Saturday, October 24, 2026
Google search engine
HomeUncategorizedಪ್ರೀತಿಯ ಜಗಳ

ಪ್ರೀತಿಯ ಜಗಳ

ನಂದು,
ಅವಳದ್ದು ಯಾವಾಗಲು ಪ್ರೀತಿಯ ಜಗಳ…
ದೊಡ್ಡ ಕಾರಣಕ್ಕಲ್ಲ,
ಒಂದು ಸಣ್ಣ ಮಾತಿನ ಸಡಗರಕ್ಕೆ,
ಒಂದು ಮರೆತ ಕರೆಗೋಸ್ಕರ,
ಒಂದು ತಡವಾದ ಮನೆಮಾತಿಗೆ.

ಅವಳ ಕೋಪದಲ್ಲಿ ಬೆಂಕಿಯಿಲ್ಲ,
ಕಾಳಜಿಯ ಉರಿ ಮಾತ್ರ.
ಮುನಿಸಿನಲ್ಲಿ ದೂರವಿಲ್ಲ,
ಇನ್ನಷ್ಟು ಹತ್ತಿರವಾಗುವ ನೆಪ ಮಾತ್ರ.
“ಬೇಡ” ಎನ್ನುವ ತುಟಿಗಳ ಹಿಂದೆ
“ಇನ್ನೂ ಹತ್ತಿರ ಬಾ” ಎನ್ನುವ ಹೃದಯದ ಮಾತು.

ಕೋಪ ಬರುತ್ತದೆ,
ಆದರೆ ಹೆಚ್ಚು ಹೊತ್ತು ಉಳಿಯೋದಿಲ್ಲ;
ಮಳೆ ಬಂದು ತೇವಗೊಳಿಸಿ
ಮತ್ತೆ ಇಂದ್ರಚಾಪ ಬಿಡುವಂತೆ.
ಅವಳ ವಿರಸದಲ್ಲೂ
ನನಗೊಂದು ಹಕ್ಕಿನ ಗುರುತು ಇರುತ್ತದೆ.

ನಾವು ಜಗಳವಾಡುವ ಕ್ಷಣಗಳಲ್ಲಿ
ಮಾತುಗಳು ಕಠಿಣವಾಗಬಹುದು,
ಆದರೆ ಮನಸುಗಳು ಅಲ್ಲ.
ಒಬ್ಬರಿಗೊಬ್ಬರು ನೋವಾಗದಂತೆ
ನೋವು ಹೇಳಿಕೊಳ್ಳುವ ಕಲೆಯದು
ನಮ್ಮ ದಾಂಪತ್ಯದ ಗುಟ್ಟು.

ಕೋಪ, ತಾಪ, ಮುನಿಸು, ವಿರಸ—
ಇವುಗಳಿಲ್ಲದ ಪ್ರೀತಿ
ಅಡಿಗೆ ಉಪ್ಪಿಲ್ಲದ ಊಟದಂತೆ.
ಸ್ವಲ್ಪ ಕಸುವಿದ್ದಾಗಲೇ
ಪ್ರೀತಿಯ ಸಿಹಿ ಹೆಚ್ಚಾಗುತ್ತದೆ.

ಅವಳು ಮುಖ ತಿರುಗಿಸಿದಾಗ
ನನ್ನ ಜಗವೇ ತಿರುಗಿದಂತೆ.
ಆದರೆ ಅವಳ ಒಂದು ನಗು
ಮತ್ತೆ ನನ್ನ ದಿನವನ್ನೆ ಬೆಳಗಿಸುತ್ತದೆ.
ಅವಳ ಮುನಿಸು ನನ್ನ ಮೇಲೆ ಇದ್ದರೆ
ಅದು ನನ್ನ ಮೇಲಿನ ಪ್ರೀತಿಯ ಸಾಕ್ಷಿ.

ದಾಂಪತ್ಯದ ದುಗುಡವೇ
ನಮ್ಮ ಬದುಕಿನ ರಾಗ.
ಸಣ್ಣ ಸಣ್ಣ ಅಸಮಾಧಾನಗಳೇ
ನಮ್ಮ ಕಥೆಗೆ ಹೊಸ ಅಧ್ಯಾಯ.
ಹೀಗೆ ಜಗಳದ ನಡುವೆಯೇ
ಪ್ರೀತಿ ಮರುಹುಟ್ಟುತ್ತದೆ ಪ್ರತಿದಿನ.

ನಾನು ಅವಳ ಕೋಪದಲ್ಲಿ ನನ್ನ ಸ್ಥಾನ ನೋಡುತ್ತೇನೆ,
ಅವಳು ನನ್ನ ಮೌನದಲ್ಲಿ ತನ್ನ ಪ್ರೀತಿಯನ್ನು ಹುಡುಕುತ್ತಾಳೆ.
ಇದೇ ನಮ್ಮ ಬದುಕು—
ಜಗಳದ ನೆಪದಲ್ಲಿ ಹತ್ತಿರವಾಗುವ ಎರಡು ಹೃದಯಗಳು.

ಪ್ರೀತಿ ಎಂದರೆ
ಎಂದಿಗೂ ಜಗಳವಾಗದಿರುವುದಲ್ಲ,
ಜಗಳವಾದರೂ ದೂರವಾಗದಿರುವುದು.
ಅದೇ ನಮ್ಮ ಪ್ರೀತಿ…
ಅದೇ ನಮ್ಮ ದಾಂಪತ್ಯದ ಸಿಹಿ ಕದನ.
–ತುಳಸಿತನಯ ಚಿದು..✍️

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?