Thursday, March 12, 2026
Google search engine
Home Blog Page 32

ಶಿಕ್ಷಣ ಶಿಲ್ಪಿ: ನಾಲ್ಕನೆಯ ಆವೃತ್ತಿ ಬಿಡುಗಡೆ

ದಿನಾಂಕ 20/08/2023 ರಂದು ಬೆಂಗಳೂರಿನ ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇಲ್ಲಿ ಬೆಳಗ್ಗೆ 10.30 ಕ್ಕೆ ನಾಡೋಜ. ಡಾ ವೂಡೇ ಪಿ ಕೃಷ್ಣ ಅವರ ಜೀವನ ಕುರಿತ ಶಿಕ್ಷಣ ಶಿಲ್ಪಿ ನಾಲ್ಕನೆಯ ಆವೃತ್ತಿ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಳೆದ ಐದು ವಾರದಿಂದ ಪ್ರತಿ ಭಾನುವಾರ ಶಿಕ್ಷಣ ಶಿಲ್ಪಿ ಪಬ್ಲಿಕ್ ಸ್ಟೋರಿ. ಇನ್ ನಲ್ಲಿ ಪ್ರಕಟವಾಗುತ್ತಿದೆ. ಜೊತೆಗೆ ಮುಖಾಮುಖಿ,ಅಂಬೇಡ್ಕರ್ ಅನುಸಂದಾನ, ನೂರು ನೆನಪು ಕೃತಿಗಳು ಕೂಡ ಬಿಡುಗಡೆಯಾಗಲಿವೆ.

ಕನ್ನಡಕ್ಕಾಗಿ ಜೈಲು ಸೇರಿದ ಕೃಷ್ಣ

ಕಳೆದಸಂಚಿಕೆಯಿಂದ………

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚುರುಕುತನ,ಅದ್ಭುತ ಜ್ಞಾಪಕ ಶಕ್ತಿ ,ನಿರರ್ಗಳ ವಾಕ್ ಕೌಶಲ್ಯಗಳು ಬಹುಶಃ ಬಾಲ್ಯದಿಂದಲೇ ಇವರಿಗೆ ಒಲಿದು ಬಂದ ಬಂಡವಾಳಗಳು. ಬದುಕಿನಲ್ಲಿ ಎಷ್ಟು ಹಣ ಗಳಿಸಿದ್ದೇವೆ? ಎಷ್ಟು ಆಸ್ತಿ ಮಾಡಿದ್ದೇವೆ ? ಯಾವ ಅಧಿಕಾರವನ್ನು ಧಕ್ಕಿಸಿಕೊಳ್ಳಬೇಕು ? ಇತ್ಯಾದಿಗಳ ಬಗ್ಗೆ ಆಲೋಚಿಸುವಂತಹ ಅವರ ಸಂಖ್ಯೆಯೇ ಸಮಾಜದಲ್ಲಿ ಹೆಚ್ಚಾಗಿರುವಾಗ ಸಮಾಜಕ್ಕೆ ನಮ್ಮ ಕೊಡುಗೆ ಏನು ? ಇತರರ ಕಷ್ಟ ಪರಿಹಾರಗಳಲ್ಲಿ ಹೇಗೆ ಭಾಗಿಯಾಗಿದ್ದೇವೆ ಎಂದು ಪ್ರಶ್ನಿಸಿಕೊಂಡು ಬದುಕುವ ಅಪರೂಪದವರಲ್ಲಿ ಅಪರೂಪದ ವ್ಯಕ್ತಿಗಳ ಸಾಲಿನಲ್ಲಿ ಕೃಷ್ಣ ಅವರು ಒಬ್ಬರು ಇವರ ದೈನಂದಿನ ಬದುಕಿನ ಪುಟಗಳಲ್ಲಿ ಒಮ್ಮೆ ಇಣುಕಿ ನೋಡಿದಾಗ ಒಂದು ವ್ಯರ್ಥ ಕ್ಷಣವು ಸಿಗಲಾರದೇನೋ? ಹೀಗೆ ಬದುಕಿನಲ್ಲಿ ಪ್ರತಿಕ್ಷಣವೂ ಒಂದಲ್ಲ ಒಂದರಲ್ಲಿ ತಮ್ಮನ ತೊಡಗಿಸಿಕೊಂಡಿರುತ್ತಾರೆ.

ಅಧ್ಯಯನ,ಅವಗಾಹನೆ, ಚಿಂತನೆ, ಅನುಭವಗಳ ಮೂಲಕ ಇವರು ಅಪಾರ ಜ್ಞಾನವನ್ನು ಸಂಪಾದಿಸಿದ್ದಾರೆ. ಯಾವುದೇ ವಿಷಯಗಳ ಬಗ್ಗೆ ಇವರು ಗಂಟೆಗಟ್ಟಲೆ ಅಧಿಕೃತವಾಗಿ ನಿರರ್ಗಳವಾಗಿ ಮಾತನಾಡಬಲ್ಲ ಪ್ರೌಢಿಮೆ ಪಡೆದಿದ್ದಾರೆ. ಇಂತಹ ಸಾಧನೆ ಸಾಧ್ಯವಾಗಿರುವುದು ಅವರಲ್ಲಿರುವ ತಾದ್ಯಾತ್ಮತೆಯೇ ಈ ಮಟ್ಟಕ್ಕೆ ಬೆಳೆಸಿದೆ.

ಇವರಲ್ಲಿರುವ ಮತ್ತೊಂದು ವಿಶೇಷವೆಂದರೆ ಯಾವುದೇ ಕಾರಣಕ್ಕೂ ಆಗಲಿ ಯಾರನ್ನು ದ್ವೇಷಿಸುವುದಿಲ್ಲ ಯಾರ ಬಗ್ಗೆಯೂ ಕೆಟ್ಟ ನುಡಿಗಳನ್ನಾಡುವುದಿಲ್ಲ. ಅಸೂಯೆ ಪಡುವುದಿಲ್ಲ. ಯುವ ಪೀಳಿಗೆ ಬಗ್ಗೆ ಇವರಿಗೆ ತುಂಬು ಭರವಸೆ ಇದೆ. ನಿರಂತರ ಕ್ರಿಯಾಶೀಲತೆ, ಬತ್ತದ ಉತ್ಸಾಹ, ಸೇವಾನಿಷ್ಠೆ, ಮಾನವ ಪ್ರೀತಿ, ಇವು ಇವರ ವ್ಯಕ್ತಿತ್ವದ ಅವಿಚಿನ್ನ ಭಾಗಗಳು ಇವರು ನಮ್ಮ ಸಾಂಸ್ಕೃತಿಕ ಪ್ರತಿನಿಧಿ ಎಂದರೆ ತಪ್ಪಾಗಲಾರದು.

ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸೇರಿದರು. ವಿದ್ಯಾರ್ಥಿ ಚಳುವಳಿಗಳಲ್ಲಿಯೂ ಇವರು ಮುಂಚೂಣಿಯಲ್ಲಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಗೋಕಾಕ್ ಚಳುವಳಿಯ ಪ್ರಭಾವಕ್ಕೊಳಗಾಗಿ ತಾವೇ ಸ್ಥಾಪಿಸಿದ ಕಾಲೇಜು ಕನ್ನಡ ಸಂಘದ ಮೂಲಕ ಧರಣಿ ಕುಳಿತು ಬಂಧಿತರಾಗಿ, ತಾಂತ್ರಿಕ ವಿದ್ಯಾರ್ಥಿಗಳು ಕನ್ನಡ ಹೋರಾಟದಲ್ಲಿ ಭಾಗವಹಿಸಿದ ದಾಖಲೆಯನ್ನು ನಿರ್ಮಿಸಿದರು. ತಾಂತ್ರಿಕ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಪೋಸ್ಟರ್ ಗಳನ್ನು ತಯಾರಿಸಿ ವಾಹನಗಳ ಮೇಲೆ ಅಂಟಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿ ಕನ್ನಡ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮುಂದಾಳತ್ವದಲ್ಲಿ ನಡೆಸುತ್ತಿದ್ದರು ವಿದ್ಯಾರ್ಥಿ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ತಂದೆಯವರ ಆತಂಕದ ಮೇರೆಗೆ ಕೃಷ್ಣರವರು ಚಳುವಳಿಯಿಂದ ಹಿಂದೆ ಸರಿದು ಅಧ್ಯಯನದಲ್ಲಿ ಮುಳುಗಿದರು.

ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ನಂತರ ಇದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಸಂಶೋಧನೆ ಮಾಡಿ ಸ್ನಾತಕೋತ್ತರ ಪದವಿ ಪಡೆದರು ಈ ಪದವಿಗಳನ್ನು ಪಡೆದಿದ್ದರು ಕೆಲಸ ನಿರ್ವಹಿಸಿದ್ದು ಮಾತ್ರ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರೆದು ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನಿನಗೆ ಏನು ಇಷ್ಟವೋ ಅದನ್ನೇ ಓದು, ಅದನ್ನೇ ಮಾಡು’ ಎಂಬುದು ಇವರ ತಂದೆಯವರ ಆಶಯ ನಂತರ ಲಾ ಓದಬೇಕೆಂಬ ತುಡಿತ ಎಲ್ ಎಲ್ ಬಿ ಹಾಗೂ ಎಮ್ಎಲ್ ಕಾನೂನು ಪದವಿ ಪಡೆದ ನಂತರವೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮೋ ಹಾಗೂ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪಿಎಚ್ ಡಿ ಪದವಿ ಗಳಿಸಿದರು. ಈಗಲೂ ಇವರು ನಿರಂತರ ವಿದ್ಯಾರ್ಥಿ.

ವಿದ್ಯಾರ್ಥಿ ದೆಸೆಯಿಂದಲೇ ಬಂದ ಕನ್ನಡ ನಾಡು ನುಡಿಯ ಬಗೆಗಿರುವ ಕಾಳಜಿ ವ್ಯಕ್ತಿತ್ವ ನಿರ್ಮಾಣಕ್ಕೆ ಒದಗಿ ಬಂದ ಪ್ರೇರಣೆ ಪ್ರಭಾವಗಳು ಶಿಕ್ಷಣ ಮತ್ತು ಸಾಮಾಜಿಕ ಬದ್ಧತೆಗಳು ಇವರ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದವು. ಕೃಷ್ಣರವರು ಸಮಾಜವನ್ನು ತಮ್ಮ ಕುಟುಂಬ ಎಂದು ಭಾವಿಸಿದವರು. ಅದೇ ರೀತಿಯಲ್ಲಿ ಅದರ ಏಳಿಗೆಯೇ ನನ್ನ ಏಳಿಗೆ ಎಂದು ಬಯಸಿ ದುಡಿಯುತ್ತಿರುವುದನ್ನು ಗಮನಿಸಿದರೆ ಅವರ ಮನಸ್ಸು ಎಷ್ಟು ವಿಶಾಲವೆಂಬುದು ಅರಿವಾಗುತ್ತದೆ.

ವಿಶೇಷವೆಂದರೆ ಯುವಕರಾಗಿದ್ದಾಗ ಇಂಜಿನಿಯರಿಂಗ್ ಮುಗಿಸಿ ಲಾ ಮಾಡಲು ಶೇಷಾದ್ರಿಪುರಂ ಲಾ ಕಾಲೇಜಿಗೆ ಬಂದಿದ್ದರು. ಆದರೆ ಅಲ್ಲಿ ಸೀಟು ಭರ್ತಿಯಾಗಿದ್ದರಿಂದ ಕಾರ್ಪೊರೇಷನ್ ಹತ್ತಿರವಿರುವ ಹಾವನೂರು ಲಾ ಕಾಲೇಜಿನಲ್ಲಿ ಲಾ ಮುಗಿಸಿದರು ತಾನು ಓದಲು ಬಂದ ಕಾಲೇಜಿಗೆ (ಸಂಸ್ಥೆಗೆ) ಮುಂದೊಂದು ದಿನ ಆ ಸಂಸ್ಥೆಯನ್ನು ಮುನ್ನಡೆಸುವ ಅದ್ವರ್ಯು ಆದುದು ನಿಜಕ್ಕೂ ಸಾಧನೆಯ ಮೇರುತನವೆನ್ನಬಹುದು.

ಚಂದ್ರಯಾನ ರಷ್ಯಾಗೆ ಭಾರತ ಸಡ್ಡು!

0

ಲೇಖನ: ವಿನಯ್ ಹೆಬ್ಬೂರು


ಭಾರತ ಕೈಗೊಂಡಿರುವ ಚಂದ್ರಯಾನ -3 ಕಳೆದ ತಿಂಗಳು ಉಡಾವಣೆಯಾಗಿ ತನ್ನ ನಿಗದಿತ ಕಕ್ಷೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.


ಚಂದ್ರಯಾನ 3 ಲ್ಯಾಂಡರ್ ಯಶಸ್ವಿಯಾದರೆ ಚಂದ್ರನ ಮತ್ತೊಂದು ದೃವದ ಮೇಲೆ ಯಶಸ್ವಿ ಲ್ಯಾಂಡಿಂಗ್ ಮಾಡಿದ ಮೊದಲ ದೇಶವಾಗಿ ನಮ್ಮ ದೇಶ ಕಂಗೊಳಿಸಲಿದೆ.


ಇದಕ್ಕೆ ಪೈಪೋಟಿ ಒಡ್ಡಿದಂತೆ ರಷ್ಯಾ ತನ್ನ ಶಕ್ತಿ ಶಾಲಿ ರಾಕೆಟ್ ಸೋಯೆಜ್ ಮೂಲಕ ಆಗಸ್ಟ್11 ರಂದು ಮತ್ತೊಂದು ಚಂದ್ರಯಾನದ ಉಡಾವಣೆಗಾಗಿ ಸಜ್ಜಾಗಿದೆ.
ರಷ್ಯಾ ಸೊಯೆಜ್ ರಾಕೆಟ್ ಮೂಲಕ ಲೂನಾ25 ಲ್ಯಾಂಡರ್ ಅನ್ನು ಭಾರತಕ್ಕಿಂತ ಒಂದು ದಿನ ಮೂದಲೇ ಅಥವಾ ಅದೇ ದಿನ ಅಂದರೆ ಆಗಸ್ಟ್‌ 21 ಅಥವಾ 22 ಇಳಿಸಲು ಉದ್ದೇಶಿಸಿದೆ.


ಈ ಪೈಪೋಟಿಯ ಲ್ಲಿ ರಷ್ಯಾ ದ ಅಂತರಿಕ್ಷ ಸಂಸ್ಥೆ ಅಥವಾ ISRO ಯಾವುದು ಗೆಲ್ಲಲಿದೆ ಎಂದು ಆಗಸ್ಟ್21 ಅಥವಾ22 ಗೊತ್ತಾಗಲಿದೆ.


ಚಂದ್ರಯಾನ 3 ಎಂದರೇನು?
ಚಂದ್ರಯಾನ 3 ಬಾಹ್ಯಾಕಾಶ ನೌಕೆಯು 3 ನೇ ಚಂದ್ರನ ಪರಿಶೋಧನೆಯಾಗಿದೆ, ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿವರಿಸಿದೆ . ISRO ಈ ಬಾಹ್ಯಾಕಾಶ ನೌಕೆಯನ್ನು ಭಾರತದ ಮೃದುವಾದ ಲ್ಯಾಂಡಿಂಗ್ ಪ್ರಾವೀಣ್ಯತೆಯನ್ನು ನಾಕ್ಷತ್ರಿಕ ದೇಹದ ಮೇಲೆ ಪ್ರದರ್ಶಿಸಲು ಯೋಜಿಸಿದೆ. ಇದು ರೋವರ್ ಮತ್ತು ಲ್ಯಾಂಡರ್ ಅನ್ನು ಮಾತ್ರ ಒಳಗೊಂಡಿರುತ್ತದೆ ಮತ್ತು ಚಂದ್ರಯಾನ 2 ರಿಂದ ಆರ್ಬಿಟರ್ ಮೂಲಕ ಭೂಮಿಗೆ ಸಂವಹನ ನಡೆಸುತ್ತದೆ.


ಈ ಮಹತ್ವಾಕಾಂಕ್ಷೆಯ ಮಿಷನ್ ಹಲವಾರು ಸಂರಚನೆಗಳು, ಏಕೀಕರಣ ಮತ್ತು ಅರಿವನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಬಾಹ್ಯಾಕಾಶ ನೌಕೆಯನ್ನು ಮೌಲ್ಯಮಾಪನ ಮಾಡಲು ಇನ್ನೂ ಹಲವಾರು ವಿವರವಾದ ಪರೀಕ್ಷೆಗಳು ಉಳಿದಿವೆ.

ಚಂದ್ರಯಾನ 3 ಮಿಷನ್‌ನ ಹಿನ್ನೆಲೆ

ಆರ್ಬಿಟರ್, ರೋವರ್ ಮತ್ತು ಲ್ಯಾಂಡರ್‌ನೊಂದಿಗೆ ಚಂದ್ರಯಾನ 2 ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಇಸ್ರೋ ಚಂದ್ರಯಾನ 2 ಮಿಷನ್ ಅನ್ನು ವಿನ್ಯಾಸಗೊಳಿಸಿದೆ. ಅವರು ಈ ಬಾಹ್ಯಾಕಾಶ ನೌಕೆಯನ್ನು GSLV-Mk 3 ನಲ್ಲಿ ಉಡಾವಣೆ ಮಾಡಿದರು , ಇದು ಅತ್ಯಂತ ಶಕ್ತಿಶಾಲಿ ಜಿಯೋಸಿಂಕ್ರೊನಸ್ ವಾಹನಗಳಲ್ಲಿ ಒಂದಾಗಿದೆ.

ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಲ್ಯಾಂಡರ್ ವಿಕ್ರಮ್ ವಿಫಲವಾದ ಕಾರಣ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ಪ್ರಯಾಣಿಸುವ ಪ್ರಯತ್ನಕ್ಕೆ ಅಡ್ಡಿಯಾಯಿತು. ಇದು ಚಂದ್ರನ ಧ್ರುವ ಪರಿಶೋಧನಾ ಕಾರ್ಯಾಚರಣೆಗೆ ಅಗತ್ಯವಾದ ಭಾರತದ ಲ್ಯಾಂಡಿಂಗ್ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತೊಂದು ಕಾರ್ಯಾಚರಣೆಯನ್ನು ಪ್ರಯತ್ನಿಸಲು ಕಾರಣವಾಯಿತು.

ಚಂದ್ರನ ದಕ್ಷಿಣ ಧ್ರುವಕ್ಕೆ ಈ ಮಿಷನ್ 2024 ರಲ್ಲಿ ಜಪಾನ್‌ನ ಸಹಯೋಗದೊಂದಿಗೆ ನಡೆಯಲಿದೆ. ಭಾರತವು ಲ್ಯಾಂಡರ್ ಅನ್ನು ಒದಗಿಸಲು ಹೋಗುತ್ತಿದ್ದರೆ, ಜಪಾನ್ ರೋವರ್ ಮತ್ತು ಲಾಂಚರ್ ಅನ್ನು ನೀಡುತ್ತದೆ.

ಡಾ.ಪಾಂಡುರಂಗಯ್ಯ ಎಚ್.ವಿ ಅವರಿಗೆ ಡಾಕ್ಟರೇಟ್

0

ತುರುವೇಕೆರೆ: ತಾಲ್ಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಗ್ರಾಮದ ವೆಂಕಟಯ್ಯ ಮತ್ತು ಹನುಮಮ್ಮ ದಂಪತಿ ಮಗನಾದ ಡಾ.ಪಾಂಡುರಂಗಯ್ಯ ಎಚ್.ವಿ ಅವರಿಗೆ ತುಮಕೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಪಾಂಡುರಂಗಯ್ಯ ಅವರು ಪ್ರಜಾವಾಣಿ ತುರುವೇಕೆರೆ ತಾಲ್ಲೂಕು ವರದಿಗಾರರಾಗಿಯೂ ಪ್ರಸಿದ್ಧರು. ಅನೇಕ ಮಾನವೀಯ ವರದಿಗಳ ಮೂಲಕ ಗಮನ ಸೆಳೆದಿದ್ದಾರೆ. ಕತೆಗಾರರು ಸಹ‌.

ಶ್ರೀಯುತರು ವಿಶ್ವವಿದ್ಯಾನಿಲಯದ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ.ನಾಗಭೂಷಣ ಬಗ್ಗನಡು ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ದಲಿತ ಭೂ ಹೋರಾಟಗಳು ಮತ್ತು ಪ್ರತಿಭಟನಾ ಸಾಹಿತ್ಯ(ತುಮಕೂರು ಜಿಲ್ಲೆಯನ್ನು ಅನುಲಕ್ಷಿಸಿದಂತೆ)” ಎಂಬ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.


ಪ್ರಸ್ತುತ ಡಾ.ಪಾಂಡುರಂಗಯ್ಯ ಎಚ್.ವಿ ರವರು ಹುಲ್ಲೇಕೆರೆಯ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಂಗ ಶಾಲೆಯಾದ ದೊಂಬರನಹಳ್ಳಿಯ ಶ್ರೀಸೋಮೇಶ್ವರ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತೂತಿಟ್ಟ ಮಡಕೆಯಲಿ ನೀರಿಟ್ಟು ತೂಗಿ(2012) ಎಂಬ ಕವನ ಸಂಕಲನ ಸಹ ಹೊರತಂದಿದ್ದಾರೆ.

ಬಹುಮುಖ ವ್ಯಕ್ತಿತ್ವದ ವೂಡೇ ಪಿ.ಕೃಷ್ಣ

ಕಳೆದ ಸಂಚಿಕೆಯಿಂದ……. ಸಂಚಿಕೆ -೪

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಳೆಯುವ ಸಿರಿ

ಸ್ವಾತಂತ್ರ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದ ಶ್ರೀಯುತರ ರಕ್ತದಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಬದ್ದತೆ, ಪರೋಪಕಾರ ಇವೇ ಮೊದಲಾದ ಗುಣಗಳು ಸಹಜವಾಗಿ ಮೈದಾಳಿವೆ. ಕೃಷ್ಣಾರಜೀವನದಲ್ಲಿ ಸ್ವಾಮಿ ವಿವೇಕಾನಂದರ ‘ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ’ಎಂಬುದನ್ನು ಅಕ್ಷರ ಅಳವಡಿಸಿಕೊಂಡಿದ್ದಾರೆ.

ಡಾ. ಕೃಷ್ಣ ರವರ ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ಹೆಸರಾಂತ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಪ್ರಾರಂಭವಾಯಿತು. ಬಹುಶಃ ಇವರ ಜೀವನದ ನಿರ್ಣಾಯಕ ಘಟ್ಟ ಆರಂಭವಾದದ್ದು ಇಲ್ಲಿಂದಲೇ. ಇಲ್ಲಿ ಇವರು ಶ್ರೀ ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳಿಗೆ ಮಾರುಹೋದರು.

ರಾಮಕೃಷ್ಣ ಮಠದ ವಿದ್ಯಾರ್ಥಿಯಾಗಿದ್ದಾಗ.

‘ಒಳ್ಳೆಯದನ್ನೇ ಯೋಚಿಸಿ ಒಳ್ಳೆಯದನ್ನೇ ಮಾಡು’ ಇದು ಇವರ ಬದುಕಿನ ಮಂತ್ರ “ಉತ್ತಮ ಜನರು, ಉತ್ತಮ ಬಾಂಧವ್ಯವನ್ನು ಸಂಸ್ಥೆಗಳೊಡನೆ ಬೆಳೆಸಿಕೊಂಡಾಗ ನಾವು ಉತ್ತಮರಾಗುತ್ತೇವೆ. ಎಂಬುದು ಇವರ ಅಭಿಮತ. ಸ್ವಾಮಿ ವಿವೇಕಾನಂದ! ಇದು ಬರಿ ಹೆಸರಲ್ಲ. ಇದೊಂದು ಶಕ್ತಿ, ಅಸೀಮ ಸ್ಫೂರ್ತಿಯ ಸೆಲೆ. ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳ ನೀಡುತ್ತಾ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ. ಇವರ ಹಾದಿಯಲ್ಲಿ ನಡೆದ ಕೃಷ್ಣ ಅವರು ಒಬ್ಬರು. ವಿದ್ಯಾರ್ಥಿ ದೆಸೆಯಲ್ಲಿಯೇ ವಿವೇಕಾನಂದರ ಸಮಗ್ರ ಸಾಹಿತ್ಯವನ್ನು ಅ ಮೂಲಾಗ್ರವಾಗಿ ತಪಸ್ಸಿನಂತೆ ಓದಿ ಪ್ರಭಾವಿತರಾದರು.

ವಿವೇಕಾನಂದರ ವಾಣಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಸ್ವಾಮಿ ಜಗದಾತ್ಮಾನಂದ, ಸ್ವಾಮೀಜ ಸುರೇಶಾನಂದ, ಸ್ವಾಮಿ ಹರ್ಷಾನಂದ ಸ್ವಾಮಿ ಅಗೇಹಾನಂದ ಇವರ ಮಾರ್ಗದರ್ಶನ ಇವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದವು. ಒಮ್ಮೆ ಸ್ವಾಮಿ ರಂಗನಾಥನಂದರು ತಮ್ಮ ಭಾಷಣದಲ್ಲಿ ‘ಮಾನವನ ಧ್ಯೇಯ ಬರೀ ಹಣ ಸಂಪಾದಿಸುವುದಕ್ಕೆ ಮಾತ್ರ ಸೀಮಿತವಾಗಬಾರದು” ಎಂದು ಹೇಳಿದ ಮಾತುಗಳು ಜೀವನದ್ದುದ್ದಕ್ಕೂ ಮಾರ್ಗದರ್ಶಕವಾಗಿವೆ.

ರಾಮಕೃಷ್ಣಾಶ್ರಮದಲ್ಲಿ ಮಾಡಿದ ವಿದ್ಯಾಭ್ಯಾಸ ಇವರ ಬದುಕಿಗೆ ಬೆಳಕು ನೀಡಿತು. ಕೃಷ್ಣರವರು ಇದನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವುದರ ಜೊತೆಗೆ “ತಾಯಿಯೇ ಮೊದಲ ಗುರು” ಎನ್ನುವುದನ್ನು ಮರೆಯುವುದಿಲ್ಲ.

ಒಮ್ಮೆ ವೃದ್ಧ ದಂಪತಿಗಳು ರೈಲ್ವೆ ಸ್ಟೇಷನ್ ನಲ್ಲಿ ತಮ್ಮ ಲಗೇಜು ಸಾಗಿಸಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಕೃಷ್ಣ ಅವರು ತಕ್ಷಣವೇ ಮುಂದೆ ಬಂದು ಅವರ ಲಗೇಜ್ ಅನ್ನು ಹೊತ್ತು ಬೋಗಿಗೆ ಸಾಗಿಸಿದರು. ದಂಪತಿ ಕೃಷ್ಣ ಅವರನ್ನು ಕೂಲಿ ಆಳು ಎಂದು ಭಾವಿಸಿ ಹಣ ಕೊಡಲು ಬಂದರು ಆಗ ಕೃಷ್ಣರವರು ನಗುನಗುತ್ತಲೆ ” ನಾನು ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ನನಗೆ ಏನು ಪ್ರತಿಫಲ ಬೇಡ ಅದನ್ನು ನಾನು ನಿರೀಕ್ಷಿಸುವುದಿಲ್ಲ” ಎಂದು ವಿನಮ್ರವಾಗಿ ಹೇಳಿದರು. ಬೆಳೆಯುವ ಪೈರು ಮೊಳಕೆಯಲ್ಲಿ ತನ್ನ ಗುಣ ತೋರಿಸುತ್ತದೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ. ತಾನು ಮಾಡುವ ಕೆಲಸ ಕನಿಷ್ಟದ್ದು, ಶ್ರೇಷ್ಠದ್ದು ಎಂಬುದಕ್ಕಿಂತ ಪರರಿಗೆ ಅದರಲ್ಲೂ ದುರ್ಬಲರಿಗೆ ಅನುಕೂಲವಾಗುತ್ತದೆಯಾ ಎಂಬ ಚಿಂತನೆ ಮಾತ್ರ ಕೃಷ್ಣರಿಗೆ ಮುಖ್ಯವಾಗಿತ್ತು ಎಂಬುದು ತಿಳಿಯುತ್ತದೆ.

ಬನ್ನಿ ಅಂಗಾಂಗ ದಾನ ಮಾಡೋಣ

0

ಭಾರತೀಯ ಅಂಗಾಂಗ ದಾನ ದಿನಾಚಣೆಯನ್ನಾಗಿ ಆಗಸ್ಟ್ 3ರಂದು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಂಗಾಂಗ ಗಳು ಮಾರಾಟ ಮಾಡುವುದು ಕಾನೂನು ಬಾಹಿರ.ಜೀವ ಸಾರ್ಥಕತೆ ವೆಬ್ ಸೈಟ್ ನಲ್ಲಿ ನೊಂದಾಯಿಸಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವುದರ ಮೂಲಕ ಮಾತ್ರವೇ ಮೆದುಳು ನಿಷ್ಕ್ರಿಯ ಅದ ಮೇಲೆ ಅಂಗಾಂಗ ಪಡೆಯಲಾಗುತ್ತದೆ.

ಬದುಕಿದ್ದಾಗಲೇ ಲಿವರ್ ನ ಭಾಗ ,ಕಿಡ್ನಿ ಕೇವಲ ಹತ್ತಿರದ ಸಂಬಂಧಿಗಳು ಹಣದ ಅಥವ ಬೇರೆ ಯಾವುದೇ ಆಮಿಷಕ್ಕೆ ಒಳಗಾಗದೆ ವೈದ್ಯರ ಸಲಹೆ ಮೇರೆಗೆ ಸೂಚಿತ ಪ್ರಾಧಿಕಾರದ ಪರಿಶೀಲನೆ ಗೆ ಒಳಪಟ್ಟು ಜೀವ ಸಾರ್ಥಕತೆಯಲ್ಲಿ ನೊಂದಾಯಿಸಿ ಕೊಂಡವರಿಗೆ ನೀಡಬಹುದು.


ಬನ್ನಿ ಅಂಗಾಂಗ ದಾನ ಮಾಡೋಣ


ಸತ್ತು ಮಣ್ಣಾಗುವ
ಕಣ್ಣುಗಳನ್ನು👀 ದಾನ ಮಾಡಿ…ಕತ್ತಲೆ ಆಗಿದ್ದವರ
ಬಾಳಲ್ಲಿ
ನೋಟಕ್ಕೆ ದೃಷ್ಠಿ🥸 ಆಗೋಣ .

ಹೃದಯ💘 ಯಾರ್ಯಾರಿಗೋ
ಕೊಟ್ಟು ಮೋಸ ಹೋಗುವ
ಬದಲು…
ಬದುಕಲು ಹೃದಯ 🫀🫀ದಾನ ಮಾಡೋಣ

ಲಿವರ್ ಕೈ ಕೊಟ್ಟು ಹೊಟ್ಟೆ ಯಲ್ಲಿ
ನೀರು ತುಂಬಿ ..ಜಾಂಡೀಸ್ ಆಗಿ
ನರಳುವವರಿಗೆ … ಸ್ವಲ್ಪ ಲಿವರ್🍕 ದಾನ
ಬದುಕಿದ್ದಾಗಲೇ ಸಂಬಂಧಿಗಳು ಒಂದು ಭಾಗ
ದಾನ ಮಾಡಿ .(ಕಾನೂನು ರೀತ್ಯಾ)ಕೊಡಬಹುದು.

ಪಾಪ …ಪ್ರತೀ ದಿನ ಡಯಾಲಿಸಿಸ್
ಮಾಡಿಸಿಕೊಂಡು ನರಳುವ ಕಿಡ್ನಿ
ರೋಗಿಗಳಿಗೆ . ಸಂಬಂಧಿಗಳು ಒಂದು ಕಿಡ್ನಿ
ದಾನ ಮಾಡಿ .(ಕಾನೂನು ರೀತ್ಯಾ)ಹೊಸ ಬದುಕು ನೀಡೋಣ

ಬರೇ ಇವಲ್ಲ …ಅಂಗಾಂಶಗಳಾದ ಚರ್ಮ
ಅಸ್ಥಿ ಮಜ್ಜೆ ,
ಇತ್ಯಾದಿ..

ಶ್ವಾಸಕೋಶ🫁ಕರುಳು,ಹೃದಯ,ಲಿವರ್
ಕಿಡ್ನಿ ಏನು ಬೇಕಾದರೂ
ಮೆದುಳು ನಿಷ್ಕ್ರಿಯ ಆದ ನಂತರ.

ಸುಟ್ಟು ,ಹೂತು ಕೊಳೆಯುವ
ಬದಲು …ಬೇರೆಯವರ
ಬದುಕಲ್ಲಿ ಬೆಳಕಾಗೋಣ

ತಿಳಿಯಿರಿ ..ಅಂಗಾಂಗ 📣💵ಮಾರಾಟಕ್ಕಿಲ್ಲ…
ಕೇವಲ ಬೇರೆಯವರ
ಜೀವನಕ್ಕೆ ಬೆಳಕಾಗಲು ಅಷ್ಟೆ …

ಯಾವುದೇ ಆಮಿಷಕ್ಕೆ
ಇಲ್ಲಿ ಆಸ್ಪದ ಇಲ್ಲ.

ಸತ್ತ ನಂತರವೂ 💕ಮಿಡಿಯಬೇಕಿದ್ದಲ್ಲಿ,
ನೋಡಬೇಕಿದ್ದಲ್ಲಿ👁️

ಬದುಕಿದ್ದಾಗಲೂ
ನರಳುವವರು 😁ನಗಬೇಕಿದ್ದಲ್ಲೀ

ನೋಂದಾಯಿಸಿ
“ಜೀವಸಾರ್ಥಕತೆ “
QR ಕೋಡ್ ಬಳಸಿ.


ಡಾllರಜನಿ



ಶ್ರೇಷ್ಠತೆಯ ಸೊಕ್ಕಿನಿಂದ ಪ್ರತಿಭೆಯ ಭ್ರೂಣ ಹತ್ಯೆ: ಬರಗೂರು

ತುಮಕೂರು: ದಿನೇ ದಿನೇ ಧಾರ್ಮಿಕ ಮೂಲಭೂತವಾದಿಗಳ ದೌರ್ಜನ್ಯ ಹೆಚ್ಚಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಬೀದಿ ಜಗಳ ಮಾಡುತ್ತಿದ್ದಾರೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಬರಗೂರು ಗೆಳೆಯರ ಬಳಗ ತುಮಕೂರಿನಲ್ಲಿ ಆಯೋಜಿಸಿದ್ದ ಬರಗೂರು ಅವರ ಕಾಗೆ ಕಾರುಣ್ಯದ ಕಣ್ಣು ಕೃತಿ ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.


ಪ್ರಜಾಪ್ರಭುತ್ವದ ಮೂಲ ಲಕ್ಷಣವೇ ಸಂವಾದ. ಆದರೆ ಸಂವಾದ ಮಾಡದಂಥ ವಾತಾವರಣವನ್ನು ಧಾರ್ಮಿಕ ಮೂಲಭೂತವಾದ ಸೃಷ್ಟಿ ಮಾಡಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ನಡೆಸುತ್ತಾ, ಧರ್ಮ–ಜಾತಿಯ ಹೆಸರಿನಲ್ಲಿ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.


ಪ್ರಜಾಪ್ರಭುತ್ವದಲ್ಲಿ ಸಂವಾದ, ಮೌಲ್ಯ, ಪರಸ್ಪರ ವಿಚಾರ ವಿನಿಮಯ ಮುಖ್ಯ. ಆದರೆ ಇವೆಲ್ಲವನ್ನು ಮೀರಿದ ವಾತಾವರಣದಲ್ಲಿ ನಾವಿದ್ದೇವೆ ಎಂದರು.


ಪ್ರಜಾಪ್ರಭುತ್ವದಲ್ಲಿ ನಾವುಗಳು ಇರಬೇಕಾದರೆ ಪ್ರಜಾಪ್ರಭುತ್ವ ರಕ್ಷಣೆಗೆ ನಾವು ನಿಲ್ಲಬೇಕು. ಪರಸ್ಪರ ಸಂವಾದಿಸುವ, ಗೌರವದಿಂದ ಕಾಣುವ ಪ್ರಜಾಸತ್ತಾತ್ಮಕ ಮೌಲ್ಯ ಮುಖ್ಯ ಎಂದು ಹೇಳಿದರು.


ಶೋಧ ಎಂದು ಕೊಂಡವರು ಬೆಳೆಯುತ್ತಾ, ಬೆಳೆಸುತ್ತಾ ಹೋಗುತ್ತಾರೆ. ಹಾಗೆಯೇ ನಾನು ಹುಡುಕುತ್ತಲೆ ಬೆಳೆದವನು ಎಂದು ಹೇಳಿದರು.

ಸೌಹಾರ್ದತೆ ಮತ್ತು ಸಮಾನತೆಯ ಸಂಕೇತವಾಗಿ ‘ಕಾಗೆ ಕಾರುಣ್ಯದ ಕಣ್ಣು’ ಎಂದು ಹೆಸರಿಟ್ಟಿದ್ದೇನೆ. ನಾನು ಎಷ್ಟೋ ಸಾರಿ ವಿಧಾನ ಪರಿಷತ್‌ ಸ್ಥಾನವನ್ನು ಬಿಟ್ಟಿದ್ದೇನೆ. ಅದು ಬೇರೆ ವಿಷಯ. ಈ ಸಮಾರಂಭವನ್ನು ನನ್ನ ಜಿಲ್ಲೆ ಎಂಬ ಕಾರಣಕ್ಕೆ ನಮ್ಮ ಜಿಲ್ಲೆಯವರು ಪ್ರೀತಿಯಿಂದ ಆಯೋಜಿಸಿದ್ದಾರೆ. ನಾನು ಎಂ.ಎಲ್.ಸಿ. ಆಗಬೇಕೆಂದು ಅಲ್ಲ. ಈಗ ಅಪವ್ಯಾಖ್ಯಾನಗಳೇ ಹೆಚ್ಚು. ಈ ಕಾರ್ಯಕ್ರಮ ಅಪವ್ಯಾಖ್ಯಾನ ಆಗುವುದು ಬೇಡ ಎಂಬ ಕಾರಣಕ್ಕೆ ಇದನ್ನು ಹೇಳುತ್ತಿದ್ದೇನೆ ಎಂದರು.

ಸಮಾರಂಭದಲ್ಲಿ ಸಾಹಿತ್ಯಸಕ್ತರು ಕಿಕ್ಕಿರಿದು ಸೇರಿದ್ದರು. ಕಸಾಪದ ಸಭಾಂಗಣ ಆಚೆಗೂ ನಿಂತು ಬರಗೂರು ಅವರ ಮಾತುಗಳನ್ನು ಆಲಿಸಿದ್ದು ವಿಶೇಷವಾಗಿತ್ತು.

ಬರಗೂರು MLC ಆಗುವುದು ನನಗೂ ಇಷ್ಟ: ಕೆ ಎನ್ನಾರ್

0

ತುಮಕೂರು: ತುಳಿತಕ್ಕೆ ಒಳಗಾದ, ಅಸಹಾಯಕರ ಧ್ವನಿಯಾಗಿ ಬರಗೂರು ರಾಮಚಂದ್ರಪ್ಪ ಇದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಪ್ರೊ.ಬರಗೂರು ಗೆಳೆಯರ ಬಳಗ‌ವು ಆಯೋಜಿಸಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಆಯ್ದ ಅನುಭವಗಳ ಕಥನ ‘ಕಾಗೆ ಕಾರುಣ್ಯದ ಕಣ್ಣು’ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನಗೂ ಇಷ್ಟ

ಬರಗೂರು ರಾಮಚಂದ್ರಪ್ಪ ಅವರು ಎಂ.ಎಲ್.ಸಿ (ವಿಧಾನ ಪರಿಷತ್ ಸದಸ್ಯ). ಆಗುವುದು ನಿಮ್ಮೆಲ್ಲರಿಗಿಂತ ಹೆಚ್ಚು ನನಗೂ ಇಷ್ಟ. ನಾನೂ ಸಹ ಆ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಬರಗೂರು ಅವರನ್ನು ಸರ್ಕಾರ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡಬೇಕು ಎಂದು ಸಭಿಕರ ಹಕ್ಕೋತ್ತಾಯ ಮಂಡಿಸಿದಾಗ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಬಂಗಾರಪ್ಪ, ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಬರಗೂರು ಅವರು ಎಂಎಲ್ ಸಿ ಆಗುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಗೂರು ಅವರಿಗೆ ನನಗಿಂತಲೂ ಹೆಚ್ಚು ಆತ್ಮೀಯರು. ಬರಗೂರು ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡುವುದರಿಂದ ಆ ಸ್ಥಾನಕ್ಕೆ ಗೌರವ ಸಿಕ್ಕಂತ್ತಾಗಲಿದೆ. ಬರಗೂರು ಆ ಸ್ಥಾನಕ್ಕೆ ಅರ್ಹರು ಎಂದರು.

ಬರಗೂರು ಅವರು ತಮ್ಮ ಬರವಣಿಗೆಗಳ ಮೂಲಕ ಶ್ರಮಿಕರ ಅಗತ್ಯತೆಗಳನ್ನು, ಶ್ರಮಿಕರು, ನಾಡಿನ ಅನ್ನದಾತರು, ಕಷ್ಟಜೀವಿಗಳ ಬಗ್ಗೆ ಹೇಳಿದ್ದಾರೆ.
ಯುವಜನರು ಬರಗೂರರ ಸಾಹಿತ್ಯ ಓದಿ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಹುಟ್ಟು ಮತ್ತು ಸಾವಿನ ಮಧ್ಯೆ ಸಮಾಜದ ಅಭಿವೃದ್ಧಿಗೆ ಪೂರಕವಾದ, ಸಮಾಜಮುಖಿ ಕೆಲಸ ಮಾಡಬೇಕು ಎಂದರು.


ಸಮಾಜದ ಸುಧಾರಣೆಯ ಬಗ್ಗೆ ಬರಗೂರರು ತಾವು ನಿರ್ದೇಶಿಸಿದ ಚಲನಚಿತ್ರಗಳಲ್ಲೂ ಒತ್ತಿ ಹೇಳಿದ್ದಾರೆ. ದೇಶ ವಿದೇಶದಲ್ಲಿ ಕನ್ನಡದ ಕಂಪು ಪಸರಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಲೇಖಕಿ ಬಾ.ಹ.ರಮಾಕುಮಾರಿ, ‘ಪ್ರಸ್ತುತ ಹಲವು ಗೊಂದಲಗಳ ಮಧ್ಯೆ ಜನರು ದಿಕ್ಕೆಟ್ಟು ಹೋಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಸಾರ್ವಜನಿಕರಿಗೆ ಬರಗೂರು ಅವರ ಮಾರ್ಗದರ್ಶನ ಬೇಕಾಗಿದೆ.‌ಇದು ಅವರ ಬರವಣಿಗೆಗಳಲ್ಲಿ ಸಿಗುತ್ತದೆ. ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಗೂರು ರಾಮಚಂದ್ರಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಲೇಖಕ ರಾಜಪ್ಪ ದಳವಾಯಿ, ‘ಬರಗೂರು ರಾಮಚಂದ್ರಪ್ಪ ಅವರು ಬಹಳ ಅಪರೂಪದ ಪ್ರಸಂಗಗಳನ್ನು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಚಿಂತಕ ಕೆ.ದೊರೈರಾಜ್, ‘ಶ್ರೇಷ್ಠತೆಯ ವ್ಯಸನ ಜಗತ್ತಿನ ದೊಡ್ಡ ರೋಗ. ಇದನ್ನು ಬರಗೂರು ಅವರ ಪುಸ್ತಕದಿಂದ ಅರಿತು ಕೊಳ್ಳಬಹುದು ಎಂದರು.

ಬರಗೂರು ಅವರ ಮೊಮ್ಮಗ ಆಕಾಂಕ್ಷ್ ಬರಗೂರು ಅವರಿಗೆ ಪುಸ್ತಕ ನೀಡುವ ಮೂಲಕ ಕೃತಿಯನ್ನು ಜನಾರ್ಪಣೆ ಮಾಡಲಾಯಿತು.
ಚಲನಚಿತ್ರ ನಟ ಸುಂದರರಾಜ್ ಮಾತನಾಡಿದರು.
ಪ್ರಕಾಶಕ ಪ್ರಕಾಶ್ ಕಬ್ಬತ್ತನಹಳ್ಳಿ
ಉಪಸ್ಥಿತರಿದ್ದರು.

ಸುಫಿಯಾ ಕಾನೂನು ಕಾಲೇಜಿನ ಓಬಣ್ಣ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಸಾ.ಚಿ.ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗೋವಿಂದಯ್ಯ ವಂದಿಸಿದರು.


ಕ.ಸಾ.ಪ ಸಭಾಂಗಣದಲ್ಲಿ ಜಾಗ ಸಾಲದೇ ಸಭಾಂಗಣದ ಆಚೆಗೂ ಸಾಹಿತ್ಯಾಸಕ್ತರು‌ ನೆರೆದಿದ್ದರು.

ವೂಡೇ ಮನೆತನ – ಭಾಗ ೨

ಕಳೆದ ಸಂಚಿಕೆಯಿಂದ…….

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ತಂದೆ ಡಬ್ಲ್ಯೂ ಹೆಚ್ ಪುಟ್ಟಯ್ಯ ತಾಯಿ ದೊಡ್ಡಮ್ಮಯ್ಯ ಅವರಿಗೆ ಅಷ್ಟಮ ಗರ್ಭ ಸಂಜಾತರಾಗಿ ಕೃಷ್ಣರವರು 1963 ಫೆಬ್ರವರಿ 1 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.


ಕೃಷ್ಣ ರವರ ಬಾಲ್ಯದಲ್ಲಿ ಪ್ರಭಾವ ಬೀರಿದ ಕುಟುಂಬ ಸದಸ್ಯರಲ್ಲಿ ದೊಡ್ಡಪ್ಪ ಡಬ್ಲ್ಯೂ ಎಚ್ ಹನುಮಂತಪ್ಪ (ಜೂನಿಯರ್) ಹಾಗೂ ತಂದೆ ಡಬ್ಲ್ಯೂ ಎಚ್ ಪುಟ್ಟಯ್ಯನವರು ಪ್ರಮುಖರು ಸರಳತೆಗೆ,ಸ್ವಾವಲಂಬನೆಗೆ, ಶಿಸ್ತಿಗೆ, ಖಚಿತ ತೀರ್ಮಾನಗಳಿಗೆ ಮಾರ್ಗದರ್ಶನಕ್ಕೆ ನೇರ ನಡೆ-ನುಡಿಗಳಿಗೆ ಹೆಸರಾದವರು.


ಇವರು ದೇಶಪ್ರೇಮದ ಜೊತೆಗೆ ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದು, ಎಲೆಮರೆಕಾಯಿಯಂತೆ ಬದುಕಿ ಬಾಳಿದರು. ಸರಳ ಜೀವನ ನಡೆಸುವುದರ ಜೊತೆಗೆ ಇವರು ಸದಾ ಖಾದಿಧಾರಿಯೂ ಆಗಿದ್ದರು. ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದುದರಿಂದ ಸೀನಿಯರ್ ಇಂಟರ್ ಮೀಡಿಯಟ್ ನಲ್ಲೇ ಕಾಲೇಜು ವಿದ್ಯಾಭ್ಯಾಸವನ್ನು ಬಿಟ್ಟರು. ಆದರೆ ಸ್ವಾತಂತ್ರ್ಯ ಬಂದ ಮೇಲೆ ರಾಜಕೀಯ ಕ್ಷೇತ್ರಗಳಿಂದ ದೂರ ಉಳಿದರು.

ತಂದೆ ಡಬ್ಲೂ.ಹೆಚ್.ಪುಟ್ಟಯ್ಯ, ತಾಯಿ ದೊಡ್ಡಮ್ಮಯ್ಯ

ಉದ್ಯಮಿಯಾಗಿದ್ದರೂ ಗಾಂಧೀ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದರು. ಗಾಂಧೀ ಶಾಂತಿ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಪ್ರಸ್ತುತ ಇರುವ ವಸಂತನಗರದಲ್ಲಿ ವಿದ್ಯಾರ್ಥಿ ನಿಲಯ ಸಾವನದುರ್ಗದಲ್ಲಿ ಒಂದು ಕಲ್ಯಾಣ ಮಂಟಪ, ಕಿಲಾರಿ ರಸ್ತೆಯಲ್ಲಿ ದೇವಸ್ಥಾನ ನಿರ್ಮಾಣಗಳು ಇವರ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತವೆ.

ಹಿರಿಯರ ಆದರ್ಶ, ಸಂಸ್ಕೃತಿಯ ಶ್ರೀಮಂತಿಕೆ, ಪ್ರೀತಿಯ ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದದು ಕೃಷ್ಣರವರ ಬಾಳಿಗೆ ಒಳ್ಳೆಯ ಅಡಿಪಾಯ ಹಾಕಿತು. ಇವರ ತಾಯಿ ದೊಡ್ಡಮ್ಮಯ್ಯ ಮಕ್ಕಳನ್ನು ಅವಿಭಕ್ತ ಕುಟುಂಬದಲ್ಲಿದ್ದರೂ ಮೇರು ಎತ್ತರಕ್ಕೆ ಬೆಳೆಸಿದರು. ಕೃಷ್ಣರವರ ಸಹೋದರ ಸಹೋದರಿಯರು ಈ ನಾಡಿನ ಉತ್ತಮ ಪ್ರಜೆಗಳಾಗಿ ಬಾಳುತ್ತಿರುವಲ್ಲಿ ಅವರ ಕೊಡುಗೆ ಬಹು ದೊಡ್ಡದು. ಹೆಸರಿಗೆ ತಕ್ಕಂತೆ ಅವರು ನಿಜಕ್ಕೂ ದೊಡ್ಡಮ್ಮಯ್ಯನೇ ಆಗಿದ್ದರು.

ವೂಡೇ ಮನೆತನದ ವಂಶವೃಕ್ಷ

ವೂಡೇ ಮನೆತನ: ಭಾಗ -೧

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರಕ್ಕೆ ಸಮೀಪದ ಇಂದಿನ ಆಂಧ್ರಪ್ರದೇಶಕ್ಕೆ ಸೇರಿದ ‘ವೂಡೇ’ ಗ್ರಾಮ, ಕೃಷ್ಣರವರ ಪೂರ್ವಿಕರು ಹುಟ್ಟಿದ ಊರು. ವೂಡೇದ ಹನುಮಂತಪ್ಪನವರು ವೂಡೇ ಪಿ. ಕೃಷ್ಣರವರ ಮುತ್ತಾತಂದಿರು. ಇಂದು ಬೇಚರಕ್ ಗ್ರಾಮವಾಗಿರುವ ವೂಡೇದಿಂದ ಕ್ರಿ.ಶ. 1800ರಷ್ಟೊತ್ತಿಗೆ ಕಾರಣಾಂತರಗಳಿಂದ ಹೊರಟು ಬಂದು ಬೆಂಗಳೂರು ನಗರದಲ್ಲಿ ನೆಲೆಸಿ ಬೇರೆ ಬೇರೆ ವ್ಯಾಪಾರದಲ್ಲಿ ತೊಡಗಿ ನಂತರ ಮ್ಯಾಂಗನೀಸ್ ಗಣಿಯ ಉದ್ಯಮ ನಡೆಸಿದರು.

ಅವರು ವ್ಯಾಪಾರದಂತೆ ಸಾಹಿತ್ಯದಲ್ಲೂ ಆಸಕ್ತರು. ಅವರು ಗಮಕ ಕಲೆಯಲ್ಲಿ ಪಾಂಡಿತ್ಯವನ್ನು ಪಡೆದವರು. “ಭಾರತವಾಚನ ಪ್ರವೀಣ’ ಎಂದು ಹೆಸರಾದವರು. ಇವರ ಪುತ್ರ ಡಬ್ಲ್ಯೂ. ಹೆಚ್ .ಹನುಮಂತಪ್ಪ (ಸೀನಿಯರ್) ರವರ ಸಾಧನೆ ಅಮೋಘವಾದದ್ದು. ಬೆಂಗಳೂರಿನ ಲಂಡನ್ ಮಿಷನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಇಂಗ್ಲಿಷ್ ಮತ್ತು ಮಾತೃಭಾಷೆಗಳೆರಡರಲ್ಲೂ ಏಕಕಾಲಕ್ಕೆ ಪಾಂಡಿತ್ಯವನ್ನು ಸಾಧಿಸಿದವರು.

ಅಂದಿನ ಪ್ರತಿಷ್ಠಿತ ಸಿವಿಲ್ ಇಂಜಿನಿಯರಿಂಗ್ ಕಂಟ್ರಾಕ್ಟರ್‌ಗಳಲ್ಲಿ ಒಬ್ಬರಾದ ಇವರು ಅಂದು ಕಟ್ಟಿದ ಅಣೆಕಟ್ಟು, ಕೆರೆ, ಸರ್ಕಾರಿ ಕಟ್ಟಡಗಳು ಇಂದಿಗೂ ಅವರ ಕಾರ್ಯಕ್ಷಮತೆಯ ಪ್ರತೀಕವಾಗಿ ನಮ್ಮ ಮುಂದಿವೆ. ಆಗಿನ ‘ಮೈಸೂರು ಕಾಂಗ್ರೆಸ್’ ಸಂಸ್ಥಾಪಕರಲ್ಲಿ ಇವರು ಮೊದಲಿಗರು. ಬ್ರಹ್ಮಸಮಾಜ ಸ್ಥಾಪಕ ರಾಜಾ ರಾಮ್‌ಮೋಹನ್‌ರಾಯ್‌ರವರ ಸಿದ್ಧಾಂತಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಬೆಳೆದವರು.

ತಾತ ಡಬ್ಲೂ .ಹೆಚ್ .ಹನುಮಂತಪ್ಪ.(ಸೀನಿಯರ್)

ಬೆಂಗಳೂರು ನಗರದ ಮುನಿಸಿಪಲ್ ಕೌನ್ಸಿಲರ್ ಆಗಿ 1920 ರಿಂದ 1956ರವರೆಗೂ ನಿರಂತರ 36 ವರ್ಷಗಳ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು. 1940-41ರಲ್ಲಿ ಬೆಂಗಳೂರು ನಗರ ಮುನಿಸಿಪಲ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದು. ಇವರ ಯೋಜನೆ ಹಾಗೂ ಯೋಚನೆಗಳೆಲ್ಲವೂ ಅತ್ಯಂತ ಎತ್ತರದಲ್ಲಿರುತ್ತಿದ್ದವು.

ಡಬ್ಲ್ಯೂ ಹೆಚ್ ಹನುಮಂತಪ್ಪನವರು ರಾಜಾ ರಾಮ್ ಮೋಹನ್ ರಾಯ್ ಅವರ ಅಭಿಮಾನಿ ಯಾದ್ದರಿಂದ ತಾವು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ರಸ್ತೆಯ ರಾಜಾ ರಾಮ್‌ ಮೋಹನ್‌ ರಾಯ್ ಬಡಾವಣೆಯಲ್ಲಿ ಒಂದು ರಾಜಾರಾಮ್ ಮೋಹನ್‌ ರಾಯ್ ಸ್ಮಾರಕ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಗೆ ಕಾರಣರಾದರು.

ತಂದೆ ಡಬ್ಲ್ಯೂ, ಹೆಚ್, ಪುಟ್ಟಯ್ಯ, ತಾಯಿ ದೊಡ್ಡಮ್ಮಯ್ಯ

ಮುಂದುವರೆಯುವುದು…….