Saturday, December 7, 2024
Google search engine
Homeಜೀವನ ಚರಿತ್ರೆಕನ್ನಡಕ್ಕಾಗಿ ಜೈಲು ಸೇರಿದ ಕೃಷ್ಣ

ಕನ್ನಡಕ್ಕಾಗಿ ಜೈಲು ಸೇರಿದ ಕೃಷ್ಣ

ಕಳೆದಸಂಚಿಕೆಯಿಂದ………

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚುರುಕುತನ,ಅದ್ಭುತ ಜ್ಞಾಪಕ ಶಕ್ತಿ ,ನಿರರ್ಗಳ ವಾಕ್ ಕೌಶಲ್ಯಗಳು ಬಹುಶಃ ಬಾಲ್ಯದಿಂದಲೇ ಇವರಿಗೆ ಒಲಿದು ಬಂದ ಬಂಡವಾಳಗಳು. ಬದುಕಿನಲ್ಲಿ ಎಷ್ಟು ಹಣ ಗಳಿಸಿದ್ದೇವೆ? ಎಷ್ಟು ಆಸ್ತಿ ಮಾಡಿದ್ದೇವೆ ? ಯಾವ ಅಧಿಕಾರವನ್ನು ಧಕ್ಕಿಸಿಕೊಳ್ಳಬೇಕು ? ಇತ್ಯಾದಿಗಳ ಬಗ್ಗೆ ಆಲೋಚಿಸುವಂತಹ ಅವರ ಸಂಖ್ಯೆಯೇ ಸಮಾಜದಲ್ಲಿ ಹೆಚ್ಚಾಗಿರುವಾಗ ಸಮಾಜಕ್ಕೆ ನಮ್ಮ ಕೊಡುಗೆ ಏನು ? ಇತರರ ಕಷ್ಟ ಪರಿಹಾರಗಳಲ್ಲಿ ಹೇಗೆ ಭಾಗಿಯಾಗಿದ್ದೇವೆ ಎಂದು ಪ್ರಶ್ನಿಸಿಕೊಂಡು ಬದುಕುವ ಅಪರೂಪದವರಲ್ಲಿ ಅಪರೂಪದ ವ್ಯಕ್ತಿಗಳ ಸಾಲಿನಲ್ಲಿ ಕೃಷ್ಣ ಅವರು ಒಬ್ಬರು ಇವರ ದೈನಂದಿನ ಬದುಕಿನ ಪುಟಗಳಲ್ಲಿ ಒಮ್ಮೆ ಇಣುಕಿ ನೋಡಿದಾಗ ಒಂದು ವ್ಯರ್ಥ ಕ್ಷಣವು ಸಿಗಲಾರದೇನೋ? ಹೀಗೆ ಬದುಕಿನಲ್ಲಿ ಪ್ರತಿಕ್ಷಣವೂ ಒಂದಲ್ಲ ಒಂದರಲ್ಲಿ ತಮ್ಮನ ತೊಡಗಿಸಿಕೊಂಡಿರುತ್ತಾರೆ.

ಅಧ್ಯಯನ,ಅವಗಾಹನೆ, ಚಿಂತನೆ, ಅನುಭವಗಳ ಮೂಲಕ ಇವರು ಅಪಾರ ಜ್ಞಾನವನ್ನು ಸಂಪಾದಿಸಿದ್ದಾರೆ. ಯಾವುದೇ ವಿಷಯಗಳ ಬಗ್ಗೆ ಇವರು ಗಂಟೆಗಟ್ಟಲೆ ಅಧಿಕೃತವಾಗಿ ನಿರರ್ಗಳವಾಗಿ ಮಾತನಾಡಬಲ್ಲ ಪ್ರೌಢಿಮೆ ಪಡೆದಿದ್ದಾರೆ. ಇಂತಹ ಸಾಧನೆ ಸಾಧ್ಯವಾಗಿರುವುದು ಅವರಲ್ಲಿರುವ ತಾದ್ಯಾತ್ಮತೆಯೇ ಈ ಮಟ್ಟಕ್ಕೆ ಬೆಳೆಸಿದೆ.

ಇವರಲ್ಲಿರುವ ಮತ್ತೊಂದು ವಿಶೇಷವೆಂದರೆ ಯಾವುದೇ ಕಾರಣಕ್ಕೂ ಆಗಲಿ ಯಾರನ್ನು ದ್ವೇಷಿಸುವುದಿಲ್ಲ ಯಾರ ಬಗ್ಗೆಯೂ ಕೆಟ್ಟ ನುಡಿಗಳನ್ನಾಡುವುದಿಲ್ಲ. ಅಸೂಯೆ ಪಡುವುದಿಲ್ಲ. ಯುವ ಪೀಳಿಗೆ ಬಗ್ಗೆ ಇವರಿಗೆ ತುಂಬು ಭರವಸೆ ಇದೆ. ನಿರಂತರ ಕ್ರಿಯಾಶೀಲತೆ, ಬತ್ತದ ಉತ್ಸಾಹ, ಸೇವಾನಿಷ್ಠೆ, ಮಾನವ ಪ್ರೀತಿ, ಇವು ಇವರ ವ್ಯಕ್ತಿತ್ವದ ಅವಿಚಿನ್ನ ಭಾಗಗಳು ಇವರು ನಮ್ಮ ಸಾಂಸ್ಕೃತಿಕ ಪ್ರತಿನಿಧಿ ಎಂದರೆ ತಪ್ಪಾಗಲಾರದು.

ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸೇರಿದರು. ವಿದ್ಯಾರ್ಥಿ ಚಳುವಳಿಗಳಲ್ಲಿಯೂ ಇವರು ಮುಂಚೂಣಿಯಲ್ಲಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಗೋಕಾಕ್ ಚಳುವಳಿಯ ಪ್ರಭಾವಕ್ಕೊಳಗಾಗಿ ತಾವೇ ಸ್ಥಾಪಿಸಿದ ಕಾಲೇಜು ಕನ್ನಡ ಸಂಘದ ಮೂಲಕ ಧರಣಿ ಕುಳಿತು ಬಂಧಿತರಾಗಿ, ತಾಂತ್ರಿಕ ವಿದ್ಯಾರ್ಥಿಗಳು ಕನ್ನಡ ಹೋರಾಟದಲ್ಲಿ ಭಾಗವಹಿಸಿದ ದಾಖಲೆಯನ್ನು ನಿರ್ಮಿಸಿದರು. ತಾಂತ್ರಿಕ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಪೋಸ್ಟರ್ ಗಳನ್ನು ತಯಾರಿಸಿ ವಾಹನಗಳ ಮೇಲೆ ಅಂಟಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿ ಕನ್ನಡ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮುಂದಾಳತ್ವದಲ್ಲಿ ನಡೆಸುತ್ತಿದ್ದರು ವಿದ್ಯಾರ್ಥಿ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ತಂದೆಯವರ ಆತಂಕದ ಮೇರೆಗೆ ಕೃಷ್ಣರವರು ಚಳುವಳಿಯಿಂದ ಹಿಂದೆ ಸರಿದು ಅಧ್ಯಯನದಲ್ಲಿ ಮುಳುಗಿದರು.

ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ನಂತರ ಇದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಸಂಶೋಧನೆ ಮಾಡಿ ಸ್ನಾತಕೋತ್ತರ ಪದವಿ ಪಡೆದರು ಈ ಪದವಿಗಳನ್ನು ಪಡೆದಿದ್ದರು ಕೆಲಸ ನಿರ್ವಹಿಸಿದ್ದು ಮಾತ್ರ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರೆದು ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನಿನಗೆ ಏನು ಇಷ್ಟವೋ ಅದನ್ನೇ ಓದು, ಅದನ್ನೇ ಮಾಡು’ ಎಂಬುದು ಇವರ ತಂದೆಯವರ ಆಶಯ ನಂತರ ಲಾ ಓದಬೇಕೆಂಬ ತುಡಿತ ಎಲ್ ಎಲ್ ಬಿ ಹಾಗೂ ಎಮ್ಎಲ್ ಕಾನೂನು ಪದವಿ ಪಡೆದ ನಂತರವೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮೋ ಹಾಗೂ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪಿಎಚ್ ಡಿ ಪದವಿ ಗಳಿಸಿದರು. ಈಗಲೂ ಇವರು ನಿರಂತರ ವಿದ್ಯಾರ್ಥಿ.

ವಿದ್ಯಾರ್ಥಿ ದೆಸೆಯಿಂದಲೇ ಬಂದ ಕನ್ನಡ ನಾಡು ನುಡಿಯ ಬಗೆಗಿರುವ ಕಾಳಜಿ ವ್ಯಕ್ತಿತ್ವ ನಿರ್ಮಾಣಕ್ಕೆ ಒದಗಿ ಬಂದ ಪ್ರೇರಣೆ ಪ್ರಭಾವಗಳು ಶಿಕ್ಷಣ ಮತ್ತು ಸಾಮಾಜಿಕ ಬದ್ಧತೆಗಳು ಇವರ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದವು. ಕೃಷ್ಣರವರು ಸಮಾಜವನ್ನು ತಮ್ಮ ಕುಟುಂಬ ಎಂದು ಭಾವಿಸಿದವರು. ಅದೇ ರೀತಿಯಲ್ಲಿ ಅದರ ಏಳಿಗೆಯೇ ನನ್ನ ಏಳಿಗೆ ಎಂದು ಬಯಸಿ ದುಡಿಯುತ್ತಿರುವುದನ್ನು ಗಮನಿಸಿದರೆ ಅವರ ಮನಸ್ಸು ಎಷ್ಟು ವಿಶಾಲವೆಂಬುದು ಅರಿವಾಗುತ್ತದೆ.

ವಿಶೇಷವೆಂದರೆ ಯುವಕರಾಗಿದ್ದಾಗ ಇಂಜಿನಿಯರಿಂಗ್ ಮುಗಿಸಿ ಲಾ ಮಾಡಲು ಶೇಷಾದ್ರಿಪುರಂ ಲಾ ಕಾಲೇಜಿಗೆ ಬಂದಿದ್ದರು. ಆದರೆ ಅಲ್ಲಿ ಸೀಟು ಭರ್ತಿಯಾಗಿದ್ದರಿಂದ ಕಾರ್ಪೊರೇಷನ್ ಹತ್ತಿರವಿರುವ ಹಾವನೂರು ಲಾ ಕಾಲೇಜಿನಲ್ಲಿ ಲಾ ಮುಗಿಸಿದರು ತಾನು ಓದಲು ಬಂದ ಕಾಲೇಜಿಗೆ (ಸಂಸ್ಥೆಗೆ) ಮುಂದೊಂದು ದಿನ ಆ ಸಂಸ್ಥೆಯನ್ನು ಮುನ್ನಡೆಸುವ ಅದ್ವರ್ಯು ಆದುದು ನಿಜಕ್ಕೂ ಸಾಧನೆಯ ಮೇರುತನವೆನ್ನಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?