Saturday, March 14, 2026
Google search engine
Home Blog Page 76

ಸಂವಿಧಾನದ ಆಶಯದಂತೆ ನಡೆದರೆ ರಾಮರಾಜ್ಯ: ಡಾ.ಮಹೇಂದ್ರಪ್ಪ

Publicstory/prajayoga

ಶಿರಾ : ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆಯ ಕೇಂದ್ರೀಕೃತ ವ್ಯವಸ್ಥೆಯ ಬದಲಾಗಿ ವಿಕೇಂದ್ರಿಕರಣದ   ವ್ಯವಸ್ಥೆಯ ಮೂಲಕ ಸಂವಿಧಾನ ಆಶಯಗಳಿಗೆ ಬದ್ಧರಾಗಿ ನಡೆದರೆ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಪಿ.ಎಚ್.ಮಹೇಂದ್ರಪ್ಪ ಹೇಳಿದರು.

ನಗರದ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾತಂತ್ರ್ಯಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಇಂಡಿಯಾದಿಂದ ಭಾರತದೆಡೆಗೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಮೌಲ್ಯ ಪ್ರತಿಪಾದನೆ, ಸಮಾನತೆ, ಸಹಬಾಳ್ವೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ಆಶಯಗಳ ಪ್ರಜಾಸತ್ತಾತ್ಮಕ ನೆಲೆಯ ಭಾರತವನ್ನು ಇಂದು ಕಟ್ಟಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗಬೇಕು. ಭಾರತವು ವಿಶ್ವದಲ್ಲಿಯೇ ಬಹುಸಂಸ್ಕೃತಿ ಬಹುಭಾಷೆಗಳ ಐಕ್ಯತೆ, ವೈವಿಧ್ಯತೆ, ಸಹೋದರತೆಗಳಿಂದಾಗಿ ವಿಶೇಷವಾದ ಗೌರವ ಸ್ಥಾನಮಾನವನ್ನು ಪಡೆದುಕೊಂಡಿದೆ. ಅಂತೆಯೇ ಮುಂದುವರೆಯಬೇಕು ಎಂದರು.

ಡಾ.ತಿಮ್ಮನಹಳ್ಳಿ ವೇಣಗೋಪಾಲ್ ಮಾತನಾಡಿ, ಭಾರತದ ಭವಿಷ್ಯ ರೂಪುಗೊಳ್ಳುತ್ತಿರುವುದು ಶಾಲಾ ತರಗತಿಗಳಲ್ಲಿ. ಹಾಗಾಗಿ ಕ್ಲಾಸ್‌ರೂಂಗಳು ನಿಜವಾದ ಜ್ಞಾನದೇಗುಲಗಳಾಗಿವೆ. ನಮಗೆ ಬೇಕಾಗಿರುವುದು ಮಹಾತ್ಮ ಗಾಂಧಿಜಿ, ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದರಂತಹ ಮಹನೀಯರು ಬಯಸಿದ ಭಾರತವೇ ಹೊರತು, ಏಕರೂಪಿ ವ್ಯವಸ್ಥೆಯ ಭಾರತವಲ್ಲ. ಕುವೆಂಪು ಹೇಳಿದಂತೆ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿತ, ಉಪನ್ಯಾಸಕಿ ವಿಜಯಮ್ಮ, ರಂಗನಾಥ್, ಶಿವಕುಮಾರ್, ಹೆಂದೊರೆ ಶಿವಣ್ಣ, ಶಿವರಾಜು ಸೇರಿದಂತೆ ಹಲವರು ಹಾಜರಿದ್ದರು.

ಶ್ರೇಷ್ಠ ಕನಿಷ್ಠತೆಯ ರೋಗಕ್ಕೆ ಬೇಕಿದೆ ಶಾಶ್ವತ ಚಿಕಿತ್ಸೆ

0

Publicstory/prajayoga

ಸಮಸ್ತ ಭಾರತೀಯರು 75ನೇ  ಸವಿ ನೆನಪಿನ ದಿನಕ್ಕಾಗಿ ಆಚರಣೆಗಾಗಿ ಸಕಲ ಸಿದ್ಧತೆಗಳೊಂದಿಗೆ ಕಾದು ಕುಳಿತಿದ್ದರು.  ಅದಕ್ಕೆ ಮುನ್ನ ದಿನ ಇಡೀ ದೇಶವೇ ತಲೆ ತಗ್ಗಿಸುವ ಘಟನೆ ನಡೆದುಹೋಗಿತ್ತು.  ರಾಜಸ್ಥಾನದ ಜೋಧ್ ಪುರ್ ಸಮೀಪದ ಖಾಸಗಿ ಶಾಲೆಯಲ್ಲಿ ಚೈನ್ ಸಿಂಗ್ ಎಂಬ ಶಿಕ್ಷಕ  ದಲಿತ ಬಾಲಕನನ್ನು ಅಮಾನುಷವಾಗಿ ಥಳಿಸಿ ಕೊಂದು ಹಾಕಿದ್ದು. ಕುಡಿಯುವ ನೀರಿನ ಕೊಡ ಮುಟ್ಟಿದ್ದೇ ಕೊಲೆಗೆ ಕಾರಣವಾಗಿಹೋಯ್ತು. ಈಗಿನ್ನು ಚಿಗುರುತ್ತಿದ್ದ ದೇಶದ ಭವಿಷ್ಯದ ಕುಡಿ ಅಸ್ಪೃಶ್ಯತೆಯ ಮಹಾಮಾರಿಗೆ ಸಿಲುಕಿ ಕಮರಿಹೋದದ್ದು ಮನುಕುಲಕ್ಕೆ ನಾಚಿಗೆಯ ಸಂಗತಿ.

ಈ ಘಟನೆ 500 ವರ್ಷಗಳ ಹಿಂದಿದ್ದ ಅಸ್ಪೃಶ್ಯತೆಯ ಕಾಲಘಟ್ಟ ಜೀವಂತವಾಗಿದೆ ಎಂಬುದನ್ನು ಕನ್ನಡೀಕರಿಸಿದೆ. ಮಕ್ಕಳ ಮುಗ್ಧತೆಗೆ ಎಂಥವರೂ ಕರಗುತ್ತಾರೆ. ಅಂತಹದ್ದರ ನಡುವೆ ಗುರುಬ್ರಹ್ಮ ಎನ್ನುವ ಪದನಾಮ ಸ್ಥಾನದಲ್ಲಿ ಕುಳಿತ ಶಿಕ್ಷನೊಬ್ಬ ಥಳಿಸಿ ಕೊಂದಿರುವುದು ಹೇಯ. ನಾನೊಬ್ಬ ಶಿಕ್ಷನಾಗಿ ಈ ಘಟನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ಚೈನ್ ಸಿಂಗ್ ಎಂಬ ವ್ಯಕ್ತಿ ಶಿಕ್ಷಕನಾಗಲು ಯೋಗ್ಯನಲ್ಲ.  ದೇಶದಲ್ಲಿ ಸುಶಿಕ್ಷಿತ ಸಮುದಾಯವೇ ಅಸ್ಪೃಶ್ಯತೆಯ ಆಚರಣೆ ಜೀವಂತವಾಗಿಸಿಟ್ಟರೆ,  ಸಾಮಾಜಿಕ ಅರಿವಿರದವರ  ಕಥೆ ಇನ್ನು ಹೇಳತಿರದು! 

ನಾವೆಲ್ಲರೂ ಒಂದೇ ಎಂಬ ಭಾವನೆ  ಬರುವುದು ಯಾವಾಗ? ತಾಯಿ ಗರ್ಭದಿಂದ ಜನಿಸುವಾಗ ಯಾವುದೇ ಧರ್ಮ, ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದು 75 ವಸಂತಗಳು ಕಳೆದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದನ್ನು ನೋಡಿದರೆ, ಶ್ರೇಷ್ಠ ಮತ್ತು ಕನಿಷ್ಠತೆ ಎಂಬ ರೋಗಕ್ಕೆ ಶಾಶ್ವತ ಚಿಕಿತ್ಸೆ ಬೇಕಿದೆ.

ಆ ಆಸಾಮಿ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ಕಾಯ್ದೆ ಕಾಯ್ದೆ 302 ಐಪಿಸಿ ಅಡಿ ಕೊಲೆ ಪ್ರಕರಣ ದಾಖಲಾಗಿದೆ. ಇದರಿಂದ ನ್ಯಾಯವೇನೂ ದೊರಕುವುದಿಲ್ಲ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವೆಲ್ಲವುಗಳಿಗೂ ಪರಿಹಾರವೆಂದರೆ “ಕುವೆಂಪು ಸಾರಿರುವ ವಿಶ್ವಮಾನವತೆ ಹಾಗೂ ಪಂಪನ ಮನುಜ ಜಾತಿ ತಾನೊಂದೆ ವಲಂ ಮಂತ್ರಗಳು ಮಾತ್ರ.

ಚೇತನ್ ಮೌರ್ಯ, ಶಿಕ್ಷಕರು

ಬರಹ ಲೇಖಕರದ್ದು, ವೆಬ್‌ಸೈಟ್‌ನ ಅಭಿಪ್ರಾಯವಲ್ಲ

ಉತ್ತಮ ಪ್ರಜೆಗಳ ನಿರ್ಮಾಣ ನಮ್ಮ ಗುರಿ: ವೂಡೇ.ಪಿ.ಕೃಷ್ಣ.

Publicstory/prajayoga


ತುಮಕೂರು: ನಗರದ ಶೇಷಾದ್ರಿ ಪುರಂ ಪಿ.ಯು. ಕಾಲೇಜಿ ನಲ್ಲಿ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್ಶಿಪ್ ವಿತರಿ ಸುವ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು.

ಹೊಸದಾಗಿ ಪಿಯುಸಿಗೆ ಪ್ರವೇಶ ಪಡೆದಿರುವ, ಶೇ 85%ಕ್ಕೂ ಹೆಚ್ಚು ಅಂಕಗಳಿಸಿರುವ 300 ವಿದ್ಯಾರ್ಥಿಗಳಿಗೆ ಹಾಗೂ ಶೇ 90% ಕ್ಕೂ ಹೆಚ್ಚು ಅಂಕಗಳಿಸಿರುವ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಪತ್ರ ವಿತರಿಸಿ ಮಾತನಾಡಿದ ನಾಡೋಜ ಡಾ.ವೂಡೇ.ಪಿ.ಕೃಷ್ಣ ಅವರು ಕೈಗೆಟಕುವ ದರದಲ್ಲಿ ಶಿಕ್ಷಣ ಕೊಡುವುದು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದು ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ ಎಂದರು.


ಜಾಹೀರಾತು


ನಮ್ಮ ಶಿಕ್ಷಣ ದತ್ತಿಯ ತುಮಕೂರು ಬೆಂಗಳೂರು, ಮಂಡ್ಯ, ಮೈಸೂರು, ಪದವಿ ಪೂರ್ವ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಈ ವರ್ಷ 2.6 ಕೋಟಿ ವಿದ್ಯಾರ್ಥಿವೇತನ ವಿತರಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕರೋನ ಸಂದರ್ಭದಲ್ಲಿ ಸಹ ನಮ್ಮ ಅಧ್ಯಾಪಕರು ಶ್ರಮವಹಿಸಿ ಪಾಠ ಮಾಡಿ ಸಂಸ್ಥೆಗೆ ಹೆಸರು ತಂದರು. ಶಿಕ್ಷಕರೇ ಶಿಕ್ಷಣದ ಆತ್ಮ. ನಮ್ಮ ಸಂಸ್ಥೆಯ ಶಕ್ತಿ ಉತ್ತಮ ಅಧ್ಯಾಪಕರು ಎಂದು ಶ್ಲಾಘಿಸಿದರು.

ಡಾ. ಟಿ. ಹೆಚ್ ಆಂಜನಪ್ಪ ಮಾತನಾಡಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ನಾಡಿನ ಉತ್ತಮ ಸಂಸ್ಥೆಯಾಗಿದೆ. ನಮ್ಮ ಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟ ವಾಗಿತ್ತು. ನೀವು ಅದೃಷ್ಟವಂತರು. ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಯನ್ನು ಮಾಡಿ ಎಂದು ಸಲಹೆ ನೀಡಿದರು.

ಬೇರೆಯವರೊಂದಿಗೆ ಹೋಲಿಸಿ ಕೊಂಡು ಕೊರಗುವುದನ್ನು ಬಿಟ್ಟು ಸಾಧನೆಯ ಕಡೆ ಮುಖ ಮಾಡಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ, ತದೇಕ ಚಿತ್ತದಿಂದ ಪಾಠ ಕೇಳಬೇಕು. ಉತ್ತಮ ಅಂಕಗಳನ್ನು ಪಡೆಯದೇ ಇರುವವರಿಗೆ ಕೀಳರಿಮೆ ಬೇಡ ಕಷ್ಟಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಅಬ್ದುಲ್ ಕಲಾಂ, ಇವರ ಜೀವನ ಸ್ಪೂರ್ತಿಯಾಗ ಬೇಕು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತಿನಂತೆ ನಿಮ್ಮ ಕಾಯಕ ಮಾಡಿ ಎಂದು ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧರ್ಮದರ್ಶಿಗಳಾದ ಡಬ್ಲ್ಯೂ. ಡಿ ಅಶೋಕ್, ಬಿ.ಎಂ ಪಾರ್ಥ ಸಾರಥಿ, ಬಿ.ಎ.ಅನಂತ ರಾಮು, ಪಿ.ಯು ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಬಿ.ವಿ.ಬಸವರಾಜು, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ ಜಿ.ಟಿ., ಜಿ.ಸಿ. ಬೋರ್ಡ್ ಸದಸ್ಯೆ ಶಾಂತಕುಮಾರಿ, ಕಾಲೇಜಿನ ಬೋಧಕರು, ಬೋಧಕೇತರರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯುವಕರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಳ: ಡಾ.ಶ್ರೀಧರ್ ಕಳವಳ

Publicstory/prajayoga

ತಿಪಟೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಉಸಿರಾಟದ ತೊಂದರೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಯುವಕರು ತುತ್ತಾಗುತ್ತಿರುವುದು ವೈದ್ಯಕೀಯ ಲೋಕ ಚಿಂತಿಸುವಂತಾಗಿದೆ ಎಂದು ಕುಮಾರ್ ಆಸ್ಪತ್ರೆ ವೈದ್ಯ ಡಾ. ಜಿ.ಎಸ್. ಶ್ರೀಧರ್ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಒತ್ತಡಗಳಿಗೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ಯುವ ಸಮುದಾಯ  ಜಂಕ್ಫುಡ್ಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿರುವುದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದರು.

ಶ್ರೀರಂಗ ಆಸ್ಪತ್ರೆಯ ವೈದ್ಯ ಡಾ. ಜೆ.ಬಿ. ವಿವೇಚನ್ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿಗಳ ಪರಿಶ್ರಮ ಅರ್ಥ ಮಾಡಿಕೊಂಡು ಮೊಬೈಲ್ನಿಂದ ದೂರವಿರಿ. ಪುಸ್ತಕಗಳನ್ನು ಹೆಚ್ಚು ಓದುವ ಮೂಲಕ ಸದೃಢ ಮನಸ್ಥಿತಿ ಹೊಂದಬೇಕು. ಚಿಕ್ಕ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಮಾರ್ಗದರ್ಶನದಲ್ಲಿ ನಡೆದರೆ ಯಾವುದೇ ರೋಗ ರುಜಿನಗಳಿಗೆ ಒಳಗಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸರಸ್ವತಿ ಕೆ.ಬಿ. ಮಾತನಾಡಿ, ಸಾವು ಮತ್ತು ಬದುಕಿನ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳು ಅರಿತಾಗ ಮಾತ್ರ ಒತ್ತಡಗಳಿಂದ ಮುಕ್ತಿ ಹೊಂದಬಹುದು. ಉತ್ತಮ ಆರೋಗ್ಯ ಬೇಕೆಂದರೆ ವಿದ್ಯಾರ್ಥಿಗಳು ಗುರಿ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದರೆ ಮುಂದಿನ ದಿನಗಳಲ್ಲಿ ಉತ್ತಮ ಜೀವನ ಮಾಡಬಹುದು ಎಂದು ಸಲಹೆ ನೀಡಿದರು.

ಈ ವೇಳೆ ಡಾ. ವೆಂಕಟಯ್ಯ ಮತ್ತು ಪ್ರೊ. ಈರಯ್ಯ, ಡಾ. ಹೊನ್ನಾಂಜನೇಯಡಾ.ಜಿಎಸ್, ಪ್ರೊ. ಭಾರತಿ, ಹಳೆ ವಿದ್ಯಾರ್ಥಿ ಸಂಘದ ಲಿಖಿತ್ ಗೌಡ, ಸಿ.ಎಸ್. ಪುನೀತ್ ಕುಮಾರ್, ಶಂಕರ್ (ಶಿರಾ) ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಅಪ್ಪು ಸ್ಮರಣೆಯೊಂದಿಗೆ ಬೆಂಗಳೂರಿನಲ್ಲಿ ನಡೆಯಲಿದೆ ಪ್ರತಿಷ್ಠಿತ “ಸೈಮಾ” ಅವಾರ್ಡ್ಸ್ 2022

0

Publicstory/prajayoga

//ಫಿಲ್ಮ್ ಬೀಟ್//

ಬೆಂಗಳೂರು : ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ “ಸೈಮಾ” ಅವಾರ್ಡ್ಸ್ 2022  ಈ ಬಾರಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೆನಪಿನೊಂದಿಗೆ ಸೆಪ್ಟೆಂಬರ್ 10 ಹಾಗೂ 11ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “SIIMA” 2022 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲು ಖುಷಿಯಾಗುತ್ತಿದೆ. ಇದು ಹತ್ತನೇ ವರ್ಷದ ಪ್ರಶಸ್ತಿ ಸಮಾರಂಭ ಕೂಡ. ಬೆಂಗಳೂರಿನಲ್ಲಿ “ಸೈಮಾ” ಅವಾರ್ಡ್ಸ್ ನಡೆಸಲು ಎರಡು ಪ್ರಮುಖ ಕಾರಣಗಳಿದೆ. ಒಂದು ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ‌. ಮತ್ತೊಂದು ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾ ದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ ಹಾಗಾಗಿ ಈ ಬಾರಿ ಬೆಂಗಳೂರನ್ನೇ  ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ಬಂದಿರುವ ಗಣ್ಯರಿಗೆ ಹಾಗೂ ಪ್ರಾಯೋಜಕರಿಗೆ ಧನ್ಯವಾದ “ಸೈಮಾ” ಅವಾರ್ಡ್ಸ್ ನ ಮುಖ್ಯಸ್ಥೆ ಬೃಂದಾ ಪ್ರಸಾದ್ ತಿಳಿಸಿದರು.

ಒಂದು ಪ್ರಶಸ್ತಿ ಸಮಾರಂಭವನ್ನು ಹತ್ತುವರ್ಷಗಳ ಕಾಲ ನಡೆಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ನಾನು ಮೊದಲು ಇದರ ಉಸ್ತುವಾರಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಈ ಬಾರಿ ಹತ್ತನೇ ವರ್ಷದ “ಸೈಮಾ” ಅವಾರ್ಡ್ಸ್ ನನಗೆ ಪ್ರಿಯವಾದ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖಷಿ ಎನ್ನುತ್ತಾರೆ ಖ್ಯಾತ ನಟ ರಾಣಾ ದಗ್ಗುಬಾಟಿ.

ನನಗೆ “ಸೈಮಾ” ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾ ಗೆ ಹೋಗಿದ್ದು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ  ಪ್ರಶಸ್ತಿ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ನಿಮ್ಮೆಲ್ಲರಿಗೂ ನಮ್ಮೂರಿಗೆ ಆತ್ಮೀಯ ಸ್ವಾಗತ. ಪದೇಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ‌ ಎಂದು ನಟ ಡಾಲಿ ಧನಂಜಯ ಹಾರೈಸಿದರು.

ನನಗೆ ಬೆಂಗಳೂರು ತುಂಬಾ ಇಷ್ಟ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಹಲವು ದಿನಗಳನ್ನು ಇಲ್ಲೇ ಕಳೆದಿದ್ದೇನೆ. ಈ ಬಾರಿ ಅಪ್ಪು ಅವರ ಸ್ಮರಣೆಯೊಂದಿಗೆ ಈ ಸಮಾರಂಭ ನಡೆಯುತ್ತಿದೆ ಎಂದು ನಟಿ ಶಾನ್ವಿ ಶ್ರೀವಾಸ್ತವ್ ತಿಳಿಸಿದರು.

ನಟಿಯರಾದ ಫರಿಯಾ ಅಬ್ದುಲ್ಲಾ,  ಶ್ರೀಲೀಲ ಹಾಗೂ ಕೆಲವು ಪ್ರಾಯೋಜಕರು ಸಹ “ಸೈಮಾ” ಇದ್ದರು

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ವಿರೋಧಿಸಿ ಪ್ರತಿಭಟನೆ

Publicstory/prajayoga

ತಿಪಟೂರು: ಭಾರೀ ಮಳೆಯಿಂದ ಕೊಡಗಿನಲ್ಲಿ ಮನೆ ಕಳೆದುಕೊಂಡವರ ಮನೆಗಳಿಗೆ ಭೇಟಿ ನೀಡಿದ್ದ  ಸಿದ್ದರಾಮಯ್ಯ ನವರ ಕಾರಿನ ಮೇಲೆ ಮೊಟ್ಟೆ ಎಸೆದ ಹಿನ್ನೆಲೆ  ರಾಜ್ಯದಲ್ಲಿ ಕಳೆದ 4ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದು ಇಂದು ನಗರದ ಸಿಂಗ್ರಿ ನಂಜಪ್ಪ  ವೃತ್ತದಲ್ಲಿ  ಪ್ರತಿಭಟನೆ ನಡೆಯಿತು.

ಈ ವೇಳೆ ತಿಪಟೂರು ಮಾಜಿ ಶಾಸಕ ಕೆ ಷಡಕ್ಷರಿ ಮಾತನಾಡಿ, ಬಿಜೆಪಿ ಸರಕಾರದಿಂದ ಬಡ ಜನರಿಗೆ ಆಗಿರುವ ತೊಂದರೆ ಹೇಳತೀರದು. ಇವರು ಅಧಿಕಾರದ ಆಸೆಗಾಗಿ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುತ್ತಾ ಭಾಷಣಗಳನ್ನು ಮಾಡುತ್ತಾ ಸರ್ಕಾರವನ್ನು ನಡೆಸುತ್ತಾರೆ. ರಾಜ್ಯಾದಾದ್ಯಂತ ಜನರು ಅತಿವೃಷ್ಟಿಯಿಂದ ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಜನರಿಗೆ ನೆರವಾಗಬೇಕಿದ್ದ ಸರ್ಕಾರ ರಾಜಕೀಯ ಮಾಡುತ್ತಾ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಂತರಾಜು ಅಲ್ಪಸಂಖ್ಯಾತರ ಮುಖಂಡ ಸೈಫುಲ್ಲಾ ಬಜಗೂರು ಮಂಜುನಾಥ್, ಸುನೀಲ್, ಕಾಂತರಾಜು ಲೋಕ್ ನಾಥ್ ಸಿಂಗ್ ಮತ್ತಿತರರು ಭಾಗಿಯಾಗಿದ್ದರು.

ವರ್ಕೌಟ್ ಮಾಡುವಾಗ ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಮೃತ

0

Publicstory/prajayoga

ಬೆಂಗಳೂರು : ಮುಖ್ಯಂಮತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಇಂದು ಬೆಳಿಗ್ಗೆ ಜಿಮ್‌ನಲ್ಲಿ ವರ್ಕೌಟ್ ಮಾಡುವ ವೇಳೆ ಹೊಳಿಮಠ ಅವರಿಗೆ ಎದೆನೋವು‌ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಯುನಿಟಿ ಲೈಫ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.

ಇವರು ವಿವಿಧ ಮಾಧ್ಯಮಗಳಲ್ಲಿ ಪತ್ರಕರ್ತಾರಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಎಲ್ಲರ ಗಮನ ಸೆಳೆದ ಸ್ಕೇಟಿಂಗ್ ರ್ಯಾಲಿ

Publicstory/prajayoga

ತುಮಕೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನ್ಯೂ ತುಮಕೂರು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಕ್ರೀಡಾ ಭಾರತಿ ವತಿಯಿಂದ ಭಾನುವಾರ ಸ್ಕೇಟಿಂಗ್ ರ್ಯಾಲಿ ನಡೆಯಿತು.

Sponsored

ನಗರದ ಎಸ್‌ಐಟಿ ಕಾಲೇಜಿನ ಮುಂಭಾಗದ ಗೇಟ್‌ನಲ್ಲಿ ಸ್ಕೇಟಿಂಗ್ ರ್ಯಾಲಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್. ರೇವಣ್ಣ ಅವರು ಚಾಲನೆ ನೀಡಿ ಮಾತನಾಡಿದ ಅವರು, ಸ್ಕೇಟಿಂಗ್ ಮಾಡುವುದು ಸುಲಭದ ಮಾತಲ್ಲ. ಇದು ಬಹಳ ಕಷ್ಟದ ಜಾಗಿಂಗ್. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆಸಿರುವ ಈ ಸ್ಕೇಟಿಂಗ್ ರ್ಯಾಲಿ ಯಶಸ್ವಿಯಾಗಲಿ ಎಂದು ಆಶಿಸಿದರು.
ನ್ಯೂ ತುಮಕೂರು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಧುಕುಮಾರ್ ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಸ್ಕೇಟಿಂಗ್ ಮಕ್ಕಳನ್ನು ಸದೃಢರನ್ನಾಗಿ ಮಾಡುತ್ತದೆ. ಈ ರ್ಯಾಲಿಯಲ್ಲಿ ಸುಮಾರು 350 ಮಕ್ಕಳು ಪಾಲ್ಗೊಂಡಿದ್ದಾರೆ ಎಂದರು. 

ಸ್ಕೇಟಿಂಗ್ ಕ್ರೀಡೆ ರೋಮಾಂಚನಕಾರಿಯಾಗಿದ್ದು, ರಸ್ತೆ ಮೇಲೆ ಮಕ್ಕಳು ಸ್ಕೇಟಿಂಗ್‌ನಲ್ಲಿ ಹೋಗಲು ಬಹಳ ಆಸಕ್ತರಾಗಿರುತ್ತಾರೆ ಎಂದ ಅವರು ಮುಂಬರುವ ದಿನಗಳಲ್ಲಿ ಸ್ಕೇಟಿಂಗ್ ಪಠ್ಯವಾಗಿಯೂ ಬರುತ್ತಿದೆ. ಹಾಗಾಗಿ ಪೋಷಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು. 

ಎಸ್‌ಐಟಿ ಕಾಲೇಜಿನ ಮುಂಭಾಗದ ಗೇಟ್‌ನಿಂದ ಆರಂಭವಾದ ಸ್ಕೇಟಿಂಗ್ ರ್ಯಾಲಿ ಬಿ.ಹೆಚ್. ರಸ್ತೆಯ ಮುಖೇನ ಬಿಜಿಎಸ್ ವೃತ್ತದವರೆಗೆ ಸುಮಾರು 2 ಕಿ.ಮೀ.ಗೂ ಅಧಿಕ ದೂರ ಕ್ರಮಿಸಿ ಮುಕ್ತಾಯಗೊಂಡಿತು.
ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ರ್ಯಾಲಿಯುದ್ದಕ್ಕೂ ಭಾರತ ಮಾತೆಗೆ ಜೈ ಎನ್ನುವ ಜೈಕಾರ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ರೂಪಾ ಶೆಟ್ಟಾಳಯ್ಯ, ನಗರಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮುನಿರಾಜು, ಅಸೋಸಿಯೇಷನ್ ಕಾರ್ಯದರ್ಶಿ ಲೋಕೇಶ್ವರಯ್ಯ, ನಾಗಕುಮಾರ್, ನಾಗಭೂಷಣ್, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

ಕೊಂಡವಾಡಿ ಚಂದ್ರಶೇಖರ್ ಅಭಿಮಾನಿಗಳಿಂದ ಆರೋಗ್ಯ ತಪಾಸಣಾ ಶಿಬಿರ

Publicstory/prajayoga

ಮಧುಗಿರಿ: ಗ್ರಾಮೀಣ ಭಾಗದ ಜನರ ಆರೋಗ್ಯ ತಪಾಸಣೆಗೆ ಉಚಿತ ಅರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗಲಿವೆಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

Sponsored

ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಕೊಂಡವಾಡಿ ಚಂದ್ರಶೇಖರ್ ಅಭಿಮಾನಿಗಳ ಬಳಗ, ತುಮುಲ್ ಹಾಗೂ ರೈತ ಮತ್ತು ನೌಕರರ ಕಲ್ಯಾಣ ಟ್ರಸ್ಟ್ ಆಯೋಜಿಸಿದ್ದ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು 

ಗ್ರಾಮೀಣ ಭಾಗದ ಜನರು ಆರೋಗ್ಯ ಕಾಪಾಡಿಕೊಳ್ಳಬೇಕು ಹಾಗೂ ಸಂಘ ಸಂಸ್ಥೆ ಮತ್ತು ಸರ್ಕಾರದಿಂದ ಬರುವ ಸವಲತ್ತಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಳೆದ ಮಾರ್ಚ್ ಅವಧಿಲ್ಲಿ ಮಧುಗಿರಿಯಲ್ಲಿ ಹಮ್ಮಿಕೊಂಡಿದ ಅರೋಗ್ಯ ಶಿಬಿರ ರೈತರಿಗೆ ಹೆಚ್ಚಿನ ಅನುಕೂಲವಾಗಿತ್ತು. ನಾನು ತುಮುಲ್ ಅಧ್ಯಕ್ಷನಾಗಿದ್ದ ಸಮಯದಲ್ಲಿ ಹತ್ತಾರು ರೈತ ಪರ ಯೋಜನೆಗಳನ್ನು ಹಮ್ಮಿಕೊಂಡಿದ್ದೆ. ಇದು ನನಗೆ ತೃಪ್ತಿ ತಂದಿದೆ. ಮುಂದಿನ ವಾರ ದೊಡ್ಡೇರಿ, ಕಸಬಾ, ಐ.ಡಿ ಹಳ್ಳಿಯಲ್ಲಿ ಈ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ  ಜಿಪಂ ಮಾಜಿ ಸದಸ್ಯ ಎಚ್.ಕೆಂಚಮಾರಯ್ಯ ಸೇರಿದಂತೆ ಮತ್ತಿತರರು ಇದ್ದರು.

ಶಿಬಿರದಲ್ಲಿ ಸುಮಾರು 2 ಸಾವಿರಕ್ಕು ಅಧಿಕ ಜನ ತಪಾಸಣೆಯಲ್ಲಿ ಭಾಗಿದ್ದರು, ಶಿಬಿರದಲ್ಲಿ ಸುಮಾರು 400 ಜನರಿಗೆ ಉಚಿತವಾಗಿ ಕನ್ನಡಕ, 100 ವಾಕರ್, 150 ವಾಕಿಂಗ್ ಸ್ಟಿಕ್ ಮತ್ತು 40 ಶ್ರವಣ ಸಾಧನವನ್ನು ವಿತರಣೆ ಮಾಡಲಾಯಿತು.

ನಾಳೆ ಜನಪದ ಯಕ್ಷಗಾನದಲ್ಲಿ
‘ರತಿ ಕಲ್ಯಾಣ’ ವಿಚಾರ ಸಂಕಿರಣ

Publicstory/prajayoga

ತುಮಕೂರು: ವಿಶ್ವವಿದ್ಯಾಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ (ಆ.22) ನಾಳೆ ಬೆಳಗ್ಗೆ 10ಗಂಟೆಗೆ ಕುಮಾರವ್ಯಾಸ ಅಧ್ಯಯನ ಪೀಠದಿಂದ ಜನಪದ ಯಕ್ಷಗಾನದಲ್ಲಿ ‘ರತಿ ಕಲ್ಯಾಣ’ದ ಚಿತ್ರಣ ಕುರಿತು ವಿಚಾರ ಸಂಕಿರಣ ಹಾಗೂ ಯಕ್ಷದೀವಿಗೆಯಿಂದ ಹಟ್ಟಿಯಂಗಡಿ ನಾರಾಯಣರಾಯರ ರಚಿತ ‘ರತಿ ಕಲ್ಯಾಣ ಯಕ್ಷಗಾನ’ ಪ್ರದರ್ಶನ ನಡೆಯಲಿದೆ.

ತುಮಕೂರು ವಿವಿಯ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ.ಪಿ.ಎಂ ಗಂಗಾಧರಯ್ಯ ಅಧ್ಯಕ್ಷತೆ ವಹಿಸಲಿದ್ದು,
ಮೈಸೂರು ಕ.ರಾ.ಮು.ವಿ ಯ ಪ್ರಾಧ್ಯಾಪಕ ಪ್ರೊ.ಎನ್.ಆರ್.ಚಂದ್ರೇಗೌಡ ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ತುಮಕೂರು ವಿವಿಯ ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ ಹಾಗೂ ತುಮಕೂರು ವಿವಿ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮಿ ಹಿರೇಂದ್ರ ಷಾ ಗೌರವ ಉಪಸ್ಥಿತಿ ಇರಲಿದ್ದಾರೆ.

ಕಾಮನ ಹಬ್ಬವನ್ನು ಆಚರಿಸುವುದು ಫಾಲ್ಗುಣ ಮಾಸದಲ್ಲಿ, ಸುಗ್ಗಿಗೆ ಹೊಂದಿಕೊಂಡ ಸಮಯ, ಫಸಲು ಮತ್ತು ಮನೆಗೆ ಹಿಗ್ಗು ತರುವ ಕಾಲ. ಪ್ರಕೃತಿ ಹಳೆಯದನ್ನು ಕಳಚಿಕೊಂಡು ಹೊಸತನದಿಂದ ಚಿಗುರಿಟ್ಟು ಹೂವಿಟ್ಟು, ತೂಗಿ ತೊನೆಯುವ ಕಾಲ. ರಾತ್ರಿಯ ಬೆಳದಿಂಗಳ ಮೋಡಿ ಅವರ್ಣನೀಯ ರಸಿಕತೆಗೆ ಕೊಡುಮಾಡುವ ಸಮಯ. ಪ್ರಕೃತಿಯಂತೆ ಮನುಷ್ಯರಿಗೂ ಹೊಸತನವನ್ನು ಜೀವನೋತ್ಸಾಹವನ್ನು ತಂದು ಕೊಡುವ ಹಾಗೂ ತುಂಬಿಕೊಡುವ ಉತ್ಸವ ಕಾಮನ ಹಬ್ಬ ಎಂದು ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ.ಎಂ.ಗಂಗಾಧರಯ್ಯ ರತಿ ಮನ್ಮಥರ ಬಗ್ಗೆ ಮಾಹಿತಿ ನೀಡಿದರು.

ಇಲ್ಲಿ ಹಾಡುವ ಗೀತೆಗಳು ಕಾಮನ ಹಾಡುಗಳೆಂದು ಪ್ರಸಿದ್ಧಿ. ಜತೆಗೆ ಇವನ್ನು ಹೋಳಿಯ ಹಾಡು ಎಂದೂ ಕರೆಯುವುದುಂಟು. ಕಾಮನ ಪೂಜೆ ಜಾನಪದ ವಿಶಿಷ್ಟ ಆಚರಣೆಯಲ್ಲಿ ಒಂದು ಹಾಗಾಗಿ ಕಾಮನ ಹಬ್ಬ ಆಧುನಿಕ ಕಾಲದಲ್ಲಿ ಹೊಸ ಮೆರುಗು ಪಡೆದುಕೊಂಡಿದೆ. ಪೌರಾಣಿಕ, ಯಕ್ಷಗಾನಗಳಲ್ಲಿ ರತಿ-ಮನ್ಮಥರ ಕಥೆ ರಂಗದ ಮೇಲೆ ಬಂದಿವೆ.ಪುರಾಣ ಹಿನ್ನೆಲೆಯಲ್ಲಿ ಕಾಮನ ಹುಟ್ಟು ಹಲವು ರೀತಿಯಲ್ಲಿದೆ. ಅಲ್ಲದೆ ಪುರಾಣಗಳಲ್ಲಿ, ಯಕ್ಷಗಾನದಲ್ಲಿ, ಜಾನಪದ ಕಲೆಗಳಲ್ಲಿ ಮೈದುಂಬಿ ಕೊಂಡಿದೆ. ಇವು ಈ ಕಾಲಘಟ್ಟದ ಯುವಜನರಿಗೆ ಅಗತ್ಯವಾಗಿ ಬೇಕಾದವು ಎಂದು ತಿಳಿಸಿದರು‌.