Sunday, March 15, 2026
Google search engine
Home Blog Page 95

ವಿಪತ್ತನ್ನು ಎದುರಿಸಲು ಸನ್ನದ್ಧರಾಗಿ; ಅಧಿಕಾರಿಗಳಿಗೆ ಉಸ್ತುವಾರಿ ಸಚಿವರ ಸೂಚನೆ

Publicstory/prajayoga

ತುಮಕೂರು: ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರೆದಿದ್ದು, ಜಿಲ್ಲಾಡಳಿತ ಮಳೆಯ ಅವಘಡಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು ಮತ್ತು ಚರಂಡಿ ಮತ್ತು ರಾಜಕಾಲುವೆಗಳಲ್ಲಿನ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಅಮಾನಿಕೆರೆ ಕೋಡಿ, ವಿದ್ಯುತ್ ಅವಗಢದಿಂದ ಮೃತಪಟ್ಟ ವ್ಯಕ್ತಿಯ ಮನೆ, ರಾಜಕಾಲುವೆ ಪ್ರದೇಶಗಳನ್ನು ವೀಕ್ಷಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ಜೀವಹಾನಿ/ ಜಾನುವಾರು ಸಾವು/ ಮನೆಹಾನಿ ಪ್ರಕರಣಗಳು ವರದಿಯಾಗಿದ್ದು ಅಧಿಕಾರಿಗಳು ವಿಪತ್ತನ್ನು ಎದುರಿಸಲು ಸರ್ವ ಸನ್ನದ್ದರಾಗಿರಬೇಕು ಎಂದರಲ್ಲದೇ ಜಿಲ್ಲಾ ಕೇಂದ್ರದಲ್ಲಿ ಕಮಾಂಡ್ ಸೆಂಟರ್ ತೆರೆದು, ದೂರವಾಣಿ ಕರೆ ಮೂಲಕ  ಸಂತ್ರಸ್ತರಿಗೆ  ಎಲ್ಲ ರೀತಿಯ ಅಗತ್ಯ ನೆರವು ನೀಡಬೇಕು.ದಿನದ 24×7 ಸಹಾಯವಾಣಿ ಕೇಂದ್ರ ಕೆಲಸ ನಿರ್ವಹಿಸಬೇಕು.ಆ್ಯಂಬುಲೆನ್ಸ್ ಸೇವೆ ಸದಾ ಸಿದ್ದವಿರಬೇಕೆಂದು ಡಿಎಚ್ಓ ಅವರಿಗೆ ಸೂಚಿಸಿದರು.

ಪಾಲಿಕೆ ವತಿಯಿಂದ ಹಿಟಾಚಿಯ ಮೂಲಕ ಚರಂಡಿಗಳಲ್ಲಿ, ರಾಜಕಾಲುವೆಗಳಲ್ಲಿ ಕಟ್ಟಿಕೊಂಡಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮೂಲಕ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕು, ಮಾನ್ಸೂನ್ ಮುನ್ನೆಚ್ಚರಿಕೆ ಚಟುವಟಿಕೆಗಳು ತ್ವರಿತ ಗತಿಯಲ್ಲಿ ನಡೆಯಬೇಕು ಎಂದ ಸಚಿವರು ಬೆಸ್ಕಾಂ ವತಿಯಿಂದ ನೆಲದ ಭಾಗದಲ್ಲಿರುವ ಟಿಸಿಗಳನ್ನು ಮೇಲೆತ್ತುವ ಕೆಲಸ ಆಗಬೇಕು, ಪ್ಯೂಸ್ಗಳನ್ನು ಪರೀಶೀಲಿಸಬೇಕು ಎಂದರು.

ಆಂಬುಲೆನ್ಸ್ ವಾಹನಗಳು ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಎಚ್ಚರಿಕೆಯಿಂದಿರಬೇಕು,ಸಾರ್ವಜನಿಕರು ಕರೆ ಮಾಡಿದ ತಕ್ಷಣ ಸ್ಪಂದಿಸಬೇಕು ಎಂದರು.

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಪ್ರತಿದಿನ ಕೆರೆಗಳನ್ನು ಪರಿಶೀಲಿಸಬೇಕು ಮತ್ತು ಕೆರೆಗಳ ರಕ್ಷಣೆ ಬಗ್ಗೆ ಚಿಂತಿಸಬೇಕು,ಕೆರೆಗಳು ಬಿರುಕು ಬಿಡದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಗೌರಿಶಂಕರ್ ಶಂಕು ಸ್ಥಾಪನೆ

Publicstory/prajayoga

ತುಮಕೂರು: ಗ್ರಾಮಾಂತರ ಊರುಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನರಸಾಪುರ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಮೀಪದಿಂದ   ಪಂಪ್ ಹೌಸ್ ವರೆಗೂ ಸುಮಾರು 53 ಲಕ್ಷ ರೂಗಳ ವೆಚ್ಚದ ಸಿ ಸಿ ರಸ್ತೆ  ಕಾಮಗಾರಿಗೆ ಶಾಸಕ ಡಿ ಸಿ ಗೌರೀಶಂಕರ್ ಸೋಮವಾರ ಶಂಕು ಸ್ಥಾಪನೆ ನೆರವೇರಿಸಿದರು.

ಗ್ರಾಮದಲ್ಲಿ‌ ಬಾಕಿ ಇರುವ ರಸ್ತೆ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡುವಂತೆ ನರಸಾಪುರ ಗ್ರಾಮಸ್ಥರು ಬೇಡಿಕೆ ಇಟ್ಟರು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಉಳಿಕೆ ರಸ್ತೆ ಕಾಮಗಾರಿಗಳಿಗೆ 30 ಲಕ್ಷ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ನರಸಾಪುರ ಗ್ರಾಮದಲ್ಲಿರುವ ಶಾಲೆ ಹಳೆಯದಾಗಿದೆ. ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ಶಾಸಕರು ಆದಷ್ಟು ಬೇಗ ಶಾಲಾ ಕಟ್ಟಡ ನಿರ್ಮಿಸಿ ಕೊಡುವುದಾಗಿ ತಿಳಿಸಿದರು.

300 ಎಕರೆ ಕೃಷಿ ಭೂಮಿ ಮುಳುಗಡೆ

ಹೇಮಾವತಿ ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ ನೀರುಹರಿಸುತ್ತಿರುವುದರಿಂದ ನರಸಾಪುರ ಹಾಗೂ ಅಕ್ಕಪಕ್ಕದ ಗ್ರಾಮದ ರೈತರ 300 ಎಕರೆ ಅಡಿಕೆ , ತೆಂಗು, ಬಾಳೆ ತೋಟಗಳು  ಹಿನ್ನೀರಿನಲ್ಲಿ ಮುಳುಗಿದೆ. ರೈತರ ಸಮಸ್ಯೆ ಆಲಿಸಿದ ತಕ್ಷಣವೇ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹಾನಗರ ಪಾಲಿಕೆ ಮೇಯರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮನವಿ ಮಾಡಿಕೊಟ್ಟರಲ್ಲದೆ ಆದಷ್ಟು ಬೇಗ ನೀರು ಖಾಲಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ತಿಳಿಸಿದರು.


ಬುಗುಡನಹಳ್ಳಿ ಹಿನ್ನೀರಿನ ಪ್ರದೇಶದ ತೋಟಗಳಲ್ಲಿ 30 ಕ್ಕೂ ಹೆಚ್ಚು ರೈತ ಕುಟುಂಬಗಳು ವಾಸವಿದ್ದು, ಅವರ ಮನೆಗಳಿಗೆ ನೀರು ನುಗ್ಗಿವೆ ನೀರಿನ ಪ್ರಮಾಣ ಹೆಚ್ಚಾದರೆ ಮನೆಯಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಬಿ.ಜಿ ಕೃಷ್ಣಪ್ಪ, ಉಪಮೇಯರ್ ನಾಜಿಮ ಬಿ, ಮಹಾನಗರಪಾಲಿಕೆ ಸದಸ್ಯರಾದ ಶ್ರೀನಿವಾಸ್, ಧರಣೇಂದ್ರ ಕುಮಾರ್, ಜೆಡಿಎಸ್ ಯುವಮುಖಂಡ ನರಸಾಪುರ ಹರೀಶ್,  ಗ್ರಾಮ ಪಂಚಾಯತಿ ಸದಸ್ಯರಾದ ಗಂಗಣ್ಣ, ಚಂದ್ರಪ್ಪ,  ಮಂಜುಳಾ ರಾಜಣ್ಣ  ಮಾಜಿ ಗ್ರಾಮ ಪಂಚಾಯತಿ  ಸದಸ್ಯ ತೋಪೇಗೌಡ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ
ಚಂದ್ರಶೇಖರ್,  ಗ್ರಾಮದ ಮುಖಂಡರಾದ ಲಕ್ಷ್ಮಯ್ಯ, ಕೃಷ್ಣಮೂರ್ತಿ, ಶಿವಕುಮಾರ್ ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು

ಗೃಹ ಸಚಿವರ ಕಾಟಾಚಾರದ ಭೇಟಿ; ಪರಿಹಾರ ನಿರೀಕ್ಷೆಯಲ್ಲಿದ್ದ ಕುಟುಂಬಗಳಿಗೆ ನಿರಾಸೆ

ಝೀರೋ ಟ್ರಾಫಿಕ್;  ಜನರಿಗೆ ಕಿರಿಕಿರಿ

ತುಮಕೂರು: ನಗರದಲ್ಲಿ ಸತತವಾಗಿ ಸುರಿದು ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಲು   ಗೃಹ ಸಚಿವ ಅರಗ ಜ್ಞಾನೇಂದ್ರ ತೆರಳುತ್ತದ್ದ ವೇಳೆ, ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.  ಇದ್ದರಿಂದ ಟೌನ್ ಹಾಲ್,  ಚರ್ಚ್ ಸರ್ಕಲ್, ಕೋಟೆ ಆಂಜನೇಯ ದೇವಲಯ ಮುಂಬಾದಲ್ಲಿ ಟ್ರಾಫಿಜಾಮ್.  ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಎಸ್ ಮಾಲ್, ಅಮಾನಿಕೆರೆ ಹಾಗೂ ಕೋತಿತೋಪು ಬಳಿಯಿರುವ ಮನೆಗಳಿಗೆ ಭೇಟಿ ನೀಡಿದರು. ಕುಟುಂಬಗಳ ಸಮಸ್ಯೆ ಆಲಿಸದೆ ಆತುರದಲ್ಲೇ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದರಿಂದ ಪರಿಹಾರದ ನಿರೀಕ್ಷೆಯಲ್ಲಿದ್ದ ಕುಟುಂಬಗಳಿಗೆ ನಿರಾಸೆ ಉಂಟಾಯಿತು. ಕೇವಲ 20 ನಿಮಿಷದಲ್ಲಿ‌ ಕಾಟಾಚಾರಕ್ಕೆ ವೀಕ್ಷಣೆ ಮಾಡಿ ತೆರಳಿದರು‌.

ಗೃಹ ಸಚಿವರ ಜೊತೆ ಜಿಲ್ಲಾಧಿಕಾರಿ ವೈಸ್ ಪಾಟೀಲ್, ಶಾಸಕ ಜ್ಯೋತಿ ಗಣೇಶ್ ಹಾಗೂ ಇತರ ಅಧಿಕಾರಿಗಳು ಇದ್ದರು.

ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ; ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ
ನೀರುಹರಿಸುವ ಕಾರ್ಯಕ್ಕೆ ಚಾಲನೆ

ಶಿರಾ: ಉಪಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಈಡೇರಿಸಿದ ತೃಪ್ತಿ ನನಗಿದೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಸತತ ಮೂರು ಬಾರಿ ಮದಲೂರು ಕೆರೆಗೆ ನೀರು ಹರಿಸಿದ್ದರಿಂದ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿ ರೈತರ ಮುಖದಲ್ಲಿ ಸಂತೋಷ ಮೂಡಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಅವರು ಸೋಮವಾರ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ
ಬಾಗಿನ ಅರ್ಪಿಸಿ ನಂತರ ಮದಲೂರು ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಚುನಾವಣೆ ಪೂರ್ವದಲ್ಲಿ ಮಾಜಿ ಮುಖ್ಯಮಂತ್ರಿ
ಯಡಿಯೂರಪ್ಪ ಅವರು ಕೊಟ್ಟ ವಾಗ್ದಾನದಂತೆ
ಚುನಾವಣೆ ಮುಗಿದ ೨೦ ದಿನದಲ್ಲಿಯೇ ಹೇಮಾವತಿ ನೀರು ಹರಿಸಿದೆವು. ಈ ಬಾರಿಯೂ ಸೇರಿ ಮದಲೂರು ಕೆರೆಗೆ ಸತತ ಮೂರು ಬಾರಿ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಮದಲೂರು ಸೇರಿದಂತೆ ಮಾರ್ಗ ಮಧ್ಯೆ ಬರುವ 14 ಕೆರೆಗಳಿಗೆ ನೀರು ಹರಿಸಿ ಸಂಪೂರ್ಣ ಕೆರೆ ತುಂಬಿಸಲಾಗಿದೆ. ಇದರ ಪರಿಣಾಮ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಾಗಿದೆ. ರೈತರ ಕೊಳವೆ ಬಾವಿಯಲ್ಲಿ ನೀರು ಹೆಚ್ಚಾಗಿದೆ. ಕೃಷಿಕರು ಉತ್ಸುಕರಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದರು.

ಗೌಡಗೆರೆ ಹೋಬಳಿಗೆ ಗಾಯಿತ್ರಿ ಜಲಾಶಯದಿಂದ
ನೀರುಹರಿಸುವ ಸಲುವಾಗಿ ಹಿರಿಯೂರು ಶಾಸಕರಾದ
ಪೂರ್ಣಿಮಾ ಶ್ರೀನಿವಾಸ್ ಜೊತೆ ತೆರಳಿ ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ.
ಹಿರಿಯೂರಿನ ೩ ಸಾವಿರ ಎಕೆರೆ ಅಚ್ಚುಕಟ್ಟು ಪ್ರದೇಶ, ಶಿರಾ
ತಾಲೂಕಿನ ೪ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ
ಗಾಯಿತ್ರಿ ಜಲಾಶಯದಿಂದ ನೀರು ಹರಿಸಲು ಮನವಿ
ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು
ಸಕಾರಾತ್ಮಕವಾಗಿ ಸ್ಪಂದಿಸಿ ಸಮಗ್ರ ಯೋಜನಾ ವರದಿಗೆ
ಪತ್ರವನ್ನು ಇಲಾಖೆಗೆ ಬರೆದಿದ್ದಾರೆ. ಶೀಘ್ರದಲ್ಲಿಯೇ
ಗೌಡಗೆರೆ ಹೋಬಳಿಗೂ ನೀರು ದೊರಕಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಶಿರಾ ತಾಲೂಕು ೪೦ ವರ್ಷಗಳ ನಂತರ ಸುಭೀಕ್ಷೆ ಕಾಣುತ್ತಿದೆ. ಇಚ್ಚಾಶಕ್ತಿ ಇದ್ದರೆ ಏನಾದರೂ ಜನಪರ ಕೆಲಸಗಳನ್ನು ಮಾಡಬಹುದು ಎಂಬುದಕ್ಕೆ ಬಿಜೆಪಿ ಸರ್ಕಾರ ಕಾರಣೀಭೂತವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಹುಲಿಕುಂಟೆ ಹೋಬಳಿಗೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ನಾವೆಲ್ಲರೂ ಸೇರಿ ಚರ್ಚೆ ಮಾಡಿ ಲಿಫ್ಟ್ ಮಾಡುವ ಮೂಲಕ ಹುಲಿಕುಂಟೆ ಹೋಬಳಿಗೆ ನೀರು ಹರಿಸಲು ಪ್ರಯತ್ನಿಸಲಾಗುವುದು. ಇಷ್ಟು ವರ್ಷ ಮದಲೂರು ಕೆರೆ ಹೆಸರೇಳಿಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದರು ಇನ್ನು ಮುಂದೆ
ಮದಲೂರು ಕೆರೆಯ ಹೆಸರಿನಲ್ಲಿ ರಾಜಕೀಯ
ಮಾಡುವುದು ನಿಲ್ಲಲಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ
ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ರಾಜ್ಯ ರೇಷ್ಮೆ
ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ಮಾಜಿ ತಾ.ಪಂ.ಉಪಾಧ್ಯಕ್ಷ ರಂಗನಾಥ್ ಗೌಡ, ನಗರಸಭೆ ಅಧ್ಯಕ್ಷ

ಅಂಜಿನಪ್ಪ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ಮಾರುತೀಶ್, ಸದಸ್ಯರಾದ ರಂಗರಾಜು, ಕೃಷ್ಣಮೂರ್ತಿ,
ಬಿಜೆಪಿ ನಗರ ಅಧ್ಯಕ್ಷ ವಿಜಯರಾಜ್, ಮುಖಂಡರಾದ
ಮದಲೂರು ಮೂರ್ತಿ ಮಾಸ್ಟರ್, ಪಡಿ ರಮೇಶ್, ತರೂರು ಬಸವರಾಜ್, ವಿಜಯ್‌ಕುಮಾರ್ ಸೇರಿದಂತೆ ಹಲವರು
ಹಾಜರಿದ್ದರು.

ಕೈಗಾರಿಕಾ ಕಾರಿಡಾರ್ ವಿರುದ್ಧ ರೈತರ ಆಕ್ರೋಶ ; ತುಮಕೂರು

publicstory/prajayoga

ತುಮಕೂರು: ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ಚರ್ಚೆ ನಡೆಸದೆ ಏಕಾಏಕಿ ಚನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಪ್ರಾಧಿಕಾರ ರಚನೆ ಮಾಡಿರುವ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದ್ದು, ಕೂಡಲೇ ಸದರಿ ಪ್ರಾಧಿಕಾರವನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಚನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನಾ ಪ್ರದೇಶಗಳ ರೈತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಕರ್ನಾಟಕ ಪ್ರಾಂತ ರೈತ ಸಂಘ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯಾರೆಡ್ಡಿ ಅವರು, ದೇಶದ ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯಲ್ಲಿರುವ ರೈತರಿಗೆ ಕನಿಷ್ಟ ಸೌಜನ್ಯಕ್ಕೂ ಮಾಹಿತಿ ನೀಡದೆ ಯೋಜನಾ ವ್ಯಾಪ್ತಿಗೆ ಬರುವ ಸುಮಾರು 132 ಗ್ರಾಮಗಳನ್ನು ಹಂತ ಹಂತವಾಗಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಇದಕ್ಕೆ ಎಂದಿಗೂ ನಾವು ಅವಕಾಶ ನೀಡುವುದಿಲ್ಲ.

ಬೇರೆಲ್ಲಾ ವಿಚಾರಗಳಲ್ಲಿ ಸಂವಿಧಾನದ ನೀತಿ, ನಿಯಮಗಳು ಪಾಲನೆಯಾದರೆ, ರೈತರ ವಿಚಾರದಲ್ಲಿ ಮಾತ್ರ ಸಂವಿಧಾನ ವಿರೋಧಿ ನೀತಿಗಳೇ ಹೆಚ್ಚಾಗಿವೆ ಎಂದು ಆರೋಪಿಸಿದರು.
ಒಂದು ಯೋಜನೆ ಆರಂಭಿಸುವ ಮೊದಲು ಅಲ್ಲಿನ ಗ್ರಾಮಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ, ಗ್ರಾಮಸಭೆಗಳನ್ನು ನಡೆಸಿ, ರೈತರಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡಿ, ನಂತರ ಅಗತ್ಯ ಕ್ರಮ ಕೈಗೊಳ್ಳಬೇಕು.

ಆದರೆ ಚನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ವಿಚಾರದಲ್ಲಿ ಈ ನಿಯಮ ಪಾಲನೆಯಾಗಿಲ್ಲ. ಅಧಿಕಾರಿಗಳು ಇದು ಹೆಸರಿಗೆ ಮಾತ್ರ ಪ್ರಾಧಿಕಾರ, ಇಲ್ಲಿ ಯಾರ ಜಮೀನಿನನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ರೈತರ ಕಿವಿಯ ಮೇಲೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಮುಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡು ಪರಿತಪಿಸುತ್ತಿರುವ ರೈತರ ದಯನೀಯ ಸ್ಥಿತಿ ನಮ್ಮ ಕಣ್ಣ ಮುಂದೆ ಇದೆ. ಹಾಗಾಗಿ ರೈತರು ಎಚ್ಚರಿಕೆಯಿಂದ ಇರಬೇಕೆಂದು ಜಿ.ಸಿ.ಬೈಯಾರೆಡ್ಡಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಸರಕಾರದ ನಡೆ ರೈತರನ್ನು ಕತ್ತಲಲ್ಲಿ ಇಡುವಂತೆ ಮಾಡಿದೆ. ಕನಿಷ್ಟ ಪಕ್ಷ ಜಿಲ್ಲಾಡಳಿತದ ಬಳಿಯೂ ಇದರ ಸ್ಪಷ್ಟ ಮಾಹಿತಿ ಇಲ್ಲ.
  ಹಾಗಾಗಿ ರೈತರಿಗೆ ಮಾರಕವಾಗಿರುವ ಚನ್ನೈ-ಬೆಂಗಳೂರು ಕೈಗಾರಿಕಾ ಪ್ರಾಧಿಕಾರವನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು. ಪ್ರಾಂತ ರೈತ ಸಂಘದ ಬಿ.ಉಮೇಶ್,ಅಜ್ಜಪ್ಪ,ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿದರು.

   ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಅಜ್ಜಪ್ಪ,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ , ಹೋರಾಟ ಸಮಿತಿಯ ದಯಾನಂದ ಸಾಗರ್, ಶಿವಾನಂದ್, ಷಣ್ಮುಖಪ್ಪ, ಶಿವಣ್ಣ, ವೀರಣ್ಣ, ಕರಿಬಸವಯ್ಯ, ಮಂಜುನಾಥ್, ಪಾಲಾಕ್ಷ, ಜಯರಾಮಯ್ಯ, ರುದ್ರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿದ್ಯುತ್ ತಗುಲಿ ವಾಟರ್ ಮೆನ್ ಸಾವು

0

Publicstory/prajayoga

ಪಾವಗಡ: ತಾಲೂಕಿನ ವೀರಮ್ಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಗುಲಿ ಗ್ರಾಮ ಪಂಚಾಯಿತಿ ನೌಕರ ವಾಟರ್ ಮ್ಯಾನ್ ಇಂದು ಮೃತಪಟ್ಟಿದ್ದಾರೆ.
ಪಳವಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ವೀರಮ್ಮನಹಳ್ಳಿ ಗ್ರಾಮದ ನೀರುಗಂಟಿ ಈರಣ್ಣ(58) ಮೃತರು .
ಗ್ರಾಮಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ಮೋಟಾರ್ ಚಾಲನೆ ಮಾಡಲು ಹೋದಾಗ ವಿದ್ಯುತ್ ತಗುಲಿದೆ. ರಾತ್ರಿ ಬಿದ್ದ ಮಳೆಯಿಂದ ವಿದ್ಯುತ್ ಸಲಕರಣೆ ವೈರ್ ಗಳಿಗೆ  ನೀರು ಬಿದ್ದಿದೆ. ಇಇಂದ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ತುರುವೇಕೆರೆಯಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿ ಶಾಸಕ!

ತುರುವೇಕೆರೆ: ಪ್ರವೀಣ್ ನೆಟ್ಟಾರು ಹತ್ಯಕೋರರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸುವ ಮುನ್ನ ಭಯೋತ್ಪಾದಕ ಸಂಘಟನೆಗಳಾದ ಎಸ.ಡಿ.ಪಿ.ಐ. ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಶಾಸಕ ಮಸಾಲಾ ಜಯರಾಂ ಒತ್ತಾಯಿಸಿದರು.

ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಯುವ ಮೋರ್ಚ ಜಿಲ್ಲಾ ಅಧ್ಯಕ್ಷ ಪ್ರವೀಣ್‌ನೆಟ್ಟಾರು ಹತ್ಯೆ ಖಂಡಿಸಿ ಶನಿವಾರ ತಾಲೂಕು ಬಿಜೆಪಿ ಘಟಕ, ಭಜರಂಗದಳ ಹಾಗೂ ಹಿಂದು ಪರ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ವೇಳೆ ಅವರು ಮಾತನಾಡಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಎಸ್.ಡಿ.ಪಿ.ಐ. ಹಾಗೂ ಪಿ.ಎಫ್.ಐ. ಸಂಘಟನೆಗಳ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು. ನಂತರ ನೂರಾರು ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ರೇಣುಕುಮಾರ್‌ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಭಜರಂಗದಳದ ಮುಖ್ಯಸ್ಥ ನವೀನ್‌ಬಾಬು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾರಾಜಶೇಖರ್, ಸದಸ್ಯರಾದ ಚಿದಾನಂದ್, ಅಂಜನ್‌ಕುಮಾರ್ ಬಿಜೆಪಿ ಅಧ್ಯಕ್ಷ ಮುತ್ತಣ್ಣ, ಎಪಿಎಂಸಿ ಸದಸ್ಯ ಮಾಚೇನಹಳ್ಳಿ ಲೋಕೇಶ್, ವೆಂಕಟರಾಮಯ್ಯ, ಮುಖಂಡರಾದ ಎಡಗಿಹಳ್ಳಿವಿಶ್ವನಾಥ್, ರಾಮೇಗೌಡ, ವಿ.ಬಿ.ಸುರೇಶ್, ಬಿ.ಎಮ್.ಎಸ್.ಉಮೇಶ್, ಸೋಮಣ್ಣ, ಹರಿಕಾರನಹಳ್ಳ ಪ್ರಸಾದ್, ರೇಣುಕೇಶ್, ಗಣೇಶ್, ಜಯಂತ್, ಅಶ್ವಿನ್, ಬಸವೇಶ್, ಸೋಮೇನಹಳ್ಳಿ ಜಗಧೀಶ್, ಶೋಭಕುಮಾರ್, ಮುನಿಯೂರು ರಂಗಸ್ವಾಮಿ, ಬಸವರಾಜು, ಜಸ್ವಂತ್ ಶೇಟ್, ಬನಾರಮ್ ಶೇಟ್ ಇತರರು ಇದ್ದರು.

ಸಂಘಟಿತರಾದಾಗ ಸೌಲಭ್ಯಗಳು ದೊರೆಯುತ್ತವೆ : ಮುರಳೀದರ್ ಹಾಲಪ್ಪ

Publicstory/prajayoga

ತಿಪಟೂರು: ಕುಂಚಿಟಿಗ ಸಮುದಾಯದವರು ರಾಜ್ಯದಲ್ಲಿ 26 ಲಕ್ಷದಷ್ಟು ಜನರಿದ್ದು ಎಲ್ಲರೂ ಸಂಘಟಿತರಾದಾಗ ಮಾತ್ರ ಯಾವುದೇ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಕುಂಚಟಿಗ ಮಹಾಸಭಾದ ಅದ್ಯಕ್ಷ ಮುರಳೀದರ್ ಹಾಲಪ್ಪ ಕರೆ ನೀಡಿದರು.

ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಯಗಚೀಕಟ್ಟೆ ಗ್ರಾಮದಲ್ಲಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯದ ಗರುಡಗಂಭ ಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಟುಂಚಿಗ ಸಮುದಾಯವರು ಸಂಘಟನೆಯಲ್ಲಿ ಹಿಂದುಳಿದಿರುವುದರಿಂದಲೇ ಇಂದು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾವು ನಾಯಕರ ಮನೆಯ ಬಾಗಿಲಿಗೆ ಹೋಗಬೇಕಾಗಿದೆ. ನಾವು ಸಂಘಟನೆಯನ್ನು ಮಾಡಿಕೊಂಡರೆ ಜನಪ್ರತಿನಿದಿಗಳೆ ನಮ್ಮ ಮನೆಬಾಗಿಲಿಗೆ, ಸಂಘ ಸಂಸ್ಥೆಗಳ ಬಾಗಿಲಿಗೆ ಬರುತ್ತಾರೆ ಎಂದರು.

ಶಿಕಾರಿಪುರದಲ್ಲಿ ನಮ್ಮ ಸಂಘಟನೆ ಪ್ರಬಲವಾಗಿರುವುದರಿಂದ ಸಂಸದ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಸಮುದಾಯದ ಸಮಾರಂಭಗಳಿಗೆ ತಪ್ಪದೇ ಹಾಜರಾಗುತ್ತಾರೆ.  ತಿಪಟೂರು, ತುರುವೇಕೆರೆ ಹಾಗೂ ಗುಬ್ಬಿಯನ್ನು ಸೇರಿಸಿಕೊಂಡು ಸಂಘವನ್ನು ಸ್ಥಾಪಿಸಿಕೊಳ್ಳಿ ಹಾಗೂ ಅದರಿಂದ ಗುರುತಿಸಿಕೊಂಡು ಸಣ್ಣದಾಗಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾವನ್ನು ನೀಡಿ.  ಸಮಾಜದ ಸ್ವಾಮೀಜಿಗಳು ಹಾಗೂ ಕೆಲವು ಮುಖಂಡರುಗಳು ವಿದ್ಯಾಭ್ಯಾಸಮಾಡುವ  ಹಾಗೂ ಸ್ಪರ್ಧಾತ್ಮಕ ಪರೀಕ್ಷೆತೆಗೆದುಕೊಳ್ಳುವ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ಕೊಡುವ ಕೆಲಸವನ್ನು ಮಾಡಬೇಕು ಎಂದರು.

ಕುಂಚಿಟಿಗ ಸಮುದಾಯದ ಗುಬ್ಬಿ ತಾಲೂಕು ಕಾರ್ಯದರ್ಶಿ ಪುಟ್ಟಲಿಂಗಯ್ಯ ಮಾತನಾಡಿ, ಗುಬ್ಬಿ ತಾಲೂಕಿನಲ್ಲಿ ಕುಂಚಿಟಿಗ ಸಮುದಾಯದಿಂದ ನಮ್ಮಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಗುತ್ತದೆ. ಅದಕ್ಕೆ ಎಲ್ಲರೂ ಅರ್ಜಿಯನ್ನು ಸಲ್ಲಿಸಿ.  ನಾವೆಲ್ಲರೂ ಒಂದಾದಾಗ ಮಾತ್ರ ಸರ್ಕಾರಿ ಸೌಲತ್ತುಗಳು ಸಿಗಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಶಿವಣ್ಣ, ಗೋವಿಂದಪ್ಪ, ಚಾಕುವಳ್ಳಿ ಶ್ರೀನಿವಾಸ್, ಭೈರಪ್ಪ, ಕೃಷ್ಣಮೂರ್ತಿ, ಸೀನಪ್ಪ ರಾಘು ಉಪಸ್ಥಿತರಿದ್ದರು.

ವೈದ್ಯರ ನಿರ್ಲಕ್ಷ್ಯ ಬಾಣಂತಿ ಸಾವು ; ಗ್ರಾಮಸ್ಥರಿಂದ ಪ್ರತಿಭಟನೆ

Publicstory/prajayoga

ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಕುಣಿಗಲ್: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಆಸ್ಪತ್ರೆಯ ಮುಂಭಾಗ ರಸ್ತೆ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೊತ್ತಗೆರೆ ಹೋಬಳಿ ತೆರದಕುಪ್ಪೆ ಗ್ರಾಮದ ಮಹಿಳೆ ಪಲ್ಲವಿ (21) ಮೃತ ಮಹಿಳೆಯಾಗಿದ್ದು, ಜುಲೈ 7 ರಂದು ಪಲ್ಲವಿ ಎಂಬುವರನ್ನು ಹೆರಿಗೆಗೆಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಲ್ಲಿನ ಸ್ತ್ರೀರೋಗ ತಜ್ಞ ವೈದ್ಯರು ಹಣ ನೀಡಿದರೆ ಮಾತ್ರ ಹೆರಿಗೆ ಮಾಡುವುದಾಗಿ ಪೋಷಕರಲ್ಲಿ ಬೇಡಿಕೆ ಇಟ್ಟಿದ್ದರು. ಮೃತಳ ಪತಿ ಹಣವನ್ನು ತಂದು ನೀಡಿದ ನಂತರ ವೈದ್ಯರು ಚಿಕಿತ್ಸೆ ಆರಂಭಿಸಿದರು. ಮಗು ದಪ್ಪವಿದ್ದ ಕಾರಣ ಸಾಮಾನ್ಯ ಹೆರಿಗೆ ಮಾಡಲು ಆಗದೆ ಸಿಜರಿನ್ ಹೆರಿಗೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಣಂತಿಗೆ ತೀವ್ರ ರಕ್ತ ಸ್ರಾವವಾಗಿ ನಿಶ್ಚೇತನಗೊಂಡಳು. ಇದನ್ನು ಕಂಡು ಗಲಿಬಿಲಿಗೊಂಡ ವೈದ್ಯರು ಬಾಣತಿಂಯನ್ನು ಆದಿಚುಂಚನಗಿರಿಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಯಾಗದೆ ಶುಕ್ರವಾರ ಮೃತಪಟ್ಟಿದ್ದು, ಇದಕ್ಕೆ ತಾಲೂಕು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ಪೊಲೀಸರ ಮಧ್ಯ ಪ್ರವೇಶದಿಂದ ಉದ್ವಿಗ್ನ ಸ್ಥಿತಿ ತಿಳಿಯಾಯಿತು. ಈ ವೇಳೆ ಜೆಡಿಎಸ್ ಪಕ್ಷವು ಹೆದ್ದಾರಿ ತಡೆದು ಪ್ರತಿಭಟಿಸಿತು.
ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಬಿ.ಜೆ.ಪಿ. ಮುಖಂಡ ಡಿ. ಕೃಷ್ಣಕುಮಾರ್ ಮಾಜಿ ಸಚಿವ ಜೆ.ಡಿ.ಎಸ್.ಡಿ ನಾಗರಾಜಯ್ಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಘಟನೆಯ ವಿವರ ಪಡೆದುಕೊಂಡರು.
ಕರ್ತವ್ಯ ಲೋಪ ಎಸಗಿರುವ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಮೊದಲಿನಿಂದಲೂ ಈ ವೈದ್ಯರು ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ವೈದ್ಯರ ವಿರುದ್ಧ ಡಿಎಚ್‌ಒ, ಡಿಸಿಗೂ ದೂರು ನೀಡಿದ್ದೆವು. ಅವರನ್ನು ಕೂಡಲೇ ಅಮಾನತ್ತು ಗೊಳಿಸಿ ತನಿಖೆ ನಡೆಸಬೇಕು ಎಂದು ಡಿಎಚ್‌ಒಗೆ ಸೂಚಿಸಿದ್ದೇನೆ. ಸಂತ್ರಸ್ತ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಅಗತ್ಯವಿರುವ ಅನಸ್ತೇಶಿಯಾ ತಜ್ಞ ವೈದ್ಯರನ್ನು ನೇಮಕ ಮಾಡಬೇಕೆಂದು ಶಾಸಕ ಡಾ. ರಂಗನಾಥ್ ಆಗ್ರಹಿಸಿದರು.

ಪೊಲೀಸ್ ಇಲಾಖೆ ದುರ್ಬಲವಾಗುತ್ತಿದೆ : ಮಾಜಿ ಸಚಿವ ಡಿವಿ  ಸದಾನಂದ ಗೌಡ ಗಂಭೀರ ಆರೋಪ

Publicstory/prajayoga

ಮಂಗಳೂರು: ಪ್ರವೀಣ್ ಹತ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಪೊಲೀಸ್ ಇಲಾಖೆ ದುರ್ಬಲವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಡಿವಿ ಸದಾನಂದ ಗೌಡ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ನಮ್ಮ ಸರ್ಕಾರವೇ ಇದ್ದೂ ಪ್ರವೀಣ್ ಹತ್ಯೆಯಾಗಿರುವುದು ಖಂಡನೀಯ ಅಸಮಾಧಾನ ಹೊರಹಾಕಿದ್ದಾರೆ.

ದಿಟ್ಟ ಹೆಜ್ಜೆ ಇಡಲು ಸರ್ಕಾರ ಹಿಂದೇಟಾಕುತ್ತಿದೆ‌. ಹರ್ಷನ ಕೊಲೆ ಸಂದರ್ಭದಲ್ಲಿಯೇ ದಿಟ್ಟ ಹೆಜ್ಜೆ ತಗೆದುಕೊಳ್ಳಬೇಕಿತ್ತು. ಈಗ ಯಾರೂ ಹೆದರದೆ ಇರುವ ವಾತಾವರಣ ಸೃಷ್ಟಿಯಾಗಿರುವುದು ದುರ್ದೈವ. ನಮ್ಮ ಸರ್ಕಾರ ಬಂದರೆ ರಕ್ಷಣೆ ಸಿಗತ್ತದೆ ಎನ್ನುವ ಭಾವನೆ ಕಡಿಮೆ ಆಗಿದೆ. ಈಗ ವ್ಯಕ್ತವಾಗುತ್ತಿರುವ ವಿರೋಧವೇ ಸಾಕ್ಷಿ ಎಂದರು.