Friday, March 13, 2026
Google search engine
Home Blog Page 62

ಮಸಾಲೆ ವಿರುದ್ಧ ಕೆಂಡ ಕಾರಿದ ಕುಮಾರಸ್ವಾಮಿ

ತುರುವೇಕೆರೆ; ಮಸಾಲೆ ಮಾರಿಕೊಂಡು, ವ್ಯಾಪಾರ ಮಾಡಿ ದುಡ್ಡು ಮಾಡುವ ತುರುವೇಕೆರೆ ಬಿಜೆಪಿ ಶಾಸಕರಿಗೆ ಮತ ಹಾಕುತ್ತೀರಿ, ರೈತಪರವಾಗಿ ಕೆಲಸ ಮಾಡುವ ಎಂ.ಟಿ.ಕೃಷ್ಣಪ್ಪರಿಗೆ ಮತ ಹಾಕುವುದಿಲ್ಲವೇ ಎಂದು ಮಾಜಿ ಮುಖ್ಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಮತದಾರರನ್ನು ಕೇಳಿದರು.

ತುರುವೇಕೆರೆ ಪಟ್ಟಣದ ಉಡಿಸಲಮ್ಮ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ನ ಪಂಚರತ್ನ ರಥ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.


30 ದಿನಗಳು ಪೂರೈಸಿರುವ ಪಂಚರತ್ನ ರಥ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದ್ದು, ಮುಂದಿನ ಮಾರ್ಚ್ ಅಂತ್ಯದವರೆಗೂ ಮುಂದುವರೆಯಲಿದೆ ಎಂದರು.


ನನ್ನ ಬಳಿ ನಿತ್ಯವೂ ಸಾವಿರಾರು ಜನರು, ಬಡತಾಯಂದಿರು, ವಿಧವೆಯರು ತಮ್ಮ ಕಷ್ಟಗಳನ್ನು ಹೊತ್ತು ಮನೆ ಬಾಗಿಲಿಗೆ ಬರುತ್ತಾರೆ ಅವರ ಜಾತಿ, ಧರ್ಮ ಕೇಳದೇ ಅವರ ಸಮಸ್ಯೆಗಳಿಗೆ ತಾತ್ಕಾಲಿಕ ನೆರವು ನೀಡುತ್ತಾ ಬಂದಿದೇನೆ. ಇಂತಹ ಅನುಭವಗಳೇ ಜೆಡಿಎಸ್ನ ಪಂಚರತ್ನ ರಥ ಯಾತ್ರೆಗೆ ಸ್ಪೂರ್ತಿಯಾಗಿದೆ ಎಂದರು.
ಕೊಬ್ಬರಿ ಬೆಲ 18 ಸಾವಿರದಿಂದ 11 ಸಾವಿರಕ್ಕೆ ಕುಸಿತೆ ಕಂಡಿದ್ದು ಈ ಬಗ್ಗೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರು ಕ್ವಿಂಟಾಲ್ಗೆ 750 ರೂಪಾಯಿಗಳ ಬೆಂಬ ಬೆಲೆ ನೀಡುವ ಬಗ್ಗೆ ಪ್ರಾಸ್ತಾಪಿಸಿದರು.

ಸದಾಶಿವ ಆಯೋಗ ಮತ್ತು ಒಳಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ಹಾಗು ಸರ್ಕಾರಿ ನೌಕರರ ಹಳೆಪಿಂಚಣ ನೀಡುವ ವಿಷಯದಲ್ಲಿ ಕಾಂಗ್ರೆಸ್ ಬಿಜೆಪಿ ರಾಜಕೀಯ ಮಾಡುತ್ತಿದೆಯಷ್ಟೇ ಎಂದು ಹೇಳಿದರು.

ನಾನು ಮನೆಯಲ್ಲಿದ್ದರೂ 40 ರಿಂದ 50 ಸೀಟು ಗೆಲ್ಲಿಸುವ ಕಾರ್ಯಕರ್ತರಿದ್ದಾರೆ ಆದರೆ ರೈತರ ಸಮಸ್ಯೆಗಳಿಗೆ ಶ್ವಾಶ್ವತ ಯೋಜನೆ ಪರಿಹಾರಗಳನ್ನು ರೂಪಿಸಲು 120 ಸ್ಥಾನಗಳನ್ನು ರಾಜ್ಯ ಜನತೆ ಕರುಣಿಸಬೇಕಿದೆ ಎಂದರು.


ರಾಜ್ಯದ ಜನತೆ ಐದು ವರ್ಷಗಳ ಪೂರ್ಣ ಪ್ರಮಾಣದ ಅಧಿಕಾರವನ್ನು ಜೆಡಿಎಸ್ಗೆ ನೀಡಿದರೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಯು.ಕೆಜಿಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ತೆರೆದು ಉಚಿತ ಶಿಕ್ಷಣ ಮತ್ತು ಆಸ್ಪತ್ರೆಗಳ ನಿರ್ಮಾಣ ಮಾಡಿ ಉಚಿತ ಆರೋಗ್ಯ ನೀಡಲಾಗುವುದು. ವಸತಿ ರಹಿತರಿಗೆ ಮನೆ ನೀಡುವುದು. ಬಿಪಿಎಸ್ ಕಾರ್ಡ್ ಇರುವವರಿಗೆ ವಿಮೆ ಕಾರ್ಡ್ ನೀಡಿ ಗಂಭೀರ ಕಾಯಿಲೆಗೆ ಸರ್ಕಾರವೇ ವೆಚ್ಚ ಭರಿಸುವುದು. ಪ್ರತಿ ಮುಂಗಾರು ಆರಂಭದಲ್ಲಿ ಸಣ್ಣ ಮತ್ತು ದೊಡ್ಡ ರೈತರಿಗೆ ಬೀಜ, ಗೊಬ್ಬರಕ್ಕಾಗಿ ಎಕರೆಗೆ 10 ಸಾವಿರ ನೀಡುವುದು, ತರಕಾರಿ, ರಾಗಿ ಇನ್ನಿತರ ಬೆಳೆ ಬೆಳೆಯುವ ರೈತರಿಗೆ ಗೋದಾಮು ನಿರ್ಮಿಸಿ ಉತ್ತಮ ಬೆಲೆ ಸಿಗುವಂತೆ ಮಾಡುವುದು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಗಳಿಗೆ ಸಾಲಮನ್ನಾ. 60 ವರ್ಷ ಮೇಲ್ಪಟ್ಟವರಿಗೆ 5 ಸಾವಿರ, ವಿಧವೆ, ಅಂಗವಿಕಲರಿಗೆ 2500 ಮಶಾಸನ ಇಂತಹ ಜನೋಪಯೋಗಿ ಕೆಲಸ ಮಾಡಲು 1.25 ಲಕ್ಷ ಕೋಟಿ ರೂಪಾಯಿಗಳ ಖರ್ಚಾಗಲಿದೆ ಎಂದರು.

ಕ್ಷೇತ್ರದ ಜನರ, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಎಂ.ಟಿ.ಕೃಷ್ಣಪ್ಪನಿಗೆ ಮತ ಹಾಕದೆ ನೀವು ಮಸಾಲೆ ಮಾರಿಕೊಂಡು, ವ್ಯಾಪಾರ ಮಾಡಿ ದುಡ್ಡು ಮಾಡುವ ತುರುವೇಕೆರೆ ಬಿಜೆಪಿ ಶಾಸಕರಿಗೆ ಮತ ಹಾಕುತ್ತೀರಿ ರೈತಪರವಾಗಿ ಕೆಲಸ ಮಾಡುವ ಎಂ.ಟಿ.ಕೃಷ್ಣಪ್ಪರಿಗೆ ಮತ ಹಾಕಿ. ಅದೇ ರೀತಿ ಗುಬ್ಬಿ ತಾಲ್ಲೂಕಿನ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರಿಗೂ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಎಚ್.ಡಿ.ಕುಮಾರ ಸ್ವಾಮಿಯವರು ರಾಜ್ಯದ ರೈತರು ಸೂಕ್ತ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದಾಗ 25 ಸಾವಿರ ಕೋಟಿ ರೂಪಾಯಿಗಳ ಸಾಲಮನ್ನಾ ಮಾಡಿದರು ಅದರಲ್ಲಿ ತುರುವೇಕೆರೆ ಕ್ಷೇತ್ರದ 14.559 ರೈತರು ಸೇರಿದ್ದಾರೆ. ಜೆಡಿಎಸ್ ರೈತ ಸೇಹಿ ಪಕ್ಷವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಜನರ ರಕ್ತವನ್ನು ನಿರಂತರವಾಗಿ ಹೀರುತ್ತಿವೆ ಎಂದು ಕುಟುಕಿದರು.


ಅಭೂತ ಪೂರ್ವ ಸ್ವಾಗತ ಕೋರಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು
ತಾಲ್ಲೂಕಿನ ಟಿ.ಬಿ.ಕ್ರಾಸ್ ಮೂಲಕ ಆಗಮಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿಯನ್ನು ಸಾವಿರಾರು ಕಾರ್ಯಕರ್ಯತರು ಸ್ವಾಗತಿಸಿ ಜೆಸಿಬಿ ಮೂಲಕ ಅಡಿಕೆ ಹೊಂಬಾಳೆ, ಸೇಬು ಹಾರ ಹಾಕಿ ಹೂಮಳೆ ಗೈದರು. ನಂತರ ಪಟ್ಟಣದ ಚಂದ್ರೇಶ್ ಕಚೇರಿ ಮುಂದೆ ರಾಗಿ ತೆನೆ ಹಾರ, ನಂತರ ಬಾಣಸಂದ್ರ ವೃತ್ತದಲ್ಲಿ ಎಳನೀರು ಹಾರ, ಕುಂಬಳಕಾಯಿ ಹಾರ ಹೂಮಳೆ, ನಂತರ ಕೊಬ್ಬರಿ ಹಾರ, ಸೇಬು ಹಣ್ಣು ಹಾರ ಹಾಕಿ ಸ್ವಾಗತಿಸಿದರು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಕುಮಾರ್ ಸ್ವಾಮಿಗೆ ಜಯಕಾರ ಜಯಘೋಷವನ್ನು ಹಾಕಿದರು.

ಪ್ರಿಯಾ ಶಾಲಾ ಕಾರ್ಯದರ್ಶಿ ಚಂದ್ರೇಗೌಡರ ಮನೆಯಲ್ಲಿ ಮದ್ಯಾಹ್ನದ ಉಟವನ್ನು ಮಾಡಿದರು. ನಂತರ ದಂಡಿನಶಿವರ ಮಾರ್ಗವಾಗಿ ಬಾಣಸಂದ್ರದಲ್ಲಿ ವಾಸ್ತವ್ಯ ಹೂಡಿದರು.
ಪಂಚರತ್ನ ರಥ ಯಾತ್ರೆಯಲ್ಲಿ ಮುಖಂಡರುಗಳಾದ ಎಂ.ಡಿ.ರಮೇಶ್ ಗೌಡ, ದೊಡ್ಡಾಘಟ್ಟ ಚಂದ್ರೇಶ್, ಬಾಣಸಂದ್ರ ರಮೇಶ್, ಜುಫ್ರಲ್ಲಾಖಾನ್, ಚೌಡಾರೆಡ್ಡಿ, ವೆಂಕಟಾಪುರ ಯೋಗೀಶ್, ಸ್ವಾಮಿ, ಶಂಕರೇಗೌಡ, ಮೂತರ್ಿ, ಅಂದಾನಪ್ಪ, ನಾಗೇಂದ್ರ, ಬಿ.ಎಸ್.ದೇವರಾಜು, ನಾಗೇಂದ್ರ, ಕುಶಾಲ್, ರಾಘು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಶಿಕ್ಷಣ ಕ್ಷೇತ್ರ: ಬರಗೂರು‌ ಕಳವಳ

0

ವರದಿ: ಈ. ಶಿವಣ್ಣ


ತುಮಕೂರು; ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗಿ ವ್ಯಾಪಾರಿ ಮನೋಭಾವ ಮತ್ತು ಉದ್ಯಮಶೀಲ ಮನೋಭಾವ ಹೆಚ್ಚಳವಾಗಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತುಮಕೂರು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಾಪಾರಿ ಮನೋಭಾವ ಹೆಚ್ಚಳವಾಗಿರುವುದರಿಂದ ತಳ ಸಮುದಾಯಗಳಿಗೆ ಶಿಕ್ಷಣ ಕೈಗೆಟುಕದಂತಾಗಿದೆ. ಗ್ಯಾಟ್ ಒಪ್ಪಂದದ ಪರಿಣಾಮವಾಗಿ ದೇಶದಲ್ಲಿ ಮೊದಲ ಹಂತದ ಶಿಕ್ಷಣ ವ್ಯಾಪಾರಿಕರಣಕ್ಕೆ ಕೈಹಾಕಲಾಗಿದೆ. ಅದರ ಭಾಗವಾಗಿ ದೇಶದಲ್ಲಿ ಇದು ಒಂದು ಉದ್ಯಮವಾಗಿ ಮಾರ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಪದ್ದತಿ ಜಾರಿಯಲ್ಲಿದ್ದುದ್ದರಿಂದ ಬಹುತೇಕ ಎಲ್ಲಾ ವರ್ಗಗಳಿಗೂ ಶಿಕ್ಷಣ ಸಿಗುವಂತಾಯಿತು. ಸಾವಿತ್ರಿ ಬಾಯಿ ಪುಲೆ ಅವರಂಥ ಮಹನೀಯರು ಹೆಣ್ಣು ಮಕ್ಕಳಿಗೆ ಉಚಿತವಾದ ಶಿಕ್ಷಣ ಕೊಡಲು ಸಾಧ್ಯವಾಯಿತು. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ಅವಕಾಶ ದೊರೆಯದಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆ ವಿದ್ಯಾರ್ಥಿಗಳು

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸರ್ಕಾರಿ ಕಲಾ ವಿಜ್ಞಾನ ಮತ್ತು ವಾಣೀಜ್ಯ ಕಾಲೇಜಿನಲ್ಲಿ ನಾನೂ ಕೂಡ ವಿದ್ಯಾರ್ಥಿಯಾಗಿದ್ದೆ. ಸಚಿವ ಎಂಬ ಯಾವ ಅಹಂ ಇಲ್ಲದೆ ಸಾಮಾನ್ಯ ವಿದ್ಯಾರ್ಥಿಯಂತೆ ನಾವೆಲ್ಲ ಒಟ್ಟುಗೂಡಿ ಕಾಲೇಜು ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಅಭಿವೃದ್ಧಿಗೆ ಅನುದಾನ ಮತ್ತು ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನುದಾನ ನೀಡಲು ನಾನು ಸಿದ್ದನಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಓದಿದ ಕಾಲೇಜಿನ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಮಾತನಾಡಿ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹಳೆ ವಿದ್ಯಾರ್ಥಿಗಳು ಒಂದೆಡೆ ಸೇರುವುದು ಮಾತುಕತೆ ನಡೆಸುವುದು ಅತ್ಯಂತ ಸಂತೋಷದ ವಿಷಯವಾಗಿದ್ದು, ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ಕಾರ್ಯಕ್ರಮದೊಳಗಾಗಿ ತಲುಪಬೇಕಾಗಿದೆ ಎಂದರು.

ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಸಹ ನಾವೆಲ್ಲ ಒಂದೆ ಎಂಬ ಭಾವನೆ ಇರಬೇಕಾಗಿದೆ. ಕಾಲೇಜಿನ ಅಭಿವೃದ್ಧಿಗಾಗಿ ನಾನು 10 ಲಕ್ಷ ರೂಗಳನ್ನು ಈಗಾಗಲೇ ನೀಡಿದ್ದೇನೆ. ಮುಂದೆಯು ಸಹ ಸಾಮಾನ್ಯ ವಿದ್ಯಾರ್ಥಿ ಎಂದು ಭಾವಿಸಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಕಾಲೇಜಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಸೇಠ್ ಪ್ರಕಾಶ್, ಪ್ರಾಧ್ಯಾಪಕ ಫಾಲಾಕ್ಷಯ್ಯ, ಹಳೆ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ವೆಂಕಟೇಶಪ್ಪ, ಖಜಾಂಚಿ ಮಲ್ಲೇಶಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಓ.ನಾಗರಾಜು, ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.

ಭಾವಗೀತೆ ಲೋಕದಲ್ಲಿ ರಂಜನಿ ಪ್ರಭು ಛಾಪು: ಎಚ್ಚೆಸ್ವಿ

ಬೆಂಗಳೂರು- ಕವಿತೆ ಕೈಹಿಡಿದು ನಡೆಸಿದರೆ ಭಾವಗೀತೆ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಖ್ಯಾತ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಉಪಾಸನಾ ಟ್ರಸ್ಟ್, ಬಹುರೂಪಿ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ‘ರಂಜನಿ ಪ್ರಭು-60’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಬಹುರೂಪಿಯ ಪ್ರಕಟಣೆ ‘ವೈಶಾಖದ ಹನಿಗಳು’ ಹಾಗೂ ಉಪಾಸನಾ ಟ್ರಸ್ಟ್ ರೂಪಿಸಿದ ದ್ವನಿ ಸಾಂದ್ರಿಕೆ ‘ಬಣ್ಣದೋಕುಳಿ’ಯನ್ನು ಬಿಡುಗಡೆ ಮಾಡಿದರು.

ರಂಜನಿ ಪ್ರಭು ಅವರು ಮೊದಲು ಭಾವ ಗೀತೆಗಳನ್ನು ಬರೆಯಲು ಆರಂಭಿಸಿದರು. ಉಪಾಸನಾ ಮೋಹನ್ ಹಾಗೂ ರಂಜನಿ ಪ್ರಭು ಅವರ ಸಾಂಗತ್ಯದಲ್ಲಿ ಮೂಡಿಬಂದ ಗೀತೆಗಳು ಭಾವಗೀತೆ ಲೋಕಕ್ಕೆ ಹೊಸತನವನ್ನು ತುಂಬಿತು. ರಂಜನಿ ಈಗ ಗಂಭೀರ ಕವಿತೆಗಳತ್ತ ತುಡಿಯುತ್ತಿದ್ದಾರೆ. ತಡವಾಗಿ ಬರವಣಿಗೆ ಆರಂಭಿಸಿದರೂ ಸಶಕ್ತ ಕವಿತೆಗಳನ್ನು ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಖ್ಯಾತ ಕವಿ ಬಿ ಆರ್ ಲಕ್ಷ್ಮಣ ರಾವ್ ಅವರು ಮಾತನಾಡಿ ಭಾವಗೀತೆ ಲೋಕದಲ್ಲಿ ರಂಜನಿ ಪ್ರಭು ಅವರ ‘ಜೋಗಿ ಕಾಡತಾನ’ ತನ್ನದೇ ಆದ ಛಾಪನ್ನು ಒತ್ತಿದೆ. ಉಪಾಸನಾ ಮೋಹನ್ ಬಳಗ ರಂಜನಿ ಪ್ರಭು ಅವರ ಕವಿತೆಗಳನ್ನು ಮಾಧುರ್ಯ ಲೋಕದೊಡನೆ ಬೆಸೆದಿದ್ದಾರೆ. ಈಗ ವೈಶಾಖದ ಹನಿಗಳು ಕೃತಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಎಂದರು.

ಕವಯತ್ರಿ ಎಂ ಆರ್ ಕಮಲಾ ಕೃತಿ ಕುರಿತು ಮಾತನಾಡಿ ರಂಜನಿ ಪ್ರಭು ಅವರದ್ದು ಬತ್ತದ ಉತ್ಸಾಹ. ಅವರ ಪ್ರೀತಿಯ ತೊರೆ ಬತ್ತದಂತಹದ್ದು. ವೈಶಾಖದ ಹನಿಗಳು ಕೃತಿಯಲ್ಲಿನ ಅವರ ಪ್ರಯೋಗಗಳು ಗಮನ ಸೆಳೆಯುವಂತಿದೆ ಎಂದರು.

ಖ್ಯಾತ ಸಂಗೀತ ನಿರ್ದೇಶಕರಾದ ಡಾ ಎಚ್ ಆರ್ ಲೀಲಾವತಿ ಅವರು ಮಾತನಾಡಿ ಕವಿತೆ ಎನ್ನುವುದು ಸ್ವರ ಪ್ರಧಾನವಾದದ್ದು. ಅದು ತನ್ನೊಳಗೆ ಒಂದು ರಾಗವನ್ನು ಇಟ್ಟುಕೊಂಡಿರುತ್ತದೆ. ನಾನು ಸಂಗೀತ ನಿರ್ದೇಶಕಳಾಗಿ ಇಂತಹ ಕವಿತೆಯೊಳಗಿನ ಆತ್ಮವನ್ನು ಹುಡುಕುತ್ತಿದ್ದೆ ಎಂದರು.

ಕವಯತ್ರಿ ರಂಜನಿ ಪ್ರಭು ತಮ್ಮ ಕಾವ್ಯದ ಪ್ರೀತಿಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ಡಾ ಬಿ ವಿ ರಾಜಾರಾಂ , ಶ್ರೀನಿವಾಸ ಪ್ರಭು, ಸಂಗೀತ ನಿರ್ದೇಶಕ ಉಪಾಸನಾ ಮೋಹನ್, ಬಹುರೂಪಿಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು.

ರಂಜನಿ ಪ್ರಭು ಅವರ ಕೃತಿ ಹಾಗೂ ಧ್ವನಿ ಸಾಂದ್ರಿಕೆ ಬಿಡುಗಡೆ

ಕೃತಿ: ವೈಶಾಖದ ಹನಿಗಳು
ರಂಜನಿ ಪ್ರಭು
ಪ್ರಕಾಶನ: ಬಹುರೂಪಿ
ಬೆಲೆ: ರೂ 130


ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಸಂಸ ಬಯಲು ರಂಗಮಂದಿರದಲ್ಲಿ ರಂಜನಿ ಪ್ರಭು ಅವರ ವೈಶಾಖದ ಹನಿಗಳು ಕೃತಿ ಹಾಗೂ ಬಣ್ಣದೋಕುಳಿ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ ಮಾಡಿದರು. (ಎಡದಿಂದ ಬಲಕ್ಕೆ) ಬಹುರೂಪಿಯ ಜಿ ಎನ್ ಮೋಹನ್, ಕವಯತ್ರಿ ಎಂ ಆರ್ ಕಮಲ

ಅಂಬೇಡ್ಕರ್ ಗೆ RSS ನೆರವು: ಸುರೇಶಗೌಡ

0

ತುಮಕೂರು: ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಲೋಕಸಭೆ ಬಾರದಂತೆ ತಡೆಯಲು ಕಾಂಗ್ರೆಸ್ ಯತ್ನಿಸಿತು. ಇದೇ ಕಾರಣದಿಂದಾಗಿಯೇ ಬಾಂಬೆ ಕ್ಷೇತ್ರದ ಚುನಾವಣೆಯಲ್ಲಿ ಅವರನ್ನು ಇನ್ನಿಲ್ಲದಂತೆ ಸೋಲಿಸಿತು ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ಹೇಳಿದರು.

ತಾಲ್ಲೂಕಿನ ಹೊನಸಿಗೆರೆ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸುರೇಶಗೌಡರು

ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಅಂಬೇಡ್ಕರ್ ಅವರಿಗೆ ಆರ್ ಎಸ್ ಎಸ್ ( ಆಗಿನ ಜನಸಂಘ) ಬೆಂಬಲ ನೀಡಿ ರಾಜ್ಯಸಭಾ ಸದಸ್ಯರಾಗಿ ಮಾಡಲಾಯಿತು. ಇದನ್ನು ಪರಿಶಿಷ್ಟ ವರ್ಗದವರು ಮರೆಯಬಾರದು ಎಂದರು.

ಅತಿ ಬಡ ವಿದ್ಯಾರ್ಥಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಕನಸಿನೊಂದಿಗೆ ಸರ್ಕಾರಿ ಶಾಲೆಗಳನ್ನು ನಾನು ಕಟ್ಟಿದೆ. ಶಿಕ್ಷಣ ಸಿಕ್ಕಾಗ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂದರು.

ಹೂಮಳೆ ಸುರಿಸಿದ ಜನರು

ಕಾಲೋನಿಗಳ ಸ್ವಚ್ಛತೆಗೆ ನನ್ನ ಅವಧಿಯಲ್ಲಿ ಆದ್ಯತೆ ನೀಡಿದೆ. ಸಿ.ಸಿ. ರಸ್ತೆ, ಚರಂಡಿಗಳನ್ನು ಮಾಡಿಸಿದ್ದೇನೆ. ಆದರೆ ಈಗಿನ ಶಾಸಕರು ಒಂದು ಹಿಡಿ ಮಣ್ಣನ್ನು ಸಹ ಹಾಕಿಸಿಲ್ಲ. ಪರಿಶಿಷ್ಟ ರ ಕಾಲೋನಿಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

ಪ್ರತಿ ಕುಟುಂಬದ ಒಬ್ಬೊಬ್ಬರಿಗೆ ಕೈಗಾರಿಕೆಗಳಲ್ಲಿ ಕೆಲಸ ಕೊಡಿಸಬೇಕೆಂಬುದು ನನ್ನ ಕನಸಾಗಿದೆ. ಸಮುದಾಯ ಹಿಂದುಳಿದಿದೆ ಎಂದರು.

ಅಂಬೇಡ್ಕರ್ ಇಲ್ಲದಿದ್ದರೆ ಶ್ರಮಿಕರಿಗೆ ನ್ಯಾಯವೇ ಸಿಗುತ್ತಿರಲಿಲ್ಲ. ಅಂಬೇಡ್ಕರ್ ಕೊಡುಗೆ ಅಪಾರ. ಕಾಂಗ್ರೆಸ್ ಗೆ ಅಂಬೇಡ್ಕರ್ ಕಂಡರೆ ಆಗುತ್ತಿರಲಿಲ್ಲ. ಹೀಗಾಗಿಯೇ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರಲಿಲ್ಲ ಎಂದು ಕಿಡಿಕಾರಿದರು.

ಶಾಸಕ ಗೌರಿಶಂಕರ್ ಶಾಸಕ ಸ್ಥಾನ ಅನರ್ಹ ಸಾಧ್ಯತೆ-ಸೂರ್ಯ ಮುರುಂದರಾಜ್

ತುಮಕೂರು: ಗೌರಿಶಂಕರ್ ಅವರು ಚುನಾವಣಾ ಅಕ್ರಮ ಸಾಬೀತಾಗಿದ್ದು, ಕೆಲವೇ ದಿನಗಳಲ್ಲಿ ಶಾಸಕ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸೂರ್ಯ ಮುರುಂದರಾಜ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ವಿಮೆ ಬಾಂಡ್ ಹಂಚಿದ್ದಾರೆ ಎಂಬುದು ಸಾಬೀತಾಗಿದೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಶೀಘ್ರ ಅಂತಿಮ ತೀರ್ಪ ಬರಲಿದೆ ಎಂದರು.

ಗ್ರಾಮಾಂತರ ಶಾಸಕರ ಬೆಂಬಲಿಗರಾಗಿರುವ ಪಾಲನೇತ್ರಯ್ಯ ಚುನಾವಣಾ ಅಕ್ರಮ ಒಪ್ಪಿ, ತುಮಕೂರು ನ್ಯಾಯಾಲಯದಲ್ಲಿ ಒಂದು ಸಾವಿರ ದಂಡ ಕಟ್ಟಿದ್ದಾರೆ, ಗೌರಿಶಂಕರ್ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದಿದ್ದಾರೆ, ಪಾಲನೇತ್ರಯ್ಯ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ. ನ್ಯಾಯಾಲಯದ ರಜೆ ಮುಗಿದ ನಂತರ ತೀರ್ಪು ಹೊರಬೀಳಲಿದ್ದು, ಗೌರಿಶಂಕರ್ ಶಾಸಕ ಸ್ಥಾನದಿಂದ ವಜಾಗೊಳ್ಳುವುದು ಬಹುತೇಕ ಖಚಿತ ಎಂದು ಹೇಳಿದರು.

ವೀಚಿ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಎಂ.ಎಚ್.ನಾಗರಾಜ್

ತುಮಕೂರು: ವೀಚಿ ಸಾಹಿತ್ಯ ಪ್ರಶಸ್ತಿಗೆ ಲೇಖಕರು, ಸಾಹಿತಿಗಳು, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.

2021ರಲ್ಲಿ ಪ್ರಕಟವಾದ ಎಲ್ಲ ಪ್ರಕಾರದ ಕೃತಿಗಳನ್ನು ಪ್ರಶಸ್ತಿ ಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ವೀಚಿ ಯುವ ಸಾಹಿತ್ಯ ಪ್ರಶಸ್ತಿಯನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿ ಯು 5 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಕೃತಿಯ ಎರಡು ಪ್ರತಿಗಳನ್ನು ಜನವರಿ ತಿಂಗಳ ಅಂತ್ಯದೊಳಗೆ ವೀಚಿ ಸಾಹಿತ್ಯ ಪ್ರತಿಷ್ಠಾನ, ಪ್ರಜಾ ಪ್ರಗತಿ ಕಟ್ಟಡ, ಬಿ.ಎಚ್. ರಸ್ತೆ, ತುಮಕೂರು ಇಲ್ಲಿಗೆ ಸಲ್ಲಿಸುವಂತೆ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜ್ ತಿಳಿಸಿದ್ದಾರೆ.

ಕೋವಿಡ್ ಗೆ ಹೆದರುವ ಅಗತ್ಯವಿಲ್ಲ

0

ಚೀನಾದ ನಿದ್ದೆಗೆಡಿಸಿರುವ ಕೋವಿಡ್ ನ ಹೊಸ ತಳಿಗೆ ಹೆದರುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಚಿವರು, ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ಅವರು ಅನಗತ್ಯ ಭಯ ಬೇಡ ಎಂದಿದ್ದಾರೆ.

ಮಾಸ್ಕ್ ಧರಿಸುವುದು ಕಡ್ಡಾಯ ಅಲ್ಲ ಎಂದಿರುವ ಅವರು, ಆದರೂ ಕೋವಿಡ್ ನಿಯಮ ಪಾಲಿಸಿದರೆ ಒಳಿತು, ಜನ ನಿಬಿಡ ಸ್ಥಳಗಳಲ್ಲಿ ಮಾಸ್ಕ್ ಧರಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

ಕೋವಿಡ್ ಹೊಸ ಪ್ರಬೇಧ ದೇಶದಲ್ಲಿ ನಾಲ್ಕು ಮಂದಿಯಲ್ಲಿ ಕಾಣಿಸಿಕೊಂಡಿದ್ದು, ನಾಲ್ವರು ಸಹ ಗುಣಮುಖರಾಗಿದ್ದಾರೆ.

ನಕಲಿ ಸ್ತ್ರೀ ಸಂಘಗಳ ವಿರುದ್ಧ ಹೋರಾಟ: ಅಂಬಿಕಾ ಹುಲಿನಾಯ್ಕರ್

ತುಮಕೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅಕ್ರಮವಾಗಿ ನಕಲಿ ಸ್ತ್ರೀ ಸಂಘಗಳನ್ನು ರಚಿಸಿ‌ ಚುನಾವಣೆಯಲ್ಲಿ ಲಾಭ ಪಡೆಯಲು ಮುಂದಾಗಿದ್ದು, ಇವುಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸರ್ಕಾರವೇ ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಬೇಕು. ಇಂಥ ಸಂಘಗಳಿಗೆ ಸರ್ಕಾರದ ಮಾನ್ಯತೆ ಸಿಗಲಿದೆ. ಆದರೆ ಶಾಸಕರು ಚುನಾವಣೆ ದೃಷ್ಠಿಯಿಂದ ಮಹಿಳೆಯರ ಕಣ್ಣಿಗೆ ಮಣ್ಣೆರಚಲು ಯತ್ನಿಸುತ್ತಿದ್ದಾರೆ. ಈ ಸಂಘಗಳಿಗೆ ಸರ್ಕಾರದಿಂದ ಸಾಲ ಕೊಡಿಸುತ್ತೇನೆ. ಸಂಘ ರಚಿಸಿಕೊಳ್ಳಿ ಎಂದು ದುಂಬಾಲು ಬೀಳುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಎಚ್ಚರವಹಿಸಬೇಕು. ಸರ್ಕಾರದ ಹೆಸರಿನಲ್ಲಿ ನಕಲಿ ಸಂಘಗಳ ರಚಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಅಂಬಿಕಾ ಹುಲಿನಾಯ್ಕರ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಶಾಸಕರು ಕಳೆದ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಕಲಿ ಬಾಂಡ್ ವಿತರಿಸಿದ್ದರು. ನಕಲಿ ಕೊರೊನಾ ವ್ಯಾಕ್ಸೀನ್ ನೀಡಿಸಿದ್ದಾರೆ ಎಂಬ ಆರೋಪವೂ ಇದೆ. ಇವುಗಳ ತನಿಖೆಯೂ ನಡೆಯುತ್ತಿದೆ. ಅಮಾಯಕ ಮಹಿಳೆಯರು, ಎಳೆ ಮಕ್ಕಳಿಗೆ ಮೋಸ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಅಮಾಯಕ ಮಹಿಳೆಯರೇ ಈ ಶಾಸಕರ ಗುರಿಯಾಗಿದ್ದಾರೆ. ಯಾರೇ ಮಹಿಳಾ ಸಂಘಟನೆಗಳನ್ನು ರಚಿಸಿಕೊಳ್ಳಬೇಕಾದರೆ ಜಿಲ್ಲಾ ಪಂಚಾಯತಿ ಸಿಇಒ ಅವರನ್ನು ಕಾಣಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಮಾಲೋಚಿಸಬೇಕು. ನಕಲಿ ಸಂಘ ರಚಿಸುವಂತೆ ಶಾಸಕರು ಅಥವಾ ಅವರ ಕಡೆಯವರು ಒತ್ತಡ ಹಾಕಿದರೆ ಕೂಡಲೇ ಜಿ.ಪಂ. ಸಿಇಒ ಅಥವಾ ಪೊಲೀಸರಿಗೆ ದೂರು ನೀಡಬೇಕು ಎಂದು ಕರೆ ನೀಡಿದರು.


ಬಿಜೆಪಿ ಮಹಿಳಾ ಸದಸ್ಯೆಯರು ಈ ಬಗ್ಗೆ ಗಮನ ಕೊಡಬೇಕು. ಮಹಿಳಾ ಸಂಘಗಳ ಹೆಸರಿನಲ್ಲಿ ಹಲವು ಕುಟುಂಬಗಳು ಒಡೆದಿವೆ. ಕೆಲವರು ಊರು ತೊರೆದಿದ್ದಾರೆ ಎಂದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶಗೌಡರು, ಮಹಿಳೆಯರಿಗೆ ಮೋಸ ಮಾಡಲು ಬಿಡಬಾರದು ಎಂದು ಕರೆ ನೀಡಿದರು.

ಕಳೆದ ಸಲ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಮಕ್ಕಳಿಗೆ ನಕಲಿ ಬಾಂಡ್ ನೀಡಿ ಚುನಾವಣಾ ಅಕ್ರಮ ನಡೆಸಲಾಯಿತು. ಈ ಸಲವೂ ಇಂಥ ನಕಲಿ ಆಟವನ್ನು ಶಾಸಕರು ಈಗಾಗಲೇ ಆರಂಭಿಸಿದ್ದಾರೆ. ಇದನ್ನು ತಾಯಂದಿರು ನನ್ನ ಗಮನಕ್ಕೆ ತಂದಿದ್ದಾರೆ ಎಂದರು.

ಸಭೆಯಲ್ಲಿ ಮಹಿಳಾ ಮೋರ್ಚಾದ ಗ್ರಾಮಾಂತರದ ಅಧ್ಯಕ್ಷೆ ರೇಣುಕಮ್ಮ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾದ ನಾಗರತ್ನಮ್ಮ, ಊರು ಕೆರೆ ಜಿ.ಪಂ. ಮಾಜಿ ಸದಸ್ಯೆ ಶಿವಮ್ಮ ನಾಗರಾಜು, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ರತ್ನಮ್ಮ, ಕವಿತಾ ರಮೇಶ್, ಮಮತಾ ಕಾಂತರಾಜು, ಎಪಿಎಂಸಿ ಸದಸ್ಯೆಯರಾದ ಪುಟ್ಟಲಕ್ಷ್ಮಮ್ಮ, ರತ್ನಮ್ಮ, ಟೂಡಾ ಸದಸ್ಯೆ ವೀಣಾ ಶಿವಕುಮಾರ್, ವಿವಿಧ ಗ್ರಾ.ಪಂ. ಅಧ್ಯಕ್ಷೆಯರಾದ ಸಿದ್ದಗಂಗಮ್ಮ,, ಅನುಸೂಯಮ್ಮ, ರಾಜೇಶ್ವರಿ, ಮುದ್ದಮ್ಮ, ವಿಜಯಲಕ್ಷ್ಮಿ, ಕವಿತಾ, ಕಲ್ಪನಾ, ಧನಲಕ್ಷ್ಮಿ, ಶಶಿಕಲಾ, ಮಧು, ಯಮುನಾ, ಆರ್.ಮಂಜುಳಾ, ಕಲಾವತಿ, ಅನಿತಾ, ಭಾಗ್ಯಮ್ಮ, ಇತರರು ಇದ್ದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ಶಂಕರಣ್ಣ, ಮುಖಂಡರಾದ ಸಿದ್ದೇಗೌಡ ಇತರರು ಇದ್ದರು.

ಅಂಬೇಡ್ಕರ್ ಕನಸು ನನಸು ಮಾಡುವುದೇ ನನ್ನ ಗುರಿ: ಸುರೇಶ್ ಗೌಡ

0

ತುಮಕೂರು: ಡಾ.ಬಿ.ಅರ್.ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವುದೇ ನನ್ನ ಗುರಿ ಎಂದು ಮಾಜಿ ಶಾಸಕ ಬಿ. ಸುರೇಶಗೌಡರು ಹೇಳಿದರು.

ಹೊಳಕಲ್ ಗ್ರಾಮದಲ್ಲಿ ನಡೆದ ಎಸ್ ಸಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು,ಪರಿಶಿಷ್ಟ ಜಾತಿ ಜನರಿಗೆ ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಕಾಲೊನಿಗಳಿಗೆ ಸಿ ಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ ಎಂದರು.

ಇದೇ ಸಂದರ್ಭ ಅವರು ಮನೆಗಳಿಗೆ ಭೇಟಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಶಿಕ್ಷಣ ಪಡೆಯುವ ಮೂಲಕವೇ ಸಮಾಜದ ಉದ್ಧಾರ ಸಾಧ್ಯ ಎಂದು ಅಂಬೇಡ್ಕರ್ ಹೇಳುತ್ತಿದ್ದರು. ಇದೇ ಕಾರಣದಿಂದಲೇ , ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಸರ್ಕಾರಿ ಶಾಲೆಗಳನ್ನು ದೇಶದಲ್ಲಿಯೇ ಮಾದರಿ ಶಾಲೆಗಳಾಗಿ ಕಟ್ಟಿಸಿದೆ. ಹಣ, ಹೆಂಡ ಹಂಚಿ ರಾಜಕಾರಣ ಮಾಡುವುದು ನನ್ನ ದಾರಿ ಅಲ್ಲ ಎಂದರು.

ಸಭೆಯಲ್ಲಿ ಬಿಜೆಪಿ ಎಸ್ ಸಿ ಮೋರ್ಚಾದ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಪಾಪಣ್ಣ, ದಲಿತ ಮುಖಂಡರಾದ ಮಹೇಶ್, ಅಂಜಿನಪ್ಪ, ಗಿರೀಶ್, ಗ್ರಾಮ ಪಂಚಾಯತಿ ಸದಸ್ಯ ರಮೇಶ್, ಹೊಳಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಇತರರು ಇದ್ದರು.

ಕಾಂಗ್ರೆಸ್ ಗೆ ಮತಬೇಡ: ನನ್ನ ಕೈ ಹಿಡಿಯಿರಿ

0

ತುರುವೇಕೆರೆ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ತಾಲ್ಲೂಕಿನ ಮುಸ್ಲಿಂ ಸಮುದಾಯದವರ ಮೇಲೆ ಅವಲಂಬಿತವಾಗಿದ್ದು, ಕಳೆದ ಬಾರಿ ಕಾಂಗ್ರೆಸ್ ಗೆ ಮತ ಹಾಕಿ ನನ್ನ ಅಲ್ಪ ಮತಗಳಿಂದ ಸೋಲುವಂತೆ ಮಾಡಿದ್ದೀರಿ; ಇದೊಂದು ಸಲ ನನ್ನ ಕೈಹಿಡಿಯಿರಿ ಎಂದು ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿಕೊಂಡರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಯುವ ಮೋರ್ಚಾ ನಗರ ಘಟಕದ ಉದ್ಘಾಟನೆ ಹಾಗು ಜೆಡಿಎಸ್ ಪಕ್ಷ ಸಂಘಟನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ ಗೆಲ್ಲುತ್ತದೆಂದು ಭಾವಿಸಿ ವೋಟು ಹಾಕಿದ್ದೀರಿ. ಆದರೆ ಅದು ಬಿಜೆಪಿ ಮಸಾಲ ಜಯರಾಂ ಗೆಲುವಿಗೆ ಕಾರಣವಾಗಿತು. ನಾನು ಕಾಂಗ್ರೆಸ್ ವಿರೋಧಿಯೂ ಅಲ್ಲ.
ನೀವು ವಾಸ್ತವ ಅರ್ಥ ಮಾಡಿಕೊಳ್ಳಿ ಈ ಬಾರಿ ಕಾಂಗ್ರೆಸ್ ಗೆ ಗೆಲುವಿಲ್ಲ. ಅಂತಹ ಕಾಲ ಬಂದಾಗ ನಾನೇ ಹೇಳುತ್ತೇನೆ ಆವಾಗ ಕಾಂಗ್ರೆಸ್ ಗೆ ಮತ ಹಾಕಿರುವಿರಂತೆ ಎಂದು ಸಲಹೆ ನೀಡಿದರು.

ಸದ್ಯಕ್ಕೆ ತಾಲ್ಲೂಕಿನಲ್ಲಿ ಮೂರೂ ಪಕ್ಷಗಳಿಗೆ ಸ್ಪರ್ಧೆಯಿಲ್ಲ. ಇರುವುದೇ ಜೆಡಿಎಸ್-ಬಿಜೆಪಿಗೆ ಮಾತ್ರ.
ದಯಮಾಡಿ ಮುಸ್ಲಿಂ ಯುವಕರು ಜಾಣರಿದ್ದೀರಿ ತಮ್ಮ ಸಮುದಾಯದ ಅಸ್ಥಿತ್ವಕ್ಕಾಗಿ ಸೆಕ್ಯೂಲರ್ ಪಕ್ಷವಾದ ಜೆಡಿಎಸ್ ಗೆ ವೋಟ್ ಹಾಕಬೇಕೆಂಬ ವಾಸ್ತವ ರಾಜಕಾರಣ ಚನ್ನಾಗಿ ಅರಿತಿದ್ದೀರಿ. ತಾವೆಲ್ಲ ತಮ್ಮ ಸಮುದಾಯದ ಜನರಿಗೆ ಜಾಗೃತಿ ಮೂಡಿಸಿ ಜೆಡಿಎಸ್ ಗೆ ಮತ ಹಾಕುವಂತೆ ಸಜ್ಜುಗೊಳಿಸಬೇಕೆಂದು ಕಿವಿ ಮಾತು ಹೇಳಿದರು.


ತಾಲ್ಲೂಕಿನ ಮುಸ್ಲಿಂ ಸಮುದಾಯದ ಯುವಕರ ಮೇಲೆ ದೌರ್ಜನ್ಯ ನಡೆದಾಗ ನಾನು ಅವರ ಪರವಾಗಿ ಪ್ರತಿಭಟನೆ ಮಾಡಿ ಖಂಡಿಸಿದ್ದೇನೆ. ಇದರ ಪರಿಣಾಮವಾಗಿ ನನ್ನ ಮೇಲೆ 8 ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಅದಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ ಹಾಗಾಗಿ ದೇವೇಗೌಡರು, ಎಚ್.ಡಿ.ಕುಮಾರ ಸ್ವಾಮಿಯವರಿಗಿರುಷ್ಟು ಮುಸ್ಲಿಂಮರ ಮೇಲಿನ ಕಾಳಜಿ ಬೇರೆ ಯಾವ ಪಕ್ಷದ ನಾಯಕರಿಗೂ ಇಲ್ಲ ಎಂದರು.

ನನ್ನ ಅವಧಿಯಲ್ಲಿ ದೇವೇಗೌಡ ಬಡಾವಣೆಯಲ್ಲಿ ಸಾಕಷ್ಟು ಮಂದಿಗೆ ಮನೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದೇನೆ.
ಡಿ.27ರಂದು ತಾಲ್ಲೂಕಿಗೆ ಜೆಡಿಸ್ ವರಿಷ್ಠ ಎಚ್.ಡಿ.ಕುಮಾರ ಸ್ವಾಮಿಯವರ ಪಂಚರತ್ನ ರಥಯಾತ್ರೆ ಬರಲಿದ್ದು, ಅಂದು ಮುಸ್ಲಿಂರು, ವಿವಿಧ ಮಹಿಳಾ ಸಂಘಗಳು, ಜೆಡಿಎಸ್, ಕಾರ್ಯಕರ್ತರು, ರೈತರು, ಅಭಿಮಾನಿಗಳು, ಬೆಂಬಲಿಗರು ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನ ಸೇರಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸ್ವಾಮಿ, ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರೇಶ್, ತಾಲ್ಲೂಕು ಯುವ ಮುಖಂಡ ಬಾಣಸಂದ್ರ ರಮೇಶ್, ಮುಖಂಡರುಗಳಾದ ಜಫ್ರಲ್ಲಾಖಾನ್, ಟಿಂಬರ್ ನಯಾಜ್ ಅಹಮದ್, ಅಸ್ಲಾಂ ಪಾಷಾ, ಷಬ್ಬೀರ್, ಸುರೇಶ್, ಮಂಗಿಕುಪ್ಪೆ ಬಸವರಾಜು ಮತ್ತು ಮುಸ್ಲಿಂ ಯುವಕರು ಭಾಗವಹಿಸಿದ್ದರು.