Friday, March 13, 2026
Google search engine
Home Blog Page 61

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬ್ಬರಿಗೆ 10 ಕೆಜಿ ಅಕ್ಕಿ: ಸಿದ್ದರಾಮಯ್ಯ

0

ತುರುವೇಕೆರೆ : ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.


ಪಟ್ಟಣದ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.


ಹೆಚ್ಚು ವಿಸ್ತರಿಸಿ ಕೆರೆ ಕಟ್ಟೆಗಳನ್ನು ತುಂಬಿಸಿ ಅಂರ್ತಜಲವನ್ನು ವೃದ್ದಿಸಲಾಗುವುದು. ಇವುಗಳ ಜೊತೆಗೆ 7 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ಮೇಕೆ ದಾಟು, ಎತ್ತಿನಹೊಳೆ ಹೀಗೆ ಹಲವು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ
ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿವರು 2018 ರಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು ಅದರಲ್ಲಿ ಕೊನೆ ಪಕ್ಷ ಹತ್ತು ಪರ್ಸೆಂಟ್ ಕೆಲಸ ಮಾಡೋದಿಕ್ಕೆ ಆಗಲಿಲ್ಲ ಬರೀ ಸುಳ್ಳುಗಾರರು ಎಂದು ಕುಟುಕಿದರು.


ನಾನು ಮುಖ್ಯ ಮಂತ್ರಿಯಾಗಿದ್ದಾಗ 50 ಸಾವಿರ ಕೋಟಿಯನ್ನು ರಾಜ್ಯದ ಅಭಿವೃದ್ದಿಗೆ ಖರ್ಚು ಮಾಡಿದ್ದೇನೆ. ಬಿಜೆಪಿ ಸರ್ಕಾರ ಈ ರಾಜ್ಯದ ಜನರಿಗೆ ದ್ರೋಹ ಎಸಗಿದೆ. ನಾವು ಜಾರಿಗೆ ತಂದ ಅನ್ಯಭಾಗ್ಯ, ಶಾದಿ ಭಾಗ್ಯದಂತಹ ಹಲವು ಜನರ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ. ಅದರಲ್ಲೂ ರೈತರಿಗೋಸ್ಕರ ಮಾಡಿದ ಕೃಷಿ ಭಾಗ್ಯವನ್ನೂ ಸಹ ನಿಲ್ಲಿಸಿದ್ದಾರೆ. ದೇವರಾಜು ಅರಸು, ಅಂಬೇಡ್ಕರ್ ಹೀಗೆ ಅನೇಕ ನಿಗಮಗಳಿಗೆ ಸಾವಿರಾರುಕೋಟಿ ಹಣ ನೀಡಿದ್ದೆ ಅವೆಲ್ಲವನ್ನೂ ಈ ಬೊಮ್ಮಾಯಿ ಸರ್ಕಾರ ನಿಲ್ಲಿಸಿದೆ.


ನಾಡಿಗಾಗಿ ದುಡಿದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯನ್ನು ಮೊದಲು ಮಾಡಿದ್ದು ಕಾಂಗ್ರೆಸ್ ಸರ್ಕಾರವೇ ವಿನಹ ಬಿಜೆಪಿ, ಜೆಡಿಎಸ್ನ ದೇವೇಗೌಡರಾಗಲಿ ಅಲ್ಲ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯಾಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಅಡಿಕೆ, ಕಬ್ಬು, ತೆಂಗು ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತ ಕಂಗಾಲಾಗಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ದ್ರೋಹವೆಸಗುತ್ತಿವೆ ಎಂದು ದೂರಿದರು.

ಮುಖ್ಯ ಮಂತ್ರಿ ಬೊಮ್ಮಾಯಿ ಅವರ ಸರ್ಕಾರ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಾ ಅವರ ಆತ್ಮಹತ್ಯೆಗೆ ಕಾರಣವಾಗುತ್ತಿದೆ.
ಪ್ರಧಾನಿಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರದೇ ಅವರ ಎದುರು ಬಸವರಾಜು ಬೊಮ್ಮಾಯಿವರು ನಾಯಿಮರಿಯಂತೆ ಇರುವುದನ್ನ ಖಂಡಿಸಿದ್ದು ತಪ್ಪೇ? ಇಲ್ಲಿನ ನಾಯಕರಿಗೆ ದಮ್ಮಿದ್ದರೆ ಕೇಂದ್ರದಿಂದ ಬರಬೇಕಾಗಿರುವ 5495 ಕೋಟಿ ವಿಶೇಷ ಅನುದಾನವನ್ನು ತರಿಸಿ ಎಂದು ಸವಾಲೆಸೆದರು.


ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು 78 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ಅದೇ ನರೇಂದ್ರ ಮೋದಿಯವರು ಅಂಬಾನಿ ಅದಾನಿಯಂತಹ ಬಂಡವಾಳಶಾಹಿಗಳ 10 ಲಕ್ಷ ಕೋಟಿ ಸಾಲವನ್ನಾ ಮಾಡಿದ್ದಾರೆಂದು ಲೇವಡಿಮಾಡಿದರು.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ವಾಸು, ಮಧು ಬಂಗಾರಪ್ಪ, ಮನೋಹರ್, ಕೋನರೆಡ್ಡಿ, ಮಂಜುನಾಥ್ ಗೌಡ, ಜಿ.ವಿಜಯ, ಬೆಮೆಲ್ ಕಾಂತರಾಜ್, ಶ್ರೀನಿವಾಸ್ ಗೌಡ ಸೇರಿದಂತೆ ಎಲ್ಲಾ ಮಾಜಿ ಶಾಸಕರುಗಳು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ವೈ.ಎಸ್.ವಿ ದತ್ತ ಕೂಡ ಸೇರಲಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿ ರಾಜೀನಾಮೆ ನೀಡಿದ್ದಾರೆ. ಈ ಭಾಗದ ಕಲ್ಪವೃಕ್ಷದ ಮೇಲೆ ಆಣೆ ಮಾಡಿ ಮತದಾರರಲ್ಲಿ ವಿನಂತಿಸುತ್ತೇನೆ ಕಾಂಗ್ರೆಸ್ ಗೆ ಮತ ನೀಡಿ ಎಂದರು.


ಸಿದ್ದಾರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯನ್ನು ಮಾಡಲಾಯಿತು. ಇಬ್ಬರಿಗೂ ಬೃಹತ್ ಗಾತ್ರದ ಗುಲಾಬಿ ಹಾರ, ಮುಸುಕಿನ ಜೋಳ, ಕೊಬ್ಬರಿ ಸೇರಿದಂತೆ ವಿವಿಧ ಹೂವಿನ ಹಾರಗಳನ್ನು ಹಾಕಲಾಯಿತು. 20 ಜೆ.ಸಿಬಿ ವಾಹನದಲ್ಲಿ ಹೂವಿನ ಮಳೆಗರೆದರು.


ಸಮಾರಂಭದಲ್ಲಿ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ, ಮಧುಬಂಗಾರಪ್ಪ ಶಾಸಕರುಗಳಾದ ಭೈರತಿ ಸುರೇಶ್, ನಾಗರಾಜ್ ಯಾದವ್, ರಮೇಶ್, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಷಡಕ್ಷರಿ, ಸ್ಥಳೀಯ ಮುಖಂಡ ಬೆಮೆಲ್ ಕಾಂತರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡರುಗಳಾದ ಎನ್.ಆರ್.ಜಯರಾಂ, ಬಿ.ಎಸ್.ವಸಂತ್ಕುಮಾರ್, ಗೀತಾರಾಜಣ್ಣ, ಶ್ರೀಕಂಠೇಗೌಡ, ಲೋಕೇಶ್ವರ್, ಚೌದ್ರಿರಂಗಪ್ಪ, ನಾಗೇಶ್, ಗೋಣಿ ತುಮಕೂರು ಲಕ್ಷ್ಮೀಕಾಂತ್ ಕಾರ್ಯಕರ್ತರು ಇದ್ದರು.

ಶಿವಚಿತ್ತಪ್ಪ ವಿರುದ್ಧ ಶಿಸ್ತುಕ್ರಮಕ್ಕೆ ವಿಚಾರಣೆಗೆ ಆದೇಶ

0

ತುಮಕೂರು ವಿಶ್ವವಿದ್ಯಾಲಯದ ಕುಲ ಸಚಿವರಾಗಿದ್ದ ಡಾ.ಶಿವಚಿತ್ತಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ವಿಚಾರಣೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ಅದೇಶಿಸಿದೆ.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ವಿಚಾರ ಸಂಕಿರಣದಲ್ಲಿ ಕುಲಸಚಿವೆಯಾಗಿ ವರ್ಗಾವಣೆ ಆದೇಶ ಪಡೆದಿದ್ದ ಕೊರಟಗೆರೆ ತಹಶೀಲ್ದಾರ್ ವಿರುದ್ಧ ಲಘುವಾಗಿ ಮಾತನಾಡಿದ್ದರು. ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದರು.

ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತ್ತು.

ಹೊಸವರ್ಷ 2023

0

ಕಳೆದ ಸಾಲಿನ
ನಿರ್ಧಾರಗಳು
ಪೂಳ್ಳಾದ ಬಗೆಯನ್ನು
ನೆನೆದು ನಗಲು.

ಹೊಸ ವರ್ಷವು
ಮತ್ತೂಂದು
ದೇವರು ಕೂಟ್ಟ
ಖಾಲಿ ಹಾಳೆ…
ಸರಿಯಾಗಿ ತುಂಬಿಸಲು.

ಕ್ಯಾಲೆಂಡರ್ ತಿರುಗುವುದು
ದೊಡ್ಡದಲ್ಲ…
ಯೋಚನಾ ದಾಟಿ
ತಿರುಗಿದ್ದೇ ನವ ವರ್ಷ.

ಮತ್ತೂಂದು
ಹೂಸವರ್ಷ
ಕನಸುಗಳನ್ನು
ನನಸಾಗಿಸಲು.

ಡಾllರಜನಿ .ಎಂ

ಭಾರತದಲ್ಲಿ ಆಡಳಿತ ಯಾವುದೇ ಬರಲಿ ಸಂವಿಧಾನ ಬದ್ಧವಾಗಿರಲಿ ; ನಾಗಮೋಹನದಾಸ

0

ತುಮಕೂರು ; ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್, ಕಮ್ಯೂನಿಷ್ಟ್ ಹೀಗೆ ಆಡಳಿತ ಯಾವುದೇ ಬರಲಿ ಸಂವಿಧಾನ ಬದ್ಧವಾಗಿರಲಿ ಎಂದು ನಿವೃತ್ತ ಜಸ್ಟೀಸ್ ಎಚ್.ಎನ್. ನಾಗಮೋಹನದಾಸ ಹೇಳಿದರು.

ನಗರದ ಸೂಫಿಯ ಕಾನೂನು ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಂವಿಧಾನ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾತ್ಯತೀತ ರಾಷ್ಟ್ರ, ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ ಆಡಳಿತ ನಡೆಸುವವರ ಗುರಿಯಾಗಬೇಕು. ಇವುಗಳೇ ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು.

ಭಾರತದ ಇತಿಹಾಸ ಶಿಕ್ಷಣ ವ್ಯವಸ್ಥೆ, ಜನಾಂಗೀಯ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ ಅವರು ಭೇದ ಭಾವ ಮರೆತು ಸಂವಿಧಾನ ಬದ್ಧವಾಗಿ ಎಲ್ಲರೂ ಬದುಕಬೇಕು ಎಂದರು.

ಎಲ್ಲರಿಗೂ ಒಂದೇ ರೀತಿಯ ಸಮಾನತೆ ಇದೆ. ಭಾಷೆ- ಜಾತಿ ಬಿಟ್ಟು ಇರುವುದೇ ಸಂವಿಧಾನ , ಸಂವಿಧಾನದ ನೀತಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.

ಅಧ್ಯಕ್ಷ ಸ್ಥಾನ ವಹಿಸಿದ ಚಿಂತಕ ಕೆ.ದೊರೆರಾಜು ಮಾತನಾಡಿ ಕಾನೂನಿನ ಅರಿವು ಎಲ್ಲರಿಗೂ ಇರಬೇಕು . ಕಾನೂನಿನ ಮುಂದೆ ಎಲ್ಲರೂ ಸಮಾನರು. ನಮ್ಮಲ್ಲಿ ದಿನನಿತ್ಯ ನಡೆಯುವ ವಿಚಾರ ದಾರೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್.

ಷಫಿ ಅಹಮದ್, ಪ್ರಾಂಶುಪಾಲರಾದ ಡಾ.ಎಸ್‌.ರಮೇಶ, ಉಪ ಪ್ರಾಂಶುಪಾಲ ಟಿ.ಓಬಯ್ಯ, ಸಹ ಪ್ರಾಧ್ಯಾಪಕ, ಕಾಲೇಜು ಅಭಿವೃದ್ಧಿ ಅಧಿಕಾರಿ ಸಿ.ಕೆ. ಮಹೇಂದ್ರ, ಮಮತಾ ಕಾಲೇಜಿನ ಅಧೀಕ್ಷರಾದ ಜಗದೀಶ್ ಇದ್ದರು.

ಗ್ರಾಮಾಂತರದ ಜನರಿಗೆ ಬಹಿರಂಗ ಪತ್ರ ಬರೆದ ಸುರೇಶಗೌಡರು

0

ನ್ಯಾಯಕ್ಕಾಗಿ, ಶಾಂತಿಯ ಗ್ರಾಮಾಂತರಕ್ಕಾಗಿ ಬಿಜೆಪಿ ನಗರದಲ್ಲಿ ಇಂದು ಮೌನ ಪ್ರತಿಭಟನೆ, ಧರಣಿ ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ಸುರೇಶಗೌಡರು ತಿಳಿಸಿದ್ದಾರೆ.

ಇದೇ ವೇಳೆ ಅವರು ಗ್ರಾಮಾಂತರದ ಜನರಿಗೆ ಬಹಿರಂಗ ಪತ್ರ ಬರೆದಿದ್ದು, ಪತ್ರವನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.


ಪಂಚರತ್ನ ರಥಯಾತ್ರೆಯ ವೇಳೆ ನನ್ನ ಪಕ್ಷದ ಕಾರ್ಯಕರ್ತನ ಮೇಲೆ ಶಾಸಕರಾದ ಸನ್ಮಾನ್ಯ ಗೌರಿಶಂಕರ್ ಅವರ ಕುಮ್ಮಕ್ಕಿನಿಂದ ಅವರ ಪಿಎ ಸುರೇಶ್ ಹಾಗೂ ಬೆಂಬಲಿಗರು ಹಿಗ್ಗಾಮಗ್ಗಾ ಥಳಿಸಿರುವುದನ್ನು ಮಾಜಿ ಶಾಸಕನಾಗಿ, ನಾನು ಉಗ್ರವಾಗಿ ಖಂಡಿಸುತ್ತೇನೆ.


ಗ್ರಾಮಾಂತರ ಕ್ಷೇತ್ರವು ಶಾಂತಿಯ ಕೈತೋಟ, ಸಮೃದ್ಧಿಯ ನೆಲೆಯಾಗಿರಬೇಕೆಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಎಡೆಯೂರು ಸಿದ್ದಲಿಂಗೇಶ್ವರರು, ಉದ್ದಾನಸ್ವಾಮಿಗಳು, ಶಿವಕುಮಾರಸ್ವಾಮೀಜಿಗಳು ನಡೆದಾಡಿದ ತಪೋಭೂಮಿಯೊಳಗೆನೆಲಮಂಗಲದಿಂದ ಬಂದಿರುವ ಜನರು ಹಿಂಸೆಯನ್ನು ಪ್ರಚೋದಿಸಲು ಮಾಡುತ್ತಿರುವ ಪ್ರಯತ್ನವನ್ನು ಗ್ರಾಮಾಂತರದ ಜನರು ವಿಫಲಗೊಳಿಸುತ್ತಾರೆ.


ನನ್ನ ಕೊಲೆಗೆ ಸುಫಾರಿ , ಏನು ಅರಿಯದ ಕಂದಮ್ಮಗಳಿಗೆ ನಕಲಿ ಬಾಂಡ್ ಗಳನ್ನು ನೀಡಿ ಎಳೆಯ ಮಕ್ಕಳ ಎದೆಯಲ್ಲಿ ಮೋಸ, ವಂಚನೆಯನ್ನು ಬೆಳೆಸುವುದು, ಹಣ, ಹೆಂಡದ ಮೂಲಕ ಮುಗ್ದ ಯುವಕರನ್ನು ಕುಡಿತದ ದಾಸರಾಗಿ ಮಾಡಿರುವುದು ಇವೆಲ್ಲವನ್ನು ಜನರು ಗಮನಿಸಿದ್ದಾರೆ.



ತುಮಕೂರು ಜಿಲ್ಲೆಗೆ ತನ್ನದೇ ಘನತೆ, ಗೌರವವಿದೆ. ಹೊರ ಜಿಲ್ಲೆಯಿಂದ ರೌಡಿಸಂ ಎಳೆದು ತರುವ ಜನರಿಗೆ ಇಲ್ಲಿಯ ಜನರೇ ಉತ್ತರ ನೀಡುಬೇಕೆಂದು ಬಿಜೆಪಿ ಬಯಸುತ್ತದೆ.


ವೈ.ಕೆ.ರಾಮಯ್ಯ, ಎಚ್.ನಿಂಗಪ್ಪ, ಮುದ್ದಹನುಮೇಗೌಡರು, ಕೆ.ಎನ್.ರಾಜಣ್ಣ, ಆರ್. ನಾರಾಯಣ್ ,ಇಂಥವರೆಲ್ಲರೂ ಇಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಶಾಂತಿ, ಸೌಹಾರ್ದತೆ ಗ್ರಾಮಾಂತರ ಮಣ್ಣಿನ ಗುಣವಾಗಿದೆ. ಇಂಥ ನೆಲದಲ್ಲಿ ಕೊಲೆ, ಸುಲಿಗೆ, ಹಲ್ಲೆಗಳಿಗೆ ನಮ್ಮ ಜನರು ಅವಕಾಶ ಕೊಡಲಾರರು.


ಹಿಂದಿನ ಹತ್ತು ವರ್ಷದ ಅವಧಿಯಲ್ಲಿ ಕ್ಷೇತ್ರ ಶಾಂತಿಯುತವಾಗಿತ್ತು. ಕಳೆದ ಐದು ವರ್ಷಗಳಿಂದ ಹಲ್ಲೆ,, ಅಧಿಕಾರಿಗಳಿಂದ ಸುಲಿಗೆ, ಬೆದರಿಕೆಗಳು, ಹಪ್ತಾ ವಸೂಲಿ ಮಾಡಲಾಗುತ್ತಿದೆ. ಹೊರಗಿನ ರೌಡಿಗಳನ್ನು ಕರೆತಂದು ಜನರನ್ನು ಹೆದರಿಸಿ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ.


ಸುಮ್ಮನೇ ಒಬ್ಬನೇ ತನ್ನ ಹೆಂಡತಿಯೊಂದಿಗೆ ಇದ್ದ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು, ಒಂದು ಜನಾಂಗವನ್ನು ಕೀಳಾಗಿ ಹೀಯ್ಯಾಳಿಸುವುದನ್ನು ಬಲವಾಗಿ ಖಂಡಿಸಿ ಈ ಮೌನ ಧರಣಿ ನಡೆಸಿದ್ದೇನೆ.
ಬಿಜೆಪಿ ಕಾರ್ತಕರ್ತರು, ಅಭಿವೃದ್ಧಿ ಪರವಾದ ಗ್ರಾಮಾಂತರದ ಎಲ್ಲ ವರ್ಗದ ಜನರು ಹೊರ ಭಾಗದ ರೌಡಿಯಿಸಂನ ಬೆದರಿಕೆಯನ್ನು ಒಗ್ಗಟ್ಟು, ಮೌನದಿಂದಲೇ ಹಿಮ್ಮೆಟ್ಟಿಸಬೇಕೆಂದು ಮಾಜಿ ಶಾಸಕನಾಗಿ ನಾನು ಕೇಳಿಕೊಳ್ಳುತ್ತಿದ್ದೇನೆ.

ಇಂತಿ

ಸುರೇಶಗೌಡರು

ಮಾಜಿ ಶಾಸಕರು, ತುಮಕೂರು ಗ್ರಾಮಾಂತರ ಕ್ಷೇತ್ರ

ಪ್ರಧಾನಿ ತಾಯಿ ಅಂತ್ಯಕ್ರಿಯೆ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರಾಬೆನ್‌ ಅವರ ಅಂತ್ಯ ಸಂಸ್ಕಾರ ಇಲ್ಲಿನ ಗಾಂಧಿನಗರದಲ್ಲಿರುವ ಚಿತಾಗಾರದಲ್ಲಿ ನಡೆಯಿತು. 

ತಾಯಿಯ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ನರೇಂದ್ರ ಮೋದಿ  ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ನೂರು ವರ್ಷಗಳ ಶ್ರೇಷ್ಠ ಪ್ರಯಾಣ ಮುಗಿದಿದೆ. ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ತಾಯಿ ನಿಧನ

0

ಅಹಮದಾಬಾದ್: ಕಳೆದ ಎರಡು ದಿನಗಳಿಂದ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೇನ್ ಮೋದಿ ಅವರು, ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಅವಿಶ್ವಾಸ ಸೋಲು: ಜೆಡಿಎಸ್ ಗೆ ಮುಖಭಂಗ

0

Publicstory


ತುಮಕೂರು: ಪಂಚರತ್ನ ಯಾತ್ರೆ ಸಂದರ್ಭವೇ ಜೆಡಿಎಸ್ ಮುಖಭಂಗ ಅನುಭವಿಸಿದೆ.


ತುಮಕೂರು ಗ್ರಾಮಾಂತರ ಕ್ಷೇತ್ರದ
ಕಣಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಸೋಲಾಗಿದೆ.
ಒಟ್ಟು 21 ಸದಸ್ಯ ಬಲದ ಗ್ರಾಮ ಪಂಚಾಯತಿ ಯಲ್ಲಿ ಬಿಜೆಪಿ ಬೆಂಬಲಿತ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.


ಬಿಜೆಪಿ ಕೈಯಿಂದ ಅಧಿಕಾರ ಕಸಿಯಲು ಯತ್ನಿಸಿದ್ದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಅವರೀಗ ಮುಖಭಂಗ ಅನುಭವಿಸುವಂತಾಗಿದೆ.

ಅಭಿವೃದ್ಧಿಗೆ ಸಂದ ಜಯ ಇದಾಗಿದೆ. ಬರದಲ್ಲಿ ಬೇಯುತ್ತಿದ್ದ ಕಣಕುಪ್ಪೆ ಕೆರೆಗೆ ಹೇಮಾವತಿ ನೀರನ್ನು ಹರಿಸಿದೆ. ಅಭಿವೃದ್ಧಿಯನ್ನು ಅಲ್ಲಿ‌ನ ಸದಸ್ಯರು ಬೆಂಬಲಿಸಿದ್ದಾರೆ. ಇಡೀ ಕಣಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹೆಂಡ, ಹಣಕ್ಕೆ ಜನರು‌ ಬೆಲೆ ಕೊಡುವುದಿಲ್ಲ ಎಂಬುದನ್ನು ಅವಿಶ್ವಾಸ ಸೋಲಿಸುವ ಮೂಲಕ ನೀಡಿದ್ದಾರೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ತಿಳಿಸಿದ್ದಾರೆ.

ಸುಫಿಯಾ ಕಾಲೇಜಿಗೆ  ಜಸ್ಟೀಸ್ ನಾಗಮೋಹನ್ ದಾಸ್

0

Publicstory


ತುಮಕೂರು: ನಗರದ ಸುಫಿಯಾ ಕಾನೂನು ಕಾಲೇಜಿಗೆ ಡಿಸೆಂಬರ್ 29ರಂದು ಬೆಳಿಗ್ಗೆ 10.30ಕ್ಕೆ ನಿವೃತ್ತ ಜಸ್ಟೀಸ್ ನಾಗಮೋಹನ್ ದಾಸ್ ಭೇಟಿ ನೀಡುವವರು.

ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾಲೇಜು ಮಂಡಳಿ ಅಧ್ಯಕ್ಷ ಷಫೀ ಅಹಮದ್, ಕಾಲೇಜಿ‌ನ ಪ್ರಾಂಶುಪಾಲರಾದ ಡಾ.ಎಸ್.ರಮೇಶ್ ಅತಿಥಿಗಳಾಗಿ ಭಾಗವಹಿಸುವರು.
ಚಿಂತಕ ಕೆ. ದೊರೈರಾಜ್ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯಕ್ರಮದ ಸಂಯೋಜಕರಾದ ಟಿ.ಓಬಣ್ಣ, ಸಿ.ಕೆ.ಮಹೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆತ್ತೇನಹಳ್ಳಿ ಮಾರಮ್ಮನಿಗೆ ಬೆಳ್ಳಿ ಖಡ್ಗ ನೀಡಿದ ಸುರೇಶಗೌಡ

0

Publicstory


ತುಮಕೂರು ಗ್ರಾಮಾಂತರ: ಹೆತ್ತೇನಹಳ್ಳಿ ಮಾರಮ್ಮನಿಗೆ ಮಾಜಿ ಶಾಸಕರಾದ ಸುರೇಶ್ ಗೌಡ ಅವರು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ಮಂಗಳವಾರ ಬೆಳ್ಳಿ ಖಡ್ಗವನ್ನು ಸಮರ್ಪಿಸಿದರು.


ಡಿಸೆಂಬರ್-7 ರಂದು ಭಾರತೀಯ ಜನತಾ ಪಕ್ಷದ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಛೇರಿ “ ಶಕ್ತಿ ಸೌಧ” ಉದ್ಘಾಟಿಸಲು ಆಗಮಿಸಿದ್ದ ನಾಡಿನ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುರೇಶ್ ಗೌಡರವರು ಬೆಳ್ಳಿ ಖಡ್ಗವನ್ನು ನೀಡಿದ್ದರು.


ಮುಖ್ಯಮಂತ್ರಿಗಳು ಬೆಳ್ಳಿ ಖಡ್ಗವನ್ನು ಈ ಭಾಗದ ಶಕ್ತಿ ದೇವತೆಗೆ ಸಮರ್ಪಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮಾನ್ಯ ಮಾಜಿ ಶಾಸಕರಾದ ಸುರೇಶ್ ಗೌಡರವರು ಮಾರಮ್ಮ ದೇಗುಲಕ್ಕೆ ಬೆಳ್ಳಿಖಡ್ಗ ನೀಡಿದರು.


ಮಾಜಿ ಶಾಸಕ ಸುರೇಶ್ ಗೌಡ ಅವರು ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಬೆಳ್ಳಿ ಖಡ್ಗವನ್ನು ಶಕ್ತಿದೇವತೆಗೆ ಸಮರ್ಪಿಸಲಾಗಿದೆ. ಈ ಭಾಗದ ದುಷ್ಟ ಶಕ್ತಿಗಳು ನಿರ್ಮೂಲನೆಯಾಗಿ, ಒಳ್ಳೆಯ ಕೆಲಸಗಳಾಗಲಿ. ಈ ಭಾಗದ ಜನತೆಗೆ ತಾಯಿ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.


ಉಪವಿಭಾಗಾಧಿಕಾರಿ ಅಜಯ್ ಕುಮಾರ್, ತಹಶೀಲ್ದಾರ್ ಸಿದ್ದೇಶ್ , ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಕುಮಾರ್,ಉದ್ಯಮಿ ನೀಲೇಶ್, ಸಿದ್ದೇಗೌಡ್ರು,ರವೀಂದ್ರ,ರಾಜಣ್ಣ ನರಸಿಂಹಮೂರ್ತಿ,ಸಿದ್ದರಾಜು, ಎಪಿಎಂಸಿ ಸದಸ್ಯ ಚಂದ್ರಣ್ಣ, ಎ ಪಿ ಎಂಸಿ ಉಪಾಧ್ಯಕ್ಷ ಶಿವರಾಜು, ಬಿಜೆಪಿ ಉಪಾಧ್ಯಕ್ಷ ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು, ಎಸ್ ಸಿ ಮೋರ್ಚ ಅಧ್ಯಕ್ಷರಾದ ರಮೇಶ್, ಕಾರ್ಯಕರ್ತರು, ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು,ಅಧ್ಯಕ್ಷರು ಗ್ರಾಮಸ್ಥರು ಇದ್ದರು.