Friday, December 1, 2023
spot_img
Homeಜೀವನ ಚರಿತ್ರೆವೂಡೇ ಮನೆತನ - ಭಾಗ ೨

ವೂಡೇ ಮನೆತನ – ಭಾಗ ೨

ಕಳೆದ ಸಂಚಿಕೆಯಿಂದ…….

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ತಂದೆ ಡಬ್ಲ್ಯೂ ಹೆಚ್ ಪುಟ್ಟಯ್ಯ ತಾಯಿ ದೊಡ್ಡಮ್ಮಯ್ಯ ಅವರಿಗೆ ಅಷ್ಟಮ ಗರ್ಭ ಸಂಜಾತರಾಗಿ ಕೃಷ್ಣರವರು 1963 ಫೆಬ್ರವರಿ 1 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.


ಕೃಷ್ಣ ರವರ ಬಾಲ್ಯದಲ್ಲಿ ಪ್ರಭಾವ ಬೀರಿದ ಕುಟುಂಬ ಸದಸ್ಯರಲ್ಲಿ ದೊಡ್ಡಪ್ಪ ಡಬ್ಲ್ಯೂ ಎಚ್ ಹನುಮಂತಪ್ಪ (ಜೂನಿಯರ್) ಹಾಗೂ ತಂದೆ ಡಬ್ಲ್ಯೂ ಎಚ್ ಪುಟ್ಟಯ್ಯನವರು ಪ್ರಮುಖರು ಸರಳತೆಗೆ,ಸ್ವಾವಲಂಬನೆಗೆ, ಶಿಸ್ತಿಗೆ, ಖಚಿತ ತೀರ್ಮಾನಗಳಿಗೆ ಮಾರ್ಗದರ್ಶನಕ್ಕೆ ನೇರ ನಡೆ-ನುಡಿಗಳಿಗೆ ಹೆಸರಾದವರು.


ಇವರು ದೇಶಪ್ರೇಮದ ಜೊತೆಗೆ ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದು, ಎಲೆಮರೆಕಾಯಿಯಂತೆ ಬದುಕಿ ಬಾಳಿದರು. ಸರಳ ಜೀವನ ನಡೆಸುವುದರ ಜೊತೆಗೆ ಇವರು ಸದಾ ಖಾದಿಧಾರಿಯೂ ಆಗಿದ್ದರು. ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದುದರಿಂದ ಸೀನಿಯರ್ ಇಂಟರ್ ಮೀಡಿಯಟ್ ನಲ್ಲೇ ಕಾಲೇಜು ವಿದ್ಯಾಭ್ಯಾಸವನ್ನು ಬಿಟ್ಟರು. ಆದರೆ ಸ್ವಾತಂತ್ರ್ಯ ಬಂದ ಮೇಲೆ ರಾಜಕೀಯ ಕ್ಷೇತ್ರಗಳಿಂದ ದೂರ ಉಳಿದರು.

ತಂದೆ ಡಬ್ಲೂ.ಹೆಚ್.ಪುಟ್ಟಯ್ಯ, ತಾಯಿ ದೊಡ್ಡಮ್ಮಯ್ಯ

ಉದ್ಯಮಿಯಾಗಿದ್ದರೂ ಗಾಂಧೀ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದರು. ಗಾಂಧೀ ಶಾಂತಿ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಪ್ರಸ್ತುತ ಇರುವ ವಸಂತನಗರದಲ್ಲಿ ವಿದ್ಯಾರ್ಥಿ ನಿಲಯ ಸಾವನದುರ್ಗದಲ್ಲಿ ಒಂದು ಕಲ್ಯಾಣ ಮಂಟಪ, ಕಿಲಾರಿ ರಸ್ತೆಯಲ್ಲಿ ದೇವಸ್ಥಾನ ನಿರ್ಮಾಣಗಳು ಇವರ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತವೆ.

ಹಿರಿಯರ ಆದರ್ಶ, ಸಂಸ್ಕೃತಿಯ ಶ್ರೀಮಂತಿಕೆ, ಪ್ರೀತಿಯ ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದದು ಕೃಷ್ಣರವರ ಬಾಳಿಗೆ ಒಳ್ಳೆಯ ಅಡಿಪಾಯ ಹಾಕಿತು. ಇವರ ತಾಯಿ ದೊಡ್ಡಮ್ಮಯ್ಯ ಮಕ್ಕಳನ್ನು ಅವಿಭಕ್ತ ಕುಟುಂಬದಲ್ಲಿದ್ದರೂ ಮೇರು ಎತ್ತರಕ್ಕೆ ಬೆಳೆಸಿದರು. ಕೃಷ್ಣರವರ ಸಹೋದರ ಸಹೋದರಿಯರು ಈ ನಾಡಿನ ಉತ್ತಮ ಪ್ರಜೆಗಳಾಗಿ ಬಾಳುತ್ತಿರುವಲ್ಲಿ ಅವರ ಕೊಡುಗೆ ಬಹು ದೊಡ್ಡದು. ಹೆಸರಿಗೆ ತಕ್ಕಂತೆ ಅವರು ನಿಜಕ್ಕೂ ದೊಡ್ಡಮ್ಮಯ್ಯನೇ ಆಗಿದ್ದರು.

ವೂಡೇ ಮನೆತನದ ವಂಶವೃಕ್ಷ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು