Thursday, September 19, 2024
Google search engine
Homeಜನಮನಶಿಕ್ಷಣ ಮಾರಾಟದ ಸರಕಲ್ಲ : ವೀರಬಸವ ಸ್ವಾಮೀಜಿ

ಶಿಕ್ಷಣ ಮಾರಾಟದ ಸರಕಲ್ಲ : ವೀರಬಸವ ಸ್ವಾಮೀಜಿ

Publicstory/Prajayoga

ವರದಿ, ದೇವರಾಜ್ ಗುಬ್ಬಿ

ಗುಬ್ಬಿ: ಮೆಕಾಲೆ ಶಿಕ್ಷಣ ದುಬಾರಿಯಾಗಿದೆ. ಶಿಕ್ಷಣ ಮಾರಾಟದ ಸರಕಲ್ಲ ಎಂದು ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 135ನೇ ಜಯಂತೋತ್ಸವ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್ ಫೋಟೋ ಅನಾವರಣಗೊಳಿಸಿ ಮಾತನಾಡಿದರು.

ಗುರುಕುಲದ ಶಿಕ್ಷಣಕ್ಕೂ ಪ್ರಸ್ತುತ ಆಧುನಿಕ ಶಿಕ್ಷಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ತಂತ್ರಜ್ಞಾನ ಬೆಳೆದಂತೆ ಶಿಕ್ಷಣದ ಜೊತೆಗೆ ಆದಿ ತಪ್ಪಿಸುವ ಲಕ್ಷಣಗಳು ಸಹ ಹೆಚ್ಚಾಗಿದೆ. ಇಂದಿನ ಯುವ ಜನಾಂಗವನ್ನು ಉತ್ತಮ ನಾಗರಿಕರಾಗಿ ಸೃಷ್ಟಿಸಲು ಶಿಕ್ಷಕ ವರ್ಗ ಹಾಗೂ ಪೋಷಕರು ಕೈಜೋಡಿಸಬೇಕು. ‘ಶಿ’ ಎಂದರೇ ಶಿವನ ಸ್ವರೂಪ ‘ಕ್ಷ’ ಎಂದರೇ ಕ್ಷಮಾಗುಣ ‘ಕ’ ಅಕ್ಷರದಲ್ಲಿ ಕರುಣಾಮಯಿ ಎನ್ನುವ ಅರ್ಥ ಸೂಚಿಸುವ ಅದ್ಭುದವಾದ ನುಡಿಯೇ ಶಿಕ್ಷಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್ ಆರ್ ಶ್ರೀನಿವಾಸ್, ದೇಶದ ಗಡಿ ಕಾಯುವ ಸೈನಿಕನಾಗಿ ಆಂತರಿಕ ಕಾವಲು ಶಿಕ್ಷಕರಿಂದ ನಡೆದಿದೆ. ಉತ್ತಮ ಪ್ರಜೆ ಸೃಷ್ಠಿಸುವ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.

ಬಿಇಒ ಸೋಮಶೇಖರ್ ಮಾತನಾಡಿ, ಸಮಾಜವು ನಮ್ಮನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ. ಶಿಕ್ಷಕ ಸ್ಥಾನಕ್ಕೆ ಇರುವ ಗೌರವ ಉಳಿಸುವಂತೆ ನಮ್ಮಗಳ ನಡವಳಿಕೆ ಇರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಮೂಲಕ ಉತ್ತಮ ನಾಗರಿಕ ಸೃಷ್ಟಿಗೆ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ಮೃತ ಶಿಕ್ಷಕ ಕುಟುಂಬವನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಬಿ ಆರ್ ಸಿ ಮಧುಸೂದನ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಉಮಾಮಹೇಶ್ವರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್ ಟಿ ಪ್ರಕಾಶ್, ಜಿಲ್ಲಾ ಸಹ ಕಾರ್ಯದರ್ಶಿದರ್ಶಿ ಬೈರಯ್ಯ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಕಾಸಪ ಅಧ್ಯಕ್ಷ ಯತೀಶ್ ಹಾಗೂ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?