ತುರುವೇಕೆರೆ : ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಹೆಚ್ಚು ವಿಸ್ತರಿಸಿ ಕೆರೆ ಕಟ್ಟೆಗಳನ್ನು ತುಂಬಿಸಿ ಅಂರ್ತಜಲವನ್ನು ವೃದ್ದಿಸಲಾಗುವುದು. ಇವುಗಳ ಜೊತೆಗೆ 7 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ಮೇಕೆ ದಾಟು, ಎತ್ತಿನಹೊಳೆ ಹೀಗೆ ಹಲವು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ
ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿವರು 2018 ರಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು ಅದರಲ್ಲಿ ಕೊನೆ ಪಕ್ಷ ಹತ್ತು ಪರ್ಸೆಂಟ್ ಕೆಲಸ ಮಾಡೋದಿಕ್ಕೆ ಆಗಲಿಲ್ಲ ಬರೀ ಸುಳ್ಳುಗಾರರು ಎಂದು ಕುಟುಕಿದರು.
ನಾನು ಮುಖ್ಯ ಮಂತ್ರಿಯಾಗಿದ್ದಾಗ 50 ಸಾವಿರ ಕೋಟಿಯನ್ನು ರಾಜ್ಯದ ಅಭಿವೃದ್ದಿಗೆ ಖರ್ಚು ಮಾಡಿದ್ದೇನೆ. ಬಿಜೆಪಿ ಸರ್ಕಾರ ಈ ರಾಜ್ಯದ ಜನರಿಗೆ ದ್ರೋಹ ಎಸಗಿದೆ. ನಾವು ಜಾರಿಗೆ ತಂದ ಅನ್ಯಭಾಗ್ಯ, ಶಾದಿ ಭಾಗ್ಯದಂತಹ ಹಲವು ಜನರ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ. ಅದರಲ್ಲೂ ರೈತರಿಗೋಸ್ಕರ ಮಾಡಿದ ಕೃಷಿ ಭಾಗ್ಯವನ್ನೂ ಸಹ ನಿಲ್ಲಿಸಿದ್ದಾರೆ. ದೇವರಾಜು ಅರಸು, ಅಂಬೇಡ್ಕರ್ ಹೀಗೆ ಅನೇಕ ನಿಗಮಗಳಿಗೆ ಸಾವಿರಾರುಕೋಟಿ ಹಣ ನೀಡಿದ್ದೆ ಅವೆಲ್ಲವನ್ನೂ ಈ ಬೊಮ್ಮಾಯಿ ಸರ್ಕಾರ ನಿಲ್ಲಿಸಿದೆ.
ನಾಡಿಗಾಗಿ ದುಡಿದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯನ್ನು ಮೊದಲು ಮಾಡಿದ್ದು ಕಾಂಗ್ರೆಸ್ ಸರ್ಕಾರವೇ ವಿನಹ ಬಿಜೆಪಿ, ಜೆಡಿಎಸ್ನ ದೇವೇಗೌಡರಾಗಲಿ ಅಲ್ಲ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯಾಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಅಡಿಕೆ, ಕಬ್ಬು, ತೆಂಗು ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತ ಕಂಗಾಲಾಗಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ದ್ರೋಹವೆಸಗುತ್ತಿವೆ ಎಂದು ದೂರಿದರು.
ಮುಖ್ಯ ಮಂತ್ರಿ ಬೊಮ್ಮಾಯಿ ಅವರ ಸರ್ಕಾರ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಾ ಅವರ ಆತ್ಮಹತ್ಯೆಗೆ ಕಾರಣವಾಗುತ್ತಿದೆ.
ಪ್ರಧಾನಿಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರದೇ ಅವರ ಎದುರು ಬಸವರಾಜು ಬೊಮ್ಮಾಯಿವರು ನಾಯಿಮರಿಯಂತೆ ಇರುವುದನ್ನ ಖಂಡಿಸಿದ್ದು ತಪ್ಪೇ? ಇಲ್ಲಿನ ನಾಯಕರಿಗೆ ದಮ್ಮಿದ್ದರೆ ಕೇಂದ್ರದಿಂದ ಬರಬೇಕಾಗಿರುವ 5495 ಕೋಟಿ ವಿಶೇಷ ಅನುದಾನವನ್ನು ತರಿಸಿ ಎಂದು ಸವಾಲೆಸೆದರು.
ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು 78 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ಅದೇ ನರೇಂದ್ರ ಮೋದಿಯವರು ಅಂಬಾನಿ ಅದಾನಿಯಂತಹ ಬಂಡವಾಳಶಾಹಿಗಳ 10 ಲಕ್ಷ ಕೋಟಿ ಸಾಲವನ್ನಾ ಮಾಡಿದ್ದಾರೆಂದು ಲೇವಡಿಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ವಾಸು, ಮಧು ಬಂಗಾರಪ್ಪ, ಮನೋಹರ್, ಕೋನರೆಡ್ಡಿ, ಮಂಜುನಾಥ್ ಗೌಡ, ಜಿ.ವಿಜಯ, ಬೆಮೆಲ್ ಕಾಂತರಾಜ್, ಶ್ರೀನಿವಾಸ್ ಗೌಡ ಸೇರಿದಂತೆ ಎಲ್ಲಾ ಮಾಜಿ ಶಾಸಕರುಗಳು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ವೈ.ಎಸ್.ವಿ ದತ್ತ ಕೂಡ ಸೇರಲಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿ ರಾಜೀನಾಮೆ ನೀಡಿದ್ದಾರೆ. ಈ ಭಾಗದ ಕಲ್ಪವೃಕ್ಷದ ಮೇಲೆ ಆಣೆ ಮಾಡಿ ಮತದಾರರಲ್ಲಿ ವಿನಂತಿಸುತ್ತೇನೆ ಕಾಂಗ್ರೆಸ್ ಗೆ ಮತ ನೀಡಿ ಎಂದರು.
ಸಿದ್ದಾರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯನ್ನು ಮಾಡಲಾಯಿತು. ಇಬ್ಬರಿಗೂ ಬೃಹತ್ ಗಾತ್ರದ ಗುಲಾಬಿ ಹಾರ, ಮುಸುಕಿನ ಜೋಳ, ಕೊಬ್ಬರಿ ಸೇರಿದಂತೆ ವಿವಿಧ ಹೂವಿನ ಹಾರಗಳನ್ನು ಹಾಕಲಾಯಿತು. 20 ಜೆ.ಸಿಬಿ ವಾಹನದಲ್ಲಿ ಹೂವಿನ ಮಳೆಗರೆದರು.
ಸಮಾರಂಭದಲ್ಲಿ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ, ಮಧುಬಂಗಾರಪ್ಪ ಶಾಸಕರುಗಳಾದ ಭೈರತಿ ಸುರೇಶ್, ನಾಗರಾಜ್ ಯಾದವ್, ರಮೇಶ್, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಷಡಕ್ಷರಿ, ಸ್ಥಳೀಯ ಮುಖಂಡ ಬೆಮೆಲ್ ಕಾಂತರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡರುಗಳಾದ ಎನ್.ಆರ್.ಜಯರಾಂ, ಬಿ.ಎಸ್.ವಸಂತ್ಕುಮಾರ್, ಗೀತಾರಾಜಣ್ಣ, ಶ್ರೀಕಂಠೇಗೌಡ, ಲೋಕೇಶ್ವರ್, ಚೌದ್ರಿರಂಗಪ್ಪ, ನಾಗೇಶ್, ಗೋಣಿ ತುಮಕೂರು ಲಕ್ಷ್ಮೀಕಾಂತ್ ಕಾರ್ಯಕರ್ತರು ಇದ್ದರು.