Thursday, October 3, 2024
Google search engine
Homeಜಸ್ಟ್ ನ್ಯೂಸ್ಚನ್ನಕೇಶವ ದೇವಾಲಯ: ಶಾಸಕರು ಹೇಳಿದ್ದೇನು?

ಚನ್ನಕೇಶವ ದೇವಾಲಯ: ಶಾಸಕರು ಹೇಳಿದ್ದೇನು?

Public story/prajayoga


ತುರುವೇಕೆರೆ; ಪ್ರವಾಸೋದ್ಯಮ ಇಲಾಖೆ ನಡೆಸುತ್ತಿರುವ ಕಾಮಗಾರಿಯಿಂದ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯದ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಮೂಲಸ್ವರೂಪವನ್ನು ಕಾಯ್ದು ಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಶಾಸಕ ಎ.ಎಸ್.ಜಯರಾಮ್ ಭರವಸೆ ನೀಡಿದರು.

ಅವರು ಶ್ರೀ ಚನ್ನಕೇಶವ ದೇವಾಲಯದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ನಡೆಸಲುದ್ದೇಶಿ ಸಿರುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸುರಭಿ ಸಂಗಮ ಸಂಸ್ಥೆಯ ಅಧ್ಯಕ್ಷ ಟಿ.ಎಚ್.ರಾಮಕೃಷ್ಣಯ್ಯ ದೇವಾಲಯದ ಕಾಮಗಾರಿ ಕುರಿತು ಶಾಸಕರಿಗೆ ಮಾಹಿತಿ ನೀಡಿ ‘ ೧೨ನೇ ಶತಮಾನದ ಹೊಯ್ಸಳ ವಾಸ್ತುಶಿಲ್ಪವಾದ ದೇವಾಲಯ ೪ ಅಡಿ ಎತ್ತರದ ಆಕರ್ಷಕ ನಕ್ಷತ್ರಾಕಾರದ ಜಗತಿಯನ್ನು ಹೊಂದಿದ್ದು ಕಾಲಕ್ರಮೇಣ ಜಗತಿ ಮಣ್ಣಿನಲ್ಲಿ ಹೂತುಹೋಗಿದೆ. ಲೋಕೋಪಯೋಗಿ ಇಲಾಖೆ ಇದರ ಮೇಲೇ ಕಲ್ಲು ಹಾಸು ಗಳನ್ನು ಹಾಸಿ ಕೆಲಸ ಮುಗಿಸುವ ಆತುರದಲ್ಲಿದೆ. ಹಾಗಾದರೆ ಇಡೀ ದೇವಸ್ಥಾನದ ಮೂಲ ಸ್ವರೂಪ ಶಾಶ್ವತವಾಗಿ ಮಣ್ಣಿನಲ್ಲಿ ಮುಚ್ಚಿಹೋಗುತ್ತದೆ ‘ ಎಂದು ಕಳಕಳಿ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.

ಇದಕ್ಕೆ ಉತ್ತರಿಸಿದ ಶಾಸಕರು ‘ಇಲಾಖೆ ಸದರಿ ನೀಲನಕ್ಷೆಯನ್ನು ಬದಲಿಸಿ ಜಗತಿಯನ್ನು ಮುಕ್ತಗೊಳಿಸುವ ಕಾಮಗಾರಿ ಯನ್ನೂ ಮಂಜೂರಾಗಿರುವ ಯೋಜನೆಯಲ್ಲಿ ಸೇರಿಸುವಂತೆ ನಿರ್ದೇಶಿಸಲಾಗುವುದು.ಅಲ್ಲಿಯವರೆಗೆ ಕಾಮಗಾರಿ ಮುಂದುವರೆಸ ದಂತೆ ಗುತ್ತಿಗೆದಾರರಿಗೆ ಸೂಚನೆ ನೀಡುವೆ. ದೇವಾಲಯದ ಮೂಲ ಸ್ವರೂಪ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್, ಪಪಂ ನಿ.ಪೂ. ಅಧ್ಯಕ್ಷ ಚಿದಾನಂದ್, ಸುರಭಿ ಸಂಗಮ ಕಾರ್ಯದರ್ಶಿ ಎಸ್.ದೇವರಾಜ್, ಟ್ರಸ್ಟಿಗಳಾದ ನಾಗರತ್ನಮ್ಮ, ಟಿ.ಆರ್.ಶ್ರೀಧರ್, ಗೌ. ಅರ್ಚಕ ಗುಂಡಣ್ಣ, ಟಿ.ಆರ್.ಶ್ರೀನಿವಾಸ್, ಎನ್.ಸಿ.ಎನ್ ಸ್ವಾಮಿ, ನಂಜುಂಡಸ್ವಾಮಿ,ಲೋಕೇಶ್,ವಿಶ್ವಾರಾಧ್ಯ, ಪ್ರಸಾದ್ ಮೊದಲಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?