Bengaluru: ಕಾನೂನುಬಾಹಿರವಾಗಿ ಹುಲಿ ಉಗುರು ಧರಿಸಿದ್ದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ. ಬಿಗ್ ಬಾಸ್ ಮನೆಯಿಂದಲೇ ಸಂತೋಷ್ ಅವರನ್ನು ರಾಮೋನಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಲಾಕೆಟ್ ಧರಿಸಿದ್ದಕ್ಕಾಗಿ ಅರಣ್ಯ ಇಲಾಖೆ ಬಂಧಿಸಿದೆ. ಹುಲಿ ಉಗುರುಗಳನ್ನು ಹೊಂದುವುದು ಕಾನೂನಿಗೆ ವಿರುದ್ಧವಾಗಿದೆ. ಹುಲಿ ಉಗುರುಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಿಲ್ಲ.
ಪ್ರದರ್ಶನದ ವೇಳೆ ಅವರು ಲಾಕೆಟ್ ಧರಿಸಿರುವುದು ಕಂಡುಬಂದಿದೆ. ಇದನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದ್ದು, ಅರಣ್ಯಾಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
ಅರಣ್ಯ ಇಲಾಖೆ ನಿನ್ನೆ ಸಂಜೆ (ಅಕ್ಟೋಬರ್ 22) ತಡರಾತ್ರಿ ಬಿಗ್ ಬಾಸ್ ಮನೆಗೆ ತಲುಪಿದ್ದು, ಪರೀಕ್ಷೆ ನಡೆಸಲು ಸ್ಪರ್ಧಿಯಿಂದ ಸರಪಳಿಯನ್ನು ಹೊರಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಪರೀಕ್ಷೆಯ ನಂತರ, ಅಧಿಕಾರಿಗಳು ಅವು ನಿಜವಾದ ಹುಲಿ ಉಗುರುಗಳು ಎಂದು ದೃಢಪಟ್ಟಿದೆ. ನಂತರ ಬಿಗ್ ಬಾಸ್ ಆಯೋಜಕರಿಗೆ ಸ್ಪರ್ಧಿಯನ್ನು ಹಸ್ತಾಂತರಿಸುವಂತೆ ಕೇಳಿಕೊಂಡರು.
Beಕೆಲವು ಗಂಟೆಗಳ ನಂತರ, ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರನಡೆದರು ಮತ್ತು ಅರಣ್ಯ ಇಲಾಖೆಯಿಂದ ಬಂಧಿಸಲಾಯಿತು. ಸಂತೋಷ್ ಬಂಧನಕ್ಕೆ ಡಿಸಿಎಫ್ ರವೀಂದ್ರ ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮಾತನಾಡಿ, ಅವರು ಹುಲಿ ಉಗುರುಗಳನ್ನು ಧರಿಸಿರುವುದು ಸಾರ್ವಜನಿಕರ ದೂರು, ದೂರಿನ ನಂತರ ನಾವು ಅದನ್ನು ಕೋಮಘಟ್ಟ ಬಳಿಯ ಬಿಗ್ ಬಾಸ್ ಸ್ಟುಡಿಯೋದಲ್ಲಿ ಪರಿಶೀಲಿಸಲು ಹೋಗಿ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದೇವೆ. ಲಾಕೆಟ್. ಸ್ವಲ್ಪ ಸಮಯದವರೆಗೆ ದಡ್ಡತನದ ನಂತರ, ಅವರು ಅದನ್ನು ನಮಗೆ ಹಸ್ತಾಂತರಿಸಲು ಒಪ್ಪಿಕೊಂಡರು ಎಂದು ಅರಣ್ಯಾಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.
Tumkuru : ಹಣ ಕೇಳಿದ್ದಕ್ಕೆ ಕೊಡದ ಹಿನ್ನೆಲೆಯಲ್ಲಿ ಮಗನಿಂದಲೇ ತಂದೆಯನ್ನು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು 65 ವರ್ಷದ ರೇಣುಕಯ್ಯ ಎಂದು ಗುರುತಿಸಲಾಗಿದೆ.
ಗುಬ್ಬಿ ತಾಲೂಕು ಕಡಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಮೇಶ್ ನನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.
ರೇಣುಕಯ್ಯ ಅವರನ್ನು ಮಗ ರಮೇಶ್ ಒಂದು ಸಾವಿರ ರೂಪಾಯಿ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ರೇಣುಕಯ್ಯ ಕೊಡಲು ನಿರಾಕರಿಸಿದ್ದರಿಂದ ಪುತ್ರ ರಮೇಶ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಮಚ್ಚಿನಿಂದ ಕೊಚ್ಚಿದ್ದರಿಂದ ರೇಣುಕಯ್ಯ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೇ ವಿಶ್ವಸಮರದ ಯುದ್ಧದಲ್ಲಿ ಗಾಯಗೊಂಡವರೂ, ನಿರಾಶ್ರಿತರೂ ಯೋಧರ ಆದ ಕ್ಷೇಮಾಭಿವೃದ್ಧಿಗಾಗಿ ಸ್ವಾತಂತ್ರ್ಯಪೂರ್ವ ದಿನಗಳಲ್ಲೇ ಸ್ಥಾಪನೆಗೊಂಡ ರೆಡ್ ಕ್ರಾಸ್ ಹೋಮ್ ಅಲಸೂರು ಕೆರೆ ಮುಂಭಾಗದ ವಿಶಾಲವಾದ ಮತ್ತು ಪ್ರಶಾಂತವಾದ ತಾಣದಲ್ಲಿದೆ. 1971ರ ಇಂಡೋ-ಪಾಕ್ ಯುದ್ಧ ಹಾಗೂ 1999ರ ಕಾರ್ಗಿಲ್ ಸಂಘರ್ಷಗಳಲ್ಲಿ ಸಂತ್ರಸ್ಥರಾದವರಿಗೂ ಇಲ್ಲಿ ಆಶ್ರಯ ನೀಡಲಾಗಿದೆ. ಇದರ ನಿರ್ವಹಣೆಗೆ ಗಣ್ಯರನ್ನು ಒಳಗೊಂಡ ಸಮಿತಿ ಇದ್ದು, ಡಾ.ಕೃಷ್ಣ ಅವರು ಇದರ ಆಡಳಿತ ಮಂಡಳಿಯಲ್ಲಿದ್ದಾರೆ.
ರೆಡ್‌ಕ್ರಾಸ್‌ನ ಉಚಿತ ರಕ್ತನಿಧಿ ಕೇಂದ್ರದ ಸುಧಾರಣೆ, ಉಚಿತ ಆಪ್ಟಿಕಲ್ ಸೆಂಟರ್‌ನ ಅಧುನೀಕರಣ, ಅರ್ಬನ್ ಮೆಟರ್ನಿಟಿ ಚೈಲ್ಡ್ ಅಂಡ್ ಫ್ಯಾಮಿಲಿ ವೆಲ್‌ಫೇರ್ ಸೆಂಟರ್, ಹೆಚ್‌ಐವಿ ಅಥವಾ ಏಡ್ಸ್ ಆರೈಕೆ-ನೆರವು ಹಾಗೂ ನಿರ್ವಹಣಾ ಕಾರ್ಯಗಳನ್ನು ಮತ್ತಷ್ಟು ಸಕ್ರಿಯಗೊಳಿಸಿದುದಲ್ಲದೆ; ಪ್ರಥಮ ಚಿಕಿತ್ಸೆ, ಹೋಮ್ ನರ್ಸಿಂಗ್ ತರಬೇತಿ, ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆ,
ಅವುಗಳ ನಿರ್ವಹಣಾ ಕ್ರಮ -ಹೀಗೆ ಇವರು ಸಕ್ರಿಯವಾಗಿ ಪಾಲ್ಗೊಂಡಿರುವ ಯೋಜನೆಗಳು ಒಂದೆರಡಲ್ಲ ಹತ್ತು ಹಲವಾರು. ಇವಿಷ್ಟಲ್ಲದೆ ಆರ್ಟಿಫಿಶಿಯಲ್ ಲಿಂಬ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯ ನೆರವಿನಿಂದ, ಸರ್ಕಾರೇತರ ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ನೆರವಿನೊಂದಿಗೆ ಕರ್ನಾಟಕದ 14 ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ವಿವಿಧ ರೀತಿಯಲ್ಲಿ ತೊಂದರೆಗೊಳಗಾದ ವಿಕಲಚೇತನರಿಗೆ ಗಾಲಿ ಕುರ್ಚಿಗಳು, ಉಚಿತ ಕನ್ನಡಕಗಳು ಮೊದಲಾದ ಅವಶ್ಯಕ ವಸ್ತುಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಗೌಡ ಎಂಬ ವಿಕಲಚೇತನನನ್ನು ಅನ್ಯಾಯವಾಗಿ ಗ್ರಂಥಾಲಯದ ಕೆಲಸದಿಂದ ಕಿತ್ತು ಹಾಕಿದನ್ನು ಕಂಡು ನೊಂದುಕೊಂಡರು. ಆ ವ್ಯಕ್ತಿ ಸಹಾಯ ಯಾಚಿಸಿ ಬಂದಾಗ ಸರ್ಕಾರದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಆ ವ್ಯಕ್ತಿಗೆ ಮರಳಿ ಉದ್ಯೋಗ ದೊರೆಯುವಂತೆ ನೋಡಿಕೊಂಡಿದ್ದು ಕೃಷ್ಣ ಅವರ ಅನನ್ಯ ಸೇವಾಮನೋಭಾವಕ್ಕೆ ಸಾಕ್ಷಿಯಾಗಿದೆ. ಹೀಗೆ ಇವರು ಅಶಕ್ತರ ಏಳಿಗೆಗಾಗಿ ವಹಿಸಿದ ಶ್ರಮವನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು 2008ರಲ್ಲಿ ‘ವಿಕಲಚೇತನರ ಸಬಲೀಕರಣ ರಾಜ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
ಸುನಾಮಿ ದುರಂತದ ಸಂತ್ರಸ್ಥರ ನೆರವಿಗಾಗಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಆಗ ಕರ್ನಾಟಕ ರೆಡ್‌ಕ್ರಾಸ್ ಸಂಸ್ಥೆಯು ಈ ದುರಂತದ ಸಂತ್ರಸ್ಥರಿಗೆ ಪರಿಹಾರ ಮತ್ತು ಪುನರ್ವಸತಿ ಒದಗಿಸುವ ಕೋಟ್ಯಂತರ ರೂಗಳ ಯೋಜನೆಯನ್ನು ತಮಿಳುನಾಡಿನ ಕಡಲೂರು ಮತ್ತು ನಾಗಪಟ್ಟಣಮ್ ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲಿ
ಕೈಗೊಂಡಿತು. ಈ ಅತ್ಯಂತ ಯಶಸ್ವಿ ಪರಿಹಾರ ಕಾರ್ಯಕ್ರಮ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ, ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಅಂಡ್ ರೆಡ್ ಕ್ರೆಸೆಂಟ್ ಸೊಸೈಟಿಗಳಿಗೆ 2006ರಲ್ಲಿ ಸ್ಥಾಪಿಸಿದ ‘ಹೆನ್ರಿ ಡುನ್ಯಾಂಡ್ ಚಿನ್ನದ ಪದಕ’ವನ್ನು ದೊರಕಿಸಿಕೊಟ್ಟಿತು. ಸುನಾಮಿ ಅಪ್ಪಳಿಸಿದಾಗ ತಮಿಳುನಾಡಿನಲ್ಲಿ ವಸತಿಗೃಹಗಳನ್ನು ಕಟ್ಟಿಸಿಕೊಡುವುದರ ಜೊತೆಗೆ, ಅಲ್ಲಿನ ಜನರಿಗೆ ಜೀವನಾಧಾರವನ್ನು ಕಲ್ಪಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಮಾಡಿದ ಸೇವೆಗೆ ಕರ್ನಾಟಕ ರಾಜ್ಯಪಾಲರಿಂದ 2005ರಲ್ಲಿ ಇವರಿಗೆ ದೊರೆತ ರೆಡ್ ಕ್ರಾಸ್ ಸೇವಾ ಪ್ರಶಸ್ತಿ’ ಮತ್ತೊಂದು ಗರಿಯಾಗಿ ಕಂಗೊಳಿಸುತ್ತಿದೆ. ಈ ಪರಿಹಾರ ಕಾರ್ಯದಲ್ಲಿ ಮಹತ್ತರ ಪಾತ್ರವಹಿಸಿದ ಡಾ. ಕೃಷ್ಣ ಉತ್ತರ ಕರ್ನಾಟಕದಾದ್ಯಂತ ಆಯ್ಕೆ ಮಾಡಿಕೊಂಡ ಹಾಗೂ ತರಬೇತಿ ಪಡೆದ ಸ್ವಯಂ ಸೇವಕರನ್ನುಳ್ಳ ರೆಡ್ ಕ್ರಾಸ್ ಡಿಸಾಸ್ಟರ್ ರೆಸ್‌ಪಾನ್ಸ್ ತಂಡಗಳನ್ನು ರೂಪಿಸಿದ್ದರು. 2008ರಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗಾಗಿ ರೆಡ್ ಕ್ರಾಸ್ ಸಂಸ್ಥೆ ಕೈಗೊಂಡ ಕೋಟ್ಯಂತರ ರೂಗಳ ನೆರವಿನ ಯೋಜನೆಯ ತಂಡದ ಮುಖ್ಯಸ್ಥರಾಗಿದ್ದರು. ಇವರ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿನ ಪರಿಣತಿ ಮತ್ತು ಸೇವಾ ಮನೋಭಾವವನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ನೇತೃತ್ವದ ‘ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ಕ್ಕೆ ರಾಜ್ಯ ದರ್ಜೆಯ ಸದಸ್ಯರನ್ನಾಗಿ ನೇಮಕಮಾಡಿತು.
ನನ್ನ ಭೂಮಿ ಎತ್ತಿನಹೊಳೆ ಯೋಜನೆಗೆ ಸ್ವಾಧೀನಗೊಂಡಿದೆ. ಕಡಿಮೆ ಪರಿಹಾರ ನೀಡಿದ್ದಾರೆ. ಇದನ್ನು ನಾನು ಎಲ್ಲಿ ಪ್ರಶ್ನೆ ಮಾಡಬೇಕು ತಿಳಿಸಿ.
ಕಲ್ಲೇಶ್, ಕಲ್ಲೇಗೌಡನಪಾಳ್ಯ, ತಿಪಟೂರು
ಹೊಸ ಭೂ ಸ್ವಾಧೀನ ಕಾಯ್ದೆಯಡಿ ಸರ್ಕಾರ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಭೂಮಿ ಸ್ವಾಧೀನಕ್ಕೂ ಮುನ್ನ ಯೋಜನೆಯಿಂದ ಆಗುವ ಸಾಮಾಜಿಕ ಪರಿಣಾಮಗಳ ನಿರ್ಧರಣೆಯನ್ನು ಮಾಡಬೇಕಾಗುತ್ತದೆ. ವಿಶೇಷ ಭೂ ಸ್ವಾಧೀನಾಧಿಕಾರಿಗಳು ನಿಮ್ಮ ಭೂಮಿಗೆ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸಿದ ನಂತರ ನಿಮಗೆ ಅಂತಿಮ ಅವಾರ್ಡ್ ನೋಟಿಸ್ ಅನ್ನು ನೀಡುತ್ತಾರೆ. ನಿಮಗೆ ಕಡಿಮೆ ಪರಿಹಾರ ನೀಡಿದ್ದಾರೆ ಅನ್ನಿಸಿದರೆ ನೀವು ಅವಾರ್ಡ್ ನೋಟಿಸ್ ಪಡೆದ 60 ದಿನಗಳ ಒಳಗಾಗಿ ಸಕ್ಷಮ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿ ಎದುರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ವಕೀಲರ ಮೂಲಕ ಸಲ್ಲಿಸಿ. ಈ ಅರ್ಜಿ ವಿಚಾರಣೆ ನಡೆಸಿ ಹೆಚ್ಚುವರಿ ಪರಿಹಾರ ನಿರ್ಧರಣೆ ಮಾಡುವಂತೆ ಜಿಲ್ಲಾಧಿಕಾರಿ ಅವರು ನಿಮ್ಮ ಅರ್ಜಿಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿ ಕೊಡುತ್ತಾರೆ. ನ್ಯಾಯಾಲಯವು ನೀವು ಸಲ್ಲಿಸುವ ಸಾಕ್ಷ್ಯ ಆಧರಿಸಿ ಭೂಮಿಯ ಮಾರುಕಟ್ಟೆ, ಗಿಡಮರಗಳ ಮೌಲ್ಯವನ್ನು ನಿರ್ಧರಣೆ ಮಾಡಲಿದೆ. ನಿಮ್ಮ ಭೂಮಿಯನ್ನು ಸ್ವಾಧೀನದ ಪ್ರಕಟಣೆ ಹೊರಡಿಸಿದ ದಿನದಿಂದ ಕೋರ್ಟ್ ಆದೇಶದ ದಿನದವರೆಗೆ ಕೋರ್ಟ್ ನೀಡಿದ ಹೆಚ್ಚುವರಿ ಪರಿಹಾರಕ್ಕೆ ನಿಮಗೆ ಬಡ್ಡಿ ಸಹ ಸಿಗಲಿದೆ.
ನನ್ನ ಭೂಮಿಯನ್ನು ಹೇಮಾವತಿ ನಾಲಾ ವಲಯಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ ನಾನು ಹಾಕಿದ ಕೇಸ್ ವಜಾ ಆಗಿತ್ತು. ಇದಾಗಿ ಹತ್ತು ವರ್ಷ ಕಳೆದಿವೆ. ಈಗ, ನಾನು ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದೇ?
ಪುಟ್ಟೇಗೌಡ, ಹೊಸೂರ್, ನೊಣವಿನಕೆರೆ. ತುಮಕೂರು ಜಿಲ್ಲೆ
ಸೂಕ್ತ ಕಾರಣಗಳನ್ನು ನೀಡಿ ಮೇಲ್ಮನವಿ ಸಲ್ಲಿಸಲು ನಿಮಗೆ ಅವಕಾಶವಿದೆ. ಭೂ ಸ್ವಾಧೀನದ ಪ್ರಕರಣಗಳಲ್ಲಿ ಕಾಲ ವಿಳಂಬವನ್ನು ನ್ಯಾಯಾಲಯಗಳು ಮನ್ನಾ ಮಾಡಿದ ಅನೇಕ ಉದಾಹರಣೆಗಳಿವೆ. ಹೀಗಾಗಿ ನೀವು ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಿ.
ನನ್ನ ಹೆಂಡತಿ ಮೂರು ವರ್ಷದಿಂದ ನನ್ನ ಜತೆ ಬದುಕುತ್ತಿಲ್ಲ. ಇದೇ ಆಧಾರದಲ್ಲಿ ನಾನು ವಿವಾಹ ವಿಚ್ಛೇದನ ಪಡೆಯಬಹುದೇ?
ರಾಮಕೃಷ್ಣಾ, ಬೆಂಗಳೂರು
ಹೆಂಡತಿ ಪ್ರತ್ಯೇಕವಾಸದಲ್ಲಿ ಇದ್ದರೆ ಇದೇ ಆಧಾರದಲ್ಲಿ ನೀವು ಡೈವೋರ್ಸ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಕುಟುಂಬದಲ್ಲಿ ಗಂಡ ಹೆಂಡತಿ ಬಂದಾಗಿ ಬದುಕಲು ಮೊದಲು ಪ್ರಯತ್ನಿಸಬೇಕು. ಹಿರಿಯರೊಂದಿಗೆ ಮಾತನಾಡಿ ನಿಮ್ಮ ಮನಸ್ತಾಪ ಕಡಿಮೆ ಮಾಡಿಕೊಳ್ಳಿ. ರಾಜೀ ಆಗಿದೆ. ಇದಾಗಿದ್ದರೆ ನೀವು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ. ಸ್ಥಳೀಯ ವಕೀಲರನ್ನು ಭೇಟಿ ಮಾಡಿ ಮಾಹಿತಿ ಪಡೆಯಿರಿ.
Tumkuru: ಜಲಜೀವನ್ ಮಿಷನ್ ಯೋಜನೆಯಡಿ 8 ಹಂತಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಗೃಹ ಸಚಿವ dr. G. Parmeshwer ಈ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಖುದ್ದು ಭೇಟಿ ಪರಿಶೀಲಿಸಿದ್ದೇನೆ. ಹಲವಾರು ಗ್ರಾಮಗಳಲ್ಲಿ ನಳ ಸಂಪರ್ಕಕ್ಕಾಗಿ ಜಿ.ಐ. ಪೈಪ್ ಬದಲಿಗೆ ಪ್ಲಾಸ್ಟಿಕ್ ಪೈಪ್ ಅಳವಡಿಸಲಾಗಿದೆ. ಅಳವಡಿಸಿದ ನಲ್ಲಿ ಬಳಿ ನೀರು ನಿಲ್ಲದಂತೆ ಚರಂಡಿ ಕಡೆ ಹರಿಯುವಂತೆ ಮಾಡಬೇಕು. ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಇಂಜಿನಿಯರ್‍ಗಳು ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಜೆಜೆಎಂ ಕಾಮಗಾರಿ ಶೇಕಡಾ 100ರಷ್ಟು ಪ್ರಗತಿ ಕಂಡಿದ್ದು, ತುಮಕೂರಿನಲ್ಲಿ ಯೋಜನೆಗೆ ವೇಗ ನೀಡಿ ಶೇ. 100ರಷ್ಟು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಮಾಡುವ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಬೇಕು. ಸ್ವಚ್ಛತೆಗೆ ಆದ್ಯತೆ ನೀಡದ ಪಿಡಿಓಗಳ ಅಮಾನಿತ್ತಿಗೆ ಸ್ವತಃ ನಾನೇ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ ಅವರು, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಜಿಲ್ಲಾ ಪಂಚಾಯತಿಯ ನರಸಿಂಹಮೂರ್ತಿ, ಸಣ್ಣಮಸಿಯಪ್ಪ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು
ಕರ್ನಾಟಕ ಲೇಖಕರ ಸಂಘ (ರಿ) ತುಮಕೂರು ಜಿಲ್ಲಾ ಶಾಖೆ , ಸಾಕ್ಷಿ ಪ್ರತಿಷ್ಠಾನ ವಿಚಾರ ಮಂಟಪ ಇವರ ಸಹಯೋಗದಲ್ಲಿ ಲೇಖಕಿ ಬಯಲು ಓದು ಬಳಗದವತಿಯಿಂದ “ಯುವಜನತೆಗೆ ಬೇಕಾದ ಗಾಂಧಿ ” ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ/ ರವಿಕುಮಾರ್ ನೀಹ ಅವರು ಯುವಜನತೆಗೆ ಬೇಕಾದ ಗಾಂಧಿ ವಿಚಾರ ಕುರಿತು ಉಪನ್ಯಾಸವನ್ನು ನೀಡಿದರು. ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಲೇಖಕಿಯರ ಸಂಘದ ತುಮಕೂರಿನ ಶಾಖೆಯೂ ಪ್ರತಿ ತಿಂಗಳ ಮೂರನೆ ಶನಿವಾರ ಒಂದು ಪುಸ್ತಕ ಕುರಿತ ಓದು ಮತ್ತು ಸಂವಾದ ನಡೆಸುತ್ತಾ ಬಂದಿದೆ. ಈ ತಿಂಗಳು ಗಾಂಧೀಜಿಯವರ ಕುರಿತ ಹೊಸ ನೋಟ ಕೊಡುವ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಇಂದು ನಾವು ಗಾಂಧಿಯವರ ತತ್ವಗಳನ್ನು ನೋಡಲು ಹೊಸ ದೃಷ್ಠಿಕೋನದ ಅವಶ್ಯಕತೆ ಇದೆ. ಇಂದಿನ ಕೆಲ ಯುವಜನತೆ ಗಾಂಧಿ ತತ್ವಗಳನ್ನು ತಪ್ಪಾಗಿ ಗ್ರಹಿಸಿ ತಪ್ಪಾಗಿ ಅರ್ಥೈಸುತ್ತಿರುವ ಇಂದಿಗೆ ಗಾಂಧಿಯ ವಿಚಾರ ಅರಿವು ಅವಶ್ಯವಾಗಿ ಬೇಕಾಗಿದೆ.
ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ತುಮಕೂರು ಶಾಖೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಬಸವರಾಜು, ಓದು ಬಳಗದ ಸಂಚಾಲಕರಾದ ಆಶಾರಾಣಿ ಬಗ್ಗನಡು, ಡಾ.ಪ್ರಿಯಾಂಕ, ಪಾರ್ವತಮ್ಮ, ಮರಿಯಂಬಿ, ಲೇಖಕಿಯರ ಸಂಘದ ಕಾರ್ಯದರ್ಶಿಯಾದ ಡಾ. ಶ್ವೇತಾರಾಣಿ.ಹೆಚ್. ಮತ್ತಿತರು ಉಪಸ್ಥಿತರಿದ್ದರು.
ತುಮಕೂರು: ಕರ್ತವ್ಯ ಲೋಪ ಆರೋಪದ ಮೇರೆಗೆ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಆದೇಶ ಹೊರಡಿಸಿದ್ದಾರೆ. ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಹೆಡ್ ಕಾನ್ಸ್’ಟೇಬಲ್ ಶಿವಣ್ಣ, ಕಾನ್‌ಸ್ಟೇಬಲ್ ಸಂತೋಷ್ ಹಾಗೂ ಮಹಿಳಾ ಠಾಣೆಯ ಕಾನ್‌ಸ್ಟೇಬಲ್ ಕುಸುಮ ಅವರು ಸೇವೆಯಿಂದ ಅಮಾನತುಗೊಳಗಾದವರು.
ತುಮಕೂರು: ಕರ್ತವ್ಯ ಲೋಪ ಆರೋಪದ ಮೇರೆಗೆ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಆದೇಶ ಹೊರಡಿಸಿದ್ದಾರೆ. ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಹೆಡ್ ಕಾನ್ಸ್’ಟೇಬಲ್ ಶಿವಣ್ಣ, ಕಾನ್‌ಸ್ಟೇಬಲ್ ಸಂತೋಷ್ ಹಾಗೂ ಮಹಿಳಾ ಠಾಣೆಯ ಕಾನ್‌ಸ್ಟೇಬಲ್ ಕುಸುಮ ಅವರು ಸೇವೆಯಿಂದ ಅಮಾನತುಗೊಳಗಾದವರು.
ತುಮಕೂರು : ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ರೈತರಿಗೆ ಬೆಳೆ ನಷ್ಟ ಪರಿಹಾರ ಸೇರಿದಂತೆ ವಿವಿಧ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಸಾರ್ವಜನಿಕರಿಂದ ಯಾವುದೇ ದೂರು ಬಂದರೂ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರಸ್ತುತ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯಲ್ಲಿ ದೂರು ಬಂದರೂ ಮುಲಾಜಿಲ್ಲದೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ಪಾದಿಸಬಹುದಾದ ಬೆಳೆ ಪ್ರಮಾಣದ ವಾಸ್ತಾವಿಕ ಮಾಹಿತಿ ನೀಡಬೇಕು. ಇದರಿಂದ ಆಹಾರ ಧಾನ್ಯ ಕೊರತೆಯನ್ನು ಅಂದಾಜಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರಲ್ಲದೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಮಾ ಮೊತ್ತ ವಿತರಣೆಯಾಗಬೇಕು. ವಿಮಾ ಸೌಲಭ್ಯಕ್ಕೆ ಈವರೆಗೂ ನೋಂದಣಿಯಾಗದ ರೈತರಿಗೆ ಅರಿವು ಮೂಡಿಸಿ ರೈತರ ನೋಂದಣಿಗೆ ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದಿರುವುದರಿಂದ ಬೆಳೆ ನಷ್ಟ ಪರಿಸ್ಥಿತಿ ಎದುರಿಸಬೇಕಾಗುವುದಲ್ಲದೆ ಜಾನುವಾರುಗಳ ಮೇವಿಗೂ ಕೊರತೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನೀರಿನ ಲಭ್ಯತೆ ಇರುವ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಿಸಿ ಮೇವು ಬೆಳೆಯಲು ಹುರಿದುಂಬಿಸಬೇಕು.
ಜಿಲ್ಲೆಯಲ್ಲಿ ಉಂಟಾಗಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಹೊರ ರಾಜ್ಯಗಳಲ್ಲಿ ಮೇವಿನ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಬೇಕೆಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ|| ಗಿರೀಶ್ ಬಾಬು ರೆಡ್ಡಿ ಅವರಿಗೆ ಸೂಚನೆ ನೀಡಿದರು.