Sunday, December 7, 2025
Google search engine
Home Blog Page 24

ಲೋಕಸಭೆ ಚುನಾವಣೆ ಸ್ಪರ್ಧೆಗೆ ರೆಡಿ ಎಂದ ಎಸ್ ಪಿಎಂ

0

ತುಮಕೂರು: ತುಮಕೂರು ಲೋಕಸಭಾ ಮತದಾರರು ನನ್ನ ಸ್ಪರ್ಧೆಯನ್ನು ಬಯಸಿದ್ದು, ಬಿಜೆಪಿಯಿಂದ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಕೇಳಿರುವುದಾಗಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಲೋಕಸಭಾ ಕ್ಷೇತ್ರದ ಜನರು, ಜಾತಿ ಮತ್ತು ಪಕ್ಷವನ್ನು ಹೊರತು ಪಡಿಸಿಯೂ ಚುನಾವಣೆಗೆ ಸ್ಪರ್ಧೆ ಮಾಡುವಂತೆ ನನಗೆ ತಿಳಿಸಿದ್ದಾರೆ, ಚುನಾವಣೆಗೆ ಜನರ ಭಾವನೆಯನ್ನು ಪರಿಗಣಿಸಲೇ ಬೇಕಾಗುತ್ತದೆ ನಾನು ಬೇರೆ ಕ್ಷೇತ್ರದಲ್ಲಿ ನಿಲ್ಲುವಷ್ಟು ದೊಡ್ಡ ಲೀಡರ್ ಅಲ್ಲ ಎಂದು ತಿಳಿಸಿದರು.

ತುಮಕೂರು ಜನತೆ ಜಾತಿ ಮತ್ತು ಪಕ್ಷವನ್ನು ಹೊರತುಪಡಿಸಿ ಮುದ್ಧಹನುಮೇಗೌಡರ ಬಗ್ಗೆ ಒಂದು ಅಪಾರವಾದ ನಂಬಿಕೆ ಇದೆ ಆ ವರ್ಗದ ಜನಕ್ಕೆ ನಾನು ಋಣಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿಯನ್ನು ತಳ್ಳಿಹಾಕಿದ ಅವರು, ನಾನು ಈ ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ನೀಡುವುದಿಲ್ಲ, ನಾನು ಬಿಜೆಪಿ ಪಕ್ಷದಲ್ಲಿದ್ದೇನೆ ಇಲ್ಲಿಯೇ ನಾನು ಲೋಕಸಭಾ ಸದಸ್ಯ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿಯಾಗಿರುತ್ತೇನೆ ಎಂದು ಹೇಳಿದರು.


ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದ್ದು ಜೆಡಿಎಸ್ ಈ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ ಮೀಸಲಿಟ್ಟರೆ ನೀವು ಜೆಡಿಎಸ್ ಪಕ್ಷ ಸೇರುತ್ತೀರಾ ಎಂಬ ಪ್ರಶ್ನೆಗೆ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆಂದರೆ ಬಿಜೆಪಿ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ಮುಖಂಡರು ನಮ್ಮ ಬಗ್ಗೆ ವಿಶ್ವಾಸ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ, ನಾನು ಇಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ಟಿಕೆಟ್ ನೀಡಿದರೆ ಪಕೇತರರಾಗಿ ಆಗಿ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಸ್ವತಂತ್ರವಾಗಿ ಸ್ಪರ್ಧಿಸುವ ಅವಶ್ಯಕತೆ ನನಗಿಲ್ಲ, ಪಕ್ಷವೇ ಟಿಕೆಟ್ ನೀಡುವಾಗ ನಾನು ಸ್ವತಂತ್ರವಾಗಿ ಕೇಳಿದ್ದು ಕೊಡಲಿ ಆ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.
ಜಿಲ್ಲೆಯ ರಾಜಕೀಯದ ಬಗ್ಗೆ ಮಾತನಾಡಲು ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರ ಬಳಿ ಸಮಯ ಕೇಳಿರುವುದಾಗಿ ತಿಳಿಸಿದರು.

ತಹಶೀಲ್ದಾರ್ ವಿರುದ್ಧ ಶಾಸಕರು ಗರಂ

0

ತುರುವೇಕೆರೆ:
ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕೆ.ಮಾವಿನಹಳ್ಳಿ ಕಂದಾಯ ವೃತ್ತಾಧಿಕಾರಿ ಮೇಘನಾ ಎಸ್ ಅವರನ್ನು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ರವರು ಏಕಾ ಏಕಿ ತಾಲ್ಲೂಕು ಕಚೇರಿಗೆ ನಿಯೋಜನೆ ಮಾಡಿಕೊಂಡಿರುವ ಕ್ರಮವನ್ನು ಖಂಡಿಸಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಕೆ.ಮಾವಿನಹಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕು ಕಚೇರಿಯಲ್ಲಿ ನೌಕರರು, ಸಿಬ್ಬಂದಿಗಳು ಇದ್ದರೂ ಕೂಡ ತಹಶೀಲ್ದಾರ್ ಅವರು ಕಂದಾಯ ವೃತ್ತಾಧಿಕಾರಿಯವರನ್ನು ತಮ್ಮ ಕಚೇರಿಗೆ ನಿಯೋಜನೆ ಮಾಡುವ ಅಗತ್ಯವಾದರೂ ಏನಿತ್ತು. ಈ ಅಧಿಕಾರಿಯನ್ನು ನಿಯೋಜಿಸಿಕೊಂಡು ಅಕ್ರಮ ವ್ಯವಹಾರಗಳನ್ನು ತಹಶೀಲ್ದಾರ್ರವರು ನಡೆಸುತ್ತಿದ್ದಾರೆಯೇ? ಎಂಬ ಅನುಮಾನಗಳಿವೆ.
ನಮಗೆ ಸರ್ಕಾರದಿಂದ ಆದೇಶವಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಇಲ್ಲದೆ ಇರುವುದರಿಂದ ಕೆ.ಮಾವಿನಹಳ್ಳಿ ಹಾಗು ನಮ್ಮ ಕಂದಾಯ ಗ್ರಾಮಕ್ಕೆ ಸೇರುವ ಹಲವಾರು ಗ್ರಾಮಗಳ ಕಂದಾಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಗ್ರಾಮದ ರೈತರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯ ಬಿಟ್ಟು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ತಮ್ಮ ಭೂ ದಾಖಲೆ ಸೇರಿದಂತೆ ಹಲವು ಕೆಲಸಗಳಿಗಾಗಿ ತುರುವೇಕೆರೆ ಕಚೇರಿಗೆ ಎಡತಾಕಬೇಕಿದೆ. ಆದರೆ ವಯಸ್ಸಾದವರು, ಮಹಿಳೆಯರು ಕತೆ ಹೇಗೆ.
ಈಗ ಪ್ರಭಾರೆಯಾಗಿ ನಿಯುಕ್ತಿಗೊಂಡಿರುವ ಕಂದಾಯ ಆಡಳಿತಾಧಿಕಾರಿ ಮೂರು ವೃತ್ತಗಳಲ್ಲಿ ಕೆಲಸ ಮಾಡುತ್ತಿದ್ದು ರೈತರಿಗೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಆದ್ದರಿಂದ ನಮ್ಮ ವೃತ್ತಕ್ಕೆ ಆದೇಶಗೊಂಡಿರುವ ಮೇಘನಾ ಎಸ್ ಅವರನ್ನು ತಾಲ್ಲೂಕು ಕಚೇರಿಯಿಂದ ಶ್ರೀಘ್ರವೇ ಬಿಡುಗಡೆಗೊಳಿಸಿ ಗ್ರಾಮಕ್ಕೆ ಅನುಕೂಲ ಮಾಡಿಕೊಡಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಲಾಗಿದೆ. ಒಂದು ವೇಳೆ ಗ್ರಾಮದ ಸಮಸ್ಯೆ ಬಗೆಹರಿಯದಿದ್ದರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಚಿಕ್ಕೇಗೌಡ, ಶಿವಣ್ಣ, ನಾಗರಾಜು, ಶಿವರಾಜು, ಯಲ್ಲಯ್ಯ, ರಾಜಣ್ಣ, ರಂಗಪ್ಪ, ನಾಗರಾಜು, ರಾಮಣ್ಣ ಮತ್ತು ಮಂಜುನಾಥ್ರವರು ಮನವಿ ಮಾಡಿದ್ದಾರೆ.

ಕಂದಾಯ ಸಚಿವ ದಿಢೀರ್ ಭೇಟಿ

ತುರುವೇಕೆರೆ: ಪಟ್ಟಣದ ತಾಲ್ಲೂಕು ಕಚೇರಿಗೆ ಕಂದಾಯ ಸಚಿವ ಆರ್.ಕೃಷ್ಣ ಭೈರೇಗೌಡ ಶುಕ್ರವಾರ ದಿಢೀರ್ ಭೇಟಿ ನೀಡಿದ ವೇಳೆ, ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರಿನ ಸುರಿಮಳೆಗರೆದರು.

.ಈ ವೇಳೆ ತಾಲ್ಲೂಕಿನ ಶ್ರೀರಾಂಪುರದ ರೈತ ಗಂಗಯ್ಯ ನಕಾಶೆಯಂತೆ ದಾರಿ ಬಿಡಿಸಿಕೊಡಬೇಕೆಂದು ಅರ್ಜಿ ನೀಡಿದ್ದೆ ಸಮಸ್ಯೆ ಬಗೆಹರಿದಿಲ್ಲ ಎಂದು ಹೇಳಿದ್ದಕ್ಕೆ ಅವರ ಕಡತ ತರಿಸಿಕೊಂಡ ಸಚಿವರು ಅರ್ಜಿ ನೀಡಿ ಎರಡುವಾರವಾದರೂ ಇದಕ್ಕೆ ಏನೂ ಕ್ರಮ ತೆಗೆದುಕೊಂಡಿಲ್ಲ ಏಕೆನಿಮ್ಮಗೆ ಅಕ್ಕ, ತಮ್ಮ, ಅಪ್ಪ, ಅಣ್ಣ ಯಾರೂ ಇಲ್ಲವೇ? ಜನರ ಕಷ್ಟ ಗೊತ್ತಾಗೋದಿಲ್ಲವೇ? ಅವರನ್ನು ಎಷ್ಟು ದಿನ ಕಚೇರಿಗೆ ಅಲೆದಾಡಿಸುತ್ತೀರಿ? ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಹಾಗು ಗ್ರೇಟ್-2 ತಹಶೀಲ್ದಾರ್ ಸುಮತಿ ಅವರನ್ನು ತರಾಟೆಗೆ ತೆಗೆದುಕೊಂಡು ರೈತರ, ಸಾರ್ವಜನಿಕರ ಅರ್ಜಿಗಳಿಗೆ ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ತಾಕೀತು ಮಾಡಿದರು.

‘ನಂತರ ಪತ್ರಕರ್ತರೊಂದಿಗೆ ಮಾತನಾಡಿ, ತುರುವೇಕೆರೆ ಕಂದಾಯ ಇಲಾಖೆಯ ಆಡಳಿತದಲ್ಲಿ ಚುರುಕು ಮೂಡಿಸಲು ಹಾಗೂ ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ವಿಳಂಬಗಳನ್ನು ತಪ್ಪಿಸಲು ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿದ್ದೆನೆ.

ಇದರಿಂದಾಗಿ ಜನರ ಸಮಸ್ಯೆಗಳು ಏನೆಂಬುದು ಅರಿವಾಗಿದೆ. ತಾಲ್ಲೂಕು ಕಚೇರಿಯಲ್ಲಿ ರೈತರ ಸಮಸ್ಯೆಗಳು ಸಾಕಷ್ಟಿದ್ದು ಅವುಗಳನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಇದರಿಂದ ಜನರಿಗೆ ತೊಂದರೆಗಳಾಗುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂತವುಗಳನ್ನು ತಪ್ಪಿಸಲು ಹಾಗು ಆಡಳಿತದಲ್ಲಿ ಬಿಗಿಗೊಳಿಸಲು ಇಂತಹ ಬೇಟೆಗಳು ಅನಿವಾರ್ಯವಾಗಿದೆ.

ಇಲ್ಲಿ ಒಬ್ಬೊಬ್ಬರಿಗೆ ನ್ಯಾಯ ಕೊಡಿಸುವುದು ಮುಖ್ಯ ಅಲ್ಲ. ಎಲ್ಲರ ಕೆಲಸ ಕಾರ್ಯಗಳು ಆಗಬೇಕು. ಒಟ್ಟಾರೆ ಇಡೀ ಕಂದಾಯ ಇಲಾಖೆಯ ಆಡಳಿತ ವ್ಯವಸ್ಥೆ ಸರಿಯಾಗಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕು ಅಷ್ಟೇ ಎಂದರು.’

‘ತಾಲ್ಲೂಕು ಕಚೇರಿಯಲ್ಲಿ ಬಲಾಡ್ಯರಿಗೆ ಹಾಗೂ ಹಣವಂತರಿಗೆ ಬಗರ್ ಹುಕುಂ ಜಮೀನುಗಳನ್ನು ಅಧಿಕಾರಿಗಳು ಮಂಜೂರು ಮಾಡಿಕೊಟ್ಟಿದ್ದಾರೆ ಹಾಗೂ ಕಳೆದ 15-20 ವರ್ಷದಿಂದ ಸಾಗುವಳಿ ಮಾಡುವ ರೈತರಿಗೆ ಮಂಜೂರು ಚೀಟಿ ನೀಡದೇ ಅಧಿಕಾರಿಗಳು ಸತಾಯಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಬಗರ್ ಹುಕುಂ ಅರ್ಜಿಗಳು ಪೆಂಡಿಂಗ್ ಇರುವುದನ್ನು ಬೇಗ ವಿಲೇವಾರಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ತಾಲ್ಲೂಕು ಶಿರಸ್ಥೆದಾರ್ ಸುನಿಲ್ ಕುಮಾರ್, ತಾಲ್ಲೂಕು ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜ್ , ಮುಖಂಡರಾದ ಟಿ.ಎನ್.ಶಿವರಾಜು ಮತ್ತು ರೈತರು ಉಪಸ್ಥಿತರಿದ್ದರು.

17ಕ್ಕೆ ವಿದ್ಯುತ್ ವ್ಯತ್ಯಯ: ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ತಂಡಗ ಕೆಪಿಟಿಸಿಎಲ್ 110/11 ಕೆವಿ ಉಪಕೇಂದ್ರದಿಂದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ನ.17ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್ ತಿಳಿಸಿದರು.
ತಾಲ್ಲೂಕಿನ ತಂಡಗ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲ ಫೀಡರ್ ಗಳಿಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಒಂದು ವೇಳೆ ಕಾಮಗಾರಿ ಈ ಅವಧಿಗಿಂತ ಮುಂಚಿತವಾಗಿ ಮುಗಿದಲ್ಲಿ ಆ ತಕ್ಷಣವೇ ವಿದ್ಯುತ್ ನೀಡಲಾಗುವುದು ಆದ್ದರಿಂದ ಗ್ರಾಹಕರು ಸಹಕರಿಸಬೇಕೆಂದು ಕೋರಿದ್ದಾರೆ.
.

ಜನರೊಂದಿಗೆ ನಾನು: ಶಾಸಕ ಕೃಷ್ಣಪ್ಪ ಭರವಸೆ

0

ತುರುವೇಕೆರೆ:
ಜಿಲ್ಲಾ ಆಡಳಿತ ಹಾಗು ಜಿಲ್ಲಾ ಪಂಚಾಯಿತ್ ತುಮಕೂರು ವತಿಯಿಂದ ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಅಡಿಷನಲ್ ಡೆಫ್ಯೂಟಿ ಕಮಿಷನರ್ ಶಿವಾನಂದಕರಾಳೆ ಅವರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.


ಇದಕ್ಕೂ ಮುನ್ನ ಶಾಸಕ ಎಂ,ಟಿ.ಕೃಷ್ಣಪ್ಪ ಮಾತನಾಡಿ, ರೈತರು ತಮ್ಮ ಭೂದಾಖಲೆ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳ ಬಳಿ ಎಡತಾಕಿ ಹತಾಶರಾಗಿದ್ದಾರೆ.‌ ಹಾಗಾಗಿ ಇಂದಿನ ಕಾರ್ಯಕ್ರಮದಿಂದ ಕೊಂಚ ನಿಟ್ಟುಸಿರುಬಿಡುವಂತಾಗಿದೆ ಎಂದರು.


ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಅವರೆಲ್ಲ ಸ್ವಲ್ಪ ಮೈಚಳಿ ಬಿಟ್ಟು ಕೆಲಸ ಮಾಡಿದರೆ ಸಾರ್ವಜನಿಕರು ನೆಮ್ಮಂದಿಯಿಂದ ಜೀವನ ಮಾಡಲು ಸಾದ್ಯವಾಗುತ್ತದೆ. ಆದ್ದರಿಂದ ಕ್ಷೇತ್ರದ ಜನತೆ ತಮ್ಮ ಏನೇ ಸಮಸ್ಯೆಗಳಿದ್ದರೂ ಇಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳಿದ್ದಾರೆ ಅವರಿಗೆ ಮನವಿ ಕೊಡಿ, ನಾನು ನಿಮ್ಮ ಜೊತೆ ಇರುತ್ತೇನೆ ನಿಮ್ಮ ಕೆಲಸ ಬೇಗ ಆಗುತ್ತವೆ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.


ಅಧಿಕಾರಿಗಳು ಕಾನೂನು ಮೀರಿ ಕೆಲಸ ಮಾಡಿ ಎಂದು ನಾನು ಹೇಳುವುದಿಲ್ಲ. ತಾಲ್ಲೂಕಿನಲ್ಲಿ ತಹಶೀಲ್ದಾರ್, ಇ.ಒ ಮತ್ತು ಪೊಲೀಸ್ ಇಲಾಖೆ ತಮ್ಮ ಪಾಲಿನ ಕೆಲಸಗಳನ್ನು ಪ್ರಾಮಾಣಿಕತೆ ಹಾಗು ಬದ್ಧತೆಯಿಂದ ಕೆಲಸ ಮಾಡಿದರೆ ಶಾಸಕರಿಗೆ ಏನೂ ಕೆಲಸ ಇರೋದಿಲ್ಲ. ಜನರ ಸಮಸ್ಯೆಗಳಿಗೆ ಯಾವುದೇ ಅಧಿಕಾರಿ ತಕ್ಷಣ ಸ್ಪಂದಿಸಿ ಕೆಲಸ ಮಾಡಿದರೆ ರೈತರು ಕೊನೆಗಂಟ ಆ ಅಧಿಕಾರಿಗಳನ್ನು ನೆನೆಯುತ್ತಾರೆ ಎಂದರು.
ಇದೇ ವೇಳೆ ಕೆ.ಮಾವಿನಹಳ್ಳಿ ವೃತ್ತಕ್ಕೆ ಗ್ರಾಮಾಡಾಳಿತಾಧಿಕಾರಿ ನೇಮಿಸುವುದು, ಕಂದಾಯ ಇಲಾಖೆಗೆ 124, ತಾಲ್ಲೂಕು ಪಂಚಾಯಿತಿಗೆ 23, ಪಟ್ಟಣ ಪಂಚಾಯಿತಿ 8, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2, ಸಮಾಜ ಕಲ್ಯಾಣ ಇಲಾಖೆ 2, ಪೊಲೀಸ್ ಇಲಾಖೆ 3, ಆರೋಗ್ಯ ಇಲಾಖೆ 2, ಜಿಲ್ಲಾ ಪಂಚಾಯಿತಿ 2, ಲೋಕೋಪಯೋಗಿ ಇಲಾಖೆ1, ಗ್ರಾಮೀಣ ಕುಡಿಯುವ ನೀರಿನ ಇಲಾಖೆ 3, ಭೂಮಾಪನ ಇಲಾಖೆ 3, ಬೆಸ್ಕಾಂ 7, ಕೃಷಿ 1, ಅರಣ್ಯ ಇಲಾಖೆ 2 ಸೇರಿದಂತೆ ಒಟ್ಟು 183 ಅರ್ಜಿ ಸ್ವೀಕೃತವಾಗಿವೆ.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ತುಮಕೂರು ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿ ಮಂಜುನಾಥ್, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಇ.ಒ ಶಿವರಾಜಯ್ಯ, ಶಿರಸ್ಥೆದಾರ್ ಡಿ.ಆರ್.ಸುನಿಲ್ ಕುಮಾರ್, ಗ್ರೇಟ್-2 ತಹಶೀಲ್ದಾರ್ ಬಿ.ಸಿ.ಸುಮತಿ, ತೋಟಗಾರಿಕೆ ಇಲಾಖೆಯ ಆಂಜನೇಯರೆಡ್ಡಿ, ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್, ಬಿಇಒ ಸೋಮಶೇಖರ್, ಕಂದಾಯ ಇಲಾಖೆಯ ವತ್ಸಲಾ, ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಒಂದು ಕ್ಷಣ…ಮಾಯಾಲೋಕ

ತುರುವೇಕೆರೆ: ‘ಮಕ್ಕಳು ತಮ್ಮ ಪಾತ್ರಗಳಿಗೆ ತಾವೇ ಬಣ್ಣ ಹಚ್ಚಿ, ವೇಷ ಭೂಷಣ, ಆಭರಣ ತೊಟ್ಟು, ಕತ್ತಿ, ಗದೆ, ತ್ರಿಷೂಲ, ಬಿಲ್ಲು, ಬಾಣ ತಯಾರಿಸಿ ವೃತ್ತಿಪರ ಕಲಾವಿದರನ್ನೂ, ನೋಡುಗರನ್ನೂ ಹುಬ್ಬೇರುವಂತೆ ಮಾಡಿ ಜಾನಪದ ಉತ್ಸವದಂತೆ ಕಂಡು ಬಂದಿತು.

ಹೀಗೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗು ಪಟ್ಟಣದ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪಟ್ಟಣದ ಜಿಜೆಸಿ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದು ಅವರಲ್ಲಿರುವ ವಿಶಿಷ್ಟವಾದ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ ಎಂದರು.

ಪ್ರತಿಭಾಕಾರಂಜಿಯಲ್ಲಿ ಸ್ಪಧರ್ಿಸುವ ಮಕ್ಕಳಲ್ಲಿ ಪಕ್ಷಪಾತ ಮಾಡದೇ ಯಾರು ಅರ್ಹ ಪ್ರತಿಭಾವಂತನಿದ್ದಾರೆ ಆ ವಿದ್ಯಾರ್ಥಿಯನ್ನು ಹುಡುಕಿ ಜಿಲ್ಲಾ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕಳುಹಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಮಾತನಾಡಿ ನಮ್ಮ ನಾಡು ಸಾಂಸ್ಕೃತಿಕವಾಗಿ ವೈವಿಧ್ಯವಾಗಿದೆ ಅದೇ ರೀತಿ ಮಕ್ಕಳಲ್ಲಿಯೂ ಬಗೆಬಗೆಯ ಕೌಶಲ್ಯಗಳಿವೆ. ಅಂತಹ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಕಲೋತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಮಕ್ಕಳು ಪಠ್ಯ ವಿಷಯದ ಜೊತೆ ಜೊತೆಯಲ್ಲೇ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ವೃದ್ದಿಸಿಕೊಳ್ಳ ಬೇಕು. ಇದಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.


ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ನಾನು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಟಿದ ಮಕ್ಕಳೊಂದಿಗೆ ಸಂವಾದ ಮಾಡುವಾಗ ಅವರುಗಳು ಉತ್ತರಿಸುತ್ತಿದ್ದ ರೀತಿಯನ್ನು ನೋಡಿದರೆ ಯಾವುದೇ ಖಾಸಗಿ ಶಾಲೆಗಳಿಗೆ ನಾವೇನು ಕಡಿಮೆ ಇದ್ದೇವೆ ಎನ್ನುವ ರೀತಿ ಇತ್ತು ಎಂದರಲ್ಲದೆ ಜಿಲ್ಲಾ ಮಟ್ಟಕ್ಕೆ ಕ್ರಿಯಾಶೀಲ ಮಕ್ಕಳನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಕಿವಿ ಮಾತು ಹೇಳಿದರು.


ಕನಕದಾಸ, ಶಾರದೆ, ಪರಿಸರ ಜಾಗೃತಿ, ಒನಕೆ ಓಬವ್ವ, ಭದ್ರಕಾಳಿ, ಎಡೆಯೂರು ಸಿದ್ದಲಿಂಗೇಶ್ವರ ಛದ್ಮ ವೇಷ, ವೀರಗಾಸೆ ಕುಣಿತ, ಧ್ವಜಕುಣಿತ, ವಿಜ್ಞಾನ ಮಾದರಿ, ಕ್ಲೈ ಮಾಡೆಲಿಂಗ್, ಸೋಮನ ಕುಣಿತ ಹಾಗು ಜಾನಪದ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಿತು.


ತಾಲ್ಲೂಕು ಮಟ್ಟದಲ್ಲಿ ಪ್ರಥಮಸ್ಥಾನ ಪಡೆದ 5 ರಿಂದ 12 ನೇತರಗತಿ ವರೆಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಎಲ್ಲ ಶಾಲೆಗಳ ಮಕ್ಕಳು, ಗ್ರಾಮಸ್ಥರು, ಪೋಷಕರು, ಕಲೋತ್ಸವದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.


ಸಮಾರಂಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮುನಿಯೂರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಷಣ್ಮುಖಪ್ಪ, ಅಕ್ಷರ ದಾಸೋಹದ ಪ್ರಭಾರೆ ನಿರ್ದೇಶಕ ರವಿಕುಮಾರ್, ಇಸಿಒ ಸಿದ್ದಪ್ಪ, ಸಿಆರ್.ಪಿ, ಆರ್.ಪಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಕಥೆ: ನನ್ನ, ಅವಳ ಹಿಂದಿನ ಕಥೆ

ಪ್ರೀತಿಯ ಮನು.

ನನಗೊತ್ತೋ…!? ನಿನ್ನ ಅಂಕಣಕ್ಕೆ ರಕ್ತವನ್ನು ಪಂಪು ಮಾಡುವ ಆ ಕೊನೆ ನಾಡಿ ಮಿಡಿತವನ್ನು ಕಿತ್ತು ನಾನು ನೋಡಿದ್ದೇನೆ. ಆ ನಿನ್ನ ರಕ್ತದ ಒಂದೊಂದು ಎಲುಬುಗಳಂತಹ ಗಾಳೀ ಮಾತುಗಳನ್ನು ನಾನು ಕಂಡಿದ್ದೇನೆ. ಎಲ್ಲರೂ ಹಾಗೆ ಕಣೋ. At Least ಕೊನೆಗೆ ನಾನು ಸಹ…

ನಿನಗೆ ಗೊತ್ತಾ!? ಆವೊತ್ತು ನಾನು ನೀನು…. ರವಿ ಆ ಸಾಯಂಕಾಲದ ಪಾರ್ಕಿನ ಇಟ್ಟಿಗೆಯ ಸೇತುವೆಯ ಕೊನೆ ಅಂಚಿಗೆ ಕೂತಕೊಂಡು ಮೋಡದ ಚಿತ್ತಾರವನ್ನು ಕಂಡಿದ್ದು ನಿನಗೆ ಗೊತ್ತಾ? ಅವೊತ್ತೆ ಕಣೋ ನಾನು ನೀರಾಗಿದ್ದು, ನಿನ್ನ ಒಂದು ರಕ್ತದ ಕಣದಲ್ಲಿ ಅವಳು ಸೇರಿದ್ದಾಳೆ ಅಂತಾ ಗೊತ್ತಾದ ಕ್ಷಣ ಸುಸ್ತು ಹೊಡೆದಿದ್ದೆ. ನನ್ನಾಣೆಗೂ ಆ ‘ನಿರಂಜನ’ನ ಕಥೆ ಮಗ್ಗುಲಿಗೆ ಹೋದವನು ವಾಪಸ್ಸು ಅಷ್ಟೇ ವೇಗವಾಗಿ ಹಿಂದುರುಗಿ ನಿನ್ನ ಬದಿಗೆ ಒತ್ತರಿಸಿಕೊಂಡು ಕೂತೆ. ಆ ನಿನ್ನ ಕಣ್ಣಗಳ ಅತ್ತು ಬಿಂದುವನ್ನು ನೋಡಲೇಬೇಕೆಂಬ ಹುಚ್ಚು ತನವಕ ಶುರುವಾಗಿದ್ದು, ಆ ಕ್ಷಣದಿಂದಲೇ…

ಕ್ಷಮಿಸು ಮನು! ಆ ನಿನ್ನ ಕಥೆಗಳನೆಲ್ಲ ಓದುತ್ತಿರುವ ‘ಅವಳ’ ಮಾವನಿಗೆ ಅವೆಲ್ಲವೂ ನಿಜ ಎಂದೂ ಯಾವತ್ತಿನ ಕ್ಷಣಕ್ಕೆ ಗೊತ್ತಾಗುವುದೋ ಎಂದು ನಾನು ಸಹ ನಿನ್ನಷ್ಟೇ ಕಾತುರದಿಂದ ಕಾಯುತ್ತಿದ್ದೇನೆ. ಆ ಹಸಿರು ಗಿಣಿಯ ಕೊಂಕಿನ ಮೇಲಾಣೆ, ಆ ನಿನ್ನ ಪವಿತ್ರಪ್ರೀತಿ, ಒಂದು ಕಾಮುಕ ಹೆಣ್ಣಿನ ಬಯಕೆಯೊಂದಿಗೆ ಆಚೆ ನಡೆಯಿತು ಎಂಬುದು,

ಈ ಜಗತ್ತಿಗೆ ಸರಿಯಾಗಿ ಅರ್ಥ ಆಗಿದ್ದರೆ ನಿನ್ನ

ಪ್ರೇಮ ಕಥೆಗಳಿಗೆ ಪುಲ್ ಸ್ಟಾಪ್ ಇರುತ್ತಿತ್ತು. ಮಿತ್ರ ಮನು, ನನಗೂ ಒಂದು ನಿನ್ನಂತೆ ಕಿರು ಆಸೆ ಕಣೋ, ನನ್ನ ಮಿತ್ರ ಒಂದು ಹೆಣ್ಣಿನ ನಗುವಿಗೆ ಶರಣಾಗಲಾರ ಎಂಬ ಕಿರು ಆಸೆ. ನಿನಗೆ ಗೊತ್ತಾ, ಆವೊತ್ತು ನೀನು ಸಂಜೆಯ ಮೋಡದ ನಗುವಿನೊಳಗೆ ‘ಅವಳ’ ನಗು ಕಂಡೆ ಎಂದಾಗ ನನ್ನ ಪ್ರಾಣ ಪಕ್ಕದ ಮರದ ಟೊಂಗೆಗೆ ನೇತು ಹಾಕಿಕೊಂಡಂತೆ ಆಯಿತು.

ನಾನೂ, ನಿನ್ನಂತೆ ಒಬ್ಬಳನ್ನು ಪ್ರೇಮಿಸಿದೆ. ನಿನ್ನವಳು ಬರೆದಂತೆ ಅವಳು

ಬರೆದಿದ್ದಳು. ಅದರೊಳಗೆ ಪ್ರೀತಿಯ ಕಿರುಬಗಳಿಗೆ ಪ್ರೀತಿ ಅನ್ನೋದು ಅರ್ಥವಾಗಲ್ಲ ಕಣೋ… ನಾವೇನಿದ್ದರೂ ಬರೀ ಮನಸ್ಸುಗಳಲ್ಲೇ ಮಾತಾಡಿ ಕೊಳ್ಳೋಣ. ಪ್ರೇಮಿಸಿಕೊಳ್ಳೋಣ ಎಂದಿದ್ದಳು.

ನನ್ನ ಅವಳ ಹಿಂದಿನ ಕಥೆ…

ಮನು ಇಂಥಾ ಕಥೆ ನಿನಗೂ ಬೇಕಾ?… At Least ಅವಳಿಗೋಸ್ಕರ ನೀನು ನಿನ್ನ ಸರ್ವಸ್ವವನ್ನು ತ್ಯಾಗ ಮಾಡಲಿಕ್ಕೂ ಸಿದ್ಧವಿದ್ದೀಯಾ ಎಂಬ ಮಾತು ಅವೊತ್ತು ಕಪಾಳಕ್ಕೆ ಒಡೆದ ಸದ್ದಿನಂತೆ ನಾಟಿತು. ‘ಹೆಂಗಸರೆಂದರೆ ನೀನು ಏನು ತಿಳಿದಿದ್ದಿ? Ladies Only Expect the securty of their Life. In front of that an the Love, Emotion feelings are nothing to them, ಬೇಡ ಮನು ‘ಅವಳು ಬರೀ ಸೆಕ್ಸ್ ಗೋಸ್ಕರ ಬದುಕೋಳು ಅವಳಿಗೆ ಸೆಕ್ಸ್ ನ ಕೆಳಗೆ ಒಂದು ವಿಶಾಲ ಅಂತಸ್ತಿರಬೇಕು. ಒಂದು ಭದ್ರತೆಯ ಪದ ನಾಟಿರಬೇಕು.

ಒಂದು ಮಾತು ನೀನು ಜೋಪಾನದಲ್ಲಿರಿಸಿಕೋ, ಒಂದು ಹುಡುಗಿಯ ಹಿಂದೆ ನಿನ್ನ ಕಥೆಯನ್ನು ಸಂಪೂರ್ಣಗೊಳಿಸುತ್ತಿ ಎಂದಾದರೆ ನನಗೆ ನಿನ್ನ ಕಥೆಗಳೇ ಬೇಡ, ಅವೆಲ್ಲವೂ ಕೇವಲ ನೀರು ಕಾಯಿಸಿಕೊಂಡು ಕುಡಿಯಲು ಯೋಗ್ಯವಾದವುಗಳೇ ಹೊರತು ಜೋಪಾನವಾಗಿ ಕಪಾಟಿನೊಳಗೆ ಸೇರಿಸಿಕೊಳ್ಳುವಂತವಲ್ಲ.

ಮನು! ನಿನ್ನಂಗೆ ಸಾವಿರಾರು ಜನ ಮಂಕಣ್ಣಿಗಳು ಕಾಲೇಜ್ ಓದಿದ್ದಾರೆ. ಅವರೆಲ್ಲರ ಬಾಳು ಒಂದು ಹುಡುಗಿಯ ಹಿಂದೆ ಅಲೆದಾಡಿದೆ ಎಂದಾದರೆ ಅದು ನಿಜಕ್ಕೂ ಪ್ರೇಮವಲ್ಲ ಜಸ್ಟ್ ಸೆಕ್ಸ್?

ಆವೊತ್ತಿನ ಕಾಲೇಜಿನ ದಿನದಲ್ಲಿ ನಿನ್ನ ‘ಅವಳು ನಕ್ಕಾಗ ನಾನು ನಿನ್ನ ಪಕ್ಕದಲ್ಲಿ ನಿಂತಿದ್ದೆ. ಅವಳ ಮಾವ ನನ್ನ ಪಕ್ಕದಲ್ಲೇ…. ನೀನು ಆವೊತ್ತು ಹೃದಯದಲ್ಲಿ ನಕ್ಕೆ…. ನಾನು ಮತ್ತು ಅವಳ ಮಾವ ನಿಮ್ಮಿಬ್ಬರನ್ನು ನೋಡಿ ನಕ್ಕಿದ್ದೆವು. ನಿಮ್ಮಿಂದೇ ಈ ಜನ…. ಕೊನೆಗೆ ಗೊತ್ತಿಲ್ಲದಂತೆ ಅವಳೂ ನಮ್ಮ ಹಿಂದೆ ಸೇರಿದ್ದಳು.

ಮನು! ನಿನಗೋಸ್ಕರ ಈ ಜಗತ್ತು ಕಾಯುತ್ತಿದೆ. ನಿಜವಾದ ಪ್ರೀತಿ ಪ್ರೇಮ ಕತ್ತಲೆಯ ಕಡೆಗಲ್ಲ… ಬೆಳಕಿನೆಡೆಗೆ, ಸಹಸ್ರಾರು ಜನರ ಹೃದಯಗಳು ಸಿಡಿಯುತ್ತಿವೆ. ಆ ಕಡೆಗೆ ನಿನ್ನ ಪ್ರೀತಿ ಹರಿದು ಬರಲಿ, ಅದರ ಬದಲು ನೀತಿ ಹೇಳಿದಂತೆ ನಿನ್ನ ಅವಳ ಹಿಂದಲ್ಲ ನಿನ್ನ ಬದುಕು. ಆವಳ ಮಾನವ ಉದ್ರೇಕದ ಮುಂದಲ್ಲ ನಿನ್ನ ಸಿಟ್ಟು ಸೆಡವು. ಅದೇನಿದ್ದರೂ ‘ಒಬ್ಬ ಹೆಳವ ಅಸಹಾಯಕ ತೋರಿಸುವ ಮೈ ಪರಚುವ ಕ್ರಿಯೆ’ ಅದರಾಚೆಗಿನ ಬೆಳಕಿನಲ್ಲಿ ನೀನು ನಿನ್ನತನವನ್ನು ನಿನ್ನ ಪ್ರೀತಿಯನ್ನು ನಿನ್ನ ಹೃದಯವನ್ನು ತೆರೆದಿಡು, ಅಲ್ಲಿ ಅವಳು’ ನಿಂತಿಲ್ಲ… ಆವಳಂತೆ ಸರದಿಗಾಗಿ ಕಾದು ನಿಂತ ಸಹಸ್ರಾರು ಮುಖಗಳು. ಅವಕ್ಕೊಂಚೂರು ಪ್ರೀತಿ, ಅದೇ ನಿಜವಾದ ಬದುಕು.


ಲೋಕಸಭೆಗೆ ಸೈ ಎಂದ ಕೆ.ಎನ್.ರಾಜಣ್ಣ

ತುಮಕೂರು: ನಾನು ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಇಚ್ಚಿಸಿದ್ದೇನೆ. ಲೋಕಸಭೆಯನ್ನು ಒಮ್ಮೆ ನೋಡುವ ಆಸೆಯಿದೆ. ಹೈಕಮಾಂಡ್ ಒಪ್ಪಿ ಟಿಕೇಟ್ ನೀಡದರೆ ಸ್ಪರ್ಧಿಸುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಂಗಿತ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಬರುವ ಬಗ್ಗೆ ನನ್ನ ಬಳಿಯೂ ಕೆಲವರು ಚರ್ಚೆ ನಡೆಸಿದ್ದಾರೆ. ಹಾಗೆಯೇ ಡಾ.ಜಿ.ಪರಮೇಶ್ವರ್ ಹತ್ತಿರವೂ ಕೆಲವರು ಪ್ರಾಸ್ತಾಪಿಸಿದ್ದಾರೆ ಎನ್ನಲಾಗಿದೆ ಎಂದರು.

ತುಮಕೂರು ಗ್ರಾಮಾಂತರ ಕ್ಷತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಸೇರುವ ವಿಚಾರ ಗೊತ್ತಿಲ್ಲ. ಐದು ರಾಜ್ಯಗಳ ಚುನಾವಣೆ ನಂತರ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ತಳಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಬೇಕಿದೆ. ಒಂದೇ ಮನೆಯಲ್ಲಿ ನಾನು ಎಂ.ಎಲ್.ಎ, ನನ್ನ ಮಗ ಎಂ.ಎಲ್.ಸಿ.ಅನ್ನುವ ತರ ಆಗಬಾರದು. ದ್ವನಿ ಇಲ್ಲದ ಸಮುದಾಯಗಳ ಕಥೆ ಏನು?.ಸಣ್ಣ ಪುಟ್ಟ ಸಮುದಾಯಗಳಿಗೆ ಅಧಿಕಾರ ಸಿಕ್ಕರೆ ಮಾತ್ರ ಸಾಮಾಜಿಕ ನ್ಯಾಯಕ್ಕೆ ಒಂದು ಬೆಲೆ. ಇಲ್ಲದಿದ್ದರೆ ಅದು ಪುಸ್ತಕಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.

ಶೀಘ್ರದಲ್ಲಿಯೇ ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಲಿದೆ. ಅದನ್ನು ಸಾರ್ವಜನಿಕರ ಚರ್ಚೆಗೆ ಬಿಡಲಾಗುವುದು. ಅಲ್ಲಿ ಬರುವ ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ, ಯಾವುದನ್ನು ಬಿಡಬೇಕು. ಯಾವುದನ್ನು ತೆಗೆದುಕೊಳ್ಳಬೇಕು ಎಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾಣ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವರದಿ ಬಂದಾಕ್ಷಣ ಒಪ್ಪಬೇಕೆಂಬ ನಿಯಮವಿಲ್ಲ. ಬಿಹಾರದಲ್ಲಿ ಬಿಡುಗಡೆಯಾಯಿತು. ಯಾವ ಜನರಿಗೆ ತೊಂದರೆಯಾಯಿತು. ಹಾಗಾಗಿ ಕಾಂತರಾಜು ವರದಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ವರದಿ ಸಾರ್ವಜನಿಕ ಚರ್ಚೆಗೆ ಬರದೆ ಅದು ಸರಿಯಿಲ್ಲ. ಇದು ಸರಿಯಿಲ್ಲ ಎಂದು ಹೇಳುವುದು ನ್ಯಾಯವಲ್ಲ. ಮೊದಲು ವರದಿಯನ್ನು ಓದಿ ನಂತರ ಅದನ್ನು ಒಪ್ಪಿಕೊಳ್ಳುವುದು ಬಿಡುವುದರ ಬಗ್ಗೆ ಚರ್ಚೆ ನಡೆಸೋಣ ಎಂದು ಸಲಹೆ ನೀಡಿದರು.

ದಬ್ಬೇಘಟ್ಟ ಜನರ ಕನಸು ನನಸು ಮಾಡಿದ ಶಾಸಕ ಕೃಷ್ಣಪ್ಪ

0

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಗೇಟ್ ಬಳಿ ಸುಮಾರು 19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಶನಿವಾರ ಚಾಲನೆ ನೀಡಿದರು. ಇದರಿಂದ ಗ್ರಾಮಸ್ಥರಲ್ಲಿ ಸಂತಸ ವ್ಯಕ್ತವಾಗಿದೆ.

ಈ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಇಲ್ಲಿನ ಏತ ನೀರಾವರಿ ಯೋಜನೆಯಿಂದ ವಿಠಲದೇವರಹಳ್ಳಿ ಮಾರ್ಗದಲ್ಲಿ ಸುಮಾರು 29 ಕೆರೆಗಳಿಗೆ ಹೇಮಾವತಿ ನೀರು ಸರಾಗವಾಗಿ ಹರಿಯಲಿದೆ. ದಬ್ಬೇಘಟ್ಟ ಹೋಬಳಿ ಹಿಂದಿನಿಂದಲೂ ನೀರಾವರಿಯಿಂದ ವಂಚಿತವಾಗುವ ಪ್ರದೇಶವಾಗಿದ್ದು ರೈತರು ತಮ್ಮ ಬೆಳೆಗಳು ಓಣಗದಂತೆ ಕಾಪಾಡಲು ಹರಸಾಹಸ ಪಡುತ್ತಾ ಬಂದಿದ್ದಾರೆ.
ಈ ಭಾಗದ ರೈತರುಗಳ ಸಂಕಷ್ಟ ಅರಿತೇ ಹೇಮಾವತಿ ನಾಲಾ ನೀರನ್ನು ದಬ್ಬೇಘಟ್ಟ ಹೋಬಳಿಯ ಎಲ್ಲಾ ಕೆರೆಕಟ್ಟೆಗಳಿಗೂ ಸರಾಗವಾಗಿ ಹರಿಸುವ ಕಾರ್ಯ ಕೈಗೂಡಲುವ ಸನಿಯದಲ್ಲಿದ್ದೇವೆ. ಈ ಮೂಲಕ ದಬ್ಬೇಘಟ್ಟ ಹೋಬಳಿಯ ಜನತೆಯ ಬಹು ದಿನಗಳ ಕನಸು ನನಸಾಗಲಿದೆ.

ಈ ಹಿಂದೆ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡನೇ ಹಂತದ ದಬ್ಬೇಘಟ್ಟ, ಬಾಣಸಂದ್ರ, ಢಣನಾಯಕನಪುರ ಏತ ನೀರಾವರಿ ಯೋಜನೆಗೆ ಅಂಕಿತ ಹಾಕಿದ್ದರು. ಹಿಂದಿನ ಬಿಜೆಪಿ ಸರ್ಕಾರವು ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ 19 ಕೋಟಿ ಹಣ ಬಿಡುಗಡೆ ಮಾಡಿತ್ತು. ಮತ್ತೆ ಇದೇ ಯೋಜನೆಗೆ 30 ಕೋಟಿ ಬಿಡುಗಡೆಯಾಗಲಿದೆ.
ಈ ಹಿಂದೆ ಮೊದಲ ಹಂತದಲ್ಲಿ ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಂದು ಮತ್ತೊಂದು ಹಂತದ ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದ ದಬ್ಬೇಘಟ್ಟ ಏತ ನೀರಾವರಿ ಯೋಜನೆ ಶೀಘ್ರ ಚಾಲನೆಯಾಗಲಿದೆ ಅದರೊಂದಿಗೆ ಬಹುತೇಕ ಹೋಬಳಿಯ ಜಲಕ್ಷಾಮ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಗ್ರಾಮಪಂಚಾಯಿತಿ ಅಧ್ಯಕ್ಷೆ ರೂಪಾಜವರಪ್ಪ, ಎ.ಇ. ಮಧುಸೂಧನ್, ಮುಖಂಡರಾದ ದೇವರಾಜು, ನಂಜುಂಡಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಎಚ್.ಎಸ್.ನಾಗರಾಜು, ಬೋರೇಗೌಡ, ಸಂಗಲಾಪುರ ಶಂಕರಣ್ಣ, ತ್ಯಾಗರಾಜು ,ಹರಿದಾಸನಹಳ್ಳಿ ಶಶಿಧರ, ರಾಘು, ಸೇರಿದಂತೆ ಅನೇಕ ಮುಖಂಡರುಗಳು ಇದ್ದರು.

ತಿಗಳ ಸಮುದಾಯಕ್ಕೆ ನೆರವು

ಗುಬ್ಬಿ: ತಿಗಳ ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕರ್ನಾಟಕ ತಿಗಳರ ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ತಿಸಿದರು.
ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ತಿಗಳರ ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘದ ಬೆಂಗಳೂರು ಮತ್ತು ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘ ಗುಬ್ಬಿ ಇವರ ಸಹಯೋಗದಲ್ಲಿ 2023 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಜನಾಂಗದ ತುಮಕೂರು, ಹಾಸನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾತನಾಡಿದರು.
ತಿಗಳ ಸಮುದಾಯವು ವಿದ್ಯಾಭ್ಯಾಸವನ್ನು ಕೃಷಿಯಲ್ಲಿ ಸಾಧನೆ ಮಾಡಿದಂತೆ ತಮ್ಮ ಮಕ್ಕಳಿಗೆ ವಿದ್ಯೆಯನ್ನು ಕೋಡಿಸಲು ಗುರಿಯನ್ನು ಇಟ್ಟುಕೊಂಡು ವಿದ್ಯೆ ಅಭ್ಯಾಸ ಮಾಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅಗ್ನಿವಂಶ ಕ್ಷತ್ರಿಯ ವಿದ್ಯಾ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಣ್ಣ ಮಾತನಾಡಿ,
ಸಮುದಾಯದಲ್ಲಿಉತ್ತಮ ವಿದ್ಯಾಭ್ಯಾಸವನ್ನು ಮಾಡುವ ಮೂಲಕ ಸಮಾಜ ದಕ್ಕೆ ಹೆಸರು ಬರುವಂತೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಉನ್ನತ ಹುದ್ದೆಗಳನ್ನು ಅಲಂಕರಿಸಿದ ನಂತರ ತಮಗೆ ಸಹಾಯ ನೀಡಿದಂತಹ ಸಮಾಜದ ಸಂಘ ಸಂಸ್ಥೆಗಳ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 45 ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ರೇವಣ್ಣಸಿದ್ದಯ್ಯ, ಕಾರ್ಯದರ್ಶಿ ಕೆಂಪಯ್ಯ, ಶ್ರೀಕಾಂತ್, ಅನಂತಕೃಷ್ಣ, ಲಕ್ಷ್ಮಣ್, ದಾಸಪ್ಪ, ಸಿದ್ದಯ್ಯ, ಬೆ.ಗ್ರಾಂ ಜಿಲ್ಲೆಯ ರವಿ, ನಂಜೇಗೌಡ, ನಿರ್ದೇಶಕರಾದ ಲೋಕೇಶ್ ಬಾಬು, ಕುಂಬಯ್ಯ, ಮಲ್ಲಪ್ಪ, ಯೋಗಾನಂದ, ನಾಗರಾಜು, ಇತರರು ಇದ್ದರು