ಪ್ರೀತಿಯ ಮನು.
ನನಗೊತ್ತೋ…!? ನಿನ್ನ ಅಂಕಣಕ್ಕೆ ರಕ್ತವನ್ನು ಪಂಪು ಮಾಡುವ ಆ ಕೊನೆ ನಾಡಿ ಮಿಡಿತವನ್ನು ಕಿತ್ತು ನಾನು ನೋಡಿದ್ದೇನೆ. ಆ ನಿನ್ನ ರಕ್ತದ ಒಂದೊಂದು ಎಲುಬುಗಳಂತಹ ಗಾಳೀ ಮಾತುಗಳನ್ನು ನಾನು ಕಂಡಿದ್ದೇನೆ. ಎಲ್ಲರೂ ಹಾಗೆ ಕಣೋ. At Least ಕೊನೆಗೆ ನಾನು ಸಹ…
ನಿನಗೆ ಗೊತ್ತಾ!? ಆವೊತ್ತು ನಾನು ನೀನು…. ರವಿ ಆ ಸಾಯಂಕಾಲದ ಪಾರ್ಕಿನ ಇಟ್ಟಿಗೆಯ ಸೇತುವೆಯ ಕೊನೆ ಅಂಚಿಗೆ ಕೂತಕೊಂಡು ಮೋಡದ ಚಿತ್ತಾರವನ್ನು ಕಂಡಿದ್ದು ನಿನಗೆ ಗೊತ್ತಾ? ಅವೊತ್ತೆ ಕಣೋ ನಾನು ನೀರಾಗಿದ್ದು, ನಿನ್ನ ಒಂದು ರಕ್ತದ ಕಣದಲ್ಲಿ ಅವಳು ಸೇರಿದ್ದಾಳೆ ಅಂತಾ ಗೊತ್ತಾದ ಕ್ಷಣ ಸುಸ್ತು ಹೊಡೆದಿದ್ದೆ. ನನ್ನಾಣೆಗೂ ಆ ‘ನಿರಂಜನ’ನ ಕಥೆ ಮಗ್ಗುಲಿಗೆ ಹೋದವನು ವಾಪಸ್ಸು ಅಷ್ಟೇ ವೇಗವಾಗಿ ಹಿಂದುರುಗಿ ನಿನ್ನ ಬದಿಗೆ ಒತ್ತರಿಸಿಕೊಂಡು ಕೂತೆ. ಆ ನಿನ್ನ ಕಣ್ಣಗಳ ಅತ್ತು ಬಿಂದುವನ್ನು ನೋಡಲೇಬೇಕೆಂಬ ಹುಚ್ಚು ತನವಕ ಶುರುವಾಗಿದ್ದು, ಆ ಕ್ಷಣದಿಂದಲೇ…
ಕ್ಷಮಿಸು ಮನು! ಆ ನಿನ್ನ ಕಥೆಗಳನೆಲ್ಲ ಓದುತ್ತಿರುವ ‘ಅವಳ’ ಮಾವನಿಗೆ ಅವೆಲ್ಲವೂ ನಿಜ ಎಂದೂ ಯಾವತ್ತಿನ ಕ್ಷಣಕ್ಕೆ ಗೊತ್ತಾಗುವುದೋ ಎಂದು ನಾನು ಸಹ ನಿನ್ನಷ್ಟೇ ಕಾತುರದಿಂದ ಕಾಯುತ್ತಿದ್ದೇನೆ. ಆ ಹಸಿರು ಗಿಣಿಯ ಕೊಂಕಿನ ಮೇಲಾಣೆ, ಆ ನಿನ್ನ ಪವಿತ್ರಪ್ರೀತಿ, ಒಂದು ಕಾಮುಕ ಹೆಣ್ಣಿನ ಬಯಕೆಯೊಂದಿಗೆ ಆಚೆ ನಡೆಯಿತು ಎಂಬುದು,
ಈ ಜಗತ್ತಿಗೆ ಸರಿಯಾಗಿ ಅರ್ಥ ಆಗಿದ್ದರೆ ನಿನ್ನ
ಪ್ರೇಮ ಕಥೆಗಳಿಗೆ ಪುಲ್ ಸ್ಟಾಪ್ ಇರುತ್ತಿತ್ತು. ಮಿತ್ರ ಮನು, ನನಗೂ ಒಂದು ನಿನ್ನಂತೆ ಕಿರು ಆಸೆ ಕಣೋ, ನನ್ನ ಮಿತ್ರ ಒಂದು ಹೆಣ್ಣಿನ ನಗುವಿಗೆ ಶರಣಾಗಲಾರ ಎಂಬ ಕಿರು ಆಸೆ. ನಿನಗೆ ಗೊತ್ತಾ, ಆವೊತ್ತು ನೀನು ಸಂಜೆಯ ಮೋಡದ ನಗುವಿನೊಳಗೆ ‘ಅವಳ’ ನಗು ಕಂಡೆ ಎಂದಾಗ ನನ್ನ ಪ್ರಾಣ ಪಕ್ಕದ ಮರದ ಟೊಂಗೆಗೆ ನೇತು ಹಾಕಿಕೊಂಡಂತೆ ಆಯಿತು.
ನಾನೂ, ನಿನ್ನಂತೆ ಒಬ್ಬಳನ್ನು ಪ್ರೇಮಿಸಿದೆ. ನಿನ್ನವಳು ಬರೆದಂತೆ ಅವಳು
ಬರೆದಿದ್ದಳು. ಅದರೊಳಗೆ ಪ್ರೀತಿಯ ಕಿರುಬಗಳಿಗೆ ಪ್ರೀತಿ ಅನ್ನೋದು ಅರ್ಥವಾಗಲ್ಲ ಕಣೋ… ನಾವೇನಿದ್ದರೂ ಬರೀ ಮನಸ್ಸುಗಳಲ್ಲೇ ಮಾತಾಡಿ ಕೊಳ್ಳೋಣ. ಪ್ರೇಮಿಸಿಕೊಳ್ಳೋಣ ಎಂದಿದ್ದಳು.
ನನ್ನ ಅವಳ ಹಿಂದಿನ ಕಥೆ…
ಮನು ಇಂಥಾ ಕಥೆ ನಿನಗೂ ಬೇಕಾ?… At Least ಅವಳಿಗೋಸ್ಕರ ನೀನು ನಿನ್ನ ಸರ್ವಸ್ವವನ್ನು ತ್ಯಾಗ ಮಾಡಲಿಕ್ಕೂ ಸಿದ್ಧವಿದ್ದೀಯಾ ಎಂಬ ಮಾತು ಅವೊತ್ತು ಕಪಾಳಕ್ಕೆ ಒಡೆದ ಸದ್ದಿನಂತೆ ನಾಟಿತು. ‘ಹೆಂಗಸರೆಂದರೆ ನೀನು ಏನು ತಿಳಿದಿದ್ದಿ? Ladies Only Expect the securty of their Life. In front of that an the Love, Emotion feelings are nothing to them, ಬೇಡ ಮನು ‘ಅವಳು ಬರೀ ಸೆಕ್ಸ್ ಗೋಸ್ಕರ ಬದುಕೋಳು ಅವಳಿಗೆ ಸೆಕ್ಸ್ ನ ಕೆಳಗೆ ಒಂದು ವಿಶಾಲ ಅಂತಸ್ತಿರಬೇಕು. ಒಂದು ಭದ್ರತೆಯ ಪದ ನಾಟಿರಬೇಕು.
ಒಂದು ಮಾತು ನೀನು ಜೋಪಾನದಲ್ಲಿರಿಸಿಕೋ, ಒಂದು ಹುಡುಗಿಯ ಹಿಂದೆ ನಿನ್ನ ಕಥೆಯನ್ನು ಸಂಪೂರ್ಣಗೊಳಿಸುತ್ತಿ ಎಂದಾದರೆ ನನಗೆ ನಿನ್ನ ಕಥೆಗಳೇ ಬೇಡ, ಅವೆಲ್ಲವೂ ಕೇವಲ ನೀರು ಕಾಯಿಸಿಕೊಂಡು ಕುಡಿಯಲು ಯೋಗ್ಯವಾದವುಗಳೇ ಹೊರತು ಜೋಪಾನವಾಗಿ ಕಪಾಟಿನೊಳಗೆ ಸೇರಿಸಿಕೊಳ್ಳುವಂತವಲ್ಲ.
ಮನು! ನಿನ್ನಂಗೆ ಸಾವಿರಾರು ಜನ ಮಂಕಣ್ಣಿಗಳು ಕಾಲೇಜ್ ಓದಿದ್ದಾರೆ. ಅವರೆಲ್ಲರ ಬಾಳು ಒಂದು ಹುಡುಗಿಯ ಹಿಂದೆ ಅಲೆದಾಡಿದೆ ಎಂದಾದರೆ ಅದು ನಿಜಕ್ಕೂ ಪ್ರೇಮವಲ್ಲ ಜಸ್ಟ್ ಸೆಕ್ಸ್?
ಆವೊತ್ತಿನ ಕಾಲೇಜಿನ ದಿನದಲ್ಲಿ ನಿನ್ನ ‘ಅವಳು ನಕ್ಕಾಗ ನಾನು ನಿನ್ನ ಪಕ್ಕದಲ್ಲಿ ನಿಂತಿದ್ದೆ. ಅವಳ ಮಾವ ನನ್ನ ಪಕ್ಕದಲ್ಲೇ…. ನೀನು ಆವೊತ್ತು ಹೃದಯದಲ್ಲಿ ನಕ್ಕೆ…. ನಾನು ಮತ್ತು ಅವಳ ಮಾವ ನಿಮ್ಮಿಬ್ಬರನ್ನು ನೋಡಿ ನಕ್ಕಿದ್ದೆವು. ನಿಮ್ಮಿಂದೇ ಈ ಜನ…. ಕೊನೆಗೆ ಗೊತ್ತಿಲ್ಲದಂತೆ ಅವಳೂ ನಮ್ಮ ಹಿಂದೆ ಸೇರಿದ್ದಳು.
ಮನು! ನಿನಗೋಸ್ಕರ ಈ ಜಗತ್ತು ಕಾಯುತ್ತಿದೆ. ನಿಜವಾದ ಪ್ರೀತಿ ಪ್ರೇಮ ಕತ್ತಲೆಯ ಕಡೆಗಲ್ಲ… ಬೆಳಕಿನೆಡೆಗೆ, ಸಹಸ್ರಾರು ಜನರ ಹೃದಯಗಳು ಸಿಡಿಯುತ್ತಿವೆ. ಆ ಕಡೆಗೆ ನಿನ್ನ ಪ್ರೀತಿ ಹರಿದು ಬರಲಿ, ಅದರ ಬದಲು ನೀತಿ ಹೇಳಿದಂತೆ ನಿನ್ನ ಅವಳ ಹಿಂದಲ್ಲ ನಿನ್ನ ಬದುಕು. ಆವಳ ಮಾನವ ಉದ್ರೇಕದ ಮುಂದಲ್ಲ ನಿನ್ನ ಸಿಟ್ಟು ಸೆಡವು. ಅದೇನಿದ್ದರೂ ‘ಒಬ್ಬ ಹೆಳವ ಅಸಹಾಯಕ ತೋರಿಸುವ ಮೈ ಪರಚುವ ಕ್ರಿಯೆ’ ಅದರಾಚೆಗಿನ ಬೆಳಕಿನಲ್ಲಿ ನೀನು ನಿನ್ನತನವನ್ನು ನಿನ್ನ ಪ್ರೀತಿಯನ್ನು ನಿನ್ನ ಹೃದಯವನ್ನು ತೆರೆದಿಡು, ಅಲ್ಲಿ ಅವಳು’ ನಿಂತಿಲ್ಲ… ಆವಳಂತೆ ಸರದಿಗಾಗಿ ಕಾದು ನಿಂತ ಸಹಸ್ರಾರು ಮುಖಗಳು. ಅವಕ್ಕೊಂಚೂರು ಪ್ರೀತಿ, ಅದೇ ನಿಜವಾದ ಬದುಕು.