Tumkuru : ಹಣ ಕೇಳಿದ್ದಕ್ಕೆ ಕೊಡದ ಹಿನ್ನೆಲೆಯಲ್ಲಿ ಮಗನಿಂದಲೇ ತಂದೆಯನ್ನು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು 65 ವರ್ಷದ ರೇಣುಕಯ್ಯ ಎಂದು ಗುರುತಿಸಲಾಗಿದೆ.
ಗುಬ್ಬಿ ತಾಲೂಕು ಕಡಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಮೇಶ್ ನನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.
ರೇಣುಕಯ್ಯ ಅವರನ್ನು ಮಗ ರಮೇಶ್ ಒಂದು ಸಾವಿರ ರೂಪಾಯಿ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ರೇಣುಕಯ್ಯ ಕೊಡಲು ನಿರಾಕರಿಸಿದ್ದರಿಂದ ಪುತ್ರ ರಮೇಶ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಮಚ್ಚಿನಿಂದ ಕೊಚ್ಚಿದ್ದರಿಂದ ರೇಣುಕಯ್ಯ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.