Saturday, September 7, 2024
Google search engine
Homeವಿದ್ಯಾ ಸಂಸ್ಥೆಸಂವಿಧಾನದ ಆಶಯದಂತೆ ನಡೆದರೆ ರಾಮರಾಜ್ಯ: ಡಾ.ಮಹೇಂದ್ರಪ್ಪ

ಸಂವಿಧಾನದ ಆಶಯದಂತೆ ನಡೆದರೆ ರಾಮರಾಜ್ಯ: ಡಾ.ಮಹೇಂದ್ರಪ್ಪ

Publicstory/prajayoga

ಶಿರಾ : ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆಯ ಕೇಂದ್ರೀಕೃತ ವ್ಯವಸ್ಥೆಯ ಬದಲಾಗಿ ವಿಕೇಂದ್ರಿಕರಣದ   ವ್ಯವಸ್ಥೆಯ ಮೂಲಕ ಸಂವಿಧಾನ ಆಶಯಗಳಿಗೆ ಬದ್ಧರಾಗಿ ನಡೆದರೆ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಪಿ.ಎಚ್.ಮಹೇಂದ್ರಪ್ಪ ಹೇಳಿದರು.

ನಗರದ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾತಂತ್ರ್ಯಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಇಂಡಿಯಾದಿಂದ ಭಾರತದೆಡೆಗೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಮೌಲ್ಯ ಪ್ರತಿಪಾದನೆ, ಸಮಾನತೆ, ಸಹಬಾಳ್ವೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ಆಶಯಗಳ ಪ್ರಜಾಸತ್ತಾತ್ಮಕ ನೆಲೆಯ ಭಾರತವನ್ನು ಇಂದು ಕಟ್ಟಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗಬೇಕು. ಭಾರತವು ವಿಶ್ವದಲ್ಲಿಯೇ ಬಹುಸಂಸ್ಕೃತಿ ಬಹುಭಾಷೆಗಳ ಐಕ್ಯತೆ, ವೈವಿಧ್ಯತೆ, ಸಹೋದರತೆಗಳಿಂದಾಗಿ ವಿಶೇಷವಾದ ಗೌರವ ಸ್ಥಾನಮಾನವನ್ನು ಪಡೆದುಕೊಂಡಿದೆ. ಅಂತೆಯೇ ಮುಂದುವರೆಯಬೇಕು ಎಂದರು.

ಡಾ.ತಿಮ್ಮನಹಳ್ಳಿ ವೇಣಗೋಪಾಲ್ ಮಾತನಾಡಿ, ಭಾರತದ ಭವಿಷ್ಯ ರೂಪುಗೊಳ್ಳುತ್ತಿರುವುದು ಶಾಲಾ ತರಗತಿಗಳಲ್ಲಿ. ಹಾಗಾಗಿ ಕ್ಲಾಸ್‌ರೂಂಗಳು ನಿಜವಾದ ಜ್ಞಾನದೇಗುಲಗಳಾಗಿವೆ. ನಮಗೆ ಬೇಕಾಗಿರುವುದು ಮಹಾತ್ಮ ಗಾಂಧಿಜಿ, ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದರಂತಹ ಮಹನೀಯರು ಬಯಸಿದ ಭಾರತವೇ ಹೊರತು, ಏಕರೂಪಿ ವ್ಯವಸ್ಥೆಯ ಭಾರತವಲ್ಲ. ಕುವೆಂಪು ಹೇಳಿದಂತೆ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿತ, ಉಪನ್ಯಾಸಕಿ ವಿಜಯಮ್ಮ, ರಂಗನಾಥ್, ಶಿವಕುಮಾರ್, ಹೆಂದೊರೆ ಶಿವಣ್ಣ, ಶಿವರಾಜು ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?