Thursday, May 7, 2026
Google search engine
Home Blog Page 189

This Davanagere Dog walked 11 kilometer to catch the murderer

Davangere: Tunga, the nine year old female dog belonging to Dobarman pinscher breed who is part of Davangere police dog squad has helped the police personnel to arrest the person allegedly responsible for a murder on the hillock near Sulekere.

It may be mentioned here that, Chandra Naik, aged 25, a resident of Nagarakatte village was found murdered on a hillock near Sulekere. The bullet injuries were found on his body.

According to sources, during the spot inspection and mahazar, Tunga had sniffed the hat the victim was wearing.

Read this: ಗಂಡಸರು ಓದಬೇಕಾದ ಹೆಂಗಸರ ಬಸಿರು

Based on this, the dog has taken police to Kashipura, the village located at the distance of 11 kilometre from the crime scene and has identified the person who has allegedly committed the murder. Tunga has helped police to crack more than 75 criminal cases so far

The arrested has been identified as Chethan Naik, aged 27. Police have recovered a pistol and five live rounds from him.

According to police, the arrested and his accomplices had committed a house burglary in Dharwad recently.

The victim who knew this had demanded money from them failing which he had threatened to inform the police on their crime.

Enraged with this, Chethan Naik has killed the victim by firing at him, police have said.

ಪಾವಗಡ: ಬೀದಿ ಬದಿಯಲ್ಲಿ ಗೋಳಾಡುತ್ತಿರುವ ಅಜ್ಜಿ

ಪಾವಗಡ: ಇಲ್ಲಿನ ರೈನ್ ಗೇಜ್ ಬಡಾವಣೆ ರಸ್ತೆ ಬದಿಯಲ್ಲಿ ಅಜ್ಜಿಯೊಬ್ಬರು ಮಳೆಯಲ್ಲಿ ನೆನೆಯುತ್ತಾ, ಚಳಿಗೆ ನಡುಗುತ್ತಾ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ.

ಈ ರಸ್ತೆಯಲ್ಲಿ ಓಡಾಡುವ ನೂರಾರು ಮಂದಿ ಅಜ್ಜಿಯ ಸ್ಥಿತಿ ನೋಡಿ ಮರುಗುತ್ತಿದ್ದಾರೆ. ಇವರಲ್ಲಿ ಕೆಲವರು ಅಜ್ಜಿಗೆ ಊಟ ನೀರು ಕೊಟ್ಟು ಮಾನವೀಯತೆ ಮೆರೆಯುತ್ತಿದ್ದಾರೆ.

ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದೆ. ಆದರೆ ಅವರವರ ಬ್ಯುಸಿ ಶೆಡ್ಯುಲ್ ನಡುವೆ ಈ ಅಜ್ಜಿ ಬಗ್ಗೆ ಗಮನಹರಿಸಲು ಸಮಯವಾದರೂ ಎಲ್ಲಿರುತ್ತೆ ಅಲ್ವೆ?

ಅಜ್ಜಿ ಬಿಕ್ಷುಕಿಯಲ್ಲವಂತೆ ಚೆನ್ನಾಗಿ ಬಾಳಿ ಬದುಕಿದವರೇ. ಅನಾರೋಗ್ಯ ಪೀಡಿತರಾದ ಇವರನ್ನು ಮನೆಯವರು ಬೀದಿ ಪಾಲು ಮಾಡಿದ್ದಾರೆ. ಎಲ್ಲರಿಗೂ ವಯಸ್ಸಾಗೇ ಆಗುತ್ತೆ. ಆಗ ಅವರು ಮಾಡಿದ ತಪ್ಪೇನು ಎಂದು ಅರಿವಾಗುತ್ತೆ. ಆದರೆ ತಪ್ಪು ಸರಿ ಮಾಡಿಕೊಳ್ಳಲು ಅವಕಾಶ ಸಿಗಲ್ಲ.

ಈ ಬಡಾವಣೆಯ ಜನತೆ ಅಜ್ಜಿಯ ಸ್ಥಿತಿ ನೋಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಏನು ಮಾಡಲಾಗದೆ ಸುಮ್ಮನಾಗಿದ್ದಾರೆ. ರಸ್ತೆಯಲ್ಲಿ ಓಡಾಡುವವರ ಮುಂದೆ ಕೈ ಸನ್ನೆ ಮಾಡಿ ಅಳುವ ಅಜ್ಜಿಯ ಸ್ಥಿತಿ ನೋಡಿದರೆ ಎಂತವರಿಗೂ ಬೇಸರವಾಗುತ್ತದೆ.

ಶುಕ್ರವಾರ ಸಂಜೆ ಹೆಲ್ಪ್ ಸೊಸೈಟಿ, ನಮ್ಮ ಹಕ್ಕು ಸಂಘಟನೆಗಳ ಪ್ರಮುಖರಾದ ಮಾನಂ ಶಶಿಕಿರಣ್, ಗಿರಿ ಫ್ಯಾಷನ್ಸ್ ಗಿರಿ ಅಜ್ಜಿಗೆ ಆಸರೆ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರಿಗೆ ಸವಿ ದಂತ ಚಿಕಿತ್ಸಾಲಯದ ವೈದ್ಯ ಡಾ. ನರೇಂದ್ರಬಾಬು ಅಗತ್ಯ ಸಹಕಾರ ನಿಡುತ್ತಿದ್ದಾರೆ. ಅಧಿಕಾರಿಗಳು, ಸಂಘ ಸಂಸ್ಥೆಯವರು ಪರಿಹಾರ ಕಲ್ಪಿಸಲಿದ್ದಾರೆಯೇ? ಎಂಬ ಆಸೆಗಣ್ಣುಗಳಿಂದ ಅಜ್ಜಿ ಎದುರು ನೋಡುತ್ತಿದ್ದಾರೆ.

18 ಮಂದಿಗೆ ಪಾಸಿಟಿವ್; 45 ಮಂದಿ ಗುಣಮುಖ

ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ 18 ಮಮದಿಗೆ ಕೋವಿಡ್ 19 ದೃಢಪಟ್ಟಿದೆ. ಒಟ್ಟು ಸಮಖ್ಯೆ 630 ಕ್ಕೆ ತಲುಪಿದೆ. 45 ಮಂದಿ ಗುಣಮುಖ  ಸೊಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತುಮಕೂರಿನಲ್ಲಿ 8, ಚಿಕ್ಕ ನಾಯಕನಹಳ್ಳಿಯಲ್ಲಿ 4, ಕುಣಿಗಲ್ 3, ಗುಬ್ಬಿ 1, ತುರುವೇಕೆರೆ 1, ತಿಪಟೂರು ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇದುವರೆಗೆ 267 ಮಂದಿ ಗುಣಮುಖರಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ. 345 ಮಂದಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ 1545 ಮಂದಿಯ ಮೆಲೆ ನಿಗಾ ವಹಿಸಲಾಗಿದೆ.

 

ಡಾ.ಜಿ.ಪರಮೇಶ್ವರ್ ಯುವ ಸೈನ್ಯದಿಂದ‌ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ತುಮಕೂರು: ಅಖಿಲ ಕರ್ನಾಟಕ ರಾಜ್ಯ ಡಾಕ್ಟರ್ ಜಿ , ಪರಮೇಶ್ವರ್ ಯುವ ಸೈನ್ಯ ಮತ್ತು ಪರಿಶಿಷ್ಚ ಪರಿವರ್ತನಾ ವೇದಿಕೆಯ ವತಿಯಿಂದ ಮಹಾರಾಷ್ಟ್ರದ ದಾದರ್ನಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಮನೆಯ ಹೂವಿನ ಕುಂಡ ಹಾಗೂ ಸಿಸಿ ಕ್ಯಾಮೆರಾಗಳ ದ್ವಂಸ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿ ಆರೋಪಿಯನ್ನು ಗಡಿಪಾರು ಮಾಡುವಂತೆ ಜನನ ಜಿಲ್ಲಾಧಿಕಾರಿ ಮುಲಕ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇಂತಹ ವಿದ್ವಂಸಕ ಕೃತ್ಯದಲ್ಲಿ ಭಾಗಿಯಾದವನ ವಿರುದ್ದ ಹರಿಹಾಯ್ದ ಡಾಕ್ಟರ್ ಜಿ. ಪರಮೇಶ್ವರ್ ಯುವ ಸೈನ್ಯ ಯ ರಾಜ್ಯಾಧ್ಯಕ್ಷ ನಗುತಾ ರಂಗನಾಥ್ ಪರೋಕ್ಷವಾಗಿ ಆರೋಪಿಯನ್ನು ಮನುವಾದಿ ವ್ಯವಸ್ಥೆ ರಕ್ಷಿಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಸಮಾನತೆಯನ್ನು ತಂದು ದೇಶವನ್ನು ಮುನ್ನಡೆಸುತ್ತಿರುವ, ಸಮ ಸಮಾಜದ ಕಲ್ಪನೆಕಂಡ ಸಂವಿಧಾನ ಕರ್ತೃ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ನಿವಾಸಕ್ಕೆ ರಕ್ಷಣೆ ಇಲ್ಲವೆಂದಾದರೇ ಭಾರತದಲ್ಲಿನ ಧ್ವನಿ ಇಲ್ಲದ ಸಮಾಜದ ವ್ಯವಸ್ಥೆ ಏನಿರಬಹುದು ಎಂದು ಪ್ರಶ್ನಿಸಿದರು..?

ನಂತರ ಮಾತನಾಡಿದ ಕರ್ನಾಟಕ ಪರಿಶಿಷ್ಟರ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಜಿ. ಹೆಚ್ ಈ ಪ್ರಕರಣದ ಆರೋಪಿ ಮಾನಸಿಕ ಅಸ್ವಸ್ಥನಂತೆ, ಇಂತಹ ಕಥೆಗಳನ್ನು ಸೃಷ್ಟಿಸಿ, ದೇಶ ಮತ್ತು ಸಂವಿಧಾನ ಶಿಲ್ಪಿಯ ಮನೆಗೆ ಅಗೌರವ ತೋರಿರುವುದು ಜಾತ್ಯಾತೀತ ರಾಷ್ಟ್ರದಲ್ಲಿನ ಜಾತಿಯತೆಯ ಹೀನಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಲಜ್ಜೆಗೆಟ್ಟ ಸರ್ಕಾರಗಳಿಗೆ ಕಿಂಚಿತ್ತಾದರೂ ಸಂಸ್ಕಾರ ವಿದ್ದರೇ ಈ ಪ್ರಕರಣದ ಆರೋಪಿಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಮಂಪರು ಪರೀಕ್ಷೆ ಮಾಡಿಸಿ, ಇದರ ಹಿಂದಿರುವ ಕಾಣದ ಕೈಗಳನ್ನು ಕಂಡು ಹಿಡಿದು ಆರೋಪಿಯನ್ನು ಸೇರಿದಂತೆ ಕೃತ್ಯಕ್ಕೆ ಸಹಕಾರ & ಬೆಂಬಲ ನೀಡಿದವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ವಿಚಾರಣೆಯ ದಿಕ್ಕನ್ನು ತಪ್ಪಿಸಿದರೇ ದೇಶದಲ್ಲಿ ಮನುವಾದಿ ವ್ಯವಸ್ಥೆ ವಿರುದ್ಧ ಬಂಡೆದ್ದು ಮತ್ತೊಂದು ಕೊರೆಂಗಾವ್ ಯುದ್ಧ ನಡೆಸಬೇಕಾದೀತು ಎಂದು ಎಚ್ಚರಿಸಿದರು..

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ರಜನಿ ಕಾಂತ, ಕೃಷ್ಣಪ್ಪ ಹೆಗ್ಗೆರೆ, ತುಮಕೂರು ಗ್ರಾಮಾಂತರ ಅಧ್ಯಕ್ಷರಾದ ಗಿರಿಸ್ವಾಮಿ, ಮಧುಗಿರಿ ಅಧ್ಯಕ್ಷರಾದ ವಿಜಯ್, ಟೈಗರ್ ಮಹೇಶ್, ರವರು ಹಾಗೂ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದು ಆಂಧ್ರಪ್ರದೇಶದ ಮೇಡಕ್ ನಲ್ಲಿ ಮಾತ್ರ ಕಾಣುವ ದೃಶ್ಯ!

ಜಿ.ಎನ್.ಮೋಹನ್


ಬೆಳಕು ಹರಿಯಲು ಇನ್ನೂ ಸಾಕಷ್ಟು ಸಮಯವಿತ್ತು. ಗೂಡಿನಿಂದ ಹಕ್ಕಿಗಳು ಹೊರಬಿದ್ದಿದ್ದವೋ ಏನೋ ಗೊತ್ತಿಲ್ಲ. ಆದರೆ ಆ ವೇಳೆಗೆ ಇವರಂತೂ ಹೊಲದ ಬದುಗಳ ಮೇಲೆ ಹೆಜ್ಜೆ ಹಾಕುತ್ತಾ ಸಾಗಿದ್ದರು.

ತಲೆಯ ಮೇಲೆ ಮಂಕರಿ. ಹೆಗಲ ಮೇಲೆ ಹಾರೆ ಸನಿಕೆ.. ಆ ದಿನದ ದುಡಿತಕ್ಕೆ ಬೇಕಾದ ಸಲಕರಣೆಗಳೆಲ್ಲಾ ಇತ್ತು.

ನನಗೋ ಹೋರಾಟದ ಹಾಡುಗಳನ್ನು ಬರೆದವರ ನೆನಪು.

ಕೂಲಿಯವರು ನಾವಯ್ಯ ಕೇಳೋ..
ಕೂಳು ಕಾಣದವರು ನಾವಯ್ಯ ಕೇಳೋ…
ಹಾರೆ ಸನಿಕೆ ಮಟ್ಟುಗೋಲು ಭುಜದ ಮೇಲೆ ಹೊತ್ತುಕೊಂಡು,
ಕರಣಿ ಬಾಂಡ್ಲಿ ತೂಗುಗುಂಡು ನೆತ್ತಿ ಮೇಲೆ ಎತ್ತಿಕೊಂಡು..

ಥೇಟ್ ಎಲ್ಲಾ ಹಾಗಾಗೇ ಇತ್ತು.

ಆದರೆ ಅವರ ಮಂಕರಿಯಲ್ಲಿ ಕೇವಲ ಕರಣಿ ಬಾಂಡ್ಲಿ ತೂಗುಗುಂಡು ಮಾತ್ರ ಇರಲಿಲ್ಲ, ಅಲ್ಲಿ ಮೈಕ್ರೋಫೋನ್, ಕೇಬಲ್ ಸಹಾ ಇತ್ತು. ಹೆಗಲ ಮೇಲೆ ಹಾರೆ ಸನಿಕೆ ಮಾತ್ರ ಇರಲಿಲ್ಲ, ಕ್ಯಾಮೆರಾ, ಟ್ರೈಪಾಡ್ ಸ್ಟಾಂಡ್ ಸಹಾ ತೂಗುತ್ತಿತ್ತು.

ಇವರು ಕೂಲಿಗೆ ಮಾತ್ರ ಹೋಗುತ್ತಿರಲಿಲ್ಲ..ಬದಲಿಗೆ ಕೂಲಿಯವರ ಧಾರುಣ ಕಥೆಯನ್ನು ಸಾರಲೂ ಹೋಗುತ್ತಿದ್ದರು.

ಇದು ಆಂಧ್ರಪ್ರದೇಶದ ಮೇಡಕ್ ನಲ್ಲಿ ಮಾತ್ರ ಕಾಣುವ ದೃಶ್ಯ.

ಇಪ್ಪಳಪಲ್ಲಿ ಮಲ್ಲಮ್ಮ, ಜಹೀರಾಬಾದ್ ಪುಣ್ಯಮ್ಮ, ಹುಮ್ನಾಪುರ ಲಕ್ಷ್ಮಿ, ಪಾಸ್ತಾಪುರ ನರಸಮ್ಮ, ಬೋಪನಪಲ್ಲಿ ನಾಗಮ್ಮ, ಈಡುಲಪಲ್ಲಿ ಮಂಜುಳಾ.. ಇವರು ಕ್ಯಾಮೆರಾ ಹೆಗಲಿಗೇರಿಸಿ ಹೊರಟರೆ ಸಾಕು ಇವತ್ತು ಕೇವಲ ಇವರ ಊರವರು ಮಾತ್ರವಲ್ಲ, ಯುನೆಸ್ಕೋ ಸಹಾ ಇವರು ಹೊತ್ತು ತರುವ ಸುದ್ದಿಗಳನ್ನು ಕಾಯುತ್ತದೆ.

ಇವರು ಕ್ಯಾಮೆರಾ ಹೊತ್ತು ಹೊರಟರೆ ಕೇವಲ ಆಂಧ್ರ ಪ್ರದೇಶ ಮಾತ್ರವಲ್ಲ ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ… ಹೀಗೆ ಇವರ ಕ್ಯಾಮೆರಾ ಕಣ್ಣಿನ ಕಥೆ ಕೇಳಲು ಕಾತರದಿಂದ ಕಾಯುತ್ತವೆ.

ಇವರ ಕಥೆಯನ್ನು ಕೇವಲ ಒಂದು ಹಳ್ಳಿಯ ಹತ್ತಾರು ಜನರಲ್ಲ ದೇಶದ ನೀತಿ ರೂಪಕರು ನೋಡುತ್ತಾರೆ.

‘ನನ್ನ ಕಥೆ ನನ್ನದು’ ಎಂದು ಲಕ್ಷ್ಮಮ್ಮ ಜರ್ಮನಿಯ ಬಾನ್ ನಲ್ಲಿ ದೊಡ್ಡ ದನಿಯಲ್ಲಿ ಹೇಳಿದಾಗ ಇಡೀ ಸಭಾಂಗಣ ಬೆಚ್ಚಿ ಬಿತ್ತು.

ಎಲ್ಲಿಯ ಪಾಸ್ತಾಪುರದ ಲಕ್ಷ್ಮಮ್ಮ, ಎಲ್ಲಿಯ ಬಾನ್?.

ಹೊಲದಲ್ಲಿ ಕೂಲಿ ಸಿಗದೇ ನಿಟ್ಟುಸಿರಿಡುತ್ತಿದ್ದ ಲಕ್ಷ್ಮಮ್ಮ, ಮಲ್ಲಮ್ಮ, ನರಸಮ್ಮ ತಮ್ಮ ಕೈನಲ್ಲಿದ್ದ ಕುಡುಗೋಲನ್ನು ಪಕ್ಕಕ್ಕಿಟ್ಟವರೇ ಕ್ಯಾಮೆರಾ ಕೈಗೆತ್ತಿಕೊಂಡರು.

ಕಳೆ ಕೀಳುತ್ತಿದ್ದ ಕೈಗಳು ಈಗ ಮೈಕ್ರೋಫೋನ್ ಹಿಡಿದವು.

ತಮ್ಮ ಊರಿನ ನೋವಿನ ಕಥೆಗಳನ್ನು ತಾವೇ ಬಣ್ಣಿಸುತ್ತಾ ಹೋದರು.

‘ರೆಡಿ, ಆಕ್ಷನ್, ಕಟ್’ ದನಿಗಳೇ ಇರಲಿಲ್ಲ.

ಎಲ್ಲಾ ನರಸಮ್ಮಂದಿರಿಗೂ, ಎಲ್ಲಾ ನಾಗಮ್ಮಂದಿರಿಗೂ ಹೇಳಿಕೊಂಡರೂ ಮುಗಿಯಲಾಗದ ಕಥೆಗಳಿದ್ದವು.

ಹಾಗಾಗಿ ಅವರು ಹೊತ್ತು ತಂದ ನೋವಿನ ಕಥೆಗಳೇ ಸಾಕ್ಷ್ಯ ಚಿತ್ರಗಳಾದವು. ಹಾಗೆ ಅವರು ಹೇಳಿದ ಕಥೆಗಳು ಬಾನ್ ನ ತೆರೆಯ ಮೇಲೆ ಕಂಡದ್ದೇ ಜನ ನಿಟ್ಟುಸಿರಾದರು.

‘ನನ್ನ ಕಥೆಯನ್ನು ನಾನಲ್ಲದೇ ಯಾರು ಹೇಳಲು ಸಾಧ್ಯ?’ ಎಂದು ಲಕ್ಷ್ಮಮ್ಮ ಕೇಳಿದಾಗ ಅಲ್ಲ ಎನ್ನುವವರು ಅಲ್ಲಿರಲಿಲ್ಲ.

ಹಾಗೆ ಕೆಂಡದ ಮೇಲೆ ನಡೆದವರೇ ತಮ್ಮ ಕಥೆಗೆ ಬಾಯಿ ಕೊಡಬೇಕು ಎಂದು ಕಂಡುಕೊಂಡದ್ದು ‘ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ’

ಮೇಡಕ್ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯದ್ದೇ ಒಂದು ಯಶೋಗಾಥೆ.

ಕಳೆದ ಕಾಲು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಸಂಸ್ಥೆ ಆಂಧ್ರದ ಬಡ ಹಾಗೂ ದಲಿತ ಹೆಣ್ಣುಮಕ್ಕಳ ಜೊತೆ ದುಡಿಯುತ್ತಿದೆ. ಈ ಹೆಂಗಸರನ್ನು ಸೇರಿಸಿ ‘ಸಂಘಂ’ ಹೆಸರಿನಲ್ಲಿ ಸಂಘಟನೆ ರೂಪಿಸಿದೆ.

ಈ ಸಂಘಟನೆಯ ಮೂಲ ಉದ್ಧೇಶ ಅಳಿಸಿ ಹೋಗುತ್ತಿರುವ ಪಾರಂಪರಿಕ ಬೆಳೆಗಳನ್ನು ಬದುಕುಳಿಸುವುದು. ಅಲ್ಲಿಂದ ಆರಂಭವಾದ ಕೆಲಸ ಈಗ ಹಾಳು ಬಿದ್ದ ನೆಲವನ್ನು ಸಂರಕ್ಷಿಸುವುದರಿಂದ ಹಿಡಿದು ಭೂ ಒಡೆತನದ ಪ್ರಶ್ನೆಗಳನ್ನೂ ಕೈಗೆತ್ತಿಕೊಂಡಿದೆ.

ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ ಈಗ ಹತ್ತು ಹಲವು ದಿಕ್ಕುಗಳಲ್ಲಿ ಹರಡಿ ನಿಂತಿದೆ. ಅದರ ಒಂದು ಭಾಗವೇ ಈ ‘ಕಮ್ಯುನಿಟಿ ಮೀಡಿಯಾ ಟ್ರಸ್ಟ್’.

ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಹಿಂದಿನ ಚಾಲಕ ಶಕ್ತಿಯಾದ ಪಿ ವಿ ಸತೀಶ್ ಅವರಿಗೆ ‘ಇದೆಲ್ಲಾ ಹೇಗೆ ಸಾಧ್ಯವಾಯಿತು?’ ಎಂದು ಕೇಳಿದರೆ ಅವರು ಬೊಟ್ಟು ಮಾಡುವುದೇ ಈಗಿನ ಮಾಧ್ಯಮ ವ್ಯವಸ್ಥೆಯನ್ನು.

ಮಾಧ್ಯಮ ಸ್ವಾತಂತ್ರ್ಯ ಇದೆ ಎನ್ನುವುದನ್ನೇ ಸತೀಶ್ ನಿರಾಕರಿಸುತ್ತಾರೆ.

‘ಈಗಿರುವುದು ಯಾರ ಮಾಧ್ಯಮ? ಯಾರ ಸ್ವಾತಂತ್ರ್ಯ?. ಇವತ್ತಿನ ಮಾಧ್ಯಮದಲ್ಲಿ ಸ್ಥಳೀಯರಿಗೆ, ಗ್ರಾಮೀಣ ಸಮುದಾಯಕ್ಕೆ, ಬಡವರಿಗೆ, ರೈತರಿಗೆ ಅವಕಾಶ ಎಲ್ಲಿದೆ? ಸುಮಾರು 650 ದಶಲಕ್ಷ ಮಂದಿ ಈ ವರ್ಗದವರಿದ್ದಾರೆ. ಇದಕ್ಕೆ ಮಹಿಳೆಯರನ್ನೂ ಸೇರಿಸಿಕೊಳ್ಳಿ ಅವರಿಗೆ ಮಾಧ್ಯಮದಲ್ಲಿ ಏನಾದರೂ ಬೆಳಕಿನ ಕಿರಣಗಳಿವೆಯೇ?’ ಎಂದು ಪ್ರಶ್ನಿಸುತ್ತಾರೆ.

ಇಂದಿನ ಮಾಧ್ಯಮಗಳಿಗೆ ಆ ಬೆಳಕಿನ ಕಿರಣಗಳನ್ನು ನೀಡುವ ಮನಸ್ಸಿಲ್ಲ ಎಂದಾಗ ತಾವೇ ಆ ಕಿರಣಗಳನ್ನು ಬೆನ್ನತ್ತಲು ಹುಟ್ಟಿಕೊಂಡದ್ದು ‘ಕಮ್ಯುನಿಟಿ ಮೀಡಿಯಾ ಟ್ರಸ್ಟ್’.

ಅಕ್ಷರ ಗೊತ್ತಿಲ್ಲದವರಿಗೆ ದೃಶ್ಯ ಮಾಧ್ಯಮ ಬಹುಬೇಗ ಕೈಗೆಟುಕುತ್ತದೆ ಎಂದು ಕಂಡುಕೊಂಡ ಸತೀಶ್ ತಮ್ಮ ಗೆಳೆಯರೊಂದಿಗೆ ಸೇರಿ ಒಂದು ವಿಡಿಯೋ ಕಾರ್ಯಾಗಾರ ನಡೆಸಿದರು.

ಕುತೂಹಲಕ್ಕಾಗಿ ಬಂದ ಮಹಿಳೆಯರ ಗುಂಪು ನಿಧಾನವಾಗಿ ಮೈಕ್ ಹಿಡಿಯಿತು, ನಂತರ ಕ್ಯಾಮೆರಾ ಮುಟ್ಟಿದರು, ಆ ನಂತರ ಶಾಟ್ ಗಳ ಬಗ್ಗೆ ಮಾತನಾಡಲು ಆರಂಭಿಸಿದರು. ಅಲ್ಲಿಗೆ ಹೊಸ ದಿಕ್ಕಿನತ್ತ ಪಯಣ ಆರಂಭವಾಗಿ ಹೋಗಿತ್ತು.

ಆ ವೇಳೆಗೆ ಊರಿನಲ್ಲಿ ಇನ್ನಿಲ್ಲದ ಅಕಾಲಿಕ ಮಳೆ ಇದ್ದ ಪೈರುಗಳೆಲ್ಲಾ ಕೊಚ್ಚಿ ಹೋದವು. ಆತಂಕಗೊಂಡ ರೈತರ ಕಥೆಯತ್ತ ಈ ಮಹಿಳೆಯರು ಕ್ಯಾಮೆರಾ ತಿರುಗಿಸಿದರು. ಅಕ್ಷರ ಗೊತ್ತಿಲ್ಲದಿರಬಹುದು ಆದರೆ ಇವರಿಗೆ ಮಾತು ಗೊತ್ತಿರಲಿಲ್ಲವೆ, ತಮ್ಮ ಕಥೆ ಹೇಳುತ್ತಾ ಹೋದರು.

‘ನಿಲ್ಲದು ನಿಲ್ಲದು ಪಯಣ.. ನಮ್ಮದು ಸುದೀರ್ಘ ಪಯಣ..’ ಎನ್ನುವ ಹಾಡಿನಂತೆ ಇವರ ನಿಲ್ಲದ ಪಯಣವೂ ಆರಂಭವಾಗಿ ಹೋಯಿತು.

ಇವರ ಕಥೆ ಇವರಿಗೆ ಸೇರಿದ್ದು, ಕಥೆಯ ನಿರೂಪಣೆಯಲ್ಲಿ ಪ್ರಾಮಾಣಿಕತೆ ಇತ್ತು, ವ್ಯವಸ್ಥೆ ಬದಲಾಗಬೇಕೆಂಬ ನಿಜ ಕಳಕಳಿಯಿತ್ತು. ಸಮಸ್ಯೆ ಎಷ್ಟು ಆಳವಾದದ್ದು, ತೊಂದರೆ ಎಲ್ಲಿಂದ ಎನ್ನುವ ವಿಶ್ಲೇಷಣೆ ಇತ್ತು.

ಇದನ್ನು ಕಂಡುಕೊಂಡ ‘ದೂರದರ್ಶನ’ ಹಾಗೂ ‘ಈಟಿವಿ’ ಇವರ ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಲು ಮುಂದೆ ಬಂತು.

ಇದು ಈ ದೃಶ್ಯ ಚಳವಳಿಗೆ ಇನ್ನಿಲ್ಲದ ಕುಮ್ಮಕ್ಕು ನೀಡಿತು. ಚಿನ್ನನರಸಮ್ಮ, ಹುಮ್ನಾಪುರ ಲಕ್ಷ್ಮಮ್ಮ, ಮಸ್ಲಿಗಿರಿ ಕವಿತಾ, ಬೇಗಾರಿ ಮಲ್ಲಮ್ಮ.. ಹೀಗೆ ಇನ್ನಷ್ಟು ಮತ್ತಷ್ಟು ಬಡ, ಕೂಲಿಕಾರ ಮಹಿಳೆಯರು ಕ್ಯಾಮೆರಾ ಹಿಡಿದರು.

ರಾಗಿ ಬೀಸುವ ಕಡೆ, ನೇಜಿ ನೆಡುತ್ತಿದ್ದಲ್ಲಿ, ಬಾಲವಾಡಿಯಲ್ಲಿ ಮಕ್ಕಳು ಆಡುವಾಗ, ಕಣ ಮಾಡುವಾಗ, ಬೀಜ ಹಂಚಿಕೊಳ್ಳುವಾಗ, ಅಷ್ಟೇ ಅಲ್ಲ ಊರಿಗೆ ಅಧಿಕಾರಿಗಳು ಭೇಟಿ ಕೊಟ್ಟಾಗ, ದಾಖಲೆಗಳನ್ನು ಪರಿಶೀಲಿಸುವಾಗ, ಅಹವಾಲು ಕೇಳುವಾಗ.. ಇವರ ಕ್ಯಾಮೆರಾ ಸುತ್ತತೊಡಗಿತು.

ಬೀಜ ಸಂರಕ್ಷಣೆ, ಸಾವಯವ ಕೃಷಿ, ಬಿ ಟಿ ದಾಳಿ, ಸಿರಿ ಧಾನ್ಯ, ಪರ್ಯಾಯ ಬೆಳೆ, ಸಾರ್ವಜನಿಕ ಪಡಿತರ ವ್ಯವಸ್ಥೆ ಎಲ್ಲವೂ ಇವರ ಕಣ್ಣಲ್ಲಿ ಕಂಡಂತೆ ಹೊರಬರುತ್ತದೆ.

ಇದು ಕೇವಲ ಭಾರತದಲ್ಲಿನ ಅಚ್ಚರಿ ಮಾತ್ರವಲ್ಲ ಜಗತ್ತಿನ ಅಚ್ಚರಿ ಕೂಡಾ.

ಹಾಗಾಗಿಯೇ ಇವರ ಸಾಕ್ಷ್ಯಚಿತ್ರ ಹಾಗೂ ಕೆಲಸವನ್ನು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಇವರು ತಯಾರಿಸಿದ 12 ಸಾಕ್ಷ್ಯ ಚಿತ್ರಗಳ ಗುಚ್ಚವನ್ನು ಬಿಡುಗಡೆ ಮಾಡಲು ಪೆರು, ಲಂಡನ್, ಫಿಲಿಫೈನ್ಸ್, ಕೆನ್ಯ, ಮಾಲಿ, ಜರ್ಮನಿ, ಇಂಡೋನೇಷಿಯಾ ಸಹಾ ನೆಲ ಒದಗಿಸಿದವು.

ಹೀಗೆ ಎಲ್ಲೆಡೆ ತಮ್ಮ ಸಾಕ್ಷ್ಯಚಿತ್ರ ಬಿಡುಗಡೆ ಮಾಡುತ್ತಾ, ತಮ್ಮ ಕಥೆ ಹೇಳುತ್ತಾ ಈ ಮಹಿಳೆಯರು ಬೆಂಗಳೂರಿಗೂ ಬಂದಿಳಿದರು.,

ಸಾಕ್ಷ್ಯ ಚಿತ್ರಗಳ ಬಿಡುಗಡೆಯಂತೆ ಎನ್ನುವ ಕಾರಣಕ್ಕೆ ಬೆಂಗಳೂರಿನ ಹಲವಾರು ಕಾಲೇಜುಗಳ ಎಲೆಕ್ಟ್ರಾನಿಕ್ ಮಾಧ್ಯಮದ ವಿದ್ಯಾರ್ಥಿಗಳು ಗುಂಪುಗಟ್ಟಿ ಬಂದರು.

ಅವರು ಕಾರ್ಯಕ್ರಮದ ಅಂಗಳಕ್ಕೆ ಬರುವ ವೇಳೆಗಾಗಲೇ ಲಕ್ಷ್ಮಮ್ಮ ತನ್ನ ಕೈನಲ್ಲಿ ಕ್ಯಾಮೆರಾ ಹಿಡಿದು ಆ ವಿದ್ಯಾರ್ಥಿಗಳನ್ನು ಸೆರೆ ಹಿಡಿಯುತ್ತಿದ್ದರು. ಒಳಗೆ ನರಸಮ್ಮ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಬೇಕಾದ ಪ್ರೊಜೆಕ್ಟರ್ ಹೊಂದಿಸುತ್ತಿದ್ದರು. ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿ ನಿಂತಿದ್ದರು.

ನಾಳಿನ ಟಿ ವಿ ಚಾನಲ್ ಗಳ ವರದಿಗಾರರು ತಮ್ಮ ಕಣ್ಣ ಮುಂದೆ ನಿಂತಿದ್ದ ಆ ರೈತ, ಕೂಲಿಕಾರ ಮಹಿಳೆಯರನ್ನು ಕಂಡು ನಿಬ್ಬೆರಗಾಗಿದ್ದರು.

ಆ ನಿಬ್ಬೆರಗಿನ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಲಕ್ಷ್ಮಮ್ಮ ಪಟ ಪಟನೆ ಉತ್ತರ ನೀಡುತ್ತಿದ್ದರು.

‘ಪ್ಯಾನ್, ಜೂಮ್, ಟಿಲ್ಟ್: ಎಲ್ಲವೂ ನಾಲ್ಕು ಗೋಡೆಯ ನಡುವಣ ಪಾಠ ಮಾತ್ರವಲ್ಲ ಎನ್ನುವುದು ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಗೊತ್ತಾಗಿತ್ತು.

ಅಲ್ಲಿ ಇನ್ನೂ ಒಂದು ಅಚ್ಚರಿಯಿತ್ತು. ಹಾಗೆ ಲಕ್ಷ್ಮಮ್ಮ ಆ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವುದನ್ನು 8 ವರ್ಷದ ಪುಟ್ಟ ಪೋರಿಯೊಬ್ಬಳು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಳು.

‘ಎಲ್ಲಿದ್ದೆ ಇಲ್ಲೀ ತನಕಾ ಎಲ್ಲಿಂದ ಬಂದ್ಯವ್ವಾ..’ ಎನ್ನುವ ಗೀತೆ ನನ್ನ ಕಿವಿಯಲ್ಲಿ…

ಗಂಡಸರು ಓದಬೇಕಾದ ಹೆಂಗಸರ ಬಸಿರು

0

ಮಹೇಂದ್ರ ಕೃಷ್ಣಮೂರ್ತಿ


ಹೆಣ್ಣು ಮಕ್ಕಳು, ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಡಾ.ಗಿರಿಜಮ್ಮ ಅವರು ಬರೆದಿರುವ ಬಸಿರು ಪುಸ್ತಕವನ್ನು ಗಂಡಸರು ಸಹ ಓದಬೇಕಾಗಿದೆ.

ಹೆರಿಗೆ ಅಂದರೆ ಮಹಿಳೆಗೆ ಪುನರ್ ಜನ್ಮ ಇದ್ದಂತೆ ಎಂಬ ಮಾತು ಈಗಲೂ ಜನಜನಿತ.

ಎಷ್ಟೆಲ್ಲ ವೈಜ್ಞಾನಿಕತೆ ಮುಂದುವರೆದಾಗಲೂ ಇಂದಿಗೂ ಹೆರಿಗೆ, ಬಾಣಂತನ ಎಂಬುವುದು ಕತ್ತಲಿನಲ್ಲೇ ಸಾಗುತ್ತಿದೆ.

ಹಲವು ಕಂದಚಾರಗಳು, ಲೋಕರೂಢಿಗಳಲ್ಲಿ ಸಿಲುಕಿದರೆ, ಹೆರಿಗೆಯ ಭಯದಲ್ಲೇ ಅನೇಕ ಗರ್ಭಿಣಿಯರು ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ಇವೆಲ್ಲವಕ್ಕೂ ಉತ್ತರವನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ.

ಗರ್ಭದಾರಣೆಯಿಂದ ಹಿಡಿದು ಸಿಜೇರಿಯನ್ ಹೆರಿಗೆಯವರೆಗಿನ ಸಣ್ಣ ಸಣ್ಣ ಮಾಹಿತಿಯನ್ನು ವೈದ್ಯೆಯೂ ಆಗಿರುವ ಲೇಖಕಿ ನೀಡಿದ್ದಾರೆ.

ಗರ್ಭಿಣಿ, ಬಾಣಂತನದ ಆರೈಕೆ, ಊಟಪೋಚಾರಗಳು, ಆಕೆಯ ತುಮಲ, ವ್ಯಾಕುಲತೆ, ಆಹಾರ ಕ್ರಮ, ಎಚ್ಚರ ತಪ್ಪಿದರೆ ಬರಬಹುದಾದ ರೋಗ ರುಜಿನಗಳು, ಗರ್ಭಕೊರಳಿನ ಕ್ಯಾನ್ಸರ್ ಹೀಗೆ ಅನೇಕ ಮಾಹಿತಿಗಳ ಆಗರವಾಗಿರುವ ಈ ಪುಸ್ತಕವನ್ನು ಗಂಡಸರು ಓದಿದರೆ ತನ್ನೊಲುಮೆಯ ಹೆಂಡತಿಯನ್ನು ಗರ್ಭಿಣಿ ಮತ್ತು ಬಾಣಂತನದಲ್ಲೂ ಆಕೆಯ ಸೂಕ್ಷ್ಮ ಮನಸ್ಸು ಅರಿತು ಪ್ರೀತಿ ತೋರುವುದು ಗೊತ್ತಾಗಲಿದೆ.

ಪಠ್ಯಕ್ರಮದ ರೀತಿಯಲ್ಲಿ ಪುಸ್ತಕವನ್ನು ಜೋಡಿಸಿದ್ದು, ಹಲವು ರೇಖಾಚಿತ್ರಗಳ ಮೂಲಕ ಸರಳವಾಗಿ ಎಲ್ಲರಿಗೂ ಅರ್ಥವಾಗುಸುವಂತ ಭಾಷೆಯಲ್ಲಿ ಬರೆಯಲಾಗಿದೆ.

ತುಮಕೂರು: 612 ಕ್ಕೇರಿದ ಕೊರೊನಾ ಸೋಂಕಿತರು

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 15 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 612 ಕ್ಕೆ ಏರಿಕೆಯಾಗಿದೆ ಎಂದು ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ತುಮಕೂರು ನಗರದಲ್ಲೇ 12 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ತಿಪಟೂರು, ಶಿರಾ, ಗುಬ್ಬಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಆಯುಶ್ ವೈದ್ಯರ ಸಾಮೂಹಿಕ ರಾಜಿನಾಮೆ?

ಪಾವಗಡ: ರೋಗಿಗಳ ಜೀವ ಉಳಿಸುವ ವೈದ್ಯರಿಗಿಲ್ಲ ಸರ್ಕಾರದ ಅಭಯ. ಕಷ್ಟ ಪಟ್ಟು ಕೆಲಸ ಮಾಡಿದರೂ ತಾರತಮ್ಯ……

-ಹೌದು ಇತ್ತೀಚೆಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಎಂ ಬಿ ಬಿಎಸ್ ವೈದ್ಯರ ವೇತನ ಹೆಚ್ಚಿಸಿ ಅವರ ಸೇವೆ ಖಾಯಂ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಆದರೆ ಇವರಷ್ಟೇ ಕೆಲಸ ಮಾಡುವ ಆಯುಶ್ ವೈದ್ಯರಿಗೆ ಖಾಯಂ ಗೊಳಿಸುವುದಿರಲಿ ವೇತನ ಹೆಚ್ಚಿಸುವ ಯತ್ನವನ್ನೂ ಮಾಡಿಲ್ಲ.

https://youtu.be/Cag5Cw8LmDc

ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ಕೊಡುವ, ಜೀವವನ್ನೆ ಒತ್ತೆಯಿಟ್ಟು ದುಡಿಯುತ್ತಿರುವ ಇವರನ್ನು ಕೊರೋನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿಲ್ಲ. ಆಶಾ ಕಾರ್ಯಕರ್ತೆಯರು, ಡಿ ಗ್ರೂಪ್ ನೌಕರರಿಗೆ ಕೊಟ್ಟಿರುವ ವಿಮೆ, ಇತ್ಯಾದಿ ಸವಲತ್ತನ್ನೂ ನೀಡಿಲ್ಲ ಇದೆಂತ ವಿಪರ್ಯಾಸ.

ಆಯುಶ್ ವೈದ್ಯರನ್ನು ಹೆಚ್ಚಾಗಿ ಗ್ರಾಮೀಣ ಭಾಗಕ್ಕೆ ನಿಯೋಜಿಸಲಾಗುತ್ತಿದೆ. 20 ರಿಂದ 25 ಸಾವಿರ ವೇತನದಲ್ಲಿ ಮನೆ ಬಾಡಿಗೆ, ಕುಟುಂಬ ನಿರ್ವಹಣೆ, ಆಸ್ಪತ್ರೆಗ ಹೋಗಿ ಬರುವ ವೆಚ್ಚವನ್ನೂ ನಿಭಾಯಿಸಬೇಕು. ಗುತ್ತಿಗೆ ಆಧಾರದಲ್ಲಿ ಇತರೆಡೆ ಕೆಲಸ ಮಾಡುವವರಿಗೆ ಹೆಚ್ಚಿನ ವೇತನ ಕೊಡಲಾಗುತ್ತಿದೆ.

ಕೊರೋನಾ ಆರಂಭವಾದಾಗಿನಿಂದ ಆಯುಶ್ ವೈದ್ಯರ ಸಮಸ್ಯೆ ಹೆಚ್ಚಿದೆ. ಆಸ್ಪತ್ರೆಗೆ ಹೋಗಿ ಬಂದು ಕುಟುಂಬ ಸದಸ್ಯರ ಸುರಕ್ಷತೆಯನ್ನೂ ನೋಡಿಕೊಳ್ಳಬೇಕು. ಇದರ ವೆಚ್ಚವೂ ದಿನದಿಂದ ದಿನಕ್ಕೆ ಗಗನಮುಖಿಯಾಗಿದೆ. ಆದರೆ ವೇತನ ಮಾತ್ರ ದಶಕಗಳ ಹಿಂದೆ ನಿಗದಿ ಮಾಡಿದ್ದನ್ನೇ ಕೊಡಲಾಗುತ್ತಿದೆ.
ಆಯುಶ್ ವೈದ್ಯರಿಗೆ ಸೇವಾ ಭದ್ರತೆ, ಸಮರ್ಪಕ ವೇತನ ಕಲ್ಪಿಸದಿದ್ದಲ್ಲಿ ಜುಲೈ-20 ನಂತರ ಸಾಮೂಹಿಕ ರಾಜಿನಾಮೆ ನೀಡಲು ಸಂಘದ ಪ್ರಮುಖರು ತೀರ್ಮಾನ ತೆಗೆದುಕೊಂಡಿದ್ದಾರಂತೆ.
ಸುಪ್ರಿಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ, ಸೇವೆ ಖಾಯಂ ಗೊಳಿಸದೆ, ಕೋವಿಡ್ 19 ಸೊಂಕಿತರಿಗೆ ಚಿಕಿತ್ಸೆ ಕೊಡುವ ಆಯುಶ್ ವೈದ್ಯರಿಗೆ ವಿಮೆ ಸೇರಿದಂತೆ ಯಾವುದೇ ಸವಲತ್ತು ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ನೋವಿನ ವಿಚಾರ ಎಂದು ವೈದ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರದವರೆಗೆ ಸಚಿವರು ಕಾಲಾವಕಾಶ ನೀಡುವಂತೆ ಕೇಳಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನಿಡಿದ್ದಾರೆ. ಸರ್ಕಾರ ಆಯುಶ್ ವೈದ್ಯರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸಾಮೂಹಿಕವಾಗಿ ರಾಜಿನಾಮೆ ಕೊಡಲಾಗುವುದು ಎಂದು ಆಯುಶ್ ವೈದ್ಯರು ಎಚ್ಚರಿಸಿದ್ದಾರೆ.

ಪಾವಗಡ ತಾಲ್ಲೂಕಿನಲ್ಲಿ 10 ಮಂದಿ ಆಯುಶ್ ವೈದ್ಯರಿದ್ದು ಸರ್ಕಾರ ವೈದ್ಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವೈದ್ಯ ಮಂಜುನಾಥ್, ರಾಜೇಶ್ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.
ವೈದ್ಯ ಲಿಂಗರಾಜು, ರವಿರಾಜ್, ಎಚ್. ಹರ್ಷಿತ, ಅನಿಲ್, ತಿಪ್ಪೆಸ್ವಾಮಿ, ಮಾರುತಿ, ಅನಿಲ್ ಕುಮಾರ್, ರಜಿಯಾ ಉಪಸ್ಥಿತರಿದ್ದರು.

ಒಂದು ನಾಟಕದಿಂದಾಗಿ ಏನೆಲ್ಲಾ..

ಜಿ.ಎನ್.ಮೋಹನ್


‘ರಂಗಶಂಕರ’ದಲ್ಲಿ ಸುಂಟರಗಾಳಿ ಎದ್ದಿತ್ತು.

ಅದೂ ಅಂತಿಂಥ ಸುಂಟರಗಾಳಿಯಲ್ಲ, ಭಾರೀ ಸುಂಟರಗಾಳಿ, ಧಾಂ ಧೂಂ ಸುಂಟರಗಾಳಿ.

ಹಾಗೆ ಸುಂಟರಗಾಳಿ ಎಬ್ಬಿಸಿದ್ದು ಮಂಡ್ಯ ರಮೇಶ್ ಅವರ ‘ನಟನ’ ತಂಡ. ಷೇಕ್ಸ್ ಪಿಯರ್ ನ ‘ಟೆಂಪೆಸ್ಟ್’ ನಾಟಕವನ್ನು ವೈದೇಹಿ ಮಕ್ಕಳ ಮನಸ್ಸಿನ ಮೂಲೆಯಲ್ಲಿ ಕೂಡಿಸಬೇಕು ಎಂಬ ಉದ್ಧೇಶದಿಂದ ಚಂದ ಚಂದ ಹಾಡುಗಳ, ಗಮ್ಮತ್ತಿನ ಕುಂದಾಪ್ರ ಭಾಷೆಯ ಸೊಗಡಿನ ಮೂಲಕ ‘ಧಾಂ ದೂಂ ಸುಂಟರಗಾಳಿ’ ಕಟ್ಟಿಕೊಟ್ಟಿದ್ದರು.

ಕಡಲ ತಡಿ ಹಾಗೂ ಮಲೆನಾಡು ಹೀಗೆ ಎರಡರ ಸಂಸರ್ಗವಿರುವ ಜೀವನರಾಮ್ ಸುಳ್ಯ ಈ ನಾಟಕವನ್ನು ರಂಗಕ್ಕೇರಿಸಿದ್ದರು.

‘ಓಬೆಲೆ ಓಬೇಲೆ ಓಬೆಲೆ ಬೇಲೆ ಐಸಾ, ಕಡಲ ನಡುವೆ ನಡೆದ ಕಥೆಯ ಕೇಳಿರೆಲ್ಲ ಬಾಲ ಬಾಲೆ…’ ಎನ್ನುತ್ತಾ ಇಡೀ ತಂಡ ದೊಡ್ಡ ಹಡಗನ್ನು ರಂಗದ ಮೇಲೆ ತಂದೇಬಿಟ್ಟರು.

ಎಂತಹ ಹಾಯಿದೋಣಿ ಅದು, ಚಂದದ ಚಿತ್ತಾರದ, ಯಾರು ನೋಡಿದರೂ ಇದು ರಾಜಮನೆತನದ್ದೇ ಎಂದು ಹೇಳಿಬಿಡಬಹುದಾದ ಹಡಗು.

ಆದರೆ ಎಲ್ಲಿತ್ತೋ ಆ ಬಿರುಗಾಳಿ, ಭರ್ರನೆ ಬೀಸಿ ಇಡೀ ಹಡಗನ್ನು ಅಲ್ಲೋಲ ಕಲ್ಲೋಲ ಮಾಡಿ, ಒಳಗೆ ಬೆಂಕಿ ಉಕ್ಕಿಸಿ, ಇದ್ದವರನ್ನೆಲ್ಲಾ ಸಮುದ್ರಕ್ಕೆ ದೂಡಿ, ಓಹ್ ! ಎಲ್ಲರೂ, ರಾಜ, ಮಂತ್ರಿ, ರಾಜಕುಮಾರ, ಆಳು ಕಾಳು, ಅಡುಗೆ ಭಟ್ಟ ಎಲ್ಲರೂ ನೀರಿನ ಪಾಲಾಗಿಯೇ ಹೋದರು.

ಅಲ್ಲಿಂದಲೇ ನಾಟಕದ ಕಥೆ ಬಿಚ್ಚಿಕೊಳ್ಳಲು ಆರಂಭ.

ದ್ವೀಪದಲ್ಲಿ ಮಂತ್ರಬುದ್ಧಿ, ಆತನ ಮಗಳು ಕುಮಾರಿ, ಇವರ ಅಡಿಯಾಳಾಗಿ ಕಿರಾತ, ಬೇಕಾದ್ದು ಮಾಡುವವನಾಗಿ ಕಿನ್ನರ ಹೀಗೆ ಒಂದು ದಂಡೇ ಇದೆ.

ಈ ದಂಡಿಗೂ ಆ ಹಡಗು ಪಾಲಾದವರ ಮಧ್ಯೆ ಒಂದು ನಂಟಿದೆ. ಆ ನಂಟನ್ನು ಹಾಡು, ಹಾಸ್ಯ, ಕುಣಿತಗಳ ಮೂಲಕ ರಸವತ್ತಾಗಿ ಜೀವನರಾಂ ಬಿಚ್ಚಿಡುತ್ತಾ ಹೋದರು.

ಅವರು ನಿರ್ಮಿಸಿದ್ದ ಕಾಡು, ಆ ಗಾಳಿ ಕಿನ್ನರರು, ಆ ಹಡಗು, ಆ ಮರ, ಆ ಯಕ್ಷಿಣಿ ಎಲ್ಲವೂ ಮೋಡಿ ಮಾಡಿ ಬಿಸಾಕಿತ್ತು.

ರಂಗಮಂದಿರದಿಂದ ಹೊರಬಂದಾಗ ಮಂಡ್ಯ ರಮೇಶ್ ಅಲ್ಲಿಯೇ ನಿಂತಿದ್ದ, ಒಂದು ಗಾಢ ಹಗ್ ಕೊಟ್ಟು ‘ಅದ್ಭುತ’ ಎಂದೆ.

ಇದಾಗಿ ಒಂದಷ್ಟು ತಿಂಗಳು ಕಳೆದು ಹೋಗಿತ್ತು.

ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಇದೇ ನಾಟಕವನ್ನು ನೋಡಲು ಮತ್ತೆ ಕುಳಿತಿದ್ದೆ.

ಪಕ್ಕದಲ್ಲಿ ವೈದೇಹಿ.

ನಾಟಕ ಥೇಟ್ ಹಾಗೇ ಶುರುವಾಯಿತು. ಓಬೆಲೆ ಓಬೇಲೆ ಓಬೇಲೆ ಬೇಲೆ ಐಸಾ.. ಹಡಗು ರಂಗ ಏರಿತು, ಬಿರುಗಾಳಿ ಬೀಸಿತು, ಒಡೆದು ಹೋಗಿದ್ದೂ ಆಯ್ತು, ಇಡೀ ರಾಜ ಪರಿವಾರ ನೀರು ಪಾಲಾದದ್ದೂ ಆಯ್ತು.

ಇತ್ತ ದ್ವೀಪದೊಳಗಿದ್ದ ಮಂತ್ರಶಕ್ತಿ ಮಗಳು ಕುಮಾರಿಗೆ ಕಥೆ ಹೇಳಲು ಶುರು ಮಾಡಿದ. ತಾನು ಮಿಲಾನಿನ ರಾಜನಾಗಿದ್ದದ್ದು, ತಮ್ಮನ ಕುಯುಕ್ತಿಯಿಂದ ಸಮುದ್ರಕ್ಕೆಸೆಯಲ್ಪಟ್ಟದ್ದು, ಸಮುದ್ರದ ಅಲೆಗಳನ್ನು ಎದುರಿಸುತ್ತಾ ಈ ದ್ವೀಪ ಬಂದು ತಲುಪಿದ್ದು,

ಎಲ್ಲರೂ ಹಾಹಾಗೇ.. ‘ರಂಗಶಂಕರ’ದಲ್ಲಿ ಹೇಗಿತ್ತೋ ಹಾಗೆಯೇ ನಾಟಕ ಓಡುತ್ತಿತ್ತು ಕಿಂಚಿತ್ತೂ ಬದಲಾವಣೆಯಿರಲಿಲ್ಲ.

ಈ ದ್ವೀಪಕ್ಕೆ ಬಂದಾಗ ಅವನಿಗೆ ಎಂತಹ ಸವಾಲಿತ್ತು, ‘ಈ ದ್ವೀಪದಲ್ಲಿದ್ದ ಚೌಡಿ ನನ್ನ ಮೇಲೆ ಹಾಯ್ದು ಬಂದಳು. ಇವಳು ದ್ವೀಪದ ಮೂಲ ನಿವಾಸಿ..’ ಅಂತ ಮಂತ್ರಬುದ್ಧಿ ತನ್ನ ಸಂಭಾಷಣೆಯನ್ನು ನೀಟಾಗಿ ಒಪ್ಪಿಸುತ್ತಿದ್ದ. ನಾನೂ ನಾಟಕದಲ್ಲಿ ಮುಳುಗಿ ಹೋಗಿದ್ದೆ.

ಆಗ ವೈದೇಹಿ ನನ್ನ ಕಿವಿಯಲ್ಲಿ ‘ಇದು ಮೂಲನಿವಾಸಿಗಳನ್ನು ನಾಶ ಮಾಡಿದ ಕಥೆಯೂ ಹೌದಲ್ಲವಾ? ಅಮೇರಿಕಾದಲ್ಲಿ ಆಗಿದ್ದು ಹಾಗೇ ತಾನೆ?’ ಎಂದರು.

‘ಅರೆ! ಹೌದಲ್ಲಾ’ ಎನಿಸಿತು. ‘ಕತ್ತಲಲ್ಲಿ ಬೆಳಕು ಮಿಂಚಿ ಅಡಗಿತೇಳು ಬಣ್ಣ..’ ಎನ್ನುವಂತೆ, ವೈದೇಹಿ ಹಾಗೆ ಹೇಳಿದ್ದೇ ತಡ ನನಗೆ ಆ ನಾಟಕ ಕೇವಲ ನಾಟಕವಾಗಿ ಉಳಿಯಲಿಲ್ಲ. ಚರಿತ್ರೆಯ ಒಳಗಿನ ಏನೆಲ್ಲವನ್ನೂ ಹೊರಗೆಳೆದು ನಿಲ್ಲಿಸುವ ಆಟವೂ ಆಗಿ ಹೋಯಿತು.

ರಂಗಶಂಕರದಲ್ಲಿ ಈ ಇದೇ ನಾಟಕವನ್ನು ನಾನು ಮಗುವಲ್ಲಿ ಮಗುವಾಗಿ, ಅಚ್ಚರಿಗಣ್ಣುಗಳಿಂದ, ಬಾಯಿ ಬಿಟ್ಟುಕೊಂಡು, ಹಾಡಿಗೆ ತಲೆದೂಗುತ್ತಾ, ತಾಳಕ್ಕೆ ಚಪ್ಪಾಳೆ ಸೇರಿಸುತ್ತಾ ಒಂದು ಕಟ್ಟು ಕಥೆಯಂತೆ, ಮಾಂತ್ರಿಕ ಲೋಕದ ಒಂದು ತುಂಡಿನಂತೆ ನೋಡಿದ್ದೆ.

ಆದರೆ ಆ ಅದೇ ನಾಟಕ ಈಗ ನನಗೆ ಹಾಗೆ ಕಾಣುತ್ತಿಲ್ಲ.

ಆ ಹಾಡು, ಆ ಮಾತು, ಆ ದೃಶ್ಯ, ಎಲ್ಲವೂ ನನಗೆ ಅದರಾಚೆಗಿನ ಏನನ್ನೋ ಹೇಳುತ್ತಿತ್ತು. ಅದರಾಚೆಗಿನ ಸತ್ಯವನ್ನು ಮಂಡಿಸುತ್ತಿತ್ತು. ಅಥವಾ ಹೀಗೆ ಹೇಳಬಹುದೇನೋ ರಂಗಶಂಕರ ಹಾಗೂ ಡಾನ್ ಬಾಸ್ಕೋ ನಡುವೆ ವೈದೇಹಿ ಇದ್ದರು.

ನಾನು ಕೊಲಂಬಸ್ ನ ಬೆನ್ನುಬಿದ್ದು ಆಗಲೇ ಸಾಕಷ್ಟು ವರ್ಷಗಳಾಗಿ ಹೋಗಿದೆ.

ಕೊಲಂಬಸ್ ನ ಮಾತು ಬಿಡಿ ಯಾರ್ಯಾರು ದಿಕ್ಸೂಚಿಯನ್ನು ಕೈಲಿ ಹಿಡಿದು, ಬೈನಾಕ್ಯುಲರ್ ನ್ನು ಬಗಲಲ್ಲಿಟ್ಟುಕೊಂಡು ಹಡಗು ಹತ್ತಿದರೋ ಅವರನ್ನೆಲ್ಲಾ ಹಿಂಬಾಲಿಸಿದ್ದೇನೆ.

ಅವರು ಹಾಗೆ ಹಡಗು ಏರಿದ್ದು, ಕಂಡ ಕಂಡ ದೇಶಗಳಲ್ಲಿ ಕಾಲಿಟ್ಟದ್ದು, ಅವನ್ನು ತಾವೇ ಕಂಡುಹಿಡಿದದ್ದು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡದ್ದು, ‘ಅಲ್ಲಿದ್ದವರಿಗೆ ಏನೇನೂ ಬುದ್ಧಿ ಇಲ್ಲ, ನಯ ನಾಜೂಕು ಇಲ್ಲ, ಸಂಸ್ಕೃತಿ ಹೆಸರು ಎತ್ತಲೇಬೇಡಿ’ ಎಂದದ್ದು..

..‘ಇವೆಲ್ಲವನ್ನೂ ಅವರಿಗೆ ನಾವು ಕಲಿಸಿಕೊಡುತ್ತಿದ್ದೇವೆ. ಅದರಿಂದಾಗಿ ನಾಗರಿಕ ಪ್ರಪಂಚವನ್ನು ಸೃಷ್ಟಿಸುತ್ತಿದ್ದೇವೆ’ ಎಂದು ಸಾರಿದ್ದೂ, ಹೌದೌದು ಎಂದು ಹೌದಪ್ಪಗಳು ತಲೆದೂಗಿದ್ದೂ, ಚರಿತ್ರೆಕಾರರು ಇದನ್ನೇ ಬರದದ್ದೇ ಬರೆದದ್ದು, ಇದನ್ನೇ ನಾವು ನೀವೆಲ್ಲಾ ಪಠ್ಯಪುಸ್ತಕವಾಗಿ ಓದುತ್ತಿರುವುದು ಎಲ್ಲವೂ ಆಗುತ್ತಿದೆ.

ಹಾಗಿರುವಾಗ ವೈದೇಹಿ ಈ ಮಾತು ಹೇಳಿಬಿಟ್ಟಿದ್ದರು.

‘ಟೆಂಪೆಸ್ಟ್’ನ ಪ್ರಾಸ್ಪರೋ ಅಥವಾ ಈ ‘ಧಾಂ ದೂಂ ಸುಂಟರಗಾಳಿ’ಯ ಈ ಮಂತ್ರಬುದ್ಧಿ ನನಗೆ ಥೇಟ್ ಕೊಲಂಬಸ್ ನಂತೆ ಕಾಣಿಸಲು ಆರಂಭಿಸಿದ.

ನಾಟಕವನ್ನು ಹಾಗೇ ತಲೆಯಲ್ಲಿ ರೀವೈಂಡ್ ಮಾಡಿಕೊಂಡೆ.

ಸಮುದ್ರಪಾಲಾದ ಮಂತ್ರಬುದ್ಧಿ ಹಾಗೂ ಹೀಗೂ ದ್ವೀಪಕ್ಕೆ ಬಂದು ಸೇರುತ್ತಾನೆ. ಮಗಳಿಗೆ ಹೇಳುತ್ತಾನೆ ‘ಮಗೂ, ಸಮುದ್ರಯಾನ ಮಾಡಿದ ನಾವಿಕರನೇಕರು ಹೇಳಿದ ನಾನಾ ಕಥೆಗಳು ನನಗೆ ತಕ್ಷಣ ನೆನಪಿಗೆ ಬಂತು. ಚೌಡಿ, ದ್ವೀಪದ ಮೂಲನಿವಾಸಿ. ತುಂಬಾ ಕ್ರೂರಿ. ಅವಳನ್ನೆದುರಿಸಲು ನನ್ನ ಬಳಿ ಕತ್ತಿ ಉಂಟೇ ಗುರಾಣಿ ಉಂಟೇ ? ಇದ್ದದ್ದು ಸ್ವಲ್ಪ ಮಟ್ಟಿನ ಮಂತ್ರಬಲ ಮಾತ್ರ..’ ಎಂದವನೇ ಆ ಚೌಡಿಯನ್ನು ಕೊಲ್ಲುತ್ತಾನೆ. ಮಂತ್ರಬಲದಿಂದ ಮಗನನ್ನು ಅಡಿಯಾಳಾಗಿಸಿಕೊಳ್ಳುತ್ತಾನೆ. ಹೇಳುತ್ತಾನೆ- ‘ನೀನು ನನ್ನ ಗುಲಾಮನಾಗಿರು. ಪ್ರತಿಯಾಗಿ ನಿನಗೆ ಭಾಷೆ ಕಲಿಸುತ್ತೇನೆ, ಮನುಷ್ಯನನ್ನಾಗಿ ಮಾಡುತ್ತೇನೆ.’

ನಾಟಕದುದ್ದಕ್ಕೂ ಈ ಮೂಲನಿವಾಸಿಗೆ ಬಿರುದುಗಳೇ ಬಿರುದುಗಳು. ಅಯೋಗ್ಯ, ಚಪ್ಪರ ಚೌಡಿ ಮಗ, ಕೀಳುಭೂತ, ಕಿರಾತ, ನೆಲಗುಮ್ಮ, ಅಧಮಾಧಮ.

ಇಂತಹ ‘ಅಧಮಾಧಮ’ ಹೇಳುವುದು ಹೀಗೆ: ‘ ಏನು ಉದ್ಧರಿಸಿದ ಅಂತ ಇಷ್ಟು ಮಾತನಾಡುತ್ತಾನೆ ಇವ? ನೀವೇ ಹೇಳಿ. ಈ ದ್ವೀಪದ ಮೂಲೆ ಮೂಲೆಯೆಲ್ಲಾ ತಿರುಗಿ ಎಲ್ಲೆಲ್ಲಿ ಏನೇನು ಸಿಕ್ಕುತ್ತದೆ ಅಂತೆಲ್ಲಾ ತಿಳಿಸಿಕೊಟ್ಟೆ. ಅಷ್ಟೂ ತಿಳಿಯಿತಾ ಇಲ್ಲವಾ- ನನ್ನ ಮುವತ್ತೆರಡೂ ಹಲ್ಲನ್ನೂ ಲೆಕ್ಕ ಮಾಡಿದ. ಈ ದ್ವೀಪ ಯಾರದೆಂತ ಮಾಡಿದಿರಿ! ನನ್ನ ಅಮ್ಮಂದು! ನನಗೆ ವಂಶದಿಂದ ಬಂದದ್ದು. ಅದನ್ನೂ ಲಪಟಾಯಿಸಿದ ಸ್ವಾಮೀ,.’

ಹೀಗೆಲ್ಲಾ ‘ಕಿರಾತ’ ಹೇಳುತ್ತಲೇ ಹೋಗುತ್ತಿದ್ದ. ಇತ್ತ ನಾನು ಇದೇ ‘ಟೆಂಪೆಸ್ಟ್’ ನಾಟಕವನ್ನು ಇನ್ನು ಯಾರೆಲ್ಲಾ ಕನ್ನಡಕ್ಕೆ ತಂದಿದ್ದಾರೆ ಎಂದು ಹುಡುಕುತ್ತಾ ಹೋದೆ.

ಕುವೆಂಪು, ಮಾಸ್ತಿ, ಎ ಎನ್ ಮೂರ್ತಿರಾವ್.. ಟೆಂಪೆಸ್ಟ್ ‘ಬಿರುಗಾಳಿ’ಯಾಗಿ, ‘ಚಂಡಮಾರುತ’ವಾಗಿ ಕನ್ನಡಕ್ಕೆ ಬಂದಿತ್ತು. ಅದರ ಪುಟ ತೆರೆಯುತ್ತಾ ಹೋದೆ. ವಸಾಹತುಷಾಹಿ ಎನ್ನುವುದರ ಭೀಕರ ಚಿತ್ರ ಬಯಲಾಗಿತ್ತು.

ಆ ವೇಳೆಗೆ ಡಾ. ಕರೀಗೌಡ ಬೀಚನಹಳ್ಳಿ ಟೆಂಪೆಸ್ಟ್ ಹಾಗೂ ಅದರ ಕನ್ನಡ ಅವತರಣಿಕೆಗಳ ಅಧ್ಯಯನವನ್ನು ಬೆಂಬತ್ತಿ ಹೋದೆ. ಅಲ್ಲಿ ಷೇಕ್ಸ್ ಪಿಯರ್ ಸೃಷ್ಟಿಸಿದ ಪಾತ್ರಗಳ ಪೈಕಿ ಹ್ಯಾಮ್ಲೆಟ್ ಹೊರತುಪಡಿಸಿದರೆ ಅತಿ ಹೆಚ್ಚು ವಾದ ವಿದಾದ, ಟೀಕೆ ವ್ಯಾಖ್ಯಾನಕ್ಕೆ ಎಡೆಮಾಡಿಕೊಟ್ಟ ಪಾತ್ರವೆಂದರೆ ಕ್ಯಾಲಿಬನ್ (ಕಿರಾತ) ಎಂದಿತ್ತು.

ಒಂದೆಡೆ ಅಮೇರಿಕಾ ಇನ್ನೊಂದೆಡೆ ಇಂಗ್ಲೆಂಡ್ ಜಗತ್ತನ್ನು ತನ್ನ ಅಡಿಯಾಳಾಗಿಸಿಕೊಳ್ಳುತ್ತಾ ಹೋದ ಕಥೆ ಕಣ್ಮುಂದೆ ಬಿಚ್ಚಿಕೊಳ್ಳುತ್ತಾ ಹೋಯಿತು.

ತಕ್ಷಣವೇ ನನಗೆ ಇಂಗ್ಲೆಂಡ್ ನಲ್ಲಿ ಹರಸೇವ್ ಬಿಯಾನ್ಸ್ ಜೊತೆ ಕುಳಿತದ್ದು ನೆನಪಿಗೆ ಬಂತು.

ಏನೋ ಮಾತನಾಡುತ್ತಾ ಬ್ರಿಟನ್ ಗೆ ‘ಯುನೈಟೆಡ್ ಕಿಂಗ್ ಡಂ’ ಎಂದು ಬಳಸಿದ್ದೆ. ತಕ್ಷಣ ಅವರು ಯುನೈಟೆಡ್ ಕಿಂಗ್ ಡಂ ಅಲ್ಲ, ಬ್ರಿಟನ್ ಎಂದು ಗಂಭೀರವಾಗಿ ಹೇಳಿದರು.

ನನಗೆ ಇದರ ತಲೆಬುಡ ತಿಳಿಯಲಿಲ್ಲ.

‘ಯಾಕೆ ನಾವೆಲ್ಲರೂ ಚರಿತ್ರೆಯಲ್ಲಿ ಓದಿರುವುದು ‘ಗ್ರೇಟ್ ಬ್ರಿಟನ್, ಯುನೈಟೆಡ್ ಕಿಂಗ್ ಡಂ’ ಅಂತ ತಾನೆ?’ ಎಂದೆ.

ಅವರು ಕಡ್ಡಿ ತುಂಡರಿಸಿದಂತೆ ದೇಶಗಳನ್ನು ಅಡಿಯಾಳಾಗಿಸಿಕೊಳ್ಳುವ ಇಂಗ್ಲೆಂಡ್ ಗೆ ತಾನು ‘ಯುನೈಟೆಡ್’ ಎಂದು ಸಾರಿಕೊಳ್ಳುವ ಹಂಬಲ. ಆದರೆ ಅದೇ ಐರ್ಲೆಂಡ್ ನ ದೃಷ್ಟಿಯಿಂದ ನೋಡಿ, ಚರಿತ್ರೆ ಬೇರೆಯೇ ಇದೆ. ಅದು ಅರಸನಿಗೆ ಒಂದಾದರೆ ಆಳಿಗೆ ಮತ್ತೊಂದು ಎಂದರು.

ತಕ್ಷಣ ನನಗೆ ಸುಗತ ಶ್ರೀನಿವಾಸರಾಜು ಫೇಸ್ ಬುಕ್ ನಲ್ಲಿ ಅದೀಗ ತಾನೆ ಏರಿಸಿದ್ದ ಚಿನುವಾ ಅಚಿಬೆಯವರ ಮಾತು ನೆನಪಿಗೆ ಬಂತು- ‘ಸಿಂಹಗಳಿಗೆ ಅವರದೇ ಆದ ಚರಿತ್ರಕಾರರು ಇರುವವರೆಗೂ ಬೇಟೆ ಎನ್ನುವುದು ಬೇಟೆಗಾರರನ್ನು ಮಾತ್ರವೇ ವಿಜೃಂಬಿಸುತ್ತದೆ’

ಹೌದಲ್ಲಾ..!

ತಿಪಟೂರು ACಗೆ ₹ 3 ದಂಡ ಹಾಕಿದ ಕುರಿಗಾಹಿ!

Publicstory.in


ತಿಪಟೂರು: ಆಗಿನ ತಿಪಟೂರು ಉಪ ವಿಭಾಗಾಧಿಕಾರಿ ಅನುಮತಿ ಇಲ್ಲದೇ ಇಲ್ಲಿನ ಈರ್ಲಿಗೆರೆಗೆ ಬಂದೇ ಬಿಟ್ಟರು. ನಮಗೆಲ್ಲ ಕೋಪ. ಅಲ್ಲೇ ಅಧಿಕಾರಿಯನ್ನು ತಡೆದವು. ಮರದ ಕೆಳಗೆ ಕುರಿ ಮೇಯಿಸುತ್ತಿದ್ದ ಅಜ್ಜನಿಗೆ ಈ ಅಧಿಕಾರಿಗೆ ಏನ್ ಶಿಕ್ಷೆ ನೀಡೋಣ ಎಂದಿದ್ದೆ ತಡ ಅವರು ₹3 ಜುಲ್ಮಾನೆ ವಿಧಿಸಿದರು.

– ಇದು ತಿಪಟೂರಿನಲ್ಲಿ ನಡೆದ ಈಚೆಗೆ ಅಗಲಿದ ಹಿರಿಯ ರೈತ ಮುಖಂಡ‌ ಬೆನ್ನನಾಯಕನಹಳ್ಳಿ ದೇವರಾಜಣ್ಣ ನೆನಪಿನ ಕಾರ್ಯಕ್ರಮದಲ್ಲಿ ರೈತ ಸಂಘಟನೆ ಹೋರಾಟದ ಝಲಕ್ ಅನ್ನು ವಿವರಿಸಿದ ರೀತಿ.

ತಿಪಟೂರು ತಾಲ್ಲೂಕಿನಲ್ಲಿ ಆರಂಭದಲ್ಲಿ ಕಟ್ಟಿದ ರೈತ ಸಂಘಟನೆ,‌ ಹೋರಾಟದ ಹಲವು ನೆನಪುಗಳನ್ನು ಹಿರಿಯ ರೈತ ಮುಖಂಡ ಜನಾರ್ಧನ್ ನೆನಪು ಮಾಡಿಕೊಂಡರು.

ಇದನ್ನು ಓದಿ:ಕನಸುಗಳನ್ನು ಬಿಟ್ಟು ದೂರ ಸರಿದ ನಾಯಕ

ರೈತರ ಸಾಲ ವಸೂಲಿಗೆ ಗ್ರಾಮಕ್ಕೆ ಬಂದ ಅಧಿಕಾರಿಗಳನ್ನು ತಡೆದು ವಾಪಸ್ ಕಳುಸುತ್ತಿದ್ದವು. ರೈತ ಸಂಘಟನೆಯ ಗಮನಕ್ಕೆ ಬಾರದೇ ಈರ್ಲೇಗೆರೆಗೆ ಬಂದು ಉಪ ವಿಭಾಗಾಧಿಕಾರಿಗೆ ಕುರಿಗಾಹಿಯಿಂದ ದಂಡ ಹಾಕಿಸಿದ ಬಗೆಯನ್ನು ಸ್ವಾರಸ್ಯಕರವಾಗಿ ಹೇಳಿದರು.

ರೈತರು ಪ್ರತಿಭಟನೆ ಮಾಡಿ ಜೈಲಿಗೆ ಹೋಗಲು ಸಹ ಹಿಂಜರಿಯುತ್ತಿರಲಿಲ್ಲ. ಜೈಲಿನಿಂದ ರೈತ ಮುಖಂಡರು ಬಿಡುಗಡೆಯಾದ ದಿನ ಸಾವಿರಾರು ರೈತರು ಸೇರಿಗೆ ಮೆರವಣಿಗೆಯಲ್ಲಿ ಊರಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ರೈತ ಸಂಘಟನೆಯ ಹೋರಾಟ ರೈತರನ್ನು ಸ್ವಾತಂತ್ರಗೊಳಿಸು ರೈತ ಸ್ವಾತಂತ್ರ್ಯ ದ ಸಂಗ್ರಾಮದ ಅನೇಕ ಕತೆಗಳನ್ನು ವಿವರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಬೆನ್ನನಾಯಕನಹಳ್ಳಿ ದೇವರಾಜಣ್ಣ ಅವರ ಅನೇಕ ಹೋರಾಟದ ಕಥನಗಳನ್ನು ವಿವರಿಸಿದರು.

ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ರೈತ ಹೋರಾಟದಲ್ಲಿ ದೇವರಾಜಣ್ಣ ಅವರು ಭಾಗವಹಿಸಿದ ಬಗ್ಗೆ, ಅವರಲ್ಲಿದ್ದ ರೈತರ ಕುರಿತ ಕಾಳಜಿಯ ಬಗ್ಗೆ ಹೇಳಿದರು.

ಪ್ರಾಂತ ರೈತ ಸಂಘದ ಹಿರಿಯ ಮುಖಂಡ ಬಿ.ಉಮೇಶ್ ಮಾತನಾಡಿ, ತಿಪಟೂರು ಕೊಬ್ಬರಿ ಚಳವಳಿಯ ಹಿಂದೆ ದೇವರಾಜಣ್ಣ ಅವರ ಹೋರಾಟಗಳನ್ನು ಸ್ಮರಿಸಿದರು.

ಪರಿಸರವಾದಿ ಸಿ.ಯತಿರಾಜು, ಜನಸ್ಪಂದನಾ ಟ್ರಸ್ಟ್ ನ ಸಿ.ಬಿ.ಶಶಿಧರ್ ಮಾತನಾಡಿದರು.