Saturday, December 14, 2024
Google search engine
HomeUncategorizedಬರಗೂರು MLC ಆಗುವುದು ನನಗೂ ಇಷ್ಟ: ಕೆ ಎನ್ನಾರ್

ಬರಗೂರು MLC ಆಗುವುದು ನನಗೂ ಇಷ್ಟ: ಕೆ ಎನ್ನಾರ್

ತುಮಕೂರು: ತುಳಿತಕ್ಕೆ ಒಳಗಾದ, ಅಸಹಾಯಕರ ಧ್ವನಿಯಾಗಿ ಬರಗೂರು ರಾಮಚಂದ್ರಪ್ಪ ಇದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಪ್ರೊ.ಬರಗೂರು ಗೆಳೆಯರ ಬಳಗ‌ವು ಆಯೋಜಿಸಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಆಯ್ದ ಅನುಭವಗಳ ಕಥನ ‘ಕಾಗೆ ಕಾರುಣ್ಯದ ಕಣ್ಣು’ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನಗೂ ಇಷ್ಟ

ಬರಗೂರು ರಾಮಚಂದ್ರಪ್ಪ ಅವರು ಎಂ.ಎಲ್.ಸಿ (ವಿಧಾನ ಪರಿಷತ್ ಸದಸ್ಯ). ಆಗುವುದು ನಿಮ್ಮೆಲ್ಲರಿಗಿಂತ ಹೆಚ್ಚು ನನಗೂ ಇಷ್ಟ. ನಾನೂ ಸಹ ಆ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಬರಗೂರು ಅವರನ್ನು ಸರ್ಕಾರ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡಬೇಕು ಎಂದು ಸಭಿಕರ ಹಕ್ಕೋತ್ತಾಯ ಮಂಡಿಸಿದಾಗ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಬಂಗಾರಪ್ಪ, ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಬರಗೂರು ಅವರು ಎಂಎಲ್ ಸಿ ಆಗುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಗೂರು ಅವರಿಗೆ ನನಗಿಂತಲೂ ಹೆಚ್ಚು ಆತ್ಮೀಯರು. ಬರಗೂರು ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡುವುದರಿಂದ ಆ ಸ್ಥಾನಕ್ಕೆ ಗೌರವ ಸಿಕ್ಕಂತ್ತಾಗಲಿದೆ. ಬರಗೂರು ಆ ಸ್ಥಾನಕ್ಕೆ ಅರ್ಹರು ಎಂದರು.

ಬರಗೂರು ಅವರು ತಮ್ಮ ಬರವಣಿಗೆಗಳ ಮೂಲಕ ಶ್ರಮಿಕರ ಅಗತ್ಯತೆಗಳನ್ನು, ಶ್ರಮಿಕರು, ನಾಡಿನ ಅನ್ನದಾತರು, ಕಷ್ಟಜೀವಿಗಳ ಬಗ್ಗೆ ಹೇಳಿದ್ದಾರೆ.
ಯುವಜನರು ಬರಗೂರರ ಸಾಹಿತ್ಯ ಓದಿ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಹುಟ್ಟು ಮತ್ತು ಸಾವಿನ ಮಧ್ಯೆ ಸಮಾಜದ ಅಭಿವೃದ್ಧಿಗೆ ಪೂರಕವಾದ, ಸಮಾಜಮುಖಿ ಕೆಲಸ ಮಾಡಬೇಕು ಎಂದರು.


ಸಮಾಜದ ಸುಧಾರಣೆಯ ಬಗ್ಗೆ ಬರಗೂರರು ತಾವು ನಿರ್ದೇಶಿಸಿದ ಚಲನಚಿತ್ರಗಳಲ್ಲೂ ಒತ್ತಿ ಹೇಳಿದ್ದಾರೆ. ದೇಶ ವಿದೇಶದಲ್ಲಿ ಕನ್ನಡದ ಕಂಪು ಪಸರಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಲೇಖಕಿ ಬಾ.ಹ.ರಮಾಕುಮಾರಿ, ‘ಪ್ರಸ್ತುತ ಹಲವು ಗೊಂದಲಗಳ ಮಧ್ಯೆ ಜನರು ದಿಕ್ಕೆಟ್ಟು ಹೋಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಸಾರ್ವಜನಿಕರಿಗೆ ಬರಗೂರು ಅವರ ಮಾರ್ಗದರ್ಶನ ಬೇಕಾಗಿದೆ.‌ಇದು ಅವರ ಬರವಣಿಗೆಗಳಲ್ಲಿ ಸಿಗುತ್ತದೆ. ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಗೂರು ರಾಮಚಂದ್ರಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಲೇಖಕ ರಾಜಪ್ಪ ದಳವಾಯಿ, ‘ಬರಗೂರು ರಾಮಚಂದ್ರಪ್ಪ ಅವರು ಬಹಳ ಅಪರೂಪದ ಪ್ರಸಂಗಗಳನ್ನು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಚಿಂತಕ ಕೆ.ದೊರೈರಾಜ್, ‘ಶ್ರೇಷ್ಠತೆಯ ವ್ಯಸನ ಜಗತ್ತಿನ ದೊಡ್ಡ ರೋಗ. ಇದನ್ನು ಬರಗೂರು ಅವರ ಪುಸ್ತಕದಿಂದ ಅರಿತು ಕೊಳ್ಳಬಹುದು ಎಂದರು.

ಬರಗೂರು ಅವರ ಮೊಮ್ಮಗ ಆಕಾಂಕ್ಷ್ ಬರಗೂರು ಅವರಿಗೆ ಪುಸ್ತಕ ನೀಡುವ ಮೂಲಕ ಕೃತಿಯನ್ನು ಜನಾರ್ಪಣೆ ಮಾಡಲಾಯಿತು.
ಚಲನಚಿತ್ರ ನಟ ಸುಂದರರಾಜ್ ಮಾತನಾಡಿದರು.
ಪ್ರಕಾಶಕ ಪ್ರಕಾಶ್ ಕಬ್ಬತ್ತನಹಳ್ಳಿ
ಉಪಸ್ಥಿತರಿದ್ದರು.

ಸುಫಿಯಾ ಕಾನೂನು ಕಾಲೇಜಿನ ಓಬಣ್ಣ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಸಾ.ಚಿ.ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗೋವಿಂದಯ್ಯ ವಂದಿಸಿದರು.


ಕ.ಸಾ.ಪ ಸಭಾಂಗಣದಲ್ಲಿ ಜಾಗ ಸಾಲದೇ ಸಭಾಂಗಣದ ಆಚೆಗೂ ಸಾಹಿತ್ಯಾಸಕ್ತರು‌ ನೆರೆದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?