Saturday, March 14, 2026
Google search engine
Home Blog Page 69

ಡಾ.ಪರಶುರಾಮ್‌ಗೆ ನೇಶನ್ ಬ್ಯುಲ್ಡರ್ ಅವಾರ್ಡ್

Publicstory

ತುಮಕೂರು: ಕ್ರಿಯಾಶೀಲ ಚಟುವಟಿಕೆಗಳಿಂದ ಗಮನ ಸೆಳೆದಿರುವ ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಕೆ.ಜಿ.ಪರಶುರಾಮ್ ಗೆ ಬೆಂಗಳೂರಿನ ಬನಶಂಕರಿ, ಜಯನಗರ, ಎಚ್.ಎಸ್.ಆರ್ ಲೇಔಟ್ ಮತ್ತು ಬಿಡದಿ ರೋಟರಿ ಕ್ಲಬ್ ವತಿಯಿಂದ ‘ನೇಶನ್ ಬ್ಯುಲ್ಡರ್ ಅವಾರ್ಡ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಕೆ.ಜಿ.ಪರಶುರಾಮ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕರಾಗಿರುವ ಇವರನ್ನು ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ವಿದ್ಯಾರ್ಥಿಗಳಿಗೆ ಮತ್ತು ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಹಲವರ ಸಾಧನೆಗೆ ಕಾರಣೀಭೂತರಾಗಿದ್ದಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರೂ ಸಮಾಜ ಕಾರ್ಯದಲ್ಲಿ ಮುಂಚೂಣಿಯಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.

ಚನ್ನಕೇಶವ ದೇವಾಲಯ: ಶಾಸಕರು ಹೇಳಿದ್ದೇನು?

Public story/prajayoga


ತುರುವೇಕೆರೆ; ಪ್ರವಾಸೋದ್ಯಮ ಇಲಾಖೆ ನಡೆಸುತ್ತಿರುವ ಕಾಮಗಾರಿಯಿಂದ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯದ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಮೂಲಸ್ವರೂಪವನ್ನು ಕಾಯ್ದು ಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಶಾಸಕ ಎ.ಎಸ್.ಜಯರಾಮ್ ಭರವಸೆ ನೀಡಿದರು.

ಅವರು ಶ್ರೀ ಚನ್ನಕೇಶವ ದೇವಾಲಯದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ನಡೆಸಲುದ್ದೇಶಿ ಸಿರುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸುರಭಿ ಸಂಗಮ ಸಂಸ್ಥೆಯ ಅಧ್ಯಕ್ಷ ಟಿ.ಎಚ್.ರಾಮಕೃಷ್ಣಯ್ಯ ದೇವಾಲಯದ ಕಾಮಗಾರಿ ಕುರಿತು ಶಾಸಕರಿಗೆ ಮಾಹಿತಿ ನೀಡಿ ‘ ೧೨ನೇ ಶತಮಾನದ ಹೊಯ್ಸಳ ವಾಸ್ತುಶಿಲ್ಪವಾದ ದೇವಾಲಯ ೪ ಅಡಿ ಎತ್ತರದ ಆಕರ್ಷಕ ನಕ್ಷತ್ರಾಕಾರದ ಜಗತಿಯನ್ನು ಹೊಂದಿದ್ದು ಕಾಲಕ್ರಮೇಣ ಜಗತಿ ಮಣ್ಣಿನಲ್ಲಿ ಹೂತುಹೋಗಿದೆ. ಲೋಕೋಪಯೋಗಿ ಇಲಾಖೆ ಇದರ ಮೇಲೇ ಕಲ್ಲು ಹಾಸು ಗಳನ್ನು ಹಾಸಿ ಕೆಲಸ ಮುಗಿಸುವ ಆತುರದಲ್ಲಿದೆ. ಹಾಗಾದರೆ ಇಡೀ ದೇವಸ್ಥಾನದ ಮೂಲ ಸ್ವರೂಪ ಶಾಶ್ವತವಾಗಿ ಮಣ್ಣಿನಲ್ಲಿ ಮುಚ್ಚಿಹೋಗುತ್ತದೆ ‘ ಎಂದು ಕಳಕಳಿ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.

ಇದಕ್ಕೆ ಉತ್ತರಿಸಿದ ಶಾಸಕರು ‘ಇಲಾಖೆ ಸದರಿ ನೀಲನಕ್ಷೆಯನ್ನು ಬದಲಿಸಿ ಜಗತಿಯನ್ನು ಮುಕ್ತಗೊಳಿಸುವ ಕಾಮಗಾರಿ ಯನ್ನೂ ಮಂಜೂರಾಗಿರುವ ಯೋಜನೆಯಲ್ಲಿ ಸೇರಿಸುವಂತೆ ನಿರ್ದೇಶಿಸಲಾಗುವುದು.ಅಲ್ಲಿಯವರೆಗೆ ಕಾಮಗಾರಿ ಮುಂದುವರೆಸ ದಂತೆ ಗುತ್ತಿಗೆದಾರರಿಗೆ ಸೂಚನೆ ನೀಡುವೆ. ದೇವಾಲಯದ ಮೂಲ ಸ್ವರೂಪ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್, ಪಪಂ ನಿ.ಪೂ. ಅಧ್ಯಕ್ಷ ಚಿದಾನಂದ್, ಸುರಭಿ ಸಂಗಮ ಕಾರ್ಯದರ್ಶಿ ಎಸ್.ದೇವರಾಜ್, ಟ್ರಸ್ಟಿಗಳಾದ ನಾಗರತ್ನಮ್ಮ, ಟಿ.ಆರ್.ಶ್ರೀಧರ್, ಗೌ. ಅರ್ಚಕ ಗುಂಡಣ್ಣ, ಟಿ.ಆರ್.ಶ್ರೀನಿವಾಸ್, ಎನ್.ಸಿ.ಎನ್ ಸ್ವಾಮಿ, ನಂಜುಂಡಸ್ವಾಮಿ,ಲೋಕೇಶ್,ವಿಶ್ವಾರಾಧ್ಯ, ಪ್ರಸಾದ್ ಮೊದಲಾದವರು ಇದ್ದರು.

ಮಳೆಹಾನಿ ಸಂತ್ರಸ್ತರಿಗೆ ಸಹಾಯಾಸ್ತ ; ಮಾನವೀಯತೆ ಮೆರೆದ ಬಿ.ಎಸ್.ನಾಗರಾಜು

Publicstory

ಗುಬ್ಬಿ: ಇಡೀ ರಾತ್ರಿ ಸುರಿದ ಮಳೆಗೆ ಸಿಲುಕಿದ ತಾಲೂಕಿನ ಚೇಳೂರು ಹೋಬಳಿ ಸಿ. ಹರಿವೇಸಂದ್ರ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ಕೊಚ್ಚಿ ಹೋಗಿವೆ. ಕೆಲ ಮನೆಗಳು ಅಪಾಯದಂಚಿನಲ್ಲಿರುವುದನ್ನು ಕಂಡ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಸಂತ್ರಸ್ತರ ನೆರವಿಗೆ ನಿಂತು ಎಂಟು ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದರು.

ಅತ್ಯಧಿಕ ಮಳೆ 122 ಮಿಮೀ ಚೇಳೂರು ಹೋಬಳಿಯಲ್ಲಿ ದಾಖಲಾಗಿದೆ. ಈ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ನೀರು ಸುರಿದು ಇಡೀ ಗ್ರಾಮವೇ ಕಂಗಾಲಾಗಿ ಜನರು ಮನೆಯಿಂದ ಹೊರ ಬಂದ ಘಟನೆ ನಡೆದಿದೆ. ದವಸ ಧಾನ್ಯ ಕೊಚ್ಚಿ ಹೋಗಿದ ಜೊತೆ ಕೆಲ ಮನೆಯ ಗೋಡೆಗಳು ಕುಸಿದಿದೆ. ಮನೆಯಿಂದ ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.

ವಿಚಾರ ತಿಳಿದ ತಕ್ಷಣ ಸಿ. ಹರಿವೇಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಬಿ.ಎಸ್.ನಾಗರಾಜು, ಎಲ್ಲಾ ಸಂತ್ರಸ್ತರ ಮನೆಗೆ ಭೇಟಿ ನೀಡಿ ವಸ್ತು ಸ್ಥಿತಿ ಅವಲೋಕಿಸಿ ತೀರಾ ತೊಂದರೆಗೆ ಒಳಗಾದ ಎಂಟು ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾತನಾಡಿದ ಅವರು,  ಹೇಮಾವತಿ ಇಲಾಖೆ ನಿರ್ಮಿಸಿದ ಚರಂಡಿ ಅವೈಜ್ಞಾನಿಕವಾಗಿದೆ. ಸರಾಗವಾಗಿ ಹರಿಯದ ನೀರು ಮನೆಗೆ ನುಗ್ಗಿದೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಜೊತೆ ಚರ್ಚಿಸಿ ದುರಸ್ಥಿ ಮಾಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕೀರಪ್ಪ, ಮುಖಂಡರಾದ ಗಂಗಾಧರ್, ಶಿವಾಜಿ ಇತರರು ಇದ್ದರು.

ಗುಬ್ಬಿ ಶ್ರೀನಿವಾಸ್ ಗೆಲುವಿಗೆ ಸಹಕಾರ : ಆರ್.ರಾಜೇಂದ್ರ ಘೊಷಣೆ

Publicstory

ಗುಬ್ಬಿ: ವಿಧಾನ ಪರಿಷತ್ ಚುನಾವಣೆಗೆ ಸಹಕರಿಸಿದ ಗುಬ್ಬಿ ಶಾಸಕರ ಋಣ ನನ್ನ ಮೇಲೆ ಇದೆ. ಮುಂದಿನ  ವಿಧಾನಸಭೆ ಚುನಾವಣೆಯಲ್ಲಿ ಅವರ ಋಣ ತೀರುಸುತ್ತೇನೆ. ಗುಬ್ಬಿಯಲ್ಲಿ ಅವರ ಗೆಲುವಿಗೆ ಸಹಕಾರ ನೀಡುತ್ತೇನೆ ಎಂದು ವಿ.ಪ ಸದಸ್ಯ. ಆರ್.ರಾಜೇಂದ್ರ ತಿಳಿಸಿದರು.

ತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ  ಎಚ್.ಸಿ.ಚಂದ್ರಶೇಖರ್ ಪೂಜಾರ್, ಗ್ರಾಪಂ ಸದಸ್ಯ ಎಚ್.ಕೆ.ಅನಿಲ್ ಕುಮಾರ್ ಹಾಗೂ ಕರಿಯಮ್ಮ ದೇವಿ ದೇವಾಲಯ ಸಮಿತಿಯ ಎಚ್.ಆರ್ ಕೆಂಪರಾಜು ಅವರು
ಏರ್ಪಡಿಸಿದ್ದ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರಿಗೆ ಅಭಿನಂದನೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಮುದ್ದಹನುಮೇಗೌಡರು ಉತ್ತಮ ರಾಜಕಾರಣಿ. ಬಹಳ ಬುದ್ದಿವಂತರು. ಅವರು ಯಾಕೆ ಬಿಜೆಪಿ ಕಡೆ ಮನಸು ಮಾಡಿದ್ದಾರೆ ಎಂಬ ವಿಷಯ ನಮಗೂ ಗೊತ್ತಾಗುತ್ತಿಲ್ಲ. ಗೌಡರ ಮನವೊಲಿಸುವ ಪ್ರಯತ್ನವನ್ನು ಹಿರಿಯರು ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, ಹಾಗಲವಾಡಿ  ಚೇಳೂರು ಎರಡು ಹೋಬಳಿಗಳು. ಸಹ ಹಿಂದುಳಿದ ಪ್ರದೇಶವಾಗಿದ್ದು, ಅತಿ ಹೆಚ್ಚು ಬೋರ್ ವೆಲ್ ಗಳು, ಸಾಗುವಳಿ ಚೀಟಿಗಳನ್ನು ಈ ಭಾಗಕ್ಕೆ ಕೊಟ್ಟಿದ್ದೇನೆ. ಅನುದಾನವನ್ನು ಕೂಡ ಪ್ರಾಮಾಣಿಕವಾಗಿ ಈ ಭಾಗಕ್ಕೆ ಕೊಟ್ಟಿದ್ದೇನೆ. ಸುಬೀಕ್ಷವಾಗಿ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದೆ. ನೀರಾವರಿ ವಿಷಯದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ಸ್ವಲ್ಪ ತಡವಾಗಿದೆ. ಪೈಪ್ ಲೈನ್ ಮುಖಾಂತರ ಕಾಮಾಗಾರಿ ಮಾಡಲಾಗಿ ಹಾಗಲವಾಡಿ ಕೆರೆಗೆ ಹೇಮೆ ಹರಿಸಲಾಗುವುದು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಹಾಗಲವಾಡಿ , ಮಂಚಲದೊರೆ , ಅಳಿಲಘಟ್ಟ , ಶಿವಪುರ , ಹೊಸಕೆರೆ ಗ್ರಾಮ ಪಂಚಾಯ್ತಿ ಸದಸ್ಯರನ್ನ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜ್ಯೋತಿ ಮಹೇಶ್ ಗ್ರಾ.ಪಂ.ಅಧ್ಯಕ್ಷರು,ನಿರ್ಮಲ ಡಿಸಿಸಿ ಬ್ಯಾಂಕ್ ಸದಸ್ಯರು, ಸಿಂಗದಹಳ್ಳಿ ರಾಜ್ ಕುಮಾರ್,ಮರಿಲಿಂಗಯ್ಯ, ಪಾಂಡುರಂಗಯ್ಯ,ತೆನಾಲಿ ರಾಮಕೃಷ್ಣ,ಅನಿಲ್ ಕುಮಾರ್,ಕರಿಬಸವಯ್ಯ ಶಿವರಾಂ ಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜನಪದ ಶ್ರಮ ಜೀವನದ ಪ್ರತಿಬಿಂಬ : ಡಾ.ಅಣ್ಣಮ್ಮ

Publicstory

ತುಮಕೂರು: ಜನಪದ ಶ್ರಮ ಜೀವನದ ಪ್ರತಿಬಿಂಬ ಎಂದು ತುಮಕೂರು ವಿವಿ ಡಾ.ಡಿವಿ ಗುಂಡಪ್ಪ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ಅಣ್ಣಮ್ಮ ಅಭಿಪ್ರಾಯಪಟ್ಟರು.

ನಗರದ ತುಮಕೂರು ವಿವಿ ಆವರಣದಲ್ಲಿ ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜನಪದಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಪದ ಸಮಾಜದ ಜೀವಂತಿಕೆ ಕಟ್ಟಿಕೊಡುವ ಪರಂಪತೆಯಲ್ಲಿ ಬೆಳೆದು ಬಂದಿದೆ. ಹಾಗಾಗಿ ನಾವೆಲ್ಲರೂ ಜನಪದರು ಎಂಬುದನ್ನು ಮೊದಲು ತಿಳಿಯೋಣ. ಜನಪದ ಆಟಗಳು ವೈಜ್ಞಾನಿಕವಾಗಿಯೂ ಮನುಷ್ಯ ಬದುಕಿದೆ ಅನುಕೂಲವಾಗುವಂತವು. ಆದ್ದರಿಂದ ಪ್ರತಿಯೊಬ್ಬರು ಜನಪದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಜನಮನ ದಿಂದ ರೂಪಿತವಾದ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ. ಸ್ಥಳೀಯ ಕಲೆಗಳ ನಂಟು ನಮ್ಮೊಂದಿಗೆ ಬೆಸೆದುಕೊಳ್ಳಬೇಕು ಎಂದರು.

ಜನಪದ ಎಂದಿಗೂ ಜೀವಪರವಾಗಿದ್ದು, ಯಾವ ಕಾಲದಲ್ಲಿಯೂ ನಾಶವಾಗದೆ ಮುಂದುವರೆಯುತ್ತಿದೆ. ಅದರ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಈಗಿನ ಯುವಜನರು ಜಾನಪದ ಬಗ್ಗೆ ಆಸಕಆಯೋ್ತಿ ಬೆಳೆಸಿಕೊಂಮಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.

ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ.ಪಿ.ಎಂ.ಗಂಗಾಧರಯ್ಯ ಮಾತನಾಡಿ, ಜನಪದವು ಜನಮನಗಳ ಮಧ್ಯೆ ಪರಂಪರೆಯಾಗಿ ಬೆಳೆದು ಬಂದಿದೆ. ಶಿಷ್ಟ ಭಾಷೆಯ ಅರಿವಿಗೂ ಮುಂಚೆ ಜನಪದ ಜನಜೀವನದ ಭಾಗವಾಗಿದ್ದು ಇತಿಹಾಸ. ಕವಿರಾಜ ಮಾರ್ಗದಿಂದ ಹಿಡಿದು ಇಲ್ಲಿಯವರೆಗೂ ಜನಪದ ಅನುಭವ ಸಾಹಿತ್ಯದ ಜೀವಾಳ. ವಿದ್ಯಾರ್ಥಿಗಳಿಗೆ ಮರೆತುಹೋದ ಜನಪದ ಗ್ರಾಮೀಣ ಕ್ರೀಡೆಗಳ ಸೊಬಗನ್ನು ಪರಿಚಯಿಸಲು ಜನಪದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಜನಪದ ಕ್ರೀಡಾಕೂಟ ಬಾಲ್ಯದ ನೆನೆಪುಗಳನ್ನು ನೆನಪಿಸುವಂತಿತ್ತು. ಗ್ರಾಮೀಣ ಆಟಗಳಾದ ಚಿನ್ನಿದಾಂಡು, ಕುಂಟೆಬಿಲ್ಲೆ, ಗೋಲಿ, ಲಗೋರಿ ಸೇರಿದಂತೆ ಹಲವು ಆಟಗಳನ್ನು ಆಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಪ್ರಾಧ್ಯಾಪಕರು ಗ್ರಾಮೀಣ ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಿಸಿದ್ದು ಗಮನಸೆಳೆಯಿತು. ವೀರಗಾಸೆ, ಕೋಲಾಟ, ಜಾನಪದ ಗಾಯನದ ಮೆರವಣಿಗೆ ಜನಪದ ಕ್ರೀಡಾಕೂಟಕ್ಕೆ ಮೆರಗು ನೀಡಿತು.

ಕಾರ್ಯಕ್ರಮದಲ್ಲಿ ಪ್ರೊ ಡಾ.ಡಿ.ವಿ ಪರಮಶಿವ ಮೂರ್ತಿ, ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು, ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನಾರ್ಥಿಗಳು ಭಾಗವಹಿಸಿದ್ದರು.

ನೀರಿನಲ್ಲಿ‌ ಕೊಚ್ಚಿಹೋದ ಟಾಟಾ ಏಸ್ ; ಯುವಕ ಪಾರು

publicstory

ತಿಪಟೂರು: ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ನೊಣವಿನಕೆರೆ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ  ಮಹೇಶ್ ಎನ್ ಬಿ ಎಂಬ ಗ್ರಾಮದ ಯುವಕನು ಟಾಟಾ ಏಸ್ ನಲ್ಲಿ ಸೇತುವೆ ಮೇಲೆ ಚಲಿಸುವಾಗ ನೀರಿನ ರಭಸದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಆದರೆ, ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಟಾಟಾ ಏಸ್ ನೀರಿನಲ್ಲಿ ಕೊಚ್ಚಿ ಹೋಗಿದೆ.

ಮಳೆ ನೀರು ತಗ್ಗಿದ ನಂತರ ಟಾಟಾ ಏಸ್ ಹೊರತೆಗೆಯಲಾಗುವುದು ಎಂದು ಮೂಲಗಳು ತಿಳಿಸಿದ್ದು, ಅಗ್ನಿಶಾಮಕ ದಳ ಶೋಧ ಕಾರ್ಯದಲ್ಲಿ ನಿರತವಾಗಿದೆ.

ಶಿಕ್ಷಕರ ದಿನಾಚರಣೆಯಲ್ಲಿ ಪತ್ರಕರ್ತರಿಗೆ ಸನ್ಮಾನ

Publicstory/Prajayoga

ಗುಬ್ಬಿ: ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ  ಮಂಟಪದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 135ನೇ ಜಯಂತೋತ್ಸವ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ  ಗುಬ್ಬಿ ಪತ್ರಕರ್ತರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಶಾಸಕ ಎಸ್‌ಆರ್ ಶ್ರೀನಿವಾಸ್, ಬಿಇಒ ಸೊಮಶೇಖರ್ ಸೇರಿದಂತೆ ಶಿಕ್ಷಕರು ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.

ತಾಯಿ ಹಾಗೂ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು : ಹಾಲಪ್ಪ

Publicstory/Prajayoga

ತುರುವೇಕೆರೆ :ಹೆತ್ತ ತಾಯಂದಿರು ಹಾಗೂ ಶಿಕ್ಷಕರು ದೇಶದ  ಭವಿಷ್ಯತ್ತಿನ  ಸತ್ಪ್ರಜೆಗಳನ್ನು  ರೂಪಿಸುವ ಶಿಲ್ಪಿಗಳು ಎಂದು  ಕೌಶಾಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಡಿ.ಕಲ್ಕೆರೆ ಗ್ರಾಮದ ಶ್ರೀ ಅಲ್ಲಮಪ್ರಭು ಮಹಾಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯನ್ನುದ್ದೇಶಿಸಿ ಮತನಾಡಿದ ಅವರು,  ಭವಿಷ್ಯತ್ತಿನ ಭಾರತದ ಸತ್ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಶಿಕ್ಷಕರು ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕಿದೆ. ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ಶಾಲೆಯಲ್ಲಿ ಶಿಕ್ಷಕರಿಂದ ಕಲಿತದ್ದಕ್ಕಿಂತ ತಾಯಿಯಿಂದ ಕಲಿತದ್ದೇ ಹೆಚ್ಚು. ಗುರುಗಳು, ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮೈಗೂಡಸಿಕೊಳ್ಳುವ ಮೂಲಕ ಗುರುವಿನ ಮಾರ್ಗದರ್ಶನದಲ್ಲಿ ಗುರಿ ತಲುಪಬೇಕಿದೆ ಎಂದರು.

ಅಲ್ಲಮಪ್ರಭು ಮಹಾಸಂಸ್ಥಾನ ಮಠದ ತಿಪ್ಪೇರುದ್ರಸ್ವಾಮೀಜಿ ಮಾತನಾಡಿ, ಭಾರತೀಯ ಗುರುಪರಂಪರೆಗೆ ಬಹು ದೊಡ್ಡ ಇತಿಹಾಸವಿದೆ. ಮಕ್ಕಳನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಗುರುಗಳ ಪಾತ್ರ ಮಹತ್ವದ್ದು.  ಜೀವನದಲ್ಲಿ ಗುರಿ ತಲುಪಲು ಮಾರ್ಗದರ್ಶನ ಮಾಡಿದ ಗುರುಗಳನ್ನು ಸಹ ಅತ್ಯಂತ ಗೌರವದಿಂದ ಸ್ಮರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ ಕೆಂಪೇಗೌಡ, ಸಾವಿತ್ರಮ್ಮ ಹಾಗೂ ಮಿಹಿರಾ ಕುಮಾರ್ ಅವರನ್ನು ಶ್ರೀ ಮಠದ ವತಿಯಿಂದ ಗೌರವಿಸಲಾಯಿತು.

ಗ್ರಾ.ಪಂ. ಅಧ್ಯಕ್ಷೆ ನಾಗರತ್ನಮ್ಮ, ಪಂಚಾಕ್ಷರಯ್ಯ, ಎಸ್.ಡಿ.ಎಂ.ಸಿ.ಅಧ್ಯಕ್ಷ ನವೀನ್‌ಕುಮಾರ್, ಕಿಸಾನ್ ಘಟಕದ ಸ್ವರ್ಣಕುಮಾರ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಶಿಕ್ಷಣ ಮಾರಾಟದ ಸರಕಲ್ಲ : ವೀರಬಸವ ಸ್ವಾಮೀಜಿ

0

Publicstory/Prajayoga

ವರದಿ, ದೇವರಾಜ್ ಗುಬ್ಬಿ

ಗುಬ್ಬಿ: ಮೆಕಾಲೆ ಶಿಕ್ಷಣ ದುಬಾರಿಯಾಗಿದೆ. ಶಿಕ್ಷಣ ಮಾರಾಟದ ಸರಕಲ್ಲ ಎಂದು ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 135ನೇ ಜಯಂತೋತ್ಸವ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್ ಫೋಟೋ ಅನಾವರಣಗೊಳಿಸಿ ಮಾತನಾಡಿದರು.

ಗುರುಕುಲದ ಶಿಕ್ಷಣಕ್ಕೂ ಪ್ರಸ್ತುತ ಆಧುನಿಕ ಶಿಕ್ಷಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ತಂತ್ರಜ್ಞಾನ ಬೆಳೆದಂತೆ ಶಿಕ್ಷಣದ ಜೊತೆಗೆ ಆದಿ ತಪ್ಪಿಸುವ ಲಕ್ಷಣಗಳು ಸಹ ಹೆಚ್ಚಾಗಿದೆ. ಇಂದಿನ ಯುವ ಜನಾಂಗವನ್ನು ಉತ್ತಮ ನಾಗರಿಕರಾಗಿ ಸೃಷ್ಟಿಸಲು ಶಿಕ್ಷಕ ವರ್ಗ ಹಾಗೂ ಪೋಷಕರು ಕೈಜೋಡಿಸಬೇಕು. ‘ಶಿ’ ಎಂದರೇ ಶಿವನ ಸ್ವರೂಪ ‘ಕ್ಷ’ ಎಂದರೇ ಕ್ಷಮಾಗುಣ ‘ಕ’ ಅಕ್ಷರದಲ್ಲಿ ಕರುಣಾಮಯಿ ಎನ್ನುವ ಅರ್ಥ ಸೂಚಿಸುವ ಅದ್ಭುದವಾದ ನುಡಿಯೇ ಶಿಕ್ಷಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್ ಆರ್ ಶ್ರೀನಿವಾಸ್, ದೇಶದ ಗಡಿ ಕಾಯುವ ಸೈನಿಕನಾಗಿ ಆಂತರಿಕ ಕಾವಲು ಶಿಕ್ಷಕರಿಂದ ನಡೆದಿದೆ. ಉತ್ತಮ ಪ್ರಜೆ ಸೃಷ್ಠಿಸುವ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.

ಬಿಇಒ ಸೋಮಶೇಖರ್ ಮಾತನಾಡಿ, ಸಮಾಜವು ನಮ್ಮನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ. ಶಿಕ್ಷಕ ಸ್ಥಾನಕ್ಕೆ ಇರುವ ಗೌರವ ಉಳಿಸುವಂತೆ ನಮ್ಮಗಳ ನಡವಳಿಕೆ ಇರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಮೂಲಕ ಉತ್ತಮ ನಾಗರಿಕ ಸೃಷ್ಟಿಗೆ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ಮೃತ ಶಿಕ್ಷಕ ಕುಟುಂಬವನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಬಿ ಆರ್ ಸಿ ಮಧುಸೂದನ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಉಮಾಮಹೇಶ್ವರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್ ಟಿ ಪ್ರಕಾಶ್, ಜಿಲ್ಲಾ ಸಹ ಕಾರ್ಯದರ್ಶಿದರ್ಶಿ ಬೈರಯ್ಯ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಕಾಸಪ ಅಧ್ಯಕ್ಷ ಯತೀಶ್ ಹಾಗೂ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಮಕ್ಕಳಿಂದ ವಿಶೇಷವಾಗಿ ಆಚರಣೆಗೊಂಡ ಶಿಕ್ಷಕರ ದಿನಾಚರಣೆ

Publicstory/Prajayoga

ತಿಪಟೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮಕ್ಕಳೇ ಶಿಕ್ಷಕರಿಗೆ ಕ್ರೀಡಾ ಕೂಟವನ್ನು ಆಯೋಜಿಸಿದ್ದಾರೆ. ವಿಜೇತರಾದ ಶಿಕ್ಷಕರಿಗೆ ಮಕ್ಕಳೇ ಪ್ರಶಸ್ತಿಗಳನ್ನು ವಿತರಿಸುತ್ತಿದ್ದಾರೆ ಎಂದು
ಶ್ರೀ ವಿದ್ಯಾಪೀಠ ಸಂಸ್ಥೆಯ ಮುಖ್ಯೋಪಾಧ್ಯಾಯ ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದರು.

ನಗರದ ಶ್ರೀ ವಿದ್ಯಾ ಪೀಠ ಸಂಸ್ಥೆಯಲ್ಲಿ  ಶಿಕ್ಷಕರಿಗೆ ವಿವಿಧ ರೀತಿಯ ಕ್ರೀಡೆಗಳನ್ನು ಆಡಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಕ್ರೀಡಾಕೂಟದಲ್ಲಿ ಶಿಕ್ಷಕರಾದ ಸಿದ್ದೇಶ್ ,ಉದಯ್ ,ಸಂತೋಷ್ ,ಜುಂಜಪ್ಪ, ದೇವರಾಜು,ಪದ್ಮಾ ನಾಗರತ್ನ ,ಕುಮುದಾ ಮತ್ತಿತರ ಶಿಕ್ಷಕರು ಭಾಗಿಯಾಗಿದ್ದರು.