Saturday, March 14, 2026
Google search engine
Home Blog Page 66

ತುಮಕೂರು ಆಸ್ಪತ್ರೆಯಲ್ಲಿ ಸಚಿವ ಅರಗ ಹೇಳಿದ್ದೇನು?

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ರವರು ಜಿಲ್ಲಾ ಆಸ್ಪತ್ರೆ ತುಮಕೂರು ಇಲ್ಲಿ ಭೇಟಿ ನೀಡಿದ್ದು, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಆಗಿದ್ದ ತಾಯಿ ಮತ್ತು ಅವಳಿ ಜವಳಿ ಶಿಶು ಮರಣದ ಬಗ್ಗೆ ತನಿಖೆ ಮಾಡಲು ಸೂಚಿಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಡಿ.ಹೆಚ್.ಓ ರವರು ಹಾಜರಿದ್ದರು. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸರು ಕೂಡ ಹಾಜರಿದ್ದರು.

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ತಾಯಿ ಮತ್ತು ಶಿಶು ಮರಣದ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗಡೆ ಔಷಧಿ ಬರೆದು ಕೊಡುವುದನ್ನು ಮತ್ತು ಸಿಜರಿನ್ ಮಾಡಲು ಲಂಚ ಕೇಳುವುದನ್ನು ತೀವ್ರವಾಗಿ ಖಂಡಿಸಿದರು. ಆಸ್ಪತ್ರೆ ತುಂಬಾ ಏಜೆಂಟ್ ಗಳು ಹುಟ್ಟಿಕೊಂಡಿದ್ದು, ಏಜೆಂಟ್ ಗಳ ಮೂಲಕ ಲಂಚ ಪಡೆಯುವುವವರನ್ನು ಹಿಡಿಯುವುದು ಕಷ್ಟ ಆಗಿದೆ.

ಆದುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಏಜೆಂಟ್ ಹಾವಳಿ ತಪ್ಪಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅನುದಾನ ದುರ್ಬಳಕೆ ಆಗಿದ್ದು, ಇದುವರೆಗೂ ವಸೂಲು ಆಗದೆ ಇರುವ ಬಗ್ಗೆ ಜಿಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲಾ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಯ ಅನೇಕ ಸಿಬ್ಬಂದಿಗಳು ಒಳಗೊಂಡಿದ್ದಾರೆ ಎಂದು ಉತ್ತರ ನೀಡಿದರು. ಅದಕ್ಕೆ ಉಸ್ತುವಾರಿ ಸಚಿವರು ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳೇ ಕ್ರಮತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಸಾಧ್ಯವಾಗದೇ ಹೋದಲ್ಲಿ ಪೋಲಿಸ್ ಇಲಾಖೆಯ ಸಹಾಯ ಪಡೆದು ಇನ್ನು 02 ದಿನದಲ್ಲಿ ವಸೂಲಾಗಬೇಕೆಂದು ತಿಳಿಸಿದರು. ವಸೂಲು ಮಾಡುವುದಲ್ಲದೆ ಆಡಳಿತ ವೈಫಲ್ಯ ಎಸಗಿದ ಅಧಿಕಾರಿಗಳನ್ನು ವಜಾ ಮಾಡಬೇಕು. ಒಟ್ಟಾರೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಿಂದಿರುವ ಅಮೇಧ್ಯ ವಸೂಲು ಮಾಡುವುದು ಖಾತ್ರಿ ಎಂಬಂತೆ ಕಂಡು ಬರುತ್ತಿದೆ. ಅನೇಕ ಸಂಘ ಸಂಸ್ಥಗಳು ಈ ಬಗ್ಗೆ ಹೋರಾಟ ಮಾಡುತ್ತ ಬಂದಿದ್ದು, ಕೆಲವು ಅಧಿಕಾರಿಗಳು ಈಗಾಗಲೇ ವರ್ಗಾವಣೆ ಆಗಿರುತ್ತಾರೆ. ಅದೇ ಸಮಯದಲ್ಲಿ ಆರ್.ಎಂ.ಓ ಆಗಿದ್ದ ಆಧಿಕಾರಿಯೇ ಈಗ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದು, ಆರೋಗ್ಯ ರಕ್ಷಾ ಸಮಿತಿಯ ದುರ್ಬಳಕೆ ಆಗಿರುವ ಅನುದಾನ ಯಾವ ರೀತಿ ವಸೂಲಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

ಈ ರೀತಿ ಉಸ್ತುವಾರಿ ಸಚಿವರ ಖಡಕ್ ಕ್ರಮದಿಂದಾದರೂ ಜಿಲ್ಲಾ ಆಸ್ಪತ್ರೆಗೆ ಮುಕ್ತಿ ದೊರೆಯುತ್ತದೆಯೋ ಎಂದು ಕಾದು ನೋಡಬೇಕಾಗಿರುತ್ತದೆ.
ಉಸ್ತುವಾರಿ ಸಚಿವರು ಈ ಬಗ್ಗೆ ಎಷ್ಟು ಬೇಸತ್ತು ಹೋಗಿದ್ದಾರೆ ಎಂದರೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿವಸ ಜಿಲ್ಲಾ ಆಸ್ಪತ್ರೆ ಆದಾಯ ಉಂಟು ಮಾಡುವ ಆರೋಗ್ಯ ರಕ್ಷಾ ಸಮಿತಿಯ ರೋಗಿಗಳು ನೀಡುವ ನಿಗದಿತ ಶುಲ್ಕ ಪ್ರತಿ ದಿನ ತಮಗೆ ಎಸ್.ಎಂ.ಎಸ್ ಬರಬೇಕೆಂದು ಸೂಚಿಸಿದರು.

ಈ ಸಮಯದಲ್ಲಿ ಖಾಲಿ ಹುದ್ದೆಗಳ ಮಾಹಿತಿ ಪಡೆದರು ಹಾಗೂ ಕ್ರಮಮವಹಿಸಲು ಸೂಚಿಸಿದರು. ಆಯುಷ್ಮಾನ್ ಭಾರತ್ ಸ್ಕೀಮ್ ನಲ್ಲಿ ವೈದ್ಯಾಧಿಕಾರಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.ವೈದ್ಯಾಧಿಕಾರಿಗಳು ಮಾನವೀಯ ದೃಷ್ಠಿಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ವೈದ್ಯಾಧಿಕಾರಿಗಳಿಗೆ ಒಳ್ಳೆ ಸಂಬಳ ಮತ್ತು ಪ್ರೋತ್ಸಾಹ ಧನ ನೀಡುತ್ತಿದ್ದು, ಸಣ್ಣ ಪುಟ್ಟ ಕಾರಣಗಳನ್ನು ನೀಡದೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು.

ಎಸ್.ಆರ್.ಶ್ರೀನಿವಾಸ್ ಮತ್ತೇ ಜೆಡಿಎಸ್ ಗೆ ?

ತುಮಕೂರು : ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮನೆಗೆ ದಿಢೀರ್ ಭೇಟಿ ನೀಡಿರುವುದು ಜೆ.ಡಿ.ಎಸ್. ಪಕ್ಷಕ್ಕೆ ಎಸ್.ಆರ್.ಶ್ರೀನಿವಾಸ್ ಅವರನ್ನು ವಾಪಸ್ಸು ಕರೆ ತರುವ ಪ್ರಯತ್ನ ನಡೆಯುತ್ತಾ ಇದೆ ಎನ್ನಲಾಗುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಬುಕ್ಕಪಟ್ಟಣ ಹೋಬಳಿಯ ಜಾನಕಲ್‍ನಲ್ಲಿ ದೇವಸ್ಥಾನ ಒಂದರ ಉದ್ಘಾಟನೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಜಿಲ್ಲೆಯ ಕೆಲ ನಾಯಕರ ಜೊತೆ ಸಭೆ ನಡೆಸಿದ್ದಾಗ ಎಸ್.ಆರ್.ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾದರೆ ಗುಬ್ಬಿ, ತುರುವೇಕೆರೆ, ಕುಣಿಗಲ್ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಹಿನ್ನಡೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಎಸ್.ಆರ್. ಶ್ರೀನಿವಾಸ್ ಅವರನ್ನು ವಾಪಸ್ಸು ಜೆಡಿಎಸ್‍ಗೆ ಕರೆ ತರುವ ಹಿನ್ನಲೆಯಲ್ಲಿ ಸಾ.ರಾ.ಮಹೇಶ್ ಅವರು ಎಸ್.ಆರ್.ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿ ಮಾತು ಕತೆ ನಡೆಸಿದರನ್ನಲಾಗುತ್ತಿದೆ ಎಂದು ಮೈತ್ರಿ ನ್ಯೂಸ್ ವರದಿ ಮಾಡಿದೆ.

ಈಗಾಗಲೇ ಎಸ್.ಆರ್.ಶ್ರೀನಿವಾಸ್ ಅವರು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಗೊಂಡಿದ್ದು, ಒಂದು ಕಾಲನ್ನು ಜೆಡಿಎಸ್ ಪಕ್ಷದಿಂದ ಹೊರಗಿಟ್ಟಿದ್ದು, ರಾಹುಲ್ ಗಾಂಧಿಯವರ ಜೋಡೋ ಯಾತ್ರೆಯಲ್ಲಿಯೂ ಸಹ ಎಸ್.ಆರ್.ಶ್ರೀನಿವಾಸ್ ಹೆಜ್ಜೆ ಹಾಕಿರುದ್ದರು.

ಡಿಸೆಂಬರ್‍ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ಎಸ್.ಆರ್. ಶ್ರೀನಿವಾಸ್ ಈಗಾಗಲೇ ಘೋಷಣೆ ಮಾಡಿದ್ದಾರೆ, ದಿಢೀರ್ ಸಾ.ರಾ.ಮಹೇಶ್ ಭೇಟಿ ನೀಡಿರುವುದರ ಮರ್ಮವೇನು ಎಂಬುದು ಒಂದೆರಡು ದಿನಗಳಲ್ಲಿ ತಿಳಿಯಲಿದೆ.

ಸಾ.ರಾ.ಮಹೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಎಸ್.ಆರ್. ಶ್ರೀನಿವಾಸ್ ಅವರು ಪಕ್ಷ ಬಿಟ್ಟರೆ ಜೆಡಿಎಸ್‍ಗೂ ನಷ್ಟವಾಗಲಿದೆ, ರಾಷ್ಟ್ರೀಯ ನಾಯಕರಾದ ದೇವೇಗೌಡರು ಮತ್ತು ಕಾರ್ಯ ಕರ್ತರು ತೀರ್ಮಾನ ಮಾಡಿದರೆ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.

ನಾನು ವಾಸು ಮೊದಲಿನಿಂದಲೂ ಚೆನ್ನಾಗಿದ್ದೇವೆ ಆಗಾಗ ಮಾತನಾಡುತ್ತಲೇ ಇರುತ್ತೇವೆ, ರಾಜಕೀಯಕ್ಕಾಗಿ ಮಾತನಾಡಲಿಕ್ಕೆ ಬಂದಿಲ್ಲ, ಸೌಹಾರ್ಧ ಭೇಟಿಯಷ್ಟೇ, ಮಗ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಹೇಳಿದರು.

ವಿಸ್ತಾರ ಕನ್ನಡ ಸಂಭ್ರಮ ತುಮಕೂರಿನಲ್ಲಿ

ತುಮಕೂರು: *”ವಿಸ್ತಾರ”* ನ್ಯೂಸ್ ಚಾನೆಲ್ ಭಾನುವಾರ ಲೋಕಾರ್ಪಣೆಗೊಂಡಿದೆ. ಕನ್ನಡ ನಾಡು, ನುಡಿಗೆ ಸದಾ ಮಿಡಿಯುವ ಜೊತೆಗೆ “ನಿಖರ” “ಜನಪರ” ಧ್ಯೇಯದೊಂದಿಗೆ‌ *”ವಿಸ್ತಾರ”* ನ್ಯೂಸ್ ನಿಮ್ಮ ಮನೆ-ಮನ ತಲುಪಿದೆ. ನಿಮ್ಮ ವಿಸ್ತಾರ ಬಳಗವು ರಾಜ್ಯಾದ್ಯಂತ *”ವಿಸ್ತಾರ ಕನ್ನಡ ಸಂಭ್ರಮ”* ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಚಾನಲ್ ನ ಪ್ರಕಟಣೆ ತಿಳಿಸಿದೆ.

*ತುಮಕೂರು ಜಿಲ್ಲೆಯ ವಿಸ್ತಾರ ಕನ್ನಡ ಸಂಭ್ರಮ* ನವೆಂಬರ್ 9ರ ಬುಧವಾರ *ಬೆಳಗ್ಗೆ 11ಕ್ಕೆ* ತುಮಕೂರಿನ ಅಮಾನಿಕೆರೆ ಎದುರಿಗಿರುವ *ಕನ್ನಡ ಭವನದಲ್ಲಿ* ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: 9481236889.

ಮರೆಯಲಾರದ ಮಂಜುಳಾ: ಒಂದು ನೆನಪು

0

ಅಂತಿಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ, ನಾ ಬರುವ ದಾರಿ ಗೌರವ ತೋರಿ, ಕೈಯ ಕಟ್ಟಿ ನಿಲ್ಲುವರೆಲ್ಲ ಎನ್ನುವ ಹಾಡು ಯಾರಿಗೆ ತಾನೆ ಗೊತ್ತಿಲ್ಲ.

ಬಜಾರಿಯಾಗಿ, ದರ್ಪದ ಶ್ರೀಮಂತ ಅಪ್ಪನಿಗೆ ತಕ್ಕ ಮಗಳಾಗಿ ಗಂಡುಬಿರಿಯಂತೆ ನಟಿಸಿ, ಅಲ್ಲಿಂದ ಸುಮಾರು ಒಂದು ದಶಕಗಳಷ್ಟು ಕಾಲ ಇಡೀ ಕನ್ನಡ ಸಿನಿಮಾ ರಂಗವನ್ನು ಆಳಿದ ಲೇಡಿ ಸೂಪರ್ ಸ್ಟಾರ್ ಬೇರಾರು ಅಲ್ಲ, ತುಮಕೂರಿನ ಹೆಮ್ಮೆಯ ಮಗಳು ಮಂಜುಳಾ.

ಮಂಜುಳಾ ಅವರ ಹುಟ್ಟು ಹಬ್ಬ ಇಂದು. ಅದರ ಜ್ಞಾಪಕಾರ್ಥ ಈ ಪುಟ್ಟ ಲೇಖನ ನಿಮ್ಮ ಮುಂದೆ.

ತುಮಕೂರಿನ ಸೆರಗಿನಲ್ಲಿರುವ ಹೊನ್ನೇನಹಳ್ಳಿ ಇವರ ಸ್ವಂತ ಊರು. ಪಟೇಲರಾಗಿದ್ದ ಹನುಮಂತೇಗೌಡ ಮಂಜುಳಾ ಅವರ ಮುತ್ತಾತ.

ಸುತ್ತ ಮುತ್ತಲ ಹತ್ತು ಹಳ್ಳಿಗಳಲ್ಲಿ ಇದ್ದ ದೊಡ್ಡ ಕುಳಗಳ ಕುಟುಂಬಗಳಲ್ಲಿ ಇವರದೂ ಒಂದು. ಹನುಮಂತೇಗೌಡ ಅವರಿಗೆ ಮೇಲಗಿರಿಗೌಡ, ದೊಡ್ಡಯ್ಯ, ಚಿಕ್ಕಮೇಲಪ್ಪ, ಹುಚ್ಚಯ್ಯ ಎಂಬ 4 ಗಂಡುಮಕ್ಕಳು.

ಕೃಷಿ ಮಾಡಿಕೊಂಡು ತೋಟ ತುಡಿಕೆ ಹೊಂದಿದ್ದ ಅನುಕೂಲಸ್ಥರು. ಹಿರಿಯ ಮಗ ಮೇಲಗಿರಿಗೌಡ ಮತ್ತು ಈರಮ್ಮ ದಂಪತಿಗಳಿಗೆ ಶಿವಣ್ಣ, ಗೌರಮ್ಮ, ಗುರುಸಿದ್ದಮ್ಮ ಎಂಬ ಮೂವರು ಮಕ್ಕಳು.

ಹಿರಿಯ ಮಗ ಶಿವಣ್ಣ ಹೈಸ್ಕೂಲ್ ಮುಗಿಸಿದ ನಂತರ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಪೋಲೀಸ್ ಶಿವಣ್ಣ ಹಾಗೂ ಅನ್ನಪೂಣರ್ೆಯೆಂದೇ ಹೆಸರಾಗಿದ್ದ ದೇವೀರಮ್ಮ ದಂಪತಿಗಳ ಮೊದಲನೇ ಮಗಳು.

ಮದುವೆಯಾಗಿ ಸುಮಾರು 15 ವರ್ಷ ಮಕ್ಕಳಿಲ್ಲ ಎನ್ನುವ ನೋವಿಗೆ ಅವರು ಮೊರೆ ಹೋದದ್ದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ.

ಶಿವಣ್ಣ ಮತ್ತು ದೇವೀರಮ್ಮ ದಂಪತಿಗಳಿಗೆ 8/11/1954 ರಂದು ಚಂದ್ರನ ತುಂಡಿನಂಥ ಒಂದು ಮುದ್ದಾದ ಹೆಣ್ಣು ಮಗು ಜನಿಸಿತು. ಮಂಜುನಾಥನ ಕೃಪೆಯಿಂದ ಮಗು ಹುಟ್ಟಿತು ಎಂಬ ನಂಬಿಕೆಯಿಂದ ಮಂಜುಳಾ ಎಂದು ಮಗುವಿಗೆ ನಾಮಕರಣ ಮಾಡಿಸಿದರು.

ಮಂಜುಳಾ ನಂತರ ಉಮಾ, ಮಂಜುನಾಥ, ನೀಲಕಂಠ, ಮಮತ ಹೀಗೆ ನಾಲ್ಕು ಮಕ್ಕಳು ಮನೆ ತುಂಬಿದರು, ಸಂಸಾರ ಬೆಳೆಯಿತು.

ಚಿಕ್ಕಂದಿನಿಂದಲೇ ಚೂಟಿಯಾಗಿದ್ದ ಮಂಜುಳಾ ನೃತ್ಯ ಪ್ರವೀಣೆ. ತುಮಕೂರಿನ ರಾಜರಾಜೇಶ್ವರಿ ನೃತ್ಯ ಕಲಾ ಮಂದಿರದ ಸಂಸ್ಥಾಪಕರಾದ ಶ್ರೀ ಗುರು ನಾಟ್ಯಶ್ರೀ ಕೆ.ಎಂ. ರಾಮನ್ ಅವರಲ್ಲಿ ತಮ್ಮ 5 ನೇ ವಯಸ್ಸಿಗೆ ನೃತ್ಯ ಕಲಿಯಲು ಆರಂಭಿಸಿದರು.

ಈ ನಂಟು ಮಂಜುಳಾ ಅವರ ಸಾವಿನ ವರೆಗೂ ಮುಂದುವರಿಯುತ್ತದೆ.

ಅವರು ದೊಡ್ಡ ನಟಿ ಯಾದ ಮೇಲೂ ರಾಮನ್ ಅವರು ನೃತ್ಯಾಭ್ಯಾಸ ಮಾಡಿಸಲು ಬೆಂಗಳೂರಿಗೆ ವಾರಕ್ಕೆರಡು ಬಾರಿ ಹೋಗಿಬರುತ್ತಿದ್ದರು. ಶಿವ ತಾಂಡವ ನೃತ್ಯ, ಕೊರವಂಜಿ, ಶೃಂಗಾರ ಲಹರಿ, ಮೊದಲಾದವುಗಳು ಮಂಜುಳಾ ಅವರ ಹೆಸರಾಂತ ಪ್ರದರ್ಶನಗಳು.

ಅದಲ್ಲದೆ ಪ್ರಭಾತ್ ಕಲಾವಿದರು ಆಶ್ರಯದಲ್ಲಿಯೂ ಪ್ರದರ್ಶನಗಳನ್ನು ನೀಡುತ್ತಾ ಬಂದರು. ಎಲ್ಲ ಮಕ್ಕಳಂತೆ ಓದು ನೃತ್ಯ ಹೀಗೆ ತೊಡಗಿಸಿಕೊಂಡು ಕುಟುಂಬದ ನಲ್ಮೆಯ ಮಗುವಾಗಿ ಬೆಳೆದ ಮಂಜುಳಾ ಅವರಿಗೆ ಯಾವ ಅದೃಷ್ಠವೋ, ತಂದೆ ತಾಯಿಯ ಆಶಯವೋ ಎಂಬಂತೆ 1966 ರಲ್ಲಿ ಮನೆ ಕಟ್ಟಿ ನೋಡು ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಲು ಆಹ್ವಾನ ಬಂದಿತು. ಸಿ.ವಿ ಶಿವಶಂಕರ್ ಅವರು ಈ ಚಿತ್ರ ನಿರ್ಮಿಸಿದರು.

ಉದಯ ಕುಮಾರ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಅವರ ಮಗಳ ಪಾತ್ರದಲ್ಲಿ ಮಂಜುಳ ಬಾಲ ನಟಿಯಾಗಿ ನಟಿಸುತ್ತಾರೆ. ಪಾತ್ರದ ಹೆಸರು ಮಂಜು ಎಂದು ಇದ್ದದ್ದು ಕಾಕತಾಳೀಯ.

ಹೀಗೆ ತನ್ನ 12 ನೇ ವಯಸ್ಸಿಗೆ ಸಿನಿ ಪಯಣ ಆರಂಭಿಸಿದ ಮಂಜುಳ ಹಿರಿಯ ನಟಿ ಜಯಂತಿ ಅಭಿನಯದ ಎರಡು ಮುಖ ಚಿತ್ರದಲ್ಲಿ ಅವರ ತಂಗಿಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.

ಮತ್ತೊಂದು ತೆರೆ ಕಾಣದ ಚಿತ್ರ ಪದವೀಧರ ದಲ್ಲಿಯೂ ಅಭಿನಯಿಸಿದರು.

1973 ರಲ್ಲಿ ತೆರೆಕಂಡ ಮೂರು ನಾಯಕಿಯರನ್ನೊಳಗೊಂಡ ಮೂರುವರೆ ವಜ್ರ ಸಿನಿಮಾದಲ್ಲಿ ಅಂದಿನ ಪ್ರಸಿದ್ಧ ಹೀರೋಯಿನ್ ಗಳಾದ ಜಯಂತಿ, ಆರತಿ, ಅವರ ಜೊತೆಯಲ್ಲಿ ಮಂಜುಳ ಕೂಡ ನಾಯಕಿಯಾಗಿ ಅಭಿನಯಿಸಿದರು.

ಅಲ್ಲಿಂದ ಮುಂದೆ ಎರಡು ಕನಸು, ನಂತರ ಸಂಪತ್ತಿಗೆ ಸವಾಲ್. ಇಲ್ಲಿಂದ ಶುರುವಾಯಿತು ಅವರ ನಟನೆಯ ನಾಗಾಲೋಟ. ಆಗಿನ ಚಲನಚಿತ್ರ ರಂಗದ ಮೇರು ನಟರ ಜೊತೆ ನಟಿಸಿದರು.

ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಶಂಕರ್ನಾಗ್, ಅಶೋಕ್, ಅನಂತ್ನಾಗ್, ದ್ವಾರಕೀಶ್, ಹೀಗೆ ಎಲ್ಲರ ಜೊತೆಯೂ ಅಭಿನಯಿಸಿದ ಮಂಜುಳ ಹೀರೋ ಗಳಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

ಇವರು ನಟಿಸಿದ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ 98. ಕೆಲವನ್ನು ಹೆಸರಿಸುವುದಾದರೆ ಸಂಪತ್ತಿಗೆ ಸವಾಲ್, ಮಯೂರ, ದಾರಿ ತಪ್ಪಿದ ಮಗ, ನೀ ನನ್ನ ಗೆಲ್ಲಲಾರೆ, ಎರಡು ಕನಸು, ಶ್ರೀನಿವಾಸ ಕಲ್ಯಾಣ, ಗಲಾಟೆ ಸಂಸಾರ, ಹುಡುಗಾಟದ ಹುಡುಗಿ, ಪಾಯಿಂಟ್ ಪರಿಮಳ, ಸವತಿಯ ನೆರಳು. ಸೀತಾರಾಮು, ದೀಪ, ಮರೆಯದ ಹಾಡು, ಮರೆಯಲಾಗದ ಕಥೆ, ಕುಂಕಮ ರಕ್ಷೆ, ಬದುಕು ಬಂಗಾರವಾಯಿತು.

ನಿನಗಾಗಿ ನಾನು, ಶಿಕಾರಿ, ಸೊಸೆ ತಂದ ಸೌಭಾಗ್ಯ, ಮಿಥುನ, ಬೆಸುಗೆ, ಸಿಂಗಾಪುರದಲ್ಲಿ ರಾಜಾಕುಳ್ಳ, ಕಿಟ್ಟು ಪುಟ್ಟು, ಬೆತ್ತಲ ಸೇವೆ, ಪಟ್ಟಣಕ್ಕೆ ಬಂದ ಪತ್ನಿಯರು ಹೀಗೆ, ಸಾಗುತ್ತದೆ ಪಟ್ಟಿ. ಅವರ ಕೊನೆ ಸಿನಿಮಾ ಮನ ಗೆದ್ದ ಮಗ ಇವರು ಅಕಾಲ ಮರಣಕ್ಕೆ ತುತ್ತಾದ ನಂತರ ತೆರೆ ಕಾಣುತ್ತದೆ.

ಡಬ್ಬಿಂಗ್ಗೆ ಕೂಡ ಇವರು ಇರಲಿಲ್ಲ. ಎರಡು ದಂಡೆಯ ಮೇಲೆ, ಹಾಗೂ ಬೆತ್ತಲ ಸೇವೆ ಅಪೂರ್ಣ ಚಿತ್ರಗಳು. ಕನ್ನಡದ ಜೊತೆಗೆ ತಮಿಳಿನಲ್ಲಿ 5, ತೆಲುಗಿನಲ್ಲಿ 2 ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಮಂಜುಳ.

ದೀಪ ಚಿತ್ರದ ಮನೋಜ್ಞ ಅಭಿನಯಕ್ಕಾಗಿ 1977 ರಲ್ಲಿ ಫಿಲಂ ಫೇರ್ ಅವಾಡರ್್ ಅನ್ನು ಪಡೆದರು. ನವರಸಗಳ ಅಭಿನಯವನ್ನು ಕರಗತ ಮಾಡಿಕೊಂಡಿದ್ದ ಇವರು, ಸೀತಾ ರಾಮು ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರ ರಸಿಕರ ಮನ ಗೆದ್ದರು. ಅನೇಕ ಚಿತ್ರಗಳಲ್ಲಿ ತಮ್ಮನ್ನು ತಾವು ಪ್ರಯೋಗಕ್ಕೆ ಒಗ್ಗಿಸಿಕೊಂಡರು.

ಮಂಜುಳಾ ಅವರನ್ನು ಹಾಕಿಕೊಂಡು ಚಿತ್ರ ತೆಗೆದರೆ ಚಿತ್ರ ಗೆಲ್ಲುತ್ತದೆ ಎಂಬುದು ಆಗ ಸಿನಿಮಾ ರಂಗದಲ್ಲಿ ಪ್ರಚಲಿತದಲ್ಲಿದ್ದ ಮಾತು. ಒಮ್ಮೊಮ್ಮೆ ಡೇಟ್ ಸಿಗದೆ ಒಟ್ಟೊಟ್ಟಿಗೆ ಎರಡು ಮೂರು ಚಿತ್ರಗಳ ಶೂಟಿಂಗ್ ಒಪ್ಪಿಕೊಂಡಿದ್ದೂ ಇದೆ.

ವಿಶೇಷತೆ ಯೆಂದರೆ ನಟನೆ ಮಾಡುತ್ತಿದ್ದುದು ಮಂಜುಳಾ, ಆದರೆ ನಿರ್ದೇಶಕರೊಂದಿಗೆ, ನಿರ್ಮಾಪಕರೊಂದಿಗೆ ವ್ಯವಹಾರ ಮಾತಾಡುತ್ತಿದ್ದದ್ದು ತಾಯಿ ದೇವೀರಮ್ಮ ನವರೆ ಆಗಿದ್ದರು.

1976 ರಲ್ಲಿ ತೆರೆ ಕಂಡ, ತಾನೇ ನಾಯಕಿಯಾಗಿ ನಟಿಸಿದ್ದ ಹುಡುಗಾಟದ ಹುಡುಗಿ ಚಿತ್ರದ ನಿದರ್ೇಶಕ ರಾದ ತಮಿಳು ನಾಡು ಮೂಲದ ಅಮೃತಂ ಅವರನ್ನು 1977 ನೇ ಇಸವಿಯಲ್ಲಿ ಮದುವೆಯಾದರು. ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು.

ಆಗ ಮಂಜುಳಾ ಅವರ ವಯಸ್ಸು ಕೇವಲ 23. ಇದು ಇವರಿಗೆ ಮೊದಲ ಮದುವೆ. ಆದರೆ ಅಮೃತಂ ಅವರಿಗೆ ಎರಡನೆ ಮದುವೆ. ಈ ದಂಪತಿಗೆ ಒಬ್ಬನೇ ಗಂಡು ಮಗು, ಹೆಸರು ಅಭಿಷೇಕ್ ಎಂದು.

ಮದುವೆಯಾಗಿ ತಾಯಿಯಾದ ಮೇಲೆ ಸ್ವಲ್ಪ ದಪ್ಪಗಾಗಿದ್ದ ಮಂಜುಳಾ ಅವರಿಗೆ ಕ್ರಮೇಣ ಬರತೊಡಗಿದ ಪಿಕ್ಟರ್ಗಳು ಕಡಿಮೆಯಾದವು ಅನ್ನುವ ಮಾತಿದೆ. ಅವಕಾಶಗಳು ಕಡಿಮೆಯಾದಾಗ ಖಿನ್ನತೆಗೂ ಒಳಗಾಗಿರುವ ಸಾಧ್ಯತೆ ಇದೆ.

ಅಂದು ತಾರೀಕು 12 ಸೆಪ್ಟೆಂಬರ್ 1986. ವಾರ ಶುಕ್ರವಾರ. ಯಥಾಪ್ರಕಾರ ಅದು ಸಾಧಾರಣಾ ದಿನವೇ. ಆದರೆ ಅಂದು ನಡೆದ ಘಟನೆಯೊಂದು ಆ ದಿನವನ್ನು ಇತಿಹಾಸದಲ್ಲಿ ದಾಖಲಿಸಿರದಿದ್ದರೆ ಅದು ಜನಮಾನಸದಿಂದ, ಆ ಕುಟುಂಬದ ನೆನಪಿನಾಳದಿಂದ, ಅಳಿಸಿಹೋಗುತಿತ್ತೇನೋ. ಆದರೆ ಆ ವಿಧಿಯ ಕ್ರೂರ ಆಟವೇ ಬೇರೆಯಾಗಿತ್ತು.

ಗ್ಯಾಸ್ ಸ್ಟೌವ್ ಸಿಡಿದು ನಟಿ ಮಂಜುಳ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದಾರೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಸ್ಟೌವ್ ಸಿಡಿದಾಗ ಅವರು ಹಾಕಿದ್ದ ಆಕಾಶ ಬಣ್ಣದ ನೈಲಾನ್ ನೈಟಿ ಯಿಂದ ಮತ್ತಷ್ಟು ಚರ್ಮ ಸುಟ್ಟಿತ್ತು. ಎದೆ ಭಾಗ, ಕೈಯಲ್ಲಾ ಸುಟ್ಟು ಹೋಗಿತ್ತು.

ಆ ನೋವಿಯಲ್ಲಿಯೂ ಆ ಜೀವ ತನ್ನ ತಮ್ಮನನ್ನು ಕೇಳಿದ್ದಿಷ್ಟೇ ನನ್ನ ಮುಖಕ್ಕೆ ಏನೂ ಆಗಿಲ್ಲ ತಾನೆ. ಅಷ್ಟರಲ್ಲಾಗಲೆ ಡಾಕ್ಟರ್ ಉಳಿಯುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ಅಂದು 1986ರ 19ನೇ ತಾರೀಖು.

ಶುಕ್ರವಾರ ಸರಿಯಾಗಿ ಸಂಜೆ 7.30. ಕೊನೆ ಕ್ಷಣ ಕಣ್ಣರಳಿಸಿ ತಮ್ಮನನ್ನು ದಿಟ್ಟಿಸಿದರು. ಕಣ್ಣಿನಲ್ಲಿ ನೀರು ಧಾರೆಯಾಯಿತು. ಏನು ಹೇಳಬೇಕಿತ್ತೋ, ಆದರೆ ದನಿ ಹೊರಡಲಿಲ್ಲ. ತಮ್ಮ ಏನೂ ಅಗಲ್ಲ ಸುಮ್ಮನಿರು ಎಂದರು.

ಅಷ್ಟೇ, ಕ್ಷಣದಲ್ಲಿ ಕಣ್ಣುಗಳು ಮುಚ್ಚಿದವು. ಉಸಿರು ನಿಂತು ಪ್ರಾಣ ಪಕ್ಷಿ ಹಾರಿ ಹೋಯಿತು. ದುರ್ಘಟನೆ ನಡೆದು ಸರಿಯಾಗಿ ಒಂದು ವಾರಕ್ಕೆ, ಸುಟ್ಟ ಗಾಯಗಳ ಯಮಯಾತನೆ ಅನುಭವಿಸಿದ, ಅಪಾರ ಜೀವನ ಪ್ರೀತಿ ಹೊಂದಿದ್ದ, ಭವಿಷ್ಯದ ಬದುಕಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ, ತಾರೆ ಬದುಕಿಗೆ ವಿದಾಯ ಹೇಳಿ ಇಹಲೋಕ ತ್ಯಜಿಸಿದರು.

ಆಸ್ಪತ್ರೆಯ ವೈದ್ಯರು ಮಂಜುಳ ಸಾವನ್ನು ಅಧಿಕೃತವಾಗಿ ಘೋಷಿಸಿದ ಮೇಲೆ ಶೋಕ ಸಾಗರದಲ್ಲಿ ಸಿನಿ ಲೋಕ ಮುಳುಗಿತು. ಕನ್ನಡನಾಡು ಕಂಬನಿ ಗರೆಯಿತು.

1966ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಒಂದು ದಶಕದ ಕಾಲ, ಒಂದು ಶತಕಕಕ್ಕೂ ಹೆಚ್ಚು ಸಿನಿಮಾಗಳಲ್ಲಿ, ವೈವಿಧ್ಯಮಯ ಪಾತ್ರಗಳಲ್ಲಿ, ಚಿತ್ರರಸಿಕರನ್ನು ರಂಜಿಸಿ, ಇಡೀ ಚಿತ್ರ ಜಗತ್ತನ್ನೇ ಆಳಿದ ಅಭಿಯನ ಸರಸ್ವತಿ. ಬಟ್ಟಲುಗಣ್ಣಿನ ಚೆಲುವೆ ಬಾರದ ಲೋಕಕ್ಕೆ ಪಯಣಿಸಿದರು.

ಕೊನೆಯ ಚಿತ್ರ ಬೆತ್ತಲೆಸೇವೆ ಆಗ ತಾನೇ ಮುಗಿದಿತ್ತು. ಚಿತ್ರಕ್ಕಾಗಿ ಸೆಲೆಕ್ಟ್ ಮಾಡಿದ್ದ ಕಾಸ್ಟೂಮ್ ಮನೆಯಲ್ಲಿತ್ತು. ಎಲ್ಲವನ್ನೂ, ಎಲ್ಲರನ್ನೂ, ಅಪಾರ ಅಭಿಮಾನಿ ಲೋಕವನ್ನು ಬಿಟ್ಟು ಕಾಣದ ಊರಿಗೆ ನಡದೇ ಬಿಟ್ಟಿದ್ದರು ಮಂಜುಳ.

ತುಂಬಿದ ಕುಟುಂಬ, ಕುಟುಂಬದ ಹೆಬ್ಬಾಗಿಲಿನಂತಿದ್ದ ಮನೆ ಮಗಳು. ಅಪ್ಪ ಅಮ್ಮನನ್ನು, ನೆನಪಿಗೆ ಇಟ್ಟು ಕೊಳ್ಳಲೂ ಸಾಧ್ಯವಿಲ್ಲದ ವಯಸ್ಸಿನ ಮಗು ಅಭಿಷೇಕ್, ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಕುಟುಂಬ ವರ್ಗ, ಅಪಾರ ಬಂಧುಗಳನ್ನು ಬಿಟ್ಟು, ಜಯನಗರದ ಮಂಜುಳ ನಿವಾಸ ದಲ್ಲಿ ನಿಶ್ಚಲವಾಗಿ ಮಲಗಿದಳು.

ರೇಡಿಯೋಗಳಲ್ಲಿ, ಟಿ.ವಿಗಳಲ್ಲಿ ಸಾವಿನ ಸುದ್ದಿ ಪ್ರಸಾರವಾಯಿತು. ಬೆಂಗಳೂರಿನಿಂದ ತುಮಕೂರು ತಲುಪುವವರೆಗೆ ಟಿ.ಬೇಗೂರು, ನೆಲಮಂಗಲ, ದಾಬಸ್ಪೇಟೆ, ಕ್ಯಾತ್ಸಂದ್ರ, ಮುಂತಾದ ಕಡೆ ಅಭಿಮಾನಿಗಳು ವಾಹನವ ತಡೆದು ನಿಲ್ಲಿಸಿ ಅಂತಿಮ ದರ್ಶನ ಪಡೆದರು.

ಹಲವಾರು ಕಡೆ ಅವರಿಗೆ ಹಾರ ಹಾಕಿ, ಪೂಜೆ ಸಲ್ಲಿಸಿತು ಜನತೆ.

ಸಂಜೆ 4.00ರ ವೇಳೆಗೆ ತುಮಕೂರು ಸಮೀಪದ ಹುಟ್ಟೂರು ಹೊನ್ನೆನಹಳ್ಳಿಗೆ ಮೃತದೇಹ ತಲುಪಿತು. ವಿಷಯ ಕಾಳ್ಗಿಚ್ಚಿನಂತೆ ಹಬ್ಬಿತು. ಜನಸಾಗರವೇ ಹರಿದು ಬಂತು.

ಕುಟುಂಬಸ್ಥರೇ ಒಳಹೋಗಲು ಹರಸಾಹಸ ಪಡುವಂತಾಯಿತು. ಅಷ್ಟೊಂದು ಜನಜಂಗುಳಿ. ಅಷ್ಟರೊಳಗೆ ಇಲ್ಲಿದ್ದ ಕುಟುಂಬಸ್ಥರು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಸಂಸ್ಕಾರಕ್ಕೆ ನಟರಾದ ಶ್ರೀನಾಥ್, ಶಿವರಾಂ. ಸುಂದರ್ರಾಜ್, ಹಾಗೂ ಸ್ಥಳೀಯ ನಾಯಕರು, ಪೋಲೀಸ್ ಇಲಾಖೆಯ ಸಿಬ್ಬಂದಿ, ಹೀಗೆ ಜನವೋ ಜನ.

ಸಂಜೆಯಾಗುತ್ತಲೇ ಮಂಜುಳಾ ರವರನ್ನು ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಮಣ್ಣು ಮಾಡಲಾಯಿತು. ಅಲ್ಲಿಗೆ ತುಮಕೂರಿನ ಒಬ್ಬ ಹೆಸರಾಂತ ನಟಿ ನೃತ್ಯತಾರೆ ಪಂಚಭೂತಗಳಲ್ಲಿ ಲೀನವಾದರು. ವಿಧಿಯಾಟ ಬಲ್ಲವರಾರು ಸತ್ತಾಗ ಅವರ ವಯಸ್ಸು ಕೇವಲ 32.

ಇಂದು ಅವರ ಹುಟ್ಟು ಹಬ್ಬ. ಹೊನ್ನೆನಹಳ್ಳಿಯ ಅವರ ತೋಟದಲ್ಲೇ ಅವರ ಸಮಾಧಿ ಇದೆ. ಸಮೀಪದಲ್ಲಿ ಅವರೇ ಕಟ್ಟಿಸಿದ ಮಂಜುನಾಥ ದೇವಾಲಯವೂ ಇದೆ. ಅದನ್ನು ತಮ್ಮ ನೀಲಕಂಠ ಮತ್ತು ಅವರ ಕುಟುಂಬ ನೋಡಿಕೊಳ್ಳುತ್ತಿದೆ.

ತಮ್ಮಂದಿರು, ಅವರ ಕುಟುಂಬ ತುಮಕೂರಿನಲ್ಲಿ ನೆಲೆಸಿದ್ದರೆ, ತಂಗಿಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗ ಬೆಳೆದು ದೊಡ್ಡವನಾಗಿದ್ದಾನೆ. ಮಗ ಸೊಸೆ ಅವರೂ ಬೆಂಗಳೂರಿನಲ್ಲೆ ಇದ್ದಾರೆ. ಪತಿ ಅಮೃತಂ ಈ ಕುಟುಂಬದೊಟ್ಟಿಗೆ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ. ಮತ್ತೆ ಇವರ ಕುಟುಬದಿಂದ ಯಾರೂ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿಲ್ಲ. ತಮ್ಮ ನೀಲಕಂಠ ಮತ್ತು ರೂಪ ಅವರ ಮಗಳು ಮಿಥಿಲಾ ಹೆಚ್ಚು ಕಡಿಮೆ ಅತ್ತೆಯನ್ನೆ ಹೋಲುತ್ತಾಳೆ, ಅತ್ತೆಯಂತೆಯೇ ನೃತ್ಯ ಪ್ರವೀಣೆ. ಅವಳ ಹಾವ ಭಾವ ಸದಾ ಮಂಜುಳಾ ಅವರನ್ನು ನೆನಪಿಸುತ್ತದೆ.

ಕುಟುಂಬ ಮನಸ್ಸು ಮಾಡಿದರೆ ಮಂಜುಳಾ ಅವರ ಕುಟುಂಬದ ಕುಡಿ ಮತ್ತೆ ಸಿನಿ ಜಗತ್ತಿಗೆ ಬರಬಹುದೇನೋ. ಕಾದು ನೋಡಬೇಕು.
ಇಂದು ಬದುಕಿದ್ದರೆ, ಬಿ.ಸರೋಜ ದೇವಿ, ಜಯಂತಿ, ಆರತಿ, ಲೀಲಾವತಿ, ಅವರಂತೆ ಹಿರಿಯ ಕಲಾವಿದೆಯಾಗಿ ನಮ್ಮೊಂದಿಗೆ ಮಂಜುಳಾ ಇರುತ್ತಿದ್ದರು.

ಮಹಾನ್ ನಟಿಯ ಹುಟ್ಟು ಹಬ್ಬದ ದಿನದಂದು ಅವರಿಗೆ ಎಲ್ಲ ಅಭಿಮಾನಿಗಳ ಪರವಾಗಿ ನನ್ನದೊಂದು ನುಡಿ ನಮನ.


ರಾಣಿ ಚಂದ್ರಶೇಖರ್
ದೂರವಾಣಿ:9986824210

ಮರೆಯಾದ ಮರೀಚಿಕೆ: ಮಂಜುಳಾ

0

ರಾಣಿ ಚಂದ್ರಶೇಖರ್


ಅಂತಿಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ, ನಾ ಬರುವ ದಾರಿ ಗೌರವ ತೋರಿ, ಕೈಯ ಕಟ್ಟಿ ನಿಲ್ಲುವರೆಲ್ಲ ಎನ್ನುವ ಹಾಡು ಯಾರಿಗೆ ತಾನೆ ಗೊತ್ತಿಲ್ಲ, ಬಜಾರಿಯಾಗಿ, ದರ್ಪದ ಶ್ರೀಮಂತ ಅಪ್ಪನಿಗೆ ತಕ್ಕ ಮಗಳಾಗಿ ಗಂಡುಬಿರಿಯಂತೆ ನಟಿಸಿ, ಅಲ್ಲಿಂದ ಸುಮಾರು ಒಂದು ದಶಕಗಳಷ್ಟು ಕಾಲ ಇಡೀ ಕನ್ನಡ ಸಿನಿಮಾ ರಂಗವನ್ನು ಆಳಿದ ಲೇಡಿ ಸೂಪರ್ ಸ್ಟಾರ್ ಬೇರಾರು ಅಲ್ಲ, ತುಮಕೂರಿನ ಹೆಮ್ಮೆಯ ಮಗಳು ಮಂಜುಳಾ.
ಮಂಜುಳಾ ಅವರ ಹುಟ್ಟು ಹಬ್ಬ ಇಂದು. ಅದರ ಜ್ಞಾಪಕಾರ್ಥ ಈ ಪುಟ್ಟ ಲೇಖನ ನಿಮ್ಮ ಮುಂದೆ. ತುಮಕೂರಿನ ಸೆರಗಿನಲ್ಲಿರುವ ಹೊನ್ನೇನಹಳ್ಳಿ ಇವರ ಸ್ವಂತ ಊರು. ಪಟೇಲರಾಗಿದ್ದ ಹನುಮಂತೇಗೌಡ ಮಂಜುಳಾ ಅವರ ಮುತ್ತಾತ. ಸುತ್ತ ಮುತ್ತಲ ಹತ್ತು ಹಳ್ಳಿಗಳಲ್ಲಿ ಇದ್ದ ದೊಡ್ಡ ಕುಳಗಳ ಕುಟುಂಬಗಳಲ್ಲಿ ಇವರದೂ ಒಂದು. ಹನುಮಂತೇಗೌಡ ಅವರಿಗೆ ಮೇಲಗಿರಿಗೌಡ, ದೊಡ್ಡಯ್ಯ, ಚಿಕ್ಕಮೇಲಪ್ಪ, ಹುಚ್ಚಯ್ಯ ಎಂಬ 4 ಗಂಡುಮಕ್ಕಳು. ಕೃಷಿ ಮಾಡಿಕೊಂಡು ತೋಟ ತುಡಿಕೆ ಹೊಂದಿದ್ದ ಅನುಕೂಲಸ್ಥರು. ಹಿರಿಯ ಮಗ ಮೇಲಗಿರಿಗೌಡ ಮತ್ತು ಈರಮ್ಮ ದಂಪತಿಗಳಿಗೆ ಶಿವಣ್ಣ, ಗೌರಮ್ಮ, ಗುರುಸಿದ್ದಮ್ಮ ಎಂಬ ಮೂವರು ಮಕ್ಕಳು. ಹಿರಿಯ ಮಗ ಶಿವಣ್ಣ ಹೈಸ್ಕೂಲ್ ಮುಗಿಸಿದ ನಂತರ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಪೋಲೀಸ್ ಶಿವಣ್ಣ ಹಾಗೂ ಅನ್ನಪೂಣರ್ೆಯೆಂದೇ ಹೆಸರಾಗಿದ್ದ ದೇವೀರಮ್ಮ ದಂಪತಿಗಳ ಮೊದಲನೇ ಮಗಳು. ಮಂಜುಳಾ. ಮದುವೆಯಾಗಿ ಸುಮಾರು 15 ವರ್ಷ ಮಕ್ಕಳಿಲ್ಲ ಎನ್ನುವ ನೋವಿಗೆ ಅವರು ಮೊರೆ ಹೋದದ್ದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ. ಶಿವಣ್ಣ ಮತ್ತು ದೇವೀರಮ್ಮ ದಂಪತಿಗಳಿಗೆ 8/11/1954 ರಂದು ಚಂದ್ರನ ತುಂಡಿನಂಥ ಒಂದು ಮುದ್ದಾದ ಹೆಣ್ಣು ಮಗು ಜನಿಸಿತು. ಮಂಜುನಾಥನ ಕೃಪೆಯಿಂದ ಮಗು ಹುಟ್ಟಿತು ಎಂಬ ನಂಬಿಕೆಯಿಂದ ಮಂಜುಳಾ ಎಂದು ಮಗುವಿಗೆ ನಾಮಕರಣ ಮಾಡಿಸಿದರು. ಮಂಜುಳಾ ನಂತರ ಉಮಾ, ಮಂಜುನಾಥ, ನೀಲಕಂಠ, ಮಮತ ಹೀಗೆ ನಾಲ್ಕು ಮಕ್ಕಳು ಮನೆ ತುಂಬಿದರು, ಸಂಸಾರ ಬೆಳೆಯಿತು.
ಚಿಕ್ಕಂದಿನಿಂದಲೇ ಚೂಟಿಯಾಗಿದ್ದ ಮಂಜುಳಾ ನೃತ್ಯ ಪ್ರವೀಣೆ. ತುಮಕೂರಿನ ರಾಜರಾಜೇಶ್ವರಿ ನೃತ್ಯ ಕಲಾ ಮಂದಿರದ ಸಂಸ್ಥಾಪಕರಾದ ಶ್ರೀ ಗುರು ನಾಟ್ಯಶ್ರೀ ಕೆ.ಎಂ. ರಾಮನ್ ಅವರಲ್ಲಿ ತಮ್ಮ 5 ನೇ ವಯಸ್ಸಿಗೆ ನೃತ್ಯ ಕಲಿಯಲು ಆರಂಭಿಸಿದರು. ಈ ನಂಟು ಮಂಜುಳಾ ಅವರ ಸಾವಿನ ವರೆಗೂ ಮುಂದುವರಿಯುತ್ತದೆ. ಅವರು ದೊಡ್ಡ ನಟಿ ಯಾದ ಮೇಲೂ ರಾಮನ್ ಅವರು ನೃತ್ಯಾಭ್ಯಾಸ ಮಾಡಿಸಲು ಬೆಂಗಳೂರಿಗೆ ವಾರಕ್ಕೆರಡು ಬಾರಿ ಹೋಗಿಬರುತ್ತಿದ್ದರು. ಶಿವ ತಾಂಡವ ನೃತ್ಯ, ಕೊರವಂಜಿ, ಶೃಂಗಾರ ಲಹರಿ, ಮೊದಲಾದವುಗಳು ಮಂಜುಳಾ ಅವರ ಹೆಸರಾಂತ ಪ್ರದರ್ಶನಗಳು. ಅದಲ್ಲದೆ ಪ್ರಭಾತ್ ಕಲಾವಿದರು ಆಶ್ರಯದಲ್ಲಿಯೂ ಪ್ರದರ್ಶನಗಳನ್ನು ನೀಡುತ್ತಾ ಬಂದರು. ಎಲ್ಲ ಮಕ್ಕಳಂತೆ ಓದು ನೃತ್ಯ ಹೀಗೆ ತೊಡಗಿಸಿಕೊಂಡು ಕುಟುಂಬದ ನಲ್ಮೆಯ ಮಗುವಾಗಿ ಬೆಳೆದ ಮಂಜುಳಾ ಅವರಿಗೆ ಯಾವ ಅದೃಷ್ಠವೋ, ತಂದೆ ತಾಯಿಯ ಆಶಯವೋ ಎಂಬಂತೆ 1966 ರಲ್ಲಿ ಮನೆ ಕಟ್ಟಿ ನೋಡು ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಲು ಆಹ್ವಾನ ಬಂದಿತು. ಸಿ.ವಿ ಶಿವಶಂಕರ್ ಅವರು ಈ ಚಿತ್ರ ನಿಮರ್ಿಸಿದರು. ಉದಯ ಕುಮಾರ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಅವರ ಮಗಳ ಪಾತ್ರದಲ್ಲಿ ಮಂಜುಳ ಬಾಲ ನಟಿಯಾಗಿ ನಟಿಸುತ್ತಾರೆ. ಪಾತ್ರದ ಹೆಸರು ಮಂಜು ಎಂದು ಇದ್ದದ್ದು ಕಾಕತಾಳೀಯ.
ಹೀಗೆ ತನ್ನ 12 ನೇ ವಯಸ್ಸಿಗೆ ಸಿನಿ ಪಯಣ ಆರಂಭಿಸಿದ ಮಂಜುಳ ಹಿರಿಯ ನಟಿ ಜಯಂತಿ ಅಭಿನಯದ ಎರಡು ಮುಖ ಚಿತ್ರದಲ್ಲಿ ಅವರ ತಂಗಿಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಮತ್ತೊಂದು ತೆರೆ ಕಾಣದ ಚಿತ್ರ ಪದವೀಧರ ದಲ್ಲಿಯೂ ಅಭಿನಯಿಸಿದರು.
1973 ರಲ್ಲಿ ತೆರೆಕಂಡ ಮೂರು ನಾಯಕಿಯರನ್ನೊಳಗೊಂಡ ಮೂರುವರೆ ವಜ್ರ ಸಿನಿಮಾದಲ್ಲಿ ಅಂದಿನ ಪ್ರಸಿದ್ಧ ಹೀರೋಯಿನ್ ಗಳಾದ ಜಯಂತಿ, ಆರತಿ, ಅವರ ಜೊತೆಯಲ್ಲಿ ಮಂಜುಳ ಕೂಡ ನಾಯಕಿಯಾಗಿ ಅಭಿನಯಿಸಿದರು. ಅಲ್ಲಿಂದ ಮುಂದೆ ಎರಡು ಕನಸು, ನಂತರ ಸಂಪತ್ತಿಗೆ ಸವಾಲ್. ಇಲ್ಲಿಂದ ಶುರುವಾಯಿತು ಅವರ ನಟನೆಯ ನಾಗಾಲೋಟ. ಆಗಿನ ಚಲನಚಿತ್ರ ರಂಗದ ಮೇರು ನಟರ ಜೊತೆ ನಟಿಸಿದರು. ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಶಂಕರ್ನಾಗ್, ಅಶೋಕ್, ಅನಂತ್ನಾಗ್, ದ್ವಾರಕೀಶ್, ಹೀಗೆ ಎಲ್ಲರ ಜೊತೆಯೂ ಅಭಿನಯಿಸಿದ ಮಂಜುಳ ಹೀರೋ ಗಳಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಇವರು ನಟಿಸಿದ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ 98. ಕೆಲವನ್ನು ಹೆಸರಿಸುವುದಾದರೆ ಸಂಪತ್ತಿಗೆ ಸವಾಲ್, ಮಯೂರ, ದಾರಿ ತಪ್ಪಿದ ಮಗ, ನೀ ನನ್ನ ಗೆಲ್ಲಲಾರೆ, ಎರಡು ಕನಸು, ಶ್ರೀನಿವಾಸ ಕಲ್ಯಾಣ, ಗಲಾಟೆ ಸಂಸಾರ, ಹುಡುಗಾಟದ ಹುಡುಗಿ, ಪಾಯಿಂಟ್ ಪರಿಮಳ, ಸವತಿಯ ನೆರಳು. ಸೀತಾರಾಮು, ದೀಪ, ಮರೆಯದ ಹಾಡು, ಮರೆಯಲಾಗದ ಕಥೆ, ಕುಂಕಮ ರಕ್ಷೆ, ಬದುಕು ಬಂಗಾರವಾಯಿತು. ನಿನಗಾಗಿ ನಾನು, ಶಿಕಾರಿ, ಸೊಸೆ ತಂದ ಸೌಭಾಗ್ಯ, ಮಿಥುನ, ಬೆಸುಗೆ, ಸಿಂಗಾಪುರದಲ್ಲಿ ರಾಜಾಕುಳ್ಳ, ಕಿಟ್ಟು ಪುಟ್ಟು, ಬೆತ್ತಲ ಸೇವೆ, ಪಟ್ಟಣಕ್ಕೆ ಬಂದ ಪತ್ನಿಯರು ಹೀಗೆ, ಸಾಗುತ್ತದೆ ಪಟ್ಟಿ. ಅವರ ಕೊನೆ ಸಿನಿಮಾ ಮನ ಗೆದ್ದ ಮಗ ಇವರು ಅಕಾಲ ಮರಣಕ್ಕೆ ತುತ್ತಾದ ನಂತರ ತೆರೆ ಕಾಣುತ್ತದೆ. ಡಬ್ಬಿಂಗ್ಗೆ ಕೂಡ ಇವರು ಇರಲಿಲ್ಲ. ಎರಡು ದಂಡೆಯ ಮೇಲೆ, ಹಾಗೂ ಬೆತ್ತಲ ಸೇವೆ ಅಪೂರ್ಣ ಚಿತ್ರಗಳು. ಕನ್ನಡದ ಜೊತೆಗೆ ತಮಿಳಿನಲ್ಲಿ 5, ತೆಲುಗಿನಲ್ಲಿ 2 ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಮಂಜುಳ.
ದೀಪ ಚಿತ್ರದ ಮನೋಜ್ಞ ಅಭಿನಯಕ್ಕಾಗಿ 1977 ರಲ್ಲಿ ಫಿಲಂ ಫೇರ್ ಅವಾಡರ್್ ಅನ್ನು ಪಡೆದರು. ನವರಸಗಳ ಅಭಿನಯವನ್ನು ಕರಗತ ಮಾಡಿಕೊಂಡಿದ್ದ ಇವರು, ಸೀತಾ ರಾಮು ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರ ರಸಿಕರ ಮನ ಗೆದ್ದರು. ಅನೇಕ ಚಿತ್ರಗಳಲ್ಲಿ ತಮ್ಮನ್ನು ತಾವು ಪ್ರಯೋಗಕ್ಕೆ ಒಗ್ಗಿಸಿಕೊಂಡರು. ಮಂಜುಳಾ ಅವರನ್ನು ಹಾಕಿಕೊಂಡು ಚಿತ್ರ ತೆಗೆದರೆ ಚಿತ್ರ ಗೆಲ್ಲುತ್ತದೆ ಎಂಬುದು ಆಗ ಸಿನಿಮಾ ರಂಗದಲ್ಲಿ ಪ್ರಚಲಿತದಲ್ಲಿದ್ದ ಮಾತು. ಒಮ್ಮೊಮ್ಮೆ ಡೇಟ್ ಸಿಗದೆ ಒಟ್ಟೊಟ್ಟಿಗೆ ಎರಡು ಮೂರು ಚಿತ್ರಗಳ ಶೂಟಿಂಗ್ ಒಪ್ಪಿಕೊಂಡಿದ್ದೂ ಇದೆ. ವಿಶೇಷತೆ ಯೆಂದರೆ ನಟನೆ ಮಾಡುತ್ತಿದ್ದುದು ಮಂಜುಳಾ, ಆದರೆ ನಿದರ್ೇಶಕರೊಂದಿಗೆ, ನಿಮರ್ಾಪಕರೊಂದಿಗೆ ವ್ಯವಹಾರ ಮಾತಾಡುತ್ತಿದ್ದದ್ದು ತಾಯಿ ದೇವೀರಮ್ಮ ನವರೆ ಆಗಿದ್ದರು.
1976 ರಲ್ಲಿ ತೆರೆ ಕಂಡ, ತಾನೇ ನಾಯಕಿಯಾಗಿ ನಟಿಸಿದ್ದ ಹುಡುಗಾಟದ ಹುಡುಗಿ ಚಿತ್ರದ ನಿದರ್ೇಶಕ ರಾದ ತಮಿಳು ನಾಡು ಮೂಲದ ಅಮೃತಂ ಅವರನ್ನು 1977 ನೇ ಇಸವಿಯಲ್ಲಿ ಮದುವೆಯಾದರು. ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು. ಆಗ ಮಂಜುಳಾ ಅವರ ವಯಸ್ಸು ಕೇವಲ 23. ಇದು ಇವರಿಗೆ ಮೊದಲ ಮದುವೆ. ಆದರೆ ಅಮೃತಂ ಅವರಿಗೆ ಎರಡನೆ ಮದುವೆ. ಈ ದಂಪತಿಗೆ ಒಬ್ಬನೇ ಗಂಡು ಮಗು, ಹೆಸರು ಅಭಿಷೇಕ್ ಎಂದು.
ಮದುವೆಯಾಗಿ ತಾಯಿಯಾದ ಮೇಲೆ ಸ್ವಲ್ಪ ದಪ್ಪಗಾಗಿದ್ದ ಮಂಜುಳಾ ಅವರಿಗೆ ಕ್ರಮೇಣ ಬರತೊಡಗಿದ ಪಿಕ್ಟರ್ಗಳು ಕಡಿಮೆಯಾದವು ಅನ್ನುವ ಮಾತಿದೆ. ಅವಕಾಶಗಳು ಕಡಿಮೆಯಾದಾಗ ಖಿನ್ನತೆಗೂ ಒಳಗಾಗಿರುವ ಸಾಧ್ಯತೆ ಇದೆ.
ಅಂದು ತಾರೀಕು 12 ಸೆಪ್ಟೆಂಬರ್ 1986. ವಾರ ಶುಕ್ರವಾರ. ಯಥಾಪ್ರಕಾರ ಅದು ಸಾಧಾರಣಾ ದಿನವೇ. ಆದರೆ ಅಂದು ನಡೆದ ಘಟನೆಯೊಂದು ಆ ದಿನವನ್ನು ಇತಿಹಾಸದಲ್ಲಿ ದಾಖಲಿಸಿರದಿದ್ದರೆ ಅದು ಜನಮಾನಸದಿಂದ, ಆ ಕುಟುಂಬದ ನೆನಪಿನಾಳದಿಂದ, ಅಳಿಸಿಹೋಗುತಿತ್ತೇನೋ. ಆದರೆ ಆ ವಿಧಿಯ ಕ್ರೂರ ಆಟವೇ ಬೇರೆಯಾಗಿತ್ತು.
ಗ್ಯಾಸ್ ಸ್ಟೌವ್ ಸಿಡಿದು ನಟಿ ಮಂಜುಳ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದಾರೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಸ್ಟೌವ್ ಸಿಡಿದಾಗ ಅವರು ಹಾಕಿದ್ದ ಆಕಾಶ ಬಣ್ಣದ ನೈಲಾನ್ ನೈಟಿ ಯಿಂದ ಮತ್ತಷ್ಟು ಚರ್ಮ ಸುಟ್ಟಿತ್ತು. ಎದೆ ಭಾಗ, ಕೈಯಲ್ಲಾ ಸುಟ್ಟು ಹೋಗಿತ್ತು. ಆ ನೋವಿಯಲ್ಲಿಯೂ ಆ ಜೀವ ತನ್ನ ತಮ್ಮನನ್ನು ಕೇಳಿದ್ದಿಷ್ಟೇ ನನ್ನ ಮುಖಕ್ಕೆ ಏನೂ ಆಗಿಲ್ಲ ತಾನೆ. ಅಷ್ಟರಲ್ಲಾಗಲೆ ಡಾಕ್ಟರ್ ಉಳಿಯುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ಅಂದು 1986ರ 19ನೇ ತಾರೀಖು. ಶುಕ್ರವಾರ ಸರಿಯಾಗಿ ಸಂಜೆ 7.30. ಕೊನೆ ಕ್ಷಣ ಕಣ್ಣರಳಿಸಿ ತಮ್ಮನನ್ನು ದಿಟ್ಟಿಸಿದರು. ಕಣ್ಣಿನಲ್ಲಿ ನೀರು ಧಾರೆಯಾಯಿತು. ಏನು ಹೇಳಬೇಕಿತ್ತೋ, ಆದರೆ ದನಿ ಹೊರಡಲಿಲ್ಲ. ತಮ್ಮ ಏನೂ ಅಗಲ್ಲ ಸುಮ್ಮನಿರು ಎಂದರು. ಅಷ್ಟೇ, ಕ್ಷಣದಲ್ಲಿ ಕಣ್ಣುಗಳು ಮುಚ್ಚಿದವು. ಉಸಿರು ನಿಂತು ಪ್ರಾಣ ಪಕ್ಷಿ ಹಾರಿ ಹೋಯಿತು. ದುರ್ಘಟನೆ ನಡೆದು ಸರಿಯಾಗಿ ಒಂದು ವಾರಕ್ಕೆ, ಸುಟ್ಟ ಗಾಯಗಳ ಯಮಯಾತನೆ ಅನುಭವಿಸಿದ, ಅಪಾರ ಜೀವನ ಪ್ರೀತಿ ಹೊಂದಿದ್ದ, ಭವಿಷ್ಯದ ಬದುಕಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ, ತಾರೆ ಬದುಕಿಗೆ ವಿದಾಯ ಹೇಳಿ ಇಹಲೋಕ ತ್ಯಜಿಸಿದರು. ಆಸ್ಪತ್ರೆಯ ವೈದ್ಯರು ಮಂಜುಳ ಸಾವನ್ನು ಅಧಿಕೃತವಾಗಿ ಘೋಷಿಸಿದ ಮೇಲೆ ಶೋಕ ಸಾಗರದಲ್ಲಿ ಸಿನಿ ಲೋಕ ಮುಳುಗಿತು. ಕನ್ನಡನಾಡು ಕಂಬನಿ ಗರೆಯಿತು.
1966ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಒಂದು ದಶಕದ ಕಾಲ, ಒಂದು ಶತಕಕಕ್ಕೂ ಹೆಚ್ಚು ಸಿನಿಮಾಗಳಲ್ಲಿ, ವೈವಿಧ್ಯಮಯ ಪಾತ್ರಗಳಲ್ಲಿ, ಚಿತ್ರರಸಿಕರನ್ನು ರಂಜಿಸಿ, ಇಡೀ ಚಿತ್ರ ಜಗತ್ತನ್ನೇ ಆಳಿದ ಅಭಿಯನ ಸರಸ್ವತಿ. ಬಟ್ಟಲುಗಣ್ಣಿನ ಚೆಲುವೆ ಬಾರದ ಲೋಕಕ್ಕೆ ಪಯಣಿಸಿದರು. ಕೊನೆಯ ಚಿತ್ರ ಬೆತ್ತಲೆಸೇವೆ ಆಗ ತಾನೇ ಮುಗಿದಿತ್ತು. ಚಿತ್ರಕ್ಕಾಗಿ ಸೆಲೆಕ್ಟ್ ಮಾಡಿದ್ದ ಕಾಸ್ಟೂಮ್ ಮನೆಯಲ್ಲಿತ್ತು. ಎಲ್ಲವನ್ನೂ, ಎಲ್ಲರನ್ನೂ, ಅಪಾರ ಅಭಿಮಾನಿ ಲೋಕವನ್ನು ಬಿಟ್ಟು ಕಾಣದ ಊರಿಗೆ ನಡದೇ ಬಿಟ್ಟಿದ್ದರು ಮಂಜುಳ.
ತುಂಬಿದ ಕುಟುಂಬ, ಕುಟುಂಬದ ಹೆಬ್ಬಾಗಿಲಿನಂತಿದ್ದ ಮನೆ ಮಗಳು. ಅಪ್ಪ ಅಮ್ಮನನ್ನು, ನೆನಪಿಗೆ ಇಟ್ಟು ಕೊಳ್ಳಲೂ ಸಾಧ್ಯವಿಲ್ಲದ ವಯಸ್ಸಿನ ಮಗು ಅಭಿಷೇಕ್, ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಕುಟುಂಬ ವರ್ಗ, ಅಪಾರ ಬಂಧುಗಳನ್ನು ಬಿಟ್ಟು, ಜಯನಗರದ ಮಂಜುಳ ನಿವಾಸ ದಲ್ಲಿ ನಿಶ್ಚಲವಾಗಿ ಮಲಗಿದಳು. ರೇಡಿಯೋಗಳಲ್ಲಿ, ಟಿ.ವಿಗಳಲ್ಲಿ ಸಾವಿನ ಸುದ್ದಿ ಪ್ರಸಾರವಾಯಿತು. ಬೆಂಗಳೂರಿನಿಂದ ತುಮಕೂರು ತಲುಪುವವರೆಗೆ ಟಿ.ಬೇಗೂರು, ನೆಲಮಂಗಲ, ದಾಬಸ್ಪೇಟೆ, ಕ್ಯಾತ್ಸಂದ್ರ, ಮುಂತಾದ ಕಡೆ ಅಭಿಮಾನಿಗಳು ವಾಹನವ ತಡೆದು ನಿಲ್ಲಿಸಿ ಅಂತಿಮ ದರ್ಶನ ಪಡೆದರು. ಹಲವಾರು ಕಡೆ ಅವರಿಗೆ ಹಾರ ಹಾಕಿ, ಪೂಜೆ ಸಲ್ಲಿಸಿತು ಜನತೆ.
ಸಂಜೆ 4.00ರ ವೇಳೆಗೆ ತುಮಕೂರು ಸಮೀಪದ ಹುಟ್ಟೂರು ಹೊನ್ನೆನಹಳ್ಳಿಗೆ ಮೃತದೇಹ ತಲುಪಿತು. ವಿಷಯ ಕಾಳ್ಗಿಚ್ಚಿನಂತೆ ಹಬ್ಬಿತು. ಜನಸಾಗರವೇ ಹರಿದು ಬಂತು. ಕುಟುಂಬಸ್ಥರೇ ಒಳಹೋಗಲು ಹರಸಾಹಸ ಪಡುವಂತಾಯಿತು. ಅಷ್ಟೊಂದು ಜನಜಂಗುಳಿ. ಅಷ್ಟರೊಳಗೆ ಇಲ್ಲಿದ್ದ ಕುಟುಂಬಸ್ಥರು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಸಂಸ್ಕಾರಕ್ಕೆ ನಟರಾದ ಶ್ರೀನಾಥ್, ಶಿವರಾಂ. ಸುಂದರ್ರಾಜ್, ಹಾಗೂ ಸ್ಥಳೀಯ ನಾಯಕರು, ಪೋಲೀಸ್ ಇಲಾಖೆಯ ಸಿಬ್ಬಂದಿ, ಹೀಗೆ ಜನವೋ ಜನ. ಸಂಜೆಯಾಗುತ್ತಲೇ ಮಂಜುಳಾ ರವರನ್ನು ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಮಣ್ಣು ಮಾಡಲಾಯಿತು. ಅಲ್ಲಿಗೆ ತುಮಕೂರಿನ ಒಬ್ಬ ಹೆಸರಾಂತ ನಟಿ ನೃತ್ಯತಾರೆ ಪಂಚಭೂತಗಳಲ್ಲಿ ಲೀನವಾದರು. ವಿಧಿಯಾಟ ಬಲ್ಲವರಾರು ಸತ್ತಾಗ ಅವರ ವಯಸ್ಸು ಕೇವಲ 32.
ಇಂದು ಅವರ ಹುಟ್ಟು ಹಬ್ಬ. ಹೊನ್ನೆನಹಳ್ಳಿಯ ಅವರ ತೋಟದಲ್ಲೇ ಅವರ ಸಮಾಧಿ ಇದೆ. ಸಮೀಪದಲ್ಲಿ ಅವರೇ ಕಟ್ಟಿಸಿದ ಮಂಜುನಾಥ ದೇವಾಲಯವೂ ಇದೆ. ಅದನ್ನು ತಮ್ಮ ನೀಲಕಂಠ ಮತ್ತು ಅವರ ಕುಟುಂಬ ನೋಡಿಕೊಳ್ಳುತ್ತಿದೆ. ತಮ್ಮಂದಿರು, ಅವರ ಕುಟುಂಬ ತುಮಕೂರಿನಲ್ಲಿ ನೆಲೆಸಿದ್ದರೆ, ತಂಗಿಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗ ಬೆಳೆದು ದೊಡ್ಡವನಾಗಿದ್ದಾನೆ. ಮಗ ಸೊಸೆ ಅವರೂ ಬೆಂಗಳೂರಿನಲ್ಲೆ ಇದ್ದಾರೆ. ಪತಿ ಅಮೃತಂ ಈ ಕುಟುಂಬದೊಟ್ಟಿಗೆ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ. ಮತ್ತೆ ಇವರ ಕುಟುಬದಿಂದ ಯಾರೂ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿಲ್ಲ. ತಮ್ಮ ನೀಲಕಂಠ ಮತ್ತು ರೂಪ ಅವರ ಮಗಳು ಮಿಥಿಲಾ ಹೆಚ್ಚು ಕಡಿಮೆ ಅತ್ತೆಯನ್ನೆ ಹೋಲುತ್ತಾಳೆ, ಅತ್ತೆಯಂತೆಯೇ ನೃತ್ಯ ಪ್ರವೀಣೆ. ಅವಳ ಹಾವ ಭಾವ ಸದಾ ಮಂಜುಳಾ ಅವರನ್ನು ನೆನಪಿಸುತ್ತದೆ. ಕುಟುಂಬ ಮನಸ್ಸು ಮಾಡಿದರೆ ಮಂಜುಳಾ ಅವರ ಕುಟುಂಬದ ಕುಡಿ ಮತ್ತೆ ಸಿನಿ ಜಗತ್ತಿಗೆ ಬರಬಹುದೇನೋ. ಕಾದು ನೋಡಬೇಕು.
ಇಂದು ಬದುಕಿದ್ದರೆ, ಬಿ.ಸರೋಜ ದೇವಿ, ಜಯಂತಿ, ಆರತಿ, ಲೀಲಾವತಿ, ಅವರಂತೆ ಹಿರಿಯ ಕಲಾವಿದೆಯಾಗಿ ನಮ್ಮೊಂದಿಗೆ ಮಂಜುಳಾ ಇರುತ್ತಿದ್ದರು. ಮಹಾನ್ ನಟಿಯ ಹುಟ್ಟು ಹಬ್ಬದ ದಿನದಂದು ಅವರಿಗೆ ಎಲ್ಲ ಅಭಿಮಾನಿಗಳ ಪರವಾಗಿ ನನ್ನದೊಂದು ನುಡಿ ನಮನ.

ಕವನ ವಯಸ್ಸು

0

ಡಾ// ರಜನಿ .ಎಂ


ಕಣ್ಣಿಗೆ ಪೊರೆ
ಬಂದರೂ
ನಿನ್ನ ಚಿತ್ರ
ಅದೇ …ಒಂಚೂರೂ ಮಾಸಿಲ್ಲ.

ಬೇರೆಯದೆಲ್ಲ
ಮರೆತರೂ
ನಿನ್ನ ನೆನಪು
ಸದಾ ಹಸಿರು

ಕುಯ್ ಗುಡುವ
ಕೀಲುಗಳಿಗೂ
ನಿನ್ನದೆ
ರಾಗ

ಹೃದಯಸ್ತಂಭನದ
ವ್ಯತ್ಯಾಸ ವೇನು..
ಆ ದಿನವೆ ಹೃದಯ
ಅರೆಗಳಿಗೆ
ನಿಂತಿರಲಿಲ್ಲವೆ

ಸುಕ್ಕಾದ
ಚರ್ಮಕ್ಕೂ
ಅದೇ ಸ್ಪರ್ಶವಲ್ಲವೆ

ನಿನ್ನ ನೆನಪೆ
ಕ್ಯಾನ್ಸರ್ ಆಗಿದೆ
ಮೈ ಮನಗಳಲ್ಲಿ
ಹರಡುತ್ತಿದೆ

ಒಂದು ತುತ್ತು
ಅನ್ನಕ್ಕೆ ಸಾಕಾಗಿದೆ
ಊಟ
ಹಳೆ ಬುತ್ತಿಯ ಭಾರದಲ್ಲಿ

ಅತಿಥಿ ಶಿಕ್ಷಕರಿಗೆ ಅರ್ಜಿ ಆಹ್ವಾನ

Publicstory


ಡಾ|| ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನೊಣವಿನಕೆರೆ (ಪ್ರಸ್ತುತ *ಕೊನೆಹಳ್ಳಿ* ಯಲ್ಲಿ ನಡೆಯುತ್ತಿದೆ) ವಸತಿ ಶಾಲೆಗೆ ನುರಿತ ಅನುಭವಿ *ಇಂಗ್ಲಿಷ್ ವಿಷಯ ಶಿಕ್ಷಕರು* ಬೇಕಾಗಿದ್ದಾರೆ.

*ಗೌರವ ಧನ ಮಾಸಿಕ : 10500*

ಆಸಕ್ತರು ಸಂಪರ್ಕಿಸಬೇಕಾದ ವಿಳಾಸ
*ಪ್ರಾಂಶುಪಾಲರು*
ಡಾ|| ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನೊಣವಿನಕೆರೆ ತಿಪಟೂರು ತಾ|| ತುಮಕೂರು ಜಿ||
ಮೊ. ಸಂ: 8792235838

ದಿಪಾವಳಿಯ ಕವಿತೆ : ಬೆಳಕು

0

ಡಾ ರಜನಿ ಎಂ


ಬೆಳಕಲ್ಲಿ
ಬಣ್ಣಗಳಿವೆ
ಕತ್ತಲೆ ಬರೀ ಕಪ್ಪು.

ಕತ್ತಲೆಯನ್ನು
ಹಂಚಲಾಗದು..

ಬೆಳಕಲ್ಲಿ
ನಿಜ
ಸ್ವರೂಪ.

ಬೆಳಕನ್ನು
ಬಿತ್ತಬಹುದು.

ಬೆಳಕಿದ್ದರೆ
ಜೀವ.

ಕತ್ತಲೆಯಲ್ಲಿ
ಸ್ವಯಂ
ಸಂವಾದ.

ಕತ್ತಲಲ್ಲಿ
ಸುಳ್ಳು
ಭಾವ.

ಬೆಳಕು
ಕಾವು.

ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ನೀಡಿದ ಸುರೇಶಗೌಡರು

ಗೂಳೂರು: ನಾಡಪ್ರಭು ಕೆಂಪೇಗೌಡರ ಪ್ರಗತಿಯಪ್ರತಿಮೆ ಅನಾವರಣದ ಪ್ರಯುಕ್ತ ಹಮ್ಮಿಕೊಂಡಿರುವ ಮೃತ್ತಿಕೆ ಸಂಗ್ರಹ ಅಭಿಯಾನ ನಾಗವಲ್ಲಿ, ಗೂಳೂರಿನಲ್ಲಿ ಸೋಮವಾರ ನಡೆಯಿತು.

ಮಾಜಿ ಶಾಸಕ ಬಿ.ಸುರೇಶಗೌಡರು ಗೂಳೂರಿನಲ್ಲಿ ಮೃತ್ತಿಕೆ ನೀಡಿದರು.

ಈ ಸಂದರ್ಭ ಅವರು ಕೆಂಪೇಗೌಡರನ್ನು ಸ್ಮರಿಸಿದರು.

ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದ ವೇಳೆ ಒಕ್ಕಲಿಗ ಸಮುದಾಯದ ನೂರಾರು ಜನರಿದ್ದರು.

ಮೂಕ ಲೋಕಕ್ಕೆ ಮಾತು ನೀಡಿದ ಡಾ ಮಿರ್ಜಾ ಬಷೀರ್: ಚ ಹ ರಘುನಾಥ್ ಬಣ್ಣನೆ

ಬಹುರೂಪಿ ಕೃತಿ ಬಿಡುಗಡೆ ಸಮಾರಂಭ

ತುಮಕೂರು: ಆಹಾರ ರಾಜಕಾರಣವನ್ನು ಪದೇ ಪದೇ ಮುಂದು ಮಾಡುತ್ತಿರುವ ಈ ದಿನಗಳಲ್ಲಿ ದನಗಳ ಜೀವವನ್ನು ವೃತ್ತಿಯುದ್ದಕ್ಕೂ ಕಾಪಾಡಿದ ಡಾ ಮಿರ್ಜಾ ಬಷೀರರ ಕೃತಿ ಹೊಸದೇ ಸತ್ಯವನ್ನು ನುಡಿಯುತ್ತಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಚ ಹ ರಘುನಾಥ್ ಅವರು ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ, ಜೆಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಲೇಖಕಿಯರ ಸಂಘದ ಜೊತೆಗೂಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಡಾ ಮಿರ್ಜಾ ಬಷೀರ್ ಅವರ ‘ಗಂಗೆ ಬಾರೆ ಗೌರಿ ಬಾರೆ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ʼನೋಡಿ ಸಾಬರಾದರೂ ಬಷೀರ್‌ ಡಾಕ್ಟ್ರು ಅಂಥವರಲ್ಲʼ ಎನ್ನುವ ಒಂದು ಪ್ರಸಂಗ ಈ ಕೃತಿಯಲ್ಲಿ ಬರುತ್ತದೆ. ಅದನ್ನು ಹೇಳಿದಾತ ಅಮಾಯಕತೆಯಿಂದಲೇ ಅದನ್ನು ಹೇಳಿದ್ದರೂ ಅದನ್ನು ಗುಮಾನಿಯ ಮಾತಿನಂತೆಯೂ, ಪೂರ್ವಾಗ್ರಹದಂತೆಯೂ ನೋಡುವ ಸಾಧ್ಯತೆ ಇದೆ. ಇಂದು ಆಹಾರದ ವಿಷಯವಾಗಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ದನಗಳನ್ನು ಸಾಗಿಸಿದ ಕಾರಣಕ್ಕೆ ಹಲ್ಲೆಗೊಳಗಾದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ದನಗಳ ಜೀವ ರಕ್ಷಿಸುತ್ತಾ ಬಂದಿರುವುದು ಈ ಪುಸ್ತಕವನ್ನು ಬೇರೆ ನೆಲೆಯಲ್ಲಿ ನೋಡಬೇಕು ಎಂದು ಸೂಚಿಸುತ್ತೆ.

ಡಾ ಮಿರ್ಜಾ ಬಷೀರರ ಕೃತಿ ಒಬ್ಬ ವೈದ್ಯ, ಸಮಾಜ ವಿಜ್ಞಾನಿಯಾದಾಗ ರೂಪು ತಳೆಯುವ ವಿಶೇಷ ಕೃತಿ ಎಂದು ಅವರು ಪ್ರಶಂಶಿಸಿದರು. ಈ ಸಮಾಜ ವಿಜ್ಞಾನಿ ನಾವು ಗ್ರಾಮಭಾರತದ ಮರೆತಿರುವ ಚಿತ್ರಗಳನ್ನು ನಮ್ಮ ಕಣ್ಮುಂದೆ ತರುತ್ತಾರೆ. ಬಹುತ್ವದ ದರ್ಶನವನ್ನು ಮಾಡಿಸುತ್ತಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಖ್ಯಾತ ಕಲಾವಿದ ಬಿ ಜಿ ಗುಜ್ಜಾರಪ್ಪ ಅವರು ಮಾತನಾಡಿ ಗಂಗೆ ಬಾರೆ ಗೌರಿ ಬಾರೆ ಕೃತಿ ನನ್ನೊಳಗೆ ನೆನಪಿನ ಸರಮಾಲೆಯನ್ನೇ ಹರಡಿತು. ಬಷೀರ್‌ ಅವರ ಪುಸ್ತಕಕ್ಕೆ ಚಿತ್ರ ಬರೆಯುವಾಗ ಬಹಳ ಖುಷಿಯಾಯ್ತು. ಹನ್ನೆರಡು ವರ್ಷಗಳ ಕಾಲ ಹಳ್ಳಿಯಲ್ಲಿ ದನಗಳು, ಪ್ರಾಣಿಗಳ ನೋವು ನೋಡುತ್ತಲೇ ಬೆಳೆದಿದ್ದೆ. ಆ ಮೂಕ ಲೋಕದ ಸಂಕಷ್ಟಗಳು ನನ್ನ ಕಣ್ಣೆದುರು ಸುಳಿದವು ಎಂದರು.

ಪ್ರಕಾಶಕ, ಸಾಹಿತಿ ಜಿ ಎನ್ ಮೋಹನ್ ಅವರು ಮಾತನಾಡಿ ಪುಸ್ತಕಗಳನ್ನು ದ್ವೇಷಿಸುವ, ಅಕ್ಷರದ ಬಗ್ಗೆ ಅಸಹನೆ ಇರುವ ಪ್ರಭುತ್ವದ ಕಾಲದಲ್ಲಿ ನಾವು ಇದ್ದೇವೆ. ಪ್ರಕಾಶನ ಲೋಕ ಪರೋಕ್ಷ ತೆರಿಗೆಗಳ ಸಂಕಷ್ಟದಲ್ಲಿ ಸಿಲುಕಿದೆ. ಪುಸ್ತಕಗಳು ಸದಾ ಪ್ರಜ್ಞೆಯನ್ನು ಜಾಗೃತಗೊಳಿಸುವ, ಪ್ರಶ್ನಿಸಲು ಪ್ರೇರೇಪಿಸಿವ ಗುಣವನ್ನು ಹೊಂದಿವೆ. ಪ್ರಭುತ್ವಕ್ಕೆ ಇದೇ ಸಂಕಷ್ಟ ತಂದೊಡ್ಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ನೂತನ ರಾಜ್ಯ ಅಧ್ಯಕ್ಷೆಯಾದ ಡಾ ಎಚ್ ಎಲ್ ಪುಷ್ಪ ಅವರು ಮಾತನಾಡಿ ಡಾ ಮಿರ್ಜಾ ಬಷೀರ್ ಅವರ ಕೃತಿ ಅನೇಕ ಆಯಾಮಗಳನ್ನು ಹೊಂದಿರುವ ಕೃತಿ. ಮಾನವೀಯತೆಯನ್ನು ಎತ್ತಿ ಹಿಡಿಯುವ ಕೃತಿ. ಮೂಕ ಲೋಕಕ್ಕೆ ದನಿ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.

ಕೃತಿಕಾರರಾದ ಡಾ ಮಿರ್ಜಾ ಬಷೀರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಜಿ ಮಲ್ಲಿಕಾ ಬಸವರಾಜು, ಖ್ಯಾತ ಕಲಾವಿದರಾದ ಆರ್ ಸೂರಿ, ಪ್ರಥಮ್ ಬುಕ್ಸ್ ನ ಹೇಮಾ ಧ ಖುರ್ಸಾಪೂರ, ಕವಿ ಮೆಹಬೂಬ್ ಮಠದ ಕೊಪ್ಪಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
—-