ತುರುವೇಕೆರೆ: ಪಟ್ಟಣದ ದಿ ಟೌನ್ ಸಹಕಾರ ಸಂಘದದಿಂದ ಸಾಲ ಪಡೆದಿರುವ ಎಲ್ಲ ಷೇರುದಾರರು ಕೂಡಲೇ ತಮ್ಮ ಸಾಲವನ್ನು ಮರುಪಾವತಿ ಮಾಡಿ ಸಂಘದ ಅಭಿವೃದ್ದಿಗೆ ಸಹಕರಿಸಬೇಕೆಂದು ನೂತನ ನಿರ್ದೇಶಕ ಹಾಗು ನಾಗರಿಕ ವೇದಿಕೆಯ ಎಚ್.ಆರ್.ರಾಮೇಗೌಡ ಮನವಿ ಮಾಡಿದರು.
ಪಟ್ಟಣದ ಆರ್.ಕೆ.ರೆಸಿಡೆನ್ಸಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ದಿ ಟೌನ್ ಸಹಕಾರ ಸಂಘದಲ್ಲಿ 3 ಸಾವಿರ ಷೇರುದಾರರಿದ್ದು ಸಂಘದ ಹಿತದೃಷ್ಟಿಯಿಂದ ಎಲ್ಲ ಷೇರುಗಳನ್ನು ನವೀಕರಣ ಮಾಡಬೇಕೇಂದು ಚಿಂತಿಸಿದ್ದು ಇದರಿಂದ ಒಬ್ಬ ಷೇರುದಾರರಿಗೆ 950 ರೂಪಾಯಿಗಳಂತೆ ಸುಮಾರು 27 ಲಕ್ಷ ರೂಪಾಯಿಗಳು ಸಂಘಕ್ಕೆ ಆದಾಯವಾಗಿ ಬರಲಿದೆ.
ಇದರಿಂದಾಗಿ ಈಗಾಗಲೇ ಸಂಘದಲ್ಲಿ ಇಟ್ಟಿರುವ ಠೇಣಿದಾರರಿಗೆ ಠೇವಣಿ ನೀಡಲು ಅನುಕೂಲವಾಗಲಿದೆ. ಈಗಿರುವ éಷೇರುಗಳ ಜೊತೆಗೆ ಹೊಸದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಷೇರುಗಳನ್ನು ಹಾಕಿಸುವ ಕೆಲಸವೂ ಶೀಘ್ರವೇ ಆರಂಭಗೊಳ್ಳಲಿದೆ. ಸಹಕಾರಿ ಸಂಘದ ಸದಸ್ಯರು, ಷೇರುದಾರರ ಅನುಮತಿ ಪಡೆದು ಸಂಘದ ಜಾಗದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಿ ಅದರಿಂದ ಹೆಚ್ಚಿನ ಬಾಡಿಗೆ ಬರುವಂತೆ ಮಾಡಲು ಯೋಜಿಸಲಾಗಿದೆ ಅದೂ ಜರೂರಾಗಿ ಚಾಲನೆಗೆ ಬರಲಿದೆ.
ಬಹಳ ಮುಖ್ಯವಾಗಿ ಈ ಬಾರಿ ಸಮಾನಮನಸ್ಕರ 13 ಸದಸ್ಯರು ನಾಗರಿಕ ವೇದಿಕೆಯಿಂದ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಸ್ಪಧರ್ಿಸಿದ್ದು ಇದೇ ಮೊದಲ ಬಾರಿಗೆ ಸಂಘದ éಷೇರುದಾರರು ನಾಗರಿಕ ವೇದಿಕೆಯ ಸದಸ್ಯರಿಗೆ ಸಹಕಾರಿ ಸೇವೆ ಮಾಡಲು ಆಶೀವರ್ಾದ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ ಅವರೆಲ್ಲರಿಗೂ ಅಭಾರಿಯಾಗಿದ್ದೇವೆ ಎಂದ ಅವರು ನಮ್ಮ ಸಂಘವನ್ನು ಉತ್ತಮ ರೀತಿ ಬೆಳೆಸಲು ಹಾಗು ಷೇರುದಾರರಿಗೆ ಸಂಘದ ಸೌಲಭ್ಯ ಕಲ್ಪಿಸಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ನೂತನ ನಿರ್ದೇಶಕರಾದ ಎನ್.ಆರ್.ಸುರೇಶ್, ಜೆ.ಚಂದ್ರಶೇಖರ್, ಮಲ್ಲಿಕಾಜರ್ುನ್, ಸಿ.ಆರ್.ರಂಗನಾಥ್, ಡಿ.ಎಚ್.ಪರಮಶಿವಯ್ಯ, ಟಿ.ಎಲ್.ಕಾಂತರಾಜು, ಟಿ.ಎಂ.ಮಂಜಣ್ಣ, ಸಿ.ಆನಂದಕುಮಾರ್, ಜಾಫರ್ ಶರೀಪ್, ಎನ್.ಜಿ.ಶಿವರಾಜು, ವಿದ್ಯಾಕೃಷ್ಣ, ಅನುಸೂಯ, ಹೊಟೇಲ್ ಗಣೇಶ್, ಮಲ್ಲಿಕಾರ್ಜುನ, ಅಭಿ ಇದ್ದರು.