Friday, March 13, 2026
Google search engine
Home Blog Page 48

ಗರಂ ಆದ ಶಿವಣ್ಣ, ಸ್ಪರ್ಧೆಗೆ ಸಿದ್ದ ಎಂದರು…

ತುಮಕೂರು : 70ರ ದಶಕದಿಂದಲೂ ಜನತಾ ಪರಿವಾರದಿಂದ ಇಂದಿನ ಭಾರತೀಯ ಜನತಾ ಪಾರ್ಟಿಯವರೆಗೂ ಪಕ್ಷವನ್ನು ಕಟ್ಟಿಕೊಂಡು ಬಂದ ಸೊಗಡು ಶಿವಣ್ಣನವರು ಪಕ್ಷದ ಇಂದಿನ ವರಿಷ್ಠರ ತೀರ್ಮಾನವನ್ನು ಪ್ರತಿಭಟಿಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿ ಚುನಾವಣೆಗೆ ಧುಮುಕುವುದಾಗಿ ಘೋಷಿಸಿದ್ದಾರೆ.

ನಾನು ರೈತನ ಮಗ, ಅವರೆಕಾಯಿ ಮಾರಿ ಪಕ್ಷ ಕಟ್ಟಿದವನು, ನನ್ನ ಜನ ಬಿಟ್ಟರೆ ಬೇರ್ಯಾರು ಇಲ್ಲ, ನನ್ನ ಕಾರ್ಯಕರ್ತರು, ಬೆಂಬಲಿಗರು ಹೇಳಿದಂತೆ ಚುನಾವಣೆಗೆ ನಿಲ್ಲುವುದು ಸತ್ಯ, ನಾನು ಒಬ್ಬ ರಾಷ್ಟ್ರಮಟ್ಟದ ಕಬ್ಬಡ್ಡಿ ಆಟಗಾರ ಎಲ್ಲವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಲುತ್ತೇನೆ, ಹಾಗೇಯೇ ರಾಜಕೀಯದಲ್ಲೂ ತೊಡೆ ತಟ್ಟಿ ಆಟ ಆಡುವುದು ಗೊತ್ತಿದೆ ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಸಿದರು ಎಂಬುದಾಗಿ ಮೈತ್ರಿ ನ್ಯೂಸ್ ವರದಿ ಮಾಡಿದೆ.

ಏ.13 ರಿಂದ ನಾಮಪತ್ರ ಸಲ್ಲಿಕೆ; ಸಿದ್ಧತೆ

ತುರುವೇಕೆರೆ: ಮೇ ಹತ್ತರಂದು ನಡೆಯುವ ತುರುವೇಕೆರೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏ.13 ರಿಂದ ನಾಮ ಪತ್ರ ಸಲ್ಲಿಕೆ ಆರಂಭವಾಗುವ ಕಾರಣ ಪಟ್ಟಣದ ತಾಲ್ಲೂಕು ಕಚೇರಿಯ ಚುನಾವಣಾ ಕಾರ್ಯಾಲಯದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್. ಮಂಜುನಾಥ್ ತಿಳಿಸಿದರು.

ಇಲ್ಲಿನ ಚುನಾವಣಾ ಕಾರ್ಯಾಲಯದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ತಾಲ್ಲೂಕು ಕಚೇರಿ ಆಸುಪಾಸು ಪೊಲೀಸ್ ಬಿಗಿಭದ್ರತೆ ಹಾಕಲಾಗಿದೆ. ಯಾವುದೇ ಪಕ್ಷಗಳ ಅಭ್ಯರ್ಥಿ ಮತ್ತು ಆತನ ನಾಲ್ಕು ಮಂದಿ ಬೆಂಬಲಿಗರೊಂದಿಗೆ ಮಾತ್ರ ನಾಮ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ನಾಮಪತ್ರ ಸಲ್ಲಿಸಬಹುದಾಗಿದೆ. ಏ. 14ರಂದು ಅಂಬೇಡ್ಕರ್ ಜಯಂತಿ ಮತ್ತು 15 ರಂದು ಭಾನುವಾರ ರಜಾದಿನ ಹೊರತುಪಡಿಸಿ ಉಳಿದ ದಿನ ನಾಮ ಪತ್ರ ಸ್ವೀಕರಿಸಲಾಗುವುದು. ಏ.20ರಂದು ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಿಗುವ ನಾಮಪತ್ರಗಳನ್ನು ಪಡೆದು ಅದರೊಂದಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು

ಸಿಗದ ಟಿಕೆಟ್: SPM ನಡೆ ಏನು?

0

ತುಮಕೂರು: ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಬಯಸಿ ಬಿಜೆಪಿಗೆ ಸೇರಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿದ್ದು ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾರಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿಕೊಂಡು ಅತಂತ್ರರಾಗಿದ್ದ ಅವರೀಗ ಮತ್ತೇ ಅತಂತ್ರ ಸ್ಥಿತಿಗೆ ತಲುಪುವಂತಾಗಿದೆ.

ಜಿಲ್ಲೆಯಲ್ಲಿ ಸಜ್ಜನ ರಾಜಕಾರಣಿಯೆಂದೇ ಹೆಸರಾಗಿರುವ ಅವರು, ರಾಜಕೀಯವಾಗಿ ತಪ್ಪು ಹೆಜ್ಜೆ ಇರಿಸಿದ್ದೆ ಅವರಿಗೆ ಮುಳುವಾಗ ತೊಡಗಿದೆ.

ಕಾಂಗ್ರೆಸ್ ನಲ್ಲಿ ರಾಜಕಾರಣ ಆರಂಭಿಸಿದ ಅವರು ಆ ಪಕ್ಷದಲ್ಲಿ ಶಾಸಕರು, ಜಿಲ್ಲಾ ಘಟಕದ ಅಧ್ಯಕ್ಷರು ಆಗಿದ್ದರು. ಆದರೂ ಅವರಿಗೆ ಅಲ್ಲಿ ಟಿಕೆಟ್ ತಪ್ಪಿಸಲಾಯಿತು. ಅಲ್ಲಿಂದ ಅವರು ಜೆಡಿಎಸ್ ಗೆ ಬಂದರು.

ಜೆಡಿಎಸ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತರು. ಆ ಪಕ್ಷದಲ್ಲೂ ಇರಲಾರದೇ ಮತ್ತೇ ಕಾಂಗ್ರೆಸ್ ಸೇರಿದ್ದರು.

ಡಾ.ಜಿ.ಪರಮೇಶ್ವರ್ ಅವರ ಒತ್ತಾಸೆ ಹಾಗೂ ಕಾರಣದಿಂದಾಗಿ ಅವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈಗಿನ ಸಂಸದ ಜಿ.ಎಸ್.ಬಸವರಾಜ್ ವಿರುದ್ಧ ಸ್ಪರ್ಧಿಸಿ ಗೆದ್ದರು. ಆದರೆ ಸಮ್ಮಿಶ್ರ ಸರ್ಕಾರದ ಧರ್ಮ ಸಂಕಟ ಅವರ ತಲೆ ದಂಡಕ್ಕೆ ಕಾರಣವಾಯಿತು.

ಲೋಕಸಭಾ ಕ್ಷೇತ್ರಕ್ಕೆ ಎಚ್.ಡಿ.ದೇವೇಗೌಡರು ಕಾಂಗ್ರೆಸ್, ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ನಿಂತಾಗ ಎಸ್ ಪಿಎಂ ತೆಗೆದುಕೊಂಡ ನಿರ್ಧಾರ ಅವರನ್ನು ಕಾಂಗ್ರೆಸ್ ನಲ್ಲೂ ಮೂಲೆಗುಂಪು ಮಾಡುವಂತೆ ಮಾಡಿತು.

ಪರಮೇಶ್ವರ್ ಅವರನ್ನು ಶತಾಯ ಗತಾಯ ವಿರೋಧಿಸುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪರ ಎಸ್ ಪಿ ಎಂ ನಿಂತಿದ್ದು ಅವರು ರಾಜಕೀಯ ಬಲ ಕಳೆದುಕೊಳ್ಳಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ದೇವೇಗೌಡರ ಸೋಲಿಗೆ ರಾಜಣ್ಣ ಅವರ ಜತೆ ಎಸ್ ಪಿಎಂ ಕೈ ಜೋಡಿಸಿದ ಆರೋಪ ಅವರನ್ನು ಪರಮೇಶ್ವರ್ ಅವರಿಂದ ದೂರ ಸರಿಯುವಂತೆ ಮಾಡಿತು ಎನ್ನುತ್ತಾರೆ ಆ ಪಕ್ಷದ ಮೂಲಗಳು.

ರಾಜ್ಯಸಭಾ ಸದಸ್ಯನಾಗಿ ಮಾಡುವುದಾಗಿ ರಾಹುಲ್ ಗಾಂಧಿ ಮಾತುಕೊಟ್ಟಿದ್ದರು. ಆದರೆ ನನ್ನನ್ನು ಬಿಟ್ಟು ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಕೆಲಸ ಕಾಂಗ್ರೆಸ್ ಮಾಡಿತು. ಮಾತು ಕೊಟ್ಟಿದ್ದ ರಾಹುಲ್ ಗಾಂಧಿ ವಚನ ಮರೆತರು ಎಂಬ ಸಿಟ್ಟಿನಲ್ಲಿ ಎಸ್ ಪಿಎಂ ಕುದಿಯುತ್ತಿದ್ದರು. ಡಿ.ಕೆ. ಶಿವಕುಮಾರ್ ಸಹ ಕಾರಣ ಎಂಬುದು ಅವರ ಸಿಟ್ಟು ಹೆಚ್ಚಿಸಲು ಇದ್ದ ಮತ್ತೊಂದು ಕಾರಣ.

ಎಸ್ ಪಿಎಂ ಮನಸ್ಥಿತಿಯನ್ನು ಸರಿಯಾಗಿಯೇ ಅರಿತಿದ್ದ ಬಿಜೆಪಿ ನಾಯಕರು ಅವರನ್ನು ಬಿಜೆಪಿಗೆ ಸೆಳೆದುಕೊಂಡರು. ಕುಣಿಗಲ್ ನಲ್ಲಿ ಸೀಟು ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಎಸ್ ಪಿಎಂ ಚುನಾವಣಾ ಪ್ರಚಾರ ಸಹ ನಡೆಸಿದ್ದರು. ಈಗ ಆ ಪಕ್ಷವೂ ಕೈಕೊಟ್ಟಿದೆ.

ಡಿ.ಕೆ.ಶಿವಕುಮಾರ್ ಸಂಬಂಧಿ ಡಾ.ರಂಗನಾಥ್ ಅವರನ್ನು ಸೋಲಿಸಬೇಕಬ ಏಕೈಕ ಗುರಿ ಎಸ್ ಪಿ ಎಂ ಅವರದು. ಇದೇ ರೀತಿಯ ಗುರಿಯನ್ನು ಇನ್ನೊಬ್ಬ ಮಾಜಿ ಶಾಸಕ ರಾಮಸ್ವಾಮಿಗೌಡ ಅವರದು ಸಹ ಆಗಿದೆ. ಈ ಇಬ್ಬರೂ ಒಂದುಗೂಡಿದರೆ ಕುಣಿಗಲ್ ನ ರಾಜಕೀಯ ಚಿತ್ರಣ ಬದಲಾದರೂ ಬದಲಾಗಬಹುದು.

ಏನೇ ಆದರೂ ಮುದ್ದಹನುಮೇಗೌಡ ಅವರು ಸ್ವತಂತ್ರವಾಗಿ ಅಥವಾ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿಯಾದರೂ ನಿಲ್ಲುವುದು ಖಚಿತ ಎಂದು ಎಸ್ ಪಿಎಂ ಹೇಳಿದ್ದಾರೆ.

ಈಗಾಗಲೇ ಬಿಜೆಪಿಯ ಮತ್ತೊಬ್ಬ ಆಕಾಂಕ್ಷಿ ರಾಜೇಶಗೌಡ, ಎಸ್ ಪಿಎಂ, ರಾಮಸ್ವಾಮಿ ಗೌಡ ಅವರ ಬೆಂಬಲಿಗರ ಸಭೆಯೂ ನಡೆದಿದೆ. ಎಲ್ಲರೂ ಸೇರಿ ಒಮ್ಮತದ ಅಭ್ಯರ್ಥಿ ನಿಲ್ಲಿಸುವ ಮಾತುಕತೆಯೂ ನಡೆದಿದೆ.

ಈ ಮೂವರು ಸೇರಿ ಕುಣಿಗಲ್ ಅಸ್ಮಿತೆಯನ್ನು ಚುನಾವಣಾ ಕಣಕ್ಕೆ ಒಡ್ಡುವ ಹೊಸ ಪ್ರಯತ್ನ ಮಾಡುತ್ತಾರೆಯೇ ಕಾದು ನೋಡಬೇಕಾಗಿದೆ.

ತುಮಕೂರಿಗೆ ಜ್ಯೋತಿ ಗಣೇಶ್ ಗೆ ಟಿಕೆಟ್

0

ತುಮಕೂರು: ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ.

ತುಮಕೂರು ನಗರಕ್ಕೆ ಹಾಲಿ ಶಾಸಕ ಜ್ಯೋತಿ ಗಣೇಶ್, ಚಿ.ನಾ.ಹಳ್ಳಿ ಮಾಧುಸ್ವಾಮಿ, ತುರುವೇಕೆರೆ ಮಸಾಲ ಜಯರಾಂ, ತಿಪಟೂರಿಗೆ ಬಿ.ಸಿ.ನಾಗೇಶ್, ತುಮಕೂರು ಗ್ರಾಮಾಂತರಕ್ಕೆ ಸುರೇಶಗೌಡ, ಕೊರಟಗೆರೆಗೆ ಅನಿಲ್ ಕುಮಾರ್, ಮಧುಗಿರಿಗೆ ಎಲ್.ಸಿ.ನಾಗರಾಜ್, ಕುಣಿಗಲ್ ಗೆ ಡಿ. ಕೃಷ್ಣಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ.

ತುಮಕೂರು ನಗರಕ್ಕೆ ತನಗೇ ಟಿಕೆಟ್ ಸಿಗಲಿದೆ ಎಂದು ಹೇಳಿಕೊಂಡಿದ್ದ ಸೊಗಡು ಶಿವಣ್ಣ ಮುಖಭಂಗ ಅನುಭವಿಸಿದ್ದಾರೆ.

ಕುಣಿಗಲ್ ನಿಂದ ಟಿಕೆಟ್ ನಿರೀಕ್ಷಿಸಿದ್ದ ಮಾಜಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಿಲ್ಲ.

ಬಿಜೆಪಿ ಟಿಕೆಟ್ ಪಟ್ಟಿ ರಿಲೀಸ್: 52 ಹೊಸಬರಿಗೆ ಮಣೆ

ದೆಹಲಿ: ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ರಾತ್ರಿ ಬಿಡುಗಡೆಗೊಳಿಸಿದ್ದು, 52 ಹೊಸ ಮುಖಗಳಿಗೆ ಮಣೆ ಹಾಕಿದೆ.

ಒಟ್ಟು 189 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ. ಇದರಲ್ಲಿ ವೈದ್ಯರು, ನಿವೃತ್ತ ಅಧಿಕಾರಿಗಳು, ಸ್ನಾತಕೋತ್ತರ ಪದವೀಧರರಿಗೆ ಮನ್ನಣೆ ನೀಡಿರುವುದಾಗಿ ಹೇಳಿದೆ.

ಮಂಚಿಹಳ್ಳಿ ಜಾತ್ರೆ

0

ಗುಬ್ಬಿ : ತಾಲೂಕಿನ ಕಡಬ ಹೋಬಳಿ ಮಂಚಿಹಳ್ಳಿ ಗ್ರಾಮದಲ್ಲಿ ಶ್ರೀವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಸೋವವಾರ ಅದ್ದೂರಿಯಾಗಿ ನಡೆಯಿತು.

ಜಾತ್ರೆಯ ಅಂಗವಾಗಿ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಯಿತು.

ವೀರಭದ್ರಸ್ವಾಮಿಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗ್ರಾಮಸ್ಥರಿಂದ ದೇವರಿಗೆ ಆರತಿ ಸೇವೆ ನಡೆಯಿತು. ಉತ್ಸವದಲ್ಲಿ ನಾನಾ ಜಾನಪದ ತಂಡಗಳು ಲಿಂಗದವೀರರ ಕುಣಿತ, ನಂದಿ ಧ್ವಜ ಕುಣಿತ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಗ್ನಿಕೊಂಡದಲ್ಲಿ ಗ್ರಾಮಸ್ಥರು ಹರಕೆ ಹಿಡೇರುವಂತೆ ಅಗ್ನಿ ಕೊಂಡ ಆಯ್ದರು.

ನೋಡಬನ್ನಿ ಕೆಂಪಮ್ಮದೇವಿ ಜಾತ್ರೆ

ಗುಬ್ಬಿ: ತಾಲೂಕಿನ ಸಿಎಸ್ ಪುರ ಹೋಬಳಿ ಹಿಂಡಿಸಿಗೆರೆ ಗ್ರಾಮದ ಶ್ರೀ ಕೆಂಪಮ್ಮದೇವಿ ಹಾಗೂ ಪಾತರಾಜಸ್ವಾಮಿ ಜಾತ್ರಾ ಮಹೋತ್ಸವ ಏ.12 ರಿಂದ 15ರವರೆಗೆ ನಡೆಯುವುದು.
ಹಿಂಡಿಸಿಗೆರೆಯ ಸುತ್ತಮುತ್ತಹಳ್ಳಿಗಳಾದ ಹರಿವೇಸಂದ್ರ, ವಿ.ಕೋಡಿಹಳ್ಳಿ, ತಿಮ್ಮಪ್ಪಗೌಡನಪಾಳ್ಯ, ಕಂಬಯ್ಯನಪಾಳ್ಯ, ಕೆಂಚವೀರನಹಳ್ಳಿ, ಕಂಬಸಂದ್ರ, ಬೇಲೂರು ಗ್ರಾಮಗಳಿಂದ ಏ. 14 ರಂದು ಅರತಿ ಸೇವೆಯನ್ನು ಮಾಡಲಾಗುವುದು. ಅಲಂಕೃತಗೊಂಡ ಅಮ್ಮನವರ ಮೂರ್ತಿ ಉತ್ಸವ ನಡೆಯುತ್ತದೆ.

ವೈದನ ಮೇಲೆ ದಾಳಿ ನಡೆಸಿದ ಆನೆ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆಯೊಂದು ವೈದಾಧಿಕಾರಿ ಮೇಲೆ ದಾಳಿ ನಡೆಸಿದೆ.

ನ್ಯಾಮತಿ ತಾಲ್ಲೂಕಿನ ಸೋಮಲಾಪುರದ ಬಳಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಆನೆಯು ಕವನಾ ಎಂಬ ವಿದ್ಯಾರ್ಥಿಯನ್ನು ತುಳಿದು ಸಾಯಿಸಿತ್ತು.

ಕಾಡಾನೆ ಸೆರೆಗೆ ಕಾರ್ಯಾಚರಣೆಗಾಗಿ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಬಂದಿದ್ದರು. ಆನೆಗೆ ಅರವಳಿಕೆ ಚುಚ್ಚುಮದ್ದು ನೀಡುವಾಗ ಅದರ ಜಾಡು ಹಿಡಿದು ಬಂದ ಆನೆ ಅವರ ಮೇಲೆ ಆನೆ ದಾಳಿ ಮಾಡಿದೆ.

ಗಾಯಾಳು ವೈದಾಧಿಕಾರಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

‘ಮನಿ ಸೀಕ್ರೆಟ್ಸ್’ ಬಿಡುಗಡೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶರತ್ ಎಂ ಎಸ್ ಅವರ
‘ಮನಿ ಸೀಕ್ರೆಟ್ಸ್- ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್’ ಕೃತಿಯನ್ನು ವಿಸ್ತಾರ ಚಾನಲ್ ನ ಸಿ ಇ ಒ ಹರಿಪ್ರಕಾಶ್ ಕೋಣೆಮನೆ ಬಿಡುಗಡೆ ಮಾಡಿದರು. ವಿಜಯವಾಣಿ ಸಂಪಾದಕರಾದ ಕೆ ಎನ್ ಚನ್ನೇಗೌಡ, ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಶರತ್ ಎಂ ಎಸ್, ಜಿ ಎನ್ ಮೋಹನ್, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ ಅವರು ಉಪಸ್ಥಿತರಿದ್ದರು.

ಬೆಂಗಳೂರು: ದೇಶದ ಪ್ರತಿಯೊಬ್ಬರೂ ಆರ್ಥಿಕವಾಗಿ ಸುಭದ್ರರಾಗಿದ್ದರೆ ಮಾತ್ರ, ರಾಷ್ಟ್ರ ಆರ್ಥಿಕವಾಗಿ ಸುಭದ್ರವಾಗಿರಲು ಸಾಧ್ಯ. ಆದ್ದರಿಂದ ಸುರಕ್ಷಿತವಾದ ಸಣ್ಣ ಹೂಡಿಕೆಗಳನ್ನು ಮಾಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ವಿಸ್ತಾರ ನ್ಯೂಸ್ ನ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಹಾಗೂ ‘ಬಹುರೂಪಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುರೂಪಿಯ ಪ್ರಕಟಣೆ, ಶರತ್ ಎಂ.ಎಸ್. ಅವರ ‘ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್’ ಎಂಬ ಜಂಟಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.


ಕೃತಿ: ಮನಿ ಸೀಕ್ರೆಟ್ಸ್- ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್
ಕೃತಿಕಾರ: ಶರತ್ ಎಂ ಎಸ್
ಪ್ರಕಾಶನ :ಬಹುರೂಪಿ
ಬೆಲೆ: ರೂ 300
ಸಂಪರ್ಕ: 70191 82729


ಹಿಂದೆ ನಾವು ಇದ್ದಷ್ಟೇ ಹಣದಲ್ಲಿ ಬದುಕುವುದನ್ನು ಕಲಿತಿದ್ದೆವು. ಸಾಂಪ್ರದಾಯಿಕ ಮಾರ್ಗಗಳಲ್ಲಿ ಉಳಿತಾಯ ಮಾಡುತ್ತಿದ್ದೆವು. ಆದರೆ, ಈಗ ಈ ಹಣವನ್ನು ವಿವಿಧ ಆಯಾಮಗಳಲ್ಲಿ ಹೂಡಿಕೆ ಮಾಡಿ, ಹಣ ಗಳಿಸಲು ಜನ ಮುಂದಾಗುತ್ತಿದ್ದಾರೆ. ಇಂಥ ಹೂಡಿಕೆಗಳನ್ನು ಮಾಡುವಾಗ ಆರ್ಥಿಕ ಜ್ಞಾನ ಹೊಂದಿರುವುದು ಮುಖ್ಯವಾಗುತ್ತದೆ. ಇಂಥ ಜ್ಞಾನವನ್ನು ಒದಗಿಸುವಲ್ಲಿ ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಪುಸ್ತಕ ಯಶಸ್ವಿಯಾಗುತ್ತದೆ ಎಂದು ಪ್ರಶಂಸಿದರು.

ಆರ್ಥಿಕ ಸಾಕ್ಷರತೆ ಇಲ್ಲದೆ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಯಶಸ್ಸು ಸಿಗುವುದಿಲ್ಲ. ಅಡ್ಡದಾರಿಯಲ್ಲಿ ಸಾಗಿ ಕೂಡ ಹಣ ಮಾಡಲು ಸಾಧ್ಯವಿಲ್ಲ. ಆದರೆ, ಅಧ್ಯಯನ ಪೂರ್ವಕವಾಗಿ ಹೂಡಿಕೆ ಮಾಡಿದಾಗ ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯ ಎಂದು ‘ವಿಜಯವಾಣಿ’ ಸಂಪಾದಕ ಕೆ.ಎನ್. ಚನ್ನೇಗೌಡ ಹೇಳಿದರು.

ಪುಸ್ತಕದ ಕರ್ತೃ, ವಿಸ್ತಾರ ಚಾನಲ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಶರತ್ ಎಂ.ಎಸ್ ಮಾತನಾಡಿ ನಮ್ಮ ಶಿಕ್ಷಣ ವ್ಯವಸ್ಥೆ ಆರ್ಥಿಕ ಶಿಕ್ಷಣ ನೀಡದಿರುವುದು ದೊಡ್ಡ ದುರಂತ. ಶೇ.24 ಮಾತ್ರ ಆರ್ಥಿಕ ಸಾಕ್ಷರತೆ ಇದೆ ಇದನ್ನು ಹೆಚ್ಚಿಸುವಲ್ಲಿ ಗಮನ ನೀಡುವುದು ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, ಹೂಡಿಕೆ ಕುರಿತು ಜನಸಾಮಾನ್ಯರಿಗೆ ಸಾಮಾನ್ಯ ಜ್ಞಾನ ಒದಗಿಸುವಂತೆ ಇರುವ ಮನಿ ಸೀಕ್ರೆಟ್ಸ್ ಪುಸ್ತಕ ತುಂಬಾ ಭಿನ್ನವಾಗಿದೆ. ಇಂಥ ಪುಸ್ತಕಗಳು ದೇಶದ ಧಿಕ್ಕನ್ನು ಬದಲಾಯಿಸುತ್ತದೆ ಎಂದರು.

ಹಿರಿಯ ಪತ್ರಕರ್ತ, ಬಹುರೂಪಿಯ ಜಿ ಎನ್ ಮೋಹನ್, ಕೆಯುಡಬ್ಲುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಫ್ರೀಡಂ ಆಪ್ ಸಂಸ್ಥಾಪಕ ಸಿ.ಎಸ್. ಸುಧೀರ್ ಅವರು ಉಪಸ್ಥಿತರಿದ್ದರು.

ಸುಧಾಮೂರ್ತಿಅವರಿಗೆ ಪದ್ಮಭೂಷಣ ಪ್ರಶಸ್ತಿ

ಸುಧಾಮೂರ್ತಿ ಅವರ ಸಾಮಾಜಿಕ ಸೇವೆಯನ್ನು ಗೌರವಿಸಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮ ಅವರು ಸುಧಾಮೂರ್ತಿಯವರಿಗೆ ಪದ್ಮಭೂಷಣ ಪ್ರಶಸ್ತಿ ವಿತರಿಸಿದರು.