Friday, March 13, 2026
Google search engine
Home Blog Page 53

ಅಪರಿಚಿತ ಮೃತ ದೇಹ ಪತ್ತೆ

0

ಪಾವಗಡ : ವೈ ಎನ್ ಹೊಸಕೋಟೆ ಹೋಬಳಿಯ ದೊಡ್ಡ ಹಳ್ಳಿ ಹಾಗೂ ವೈಎನ್ ಹೊಸಕೋಟೆಗೆ ಹೋಗುವ ದಾರಿಯ ಮಧ್ಯೆಭಾಗದಲ್ಲಿರುವ ಹುಣಸೆ ಮರದ ಬಳಿ ಚರಂಡಿಯೊಂದರಲ್ಲಿ ಅಪರಿಚಿತ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ದೊಡ್ಡ ಹಳ್ಳಿ ಕಡೆಯಿಂದ ವೈ ಎನ್ ಹೊಸಕೋಟೆ ಮಾರ್ಗಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಚರಂಡಿ ಒಂದರಲ್ಲಿ ಸುಮಾರು 30 ರಿಂದ 35 ವಯಸ್ಸುಳ್ಳ ವ್ಯಕ್ತಿಯನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿರುವುದನ್ನು ನೋಡಿ ಅನುಮಾನವಸ್ಪದವಾಗಿ ಪೊಲೀಸರಿಗೆ ಮಾಹಿತಿ
ನೀಡಿದ್ದಾರೆ.

ಸ್ಥಳಕ್ಕೆ ಕೊಡಿಗೇನಹಳ್ಳಿ ಠಾಣೆಯ ಪಿಎಸ್ಐ ಅರ್ಜುನ ಗೌಡ ಭೇಟಿ ನೀಡಿ ಪರಿಶೀಲಿಸಿದರು.

ವೈಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ವರದಿ :ಕುಮಾರ ನಾಗಲಾಪುರ

ಕುದ್ಮುಲ್ ಪ್ರಶಸ್ತಿಗೆ ಅರ್ಜಿ ಆಹ್ವಾನ

0

ಕುದ್ಮಲ್ ರಂಗರಾವ್ ರವರ 164ನೇ ಜನ್ಮದಿನದ ಅಂಗವಾಗಿ 2023 ನೇ ಸಾಲಿನ ‘ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ’ ಗಾಗಿ ಅಜಿ೯ಆಹ್ವಾನ ಮಾಡಲಾಗಿದೆ.

ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ಮತ್ತು ಇತರೇ ಯಾವುದೇ ಕ್ಷೇತ್ರದಲ್ಲಿ ವಿಶೇಷ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಯುವ ಬರಹಗಾರರ ಒಕ್ಕೂಟದಿಂದ ಮತ್ತು ರಾಜ್ಯ ಮಟ್ಟದ ಕುದ್ಮಲ್ ರಂಗರಾವ್ ಪ್ರಶಸ್ತಿ ನೀಡಲಾಗುತ್ತಿದ್ದು ಅರ್ಹ ಸಾಧಕರಿಂದ ಅರ್ಜಿ ಅಹ್ವಾನಿಸಲಾಗಿದೆ.


ಸಾಧಕರು ತಮ್ಮ ಇತ್ತೀಚಿನ 2 ಫೋಟೋ ಪೂರ್ಣ ಪರಿಚಯದ ಸ್ವ ವಿವರ ಮೊಬೈಲ್‌ ನಂಬರ್ ವಿವರಗಳೊಂದಿಗೆ ಕಾಯ೯ ಸಾಧನೆಗಳ ಫೋಟೊ ಜೆರಾಕ್ಸ, ತಮ್ಮ ಬಗ್ಗೆ ಮಾಹಿತಿ ಇರುವ ಸುದ್ದಿ ಪತ್ರಿಕೆಗಳ ಕಟಿಂಗ್ ಜೆರಾಕ್ಸ್ ಪ್ರತಿಗಳನ್ನು ಪೋಸ್ಟ್ ಕವರಿನಲ್ಲಿ 2023 ಮಾರ್ಚ್ 20 ತಾರೀಖಿನೊಳಗೆ
ಈ ಕೆಳಗಿನ ವಿಳಾಸಕ್ಕೆ ತಲಪುವಂತೆ ಕೋರಲಾಗಿದೆ.
ಹೂಹಳ್ಳಿ ನಾಗರಾಜ್, ರಾಜ್ಯಧ್ಯಕ್ಷರು.ರಾಜ್ಯ ಯುವ ಬರಹಗಾರರ ಒಕ್ಕೂಟ
ಬಹುಜನ ಶಕ್ತಿ ಪತ್ರಿಕೆ ಕಛೇರಿ
ಹೂಹಳ್ಳಿ ಗ್ರಾಮ
ಅರಹಳ್ಳಿ ಅಂಚೆ.
ಕೋಲಾರ ತಾ,ಜಿಲ್ಲೆ-೫೬೩೧೦೧
೯೭೩೮೪೩೭೭೩೮. ತಲುಪಿಸಲು ಕೋರಿದೆ. ಪ್ರಶಸ್ತಿ ಗೆ ಸಾಧಕರನ್ನು ಆಯ್ಕೆ ಮಾಡುವುದು ಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿಗೆ ಸೇರಿರುತ್ತದೆ . ಪ್ರಶಸ್ತಿ ಅರ್ಜಿಯನ್ನು ಪುರಸ್ಕರಿಸುವ ಅಥಾವ ತಿರಸ್ಕರಿಸುವ ಸ್ವಾತಂತ್ರ್ಯ ಸಮಿತಿಯದ್ದೇ ಅಗಿರುತ್ತದೆ. ನಿಗದಿತ ದಿನಾಂಕದೊಳಗೆ ಬಂದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ . email ಮೂಲಕವೂ ಅರ್ಜಿ ಸಲ್ಲಿಸಬಹುದು.

arunodayatu@gmail.com contact number 9738437738. 9972131971.. ವಿಶೇಷ ಸೂಚನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮೈಸೂರಿನಲ್ಲಿ ಇದೇ ತಿಂಗಳು ನಡೆಯುವುದು. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವರು ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹಾಲಿಂಗಪ್ಪ ಅವಿರೋಧ ಆಯ್ಕೆ

ಪಾವಗಡ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆ ಸೋಮವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು,

ಈ ಚುನಾವಣೆಯಲ್ಲಿ ಅವಿರೋಧವಾಗಿ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಆರ್,ಡಿ ರೊಪ್ಪ ಗ್ರಾಮದ ಮಹಾಲಿಂಗಪ್ಪ ಅವಿರೋಧ ಆಯ್ಕೆಯಾದರು.

ಇವೇಳೆ ನೂತನ ಅಧ್ಯಕ್ಷ ಮಾಲಿಂಗಪ್ಪ ಮಾತನಾಡಿ ಅವರು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ತಾಲೂಕಿನ ಶಾಸಕರಾದ ವೆಂಕಟರಮಣಪ್ಪ ರವರಿಗೆ ಮತ್ತು ಕಾಂಗ್ರೆಸ್ ಪಕ್ಷದ ಟಿಕೆಟ್ ಅಭ್ಯರ್ಥಿ ವೆಂಕಟೇಶ್ ರವರಿಗೆ ಮತ್ತು ನನ್ನ ಗೆಲುವಿಗೆ ಶ್ರಮಿಸಿ, ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದರು.

ನೂತನ ಅಧ್ಯಕ್ಷ ಮಾಲಿಂಗಪ್ಪ ಆಯ್ಕೆಯಾದ ನಂತರ ಶಾಸಕರನ್ನು ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ವೆಂಕಟರಮಣಪ್ಪ ಪಿ ಎಲ್ ಡಿ ಬ್ಯಾಂಕ್ ನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶುಭ ಹಾರೈಸಿದರು.

ಚುನಾವಣಾ ಅಧಿಕಾರಿಯಾಗಿ ಎಸ್ಸಿ ಸೌಮ್ಯರವರು ಕರ್ತವ್ಯ ನಿರ್ವಹಿಸಿದ್ದಾರೆ.


ಈ ವೇಳೆ ಮಾಜಿ ಪಿ.ಎಲ್.ಡಿ. ಬ್ಯಾಂಕ್ ನ ಅದ್ಯಕ್ಷರುಗಾಳಾದ ಶೇಷಗಿರಿ. ಎನ್.ಆರ್ ಅಶ್ವಥ್ ಕುಮಾರ್. ಸೀತರಾಮ್.ಎಮ್.ಎಲ್.ಗೋಪಿ.ಪೆದ್ದಾರೆಡ್ಡಿ.ಕೆ.ಎಲ್.ನಾಗಣ್ಣ.ಬಸವರಾಜು.ಚಿದಾನಂದ ರೆಡ್ಡಿ.ಓಬಳೇಶಪ್ಪ.ಅಂಜಿನಪ್ಪ. ಉಪಾಧ್ಯಕ್ಷ ಹೆಚ್.ಆರ್.ಸುಮಾ. ವಿಶ್ವನಾಥ್. ಜಿ ಟಿ ರೆಡ್ಡಿ. ಶಂಸುದ್ದೀನ್. ಹನುಮಂತರಾಯ. ಬಾಲಾಜಿ.ಗಿತ್ತ ಮಾಲೂರ. ಆನಂದ್ ಕುಮಾರ್ . ರಾಮ್ ಮನೋಹರ ಲೋಹಿಯಾ (ಅಶೋಕ್ ). ಸುಬ್ರಹ್ಮಣ್ಯ.ಬಲರಾಮ್. ರಮೇಶ್. ಅಂಜಿನಪ್ಪ. ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.

ತೋವಿನಕೆರೆ; ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚಿಕೆ

0

ತುಮಕೂರು: ಕೊರಟಗೆರೆಯ ಕೆಲವು ಹಳ್ಳಿಗಳಲ್ಲಿ ಪ್ರತಿ ಮನೆಯ ಯಜಮಾನಿಯ ಹೆಸರಿನಲ್ಲಿ ಕಾಂಗ್ರೇಸ್ ಗ್ಯಾರಂಟಿ ಎನ್ನುವ ಪ್ರಿಂಟಿಂಗ್ ಕಾರ್ಡಗಳನ್ನು ವಿತರಿಸುತ್ತಿದ್ದಾರೆ.

ಕಾರ್ಡನಲ್ಲಿ ಎರಡು ಭಾಗಗಳಿದ್ದು ಮೇಲ್ಬಾಗದಲ್ಲಿ ಮನೆಯ ಯಾಜಮಾನರ ಹೆಸರು, ವಿಳಾಸ ಮತ್ತು ಕಾರ್ಡ ವಿತರಿಸುತ್ತಿರುವ ಸ್ಥಳೀಯ ಮುಖಂಡರ ಹೆಸರು, ಪಕ್ಷದಲ್ಲಿ ನೊಂದಾವಣೆಯಾಗಿರುವ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿದ್ದಾರೆ. ಈ ಭಾಗವನ್ನು ಪಕ್ಚದ ಕಛೇರಿಗೆ ಕಳುಹಿಸಲಾಗುತ್ತದೆ ಎಂದು ಮುಖಂಡರು ತಿಳಿಸಿದರು.

ಕೆಳ ಭಾಗವನ್ನು ಬಣ್ಣದಲ್ಲಿ ಪ್ರಿಂ ಟ್ ಮಾಡಿದ್ದು ಅಧಿಕಾರಕ್ಕೆ ಬಂದರೆ ನೀಡುವ ಸೌಲಭ್ಯಗಳ ವಿವರವಿರುತ್ತದೆ.
ಗೃಹಲಕ್ಷ್ಮಿ ಹೆಸರಿನಲ್ಲಿ ಮನೆಯ ಹಿರಿಯ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ಎಂದು ನಿಗದಿ ಪಡಿಸಿದ್ಧಾರೆ.
ಅದನ್ನು ಗ್ಯಾಸ್ ಸಿಲಿಂಡರ್ ಗೆ 500, ಜಿ.ಎಸ್.ಟಿ.ಪರಿಹಾರ 500. ಮತ್ತು ಬೆಲೆ ಏರಿಕೆಯ ಪರಿಹಾರಕ್ಕೆ 1000 ಒಟ್ಟು 2000 ರೂಗಳು ಎಂದು ಪ್ರಿಂಟ್ ಮಾಡಿದ್ದಾರೆ.
ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ಪ್ರಿಂಟಿಂಗ್ ಸಹಿ ಇದೆ.
ವಿತರಣೆ ಭಾನುವಾರ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ನಮಗೆ ಇನ್ನು ಕೊಟ್ಟಿಲ್ಲ ಎನ್ನುವ ಅತಂಕ ಕೆಲವು ಸಾರ್ವಜನಿಕರಲ್ಲಿ ಪ್ರಾರಂಭವಾಗಿದೆ.

ಪ್ರತಿ ಬೂತ್ ಗೆ ಮೊದಲ ಹಂತದಲ್ಲಿ 150 ಕಾರ್ಡ ಗಳನ್ನು ವಿತರಿಸಲಾಗುತ್ತದೆ.

ಸಿ.ಎಸ್.ಪುರ, ಸಿ.ಎನ್.ಪಾಳ್ಯ ಜಾತ್ರೆ

ಗುಬ್ಬಿ : ತಾಲೂಕಿನ ಸಿ. ಎಸ್. ಪುರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಮಾರ್ಚ್ 14,15 ರಂದು ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಅಮ್ಮನವರ ರಥೋತ್ಸವ ನಡೆಯುವುದು.

ಶ್ರೀ ಮಾರಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಸೂಲಿಬೆಲೆ ಗಿರೀಶ್ ನಿರ್ದೇಶನದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಮಾ. 15 ರಂದು ಬುಧವಾರ ರಾತ್ರಿ 7:30ಕ್ಕೆ ಏರ್ಪಡಿಸಲಾಗಿದೆ. ಈ ಸಮಾರಂಭಕ್ಕೆ ಶಾಸಕ ಮಸಾಲ ಜಯರಾಮ್, ಮುಖಂಡರಾದ ಎಂ.ಟಿ ಕೃಷ್ಣಪ್ಪ, ಬೆಮೆಲ್ ಕಾಂತರಾಜು ಹಾಗೂ ಇತರರು ಆಗಮಿಸುವರು.

ಡಾ. ರಜನಿ ಬರೆದ ವಸಂತ ಕಾಲದ ಕವನಗಳು

0

ಎಲ್ಲಿಂದ‌ ಕಲಿತೆ?

ಚಿಗುರೆಲೆಗೆ
ಎಳೆ ಹಸಿರು,
ಹರೆಯದಲ್ಲಿ ಗಾಢ,
ಹಣ್ಣಾದಾಗ ಹಳದಿ,
ಬಣ್ಣ ಬಳಿಯುವೆಯಲ್ಲಾ…
ನಿನ್ನ ಬಣ್ಣ ಮಿಶ್ರ ಕಲೆ
ಎಲ್ಲಿಂದ ಕಲಿತೆ?


ಅರಳುವ ಉಮೇದು….


ಚಳಿಗಾಲದ
ಚಿತ್ತ
ಕದಡಿ
ರಂಗಿನ ರಾಡಿ…

ಎಲ್ಲ ಹೂಗಳಿಗೂ
ಒಂದೇ ಕಾಲಕ್ಕೆ
ಅರಳುವ
ಉಮೇದು..

ದುಂಬಿ
ಜೆನ್ನೋಣ
ಹಾರಿ ಹಾರಿ
ಗುಯ್ ಗುಟ್ಟೀ
…ಸೊಳ್ಳೆಗಳೂ ಪೈಪೋಟಿ ಗೆ
ಇಳಿದು..

ಹೆಂಗೆಳೆಯರೂ
ಅರಳಿದ
ಹೂ ಮುಡಿದು
ಹಬ್ಬಗಳ ಸಿರಿ..
ಝರಿ ಸೀರೆ
ಮದುವೆ ಮನೆಯಲ್ಲಿ
ಝರ ಭರ…


ನೀನೆ ಹೇಳು ವಸಂತ

ಕೆಳಗೆ
ತರಗೆಲೆ
ಮರದಲ್ಲಿ
ಚಿಗುರೆಲೆ…

ಮಾವಿನ
ಮರದಲ್ಲಿ
ಹೂ….
ಹೂ ಕಚ್ಚಿ
ಹಣ್ಣು ಆಗುವುದೆ?

ಹುಣಸೆ ತೊಕ್ಕು
ಮಾವಿನ ಚಿತ್ರಾನ್ನ
ಹಣ್ಣುಗಳ.. ತಿನ್ನಲೋ
ಹೂ ಮುಡಿಯಲೋ
ರಂಗೇರಿದ ಪ್ರಕೃತಿಯ
ಅಸ್ವಾದಿಸಲೋ
…ನೀನೇ ಹೇಳು ವಸಂತ..


ಎಲೆ ಅಳಲಿಲ್ಲ!?

ತೊಟ್ಟು
ಕಳಚಿ
ಬಿದ್ದ ಎಲೆ
ಅಳಲಿಲ್ಲ..

ಚಿಗುರೊಡೆದ
ಎಲೆ..
ಅರಳಿದ ಹೂ
ಕಚ್ಚಿದ ಕಾಯಿ
ಎಲ್ಲವೂ
ನಿಶಬ್ಧ…

ಹಣ್ಣಾಗಿ
ತೊಟ್ಟು
ಕಳಚಿ
ಬಿದ್ದಾಗ
ನೋವಿಲ್ಲ

ಮರ ಒಡೆಯುವ
ಕಾಲ
ಕೈ ಕಾಲು
ತುಟಿ
ಒಡೆದು…
ನಾವೂ ಪ್ರಕೃತಿಯ
ಭಾಗವೇ…

ಸುರೇಶ್ ಗೌಡರತ್ತ ಒಲವು ತೋರಿದ ಪರಿಶಿಷ್ಟರು

0

ತುಮಕೂರು: ಬಿಜೆಪಿ ಎಸ್.ಸಿ. ಮೋರ್ಚಾ ಭಾನುವಾರ ಆಯೋಜಿಸಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಪರಿಶಿಷ್ಟರ ಸಮಾವೇಶಕ್ಕೆ ಹರಿದುಬಂದ ಜನಸಾಗರ ಪಕ್ಷದಲ್ಲಿ ಉತ್ಸಾಹ ಇಮ್ಮಡಿ ಮಾಡಿದೆ.

ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಹ ಜನಸಾಗರ ಕಂಡು ಹುಬ್ಬಿ ಹೋದರು. ಇದು ಬಿಜೆಪಿಗೆ ಸಮುದಾಯ ನೀಡುತ್ತಿರುವ ಬೆಂಬಲಕ್ಕೆ ಸಾಕ್ಷಿ ಎಂದು ಬಳಿಕ ನಡೆದ ಪ್ರಮುಖರ ಸಭೆಯಲ್ಲಿ ಹೇಳಿದರು ಎನ್ನಲಾಗಿದೆ.

ಸುಮಾರು 20 ಸಾವಿರಕ್ಕೂ ಹೆಚ್ಚು ಪರಿಶಿಷ್ಟರು ಸೇರಿದ್ದರು ಈ ವರ್ಗದ ಜನರು ಸುರೇಶಗೌಡರತ್ತ ಒಲುವು ತೋರಿಸಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಇದೊಂದು ದೊಡ್ಡ ಶಕ್ತಿ. ಸುರೇಶಗೌಡರು ಈ ಸಮುದಾಯದ ಕಣ್ಮಣಿಯಾಗಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಜಿ.ಎಸ್.ಬಸವರಾಜ್ ಆಂತರಿಕ ಸಭೆಯಲ್ಲಿ ವಿಶ್ಲೇಸಿದರು ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ಅಗಾಧ ಸಂಖ್ಯೆ ಯ ಜನರನ್ನು ಕಂಡು ನನ್ನ ಹೃದಯ ತುಂಬಿ ಬಂತು. ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ, ಆ ಸಮುದಾಯದ ಮಕ್ಕಳೇ ಹೆಚ್ಚು ಓದುವ ಸರ್ಕಾರಿ ಶಾಲೆಗಳನ್ನು ಕಟ್ಟಿದ್ದು, ಶಾಸಕನಾಗಿದ್ದ ಅವಧಿಯಲ್ಲಿ ಕಾಲೊನಿಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಈ ಪ್ರೀತಿ ತೋರಿಸಿದ್ದಾರೆ. ಈ ಸಲ ಗೆಲ್ಲಿಸಿದರೆ ಕಾಲೊನಿಗಳ ಸಮಗ್ರ ಅಭಿವೃದ್ಧಿ ನನ್ನ ಗುರಿಯಾಗಲಿದೆ ಎಂದು ಸುರೇಶಗೌಡ ಪ್ರತಿಕ್ರಿಯಿಸಿದ್ದಾರೆ.

ಸುರೇಶಗೌಡರು ಶಾಸಕರಾಗಿದ್ದ ಅವಧಿ ಯಲ್ಲಿ ಕಾಲೊನಿಗಳಲ್ಲಿ ಮಾಡಿದ ಕೆಲಸ ಜ‌ನರ ಪ್ರೀತಿಗೆ ಕಾರಣವಾಗಿದೆ. ಅಲ್ಲದೇ ಸಮಾವೇಶದ ತಯಾರಿಯನ್ನು ಕಾರ್ಯಕರ್ತರು ಅಚ್ಚುಕಟ್ಟಾಗಿ ಮಾಡಿದ್ದರು. ಕಾಲೊನಿಗಳ ಜನರ ನಡುವೆ ನಿಂತು ಕೆಲಸ ಮಾಡಿದ್ದು ಸಹ ಈ ಭಾರಿ ಸಂಖ್ಯೆಯ ಜನರು ಸೇರಲು ಕಾರಣ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಶಂಕ್ರಣ್ಣ ತಿಳಿಸಿದರು.

ಗುದ್ದಲಿ ಪೂಜೆಗೆ ಘೇರಾವ್: ಶಾಸಕರ ಜತೆ ಚಕಮಕಿ

ರಸ್ತೆ ಕಾಮಗಾರಿ ಗುದ್ದಲಿ ಪೂಜೆ‌‌ಗೆಂದು ಗ್ರಾಮಕ್ಕೆ ಬಂದಿದ್ದ ಪಾವಗಡ ಕ್ಷೇತ್ರದ ಶಾಸಕ ವೆಂಕಟರವಣಪ್ಪರನ್ನು ಗ್ರಾಮಸ್ಥರು ಗುದ್ದಲಿ ಪೂಜೆ ನಿಲ್ಲಿಸಲು ಗ್ರಾಮಸ್ಥರು ಪ್ರಯತ್ನಿಸಿದ ಘಟನೆ ಪಾವಗಡ ತಾಲೂಕಿನ ಬಿ.ಹೊಸಹಳ್ಳಿಯಲ್ಲಿ ನಡೆದಿದೆ.

ಬಿ.ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಸ್ತೆ ಕಾಮಗಾರಿ ಗುದ್ದಲಿ ಪೂಜೆ‌‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ಗ್ರಾಮಕ್ಕೆ ಶಾಸಕ ವೆಂಕಟರವಣಪ್ಪನವರ ಕಾರು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಕಾರಿಗೆ ಘೇರಾವ್ ಮಾಡಿ ಶಾಸಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಸ್ತೆ ಕಾಮಗಾರಿ ಗುದ್ದಲಿ ಪೂಜೆಗೆಂದು ತಂದಿದ್ದ ಸಾಮಗ್ರಿಗಳನ್ನು‌ ಬಿಸಾಡಿದ್ದಾರೆ. ಸ್ಥಳದಲ್ಲಿ ಕೆಲವೊತ್ತು ಶಾಸಕರ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ನಂತರ ಬಿ.ಹೊಸಹಳ್ಳಿ ದ ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ನಡುವೆ ವಾಗ್ವಾದವಾಗಿದೆ.

ಬಿ.ಹೊಸಹಳ್ಳಿ ಗ್ರಾಮದಲ್ಲಿ ಗುದ್ದಲಿ ಪೂಜೆಯನ್ನು ಗ್ರಾಮಸ್ಥರು ಶಾಸಕರು ಸೇರಿ ಗುದ್ದಲಿ ಪೂಜೆ ನೆರವೇರಿಸಿದರು.

ವರದಿ :ಕುಮಾರ ನಾಗಲಾಪುರ

ಗುಡಿಸಲಿಗೆ ಆಕಸ್ಮಿಕ ಬೆಂಕಿ : 15 ಮೇಕೆಗಳು ಸಜೀವ ದಹನ

ಪಾವಗಡ:- ಗುಡಿಸಿಲಿನಲ್ಲಿ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ಕೊಟ್ಟಿಗೆಯಲ್ಲಿ ಇದ್ದಂತಹ ವಸ್ತುಗಳು ಮತ್ತು ಮೇಕೆಗಳು ಸಜೀವ ದಹನ ವಾಗಿರುವ ಘಟನೆ ತಾಲ್ಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ.

ಬೂದಿ ಬೆಟ್ಟ ಗ್ರಾಮದ ಬಂಗಾರಪ್ಪ ಎಂಬುವರ ಕೊಟ್ಟಿಗೆಯಲ್ಲಿದ್ದ ಸುಮಾರು 15 ಮೇಕೆಗಳು, ಮನೆಯಲ್ಲಿದ್ದ 50,000 ಹಣ ಕೊಟ್ಟಿಗೆ ಮನೆಗೆ ಬೆಂಕಿ ಕಾಣಿಸಿಕೊಂಡಿದ್ದು ಈ ಅನಾಹುತಕ್ಕೆ ಕಾರಣವಾಗಿದೆ ಎಂದು ತಿಳಿಯಲಾಗಿದೆ.

ವೇಳೆ ಸ್ಥಳೀಯರು ಎಚ್ಚೆತ್ತುಕೊಂಡು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವಲಿ ಯಶಸ್ವಿಯಾಗಿದ್ದಾರೆ ಇನ್ನು ಈ ಒಂದು ಪ್ರಕರಣ ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ವರದಿ :ಕುಮಾರ ನಾಗಲಾಪುರ

ಈ ಊರಲ್ಲಿ ವೀಳ್ಯೆದೆಲೆ ಬೆಲೆ‌ ಎಷ್ಟು ಗೊತ್ತಾ?

0

ತೋವಿನಕೆರೆ: ಇಲ್ಲಿನ ಸಂತೆಯಲ್ಲಿ ವೀಳ್ಯದೆಲೆ ನೂರು ಎಲೆಗಳ ಒಂದು ಕಟ್ಟು ಎರಡು ಗಳಿನಿಂದ 150 ರೂಗೆ ಮಾರಾಟವಾಯಿತು.


ಜನವರಿ ತಿಂಗಳಲ್ಲಿ 100 ಗಡಿ ದಾಟಿ ಮಾರಾಟವಾದರೆ ಫೆಬ್ರವರಿ ಮೊದಲವಾರ 160 ತಲುಪಿ ನಂತರ 210 ಗೆ ತಲುಪಿ ಇತಿಹಾಸ ನಿರ್ಮಿಸಿತು.


ಮೂರು ವಾರಗಳಿಂದ 150 ರೂ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಬೆಲೆ ಹೆಚ್ಚು ಇದ್ದರೂ ಮಾರುಕಟ್ಟೆಗೆ ಉತ್ತಮವಾದ ಎಲೆ ಮಾರಾಟಕ್ಕೆ ಬರುತ್ತಿಲ್ಲ.


ಹಬ್ಬಗಳು, ಜಾತ್ರೆಗಳು, ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದು ವೀಳ್ಯದೆಲೆ ಇಳುವರಿ ಚಳಿಯ ಕಾರಣದಿಂದ ಕಡಿಮೆಯಾಗಿದೆ. ಕಳೆದ ವರ್ಷ ಬಿದ್ದ ಮಳೆಯು ಇಳುವರಿ ಮೇಲೆ ಪರಿಣಾಮ ಬೀರಿದೆ. ವೀಳ್ಯದೆಲೆ ತೋಟಗಳಲ್ಲಿ ಶೇ 70 ರಷ್ಡು ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಬೆಳೆಗಾರ ಲಿಂಗಸಂದ್ರದ ನಟರಾಜು.

ರೈತರು ಬಳ್ಳಿಯನ್ನು ಮರದಿಂದ ಇಳಿಸಿ ಭೂಮಿಗೆ ಅದ್ದಿಯುತ್ತಿದ್ದಾರೆ. ಮತ್ತೆ ಬಳ್ಳಿ ಚಿಗುರು ಬರ ಬೇಕು. ಇದೇ ವಾತಾವರಣ ಮುಂದುವರೆದರೆ ಎಲೆಗಳು ಬರುವುದು ತಡವಾಗಿ ಬೆಲೆ ಇನ್ನು ಹೆಚ್ಚಾಗ ಬಹುದು ತೋವಿನಕೆರೆ ಬೆಳೆಗಾರ ನಾರಾಯಣಪ್ಪ ನವರ ಅಭಿಪ್ರಾಯ.

ಚಿಲ್ಲರೆ ಮಾರಾಟಗಾರರು 150 ರಿಂದ 200 ರೂಗಳಿಗೆ ಒಂದು ಕಟ್ಟು ಮಾರಾಟ ಮಾಡುತ್ತಿದ್ದಾರೆ.

ತುಮಕೂರು ಜಿಲ್ಲೆಯ ತೋವಿನಕೆರೆಯಲ್ಲಿ ಪ್ರತಿ ಶುಕ್ರವಾರ ನಡೆಯುವ ಸಂತೆಗೆ ವೀಳ್ಯದೆಲೆ ಶತಮಾನಗಳಿಂದ ಮಾರಾಟಕ್ಕೆ ಬರುತ್ತದೆ. ಬೆಳೆಗಾರರೇ ನೇರವಾಗಿ ಗ್ರಾಹಕರಿಗೆ ಮತ್ತು ಮಧ್ಯವರ್ತಿ ಗಳಿಗೆ ಮಾರಾಟ ಮಾಡುವುದು ನಡೆಯುತ್ತಿದೆ.

ಇಲ್ಲಿನ ಕಟ್ಟು ಗಳಲ್ಲಿ ನೂರು ಎಲೆಗಳಿಗಿಂತ ಹೆಚ್ಚು ಇರುತ್ತವೆ. ಕಡಿಮೆ ಇಟ್ಟು ಮಾಡುವುದಿಲ್ಲವೆಂದು ಬೇರೆ ಸ್ಥಳದ ಗ್ರಾಹಕರು ನಂಬಿದ್ದಾರೆ.

ಪ್ರತಿ ಶುಕ್ರವಾರ
ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭವಾಗುವ ವೀಳ್ಯದೆಲೆ ಸಂತೆ ಹತ್ತು ಗಂಟೆಗೆ ಮುಕ್ತಾಯ ವಾಗುತ್ತದೆ.

ನೂರು ಕಟ್ಟಗಳ ಹಲವು ಪೆಂಡಿಗಳು ಮಾರಾಟಕ್ಕೆ ಬಂರುತ್ತಿದ್ದವು. ಈಗ ಒಂದು ಪೆಂಡಿಯೂ ಕಂಡು ಬರುವುದಿಲ್ಲ.

ಕೆಲವು ಚಿಲ್ಲರೆ ಮಾರಾಟಗಾರ ಹತ್ತು ರೂಗಳಿಗೆ ಮೂರು ಎಲೆಗಳನ್ನು ಮಾರಾಟ ಮಾಡ ಬೇಕು. ಬಹಳ ಕಷ್ಟ. ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ.
ಪ್ರತಿ ದಿನ ಹಲವು ಸಲ ಎಲೆ ಅಡಿಕೆ ಜಿಗಿಯುತ್ತಿದ್ದ ಮಹಿಳೆಯರು ಒಂದೇ ಎಲೆಯನ್ನು ಹಲವು ತುಂಡ ಮಾಡಿ ಕೊಂಡು 2–3 ಸಲ ಉಪಯೋಗ ಮಾಡುತ್ತಿದ್ದಾರೆ.
ಕೆಲವು ಮಹಿಳೆಯರು ಇತರರ ಮುಂದೆ ಜಿಗಿಯದೇ ಕದ್ದು ಮುಚ್ಚಿ ಹಾಕಿ ಕೊಳ್ಳುವುದು ಈಗಲೂ ನಡೆಯುತ್ತಿದೆ.
ಹಲವು ದಶಕಗಳ ನಂತರ ಬೆಳೆಗಾರರು ನಿರಂತರವಾಗಿ ಉತ್ತಮ ಬೆಲೆಯನ್ನು ಪಡೆಯುತ್ತಿದ್ದಾರೆ
ಎನ್ನುತ್ತಾರೆ ಚಿಲ್ಲರೆ ವ್ಯಾಪಾರಿ ತೋವಿನಕೆರೆ ರಂಗನಾಥ ರಾವ್.