Wednesday, December 4, 2024
Google search engine
Homeವಿದ್ಯಾ ಸಂಸ್ಥೆನಾಳೆ ಜನಪದ ಯಕ್ಷಗಾನದಲ್ಲಿ'ರತಿ ಕಲ್ಯಾಣ' ವಿಚಾರ ಸಂಕಿರಣ

ನಾಳೆ ಜನಪದ ಯಕ್ಷಗಾನದಲ್ಲಿ
‘ರತಿ ಕಲ್ಯಾಣ’ ವಿಚಾರ ಸಂಕಿರಣ

Publicstory/prajayoga

ತುಮಕೂರು: ವಿಶ್ವವಿದ್ಯಾಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ (ಆ.22) ನಾಳೆ ಬೆಳಗ್ಗೆ 10ಗಂಟೆಗೆ ಕುಮಾರವ್ಯಾಸ ಅಧ್ಯಯನ ಪೀಠದಿಂದ ಜನಪದ ಯಕ್ಷಗಾನದಲ್ಲಿ ‘ರತಿ ಕಲ್ಯಾಣ’ದ ಚಿತ್ರಣ ಕುರಿತು ವಿಚಾರ ಸಂಕಿರಣ ಹಾಗೂ ಯಕ್ಷದೀವಿಗೆಯಿಂದ ಹಟ್ಟಿಯಂಗಡಿ ನಾರಾಯಣರಾಯರ ರಚಿತ ‘ರತಿ ಕಲ್ಯಾಣ ಯಕ್ಷಗಾನ’ ಪ್ರದರ್ಶನ ನಡೆಯಲಿದೆ.

ತುಮಕೂರು ವಿವಿಯ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ.ಪಿ.ಎಂ ಗಂಗಾಧರಯ್ಯ ಅಧ್ಯಕ್ಷತೆ ವಹಿಸಲಿದ್ದು,
ಮೈಸೂರು ಕ.ರಾ.ಮು.ವಿ ಯ ಪ್ರಾಧ್ಯಾಪಕ ಪ್ರೊ.ಎನ್.ಆರ್.ಚಂದ್ರೇಗೌಡ ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ತುಮಕೂರು ವಿವಿಯ ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ ಹಾಗೂ ತುಮಕೂರು ವಿವಿ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮಿ ಹಿರೇಂದ್ರ ಷಾ ಗೌರವ ಉಪಸ್ಥಿತಿ ಇರಲಿದ್ದಾರೆ.

ಕಾಮನ ಹಬ್ಬವನ್ನು ಆಚರಿಸುವುದು ಫಾಲ್ಗುಣ ಮಾಸದಲ್ಲಿ, ಸುಗ್ಗಿಗೆ ಹೊಂದಿಕೊಂಡ ಸಮಯ, ಫಸಲು ಮತ್ತು ಮನೆಗೆ ಹಿಗ್ಗು ತರುವ ಕಾಲ. ಪ್ರಕೃತಿ ಹಳೆಯದನ್ನು ಕಳಚಿಕೊಂಡು ಹೊಸತನದಿಂದ ಚಿಗುರಿಟ್ಟು ಹೂವಿಟ್ಟು, ತೂಗಿ ತೊನೆಯುವ ಕಾಲ. ರಾತ್ರಿಯ ಬೆಳದಿಂಗಳ ಮೋಡಿ ಅವರ್ಣನೀಯ ರಸಿಕತೆಗೆ ಕೊಡುಮಾಡುವ ಸಮಯ. ಪ್ರಕೃತಿಯಂತೆ ಮನುಷ್ಯರಿಗೂ ಹೊಸತನವನ್ನು ಜೀವನೋತ್ಸಾಹವನ್ನು ತಂದು ಕೊಡುವ ಹಾಗೂ ತುಂಬಿಕೊಡುವ ಉತ್ಸವ ಕಾಮನ ಹಬ್ಬ ಎಂದು ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ.ಎಂ.ಗಂಗಾಧರಯ್ಯ ರತಿ ಮನ್ಮಥರ ಬಗ್ಗೆ ಮಾಹಿತಿ ನೀಡಿದರು.

ಇಲ್ಲಿ ಹಾಡುವ ಗೀತೆಗಳು ಕಾಮನ ಹಾಡುಗಳೆಂದು ಪ್ರಸಿದ್ಧಿ. ಜತೆಗೆ ಇವನ್ನು ಹೋಳಿಯ ಹಾಡು ಎಂದೂ ಕರೆಯುವುದುಂಟು. ಕಾಮನ ಪೂಜೆ ಜಾನಪದ ವಿಶಿಷ್ಟ ಆಚರಣೆಯಲ್ಲಿ ಒಂದು ಹಾಗಾಗಿ ಕಾಮನ ಹಬ್ಬ ಆಧುನಿಕ ಕಾಲದಲ್ಲಿ ಹೊಸ ಮೆರುಗು ಪಡೆದುಕೊಂಡಿದೆ. ಪೌರಾಣಿಕ, ಯಕ್ಷಗಾನಗಳಲ್ಲಿ ರತಿ-ಮನ್ಮಥರ ಕಥೆ ರಂಗದ ಮೇಲೆ ಬಂದಿವೆ.ಪುರಾಣ ಹಿನ್ನೆಲೆಯಲ್ಲಿ ಕಾಮನ ಹುಟ್ಟು ಹಲವು ರೀತಿಯಲ್ಲಿದೆ. ಅಲ್ಲದೆ ಪುರಾಣಗಳಲ್ಲಿ, ಯಕ್ಷಗಾನದಲ್ಲಿ, ಜಾನಪದ ಕಲೆಗಳಲ್ಲಿ ಮೈದುಂಬಿ ಕೊಂಡಿದೆ. ಇವು ಈ ಕಾಲಘಟ್ಟದ ಯುವಜನರಿಗೆ ಅಗತ್ಯವಾಗಿ ಬೇಕಾದವು ಎಂದು ತಿಳಿಸಿದರು‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?