಮ ಕಳೆದುಕೊಂಡಿತು. ಜಗಳ ಆರಂಭ.

ಪ್ರತಿ ದಿನ ಕಾರು ತೆಗೆದುಕೊಂಡು ಹೋಗುತ್ತಿದ್ದ ಅವರು ಜಗಳದ ಕಾರಣ ಕಾರು ಕೀ ಮನೆಯಲ್ಲೆ ಎಸೆದು ಬೈಕ್ ಹತ್ತಿದರು.

ಫ್ಯಾಕ್ಟರಿ ಸಮೀಪವೇ ಬೈಕ್ ಸ್ಕಿಡ್ ಆಗಿ ಬಿದ್ದರು. ತಲೆಗೆ ಪೆಟ್ಟಾಗಿ ಎಚ್ಚರ ತಪ್ಪಿದರು. ಲಕ್ಷಾಂತರ ರೂಪಾಯಿ ಆಸ್ಪತ್ರೆಗೆ ಸುರಿದರು. ಆದರೂ ಅವರು ಎಚ್ಚರಗೊಳ್ಳಲಿಲ್ಲ. ಎಲ್ಲರನ್ನೂ ಅಗಲಿದರು.

ಘಟನೆ ಎರಡು: ಆಗಷ್ಟೇ ಗಂಡನಿಗೆ ಹೆಂಡತಿ ಟೀ ಕೊಟ್ಟಿದ್ದಳು. ಟೀ ಕುಡಿದ ಗಂಡ ಟೀಪಾಯಿ ಮೇಲೆಯೇ ಲೋಟ ಮಡಗಿದ.

ಬೇರೆ ಕೆಲಸಗಳನ್ನು ಮಾಡುತ್ತಿದ್ದ ಹೆಂಡತಿ ಕೊನೆಯಲ್ಲಿ ಮನೆಯಿಂದ ಹೊರಗೆ ಹೋಗುವಾಗ ಲೋಟ ನೋಡಿ ನಖಾಶಿಖಾಂತ ಕೋಪ. ಒಮ್ಮೆಲೆ ತೆಗೆದು ಒಗೆದಳು, ಸೀದಾ ಲೋಟಾ ಟೀವಿಗೆ ಬಡಿಯಿತು. ಲಕ್ಷ ರೂಪಾಯಿ ಬೆಲೆಯ ಟೀವಿಯ ಗಾಜು ಒಡೆದು ಪುಡಿ ಪುಡಿ.

ಮನಸ್ಸಿನ ಮೇಲೆ ಸಂಯಮವನ್ನು ಬೆಳೆಸಿಕೊಳ್ಳಬೇಕು. ಬೇರೆಯವರ ಮೇಲೆ ಅಸಹನೆ ಆಗದಂತೆ ತಡೆಯಬೇಕು. ಶಾಂತ ಚಿತ್ತತೆಯ ಅನುಕೂಲ ಬಹಳ ಅಲ್ಲವೇ?

ನಂದನವನ


Comment here