Sunday, December 7, 2025
Google search engine
Home Blog Page 26

ಲಾಕಪ್ ಡೆತ್ ಆರೋಪ : ಪರಿಹಾರಕ್ಕೆ ಧರಣಿ

ತುರುವೇಕೆರೆ:
ಪೊಲೀಸ್ ಲಾಕಪ್ ಡೆತ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡ ಬೇಕು ಹಾಗು ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸಿ.ಪಿಐ ಕಚೇರಿ ಮುಂಬಾಗ ಮಾಜಿ ಶಾಸಕ ಜಯರಾಮ್ ಎ.ಎಸ್ ಅವರ ನೇತೃತ್ವದಲ್ಲಿ ತಾಲ್ಲೂಕು ಬಿಜೆಪಿ ಘಟಕವು ಸೋಮವಾರ ಅಹೋರಾತ್ರಿ ಧರಣಿ ನಡೆಸಿದರು.


ಮಾಜಿ ಶಾಸಕ ಜಯರಾಮ್ ಎ.ಎಸ್ ಮಾತನಾಡಿ, ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಕೆ.ಮಾವಿನಹಳ್ಳಿ ಗ್ರಾಮದ ಕುಮಾರ್ ಆಚಾರ್ ಹಾಗೂ ನಾಲ್ಕು ಜನರನ್ನು ಇಸ್ಪೀಟ್ ಆಡುತ್ತಿದ್ದಾರೆ ಎಂದು ಪಟ್ಟಣದ ಪಿ.ಎಸ್.ಐ ಗಣೇಶ್ ಹಾಗೂ ಸಿಬ್ಬಂದಿಗಳು ಬಂದಿಸಿ ಕರೆತರುವಾಗ ಕುಮಾರ ಆಚಾರ್ ನನ್ನು ಪೋಲಿಸರು ಒಡೆದು ಸಾಯಿಸಿದ್ದಾರೆ.


ಪೊಲೀಸರು ಇಲಾಖೆಯಲ್ಲಿ ಜೀಪ್ ಇದ್ದರೂ ಸಹ ಜೀಪನಲ್ಲಿ ತೆರಳಿಲ್ಲ, ಮಾರ್ಗ ಮದ್ಯೆ ಸಾವನ್ನಪ್ಪಿದ್ದಾನೆ ಎಂದಾದರೆ ಆಸ್ಪತ್ರೆ ಆಂಬೂಲೆನ್ಸ್ ಇದ್ದರು ಕರಸಿಕೊಳ್ಳದೆ ಯಾವುದೋ ಕಾರಿನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ತರಲಾಗಿದೆ.
ಕುಮಾರ್ ಆಚಾರ್ ಬದುಕಿದ್ದಾನೆ ಎಂದು ಕುಟುಂಬದವರಿಗೆ ಸುಳ್ಳು ಹೇಳಿಕೊಂಡು ತುರುವೇಕೆರೆ ಠಾಣೆಗೆ ಕರೆಯಿಸಿಕೊಂಡು ಕುಟುಂಬದ ಸದಸ್ಯರನ್ನು ಬೆದರಿಸಿ ಪತ್ನಿ, ತಂಗಿ, ತಂದೆ ಹತ್ತಿರ ಸಹಿ ಮಾಡಿಕೊಂಡಿದ್ದಾರೆ.
ಕುಮಾರ್ ಆಚಾರ್ನನ್ನು ಪೊಲೀಸರು ಎಡೆಮಟ್ಟೆಯಲ್ಲಿ ಒಡೆದು ಕೊಲೆ ಮಾಡಿ ಲಾಕಪ್ ಡೆಥ್ ಮುಚ್ಚಿಹಾಕಲು ಮೃತ ದೇಹವನ್ನು ತುಮಕೂರಿನಲ್ಲಿ ಮರಣ್ಣೋ ತ್ತರ ಪರೀಕ್ಷೆ ಮಾಡಿಸಿದ್ದಾರೆ. ಮೃತ ಕುಟುಂಬಕ್ಕೆ ನ್ಯಾಯ ದೊರಕಬೇಕು, ಸೂಕ್ತ ತನಿಖೆಯಾಗಬೇಕು ಕುಟುಂಬದ ಹೇಳಿಕೆಗಳನ್ನು ನಮ್ಮ ಮುಂದೆಯೇ ತೆಗೆದುಕೊಳ್ಳಬೇಕು, ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದರೆ ಸರ್ಕಾರ ನೀಡುವ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.


ಮೃತರ ಬಡ ಕುಟುಂಬಕ್ಕೆ ನ್ಯಾಯ ದೊರೆಯುವರೆಗೂ ಆಹೋರಾತ್ರಿ ಪ್ರತಿಭಟಣೆ ಮುಂದುವರೆಯಲಿದೆ. ಸ್ಥಳಕ್ಕೆ ಎಸ್.ಪಿ ಆಗಮಿಸಬೇಕು. ಈಗಾಗಲೇ ತಾಲ್ಲೂಕಿನ ಎಲ್ಲ ಸಂಘ ಸಂಸ್ಥೆಗಳು ಪ್ರತಿಭಟನೆ ಬೆಂಬಲ ಸೂಚಿಸಿದ್ದು ಉಗ್ರವಾದ ಹೋರಾಟ ಮಾಡಲಾಗುವುದು.
ಮೃತರ ಕುಟುಂಬಕ್ಕೆ ಹಾಗು ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ಯಾವುದಾದರೂ ಅಹಿತಕರ ಘಟನೆಗಳು ಸಂಭವಿಸದರೆ ಪೊಲೀಸ್ ಇಲಾಖೆಯೇ ನೇರಹೊಣೆ ಎಚ್ಚರಿಸಿದರು.

ತಾಲ್ಲೂಕಿನ ಜನತೆ ಪಕ್ಷ ಬೇದ ಮರೆತು ಮೃತ ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರತಿಭಟನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಡಿವೈ.ಎಸ್.ಪಿ ಲಕ್ಷ್ಮೀಕಾಂತ್, ಸಿಪಿಐಗಳಾದ ಲೋಹಿತ್, ಅರುಣ್ ಬೇಟಿ ನೀಡಿ ಇಲಾಖಾ ತನಿಖೆ ಮಾಡಲಾಗುವುದು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಪ್ರತಿಭಟನೆ ಮುಂದುವರೆಸಿದರು.


ಪ್ರತಿಭಟನೆಯಲ್ಲಿ ಮೃತ ಪತ್ನಿ ಮಂಜಮ್ಮ, ಸಹೋದರಿ ಪುಷ್ಪ, ತಂದೆ ರಂಗಚಾರ್ ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ಪ್ರಭಾಕರ್, ಶೀಲಾ, ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವರಾಜು, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮಯ್ಯ, ಡಿ.ಆರ್.ಬಸವರಾಜು, ವಿ.ಬಿ.ಸುರೇಶ್, , ಡಿ.ಆರ್.ಬಸವರಾಜು, ಉಗ್ರಯ್ಯ, ಚಂದ್ರಯ್ಯ, ಗೊಟ್ಟಿಕೆರೆಕಾಂತರಾಜು, ನಂಜೇಗೌಡ, ಗೌರೀಶ್, ಚೂಡಾಮಣಿ, ಜಯಶೀಲಾ, ಉಮಾರಾಜ್, ಪ್ರಕಾಶ್, ದಯಾನಂದ್, ಶಿವಕುಮಾರ್, ಬುಗಡನಹಳ್ಳಿರಾಜು, ಕುಮಾರ್, ಜಯಣ್ಣ ಸೇರಿದಂತೆ ಇತರರು ಇದ್ದರು.

ಇಂಗ್ಲೆಂಡ್ ಗೆ ಹೊರಟ ನಟ ಶ್ರೀನಿವಾಸ ಪ್ರಭು; ಜಿ.ಎನ್‌. ಮೋಹನ್ ಹೇಳಿದ್ದೇನು?

0

ಮಾತು: ಜಿ.ಎನ್.ಮೋಹನ್

ನೀ ಯಾರೋ ಏನೋ ಎಂತೋ
ಅಂತೂ ಪೋಣಿಸಿತು ಕಾಣದಾ ತಂತು..
ಎನ್ನುವ ಹಾಗೆ ನನಗೆ ಜೊತೆಯಾಗಿಬಿಟ್ಟವರು ಶ್ರೀನಿವಾಸ ಪ್ರಭು ಹಾಗೂ ರಂಜನಿ ಪ್ರಭು

ಶ್ರೀನಿವಾಸ ಪ್ರಭು ರಂಗಭೂಮಿಯವರು ಎನ್ನುವುದು ನಮಗೆಲ್ಲ ಹೆಮ್ಮೆ. ಚಲನಚಿತ್ರಗಳಲ್ಲಿ ಶ್ರೀನಿವಾಸ ಪ್ರಭು ಅವರ ಅಭಿನಯ, ಕಂಠ ಮೆಚ್ಚಿಕೊಂಡೇ ಬಂದಿದ್ದ ನಾನು ರಂಜನಿ ಅವರು ಬರೆವ ಕವಿತೆಗಳನ್ನು ಉಪಾಸನಾ ತಂಡ ಹಾಡುವುದು ಕೇಳಿ ಸೋತಿದ್ದೆ.

ಎಂ ಆರ್ ಕಮಲ ತಮ್ಮ ಮನೆಯ ಅಂಗಳದಲ್ಲಿ ನಡೆಸುತ್ತಿದ್ದ ತಿಂಗಳ ಮಾತುಕತೆಗೆ ಶ್ರೀನಿವಾಸ ಪ್ರಭು ಅವರನ್ನು ಕರೆದಿದ್ದರು. ಪ್ರಭು ತಮ್ಮ ರಂಗ ಬದುಕನ್ನು ಬಿಚ್ಚಿಡುತ್ತಾ ಹೋದರು. ವಾಹ್! ಎಂತಹ ಅಗಾಧ ಹಾಗೂ ಸ್ವಾರಸ್ಯಪೂರ್ಣ ಪಯಣ ಅದು!
ಆದನು ಕೇಳಿದವನೇ ‘ಅವಧಿ’ಗೆ ಅಂಕಣ ಬರೆಯುವಂತೆ ಬೆಂಬತ್ತಿದೆ. ಪರಿಣಾಮ ಅವಧಿಯಲ್ಲಿ ಈಗಲೂ ಪ್ರಕಟವಾಗುತ್ತಿರುವ ‘ಏನ ಹೇಳಲಿ ಪ್ರಭುವೇ? ಅಂಕಣ ಮಾಲೆ. ಇದರ ಬೆನ್ನಿಗೆ ರಂಜನಿ ಪ್ರಭು ಅವರ ‘ವೈಶಾಖದ ಹನಿಗಳು’ ಕೃತಿಯನ್ನು ಪ್ರಕಟಿಸಿದ್ದೂ ಆಯಿತು. ಮಗ ಅನಿರುದ್ಧ ಹಾಗೂ ಸೊಸೆ ಕಾಮ್ಯಾರ ಜೊತೆಗೂ ನಂಟು ಬೆಳೆಯಿತು.

ಅದೇ ಕಾರಣವಾಗಿ ಬೆಳೆದ ನಂಟು ‘ಅಂಟಿದ ನಂಟಿಗೆ ಕೊನೆ ಬಲ್ಲವರಾರು..’ ಎನ್ನುವ ಹಂತಕ್ಕೆ ತಂದು ನಿಲ್ಲಿಸಿದೆ.

ಶ್ರೀನಿವಾಸಪ್ರಭು ಹಾಗೂ ರಂಜನಿ ದಂಪತಿಗಳು ದೀರ್ಘ ಕಾಲದ ಅವಧಿಗೆ ಇಂಗ್ಲೆಂಡ್ ಗೆ ಹೊರಟು ನಿಂತಿದ್ದಾರೆ. ಪ್ರತಿಷ್ಟಿತ ಕಲಾವಿದರ ವೀಸಾದ ಅಡಿ. ಅಲ್ಲಿ ಕಲಾ ಚಟುವಟಿಕೆಗಳನ್ನು ನಡೆಸಲು ಅವರಿಗೆ ಸಮ್ಮತಿ ಸಿಕ್ಕಿದೆ. ಇದೇ ಡಿಸೆಂಬರ್ ನಲ್ಲಿ ನಾಟಕ ಪ್ರದರ್ಶನವನ್ನೂ ಹಮ್ಮಿಕೊಂಡಿದ್ದಾರೆ.

ಅವರ ಪ್ರೀತಿ ಉಂಡ ನಮಗೆ ಮನಸ್ಸು ಭಾರವಾದರೂ ಅವರಿಬ್ಬರ ಈ ಹೊಸ ಸಾಹಸಕ್ಕೆ ಯಶಸ್ಸು ಸಿಗಲಿ

ನಿಧನ ವಾರ್ತೆ: ನಿಂಗಮ್ಮ


ತುರುವೇಕೆರೆ:
ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಣತೂರು ಗ್ರಾಮದ ನಿವೃತ್ತ ಶಿಕ್ಷಕ ಕೆ.ಬಿ.ರಾಮ ಸ್ವಾಮಿ ಅವರ ತಾಯಿ ನಿಂಗಮ್ಮ(94) ಅನಾರೋಗ್ಯದಿಂದ ಶುಕ್ರವಾರ ನಿಧನಾರಾಗಿದ್ದಾರೆ.
ಮೃತ ನಿಂಗಮ್ಮನವರು ನಾಲ್ಕು ಹೆಣ್ಣು ಮಕ್ಕಳು, ಒಬ್ಬ ಪುತ್ರ ಮತ್ತು ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ. ಮೃತರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಶುಕ್ರವಾರ ಮುಂಜಾನೆ ಸಾವನ್ನಪ್ಪಿದ್ದಾರೆ.
ಮುಖಂಡರುಗಳಾದ ದೊಡ್ಡಾಘಟ್ಟ ಚಂದ್ರೇಶ್, ವಿಜಿಕುಮಾರ್, ಕೊಳಾಲನಾಗರಾಜು, ಡಾ.ನವೀನ್, ಡಾ.ಚೌದ್ರಿನಾಗೇಶ್, ಜನಪ್ರತಿನಿಧಿಗಳು ಮೃತರಿಗೆ ಕಂಬನಿ ಮಿಡಿದಿದ್ದಾರೆ
ಮೃತರ ಸ್ವಗ್ರಾಮವಾದ ಕಣತೂರಿನಲ್ಲಿ ಅಂತ್ಯಸಂಸ್ಕಾರ ಶುಕ್ರವಾರ ಸಂಜೆ ಜರುಗಿತೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹಳೆ ಪಿಂಚಣಿ: ವೈ.ಎ. ನಾರಾಣಯಸ್ವಾಮಿ ಒತ್ತಾಯ

0

ತುರುವೇಕೆರೆ: ದೇಶದ ಅಭಿವೃದ್ಧಿಯ ಸಂಕೇತವಾಗಿರುವ ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಣಯಸ್ವಾಮಿ ಟೀಕಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಎನ್.ಪಿಎಸ್ ತೆಗೆದು ಹಾಕಿ ಓ.ಪಿ.ಎಸ್ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು.
ಈ ಸರ್ಕಾರ ಒಪಿಎಸ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಚುನಾವಣೆ ಪ್ರಣಾಳಿಕೆಯಂತೆ ಡಿಸೆಂಬರ್ನೊಳಗೆ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಎನ್.ಪಿಎಸ್ ತೆಗೆದುಹಾಕಿ ಒ.ಪಿಎಸ್ ಜಾರಿಯ ಬಗ್ಗೆ ಲೋಕಭಾ ಚುನಾವಣೆಯಲ್ಲಿ ನಾವೆಲ್ಲ ಸೇರಿಕೊಂಡು ಪ್ರದಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ನಮ್ಮ ಸರ್ಕಾರವಿದ್ದಾಗ ಏಳನೇ ವೇತನ ಆಯೋಗವನ್ನು ರಚನೆ ಮಾಡಿದ್ದತ್ತು. ಈ ವರದಿಯನ್ನು ಈಗಿನ ಸರ್ಕಾರ ಆದಷ್ಟು ಬೇಗ ಜಾರಿ ಮಾಡಿ ಅನುಷ್ಟಾನ ಗೊಳಿಸಬೇಕು ಹಾಗು ಶಿಕ್ಷಕರ ಹಲವಾರು ಬೇಡಿಕೆಗಳನ್ನು ಕೂಡಲೇ ಸರ್ಕಾರ ಜಾರಿ ಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಯ್ಯನವರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀರು, ವಿದ್ಯುತ್ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಅದು ಸ್ವಾಗತಾರ್ಹ.
ಸಿದ್ದರಾಮಯ್ಯರಿಗೆ ಈಗ ಸರ್ಕಾರಿ ಶಾಲೆಗಳ ಮೇಲೆ ಪ್ರೀತಿ ಹೆಚ್ಚಿದೆ. ಈ ಹಿಂದೆ ಮುಖ್ಯ ಮಂತ್ರಿಗಳಾಗಿದ್ದಾಗ ಸರ್ಕಾರಿ ಶಾಲೆಗಳನ್ನು ಮರೆತಿದ್ದರು. ಈ 5 ಗ್ಯಾರಂಟಿಗೆ ಸರಿ ಸುಮಾರು 50 ಸಾವಿರ ಕೋಟಿಯಾಗಲಿದೆ. ಈ ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷ ನಿಲ್ಲಿಸಿ ಆಹಣವನ್ನೇ ಸರ್ಕಾರಿ ಶಾಲೆಗೆ ತಲಾ 1 ಕೋಟಿ ಅನುದಾನ ನೀಡಿದರೆ ಉದ್ದಾರವಾಗಲಿವೆ ಎಂದರು.
ಪಿಂಚಣಿ ವಂಚಿತರಿಗೆ ಪಿಂಚಣಿ ನೀಡಲು ನಮ್ಮ ಸರ್ಕಾರವಿದ್ದಾಗಒಂದು ಸಮಿತಿಯನ್ನು ಮಾಡಲಾಗಿತ್ತು. ಈ ವರದಿಯನ್ನು ಈಗಿನ ಸರ್ಕಾರ ತರಿಸಿಕೊಂಡು ಯಾವ ಶಿಕ್ಷಕರೂ ಪಿಂಚಣಿಯಿಂದ ವಂಶಿತರಾಗದಂತೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ನ. 5 ರಂದು ಶಿಕ್ಷಕರುಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಶಿಕ್ಷಣ ಮಂತ್ರಿಗಳು ವರ್ಷದಲ್ಲಿ ಮೂರು ಪರೀಕ್ಷೆ ಮಾಡುವ ಹೇಳಿಕೆ ನೀಡಿದ್ದಾರೆ. ಯಾವ ಪರಿಕಲ್ಪನೆ ಇಟ್ಟುಕೊಂಡು ಹೇಳಿದ್ದಾರೋ ಅದನ್ನು ಶಿಕ್ಷಣ ಸಚಿವರು ಆದೇಶ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ 2 ಪರೀಕ್ಷಗಳೇ ಸರಿಯಾಗಿತ್ತು ಇದರಿಂದ ವಿದ್ಯಾರ್ಥಿಗಳಿಗೂ, ಉಪನ್ಯಾಸರಿಗೂ ಒತ್ತಡ ಕೆಲಸ ಜಾಸ್ತಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕೊಂಡಜ್ಜಿವಿಶ್ವನಾಥ್ ನಿವೃತ್ತ ಉಪ ಪ್ರಾಂಶುಪಾಲ ನಾಗರಾಜಪ್ಪ, ಮುಖ್ಯಶಿಕ್ಷಕ ವೆಂಕಟೇಶ್, ವಿದ್ಯಾರಣ್ಯ ಶಾಲೆ ಜಯಣ್ಣ, ಗುರುರಾಜು, ನಾಗರಾಜು ಶಿಕ್ಷಕರ ಸಂಘದ ಹಲವರು ಇದ್ದರು.

ಸಿದ್ದರಾಮಯ್ಯ ಬೇಡ ಎಂದರೆ ಪರಮೇಶ್ವರ್ ಗೆ ಸಿಎಂ ಸ್ಥಾನ

ತುಮಕೂರು, ಪಬ್ಲಿಕ್ ಸ್ಟೋರಿ ವರದಿ: ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರೆ, ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸಚಿವ ಕೇಂದ್ರ ರಾಜಣ್ಣ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೈಕಮಾಂಡ್ ಮಾತಿಗೆ ನಾನು ಬಗ್ಗುವುದಿಲ್ಲ, ಅವರು ಹೇಳುತ್ತಾರೆ ಎಂದು ಸುಮ್ಮನೆ ಕೂರಲು ಆಗುವುದಿಲ್ಲ. ಈಗ ಮಾತನಾಡುತ್ತೇನೆ, ಮುಂದೆ ಅವರು ಹೇಳಿದರೆ ಮಾತನಾಡುವುದಿಲ್ಲ. ನಾನು ಮುಂದಿನ ಸಲ ಚುನಾವಣೆಗೂ ನಿಲ್ಲುವುದಿಲ್ಲ ಎಂದರು.

ನಾನು ಎಂದಿಗೂ ಸಿದ್ದರಾಮಯ್ಯನವರ ಪರ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಅವರನ್ನೇ ಬೆಂಬಲಿಸುತ್ತೇನೆ. ಅವರು ಬೇಡ ಎಂದರೆ ಆವಕಾಶ ಪರಮೇಶ್ವರ್ ಅವರಿಗೆ ಕೊಡಬೇಕು. ಪರಮೇಶ್ವರ್ ಅವರಿಗೆ ಅದೃಷ್ಟವಿದೆ. ನಮ್ಮ ಜಿಲ್ಲೆಯಿಂದಲೂ ಒಬ್ಬರು ಮುಖ್ಯಮಂತ್ರಿ ಆಗಬೇಕು. ಇದಕ್ಕಾಗಿ ನಾನು ಪರಮೇಶ್ವರ ಹೋರಾಟ ನಡೆಸಿವೆ ಎಂದರು.

ನಿವೇಶನ ಖರೀದಿಸಬೇಕಾದ್ರೆ ಯಾವೆಲ್ಲ ಅಂಶ ಗಮನಿಸಬೇಕು

ನಮ್ಮ ಬದುಕಿನ ಪ್ರತಿ ಹಂತವನ್ನೂ ನಿಯಂತ್ರಿಸುವುದು ಕಾನೂನು. ಕೋರ್ಟು, ಕಾನೂನು ಎಂದರೆ ಹೆದರಿ ಹಿಮ್ಮೆಟ್ಟುವರೇ ಹೆಚ್ಚು. ಹತ್ತು ಹಲವು ಒಳಸುಳಿಗಳಿರುವ ಕಾನೂನುಗಳ ಸುತ್ತಲೂ ಇರುವ ವಿಚಾರಗಳೂ ಹಲವು. ಕಾನೂನು, ನ್ಯಾಯಾಂಗ, ಸಂವಿಧಾನದ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ‘ಇದು ಕಾನೂನು’ ಅಂಕಣದಲ್ಲಿ ಉತ್ತರಿಸಲಿದ್ದಾರೆ ತುಮಕೂರಿನ ಹಿರಿಯ ವಕೀಲ ಸಿ.ಕೆ.ಮಹೇಂದ್ರ. (9844817737). ಪ್ರಶ್ನೆ ಕೇಳಿದವರ ಹೆಸರು ಬದಲಿಸಲಾಗಿದೆ.

1) ಕೋರ್ಟು, ಕಾನೂನು ಇರೋದು ಶ್ರೀಮಂತರಿಗೆ ಮಾತ್ರ. ಬಡವರಿಗೆ ನ್ಯಾಯ ಸಿಗಲ್ಲ ಎಂಬ ಮಾತಿದೆ. ಇದು ನಿಜವೇ?

  • ಮಂಜುನಾಥ, ಕೊತ್ತನೂರು

ಉತ್ತರ: ನೀವು ತಪ್ಪಾಗಿ ಗ್ರಹಿಸಿದ್ದೀರಿ. ಪ್ರತಿಯೊಬ್ಬರು ಎಲ್ಲ ಪ್ರಯತ್ನಗಳ ನಂತರ ಕಡೆಯದಾಗಿ ಕೋರ್ಟ್‌ಗೆ ಬರುತ್ತಾರೆ. ‘ಕೋರ್ಟ್‌ನಲ್ಲಿ ನೋಡೋಣ ಬಿಡು’ ಎನ್ನುವ ಮಾತನ್ನೂ ನೀವು ಕೇಳಿಸಿಕೊಂಡಿರಬಹುದು. ನ್ಯಾಯಾಲಯಗಳಲ್ಲಿ ನ್ಯಾಯ ಸಿಗಲಿದೆ ಎಂಬ ಭರವಸೆಯೇ ಇದಕ್ಕೆ ಕಾರಣ. ವಶೀಲಿ ಬಾಜಿ, ಪ್ರಭಾವ, ರಾಜಕೀಯ, ತೋಳ್ಬಲಗಳು ಯಾವುದೇ ನ್ಯಾಯಾಲಯದಲ್ಲಿ, ನ್ಯಾಯದಾನದ ವ್ಯವಸ್ಥೆಯಲ್ಲಿ ಕೆಲಸಕ್ಕೆ ಬರುವುದಿಲ್ಲ. ನ್ಯಾಯಾಧೀಶರು, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು. ಶ್ರೀಮಂತ, ಬಡವ ಎಂಬ ಭೇದಭಾವ ಇಲ್ಲಿಲ್ಲ. ಕೋರ್ಟ್ ಶುಲ್ಕವೂ ಸಮಾನವಾಗಿರಲಿದೆ.

ಇಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ. ಬಡ ಕಕ್ಷಿದಾರರಿಗೆ ಉಚಿತವಾಗಿ ಕಾನೂನು ಸಹಾಯ ನೀಡಲು ಸರ್ಕಾರವು ‘ಕಾನೂನು ಸೇವಾ ಪ್ರಾಧಿಕಾರ’ದ ಅನುಕೂಲ ಕಲ್ಪಿಸಿದೆ. ಒಳ್ಳೆಯ, ನುರಿತ ವಕೀಲರ ಸೇವೆಗೆ ಶುಲ್ಕ ಹೆಚ್ಚಿರುತ್ತದೆ. ಅದು ವಕೀಲರಿಗೆ ಸಂಬಂಧಿಸಿದ ವಿಚಾರ. ಹಾಗೆ, ಗಮನಿಸಿದರೆ ಕಡು ಬಡವರು ಸಹ ಕೋರ್ಟ್‌ಗಳಲ್ಲಿ ಗೆಲುವು ಸಾಧಿಸುತ್ತಾರೆ. ಆಗರ್ಭ ಶ್ರೀಮಂತರು ಕೈಕಟ್ಟಿ ನಿಂತು ಸೋಲುತ್ತಾರೆ. ನಿಮ್ಮ ಪರ ನ್ಯಾಯ ಇದ್ದರೆ ನೀವು ಹೆದರಬೇಕಿಲ್ಲ.

2) ಒಂದು ನಿವೇಶನ ಖರೀದಿ ಮಾಡಬೇಕಾದರೆ ಯಾವೆಲ್ಲ ಅಂಶ ಗಮನಿಸಬೇಕು? ದಯವಿಟ್ಟು ತಿಳಿಸಿ ಸರ್.

  • ಅನಂತ, ಮಾಗಡಿ

ಉತ್ತರ: ಯಾವುದೇ ಆಸ್ತಿ/ನಿವೇಶನ ಖರೀದಿಸಬೇಕಾದರೆ ಮುನ್ನಚ್ಚರಿಕೆ ವಹಿಸುವುದು ಸೂಕ್ತ. ಕಾನೂನು ಏನು ಹೇಳುತ್ತದೆ ಎಂದು ಗೊತ್ತಿಲ್ಲದೆ ಖರೀದಿ ಮಾಡಿದರೆ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ನಿವೇಶನ ಖರೀದಿಸುವ ಮುನ್ನ ನೀವು ಒಂದಿಷ್ಟು ದಾಖಲೆಗಳನ್ನು ಪರಿಶೀಲಿಸಲೇಬೇಕು. ನಿವೇಶನ ಮಾರುವ ವ್ಯಕ್ತಿಯ ಹಿನ್ನೆಲೆಯ ಬಗ್ಗೆ ಅರಿವಿರಲಿ. ಅವರ ಮಾತುಗಳ ಮೇಲೆ ನಿಗಾ ಇಡಬೇಕು. ಎಲ್ಲ ದಾಖಲೆಗಳನ್ನು ದೃಢೀಕರಿಸಿಕೊಳ್ಳಬೇಕು.

ನಿವೇಶನ ಖರೀದಿಸುವ ಜಾಗದಲ್ಲಿ ನಿವೇಶನ ಇದೆಯೇ ಎಂಬುದು ಖುದ್ದು ಹೋಗಿ ನೋಡಿಕೊಂಡು ಬನ್ನಿ. ಕೇವಲ ಬಾಯ್ಮಾತಿನ ಮೇಲೆ ಹಣ ಹೂಡಿಕೆ ಮಾಡದಿರಿ. ಸಂಬಂಧಪಟ್ಟ ಪ್ರಾಧಿಕಾರದ ದೃಢೀಕೃತ ನಕ್ಷೆಯೊಂದಿದೆ ಚಕ್ ಬಂದ್ ಸಮೇತ ತುಲನೆ ಮಾಡಿ. ನಗರದಲ್ಲಿ ಆದರೆ ಇಸಿ (ಋಣಭಾರ ಪತ್ರ), ಇ- ಖಾತಾ, ಎಂಆರ್, ಈ ಹಿಂದಿನ ಕ್ರಯಪತ್ರಗಳು, ಕಂದಾಯ ರಸೀದಿ, ಭೂ ಪರಿವರ್ತನೆಯ ಜಿಲ್ಲಾಧಿಕಾರಿ ಆದೇಶ ಪ್ರತಿ, ನಗರ ಅಭಿವೃದ್ಧಿ ಪ್ರಾಧಿಕಾರದ ಲೇಔಟ್ ಮಂಜೂರಾತಿ ಆದೇಶ, ಲೇಔಟ್ ಪ್ಲಾನ್, ಮೂಲ ನಗರಾಭಿವೃದ್ಧಿ ಯೋಜನೆ ನಕ್ಷೆಯ ದಾಖಲೆಗಳನ್ನು ಗಮನಿಸಿ. ವಕೀಲರ ಅಭಿಪ್ರಾಯವನ್ನೂ ಪಡೆದುಕೊಳ್ಳಿ.

3) ನನ್ನ ಮಕ್ಕಳು ನನ್ನನ್ನು ತಾತ್ಸಾರ ಮಾಡ್ತಾರೆ. ಸರಿಯಾಗಿ ನೋಡಿಕೊಳ್ತಿಲ್ಲ. ನಾನು ಹೇಗೆ ಕಾನೂನು ಸಹಾಯ ಪಡೆಯಬಹುದು?

  • ರಾಜಲಕ್ಷ್ಮಿ, ಬಳ್ಳಾರಿ

ಉತ್ತರ: ಮಕ್ಕಳು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹಿರಿಯ ನಾಗರಿಕರು ಕೊರಗಬೇಕಾಗಿಲ್ಲ. ತಂದೆ-ತಾಯಿಯನ್ನು ಸಾಕುವುದು ಮಕ್ಕಳ ಕರ್ತವ್ಯವಾಗಿದೆ. ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ ಹಾಗೂ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಮಸೂದೆ ಕರ್ನಾಟಕದಲ್ಲಿ ಜಾರಿಯಲ್ಲಿದ್ದು, ಮಕ್ಕಳ ವಿರುದ್ಧ ಸೂಕ್ತ ಪ್ರಾಧಿಕಾರದಲ್ಲಿ ಅರ್ಜಿ ನೀಡಿ ಸಹಾಯ ಪಡೆಯಬಹುದಾಗಿದೆ. ಹಿರಿಯರ ಊಟೋಪಚಾರ ಅಲ್ಲದೇ ಮಾನಸಿಕ, ದೈಹಿಕ ಆರೋಗ್ಯದ ಹೊಣೆಯೂ ಮಕ್ಕಳದ್ದಾಗಿದೆ. ಇದರಲ್ಲಿ ದತ್ತು ಮಗನೂ ಸೇರುತ್ತಾನೆ. ತಂದೆ ತಾಯಿ ಮಾತ್ರವಲ್ಲ ಅಜ್ಜ-ಅಜ್ಜಿಯನ್ನು ನೋಡಿಕೊಳ್ಳುವ ಹೊಣೆಯೂ ಮಕ್ಕಳಿಗೆ ಇರುತ್ತದೆ. ಮಕ್ಕಳು ನಿಮ್ಮನ್ನು ಸರಿಯಾಗಿ ಗಮನಿಸಿಕೊಳ್ಳುತ್ತಿಲ್ಲ ಎನಿಸಿದರೆ ಮಾಸಿಕ ಹತ್ತು ಸಾವಿರ ರೂಪಾಯಿವರೆಗೂ ಮಾಸಿಕ ಭತ್ಯೆ ಪಡೆಯಬಹುದಾಗಿದೆ.

ಹಿರಿಯ ನಾಗರಿಕರನ್ನು ತ್ಯಜಿಸಿದರೆ ಅಂಥ ಮಕ್ಕಳಿಗೆ ಆರು ತಿಂಗಳು ಜೈಲು, ದಂಡ ಎರಡನ್ನೂ ವಿಧಿಸಬಹುದಾಗಿದೆ.

ಮಾರುತಿ ಕಾರ್ ಗೆ ಬಸ್ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಸಾವು

ಖಾಸಗಿ ಬಸ್ಸೊಂದು ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರಿನ ಮರಳೂರು ಕೆರೆ ಏರಿ ಮೇಲೆ ನಡೆದಿದೆ.

ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ನಡೆದಿದ್ದು ಗಂಡ-ಹೆಂಡತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಕೊಲೆ: ಯುವಕ ಬಂಧನ

ಕೋಡಿಹಳ್ಳಿ : ಮಹಿಳೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ತುರುವೇಕೆರೆ: ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತಾಲ್ಲೂಕಿನ ದಂಡಿನಶಿವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನು ತಾಲ್ಲೂಕಿನ ದಂಡಿನಶಿವರ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶಂಕರಯ್ಯ ಅವರ ಮಗ ದಿಲೀಪ್(30) ಎಂದು ಗುರುತಿಸಲಾಗಿದೆ.


ಘಟನೆಯ ವಿವರ: ಆ.25ರ ಸಂಜೆ 4:45ರ ಸಮಯದಲ್ಲಿ ಕೋಡಿಹಳ್ಳಿ ಗ್ರಾಮದ ಗಂಗಾಧರಯ್ಯ ಎಂಬುವರ ತೋಟದ ಬಳಿ ಮೃತ ಕಾವ್ಯ.ಎ.ಎಸ್ ಎಂಬುವರು ಹಸುವನ್ನು ಮೇಯಿಸುತ್ತಿರುವಾಗ ಇದೇ ಗ್ರಾಮದ ಆರೋಪಿ ದಿಲೀಪ್ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹಲ್ಲೆ ಮಾಡಿ ಕಲ್ಲನ್ನು ಮುಖದ ಮೇಲೆ ಎತ್ತಿ ಹಾಕಿ, ಜಜ್ಜಿ ಕೊಲೆ ಮಾಡಿ ಆರೋಪಿ ಯಾರಿಗೂ ಸಿಗದಂತೆ ತಲೆ ಮರೆಸಿಕೊಂಡಿದ್ದನು.


ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಪತ್ತೆ ಬಗ್ಗೆ ತುರುವೇಕೆರೆ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್ ಬಿ.ಎನ್ ಹಾಗು ಪಿಎಸ್ಐ ಎಚ್.ಎಚ್.ರಾಮಚಂದ್ರಯ್ಯರವರ ತಂಡ ವಿಶೇಷ ಕಾರ್ಯಚರಣೆಯ ಕೈಗೊಂಡು ಪ್ರಕರಣದಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಜೊತೆಗೆ ಕೊಲೆ ಮಾಡಿದ ಆರೋಪಿಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಆರೋಪಿಯ ಚಿಕ್ಕಪ್ಪ ನಟರಾಜು(55)ನನ್ನೂ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದ್ದಾರೆ.

ಪಿಎಸ್ಐ ಚಿತ್ತರಂಜನ್, ತುರುವೇಕೆರೆ ಠಾಣಾ ಪಿ.ಎಸ್.ಐ ರಾಮಚಂದ್ರಪ್ಪ, ಎ.ಎಸ್.ಐ ರವರುಗಳಾದ ಗಂಗಣ್ಣ, ನಾರಾಯಣಪ್ಪ, ನಾಗರಾಜು, ಸಿಬ್ಬಂದಿಗಳಾದ ಮಂಜುನಾಥ್, ಗುರುಮೂರ್ತಿ, ಕುಮಾರ್, ಲಕ್ಷ್ಮಪ್ಪ, ಇಬ್ರಾಹಿಂ ಆರೋಪಿ ಪತ್ತೆ ಕಾರ್ಯ ತಂಡದಲ್ಲಿದ್ದ ಎಲ್ಲರನ್ನೂ ಜಿಲ್ಲಾ ಎಸ್ಪಿ ಅಭಿನಂಧಿಸಿದ್ದಾರೆ.

ನಿಧನ ವಾರ್ತೆ: ಮೂಡಲಗಿರಯ್ಯ

0


ತುರುವೇಕೆರೆ: ತಾಲ್ಲೂಕಿನ ಕಸಬಾದ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಕಾಲೋನಿಯ ನಿವೃತ್ತ ಡಿಗ್ರೂಪ್ ನೌಕರ ಮೂಡಲಗಿರಯ್ಯ(65) ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಮೃತ ಮೂಡಲಗಿರಯ್ಯ ಇಬ್ಬರು ಗಂಡು ಮಕ್ಕಳು, ಪತ್ನಿ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ತಿಪಟೂರು ಉದಯಭಾರತಿ ಪದವಿ ಪೂರ್ವ ಕಾಲೇಜಿನ ಡಿಗ್ರೂಪ್ ನೌಕರರಾಗಿ ಸೇವೆಸಲ್ಲಿ ನಿವೃತ್ತರಾಗಿದ್ದರು. ಮೂಡಲಗಿರಯ್ಯ ಅವರು ಅನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ.
ಮೃತರ ಸ್ವಗ್ರಾಮವಾದ ಎ.ಹೊಸಹಳ್ಳಿ ಕಾಲೋನಿಯಲ್ಲಿ ಅಂತ್ಯಶವ ಸಂಸ್ಕಾರ ಬುಧವಾರ ಜರುಗಿತು.

DEATH: ಪೊಲೀಸರ ವಿರುದ್ಧ ತನಿಖೆಗೆ ಒತ್ತಾಯ

ತುರುವೇಕೆರೆ:
ತಾಲ್ಲೂಕಿನ ಕೆ.ಮಾವಿನಹಳ್ಳಿ ಕುಮಾರ್ ಆಚಾರ ಯುವಕನನ್ನು ಪೊಲೀಸರು ಇಸ್ಪೀಟ್ ನೆಪದಲ್ಲಿ ಬಂಧಿಸಿ ಅವರ ವಶದಲ್ಲಿ ಇರುವಾಗಲೇ ಯುವಕ ಸಾವನ್ನಪ್ಪಿರುವುದು ಕುಟುಂಬಸ್ಥರ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದ್ದು ಈ ಬಗ್ಗೆ ತೀವ್ರ ತನಿಖೆಯಾಗ ಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಜಯರಾಮ್ ಎ.ಎಸ್ ಒತ್ತಾಯಿಸಿದರು.

‘ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಅ.23 ರಂದು ನಡೆದ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ತಮ್ಮ ವಶಕ್ಕೆ ಪಡೆದು ಅವರ ಸ್ವಂತ ದ್ವಿಚಕ್ರ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆತರುವ ಮಾರ್ಗ ಮಧ್ಯೆ ಕುಮಾರ ಆಚಾರ್(47) ಎಂಬುವರು ಇದ್ದಕ್ಕಿದ್ದ ಹಾಗೆ ವಾಹನದಿಂದ ಕುಸಿದು ಕೆಳಗೆ ಬಿದ್ದಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಕುಮಾರ್ ಆಚಾರ್ನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ ಎಂದು ಪಟ್ಟಣದ ಪೊಲೀಸರು ಎಫ್ ಐಆರ್ ಮಾಡಿದ್ದಾರೆ.’

ಆದರೆ ಇದು ಸ್ವಾಭಾವಿಕ ಸಾವಲ್ಲ ಅನುಮಾನಾಸ್ಪದ ಸಾವು. ಮೃತಪಟ್ಟ ವ್ಯಕ್ತಿಯನ್ನು ಪೊಲೀಸರೇ ಎಡೆ ಮಟ್ಟೆಯಲ್ಲಿ ಒಡೆದು ಆತನನ್ನು ಆಸ್ಪತ್ರೆಗೆ ಕರೆತಂದಿರುವ ಸಾದ್ಯತೆಗಳಿವೆ ಎಂದು ಆರೋಪಿಸಿದ ಅವರು ಇಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿಸದೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಏಕೆ ತೆಗೆದುಕೊಂಡು ಹೋದರು.

18 ಗಂಟೆಗಳ ನಂತರ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಇದು ಪೊಲೀಸರು ತಾವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಹಾಡಿರುವ ನಾಟಕ. ಯಾವುದೇ ಕಾರಣಕ್ಕೂ ಇದು ಸ್ವಾಭಾವಿಕ ಸಾವಲ್ಲ ಆತನನ್ನು ಪೊಲೀಸರೇ ಹೊಡೆದು ಸಾಯಿಸಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆಯಾಗಬೇಕು, ಇಲ್ಲವಾದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯ ಮುಂದೆ ವಿಶ್ವಕರ್ಮ ಜನಾಂಗದವರು ಹಾಗೂ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಸಂಸದರು, ಪದಾಧಿಕಾರಿಗಳು, ಸೇರಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದು, ಎಚ್ಚರಿಕೆ ನೀಡಿದರು.

ಮೃತನ ಕುಟುಂಬವು ಸಹ ಇದು ಸಹಜ ಸಾವಲ್ಲ ಪೊಲೀಸರೇ ಒಡೆದು ಸಾಯಿಸಿದ್ದಾರೆ, ನಮಗೆ ನ್ಯಾಯ ಬೇಕು. ಸರಿಯಾದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಮೃತ ಕುಮಾರ್ ಆಚಾರ್ ಗೆ ಒಬ್ಬರು ಮಡದಿ, ಒಬ್ಬ ಮಗ, ಹೆಣ್ಣು ಮಗು, ವಯಸ್ಸಾದ ತಂದೆ ,ಮತ್ತು ಅಕ್ಕ, ಇದ್ದಾರೆ ಇವರನ್ನು ಸಾಕುವವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.

ಸುದ್ದಿ ಗೋಷ್ಟಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಹರಿಕಾರನಹಳ್ಳಿ ಸಿದ್ದಪ್ಪಾಜಿ, ಯು.ಬಿ.ಸುರೇಶ್, ಮೃತನ ಪತ್ನಿ ಮಂಜಮ್ಮ, ತಂಗಿ ಪುಷ್ಪ, ತಂದೆ ರಂಗಚಾರ್, ಭಾವ ಶಿವಲಿಂಗಚಾರ್ ಇತರರು ಇದ್ದರು.