Saturday, March 14, 2026
Google search engine
Home Blog Page 77

ರಾಜ್ಯದಲ್ಲಿ ವಿಪಕ್ಷ ನಾಯಕನಿಗೇ ರಕ್ಷಣೆ ಇಲ್ಲ!

Publicstory/prajayoga

//ಓದುಗರ ಪತ್ರ//

ಕೊಡಗು ಮಳೆಹಾನಿ ಪ್ರದೇಶಗಳ ವೀಕ್ಷಣೆಯ ಪ್ರವಾಸಕ್ಕೆ ತೆರಳಿದ್ದ  ವಿರೋಧ ಪಕ್ಷದ ನಾಯಕರ ಕಾರಿನ ಮೇಲೆ ಮೊಟ್ಟೆ ಎಸೆದು ಅವಮಾನಿಸಿರುವುದು ಖಂಡನೀಯ. ಇದು ಭಾರತೀಯ ಸಂಸ್ಕೃತಿ ಅಲ್ಲ. ಈ ಕೃತ್ಯ ಎಸಗಿದ ಗೂಂಡಾಗಳ ಮೇಲೆ ಕಠಿಣ ಕ್ರಮ ತಗೆದುಕೊಳ್ಳದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಂತಹ  ಘಟನೆಗೆ ಬಿಜೆಪಿ ಸರ್ಕಾರ ನೇರವಾಗಿ ಕುಮ್ಮಕ್ಕೂ  ಕೊಡುತ್ತಿರುವಂತೆ  ಕಾಣುತ್ತಿದೆ.

ಬಿಜೆಪಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ  ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ  ಇಂದು ಅಧಿಕಾರದಲ್ಲಿದ್ದಾರೆ. ಇವರು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಕೋಮು ಗಲಭೆ ನಡೆಯುತ್ತಲೇ ಇರುವುದು ಒಳ್ಳೆಯ‌ ಬೆಳವಣಿಗೆಯಲ್ಲ.

ಮುಖ್ಯಮಂತ್ರಿಯ ನೆರಳು ಎಂದೇ ಕರೆಯಲಾಗುವ ಸಂವಿಧಾನಿಕ ಹುದ್ದೆ ವಿರೋಧ ಪಕ್ಷದ ನಾಯಕರ ಸ್ಥಾನ. ಈ ಹುದ್ದೆಯಲ್ಲಿರುವ ಸಿದ್ದರಾಮಯ್ಯರನ್ನು ಈ ರೀತಿ ಅಪಮಾನಿಸಿರುವುದು ಯಾರೂ ಮೆಚ್ಚುವಂತದ್ದಲ್ಲ.  ರಾಜ್ಯ ಕಂಡ ರಾಜಕೀಯ ಮತ್ಸದಿಯ ಮೇಲೆಯೇ ಈ ರೀತಿ ಹಲ್ಲೆಗೆ ಪ್ರಯತ್ನಸಿರುವ ಅವರು, ನಾಳೆ ನಮ್ಮಂತ ಅಭಿಮಾನಿಗಳು,  ಕಾರ್ಯಕರ್ತರ ಮೇಲೆ ಕೃತ್ಯ ಎಸಗುವುದಿಲ್ಲ ಎನ್ನುವುದಕ್ಕೆ ಏನು ಸಾಕ್ಷಿ? ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಇದರ ಬಗ್ಗೆ ತುರ್ತಾಗಿ ಗಟ್ಟಿ ನಿರ್ಧಾರ ಕೈಗೊಂಡು ಪುಂಡರನ್ನು  ಬಂಧಿಸಿ ಗಡಿಪಾರು ಮಾಡಬೇಕು. ಸಿದ್ದರಾಮಯ್ಯರಿಗೆ ಮತ್ತು ಬೆಂಬಲಿಗರಿಗೆ ಸೂಕ್ತ ರೀತಿಯ ಭದ್ರತೆ ಒದಗಿಸಬೇಕು ಎಂದು ಅಗ್ರಹಿಸುತ್ತೇವೆ.

ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆ ಮರುಕಳಿಸಿದರೆ ಕರ್ನಾಟಕದ ಬೀದರ್ ನಿಂದ ಚಾಮರಾಜನಗರದ ವರಗೆ, ಕಾರವಾರದಿಂದ ಮುಳುಬಾಗಿಲು ವರಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಲು ಬಯಸುತ್ತೇವೆ.

– ಸಿದ್ದು ಬಿ ಎಸ್ ಸೂರನಹಳ್ಳಿ, ತಿಪಟೂರು

ಬರಹ ವೆಬ್‌ಸೈಟ್‌ನ ಅಭಿಪ್ರಾಯವಲ್ಲ, ಲೇಖಕರ ಅಭಿಪ್ರಾಯ

ಮುಬಾರಕ್ ಪಾಷ ಆಗಿದ್ದ ಅರ್ಚಕ ಹಿಂದೂ ಧರ್ಮಕ್ಕೆ ವಾಪಸ್!

Publicstory/prajayoga

ತುಮಕೂರು: ತಾಲೂಕಿನ ಊರ್ಡಿಗೆರೆ ಹೋಬಳಿಯ ಹಿರೇಹಳ್ಳಿಯಲ್ಲಿ  ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಅರ್ಚಕ ಎಚ್.ಆರ್ ಚಂದ್ರಶೇಖರಯ್ಯ ಅವರನ್ನು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಮನವೊಲಿಸಿ ಪುನಃ ಹಿಂದೂ ಧರ್ಮಕ್ಕೆ ಕರೆತಂದಿದ್ದಾರೆ.

ಚಂದ್ರಶೇಖರಯ್ಯನವರು ಹಿರೇಹಳ್ಳಿ ದೇವಾಲಯದ ಅರ್ಚಕರಾಗಿದ್ದರು. ತಮ್ಮ ವೈಯಕ್ತಿಕ ಸಮಸ್ಯೆಗಳು ಅವರನ್ನು ನಾನಾ ಸಂಧಿಗ್ಧತೆಗೆ ಒಳಗು ಮಾಡಿದ್ದರಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ನಿರ್ಧಾರ ಕೈಗೊಂಡಿದ್ದರು. ನಂತರ ತಮ್ಮ ಹೆಸರನ್ನೂ ಮುಬಾರಕ್ ಪಾಷ ಎಂದು ನಾಮಕರಣ ಮಾಡಿಕೊಂಡಿದ್ದರು.

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೋಷಕರ ಸಭೆ ಅಗತ್ಯ : ಮುಖ್ಯಶಿಕ್ಷಕಿ ಬಿ ಸುಜಾತ

Publicstory/prajayoga

ತುಮಕೂರು:   ವಿದ್ಯಾರ್ಥಿಗಳ ಸರ್ವಾಂಗೀಣ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರ ಸಭೆ ಅತ್ಯಗತ್ಯ ಎಂದು ಶ್ರೀವನಿತಾ ವಿದ್ಯಾ ಕೇಂದ್ರದ ಮುಖ್ಯಶಿಕ್ಷಕಿ‌ ಬಿ.ಸುಜಾತ ಅಭಿಪ್ರಾಯಪಟ್ಟರು.

ನಗರದ ಮಧುಗಿರಿ ರಸ್ತೆಯ ಶ್ರೀ ವನಿತಾ ವಿದ್ಯಾ ಕೇಂದ್ರ ಯಲ್ಲಾಪುರ ದಿಂದ 2022-23 ನೇ ಸಾಲಿನ  ಶೈಕ್ಷಣಿಕ ವರ್ಷದ ಮೊದಲನೇ ಪೋಷಕರ ಸಭೆಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಮಕ್ಕಳ ಕಲಿಕೆಯ ಜತೆಗೆ  ಶಾಲಾ ಆಡಳಿತ, ಸಿಬ್ಬಂದಿಗಳೊಂದಿಗೆ ಪೋಷಕರು ಉತ್ತಮ ಬಾಂಧವ್ಯವನ್ನು ಹೊಂದಬೇಕು. ಇದರಿಂದ ಚಿಂತನ ಮಂಥನ ನಡೆಸಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳ ಬೇಕು-ಬೇಡಗಳನ್ನು ತಿಳಿಸಲು ಪೋಷಕರ ಸಭೆ ಉತ್ತಮವಾದ ಸಂವಹನದ ದಾರಿಯಾಗಿದೆ. ತಮ್ಮ ಮಕ್ಕಳ ಆರೋಗ್ಯ ಕಾಳಜಿ ಮತ್ತು ಶಾಲೆಗೆ ಕಳಿಸುವ ವೇಳಾಪಟ್ಟಿ ಮತ್ತು   ಹೊಂ ವರ್ಕ್ ಗಳನ್ನು  ಮಾಡಿಸುವಲ್ಲಿ ಪೋಷಕರು ಸಹಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಸಹಕರಿಸಬೇಕು ಎಂದರು.

ಈ ವೇಳೆ ಶಾಲೆಯ  ಹಿರಿಯ ಶಿಕ್ಷಕ ರಾಮಕೃಷ್ಣಪ್ಪ  ಪಿ,  ಚಿತ್ರಕಲಾ ಶಿಕ್ಷಕ ಪುರುಷೋತ್ತಮ್ ಹಾಗೂ ಶಿಕ್ಷಕ ಪೋಷಕ ಸಮಿತಿ (PTA) ಉಪ ಕಾರ್ಯದರ್ಶಿ  ಮಂಜುನಾಥ್ ಸೇರಿದಂತೆ ಪೋಷಕರು ಹಾಗೂ ಶ್ರೀವನಿತಾ  ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಚೆಕ್ ಬೌನ್ಸ್ ಪ್ರಕರಣ ಸೂಕ್ಷ್ಮತೆ ಅಗತ್ಯ: ಡಾ. ಎಸ್. ರಮೇಶ್

Public story/prajayoga


ತುರುವೇಕೆರೆ: ಚೆಕ್ ಬೌನ್ಸ್ ಪ್ರಕರಣಗಳನ್ನು ನಡೆಸುವಾಗ ವಕೀಲರು ಸೂಕ್ಷ್ಮತೆಯಿಂದ ಪ್ರಕರಣವನ್ನು ಗಮನಿಸಬೇಕು ಎಂದು ಸುಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲರ ಡಾ. ರಮೇಶ್ ಅವರು ಹೇಳಿದರು.


ಜಾಹೀರಾತು


ಇಲ್ಲಿ ರಾಜ್ಯ ವಕೀಲರ ಪರಿಷತ್ , ತುರುವೇಕೆರೆ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರಿಗೆ ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ಮಾತನಾಡಿದರು.

ಆರೋಪಿಯು ತನ್ನ ಖಾತೆಯಲ್ಲಿ ಹಣ ಇಲ್ಲದಾಗ, ಸಹಿ ಹೊಂದಾಣಿಕೆಯಾಗದೇ ಇದ್ದಾಗ, ಚೆಕ್ ಕಳವು ಹೀಗೆ ನಾನಾ ರೀತಿಯಲ್ಲಿ ಪ್ರಕರಣಗಳು ಬರುತ್ತವೆ. ಪ್ರತಿ ಪ್ರಕರಣ ನಡೆಸುವಾಗಲೂ ಎಚ್ಚರಿಕೆ ಅಗತ್ಯ. ಪ್ರತಿ ವಿವಾದವೂ ಒಂದೊಂದು ದೃಷ್ಟಿಕೋನದಲ್ಲಿ ನೋಡಬೇಕಾಗ ಬಹುದು ಎಂದರು.

ಚೆಕ್ ಕಳವು ಮಾಡಲಾಗಿದೆ ಎಂದು ಹೇಳಿದಾಗ ದೂರುದಾರನ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆ ಬೀಳಲಿದೆ. ಇದು ಅತ್ಯಂತ ತ್ರಾಸದಾಯಕ ಹೊಣೆಯಾಗಲಿದೆ, ಚೆಕ್ ಸಹಿ ಹೊಂದಾಣಿಕೆ ಆಗದ ವಿಚಾರ ಬಂದಾಗ ಆರೋಪಿಯ ಮೇಲೆ ಹೊಣೆ ಬೀಳಲಿದೆ ಎಂದರು.

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಹಣ ಕೊಟ್ಟವನು ಹಣ ಕೊಡುವಷ್ಟು ಸಶಕ್ತನೇ? ಹೇಗೆ ಕೊಟ್ಟ, ಅದನ್ನು ಹೇಗೆ ಸಂಪಾದಿಸಿದ, ಎಲ್ಲಿ ಕೊಟ್ಟ ಹೀಗೆ ನಾನಾ ವಿಷಯಗಳನ್ನು ಹೊರೆಗಲ್ಲಿಗೆ ಹಚ್ಚುವ ಕೆಲಸವನ್ನು ವಕೀಲರು ಮಾಡಬೇಕು. ಈ ಪ್ರಕರಣಗಳು ಅತ್ಯಂತ ಗಂಭೀರವಾದ ಪ್ರಕರಣಗಳಾಗಿರು ತ್ತವೆ ಎಂದು ವಿಶ್ಲೇಷಿಸಿದರು.

ಪಾಟೀ ಸವಾಲು, ವಾದ –ವಿವಾದಗಳ ವಿಚಾರದಲ್ಲಿ ಆಯಾ ವಕೀಲರ ಸೂಕ್ಷ್ಮತೆ ಮೇಲೆಯೂ ಪ್ರಕರಣ ನಿಂತಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಈಜ್ ಮೆಂಟ್ ಆ್ಯಕ್ಟ್ ಕುರಿತು ಮಾತನಾಡಿದ ಅವರು, ಒಬ್ಬ ವ್ಕಕ್ತಿಯ ಓಡಾಟವನ್ನು ತಡೆಯಲು ಸಾಧ್ಯವಿಲ್ಲ. ದಾರಿ ಬಳಕೆ ಪ್ರತಿ ವ್ಯಕ್ತಿಯ ಹಕ್ಕು ಎಂದರು.

ಬಗಾಡಿಯಾ ಚೈತ್ರಾ ಸಂಸ್ಥಾಪನಾ ದಿನ ಕ್ರಿಕೆಟ್ ಟೂರ್ನಿ

Publicstory/prajayoga


ತುಮಕೂರು: ಇಲ್ಲಿನ ವಸಂತಾ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಹೆಸರಾಂತ ಬಗಾಡಿಯಾ ಚೈತ್ರ ಕಂಪನಿಯ ಸಂಸ್ಥಾಪನಾ ದಿನಾಚರಣೆಯು ಭಾನುವಾರ ಆಗಸ್ಟ್ 21ರಂದು ಬೆಳಿಗ್ಗೆ 10ಕ್ಕೆ ನಗರದ ಬಿ.ಎಚ್.ರಸ್ತೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.


ಜಾಹೀರಾತು


ಸಮಾರಂಭವನ್ನು ಕಂಪನಿಯ ಪ್ರಧಾನ ವ್ಯವಸ್ಥಾಪಕರಾದ ಚೈತ್ರಾ ಸುಂದರೇಶ್ ಉದ್ಘಾಟಿಸುವರು. ಜನರಲ್ ಮ್ಯಾನೇಜರ್ ನಿಶಾಂತ್ ಸುಂದರೇಶ್, ಪ್ಲಾಂಟ್ ಹೆಡ್ ರವಿ ಕುಮಾರ್ ಭಾಗವಹಿಸುವರು.

ಸಮಾರಂಭದ ಬಳಿಕ, ಬಗಾಡಿಯಾ ಚೈತ್ರ ವೆಲ್ಫೇರ್ ಅಸೋಸಿಯೇಷನ್ ಹಾಗೂ ಕಂಪನಿಯ ಮ್ಯಾನೇಜ್ ಮೆಂಟ್ ಸಿಬ್ಬಂದಿ ನಡುವೆ ಕ್ರಿಕೆಟ್ ಟೂರ್ನಿ ಸಹ ನಡೆಯಲಿದೆ.

ನಾಲ್ಕನೇ ಶನಿವಾರ ಶನಿದೇವರ ದರ್ಶನ ಪಡೆದ ಭಕ್ತರು

Publicstory/prajayoga

– ವರದಿ, ಎ.ಶ್ರೀನಿವಾಸಲು

ಪಾವಗಡ: ಶ್ರಾವಣ ಮಾಸದ ನಾಲ್ಕನೇ ಶನಿವಾರ ಹಲವು ರಾಜ್ಯಗಳಿಂದ ಭಕ್ತರು ಆಗಮಿಸಿ ಬೆಳಗಿನ ಜಾವದಿಂದಲೇ ಸರತಿ ಸಾಲ್ಲಿನಲ್ಲಿ ನಿಂತು ಶನೇಶ್ವರ ಸ್ವಾಮಿ ದೇವರ ದರ್ಶನ ಪಡೆದರು.

ನಾಲ್ಕನೇ ಶ್ರಾವಣ ಶನಿವಾರವಾದ ಹಿನ್ನೆಲೆಯಲ್ಲಿ ಶುಕ್ರವಾರವೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಸಂಜೆ ವೇಳೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಿತು. 

 ಈ ಸಂದರ್ಭದಲ್ಲಿ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸುವ ಸಲುವಾಗಿ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಹೊಸ ಬಸ್ ನಿಲ್ದಾಣದ ತಿರುವಿನಿಂದ ಹಾಗೂ ಶಿರಾ ರಸ್ತೆಯ ನಾಗಲಕಟ್ಟೆವರೆಗೂ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಶ್ರಾವಣ ಮಾಸದ ಅಮಗವಾಗಿ ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕ ಅನುಷ್ಟಾನಗೊಳಿಸಿ: ಮಸಾಲ ಜಯರಾಮ್

Publicstory/prajayoga

ತುರುವೇಕೆರೆ: ರೈತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವಲ್ಲಿ  ಸರ್ಕಾರ ಜಾರಿಗೆ ತಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಶಾಸಕ ಮಸಾಲಜಯರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಬಳಿಗೆ  ಸರ್ಕಾರದ ಇಲಾಖೆಗಳು ತೆರಳಿ ಅಹವಾಲು ಆಲಿಸುತ್ತಿರುವುದು  ಸಂತಸದ ಸಂಗತಿ. ಸರ್ಕಾರದ  ಯೋಜನೆಗಳು ಜನಸಾಮಾನ್ಯರಿಗೆ  ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಕ್ಷೇತ್ರ ವ್ಯಾಪ್ತಿಯ  ಜನತೆ ತಮ್ಮ ಸಮಸ್ಯೆಗಳಿದ್ದರೆ ಖುದ್ದು ನನ್ನನ್ನು ಬೇಟಿ ಮಾಡಿ ಎಂದು ಶಾಸಕರು ತಿಳಿಸಿದರು.

ವರುಣನ ಕೃಪೆಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ   ಈ ಹಿಂದೆ ತಾಂಡವಾಡುತ್ತಿದ್ದ ಜಲಕ್ಷಾಮ ಇಲ್ಲವಾಗಿದೆ. ಕ್ಷೇತ್ರದೆಲ್ಲೆಡೆ ಜಲ ಸಮೃದ್ಧಿ ಮನೆ ಮಾಡಿದೆ. ಕೃಪಿ ಚಟುವಟಿಕೆಗೆ, ಹೈನುಗಾರಿಕೆಗೆ ಪೂರಕವಾದ ಪರಿಸರ ನಿರ್ಮಾಣಗೊಂಡಿದೆ. ಆದರೇ  ರೈತಾಪಿಗಳು ಜಮೀನು ಉಳುಮೆ ಮಾಡಿ ಬೆಳೆ ಬೆಳೆಯಲು ಆಸಕ್ತಿ ತೋರದಿರುವುದು ಸಾಧುವಲ್ಲ. ರೈತರು ಪರಾವಲಂಬಿಗಳಾಗದೇ  ಸ್ವಾವಲಂಬಿಗಳಾಗುವಂತೆ  ಶಾಸಕರು ಕಿವಿ ಮಾತು ಹೇಳಿದರು.

ತಹಶಿಲ್ದಾರ್ ವೈ.ಎಂ .ರೇಣುಕುಮಾರ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು.  ಸರ್ಕಾರದ ಇಲಾಖೆಗಳಲ್ಲಿ ಲಭ್ಯವಾಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತಾಗಬೇಕಿದೆ.  ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಗೆ ತಾಲೂಕಿನಲ್ಲಿ  ಕುಸಿದು ಬಿದ್ದಿದ್ದ 83 ಮನೆಗಳಿಗೂ ಪರಿಹಾರ ದೊರಕಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಮೋಹನಕುಮಾರಿ ಮಹೇಶ್, ಇ.ಒ. ಸತೀಶ್‌ಕುಮಾರ್, ಬಿ.ಇ.ಒ. ಪದ್ಮನಾಭ್, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ವಿ.ಟಿ.ವೆಂಕಟರಾಮ್, ವಿ.ಬಿ.ಸುರೇಶ್, ಹಿರಿಯ ಮುಖಂಡ ಸಿದ್ದೇಗೌಡ, ಉಪ ತಹಶಿಲ್ದಾರ್ ಅನಿಲ್‌ಕುಮಾರ್ ಶಿಂಧೆ,  ಆರ್.ಐ. ರಂಗಸ್ವಾಮಿ, ಗ್ರಾಮ ಲೆಕ್ಕಿಗರಾದ ಜಗದೀಶ್, ಪ್ರಶಾಂತ್, ಮಲ್ಲಿಕಾರ್ಜುನ್, ಸೇರಿದಂತೆ ತಾಲೂಕು ಮಟ್ಟದ  ನಾನಾ ಇಲಾಖಾ ಮುಖ್ಯಸ್ಥರು ಹಾಜರಿದ್ದರು.

ರೈತಪರವಾದ ಅಭಿವೃದ್ಧಿ ಕಾರ್ಯಗಳು‌ ನಿರಂತರ : ಸಚಿವ ಬಿ.ಸಿ.ನಾಗೇಶ್

Publicstory/prajayoga

ತಿಪಟೂರು : ರೈತರ ಪರವಾದಂತಹ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ತಾಲೂಕಿನ ನೊಣವಿನಕೆರೆ ಕಸಬಾ ಹೋಬಳಿಯ ನಾರಸಿಕಟ್ಟೆ ಪೂಜಾರಿ ಪಾಳ್ಯ ಗ್ರಾಮ ಸಮೀಪ ನಿರ್ಮಾಣವಾಗಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ಕೆರೆಕಟ್ಟೆಗಳಿಗೆ ಯಂತ್ರಗಳ ಮೂಲಕ ನೀರು ತುಂಬಿಸುವ ಕೆಲಸಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಶನಿವಾರ ಚಾಲನೆಯ ನೀಡಿ ಮಾತನಾಡಿದರು.

ಜನಸಾಮಾನ್ಯರು ಆಶೀರ್ವಾದವನ್ನು ಮಾಡಿ ಜವಾಬ್ದಾರಿಯನ್ನು ನಮಗೆ ನೀಡಿದ್ದಾರೆ. ಅದನ್ನು ನಿರ್ವಹಿಸುವ ಕೆಲಸ ಬಿಜೆಪಿ ಸರ್ಕಾರ ಯಾವತ್ತೂ ಕೈ ಬಿಟ್ಟಿಲ್ಲ. ಕಳೆದ ಬಾರಿಯೂ ಬಿಜೆಪಿಗೆ ಅಧಿಕಾರ ನೀಡಿದ ಸಂದರ್ಭದಲ್ಲಿ ಅನೇಕ ತೊಂದರೆಗಳಾದವು. ಈ ಬಾರಿ ಅಧಿಕಾರ ಕೊಟ್ಟ ಒಂದೂವರೆ ವರ್ಷಗಳ ಕಾಲ ನಮ್ಮ ಸರ್ಕಾರ ಇರಲಿಲ್ಲ. ನಂತರ ಒಂದು ವರ್ಷ ರಾಜ್ಯ ಸರ್ಕಾರ ತುಂಬಾ ನೋವಿನ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಬಿ.ಎಸ್ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ವೇಳೆಯಲ್ಲಿ ಎಲ್ಲಾ ಒಳ್ಳೆಯದಾಯಿತು ಎಂದರು.

ಈ ಬಾರಿ ಸಹಿತ ಅನೇಕ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಯಶಸ್ಸು ಕಂಡಿದ್ದು, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ವತಿಯಿಂದ  ಲಿಫ್ಟ್ ಯಂತ್ರಗಳ ಮೂಲಕ ತುಳಸಮ್ಮನ ಕಟ್ಟೆ, ಬಳ್ಳೆ ಕಟ್ಟೆ, ರಂಗಪುರ ಹೊಸಹಳ್ಳಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವಂತಹ ಕೆಲಸ ಕೈಗೊಂಡಿದ್ದೇವೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಮಾಧುಸ್ವಾಮಿ ಸಹಕಾರ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ  ಕೆರಗೋಡಿ ರಂಗಪುರದ  ಗುರುಪರದೇಶಿಕೇಂದ್ರ ಸ್ವಾಮೀಜಿ, ಸುಗುಣೇಂದ್ರ ಪಾಟೀಲ್ ಬಳ್ಳೆ ಕಟ್ಟೆ. ಪ್ರಕಾಶ್ ಬಳ್ಳೆ ಕಟ್ಟೆ. ದಸರಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುಕ್ಮಿಣಿ ಪಾಟೀಲ್, ದಸರಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಪೂಜಾರಿ ಪಾಳ್ಯ ಉಮೇಶ್, ನಾರಸಿಕಟ್ಟೆ ಗ್ರಾಮದ ಗುರುಮೂರ್ತಿ ಸೇರಿದಂತೆ ಹಲವರು ಇದ್ದರು.

ಭೀಕರ ಅಪಘಾತ; ಮೂವರ ಸಾವು

0

Publicstory/prajayoga


ಶಿರಾ: ತಾಲೂಕಿನ ತರೂರು ಗೇಟ್ ನಲ್ಲಿ ಕಾರೊಂದು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತ ಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟ ದುದೈವಿಗಳು ಕಡವಿಗೆರೆ ಗ್ರಾಮದ ಅವಿನಾಶ್ (28) ಹಾಗೂ ಪುತ್ರಿ ಪ್ರಣಂತಿ (5) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವಿನಾಶ್ ಸಂಬಂಧಿಕರ ಮಗಳಾದ 4 ವರ್ಷದ ಸೌಖ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾಳೆ.

ಶುಕ್ರವಾರ ರಾತ್ರಿ ಕಾರಿನಲ್ಲಿ ಅವಿನಾಶ್ ನೆಲಹಾಳ್ ಗ್ರಾಮದಲ್ಲಿದ್ದ ತನ್ನ ಅತ್ತೆಯನ್ನು ಶ್ರಾವಣ ಶನಿವಾರದ ಪ್ರಯುಕ್ತ ಕರೆದುಕೊಂಡು ಬರಲು ಹೋಗುತ್ತಿದ್ದರು. ಅವಿನಾಶ್ ಚಲಾಯಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ನಿಯಂತ್ರಣ ತಪ್ಪಿ ಅಪರಿಚಿತ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿ ಈ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ವಾಹವನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜನರ ಮನೆ ಬಾಗಿಲಿಗೆ ಸೌಲಭ್ಯಗಳು: ವೈ.ಎಸ್.ಪಾಟೀಲ

0

Publicstory/prajayoga

ಶಿರಾ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಉದ್ದೇಶ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಬಂದು ಅವರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯವನ್ನು ದೊರಕುವಂತೆ ಮಾಡುವುದು. ಈ ಕಾರ್ಯಕ್ರಮದಿಂದ ಹಲವಾರು ಜನರಿಗೆ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ಬುಕ್ಕಾಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮದ ತಮ್ಮಣ್ಣ ಸ್ಮಾರಕ ಪ್ರೌಢಶಾಲಾ ಆವರಣದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯವನ್ನು ಮಾಡುವುದು ನಮ್ಮ ಕರ್ತವ್ಯ. ನಾವು ಅಧಿಕಾರಿಗಳೂ ಸಹ ಒಂದೊಂದು ಹಳ್ಳಿಗಳಲ್ಲಿ ಓದಿ ಬಂದಿದ್ದೇವೆ. ಅಧಿಕಾರಕ್ಕೆ ಬಂದ ನಂತರ ಆ ಮಣ್ಣನ್ನು ಜನರನ್ನು ಮರೆಯಬಾರದು. ಕಾನೂನು ಪ್ರಕಾರ ಸಿಗಬೇಕಾದ ಸೌಲಭ್ಯ ಜನರಿಗೆ ಸಿಗಬೇಕು. ಕೆಲವೊಮ್ಮೆ ಜನರು ಅಧಿಕಾರಿಗಳು ಬೇರೆ, ಜನರು ಬೇರೆ ಎಂದು ತಿಳಿದುಕೊಂಡಿರುತ್ತಾರೆ. ಅದು ತಪ್ಪು. ಅಧಿಕಾರಿಗಳು ಬೇರೆ ಅಲ್ಲ, ಜನರು ಬೇರೆ ಅಲ್ಲ. ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು, ಸಾವಿರಾರು ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದರು.

ತಹಶಿಲ್ದಾರ್ ಮಮತಾ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ಸಾರ್ವಜನಿಕರಿಗೆ ಉಪಯುಕ್ತವಾದ ಕಾರ್ಯಕ್ರಮವಾಗಿದ್ದು, ತಮ್ಮ ಗ್ರಾಮಗಳಿಗೆ ತಾಲೂಕಿನ ಎಲ್ಲಾ 28 ಇಲಾಖೆಯವರು ಹಾಜರಿದ್ದು, ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕು. ಪಿಂಚಣಿ, ಮಾಶಾಸನ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ನೇರವಾಗಿ ತಾಲೂಕು ಕಚೇರಿ ಹಾಗೂ ಹೋಬಳಿಗಳ ನಾಡಕಚೇರಿಯನ್ನು ಸಂಪರ್ಕಿಸಿ ತಮ್ಮ ಸವಲತ್ತನ್ನು ಪಡೆಯಿರಿ ಎಂದರು.

ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ:

ಕಾರ್ಯಕ್ರಮದಲ್ಲಿ ಸುಮಾರು 52 ಜನರಿಗೆ ಸಾಗುವಳಿ ವಿತರಿಸಲಾಯಿತು, 215 ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಡಿ ಆದೇಶ ಪತ್ರ ವಿತರಿಸಲಾಯಿತು. ಖಾತೆ ಬದಲಾವಣೆ 60, ತೋಟಗಾರಿಕೆ ಇಲಾಖೆಯಿಂದ 10 ಜನರಿಗೆ ಹನಿ ನೀರಾವರಿ, ಗ್ರಾಮ ಪಂಚಾಯ್ತಿ ವತಿಯಿಂದ 15 ಜನ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು, ಇಬ್ಬರು ವಿಕಲಚೇತನರಿಗೆ ತ್ರಿಚಕ್ರ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್, ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೊಳ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅನಂತರಾಜು, ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಬುಕ್ಕಾಪಟ್ಟಣ ಗ್ರಾ.ಪಂ. ಅಧ್ಯಕ್ಷೆ ಸೌಭಾಗ್ಯ, ನೇರಲಗುಡ್ಡ ಗ್ರಾ.ಪಂ. ಅಧ್ಯಕ್ಷೆ ಕವಿತ, ಮಾಜಿ ತಾ.ಪಂ. ಅಧ್ಯಕ್ಷ ಬುಕ್ಕಾಪಟ್ಟಣ ಮಂಜುನಾಥ್, ಗ್ರೇಡ್-2 ತಹಶಿಲ್ದಾರ್ ಮಂಜುನಾಥ್, ನೇರಲಗುಡ್ಡ ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.