ಪೊಲಿಟಿಕಲ್

ಮಳೆಹಾನಿ ಸಂತ್ರಸ್ತರಿಗೆ ಸಹಾಯಾಸ್ತ ; ಮಾನವೀಯತೆ ಮೆರೆದ ಬಿ.ಎಸ್.ನಾಗರಾಜು

Publicstory

ಗುಬ್ಬಿ: ಇಡೀ ರಾತ್ರಿ ಸುರಿದ ಮಳೆಗೆ ಸಿಲುಕಿದ ತಾಲೂಕಿನ ಚೇಳೂರು ಹೋಬಳಿ ಸಿ. ಹರಿವೇಸಂದ್ರ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ಕೊಚ್ಚಿ ಹೋಗಿವೆ. ಕೆಲ ಮನೆಗಳು ಅಪಾಯದಂಚಿನಲ್ಲಿರುವುದನ್ನು ಕಂಡ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಸಂತ್ರಸ್ತರ ನೆರವಿಗೆ ನಿಂತು ಎಂಟು ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದರು.

ಅತ್ಯಧಿಕ ಮಳೆ 122 ಮಿಮೀ ಚೇಳೂರು ಹೋಬಳಿಯಲ್ಲಿ ದಾಖಲಾಗಿದೆ. ಈ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ನೀರು ಸುರಿದು ಇಡೀ ಗ್ರಾಮವೇ ಕಂಗಾಲಾಗಿ ಜನರು ಮನೆಯಿಂದ ಹೊರ ಬಂದ ಘಟನೆ ನಡೆದಿದೆ. ದವಸ ಧಾನ್ಯ ಕೊಚ್ಚಿ ಹೋಗಿದ ಜೊತೆ ಕೆಲ ಮನೆಯ ಗೋಡೆಗಳು ಕುಸಿದಿದೆ. ಮನೆಯಿಂದ ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.

ವಿಚಾರ ತಿಳಿದ ತಕ್ಷಣ ಸಿ. ಹರಿವೇಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಬಿ.ಎಸ್.ನಾಗರಾಜು, ಎಲ್ಲಾ ಸಂತ್ರಸ್ತರ ಮನೆಗೆ ಭೇಟಿ ನೀಡಿ ವಸ್ತು ಸ್ಥಿತಿ ಅವಲೋಕಿಸಿ ತೀರಾ ತೊಂದರೆಗೆ ಒಳಗಾದ ಎಂಟು ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾತನಾಡಿದ ಅವರು,  ಹೇಮಾವತಿ ಇಲಾಖೆ ನಿರ್ಮಿಸಿದ ಚರಂಡಿ ಅವೈಜ್ಞಾನಿಕವಾಗಿದೆ. ಸರಾಗವಾಗಿ ಹರಿಯದ ನೀರು ಮನೆಗೆ ನುಗ್ಗಿದೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಜೊತೆ ಚರ್ಚಿಸಿ ದುರಸ್ಥಿ ಮಾಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕೀರಪ್ಪ, ಮುಖಂಡರಾದ ಗಂಗಾಧರ್, ಶಿವಾಜಿ ಇತರರು ಇದ್ದರು.

Comment here