Wednesday, December 4, 2024
Google search engine
Homeಪೊಲಿಟಿಕಲ್ರೈತಪರವಾದ ಅಭಿವೃದ್ಧಿ ಕಾರ್ಯಗಳು‌ ನಿರಂತರ : ಸಚಿವ ಬಿ.ಸಿ.ನಾಗೇಶ್

ರೈತಪರವಾದ ಅಭಿವೃದ್ಧಿ ಕಾರ್ಯಗಳು‌ ನಿರಂತರ : ಸಚಿವ ಬಿ.ಸಿ.ನಾಗೇಶ್

Publicstory/prajayoga

ತಿಪಟೂರು : ರೈತರ ಪರವಾದಂತಹ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ತಾಲೂಕಿನ ನೊಣವಿನಕೆರೆ ಕಸಬಾ ಹೋಬಳಿಯ ನಾರಸಿಕಟ್ಟೆ ಪೂಜಾರಿ ಪಾಳ್ಯ ಗ್ರಾಮ ಸಮೀಪ ನಿರ್ಮಾಣವಾಗಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ಕೆರೆಕಟ್ಟೆಗಳಿಗೆ ಯಂತ್ರಗಳ ಮೂಲಕ ನೀರು ತುಂಬಿಸುವ ಕೆಲಸಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಶನಿವಾರ ಚಾಲನೆಯ ನೀಡಿ ಮಾತನಾಡಿದರು.

ಜನಸಾಮಾನ್ಯರು ಆಶೀರ್ವಾದವನ್ನು ಮಾಡಿ ಜವಾಬ್ದಾರಿಯನ್ನು ನಮಗೆ ನೀಡಿದ್ದಾರೆ. ಅದನ್ನು ನಿರ್ವಹಿಸುವ ಕೆಲಸ ಬಿಜೆಪಿ ಸರ್ಕಾರ ಯಾವತ್ತೂ ಕೈ ಬಿಟ್ಟಿಲ್ಲ. ಕಳೆದ ಬಾರಿಯೂ ಬಿಜೆಪಿಗೆ ಅಧಿಕಾರ ನೀಡಿದ ಸಂದರ್ಭದಲ್ಲಿ ಅನೇಕ ತೊಂದರೆಗಳಾದವು. ಈ ಬಾರಿ ಅಧಿಕಾರ ಕೊಟ್ಟ ಒಂದೂವರೆ ವರ್ಷಗಳ ಕಾಲ ನಮ್ಮ ಸರ್ಕಾರ ಇರಲಿಲ್ಲ. ನಂತರ ಒಂದು ವರ್ಷ ರಾಜ್ಯ ಸರ್ಕಾರ ತುಂಬಾ ನೋವಿನ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಬಿ.ಎಸ್ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ವೇಳೆಯಲ್ಲಿ ಎಲ್ಲಾ ಒಳ್ಳೆಯದಾಯಿತು ಎಂದರು.

ಈ ಬಾರಿ ಸಹಿತ ಅನೇಕ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಯಶಸ್ಸು ಕಂಡಿದ್ದು, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ವತಿಯಿಂದ  ಲಿಫ್ಟ್ ಯಂತ್ರಗಳ ಮೂಲಕ ತುಳಸಮ್ಮನ ಕಟ್ಟೆ, ಬಳ್ಳೆ ಕಟ್ಟೆ, ರಂಗಪುರ ಹೊಸಹಳ್ಳಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವಂತಹ ಕೆಲಸ ಕೈಗೊಂಡಿದ್ದೇವೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಮಾಧುಸ್ವಾಮಿ ಸಹಕಾರ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ  ಕೆರಗೋಡಿ ರಂಗಪುರದ  ಗುರುಪರದೇಶಿಕೇಂದ್ರ ಸ್ವಾಮೀಜಿ, ಸುಗುಣೇಂದ್ರ ಪಾಟೀಲ್ ಬಳ್ಳೆ ಕಟ್ಟೆ. ಪ್ರಕಾಶ್ ಬಳ್ಳೆ ಕಟ್ಟೆ. ದಸರಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುಕ್ಮಿಣಿ ಪಾಟೀಲ್, ದಸರಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಪೂಜಾರಿ ಪಾಳ್ಯ ಉಮೇಶ್, ನಾರಸಿಕಟ್ಟೆ ಗ್ರಾಮದ ಗುರುಮೂರ್ತಿ ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?