ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ 18 ಮಮದಿಗೆ ಕೋವಿಡ್ 19 ದೃಢಪಟ್ಟಿದೆ. ಒಟ್ಟು ಸಮಖ್ಯೆ 630 ಕ್ಕೆ ತಲುಪಿದೆ. 45 ಮಂದಿ ಗುಣಮುಖ ಸೊಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತುಮಕೂರಿನಲ್ಲಿ 8, ಚಿಕ್ಕ ನಾಯಕನಹಳ್ಳಿಯಲ್ಲಿ 4, ಕುಣಿಗಲ್ 3, ಗುಬ್ಬಿ 1, ತುರುವೇಕೆರೆ 1, ತಿಪಟೂರು ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇದುವರೆಗೆ 267 ಮಂದಿ ಗುಣಮುಖರಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ. 345 ಮಂದಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ 1545 ಮಂದಿಯ ಮೆಲೆ ನಿಗಾ ವಹಿಸಲಾಗಿದೆ.