Saturday, July 27, 2024
Google search engine
HomeUncategorizedಹಳೆ ಪಿಂಚಣಿ: ವೈ.ಎ. ನಾರಾಣಯಸ್ವಾಮಿ ಒತ್ತಾಯ

ಹಳೆ ಪಿಂಚಣಿ: ವೈ.ಎ. ನಾರಾಣಯಸ್ವಾಮಿ ಒತ್ತಾಯ

ತುರುವೇಕೆರೆ: ದೇಶದ ಅಭಿವೃದ್ಧಿಯ ಸಂಕೇತವಾಗಿರುವ ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಣಯಸ್ವಾಮಿ ಟೀಕಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಎನ್.ಪಿಎಸ್ ತೆಗೆದು ಹಾಕಿ ಓ.ಪಿ.ಎಸ್ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು.
ಈ ಸರ್ಕಾರ ಒಪಿಎಸ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಚುನಾವಣೆ ಪ್ರಣಾಳಿಕೆಯಂತೆ ಡಿಸೆಂಬರ್ನೊಳಗೆ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಎನ್.ಪಿಎಸ್ ತೆಗೆದುಹಾಕಿ ಒ.ಪಿಎಸ್ ಜಾರಿಯ ಬಗ್ಗೆ ಲೋಕಭಾ ಚುನಾವಣೆಯಲ್ಲಿ ನಾವೆಲ್ಲ ಸೇರಿಕೊಂಡು ಪ್ರದಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ನಮ್ಮ ಸರ್ಕಾರವಿದ್ದಾಗ ಏಳನೇ ವೇತನ ಆಯೋಗವನ್ನು ರಚನೆ ಮಾಡಿದ್ದತ್ತು. ಈ ವರದಿಯನ್ನು ಈಗಿನ ಸರ್ಕಾರ ಆದಷ್ಟು ಬೇಗ ಜಾರಿ ಮಾಡಿ ಅನುಷ್ಟಾನ ಗೊಳಿಸಬೇಕು ಹಾಗು ಶಿಕ್ಷಕರ ಹಲವಾರು ಬೇಡಿಕೆಗಳನ್ನು ಕೂಡಲೇ ಸರ್ಕಾರ ಜಾರಿ ಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಯ್ಯನವರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀರು, ವಿದ್ಯುತ್ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಅದು ಸ್ವಾಗತಾರ್ಹ.
ಸಿದ್ದರಾಮಯ್ಯರಿಗೆ ಈಗ ಸರ್ಕಾರಿ ಶಾಲೆಗಳ ಮೇಲೆ ಪ್ರೀತಿ ಹೆಚ್ಚಿದೆ. ಈ ಹಿಂದೆ ಮುಖ್ಯ ಮಂತ್ರಿಗಳಾಗಿದ್ದಾಗ ಸರ್ಕಾರಿ ಶಾಲೆಗಳನ್ನು ಮರೆತಿದ್ದರು. ಈ 5 ಗ್ಯಾರಂಟಿಗೆ ಸರಿ ಸುಮಾರು 50 ಸಾವಿರ ಕೋಟಿಯಾಗಲಿದೆ. ಈ ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷ ನಿಲ್ಲಿಸಿ ಆಹಣವನ್ನೇ ಸರ್ಕಾರಿ ಶಾಲೆಗೆ ತಲಾ 1 ಕೋಟಿ ಅನುದಾನ ನೀಡಿದರೆ ಉದ್ದಾರವಾಗಲಿವೆ ಎಂದರು.
ಪಿಂಚಣಿ ವಂಚಿತರಿಗೆ ಪಿಂಚಣಿ ನೀಡಲು ನಮ್ಮ ಸರ್ಕಾರವಿದ್ದಾಗಒಂದು ಸಮಿತಿಯನ್ನು ಮಾಡಲಾಗಿತ್ತು. ಈ ವರದಿಯನ್ನು ಈಗಿನ ಸರ್ಕಾರ ತರಿಸಿಕೊಂಡು ಯಾವ ಶಿಕ್ಷಕರೂ ಪಿಂಚಣಿಯಿಂದ ವಂಶಿತರಾಗದಂತೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ನ. 5 ರಂದು ಶಿಕ್ಷಕರುಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಶಿಕ್ಷಣ ಮಂತ್ರಿಗಳು ವರ್ಷದಲ್ಲಿ ಮೂರು ಪರೀಕ್ಷೆ ಮಾಡುವ ಹೇಳಿಕೆ ನೀಡಿದ್ದಾರೆ. ಯಾವ ಪರಿಕಲ್ಪನೆ ಇಟ್ಟುಕೊಂಡು ಹೇಳಿದ್ದಾರೋ ಅದನ್ನು ಶಿಕ್ಷಣ ಸಚಿವರು ಆದೇಶ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ 2 ಪರೀಕ್ಷಗಳೇ ಸರಿಯಾಗಿತ್ತು ಇದರಿಂದ ವಿದ್ಯಾರ್ಥಿಗಳಿಗೂ, ಉಪನ್ಯಾಸರಿಗೂ ಒತ್ತಡ ಕೆಲಸ ಜಾಸ್ತಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕೊಂಡಜ್ಜಿವಿಶ್ವನಾಥ್ ನಿವೃತ್ತ ಉಪ ಪ್ರಾಂಶುಪಾಲ ನಾಗರಾಜಪ್ಪ, ಮುಖ್ಯಶಿಕ್ಷಕ ವೆಂಕಟೇಶ್, ವಿದ್ಯಾರಣ್ಯ ಶಾಲೆ ಜಯಣ್ಣ, ಗುರುರಾಜು, ನಾಗರಾಜು ಶಿಕ್ಷಕರ ಸಂಘದ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?