Saturday, September 7, 2024
Google search engine
HomeUncategorizedತಹಶೀಲ್ದಾರ್ ವಿರುದ್ಧ ಶಾಸಕರು ಗರಂ

ತಹಶೀಲ್ದಾರ್ ವಿರುದ್ಧ ಶಾಸಕರು ಗರಂ

ತುರುವೇಕೆರೆ:
ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕೆ.ಮಾವಿನಹಳ್ಳಿ ಕಂದಾಯ ವೃತ್ತಾಧಿಕಾರಿ ಮೇಘನಾ ಎಸ್ ಅವರನ್ನು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ರವರು ಏಕಾ ಏಕಿ ತಾಲ್ಲೂಕು ಕಚೇರಿಗೆ ನಿಯೋಜನೆ ಮಾಡಿಕೊಂಡಿರುವ ಕ್ರಮವನ್ನು ಖಂಡಿಸಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಕೆ.ಮಾವಿನಹಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕು ಕಚೇರಿಯಲ್ಲಿ ನೌಕರರು, ಸಿಬ್ಬಂದಿಗಳು ಇದ್ದರೂ ಕೂಡ ತಹಶೀಲ್ದಾರ್ ಅವರು ಕಂದಾಯ ವೃತ್ತಾಧಿಕಾರಿಯವರನ್ನು ತಮ್ಮ ಕಚೇರಿಗೆ ನಿಯೋಜನೆ ಮಾಡುವ ಅಗತ್ಯವಾದರೂ ಏನಿತ್ತು. ಈ ಅಧಿಕಾರಿಯನ್ನು ನಿಯೋಜಿಸಿಕೊಂಡು ಅಕ್ರಮ ವ್ಯವಹಾರಗಳನ್ನು ತಹಶೀಲ್ದಾರ್ರವರು ನಡೆಸುತ್ತಿದ್ದಾರೆಯೇ? ಎಂಬ ಅನುಮಾನಗಳಿವೆ.
ನಮಗೆ ಸರ್ಕಾರದಿಂದ ಆದೇಶವಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಇಲ್ಲದೆ ಇರುವುದರಿಂದ ಕೆ.ಮಾವಿನಹಳ್ಳಿ ಹಾಗು ನಮ್ಮ ಕಂದಾಯ ಗ್ರಾಮಕ್ಕೆ ಸೇರುವ ಹಲವಾರು ಗ್ರಾಮಗಳ ಕಂದಾಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಗ್ರಾಮದ ರೈತರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯ ಬಿಟ್ಟು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ತಮ್ಮ ಭೂ ದಾಖಲೆ ಸೇರಿದಂತೆ ಹಲವು ಕೆಲಸಗಳಿಗಾಗಿ ತುರುವೇಕೆರೆ ಕಚೇರಿಗೆ ಎಡತಾಕಬೇಕಿದೆ. ಆದರೆ ವಯಸ್ಸಾದವರು, ಮಹಿಳೆಯರು ಕತೆ ಹೇಗೆ.
ಈಗ ಪ್ರಭಾರೆಯಾಗಿ ನಿಯುಕ್ತಿಗೊಂಡಿರುವ ಕಂದಾಯ ಆಡಳಿತಾಧಿಕಾರಿ ಮೂರು ವೃತ್ತಗಳಲ್ಲಿ ಕೆಲಸ ಮಾಡುತ್ತಿದ್ದು ರೈತರಿಗೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಆದ್ದರಿಂದ ನಮ್ಮ ವೃತ್ತಕ್ಕೆ ಆದೇಶಗೊಂಡಿರುವ ಮೇಘನಾ ಎಸ್ ಅವರನ್ನು ತಾಲ್ಲೂಕು ಕಚೇರಿಯಿಂದ ಶ್ರೀಘ್ರವೇ ಬಿಡುಗಡೆಗೊಳಿಸಿ ಗ್ರಾಮಕ್ಕೆ ಅನುಕೂಲ ಮಾಡಿಕೊಡಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಲಾಗಿದೆ. ಒಂದು ವೇಳೆ ಗ್ರಾಮದ ಸಮಸ್ಯೆ ಬಗೆಹರಿಯದಿದ್ದರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಚಿಕ್ಕೇಗೌಡ, ಶಿವಣ್ಣ, ನಾಗರಾಜು, ಶಿವರಾಜು, ಯಲ್ಲಯ್ಯ, ರಾಜಣ್ಣ, ರಂಗಪ್ಪ, ನಾಗರಾಜು, ರಾಮಣ್ಣ ಮತ್ತು ಮಂಜುನಾಥ್ರವರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?