Publicstory.in
ತುಮಕೂರು: ಡಿಸಿಸಿ ಬ್ಯಾಂಕ್ ಗೆ 34 ಲಕ್ಷದ 85 ಸಾವಿರ ರೂಪಾಯಿ ವಂಚನೆ ಮಾಡಿದ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ತೀರ್ಪು ನೀಡಿದ್ದಾರೆ.
ಆರೋಪಿಗಳಾದ ಅಶ್ವತ್ಥನಾರಾಯಣ
ಈತನ ಸ್ನೇಹಿತ ಬಶೀರ್ ಅಹ್ಮದ್, ಸಂಬಂಧಿಕರಾದ ಶಾಂತ ಲಕ್ಷ್ಮಮ್ಮ ಅವರು ಶಿಕ್ಷೆಗೆ ಗುರಿಯಾದವರು. ಶಿಕ್ಷೆಯ ಜತೆಗೆ 25 ಸಾವಿರ ದಂಡ ಸಹ ವಿಧಿಸಲಾಗಿದೆ.
ಅಶ್ವತ್ಥನಾರಾಯಣ ಅವರು ಬ್ಯಾಂಕಿನ ಲೆಕ್ಕಪತ್ರ ನಿರ್ವಹಣೆಯ ಕೆಲಸ ಮಾಡುತ್ತಿದ್ದು, ವಿನಿಮಯ ಹುಂಡಿಗಳನ್ನು ಕಳವು ಮಾಡಿ ಬ್ಯಾಂಕಿನ ಮ್ಯಾನೇಜರ್ ನಕಲಿ ಸಹಿ ಬಳಸಿ ಈ ಇಬ್ಬರ ಹೆಸರಿನಲ್ಲಿ ಹಣ ಲಪಾಟಾಯಿಸಿದ್ದರು.
ಸುದೀರ್ಘ ವಿಚಾರಣೆಯ ಬಳಿಕ ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸರ್ಕಾರಿ ವಕೀಲರಾದ ವೈ.ಎ.ಕವಿತಾ ಅವರು ಸರ್ಕಾರದ ಪರ ವಾದಿಸಿದ್ದರು.