Monday, July 15, 2024
Google search engine
Homeಪುಸ್ತಕ ಬಿಡುಗಡೆಭಾವಗೀತೆ ಲೋಕದಲ್ಲಿ ರಂಜನಿ ಪ್ರಭು ಛಾಪು: ಎಚ್ಚೆಸ್ವಿ

ಭಾವಗೀತೆ ಲೋಕದಲ್ಲಿ ರಂಜನಿ ಪ್ರಭು ಛಾಪು: ಎಚ್ಚೆಸ್ವಿ

ಬೆಂಗಳೂರು- ಕವಿತೆ ಕೈಹಿಡಿದು ನಡೆಸಿದರೆ ಭಾವಗೀತೆ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಖ್ಯಾತ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಉಪಾಸನಾ ಟ್ರಸ್ಟ್, ಬಹುರೂಪಿ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ‘ರಂಜನಿ ಪ್ರಭು-60’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಬಹುರೂಪಿಯ ಪ್ರಕಟಣೆ ‘ವೈಶಾಖದ ಹನಿಗಳು’ ಹಾಗೂ ಉಪಾಸನಾ ಟ್ರಸ್ಟ್ ರೂಪಿಸಿದ ದ್ವನಿ ಸಾಂದ್ರಿಕೆ ‘ಬಣ್ಣದೋಕುಳಿ’ಯನ್ನು ಬಿಡುಗಡೆ ಮಾಡಿದರು.

ರಂಜನಿ ಪ್ರಭು ಅವರು ಮೊದಲು ಭಾವ ಗೀತೆಗಳನ್ನು ಬರೆಯಲು ಆರಂಭಿಸಿದರು. ಉಪಾಸನಾ ಮೋಹನ್ ಹಾಗೂ ರಂಜನಿ ಪ್ರಭು ಅವರ ಸಾಂಗತ್ಯದಲ್ಲಿ ಮೂಡಿಬಂದ ಗೀತೆಗಳು ಭಾವಗೀತೆ ಲೋಕಕ್ಕೆ ಹೊಸತನವನ್ನು ತುಂಬಿತು. ರಂಜನಿ ಈಗ ಗಂಭೀರ ಕವಿತೆಗಳತ್ತ ತುಡಿಯುತ್ತಿದ್ದಾರೆ. ತಡವಾಗಿ ಬರವಣಿಗೆ ಆರಂಭಿಸಿದರೂ ಸಶಕ್ತ ಕವಿತೆಗಳನ್ನು ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಖ್ಯಾತ ಕವಿ ಬಿ ಆರ್ ಲಕ್ಷ್ಮಣ ರಾವ್ ಅವರು ಮಾತನಾಡಿ ಭಾವಗೀತೆ ಲೋಕದಲ್ಲಿ ರಂಜನಿ ಪ್ರಭು ಅವರ ‘ಜೋಗಿ ಕಾಡತಾನ’ ತನ್ನದೇ ಆದ ಛಾಪನ್ನು ಒತ್ತಿದೆ. ಉಪಾಸನಾ ಮೋಹನ್ ಬಳಗ ರಂಜನಿ ಪ್ರಭು ಅವರ ಕವಿತೆಗಳನ್ನು ಮಾಧುರ್ಯ ಲೋಕದೊಡನೆ ಬೆಸೆದಿದ್ದಾರೆ. ಈಗ ವೈಶಾಖದ ಹನಿಗಳು ಕೃತಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಎಂದರು.

ಕವಯತ್ರಿ ಎಂ ಆರ್ ಕಮಲಾ ಕೃತಿ ಕುರಿತು ಮಾತನಾಡಿ ರಂಜನಿ ಪ್ರಭು ಅವರದ್ದು ಬತ್ತದ ಉತ್ಸಾಹ. ಅವರ ಪ್ರೀತಿಯ ತೊರೆ ಬತ್ತದಂತಹದ್ದು. ವೈಶಾಖದ ಹನಿಗಳು ಕೃತಿಯಲ್ಲಿನ ಅವರ ಪ್ರಯೋಗಗಳು ಗಮನ ಸೆಳೆಯುವಂತಿದೆ ಎಂದರು.

ಖ್ಯಾತ ಸಂಗೀತ ನಿರ್ದೇಶಕರಾದ ಡಾ ಎಚ್ ಆರ್ ಲೀಲಾವತಿ ಅವರು ಮಾತನಾಡಿ ಕವಿತೆ ಎನ್ನುವುದು ಸ್ವರ ಪ್ರಧಾನವಾದದ್ದು. ಅದು ತನ್ನೊಳಗೆ ಒಂದು ರಾಗವನ್ನು ಇಟ್ಟುಕೊಂಡಿರುತ್ತದೆ. ನಾನು ಸಂಗೀತ ನಿರ್ದೇಶಕಳಾಗಿ ಇಂತಹ ಕವಿತೆಯೊಳಗಿನ ಆತ್ಮವನ್ನು ಹುಡುಕುತ್ತಿದ್ದೆ ಎಂದರು.

ಕವಯತ್ರಿ ರಂಜನಿ ಪ್ರಭು ತಮ್ಮ ಕಾವ್ಯದ ಪ್ರೀತಿಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ಡಾ ಬಿ ವಿ ರಾಜಾರಾಂ , ಶ್ರೀನಿವಾಸ ಪ್ರಭು, ಸಂಗೀತ ನಿರ್ದೇಶಕ ಉಪಾಸನಾ ಮೋಹನ್, ಬಹುರೂಪಿಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು.

ರಂಜನಿ ಪ್ರಭು ಅವರ ಕೃತಿ ಹಾಗೂ ಧ್ವನಿ ಸಾಂದ್ರಿಕೆ ಬಿಡುಗಡೆ

ಕೃತಿ: ವೈಶಾಖದ ಹನಿಗಳು
ರಂಜನಿ ಪ್ರಭು
ಪ್ರಕಾಶನ: ಬಹುರೂಪಿ
ಬೆಲೆ: ರೂ 130


ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಸಂಸ ಬಯಲು ರಂಗಮಂದಿರದಲ್ಲಿ ರಂಜನಿ ಪ್ರಭು ಅವರ ವೈಶಾಖದ ಹನಿಗಳು ಕೃತಿ ಹಾಗೂ ಬಣ್ಣದೋಕುಳಿ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ ಮಾಡಿದರು. (ಎಡದಿಂದ ಬಲಕ್ಕೆ) ಬಹುರೂಪಿಯ ಜಿ ಎನ್ ಮೋಹನ್, ಕವಯತ್ರಿ ಎಂ ಆರ್ ಕಮಲ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?