Thursday, July 25, 2024
Google search engine
Homeತುಮಕೂರು ಲೈವ್ಮಸಾಲೆ ವಿರುದ್ಧ ಕೆಂಡ ಕಾರಿದ ಕುಮಾರಸ್ವಾಮಿ

ಮಸಾಲೆ ವಿರುದ್ಧ ಕೆಂಡ ಕಾರಿದ ಕುಮಾರಸ್ವಾಮಿ

ತುರುವೇಕೆರೆ; ಮಸಾಲೆ ಮಾರಿಕೊಂಡು, ವ್ಯಾಪಾರ ಮಾಡಿ ದುಡ್ಡು ಮಾಡುವ ತುರುವೇಕೆರೆ ಬಿಜೆಪಿ ಶಾಸಕರಿಗೆ ಮತ ಹಾಕುತ್ತೀರಿ, ರೈತಪರವಾಗಿ ಕೆಲಸ ಮಾಡುವ ಎಂ.ಟಿ.ಕೃಷ್ಣಪ್ಪರಿಗೆ ಮತ ಹಾಕುವುದಿಲ್ಲವೇ ಎಂದು ಮಾಜಿ ಮುಖ್ಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಮತದಾರರನ್ನು ಕೇಳಿದರು.

ತುರುವೇಕೆರೆ ಪಟ್ಟಣದ ಉಡಿಸಲಮ್ಮ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ನ ಪಂಚರತ್ನ ರಥ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.


30 ದಿನಗಳು ಪೂರೈಸಿರುವ ಪಂಚರತ್ನ ರಥ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದ್ದು, ಮುಂದಿನ ಮಾರ್ಚ್ ಅಂತ್ಯದವರೆಗೂ ಮುಂದುವರೆಯಲಿದೆ ಎಂದರು.


ನನ್ನ ಬಳಿ ನಿತ್ಯವೂ ಸಾವಿರಾರು ಜನರು, ಬಡತಾಯಂದಿರು, ವಿಧವೆಯರು ತಮ್ಮ ಕಷ್ಟಗಳನ್ನು ಹೊತ್ತು ಮನೆ ಬಾಗಿಲಿಗೆ ಬರುತ್ತಾರೆ ಅವರ ಜಾತಿ, ಧರ್ಮ ಕೇಳದೇ ಅವರ ಸಮಸ್ಯೆಗಳಿಗೆ ತಾತ್ಕಾಲಿಕ ನೆರವು ನೀಡುತ್ತಾ ಬಂದಿದೇನೆ. ಇಂತಹ ಅನುಭವಗಳೇ ಜೆಡಿಎಸ್ನ ಪಂಚರತ್ನ ರಥ ಯಾತ್ರೆಗೆ ಸ್ಪೂರ್ತಿಯಾಗಿದೆ ಎಂದರು.
ಕೊಬ್ಬರಿ ಬೆಲ 18 ಸಾವಿರದಿಂದ 11 ಸಾವಿರಕ್ಕೆ ಕುಸಿತೆ ಕಂಡಿದ್ದು ಈ ಬಗ್ಗೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರು ಕ್ವಿಂಟಾಲ್ಗೆ 750 ರೂಪಾಯಿಗಳ ಬೆಂಬ ಬೆಲೆ ನೀಡುವ ಬಗ್ಗೆ ಪ್ರಾಸ್ತಾಪಿಸಿದರು.

ಸದಾಶಿವ ಆಯೋಗ ಮತ್ತು ಒಳಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ಹಾಗು ಸರ್ಕಾರಿ ನೌಕರರ ಹಳೆಪಿಂಚಣ ನೀಡುವ ವಿಷಯದಲ್ಲಿ ಕಾಂಗ್ರೆಸ್ ಬಿಜೆಪಿ ರಾಜಕೀಯ ಮಾಡುತ್ತಿದೆಯಷ್ಟೇ ಎಂದು ಹೇಳಿದರು.

ನಾನು ಮನೆಯಲ್ಲಿದ್ದರೂ 40 ರಿಂದ 50 ಸೀಟು ಗೆಲ್ಲಿಸುವ ಕಾರ್ಯಕರ್ತರಿದ್ದಾರೆ ಆದರೆ ರೈತರ ಸಮಸ್ಯೆಗಳಿಗೆ ಶ್ವಾಶ್ವತ ಯೋಜನೆ ಪರಿಹಾರಗಳನ್ನು ರೂಪಿಸಲು 120 ಸ್ಥಾನಗಳನ್ನು ರಾಜ್ಯ ಜನತೆ ಕರುಣಿಸಬೇಕಿದೆ ಎಂದರು.


ರಾಜ್ಯದ ಜನತೆ ಐದು ವರ್ಷಗಳ ಪೂರ್ಣ ಪ್ರಮಾಣದ ಅಧಿಕಾರವನ್ನು ಜೆಡಿಎಸ್ಗೆ ನೀಡಿದರೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಯು.ಕೆಜಿಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ತೆರೆದು ಉಚಿತ ಶಿಕ್ಷಣ ಮತ್ತು ಆಸ್ಪತ್ರೆಗಳ ನಿರ್ಮಾಣ ಮಾಡಿ ಉಚಿತ ಆರೋಗ್ಯ ನೀಡಲಾಗುವುದು. ವಸತಿ ರಹಿತರಿಗೆ ಮನೆ ನೀಡುವುದು. ಬಿಪಿಎಸ್ ಕಾರ್ಡ್ ಇರುವವರಿಗೆ ವಿಮೆ ಕಾರ್ಡ್ ನೀಡಿ ಗಂಭೀರ ಕಾಯಿಲೆಗೆ ಸರ್ಕಾರವೇ ವೆಚ್ಚ ಭರಿಸುವುದು. ಪ್ರತಿ ಮುಂಗಾರು ಆರಂಭದಲ್ಲಿ ಸಣ್ಣ ಮತ್ತು ದೊಡ್ಡ ರೈತರಿಗೆ ಬೀಜ, ಗೊಬ್ಬರಕ್ಕಾಗಿ ಎಕರೆಗೆ 10 ಸಾವಿರ ನೀಡುವುದು, ತರಕಾರಿ, ರಾಗಿ ಇನ್ನಿತರ ಬೆಳೆ ಬೆಳೆಯುವ ರೈತರಿಗೆ ಗೋದಾಮು ನಿರ್ಮಿಸಿ ಉತ್ತಮ ಬೆಲೆ ಸಿಗುವಂತೆ ಮಾಡುವುದು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಗಳಿಗೆ ಸಾಲಮನ್ನಾ. 60 ವರ್ಷ ಮೇಲ್ಪಟ್ಟವರಿಗೆ 5 ಸಾವಿರ, ವಿಧವೆ, ಅಂಗವಿಕಲರಿಗೆ 2500 ಮಶಾಸನ ಇಂತಹ ಜನೋಪಯೋಗಿ ಕೆಲಸ ಮಾಡಲು 1.25 ಲಕ್ಷ ಕೋಟಿ ರೂಪಾಯಿಗಳ ಖರ್ಚಾಗಲಿದೆ ಎಂದರು.

ಕ್ಷೇತ್ರದ ಜನರ, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಎಂ.ಟಿ.ಕೃಷ್ಣಪ್ಪನಿಗೆ ಮತ ಹಾಕದೆ ನೀವು ಮಸಾಲೆ ಮಾರಿಕೊಂಡು, ವ್ಯಾಪಾರ ಮಾಡಿ ದುಡ್ಡು ಮಾಡುವ ತುರುವೇಕೆರೆ ಬಿಜೆಪಿ ಶಾಸಕರಿಗೆ ಮತ ಹಾಕುತ್ತೀರಿ ರೈತಪರವಾಗಿ ಕೆಲಸ ಮಾಡುವ ಎಂ.ಟಿ.ಕೃಷ್ಣಪ್ಪರಿಗೆ ಮತ ಹಾಕಿ. ಅದೇ ರೀತಿ ಗುಬ್ಬಿ ತಾಲ್ಲೂಕಿನ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರಿಗೂ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಎಚ್.ಡಿ.ಕುಮಾರ ಸ್ವಾಮಿಯವರು ರಾಜ್ಯದ ರೈತರು ಸೂಕ್ತ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದಾಗ 25 ಸಾವಿರ ಕೋಟಿ ರೂಪಾಯಿಗಳ ಸಾಲಮನ್ನಾ ಮಾಡಿದರು ಅದರಲ್ಲಿ ತುರುವೇಕೆರೆ ಕ್ಷೇತ್ರದ 14.559 ರೈತರು ಸೇರಿದ್ದಾರೆ. ಜೆಡಿಎಸ್ ರೈತ ಸೇಹಿ ಪಕ್ಷವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಜನರ ರಕ್ತವನ್ನು ನಿರಂತರವಾಗಿ ಹೀರುತ್ತಿವೆ ಎಂದು ಕುಟುಕಿದರು.


ಅಭೂತ ಪೂರ್ವ ಸ್ವಾಗತ ಕೋರಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು
ತಾಲ್ಲೂಕಿನ ಟಿ.ಬಿ.ಕ್ರಾಸ್ ಮೂಲಕ ಆಗಮಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿಯನ್ನು ಸಾವಿರಾರು ಕಾರ್ಯಕರ್ಯತರು ಸ್ವಾಗತಿಸಿ ಜೆಸಿಬಿ ಮೂಲಕ ಅಡಿಕೆ ಹೊಂಬಾಳೆ, ಸೇಬು ಹಾರ ಹಾಕಿ ಹೂಮಳೆ ಗೈದರು. ನಂತರ ಪಟ್ಟಣದ ಚಂದ್ರೇಶ್ ಕಚೇರಿ ಮುಂದೆ ರಾಗಿ ತೆನೆ ಹಾರ, ನಂತರ ಬಾಣಸಂದ್ರ ವೃತ್ತದಲ್ಲಿ ಎಳನೀರು ಹಾರ, ಕುಂಬಳಕಾಯಿ ಹಾರ ಹೂಮಳೆ, ನಂತರ ಕೊಬ್ಬರಿ ಹಾರ, ಸೇಬು ಹಣ್ಣು ಹಾರ ಹಾಕಿ ಸ್ವಾಗತಿಸಿದರು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಕುಮಾರ್ ಸ್ವಾಮಿಗೆ ಜಯಕಾರ ಜಯಘೋಷವನ್ನು ಹಾಕಿದರು.

ಪ್ರಿಯಾ ಶಾಲಾ ಕಾರ್ಯದರ್ಶಿ ಚಂದ್ರೇಗೌಡರ ಮನೆಯಲ್ಲಿ ಮದ್ಯಾಹ್ನದ ಉಟವನ್ನು ಮಾಡಿದರು. ನಂತರ ದಂಡಿನಶಿವರ ಮಾರ್ಗವಾಗಿ ಬಾಣಸಂದ್ರದಲ್ಲಿ ವಾಸ್ತವ್ಯ ಹೂಡಿದರು.
ಪಂಚರತ್ನ ರಥ ಯಾತ್ರೆಯಲ್ಲಿ ಮುಖಂಡರುಗಳಾದ ಎಂ.ಡಿ.ರಮೇಶ್ ಗೌಡ, ದೊಡ್ಡಾಘಟ್ಟ ಚಂದ್ರೇಶ್, ಬಾಣಸಂದ್ರ ರಮೇಶ್, ಜುಫ್ರಲ್ಲಾಖಾನ್, ಚೌಡಾರೆಡ್ಡಿ, ವೆಂಕಟಾಪುರ ಯೋಗೀಶ್, ಸ್ವಾಮಿ, ಶಂಕರೇಗೌಡ, ಮೂತರ್ಿ, ಅಂದಾನಪ್ಪ, ನಾಗೇಂದ್ರ, ಬಿ.ಎಸ್.ದೇವರಾಜು, ನಾಗೇಂದ್ರ, ಕುಶಾಲ್, ರಾಘು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?