ತುಮಕೂರು: ಕೊರಟಗೆರೆಯ ಕೆಲವು ಹಳ್ಳಿಗಳಲ್ಲಿ ಪ್ರತಿ ಮನೆಯ ಯಜಮಾನಿಯ ಹೆಸರಿನಲ್ಲಿ ಕಾಂಗ್ರೇಸ್ ಗ್ಯಾರಂಟಿ ಎನ್ನುವ ಪ್ರಿಂಟಿಂಗ್ ಕಾರ್ಡಗಳನ್ನು ವಿತರಿಸುತ್ತಿದ್ದಾರೆ.
ಕಾರ್ಡನಲ್ಲಿ ಎರಡು ಭಾಗಗಳಿದ್ದು ಮೇಲ್ಬಾಗದಲ್ಲಿ ಮನೆಯ ಯಾಜಮಾನರ ಹೆಸರು, ವಿಳಾಸ ಮತ್ತು ಕಾರ್ಡ ವಿತರಿಸುತ್ತಿರುವ ಸ್ಥಳೀಯ ಮುಖಂಡರ ಹೆಸರು, ಪಕ್ಷದಲ್ಲಿ ನೊಂದಾವಣೆಯಾಗಿರುವ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿದ್ದಾರೆ. ಈ ಭಾಗವನ್ನು ಪಕ್ಚದ ಕಛೇರಿಗೆ ಕಳುಹಿಸಲಾಗುತ್ತದೆ ಎಂದು ಮುಖಂಡರು ತಿಳಿಸಿದರು.
ಕೆಳ ಭಾಗವನ್ನು ಬಣ್ಣದಲ್ಲಿ ಪ್ರಿಂ ಟ್ ಮಾಡಿದ್ದು ಅಧಿಕಾರಕ್ಕೆ ಬಂದರೆ ನೀಡುವ ಸೌಲಭ್ಯಗಳ ವಿವರವಿರುತ್ತದೆ.
ಗೃಹಲಕ್ಷ್ಮಿ ಹೆಸರಿನಲ್ಲಿ ಮನೆಯ ಹಿರಿಯ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ಎಂದು ನಿಗದಿ ಪಡಿಸಿದ್ಧಾರೆ.
ಅದನ್ನು ಗ್ಯಾಸ್ ಸಿಲಿಂಡರ್ ಗೆ 500, ಜಿ.ಎಸ್.ಟಿ.ಪರಿಹಾರ 500. ಮತ್ತು ಬೆಲೆ ಏರಿಕೆಯ ಪರಿಹಾರಕ್ಕೆ 1000 ಒಟ್ಟು 2000 ರೂಗಳು ಎಂದು ಪ್ರಿಂಟ್ ಮಾಡಿದ್ದಾರೆ.
ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ಪ್ರಿಂಟಿಂಗ್ ಸಹಿ ಇದೆ.
ವಿತರಣೆ ಭಾನುವಾರ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ನಮಗೆ ಇನ್ನು ಕೊಟ್ಟಿಲ್ಲ ಎನ್ನುವ ಅತಂಕ ಕೆಲವು ಸಾರ್ವಜನಿಕರಲ್ಲಿ ಪ್ರಾರಂಭವಾಗಿದೆ.
ಪ್ರತಿ ಬೂತ್ ಗೆ ಮೊದಲ ಹಂತದಲ್ಲಿ 150 ಕಾರ್ಡ ಗಳನ್ನು ವಿತರಿಸಲಾಗುತ್ತದೆ.