Thursday, December 4, 2025
Google search engine
Home Blog Page 17

ಆನ್ ಲೈನ್ ವಂಚನೆಗೆ ಇಲ್ಲಿದೆ ರಕ್ಷಣೆ


ತುಮಕೂರು: ಆನ್ ಲೈನ್ ಖರೀದಿಯಲ್ಲಿ ಮೋಸ ಹೆಚ್ಚುತ್ತಿದ್ದು, ಮೋಸ, ವಂಚನೆಗೊಳಗಾಗುವ ಗ್ರಾಹಕರು ಗ್ರಾಹಕರ ವೇದಿಕೆಯಲ್ಲಿ ದೂರು ನೀಡಿ ಸುಲಭವಾಗಿ ಪರಿಹಾರ, ಹಣ ವಾಪಸ್ ಪಡೆಯಬಹುದಾಗಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ತುಮಕೂರು ಜಿಲ್ಲಾಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ ತಿಳಿಸಿದರು.


ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಮತ್ತು ಗ್ರಾಹಕ ಹಕ್ಕುಗಳ ದಿನಾಚರಣೆಯಲ್ಲಿ ಗ್ರಾಹಕರ ಹಕ್ಕುಗಳು, ಬಾಧ್ಯತೆಗಳು ಮತ್ತು ಪರಿಹಾರ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು.

ವಿಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಸುಫಿಯಾ, ನ್ಯಾಯಾಧೀಶೆ ನೂರುನ್ನೀಸಾ, ಪ್ರಾಂಶುಪಾಲ ಡಾ.ಎಸ್.ರಮೇಶ್, ಮಮತಾ, ತಬಸಮ್ ಇದ್ದಾರೆ

ಗ್ರಾಹಕರಿಗೆ ತಮ್ಮ ಹಕ್ಕುಗಳ ಕುರಿತು ತಿಳುವಳಿಕೆ ಕಡಿಮೆ ಇದೆ. ಯಾವುದೇ ಮಾರಾಟಗಾರ ಮೋಸ, ವಂಚನೆ ಮಾಡಿದಾಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ನ್ಯಾಯವು ಸುಲಭ ಹಾಗೂ ಬೇಗ ಸಿಗುತ್ತದೆ. ನ್ಯಾಯಾಲಯದ ಖರ್ಚು ವೆಚ್ಚ ಸಹ ಕಡಿಮೆ ಇರುತ್ತದೆ ಎಂದರು.


ಗ್ರಾಹಕರಿಗೆ ಇರುವ ಹಕ್ಕು ಭಾದ್ಯತೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಲು ಗ್ರಾಹಕರು ಹಿಂದು ಮುಂದು ನೋಡಬಾರದು ಎಂದು ಸಲಹೆ ನೀಡಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ. ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರ ಅನುಭವ ಮಂಟಪ ಈಗಿನ ಸಂಸತ್ ನಂತೆ ಕೆಲಸ ನಿರ್ವಹಿಸುತ್ತಿತ್ತು. ಬಸವಣ್ಣನವರ ವಚನಗಳಲ್ಲೇ ಕಾನೂನು ಸಂಹಿಯೆತ ಲಕ್ಷಣಗಳನ್ನು ಕಾಣಬಹುದಾಗಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯುಲೂ ಬೇಡ ವಚನದ ಸಾಲುಗಳನ್ನು ಉಲ್ಲೇಖಿಸಿ ಉದಾಹರಿಸಿದರು.


ಪ್ರಾಂಶುಪಾಲ ಡಾ. ಎಸ್. ರಮೇಶ್ ಮಾತನಾಡಿ. ಬಸವಣ್ಣವರ ಕಾಯಕತತ್ವ, ಮಾನವೀಯತೆ. ಪ್ರಜಾಪ್ರಭುತ್ವದ ಮೌಲ್ಯಗಳು ಇಡೀ ಜಗತ್ತಿನ ದಾರಿದೀಪಗಳಂತೆ ಕೆಲಸ ಮಾಡುತ್ತಿವೆ ಎಂದರು.


ಸುಫಿಯಾ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಸುಫಿಯಾ, ಉಪ ಪ್ರಾಂಶುಪಾಲ ಟಿ.ಓಬಯ್ಯ, ಸಹ ಪ್ರಾಧ್ಯಾಪಕರಾದ ಮಮತಾ, ಕಾಶಿಪ್, ಗ್ರಂಥಪಾಲಕ ಸುಬ್ಬು, ಸೂಪರಿಡಿಂಡ್ ಟೆಂಟ್ ಎಂಎಂಟಿ ಜಗದೀಶ್ ಇತರು ಇದ್ದರು.

ಆನ್ ಲೈನ್ ವಂಚನೆ ಗ್ರಾಹಕರ ವೇದಿಕೆ ರಕ್ಷಣೆ

0

ತುಮಕೂರು: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಹಿವಾಟು ಹೆಚ್ಚುತ್ತಿದ್ದು, ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಇಂಥ ವಂಚನೆಗಳ ವಿರುದ್ಧಗ

ಕಾಂಗ್ರೆಸ್ ಗೆ ಪಾಠ ಕಲಿಸಲು ತೆಂಗು ಬೆಳೆಗಾರರಿಗೆ ಶಾಸಕ ಕೃಷ್ಣಪ್ಪ ಕರೆ

0

ತೆಂಗು ಬೆಳೆಗಾರರಿಗೆ ಬೆಲೆ ಕೊಡದ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆಯಲ್ಲಿ ಪಾಠ ಕಲಿಸಿ, ಎಂ.ಟಿ.ಕೃಷ್ಣಪ್ಪ ರೈತರಿಗೆ ಕರೆ

ತುರುವೇಕೆರೆ: ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸದೆ ರಾಜ್ಯದ ತೆಂಗು ಬೆಳೆಗಾರರನ್ನು ಕಡೆಗಣಿಸಿರುವ ಕಾಂಗ್ರೆಸ್ ಪಕ್ಕಕ್ಕೆ ಮುಂಬರುವ ಲೋಕಸಬಾ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ರೈತರಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು

ರಾಜ್ಯದ 13 ಜಿಲ್ಲೆಗಳಲ್ಲಿ ತೆಂಗು ಬೆಳೆಯುವ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ. ಕೊಬ್ಬರಿಗೆ ಕನಿಷ್ಠ 15 ಸಾವಿರ ರೂಪಾಯಿಗಳನ್ನಾದರೂ ಬೆಂಬಲ ಬೆಲೆಯಾಗಿ ಘೋಷಿಸಬೇಕೆಂದು ಪ್ರತಿಭಟನೆ, ಚಳವಳಿ, ಹೋರಾಟ ಮಾಡಿದರೂ ಬಜೆಟ್ ನಲ್ಲಿ ಕೊಬ್ಬರಿ ಬೆಳೆಗಾರರ ಪರವಾಗಿ ಯಾವುದೇ ಘೋಷಣೆ ಮಾಡದೆ ರೈತ ವಿರೋದಿ ಸರ್ಕಾರವಾಗಿದೆ.

ರಾಜ್ಯದಲ್ಲಿ ರೈತರ ಹೋರಾಟಗಳಿಗೂ ಬೆಲೆ ನೀಡದ ಭಂಡ ಸರ್ಕಾರವಾಗಿದೆ. ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂಬ ವಿಚಾರವನ್ನಿಟ್ಟುಕೊಂಡು ವಿಧಾನಸೌಧದ ಅಧಿವೇಶನದಲ್ಲಿ ಗಂಟೆಗಟ್ಟಲೆ ಮಾತನಾಡಿ ಕ್ವಿಂಟಾಲ್ ಕೊಬ್ಬರಿಗೆ 15000 ರೂಪಾಯಿಗಳು ಘೋಷಿಸಬೇಕು ಎಂದು ಒತ್ತಾಯಿಸಿದೆ. ಸರ್ಕಾ ಇದಕ್ಕೂ ಬೆಲೆ ಕೊಡಲಿಲ್ಲ. ಕೊಬ್ಬರಿ ಬೆಲೆ ಕುಸಿತದ ಬಗ್ಗೆ ನಾನು ಹೋರಾಟ ಹಮ್ಮಿಕೊಳ್ಳುವ ಚಿಂತನೆ ನಡೆಸುತ್ತಿರುವ ಹೊತ್ತಿಗೆ ಬಜೆಟ್ ನಲ್ಲಿ ನೀಡಿರುವ ಭರವಸೆಯಿಂದ ಸುಮ್ಮನಾದೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ 15ಸಾವಿರ ನಿಗದಿಮಾಡಲು ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದರು.

ಇದೇ ಸರ್ಕಾರ ತನ್ನ ಪಕ್ಷದ ಶಾಸಕರಿಗೆ ಒಂದು ಅನುಧಾನ ಉಳಿದ ಪಕ್ಷದ ಶಾಸಕರಿಗೆ ಒಂದು ಅನುದಾನ ನೀಡುವ ಮೂಲಕ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆಂದು ಕಿಡಿಕಾರಿದರು.

ಸರ್ಕಾರ ಕೇವಲ 5 ಗ್ಯಾರಂಟಿಗಳಿಗೆ ಹಣಹೊಂದಿಸುವುದರಲ್ಲೇ ಸಕ್ರಿಯವಾಗಿ ರಾಜ್ಯದ ಅಭಿವೃದ್ಧಿಯನ್ನೇ ಮೈಮರೆತಿದೆ. ಗ್ಯಾರಂಟಿಗಳಿಂದ ರಾಜ್ಯದ ಜನತೆ ಬೆಸತ್ತಿದ್ದು ಅವುಗಳಿಗೆ ಮಾನ್ಯತೆಯೇ ಇಲ್ಲವಾಗಿದೆ. ಕಾಂಗ್ರೆಸ್ಸಿಗರುಅಂದುಕೊಂಡಂತೆ ಮುಂದಿನ ಯಾವುದೇ ಚುನಾವಣೆಯಲ್ಲಿ ಗ್ಯಾರಂಟಿಗಳು ಕೆಲಸ ಮಾಡವು.

ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ವೇಳೆ ಬುದ್ದಿ ಕಲಿಸಬೇಕು. ಇಲ್ಲವಾದರೆ ರಾಜ್ಯದ ರೈತರಿಗೆ ಉಳಿಗಾಲವಿಲ್ಲ ಎಂಬ ಅರಿವು ರೈತರಿಗೆ ಗೊತ್ತಾಗಬೇಕು. ಲೋಕಸಭಾ ಚುನಾವಣೆಯಲ್ಲಿ ಎಲ್ಲ ರೈತರು ಒಗ್ಗಟ್ಟಾಗಿ ರೈತ ವಿರೋಧಿ ಕಾಂಗ್ರೆಸ್ ಅನ್ನು ನಾಮಾವಶೇಷ ಮಾಡಬೇಕೆಂದು ಪ್ರತಿಪಾದಿಸಿದರು.

ಹೇಮಾವತಿ ಎಕ್ಸ್ ಫ್ರೆಸ್ ಲಿಂಕ್ ಕೆನಾಲ್ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಆದರೆ ತುರುವೇಕೆರೆ ಕ್ಷೇತ್ರದ ಪಾಲಿನ ನೀರಿಗೆ ಅನ್ಯಾಯವಾದರೆ ನಾನು ಕೈಕಟ್ಟಿ ಕೂರುವವನಲ್ಲ. ಇದು ತಾಲ್ಲೂಕಿನ ರೈತರ ಅಳಿವು ಉಳಿವಿನ ಪ್ರಶ್ನೆ ಕ್ಷೇತ್ರದ ರೈತರಿಗಾಗಿ ಯಾವ ಹೋರಾಟಕ್ಕೂ ಸಿದ್ದ ಎಂದು ಎಚ್ಚರಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಾಜು, ಮುಖಂಡರಾದ ಪರಮೇಶ್,ವಿಜೇಂದ್ರಕುಮಾರ್, ವೆಂಕಟಾಪುರ ಯೋಗೀಶ್, ಮಂಗಿಗುಪ್ಪೆಬಸವರಾಜು, ರಂಗಸ್ವಾಮಿ, ಪುಟ್ಟರಾಜು ಇದ್ದರು.

ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಬಸ್

ತುರುವೇಕೆರೆ: ಫೆ. 27 ರ ಮಂಗಳವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಸರ್ಕಾರಿ ನೌಕರರು ಭಾಗವಹಿಸಬೇಕೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜುಮುನಿಯೂರು ಮನವಿ ಮಾಡಿಕೊಂಡಿದ್ದಾರೆ.

ಕಳೆದ ಏಳು ವರ್ಷಗಳ ನಂತರ ನಡೆಯುತ್ತಿರುವ ಸರ್ಕಾರಿ ನೌಕರರ ಸಮ್ಮೇಳನ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ವಿಶೇಷವಾಗಿ ತಾಲ್ಲೂಕಿನ ಶಾಸಕರಾಗಿರುವ ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದ ಎಂ.ಟಿ.ಕೃಷ್ಣಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನೆಮ್ಮದಿಯ ಬದುಕಿಗಾಗಿ ನಮ್ಮ ಬೇಡಿಕೆಗಳು ಎಂಬ ಘೋಷಣೆಯಡಿ ಹಳೆ ಪಿಂಚಣಿ ಯೋಜನೆ ಮರು ಜಾರಿ, 7 ನೇ ವೇತನ ಆಯೋಗದ ವರದಿಯ ಅನುಷ್ಠಾನ ಹಾಗು ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಂತಹ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಹಾಗಾಗಿ ಎಲ್ಲಾ ಸರ್ಕಾರಿ ನೌಕರರು ಈ ಮಹಾ ಸಮ್ಮೇಳನದಲ್ಲಿ ಭಾಗವಹಿಸಬೇಕು.

ಮಂಗಳವಾರ ನಡೆಯುವ ಮಹಾ ಸಮ್ಮೇಳನಕ್ಕೆ ತೆರಳಲು ತಾಲ್ಲೂಕಿನಿಂದ 10 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಗೆ ಎಲ್ಲ ನೌಕರರು ಸಂಘದ ಕಚೇರಿ ಬಳಿ ಆಗಮಿಸಲು ಕೋರಿದ್ದಾರೆ.

ಸಮ್ಮೇಳನಕ್ಕೆ ಆಗಮಿಸುವವರಿಗೆ ಉಪಾಹಾರದ ವ್ಯವಸ್ಥೆ ಸಹ ಇರಲಿದೆ. ದಂಡಿನಶಿವರ ಮತ್ತು ಮಾಯಸಂದ್ರದಿಂದ ಬರುವ ನೌಕರರಿಗೆ ಅಲ್ಲಿಯೇ ಬಸ್ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನಕ್ಕೆ ಭಾಗವಹಿಸುವ ನೌಕರ ಬಂಧುಗಳಿಗೆ ಓ.ಓ.ಡಿ ಸೌಲಭ್ಯವೂ ಇದೆ. ಹಾಗಾಗಿ ಎಲ್ಲಾ ಸರ್ಕಾರಿ ನೌಕರರು ಮಹಾ ಸಮ್ಮೇಳನಕ್ಕೆ ಆಗಮಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ಅಥ್ಲೆಟಿಕ್: 3 ಚಿನ್ನದ ಪದಕ ಗೆದ್ದ ಶ್ರೀನಿವಾಸ್

0

Pavagada/Tipturu: ಥೈಲ್ಯಾಂಡ್ ಅಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟ -2024
ಈಚೆಗೆ ಥೈಲ್ಯಾಂಡ್ ನ ‘Sakhon Nakon’ ನಗರದ ರಾಜಭಟ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಥೈಲ್ಯಾಂಡ್ ಅಂತರ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಕಲ್ಪತರು ನಾಡು ತುಮಕೂರು ಜಿಲ್ಲೆಯ ಗಡಿನಾಡಾದ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆಯ ನಮ್ಮೆಲ್ಲರ ಹೆಮ್ಮೆಯ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶ್ರೀ ಶ್ರೀನಿವಾಸ ಭೈರಪ್ಪ, ಇವರು ವಿವಿಧ ಸ್ಪರ್ಧೆಗಳಾದ ತ್ರಿವಿಧ ಜಿಗಿತ ಸ್ಪರ್ಧೆ, 4X100 ಮೀ.ರಿಲೇ ಓಟದ ಸ್ಪರ್ಧೆ ಮತ್ತು 4X400 ಮೀ.ರಿಲೇ ಓಟದ ಸ್ಪರ್ಧೆಗಳಲ್ಲಿ ಮೂರು ಚಿನ್ನದ ಪದಕಗಳು ಹಾಗೂ 400 ಮೀ. ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಹಾಗೂ 4X100 ಮೀ.ಮಿಶ್ರ ರಿಲೇ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕಗಳನ್ನು ಪಡೆದು ಭಾರತ ದೇಶಕ್ಕೆ ಹಾಗೂ ನಮ್ಮ ಕರುನಾಡಿಗೆ ಕೀರ್ತಿ ತಂದಿರುತ್ತಾರೆ.

ಶ್ರೀನಿವಾಸ.ಬಿ ರವರು ಯ.ನಾ.ಹೊಸಕೋಟೆ ಗ್ರಾಮದ ಮೂಲ ನಿವಾಸಿಗಳಾಗಿದ್ದು, ಪ್ರಸ್ತುತ ಇವರು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಯಂ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೇಶಕ್ಕೆ ಕೀರ್ತಿಯನ್ನು ತಂದ ಭಾರತಾಂಭೆಯ ಹೆಮ್ಮೆಯ ಪುತ್ರನಿಗೆ ಎಲ್ಲರ ಪರವಾಗಿ ತುಮಕೂರು ಗೆಳೆಯರ ಬಳಗದಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್ ಗೆಲುವಿನ ವಿಶ್ವಾಸ

ತುರುವೇಕೆರೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಎಲ್ಲ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಿ, ರಾಜ್ಯದ ಜನರ, ಶಿಕ್ಷಕರ ವಿಶ್ವಾಸವನ್ನು ಗಳಿಸಿರುವ ಹಿನ್ನೆಲೆಯಲ್ಲಿ ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾದ ಫಲಿತಾಂಶ ಬರಲಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಮುಂದೆ ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು ಹಲವು ವರ್ಷಗಳಿಂದ ಕ್ಷೇತ್ರದಲ್ಲಿನ ಸರ್ಕಾರಿ, ಅನುಧಾನಿತ ಹಾಗು ಅನುದಾನ ರಹಿತ ಶಾಲೆಗಳ ಶಿಕ್ಷಕರ ಮೂಲಭೂತ ಸಮಸ್ಯೆಗಳಾದ ನೂತನ ಪಿಂಚಣಿ ಯೋಜನೆಗೆ ಬದಲಾಗಿ ಹಳೆಪಿಂಚಣಿ ಜಾರಿ ಮಾಡುವುದು, 7ನೇ ವೇತನ ಆಯೋಗ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಣೆ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಮಕ್ಕಳ ಹಾಜರಾತಿ 25 : 25ರ ಅನುಪಾತದ ನಿಯಮ ಸಡಿಲಿಸುವುದು, 2016ರಿಂದ ಇಲ್ಲಿಯವರೆಗೆ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು. ಸರ್ಕಾರಿ ನೌಕರರಂತೆ ಅನುದಾನಿತ ಶಾಲೆಗಳ ಶಿಕ್ಷಕರಿಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಒದಗಿಸುವುದು ಸೇರಿದಂತೆ ಸಾಕಷ್ಟು ಬೇಡಿಕೆಗಳ ಈಡೇರಿಕೆಗೆ ಶಿಕ್ಷಕರ ಪರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇನೆ.

ಆದರೂ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲನ್ನುಕಂಡಿದ್ದೆ. ಈಗಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ನಾಯಕರು ಕಳೆದ 18 ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದರೂ ಇಲ್ಲಿಯವರೆಗೂ ಒಂದೂ ಈಡೇರಿಲ್ಲ. ಅಲ್ಲದೆ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದಾಗ ಶಿಕ್ಷಕರ ಸಮಸ್ಯೆಗಳ ಬಗ್ಗೆ ತುಟಿಬಿಚ್ಚದವರು ಈಗಿನ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ ಎಂದು ಹೆಸರು ಹೇಳದೇ ಎಂಎಲ್ ಸಿ ವೈ.ಎ.ನಾರಾಯಣ ಸ್ವಾಮಿಯನ್ನು ಕುಟುಕಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಶಿಕ್ಷಕ ಸ್ನೇಹಿ ಹಾಗು ಜನಪರ ಆಡಳಿತದಿಂದ ಈಗಾಗಲೇ ಬೆಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸುವ ಮೂಲಕ ಐದೂ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗಳೇ ಗೆಲ್ಲುವ ಶುಭ ಸೂಚನೆ ನೀಡಿದ್ದಾರೆ.

ಈಗಾಗಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದವರು ಕೂಡಲೇ ನಮೂನೆ 19ರ ಅರ್ಜಿಯನ್ನು ಭರ್ತಿ ಮಾಡಿ ತಾಲ್ಲೂಕು ಕಚೇರಿಗೆ ನೀಡಿ ಎಂದ ಅವರು ಕಳೆದ ಸಲ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದೆ. ಈ ಬಾರಿ ಶಿಕ್ಷಕರಲ್ಲಿ ನನ್ನ ಪರವಾದ ಅನುಕಂಪದ ಅಲೆ ಇದ್ದು ಜೂನ್ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಶಿಕ್ಷಕರು ನನಗೆ ಮೊದಲೆ ಆದ್ಯತೆಯನ್ನು ನೀಡಿ ತಮ್ಮೆಲ್ಲರ ಸಮಸ್ಯೆಗೆ ದನಿಯಾಗಲು ಮತ ನೀಡಿ ಎಂದ ವಿನಂತಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಳಾಲ ನಾಗರಾಜು, ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಮುಖಂಡರುಗಳಾದ ನಂಜುಂಡಯ್ಯ, ಜೋಗಿಪಾಳ್ಯ ಶಿವರಾಜು, ಗುರುದತ್, ಗವಿರಂಗಪ್ಪ, ಪ್ರಕಾಶ್. ಮಹೇಂದ್ರ, ಶಿಕ್ಷಕ ಪ್ರಕಾಶ್ ಇನ್ನಿತರರು ಇದ್ದರು.

ಫೆ.27ರ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮುಖ್ಯ ಅತಿಥಿ

ತುರುವೇಕೆರೆ: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ ಮಹಾ ಸಮ್ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.27ರಂದು ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕಿನಿಂದ ಒಂದು ಸಾವಿರಕ್ಕೂ ಹೆಚ್ಚು ನೌಕರರು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದು ಸಕರ್ಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಂರಾಜುಮುನಿಯೂರು ತಿಳಿಸಿದ್ದಾರೆ.

ಪಟ್ಟಣದಲ್ಲಿರುವ ವಿವಿಧ ಇಲಾಖೆಗಳ ನೌಕರರಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಿತರಿಸಿ ಮಾತನಾಡಿದ ಅವರು ಕಳೆದ ಏಳು ವರ್ಷಗಳ ನಂತರ ಸರ್ಕಾರಿ ನೌಕರರ ಸಮ್ಮೇಳವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಶಾಸಕರು ಹಾಗು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಎಂ.ಟಿ.ಕೃಷ್ಣಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಕೇಂದ್ರಬಿಂದುವಾಗಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ಹಕ್ಕು ನೆಮ್ಮದಿಯ ಬದುಕಿಗಾಗಿ ನಮ್ಮ ಬೇಡಿಕೆಗಳು ಎಂಬ ಘೋಷಣೆಯಡಿ ಹಳೆಪಿಂಚಣಿ ಯೋಜನೆ ಮರು ಜಾರಿ, 7ನೇತನ ಆಯೋಗದ ವರದಿಯ ಅನುಷ್ಠಾನ ಹಾಗು ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಂತಹ ಬೇಡಿಕೆಗಳ ಈಡೇರಿಗೆ ಮನವಿಸಲಾಗುತ್ತದೆ. ಈ ವೇಳೆ 4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಭಾಗವಹಿಸಲಿದ್ದಾರೆ. ಆದ್ದರಿಂದ ತಾಲ್ಲೂಕಿನ ಸಮಸ್ಥ ನೌಕರ ಬಂಧುಗಳು ಸಮ್ಮೇಳನಕ್ಕೆ ಭಾಗವಹಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ನಮ್ಮ ಹಕ್ಕುಗಳನ್ನು ಪಡೆಯಬೇಕಿದೆ ಎಂದ ಅವರು.

ತಾಲ್ಲೂಕಿನ ವಿವಿಧ ಇಲಾಖೆಗಳ ನೌಕರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ. ಫೆ.27ರ ಬೆಳಗ್ಗೆ 6 ಗಂಟೆಗೆ ಎಲ್ಲ ನೌಕರರು ಸಂಘದ ಕಚೇರಿ ಮುಂದೆ ಬನ್ನಿ. ಇಲ್ಲಿಯೇ ತಿಂಡಿ ಮತ್ತು ಬಸ್ ಸೌಕರ್ಯ ಇರಲಿದೆ. ಇದೇ ರೀತಿ ದಂಡಿನಶಿವರ ಮತ್ತು ಮಾಯಸಂದ್ರದಿಂದ ಬರುವ ನೌಕರರಿಗೆ ಅಲ್ಲಿಯೇ ಬಸ್ ಬರಲಿದೆ. ಸಮ್ಮೇಳನಕ್ಕೆ ಭಾಗವಹಿಸುವ ನೌಕರ ಬಂಧುಗಳಿಗೆ ಓ.ಓ.ಡಿ ಸೌಲಭ್ಯವಿದೆ. ಈ ಬಾರಿ ಹೆಚ್ಚಿನ ಸಂಖ್ಯೆ ಮಹಿಳಾ ನೌಕರರು ಭಾಗವಹಿಸುವ ನಿರೀಕ್ಷೆ ಇದೆ.

ಫೆ.21 ಮತ್ತು 22ರಂದು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಕರ್ಾರಿ ನೌಕರರ ಜಿಲ್ಲಾ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಇರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಎರಡೂ ಕಾರ್ಯಕ್ರಮಕ್ಕೆ ತಾಲ್ಲೂಕಿನ ನೌಕರರು ಆಗಮಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಸಂಘದ ಖಜಾಂಚಿ ನಾಗರಾಜು ಎಚ್.ಸಿ, ರಾಜ್ಯಪರಿಷತ್ ಸದಸ್ಯ ಎಂ.ವಿ.ಗಿಡ್ಡೇಗೌಡ, ಉಪಾಧ್ಯಕ್ಷರಾದ ವೀರಪ್ರಸನ್ನ ಚಂದ್ರಹಾಸ ಮತ್ತು ಬಾಲಾಜಿ, ಪ್ರಾಥಮಿಕ ಜಿಲ್ಲಾ ಕೋಶಾಧ್ಯಕ್ಷ ಷಣ್ಮುಖಪ್ಪ, ಸಾವಿತ್ರಿಭಾಪುಲೆ ಸಂಘದ ತಾಲ್ಲೂಕು ಅಧ್ಯಕ್ಷೆ ಎಂ.ಟಿ.ಭವ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ.ರಾಘವೇಂಧ್ರ, ಜಿಲ್ಲಾ ಸಕರ್ಾರಿ ನೌಕರರ ಸಂಘದ ಉಪಾಧ್ಯಕ್ಷ ಸಾ.ಸಿ.ದೇವರಾಜು, ಪ್ರೌಢ ಶಾಲಾ ಶಿಕ್ಷಕರ ಸಂಘದ ಗುರುರಾಜ್, ಸಂಘದ ಪದಾಧಿಕಾರಿ ರಂಗರಾಮಯ್ಯ ಇನ್ನಿತರರು ಇದ್ದರು.

ಸಾಲ ಮರುಪಾವತಿಸಿ: ರಾಮೇಗೌಡ ಮನವಿ

0

ತುರುವೇಕೆರೆ: ಪಟ್ಟಣದ ದಿ ಟೌನ್ ಸಹಕಾರ ಸಂಘದದಿಂದ ಸಾಲ ಪಡೆದಿರುವ ಎಲ್ಲ ಷೇರುದಾರರು ಕೂಡಲೇ ತಮ್ಮ ಸಾಲವನ್ನು ಮರುಪಾವತಿ ಮಾಡಿ ಸಂಘದ ಅಭಿವೃದ್ದಿಗೆ ಸಹಕರಿಸಬೇಕೆಂದು ನೂತನ ನಿರ್ದೇಶಕ ಹಾಗು ನಾಗರಿಕ ವೇದಿಕೆಯ ಎಚ್.ಆರ್.ರಾಮೇಗೌಡ ಮನವಿ ಮಾಡಿದರು.

ಪಟ್ಟಣದ ಆರ್.ಕೆ.ರೆಸಿಡೆನ್ಸಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ದಿ ಟೌನ್ ಸಹಕಾರ ಸಂಘದಲ್ಲಿ 3 ಸಾವಿರ ಷೇರುದಾರರಿದ್ದು ಸಂಘದ ಹಿತದೃಷ್ಟಿಯಿಂದ ಎಲ್ಲ ಷೇರುಗಳನ್ನು ನವೀಕರಣ ಮಾಡಬೇಕೇಂದು ಚಿಂತಿಸಿದ್ದು ಇದರಿಂದ ಒಬ್ಬ ಷೇರುದಾರರಿಗೆ 950 ರೂಪಾಯಿಗಳಂತೆ ಸುಮಾರು 27 ಲಕ್ಷ ರೂಪಾಯಿಗಳು ಸಂಘಕ್ಕೆ ಆದಾಯವಾಗಿ ಬರಲಿದೆ.

ಇದರಿಂದಾಗಿ ಈಗಾಗಲೇ ಸಂಘದಲ್ಲಿ ಇಟ್ಟಿರುವ ಠೇಣಿದಾರರಿಗೆ ಠೇವಣಿ ನೀಡಲು ಅನುಕೂಲವಾಗಲಿದೆ. ಈಗಿರುವ éಷೇರುಗಳ ಜೊತೆಗೆ ಹೊಸದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಷೇರುಗಳನ್ನು ಹಾಕಿಸುವ ಕೆಲಸವೂ ಶೀಘ್ರವೇ ಆರಂಭಗೊಳ್ಳಲಿದೆ. ಸಹಕಾರಿ ಸಂಘದ ಸದಸ್ಯರು, ಷೇರುದಾರರ ಅನುಮತಿ ಪಡೆದು ಸಂಘದ ಜಾಗದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಿ ಅದರಿಂದ ಹೆಚ್ಚಿನ ಬಾಡಿಗೆ ಬರುವಂತೆ ಮಾಡಲು ಯೋಜಿಸಲಾಗಿದೆ ಅದೂ ಜರೂರಾಗಿ ಚಾಲನೆಗೆ ಬರಲಿದೆ.

ಬಹಳ ಮುಖ್ಯವಾಗಿ ಈ ಬಾರಿ ಸಮಾನಮನಸ್ಕರ 13 ಸದಸ್ಯರು ನಾಗರಿಕ ವೇದಿಕೆಯಿಂದ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಸ್ಪಧರ್ಿಸಿದ್ದು ಇದೇ ಮೊದಲ ಬಾರಿಗೆ ಸಂಘದ éಷೇರುದಾರರು ನಾಗರಿಕ ವೇದಿಕೆಯ ಸದಸ್ಯರಿಗೆ ಸಹಕಾರಿ ಸೇವೆ ಮಾಡಲು ಆಶೀವರ್ಾದ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ ಅವರೆಲ್ಲರಿಗೂ ಅಭಾರಿಯಾಗಿದ್ದೇವೆ ಎಂದ ಅವರು ನಮ್ಮ ಸಂಘವನ್ನು ಉತ್ತಮ ರೀತಿ ಬೆಳೆಸಲು ಹಾಗು ಷೇರುದಾರರಿಗೆ ಸಂಘದ ಸೌಲಭ್ಯ ಕಲ್ಪಿಸಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸುದ್ದಿ ಗೋಷ್ಠಿಯಲ್ಲಿ ನೂತನ ನಿರ್ದೇಶಕರಾದ ಎನ್.ಆರ್.ಸುರೇಶ್, ಜೆ.ಚಂದ್ರಶೇಖರ್, ಮಲ್ಲಿಕಾಜರ್ುನ್, ಸಿ.ಆರ್.ರಂಗನಾಥ್, ಡಿ.ಎಚ್.ಪರಮಶಿವಯ್ಯ, ಟಿ.ಎಲ್.ಕಾಂತರಾಜು, ಟಿ.ಎಂ.ಮಂಜಣ್ಣ, ಸಿ.ಆನಂದಕುಮಾರ್, ಜಾಫರ್ ಶರೀಪ್, ಎನ್.ಜಿ.ಶಿವರಾಜು, ವಿದ್ಯಾಕೃಷ್ಣ, ಅನುಸೂಯ, ಹೊಟೇಲ್ ಗಣೇಶ್, ಮಲ್ಲಿಕಾರ್ಜುನ, ಅಭಿ ಇದ್ದರು.

ನಾಗರಿಕ ವೇದಿಕೆ ತೆಕ್ಕೆಗೆ ತುರುವೇಕೆರೆ ದಿ ಟೌನ್ ಸಹಕಾರ ಸಂಘದ ಆಡಳಿತ ಮಂಡಳಿ

ತುರುವೇಕೆರೆ: ಪಟ್ಟಣದ ದಿ ಟೌನ್ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಾಗರಿಕ ವೇದಿಕೆ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ.

ಸಹಕಾರ ಸಂಘದ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳು ನಾಗರಿಕ ವೇದಿಕೆಯ ತೆಕ್ಕೆಗೆ ಬಂದರೆ ಉಳಿದ 2 ಸ್ಥಾನಗಳು ತಾಳ್ಕೆರೆ ಸುಬ್ರಹ್ಮಣ್ಯಂ ವೇದಿಕೆಯ ಪಾಲಾಗಿವೆ.

ಸಂಘದ ಆಡಳಿತ ಮಂಡಳಿಗೆಯ 13 ಸ್ಥಾನಗಳಿಗಾಗಿ 27 ಮಂದಿ ಸ್ಪರ್ಧಿಸಿದ್ದರು. ಅದರಲ್ಲಿ ಸಾಮಾನ್ಯ 7, ಮಹಿಳಾ ಮೀಸಲು 2, ಹಿಂದುಳಿದ ವರ್ಗ ಎ ಮತ್ತು ಬಿ, ಪರಿಶಿಷ್ಠ ಜಾತಿ, ಪರಿಶಿಷ್ಠ ಜಾತಿಗೆ ತಲಾ ಒಂದು ಸ್ಥಾನ ಮೀಸಲಾಗಿತ್ತು.

ಇವುಗಳ ಪೈಕಿ ಸಾಮಾನ್ಯ ವರ್ಗದಿಂದ ಎನ್.ಆರ್.ಸುರೇಶ್ (664) ಮತಗಳು, ಎಚ್.ಆರ್.ರಾಮೇಗೌಡ (593), ಟಿ.ಎನ್.ಶಿವರಾಜ್ (534), ಯಜಮಾನ್ ಟಿ.ಪಿ.ಮಹೇಶ್ (512), ಜೆ.ಚಂದ್ರಶೇಖರ್ (508), ಟಿ.ಎಂ.ಮಂಜಣ್ಣ (488), ಸಿ.ಎನ್.ಮಲ್ಲಿಕಾರ್ಜುನ್ (479) ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಮಹಿಳಾ ಮೀಸಲು ಕ್ಷೇತ್ರದಲ್ಲಿ ಅನುಸೂಯ (516), ವಿದ್ಯಾಕೃಷ್ಣ (437) ಮತಗಳನ್ನುಗಳಿಸಿ ಜಯಶಾಲಿಯಾದರು. ಹಿಂದುಳಿದ ಪ್ರ ವರ್ಗ ಎ ಯಿಂದ ಸಿ.ಆನಂದ್ ಕುಮಾರ್ (508) ಮತಗಳನ್ನು ಗಳಿಸಿದರೆ, ಹಿಂದುಳಿದ ಪ್ರವರ್ಗ ಬಿ ಯಿಂದ ಸ್ಪರ್ಧಿಸಿದ್ದ ಟಿ.ಆರ್.ರಂಗನಾಥ್ (451) ಮತಗಳನ್ನು ಗಳಿಸಿ ಜಯಶಾಲಿಯಾದರು.

ಪರಿಶಿಷ್ಠ ಪಂಗಡದಿಂದ ಟಿ.ಎಲ್.ಕಾಂತರಾಜ್ 406 ಮತಗಳನ್ನು, ಪರಿಶಿಷ್ಠ ಜಾತಿಯಿಂದ ಎನ್.ಬಿ.ಶಿವಯ್ಯ (ಬಡಾವಣೆ ಶಿವಣ್ಣ) 427 ಮತಗಳನ್ನು ಪಡೆಯುವ ಮೂಲಕ ದಿ.ಟೌನ್ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದರು.

ನಾಗರಿಕ ವೇದಿಕೆಯ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ಪಟ್ಟಣದ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ದಿ.ಟೌನ್ ಸಹಕಾರ ಸಂಘದಲ್ಲಿ ಒಟ್ಟು 1138 ಮಂದಿ ಷೇರುದಾರರು ಇದ್ದರು. ಇವರ ಪೈಕಿ 948 ಮಂದಿ ಮತ ಚಲಾವಣೆ ಮಾಡಿದರು. ಒಟ್ಟು ಶೆಕಡಾ 83.30 ರಷ್ಟು ಮತದಾನವಾಗಿತ್ತು.

ಪ್ರೀತಿಯಲ್ಲಿ ಸುಖವಿದೆಯೇ?!

0

ಪ್ರೀತಿ ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಒಂದು ರೀತಿಯ ಸಂತೋಷ ಭಾವ ಮೂಡುತ್ತದೆ. ಯಾರಿಗೆ ತಾನೆ ಪ್ರೀತಿ ಎಂದರೆ ಇಷ್ಟವಿಲ್ಲ ಹೇಳಿ?

ಅದು ಒಂದು ರೀತಿಯ ಉನ್ಮತ್ತ ಭಾವನೆಗೆ ಒಳಪಡಿಸುತ್ತದೆ. ಜಗತ್ತಿನ ಹೊರ ರೂಪಗಳು ಪ್ರೀತಿಯ ಕಣ್ಣಿಗೆ ಕುರುಡಾಗುತ್ತದೆ, ಪ್ರೀತಿ ಎಂದಾಕ್ಷಣ ಹುಡುಗಿ ಮಾತ್ರ ನೆನಪಾಗುವುದು ಸಾಮಾನ್ಯ. ಆದ್ದರಿಂದಲೇ ಹೇಳಿರುವುದು ಪ್ರೀತಿ ಕುರುಡು ಎಂದು.

, ಅದು ನಮ್ಮ ಸುತ್ತಮುತ್ತಲಿರುವ ಅನಂತ ಅಪರೂಪದ ವೈಭವಗಳನ್ನು ನೋಡದಂತೆ ಮಾಡುತ್ತದೆ. ಇವತ್ತಿಗೆ ಪ್ರೀತಿಯನ್ನು ಹುಡುಗ ಹುಡುಗಿಗೆ ಮಾತ್ರ ನೀಡಬೇಕು ಎಂತಲೋ ಉಪಭಾವಗಳೆದ್ದಿರಬಹುದು, ಆದರೆ ನಮ್ಮ ಜಗತ್ತು ಜಿ. ಎಸ್ ಶಿವರುದ್ರಪ್ಪನವರ ಪ್ರೀತಿ ಇಲ್ಲದ ಮೇಲೆ ಕವಿತೆಯ ಸಾಲುಗಳನ್ನು ಒಮ್ಮೆ ಗಮನಿಸಬಾರದೆ. ಒಂದು ಹೂ ಅರಳುವಲ್ಲಿ, ಕಾಲೇಜಿಗೆ ತಯಾರಾಗುವಲ್ಲಿ, ಪರೀಕ್ಷೆ ಬರೆಯುವಲ್ಲಿ, ಚಳಿಯನ್ನು ಬಿಸಿಲನ್ನು ಅನುಭವಿಸುವಲ್ಲಿ, ಊಟ ಮಾಡುವಲ್ಲಿ ಕಷ್ಟ- ಸುಖದಲ್ಲಿ ಜೀವನದ ಪ್ರತಿಯೊಂದರಲ್ಲಿಯೂ ಪ್ರೀತಿಯನ್ನು ಕಾಣಬಾರದೆ. ಪ್ರೀತಿಯ ವಿಶಾಲದೃಷ್ಟಿಯನ್ನು ಅರಿಯದೆ ಕೇವಲ ಯಾರಿಗೋ ಒಬ್ಬರಿಗೆ ಸೀಮಿತ ಮಾಡಿದರೆ ಅದೇ ಪ್ರೀತಿಯ ಸಾವಲ್ಲವೇ.

ಇಂದಿನ ಯುವ ಸಮುದಾಯಕ್ಕೆ ಪ್ರೀತಿ ಮಾಡುವುದಕ್ಕೂ ಬರುತ್ತಿಲ್ಲ, ಯಾರೋ ಒಬ್ಬರಿಗಾಗಿ ತಮ್ಮ ಬಾಳಿನ ಪ್ರೀತಿ ಸ್ವಾರಸ್ಯತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಪ್ರೀತಿಯಲ್ಲಿ ಸುಖವಿದೆ ಆದರೆ ಅದನ್ನು ಒಬ್ಬರಿಗಾಗಿ ಸಾಯಿಸದಿದ್ದಾಗ ಮಾತ್ರ, ಎಲ್ಲರದಲ್ಲೂ ಪ್ರೀತಿ ಸೇರಿಸಿ ಆಸ್ವಾದಿಸುವ ಸರಳ ಸಾರ್ಥಕ ಜೀವನಕ್ಕಾಗಿ ಪ್ರೀತಿಯನ್ನು ಸಮರ್ಪಿಸಿ.


ಚರಣ್ ರಾಜ್. ಆರ್
ದ್ವಿತೀಯ ಬಿ.ಎ
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ತಿಪಟೂರು.
ತುಮಕೂರು ಜಿಲ್ಲೆ.