ತುಮಕೂರು ; ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್, ಕಮ್ಯೂನಿಷ್ಟ್ ಹೀಗೆ ಆಡಳಿತ ಯಾವುದೇ ಬರಲಿ ಸಂವಿಧಾನ ಬದ್ಧವಾಗಿರಲಿ ಎಂದು ನಿವೃತ್ತ ಜಸ್ಟೀಸ್ ಎಚ್.ಎನ್. ನಾಗಮೋಹನದಾಸ ಹೇಳಿದರು.
ನಗರದ ಸೂಫಿಯ ಕಾನೂನು ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಂವಿಧಾನ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾತ್ಯತೀತ ರಾಷ್ಟ್ರ, ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ ಆಡಳಿತ ನಡೆಸುವವರ ಗುರಿಯಾಗಬೇಕು. ಇವುಗಳೇ ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು.
ಭಾರತದ ಇತಿಹಾಸ ಶಿಕ್ಷಣ ವ್ಯವಸ್ಥೆ, ಜನಾಂಗೀಯ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ ಅವರು ಭೇದ ಭಾವ ಮರೆತು ಸಂವಿಧಾನ ಬದ್ಧವಾಗಿ ಎಲ್ಲರೂ ಬದುಕಬೇಕು ಎಂದರು.
ಎಲ್ಲರಿಗೂ ಒಂದೇ ರೀತಿಯ ಸಮಾನತೆ ಇದೆ. ಭಾಷೆ- ಜಾತಿ ಬಿಟ್ಟು ಇರುವುದೇ ಸಂವಿಧಾನ , ಸಂವಿಧಾನದ ನೀತಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.
ಅಧ್ಯಕ್ಷ ಸ್ಥಾನ ವಹಿಸಿದ ಚಿಂತಕ ಕೆ.ದೊರೆರಾಜು ಮಾತನಾಡಿ ಕಾನೂನಿನ ಅರಿವು ಎಲ್ಲರಿಗೂ ಇರಬೇಕು . ಕಾನೂನಿನ ಮುಂದೆ ಎಲ್ಲರೂ ಸಮಾನರು. ನಮ್ಮಲ್ಲಿ ದಿನನಿತ್ಯ ನಡೆಯುವ ವಿಚಾರ ದಾರೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್.
ಷಫಿ ಅಹಮದ್, ಪ್ರಾಂಶುಪಾಲರಾದ ಡಾ.ಎಸ್.ರಮೇಶ, ಉಪ ಪ್ರಾಂಶುಪಾಲ ಟಿ.ಓಬಯ್ಯ, ಸಹ ಪ್ರಾಧ್ಯಾಪಕ, ಕಾಲೇಜು ಅಭಿವೃದ್ಧಿ ಅಧಿಕಾರಿ ಸಿ.ಕೆ. ಮಹೇಂದ್ರ, ಮಮತಾ ಕಾಲೇಜಿನ ಅಧೀಕ್ಷರಾದ ಜಗದೀಶ್ ಇದ್ದರು.