ತುಮಕೂರು : ನಗರದ ಬಂಡಿಮನೆ ಕಲ್ಯಾಣ ಬಂಡಿಮನೆ ಕಲ್ಯಾಣ ಮಂಟಪದ ಸಮೀಪ ರೌಡಿ ಶೀಟರ್ ಒಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ನಾಲ್ಕೈದು ಮಂದಿ ಸೇರಿಕೊಂಡು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ನಗರ ಬೆಚ್ಚಿಬಿದ್ದಿದೆ.
ಕೊಲೆಯಾದ ರೌಡಿಶೀಟರ್ ಅನ್ನು ಮದುಗಿರಿ ತಾಲೂಕಿನ ಮಾರುತಿ ಅಲಿಯಾಸ್ ಪೋಲರ್ಡ್ ಎಂದು ಗುರುತಿಸಲಾಗಿದೆ.
, ಈತ ತುಮ್ಕೂರಿನ ಮಂಚಕ್ಕಲ್ ಕುಪ್ಪೆ ಬಳಿ ಹೆಂಡತಿಯೊಂದಿಗೆ ವಾಸವಾಗಿದ್ದ. ಮೂಲತಹ ಮಧುಗಿರಿ ತಾಲೂಕು ಕೊಡಿಗೆನಹಳ್ಳಿ ಮೂಲದವನು.
ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಮಧ್ಯದ ಪಾರ್ಟಿ ಮಾಡುವಾಗ ರೌಡಿಗಳ ಗುಂಪು ದಾಳಿ ನಡೆಸಿದೆ.
ಕೆಲ ವರ್ಷಗಳ ಹಿಂದೆ ತುಮಕೂರಲ್ಲಿ ನಡೆದಿದ್ದ ಹಟ್ಟಿ ಮಂಜುನಾಥ್ ಕೊಲೆ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಈತನ ಮೇಲಿವೆ.
ಹಟ್ಟಿ ಮಂಜನ ಶಿಷ್ಯರೇ ಸೇರಿಕೊಂಡು ಈ ಕೊಲೆ ಮಾಡಿರಬಹುದೆ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ನಂತರ ನಿಜವಾದ ಕಾರಣ ತಿಳಿದು ಬರಲಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.