Publicstory
ತುಮಕೂರು: ಜನಪದ ಶ್ರಮ ಜೀವನದ ಪ್ರತಿಬಿಂಬ ಎಂದು ತುಮಕೂರು ವಿವಿ ಡಾ.ಡಿವಿ ಗುಂಡಪ್ಪ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ಅಣ್ಣಮ್ಮ ಅಭಿಪ್ರಾಯಪಟ್ಟರು.
ನಗರದ ತುಮಕೂರು ವಿವಿ ಆವರಣದಲ್ಲಿ ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜನಪದಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನಪದ ಸಮಾಜದ ಜೀವಂತಿಕೆ ಕಟ್ಟಿಕೊಡುವ ಪರಂಪತೆಯಲ್ಲಿ ಬೆಳೆದು ಬಂದಿದೆ. ಹಾಗಾಗಿ ನಾವೆಲ್ಲರೂ ಜನಪದರು ಎಂಬುದನ್ನು ಮೊದಲು ತಿಳಿಯೋಣ. ಜನಪದ ಆಟಗಳು ವೈಜ್ಞಾನಿಕವಾಗಿಯೂ ಮನುಷ್ಯ ಬದುಕಿದೆ ಅನುಕೂಲವಾಗುವಂತವು. ಆದ್ದರಿಂದ ಪ್ರತಿಯೊಬ್ಬರು ಜನಪದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಜನಮನ ದಿಂದ ರೂಪಿತವಾದ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ. ಸ್ಥಳೀಯ ಕಲೆಗಳ ನಂಟು ನಮ್ಮೊಂದಿಗೆ ಬೆಸೆದುಕೊಳ್ಳಬೇಕು ಎಂದರು.
ಜನಪದ ಎಂದಿಗೂ ಜೀವಪರವಾಗಿದ್ದು, ಯಾವ ಕಾಲದಲ್ಲಿಯೂ ನಾಶವಾಗದೆ ಮುಂದುವರೆಯುತ್ತಿದೆ. ಅದರ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಈಗಿನ ಯುವಜನರು ಜಾನಪದ ಬಗ್ಗೆ ಆಸಕಆಯೋ್ತಿ ಬೆಳೆಸಿಕೊಂಮಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.
ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ.ಪಿ.ಎಂ.ಗಂಗಾಧರಯ್ಯ ಮಾತನಾಡಿ, ಜನಪದವು ಜನಮನಗಳ ಮಧ್ಯೆ ಪರಂಪರೆಯಾಗಿ ಬೆಳೆದು ಬಂದಿದೆ. ಶಿಷ್ಟ ಭಾಷೆಯ ಅರಿವಿಗೂ ಮುಂಚೆ ಜನಪದ ಜನಜೀವನದ ಭಾಗವಾಗಿದ್ದು ಇತಿಹಾಸ. ಕವಿರಾಜ ಮಾರ್ಗದಿಂದ ಹಿಡಿದು ಇಲ್ಲಿಯವರೆಗೂ ಜನಪದ ಅನುಭವ ಸಾಹಿತ್ಯದ ಜೀವಾಳ. ವಿದ್ಯಾರ್ಥಿಗಳಿಗೆ ಮರೆತುಹೋದ ಜನಪದ ಗ್ರಾಮೀಣ ಕ್ರೀಡೆಗಳ ಸೊಬಗನ್ನು ಪರಿಚಯಿಸಲು ಜನಪದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಜನಪದ ಕ್ರೀಡಾಕೂಟ ಬಾಲ್ಯದ ನೆನೆಪುಗಳನ್ನು ನೆನಪಿಸುವಂತಿತ್ತು. ಗ್ರಾಮೀಣ ಆಟಗಳಾದ ಚಿನ್ನಿದಾಂಡು, ಕುಂಟೆಬಿಲ್ಲೆ, ಗೋಲಿ, ಲಗೋರಿ ಸೇರಿದಂತೆ ಹಲವು ಆಟಗಳನ್ನು ಆಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಪ್ರಾಧ್ಯಾಪಕರು ಗ್ರಾಮೀಣ ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಿಸಿದ್ದು ಗಮನಸೆಳೆಯಿತು. ವೀರಗಾಸೆ, ಕೋಲಾಟ, ಜಾನಪದ ಗಾಯನದ ಮೆರವಣಿಗೆ ಜನಪದ ಕ್ರೀಡಾಕೂಟಕ್ಕೆ ಮೆರಗು ನೀಡಿತು.
ಕಾರ್ಯಕ್ರಮದಲ್ಲಿ ಪ್ರೊ ಡಾ.ಡಿ.ವಿ ಪರಮಶಿವ ಮೂರ್ತಿ, ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು, ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನಾರ್ಥಿಗಳು ಭಾಗವಹಿಸಿದ್ದರು.