ಪಾವಗಡ: ಇಲ್ಲಿನ ರೈನ್ ಗೇಜ್ ಬಡಾವಣೆ ರಸ್ತೆ ಬದಿಯಲ್ಲಿ ಅಜ್ಜಿಯೊಬ್ಬರು ಮಳೆಯಲ್ಲಿ ನೆನೆಯುತ್ತಾ, ಚಳಿಗೆ ನಡುಗುತ್ತಾ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
ಈ ರಸ್ತೆಯಲ್ಲಿ ಓಡಾಡುವ ನೂರಾರು ಮಂದಿ ಅಜ್ಜಿಯ ಸ್ಥಿತಿ ನೋಡಿ ಮರುಗುತ್ತಿದ್ದಾರೆ. ಇವರಲ್ಲಿ ಕೆಲವರು ಅಜ್ಜಿಗೆ ಊಟ ನೀರು ಕೊಟ್ಟು ಮಾನವೀಯತೆ ಮೆರೆಯುತ್ತಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದೆ. ಆದರೆ ಅವರವರ ಬ್ಯುಸಿ ಶೆಡ್ಯುಲ್ ನಡುವೆ ಈ ಅಜ್ಜಿ ಬಗ್ಗೆ ಗಮನಹರಿಸಲು ಸಮಯವಾದರೂ ಎಲ್ಲಿರುತ್ತೆ ಅಲ್ವೆ?
ಅಜ್ಜಿ ಬಿಕ್ಷುಕಿಯಲ್ಲವಂತೆ ಚೆನ್ನಾಗಿ ಬಾಳಿ ಬದುಕಿದವರೇ. ಅನಾರೋಗ್ಯ ಪೀಡಿತರಾದ ಇವರನ್ನು ಮನೆಯವರು ಬೀದಿ ಪಾಲು ಮಾಡಿದ್ದಾರೆ. ಎಲ್ಲರಿಗೂ ವಯಸ್ಸಾಗೇ ಆಗುತ್ತೆ. ಆಗ ಅವರು ಮಾಡಿದ ತಪ್ಪೇನು ಎಂದು ಅರಿವಾಗುತ್ತೆ. ಆದರೆ ತಪ್ಪು ಸರಿ ಮಾಡಿಕೊಳ್ಳಲು ಅವಕಾಶ ಸಿಗಲ್ಲ.
ಈ ಬಡಾವಣೆಯ ಜನತೆ ಅಜ್ಜಿಯ ಸ್ಥಿತಿ ನೋಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಏನು ಮಾಡಲಾಗದೆ ಸುಮ್ಮನಾಗಿದ್ದಾರೆ. ರಸ್ತೆಯಲ್ಲಿ ಓಡಾಡುವವರ ಮುಂದೆ ಕೈ ಸನ್ನೆ ಮಾಡಿ ಅಳುವ ಅಜ್ಜಿಯ ಸ್ಥಿತಿ ನೋಡಿದರೆ ಎಂತವರಿಗೂ ಬೇಸರವಾಗುತ್ತದೆ.
ಶುಕ್ರವಾರ ಸಂಜೆ ಹೆಲ್ಪ್ ಸೊಸೈಟಿ, ನಮ್ಮ ಹಕ್ಕು ಸಂಘಟನೆಗಳ ಪ್ರಮುಖರಾದ ಮಾನಂ ಶಶಿಕಿರಣ್, ಗಿರಿ ಫ್ಯಾಷನ್ಸ್ ಗಿರಿ ಅಜ್ಜಿಗೆ ಆಸರೆ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರಿಗೆ ಸವಿ ದಂತ ಚಿಕಿತ್ಸಾಲಯದ ವೈದ್ಯ ಡಾ. ನರೇಂದ್ರಬಾಬು ಅಗತ್ಯ ಸಹಕಾರ ನಿಡುತ್ತಿದ್ದಾರೆ. ಅಧಿಕಾರಿಗಳು, ಸಂಘ ಸಂಸ್ಥೆಯವರು ಪರಿಹಾರ ಕಲ್ಪಿಸಲಿದ್ದಾರೆಯೇ? ಎಂಬ ಆಸೆಗಣ್ಣುಗಳಿಂದ ಅಜ್ಜಿ ಎದುರು ನೋಡುತ್ತಿದ್ದಾರೆ.