Publicstory/prajayoga
ಮಂಗಳೂರು: ಪ್ರವೀಣ್ ಹತ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಪೊಲೀಸ್ ಇಲಾಖೆ ದುರ್ಬಲವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಡಿವಿ ಸದಾನಂದ ಗೌಡ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ನಮ್ಮ ಸರ್ಕಾರವೇ ಇದ್ದೂ ಪ್ರವೀಣ್ ಹತ್ಯೆಯಾಗಿರುವುದು ಖಂಡನೀಯ ಅಸಮಾಧಾನ ಹೊರಹಾಕಿದ್ದಾರೆ.
ದಿಟ್ಟ ಹೆಜ್ಜೆ ಇಡಲು ಸರ್ಕಾರ ಹಿಂದೇಟಾಕುತ್ತಿದೆ. ಹರ್ಷನ ಕೊಲೆ ಸಂದರ್ಭದಲ್ಲಿಯೇ ದಿಟ್ಟ ಹೆಜ್ಜೆ ತಗೆದುಕೊಳ್ಳಬೇಕಿತ್ತು. ಈಗ ಯಾರೂ ಹೆದರದೆ ಇರುವ ವಾತಾವರಣ ಸೃಷ್ಟಿಯಾಗಿರುವುದು ದುರ್ದೈವ. ನಮ್ಮ ಸರ್ಕಾರ ಬಂದರೆ ರಕ್ಷಣೆ ಸಿಗತ್ತದೆ ಎನ್ನುವ ಭಾವನೆ ಕಡಿಮೆ ಆಗಿದೆ. ಈಗ ವ್ಯಕ್ತವಾಗುತ್ತಿರುವ ವಿರೋಧವೇ ಸಾಕ್ಷಿ ಎಂದರು.