Publicstory
ತುಮಕೂರು: ಪ್ರಿಯತಮನ ಸಾವು ಅರಗಿಸಿಕೊಳ್ಳಲಾಗದ ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲ್ಲೂಕಿನಲ್ಲಿ ನಡೆದಿದೆ.
ಅರೆಹಳ್ಳಿ ಗ್ರಾಮದ ಸುಷ್ಮಾ ಮತ್ತು ಮಸ್ಕಲ್ ಗ್ರಾಮದ ತನುಷ್ ಈ ದುರ್ದೈವಿ ಪ್ರೇಮಿಗಳು.
ಸುಷ್ಮಾ , ಧನುಷ್ ಇಬ್ಬರೂ ಪ್ರೀತಿಸುತ್ತಿದ್ದರು.
ಸುಷ್ಮಾ ಅವರನ್ನು ಮದುವೆಯಾಗಲು ಧನುಷ್ ಅವರು ಸುಷ್ಮಾ ಅವರ ಕುಟುಂಬದವರು ಒಪ್ಪಿಸಿ ಒಪ್ಪಿಗೆ ಪಡೆದಿದ್ದರು.
ಇಬ್ಬರೂ ಮದುವೆಯಾಗಲು ಎರಡೂ ಮನೆಯವರು ಕೂಡ ಒಪ್ಪಿಗೆ ನೀಡಿದ್ದರು. ಇನ್ನೇನು ಮದುವೆಯಾಗಬೇಕಿದ್ದ ಜೋಡಿ ಈಗ ಮಸಣ ಸೇರಿದ್ದಾರೆ.
ಸುಷ್ಮಾ ಅವರು ತುಮಕೂರಿನಲ್ಲಿ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದರು. ಧನುಷ್ ಅವರು ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ನಡೆಸುತ್ತಿದ್ದರು.
ಇಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು.
ಧನುಷ್ ಅವರು ಊರಿನ ಜಾತ್ರೆಗೆಂದು ಬರುವಾಗ ನೆಲಮಂಗಲದ ಕುಲಾನ ಹಳ್ಳಿ ಬಳಿ ಅಪಘಾತದಿಂದ ಸಾವಿಗೀಡಾಗಿದ್ದರು.
ಧನುಷ್ ಅವರ ಸಾವಿನಿಂದ ತೀವ್ರ ದುಃಖಿತರಾದ ಸುಷ್ಮಾ ಧನುಷ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಧನುಷ್ ಅವರ ಅಂತ್ಯಕ್ರಿಯೆ ನೆರವೇರಿಸಿ ಮನೆಗೆ ಬಂದ ಸುಷ್ಮಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ವಿಷ ಸೇವಿಸಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಮೇ ಹನ್ನೊಂದು ರಂದು ಈ ಘಟನೆ ನಡೆದಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಸುಷ್ಮಾ ಅವರು ನಿನ್ನೆ ರಾತ್ರಿ ಸಾವಿಗೀಡಾಗಿದ್ದಾರೆ.
ಈ ಘಟನೆಯಿಂದ ಎರಡೂ ಗ್ರಾಮಗಳ ಜನರು ದುಃಖಭರಿತರಾಗಿ ದ್ದಾರೆ. ಪ್ರೇಮಿಸಿ ಮದುವೆ ಕನಸು ಕಂಡಿದ್ದ ಜೋಡಿಯ ಈ ದಾರುಣ ಅಂತ್ಯ ಜನರನ್ನು
ದುಃಖದ ಮಡಿಲಲ್ಲಿ ಕೆಡವಿದೆ.