ಲೇಖನ ಓದುವ ಮುನ್ನ ಸ್ತ್ರೋತ್ರ ಪಠಿಸಿ
#ದ್ವಾದಶ_ಜ್ಯೋತಿರ್ಲಿಂಗ_ಸ್ತೋತ್ರಂ
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಂ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಂ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಂ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ।
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ॥
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ ।
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥
ಶಿವರಾತ್ರಿಗೆ ವಿಶೇಷ ಮಹತ್ವವಿದೆ. ಸಂಕ್ರಾಂತಿಯ ನಂತರ ಬರಯವುದೇ ಶಿವರಾತ್ರಿ. ಶಿವ ಭಕ್ತರ ಪ್ರಿಯ, ಭಕ್ತರೆಂದರೆ ಶಿವನಿಗೆ ವಿಶೇಷ ಪ್ರೀತಿ. ಭಕ್ತಿಯೇ ಪ್ರಧಾನ. ಉಳಿದೆಲ್ಲವೂ ಗೌಣ. ಶಿವನಿಗೆ ಭಕ್ತರಲ್ಲಿ ಬೇಧವಿಲ್ಲ, ಹಾಗೆಯೇ ಪೂಜೆಯಲ್ಲೂ. ಹೀಗೆ ಪೂಜೆ ಮಾಡಬೇಕು ಎಂದು ಶಿವ ಕೇಳುವುದಿಲ್ಲ. ಗಾಢ ಭಕ್ತಿಯನ್ನು ತೋರಿಸುವುದೇ ಶಿವನಿಗೆ ಮಾಡುವ ಪೂಜೆಯ ದಾನ.
ಶಿವನಿಲ್ಲದ ಜಾಗವೇ ಇಲ್ಲ ಎನ್ನಬಹುದೇನೋ. ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕ್ಕೆ ಅಳಿವಿಲ್ಲ. ಶಿವನ ವೈಭವಗಳಿಗೆ, ಶಕ್ತಿ, ಸಾಹಸಗಳಿಗೆ ಕೊನೆ ಮೊದಲಿಲ್ಲ. ಆದರೂ ಶಿವ ಇಷ್ಟವಾಗುವುದು ಭಕ್ತರನ್ನು ಕೇಳುವುದನ್ನು ಕೊಡುವ ಕರುಣಾಮಯಿ ಎಂದು. ಹಾಗಾದರೇ, ಹೇಗೆಲ್ಲ ಪೂಜಿಸಿದರೆ ಶಿವ ಮೆಚ್ಚುತ್ತಾರೆ. ಅದರಲ್ಲೂ ಶಿವರಾತ್ರಿಯ ಪೂಜಾ ವಿಧಾನಗಳು ಹೇಗಿರಬೇಕು.
ಶಿವರಾತ್ರಿಯ ಇಡೀ ದಿನ ಶಿವನನ್ನು ಜಪಿಸುತ್ತಾ ಕಾಲ ಕಳೆಯಬೇಕು. ಶಿವರಾತ್ರಿಯಂದು ಜಾಗರಣೆಗೆ ಹೆಚ್ಚು ಮಹತ್ವವಿದೆ. ಅಂದರೆ ರಾತ್ರಿಯೆಲ್ಲ ಜಾಗರಣೆಯ ಜತೆಜತೇಗೆ ಶಿವನನ್ನು ದ್ಯಾನಿಸಬೇಕು. ಶಿವನ ಲೀಲೆಗಳ ಕುರಿತಾದ ಸಾಹಿತ್ಯವನ್ನು ಓದಬೇಕು. ಬೆಳಿಗ್ಗೆ, ರಾತ್ರಿ ಶಿವನ ದೇವಸ್ಥಾನಗಳಿಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಬೇಕು. ದೇವಸ್ಥಾನಗಳಲ್ಲಿ ಹೋಗಲು ಆಗದವರೂ ಮನೆಯಲ್ಲಿಯೇ ಶಾಂತವಾಗಿಟ್ಟುಕೊಂಡು ಪೂಜೆಯನ್ನು ಸಲ್ಲಿಸಬೇಕು.
ಏನೆಲ್ಲ ಇಷ್ಟ
ಭಕ್ತರು ಶಿವನಿಗೆ ಹಾಲಿನ ಅಭಿಷೇಕ, ಹಣ್ಣುಗಳ ನೇವೈದ್ಯ, ಶಿವನಿಗೆ ಮೀಸಲಾದ ಮಂತ್ರಗಳನ್ನು ಜಪಿಸುತ್ತಾ ಪೂಜೆ ಮಾಡಬೇಕು.
ಧಾರ್ಮಿಕ ಗ್ರಂಥಗಳ ಪ್ರಕಾರ ಶಿವನಿಗೆ ಪೂಜೆ ಸಲ್ಲಿಸುವಾಗ ಕೆಲವು ವಿಧಾನಗಳನ್ನು ಅನುಸರಿಸಬೇಕು. ಆಗ ಶಿವನು ಸಂತುಷ್ಟನಾಗುತ್ತಾನೆ ಎಂದು ಹೇಳುತ್ತಾರೆ.
ಮುಂಜಾನೆಯೇ ಶಿವನಿಗೆ ಬಿಲ್ವಪತ್ರೆ, ಹಣ್ಣು, ಧಾತುರಾ ಹಾಲಿನ ಅಭಿಷೇಕ ಅರ್ಪಿಸುವರು. ನೀರು, ಹಣ್ಣು ಸೇವಿಸಿ ಇಡೀ ದಿನ ಉಪಾವಾಸ ಇರುವರು.
ಉಪಾವಾಸದ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು. ಶಿವರಾತ್ರಿ ದಿನ ಇಡೀ ದಿನ ಉಪವಾಸ ಮಾಡುವರು. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಉರಿದ ಅಕ್ಕಿಯ ತಂಬಿಟ್ಟು (ತಮ್ಟ) ಮಾಡಿ ರಾತ್ರಿ ಪೂಜೆಯ ಬಳಿಗ ತಮ್ಟದ ಜತೆಗೆ ಬಾಳೆಹಣ್ಣು, ತುಪ್ಪ ಬೆರೆಸಿಕೊಂಡು ಕಲಸಿ ತಿನ್ನುವವರು. ಬೆಳಿಗ್ಗೆ ವಿವಿಧ ಬಗೆಯ ಭಕ್ಷ್ಯಗಳನ್ನು ದೇವರಿಗೆ ನೇವೇದ್ಯ ಇಡಲಾಗುತ್ತದೆ. ನಂತರ ಮನೆಯವರೆಲ್ಲರೂ ಸೇರಿ ಊಟ ಮಾಡುತ್ತಾರೆ.
ಸಿದ್ದಗಂಗಾ ಮಠದಲ್ಲಿ…
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ದಿನ ಎಲ್ಲ ಮಕ್ಕಳಿಗೆ ತಮ್ಟ ನೀಡುತ್ತಾರೆ. ಹತ್ತಿರ ಹತ್ತಿರ 25 ಸಾವಿರದವರೆಗೂ ತಮ್ಟದ ಹುಂಡೆಗಳನ್ನು (ಅದು ದೊಡ್ಡವು) ಕಟ್ಟುವುದು ಇಲ್ಲನ ವಿಶೇಷ. ಈ ದಿನ ಜಾತ್ರೆಯ ಕಾರಣ ಸಿದ್ದಗಂಗೆಯಲ್ಲಿ ಶಿವರಾತ್ರಿ ಪೂಜೆಗೆ ವಿಶೇಷ ಮಹತ್ವ.
ಸಿದ್ದಗಂಗೆ ಅಲ್ಲದೇ, ಶಿವಗಂಗೆಯಲ್ಲೂ ಈ ದಿನ ಪೂಜೆಗೆ ವಿಶೇಷ ಮಹತ್ವವಿದೆ. ಕೋಲಾರ ಜಿಲ್ಲೆಯ ಕೋಟೆಲಿಂಗೇಶ್ವರದಲ್ಲೂ ವಿಶೇಷ ಪೂಜೆ ಮಾಡುತ್ತಾರೆ.
ಬೆಳಿಗ್ಗೆ ಸ್ನಾನ ಹೀಗಿರಲಿ:
ಬೆಳಿಗ್ಗೆ ಸ್ನಾನ ಮಾಡುವಾಗ ನೀರಿಗೆ ಕಪ್ಪು ಎಳ್ಳು ಹಾಕಿ ಸ್ನಾನ ಮಾಡಿದರೆ ಆತ್ಮ, ಭಾವ ಶುದ್ಧಿಯಾಗಲಿದೆ. ಕೆಲವರು ಗಂಗಾ ನದಿಯಲ್ಲಿ ಸ್ನಾನ ಮಾಡಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವರು.
ರಾತ್ರಿ ಪೂಜೆಗೆ ಹೆಚ್ಚು ಮಹತ್ವ: ಶಿವರಾತ್ರಿ ದಿನ ಬೆಳಿಗ್ಗೆ ಪೂಜೆಗಿಂತಲೂ ರಾತ್ರಿ ಪೂಜೆಗೆ ಹೆಚ್ಚು ಮಹತ್ವವಿದೆ. ರಾತ್ರಿ ನಾಲ್ಕು ಆಯಮಾದಲ್ಲೂ ಶಿವನಿಗೆ ಪೂಜೆ ನಡೆಸಬೇಕು., ಉಪವಾಸ ವ್ರತ ಕೈಗೊಳ್ಳುವವರು ಉಪವಾಸ ಮುರಿಯಬಾರದು,
ಸಂಕಲ್ಪ ಈಡೇರುವುದು
ಶಿವರಾತ್ರಿ ದಿನ ವಿಶೇಷವಾಗಿ ದೇವರಿಗೆ ಭಕ್ತಿಯಿಂದ ಪೂಜೆ ಮಾಡಿ ಸಂಕಲ್ಪ ಮಾಡಿದರೆ ಆ ಸಂಕಲ್ಪ ಈಡೇರುತ್ತದೆ.