Sunday, May 26, 2024
Google search engine
Homeಕಾನನದ ಕುಸುಮಸಸ್ಯ ವೈವಿಧ್ಯ

ಸಸ್ಯ ವೈವಿಧ್ಯ

ತೇಜಸ್ವಿನಿ ಪಿ

ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿ ಭಾರತದ ಪಶ್ಚಿಮ ಭಾಗದಲ್ಲಿರುವ ಒಂದು ಪ್ರಬುದ್ಧವಾದ ಪರ್ವತ ಶ್ರೇಣಿಯಾಗಿದೆ.  ಪಶ್ಚಿಮ ಘಟ್ಟ ಮಹಾರಾಷ್ಟ್ರ – ಗುಜರಾತ್ ಗಡಿ ಭಾಗದಲ್ಲಿರುವ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗಿ ಕನ್ಯಾಕುಮಾರಿಯವರೆಗೆ ಹರಡಿಕೊಂಡಿದೆ. ಸುಮಾರು ೧೬೦೦ ಕಿಮಿ ಉದ್ದವಿರುವ ಸಹ್ಯಾದ್ರಿ ಮಹಾರಾಷ್ಟ್ರ, ಗೋವ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ  ಹಬ್ಬಿದೆ.

ಸಹ್ಯಾದ್ರಿ ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯ ನೆಲೆಗಳಲ್ಲಿ ಒಂದಾಗಿದ್ದು, ಸುಮಾರು 7402 ವಿವಿಧ ಹೂ ಬಿಡುವ( Angiosperms) ಸಸ್ಯಗಳನ್ನು ಹೊಂದಿದೆ. ಅದರಲ್ಲೂ ಅಂದಾಜು 1273 ವಿವಿಧ ಸಸ್ಯಗಳಿಗೆ ತವರೂರು ಆಗಿದೆ. ಹಾಗೆಯೇ 139 ಬಗೆಯ ಸಸ್ತನಿಗಳು, 508 ಪ್ರಭೇದದ ಪಕ್ಷಿಗಳು ಮತ್ತು 179 ಉಭಯವಾಸಿಗಳಿಗೆ ನೆಲೆಯಾಗಿದೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳು ಸಹ ಪಶ್ಚಿಮಘಟ್ಟಗಳಲ್ಲಿ ನೆಲೆಸಿವೆ. ನಾಲ್ಕು ಬಗೆಯ ಅರಣ್ಯ ವಲಯಗಳನ್ನು ಇಲ್ಲಿ ನೋಡಬಹುದಾಗಿದೆ ಯಾವುದೆಂದರೆ ಉತ್ತರ – ಪಶ್ಚಿಮ ಘಟ್ಟಗಳ ಎಲೆ ಉದುರಿಸುವ ಕಾಡುಗಳು, ಮಳೆಕಾಡುಗಳು, ದಕ್ಷಿಣ – ಪಶ್ಚಿಮ ಎಲೆ ಉದುರಿಸುವ ಕಾಡುಗಳು ಹಾಗೂ ದಕ್ಷಿಣ – ಪಶ್ಚಿಮ ಮಳೆಕಾಡುಗಳು. ಇನ್ನು ಹೆಚ್ಚಿನ ಎತ್ತರದಲ್ಲಿನ ಭಾಗದಲ್ಲಿ ಸದಾ ಹಸಿರಿನ ಕಾಡುಗಳಿದ್ದು ( Evergreen forest) ಲಾರೆಸಿ ( Lauraceae), ರುಬಿಯೇಸಿ ( Rubiaceae), ಮೊರೆಸಿ (Moraceae) ಕುಟುಂಬಕ್ಕೆ ಸೇರಿದ ಮರಗಳು ಹೆಚ್ಚಾಗಿ ಕಾಣಬರುತ್ತದೆ.

ಜಗತ್ತಿನ ಬೇರೆ ಯಾವ ಭಾಗಗಳಲ್ಲೂ ಕಾಣದ ಸುಮಾರು 84 ಜಾತಿಯ ದ್ವಿಚರಿಗಳು, 16 ಪಕ್ಷಿಗಳು, 7 ಸಸ್ತನಿಗಳು ಪಶ್ಚಿಮ ಘಟ್ಟದಲ್ಲಿ ನೋಡಬಹುದಾಗಿದೆ. ಇಂತಹ ಸಂಪತ್ತನ್ನು ಹೊಂದಿರುವ ಶ್ರೇಣಿಯನ್ನು ಸಂರಕ್ಷಿಸುವ ಸಲುವಾಗಿ ಭಾರತ ದೇಶವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಂತೆಯೇ ಸುಮಾರು 13 ರಾಷ್ಟ್ರೀಯ ಉದ್ಯಾನವನಗಳು, ರಕ್ಷಿತ ಅರಣ್ಯಗಳು, ವನ್ಯಜೀವಿ ಧಾಮಗಳನ್ನು ರಚಿಸಲಾಗಿದೆ. ಪಶ್ಚಿಮ ಘಟ್ಟ ಸಾವಿರಾರು ಪ್ರಾಣಿ ಪಕ್ಷಿಗಳ ನೆಲೆಯಾಗಿದ್ದು ಜಾಗತಿಕವಾಗಿ  ವಿನಾಶದ ಅಂಚಿನಲ್ಲಿರುವ ಪ್ರಾಣಿಗಳನ್ನು ಸಹ ಒಳಗೊಂಡಿದೆ.      

ಸಹ್ಯಾದ್ರಿ ಕಾಡಿನಲ್ಲಿ ಹಲವಾರು ಔಷದೀಯ ಗುಣಗಳಿರುವ ಸಸ್ಯಗಳನ್ನು ಕಾಣಬಹುದು ಅದನ್ನು ಬಳಸಿ ವಿವಿಧ ಗಿಡಮೂಲಿಕೆಗಳನ್ನು  ಅರಣ್ಯ ವಾಸಿಗಳು ತಯಾರಿಸುತ್ತಾರೆ ಹಾಗೂ ಅದನ್ನು ಹಲವಾರು ಕಾಯಿಲೆಗಳಿಗೆ ಮದ್ಧಾಗಿ ಬಳಸುತ್ತಾರೆ. ಅಷ್ಟಲ್ಲದೆ ನಮ್ಮ ದೇಶದಲ್ಲಿ ಆಯುರ್ವೇದ ಔಷಧ ಪದತ್ತಿಯು ಬಹಳ ಪ್ರಾಚೀನ ಕಾಲದಿಂದಲೂ ಅನುಸರಿಸುತ್ತ ಬಂದಿದೆ. ಔಷಧಿ ಸಸ್ಯಗಳ ತೊಗಟೆ, ಬೇರು, ನಾರು, ಎಲೆ, ಹೂ, ಹಣ್ಣು ಮುಂತಾದವನ್ನು ಬಳಸಿ ಗಿಡಮೂಲಿಕೆಗಳನ್ನು ತಯಾರಿಸುತ್ತಾರೆ. ಅದು ಎಷ್ಟೋ ಕಾಯಿಲೆಗಳಿಗೆ ರಾಮಬಾಣವಾಗಿದೆ. ಆಯುರ್ವೇದ ಪದ್ಧತಿಯ ಪಿತಾಮಹರಾದ ಶುಶೃತ ಮತ್ತು ಚರಕರು ಸಂಸ್ಕೃತದಲ್ಲಿ ಬರೆದಿರುವ ಪುಸ್ತಕದಲ್ಲಿ ಅಂದಾಜು 700 ಔಷದೀಯ ಗುಣಗಳಿರುವ ಸಸ್ಯವನ್ನು ಹೆಸರಿಸಿದ್ದಾರೆ. ಇಂತಹ ಮಹತ್ವದ ಬರವಣಿಗೆಗಳನ್ನು ಇಟ್ಟುಕೊಂಡು ಕೆಲವು ಪಶ್ಚಿಮ ಘಟ್ಟಗಳಲ್ಲಿ ಸಿಗುವ ನೈಸರ್ಗಿಕ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಕುರಿತು ಪರಿಚಯ ಮಾಡಬಯಸುತ್ತೇನೆ.

  1. ವೈಜ್ಞಾನಿಕ ಹೆಸರು: ಅಪೋರೋಸಾ ಲಿಂಡ್ಲಿಯಾನ (Aporosa lindleyana)  

ಕುಟುಂಬ: ಯುಫೋರ್ಬಿಯೇಸಿ( Euphorbiaceae)

ಕನ್ನಡ ಹೆಸರು: ಸರಳಿ ಮರ

ಅಪೋರೋಸ ಸುಮಾರು 15 ಮಿ ಎತ್ತರ ಬೆಳೆಯುವ ಯುಫೋರ್ಬಿಯೇಸಿ ಪರಿವಾರಕ್ಕೆ ಸೇರಿದ ಮರವಾಗಿದೆ.

ಎಲೆಗಳು ಸಾಮಾನ್ಯ ಹಸಿರಾಗಿದ್ದು ಅದರ ತೊಟ್ಟು ದಪ್ಪವಾಗಿರುತ್ತದೆ. ಇದರ ಪುಷ್ಪ ವಿನ್ಯಾಸವನ್ನು ಕಂಡರೆ ಗಂಡು ಹೂಗಳು ತುದಿಯಲ್ಲಿ ಹಾಗೂ ತೂಗು ಪುಷ್ಪ ಮಂಜರಿಯಲ್ಲಿ (catkin) ಹಾಗು ಹೆಣ್ಣು ಹೂಗಳು ಸೀಮಾಕ್ಷ ಪುಷ್ಪ ಮಂಜರಿಯಲ್ಲಿ (cymose) ಕಾಣ ಸಿಗುತ್ತದೆ. ಇದರ ಹಣ್ಣುಗಳನ್ನು ಕ್ಯಾಪ್ಸೂಲ್ ಎಂದು ಕರೆಯುತ್ತಾರೆ. ಇಂತಹ ಮರಗಳನ್ನು ಪಶ್ಚಿಮ ಘಟ್ಟ ಹಾಗೂ ಶ್ರೀಲಂಕಾದ ದಟ್ಟ ಕಾಡುಗಳಲ್ಲಿ ನೋಡಬಹುದು.

ಉಪಯೋಗಗಳು:

  1. ಬೇರುಗಳ ಕಷಾಯವನ್ನು ಜ್ವರ ಮತ್ತು ಚರ್ಮ ಕಾಯಿಲೆಗಳಿಗೆ ಬಳಸುತ್ತಾರೆ.
  2. ಹಣ್ಣುಗಳನ್ನು ತಿನ್ನಬಹುದು ಹಾಗೂ ಅದರಲ್ಲಿ Vit-C ಹೇರಳವಾಗಿರುತ್ತದೆ.
  3. ತೊಗಟೆಯ ಕಷಾಯವನ್ನು ಹೊಟ್ಟೆ ನೋವಿಗೆ ಬಳಸುತ್ತಾರೆ  

 

  • ವೈಜ್ಞಾನಿಕ ಹೆಸರು: ಆರ್ಟೋಕಾರ್ಪಸ್ ಗೊಮೆಜಿಯಾನಸ್( Artocarpus gomezianus)

ಕುಟುಂಬ: ಮೋರೆಸಿ ( Moraceae )

ಕನ್ನಡ ಹೆಸರು: ವಾಟೆ ಹುಳಿ

ಇಂಗ್ಲಿಷ್ ಹೆಸರು: ಮಂಕಿ ಜಾಕ್( Monkey jack )

ಸಂಸ್ಕೃತ ಹೆಸರು: ದಾಹು

ವಾಟೆ ಹುಳಿ ಮರವು ಸದಾ ಹಸಿರು ಕಾಡುಗಳಲ್ಲಿ ಬೆಳೆಯುವ ಹಲಸಿನ ಜಾತಿಗೆ ಸೇರಿದ ಒಂದು ಮರವಾಗಿದೆ. ಇದರ ಎತ್ತರ ಸುಮಾರು 35 ಮೀ ಇದ್ದು ಇದರ ಎಲೆಗಳು ಸಾಮಾನ್ಯ, ಎಲೆಗಳ ಜೋಡಣೆಯ ಕ್ರಮ ಅಕ್ಕ – ಪಕ್ಕ ವಾಗಿರುತ್ತದೆ. ಇದರ ಪುಷ್ಪ ವಿನ್ಯಾಸದಲ್ಲಿ, ಗಂಡು ಹೂಗಳು ಗೊಂಡೆ (Head) ವಿನ್ಯಾಸದಲ್ಲಿ ಹಾಗೂ ಹೆಣ್ಣು ಹೂಗಳು ಮತ್ತೊಂದು ಗೊಂಡೆ ಪುಷ್ಪ ವಿನ್ಯಾಸದಲ್ಲಿ ನೋಡಬಹುದಾಗಿದೆ. ಇದರ ಹಣ್ಣುಗಳನ್ನು ಸೋರೋಸಿಸ್ ಎಂದು ಕರೆಯುತ್ತಾರೆ. ಈ ಮರವು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಸಿಗುವ ಒಂದು ಅಪರೂಪದ ಮರವಾಗಿದೆ.

ಉಪಯೋಗಗಳು:

  1. ಇದರ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಬಿಸಿಲಿನಲ್ಲಿ ಒಣಗಿಸಿ, ಪುಡಿಮಾಡಿ ಅದನ್ನು ಹುಳಿಯ ಪದಾರ್ಥವಾಗಿ ಅಡುಗೆಗೆ ಬಳಸುತ್ತಾರೆ.
  2. ತೊಗಟೆಯನ್ನು ಚೆನ್ನಾಗಿ ಒಣಗಿಸಿ, ಪುಡಿಮಾಡಿ ಹಸುವಿನ ಹಾಲಿನಲ್ಲಿ ಬೆರೆಸಿ ಹರ್ಪಿಸ್ಗೆ ಲೇಪನ ಮಾಡುತ್ತಾರೆ.
  3. ತೊಗಟೆಯ ಕಷಾಯವನ್ನು ಜೆಂತು ಹುಳುವಿನ ನಿವಾರಣೆಗೆ ಬಳಸುತ್ತಾರೆ.

 

 

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?