Sunday, December 7, 2025
Google search engine
Home Blog Page 25

ರಕ್ತದಾನ ಮಾಡಿ ಹೆಚ್ಚು ಜೀವಗಳನ್ನು ಉಳಿಸಿ: ವೂಡೇ ಪಿ ಕೃಷ್ಣ

ಕಳೆದ ಸಂಚಿಕೆಯಿಂದ……

ಡಾ.ಕೃಷ್ಣ ಕ್ಷಯರೋಗ ನಿವಾರಣಾ ಕಾರ್ಯದಲ್ಲಿ ತೊಡಗಿಸಿಕೊಂಡುದನ್ನು ಗುರುತಿಸಿ ಭಾರತೀಯ ಕ್ಷಯರೋಗ ಸಂಸ್ಥೆಯ ಕೇಂದ್ರ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರನ್ನಾಗಿ ಸರ್ಕಾರ ನೇಮಿಸಿತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗರ್ಭಿಣಿಯರಲ್ಲಿ ಅನಿಮಿಯಾ ನಿವಾರಣೆಗೆ ರೆಡ್‌ಕ್ರಾಸ್ ಕೈಗೊಂಡಿರುವ 12 ಬೈ 12 ಯೋಜನೆಯನ್ನು ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉಚಿತ

ರೆಡ್‌ ಕ್ರಾಸ್‌ ರಕ್ತನಿಧಿ ಮತ್ತಿತರ ಆರೋಗ್ಯಭಾಗ್ಯ ಕಾರ್ಯಕ್ರಮಗಳ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ವಿಶೇಷ ಅಭಿವೃದ್ಧಿ ಸಹಾಯಧನವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರಾಜ್ಯ ರೆಡ್‌ ಕ್ರಾಸ್ ರಕ್ತನಿಧಿಯು ಮಹಿಳೆಯರಿಂದ ಅತಿಹೆಚ್ಚು ರಕ್ತವನ್ನು ದಾನವಾಗಿ ಪಡೆದುದಕ್ಕಾಗಿ 2007ರಲ್ಲಿ ‘ಕರ್ನಾಟಕ ಏಡ್ಸ್‌ ಪ್ರಿವೆನ್ಷನ್ ಸೊಸೈಟಿ ಪ್ರಶಸ್ತಿ’ಯನ್ನು ಪಡೆಯಿತು. 1984ರಿಂದಲೂ ಡಾ. ಕೃಷ್ಣ ಅವರು ರೆಡ್‌ ಕ್ರಾಸ್‌ ಸಂಘಟನೆಯನ್ನು ಜನರಿಂದ ಜನರಿಗಾಗಿ ನೆರವಾಗುವ ಒಂದು ಆಂದೋಲನವನ್ನಾಗಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ.

2002ರಿಂದ ರೆಡ್‌ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಉನ್ನತ ಹುದ್ದೆಯಾದ ಗೌರವ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಈ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ.

ಬಹಳಷ್ಟು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಜರುಗುವಂತೆ ನಿಗಾವಹಿಸಿದ್ದಾರೆ. ಭಾರತೀಯ ರೆಡ್‌ ಕ್ರಾಸ್ ಸಂಸ್ಥೆಯಲ್ಲೂ ದಕ್ಷ ಆಡಳಿತಗಾರರಾಗಿ, ರಚನಾತ್ಮಕ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.

ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಯಶಸ್ಸು ಕಾಣಲೇಬೇಕು ಎಂಬ ಛಲ ಇವರಲ್ಲಿದೆ. ಇವರ ಕಾರ್ಯಕ್ರಮಗಳಲ್ಲಿ ಆರೋಗ್ಯ ಮಂತ್ರಿಗಳು, ರಾಜ್ಯಪಾಲರು ಬಂದು ಭಾಗವಹಿಸಿರುವುದು ಇವರ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ.

ಯಾವುದೇ ಗೊಂದಲ, ವಿವಾದಗಳಿಗೆ ಸಿಲುಕದೆ ಡಾ. ಡಿ. ಎಂ. ನಂಜುಂಡಪ್ಪ ನವರ ಜೊತೆಗೂಡಿ ರೇಸ್‌ಕೋರ್ಸ್‌ನ ಎದುರು ಭವ್ಯವಾದ ರೆಡ್‌ ಕ್ರಾಸ್ ಭವನವನ್ನು ನಿರ್ಮಿಸಿದರು. ಇದಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಸರ್ಕಾರದ ಒಪ್ಪಿಗೆ ಪಡೆದು ಒಂದು ಮಾದರಿ ರಕ್ತನಿಧಿಯನ್ನೂ ಸ್ಥಾಪಿಸಿದರು. ಹಾಗೇ ಬ್ಲಡ್ ಸೆಪರೇಷನ್ ಘಟಕಕ್ಕೂ ಸಹ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದರು.

‘ರಕ್ತದಾನ ಮಾಡಿ ಹೆಚ್ಚು ಜೀವಗಳನ್ನು ಉಳಿಸಿ’ ಎನ್ನುವ ಘೋಷಣೆಯನ್ನು ಡಾ. ಕೃಷ್ಣರವರು ಅಕ್ಷರಶಃ ಕಾರ್ಯಗತ ಮಾಡಿದ್ದಾರೆ. ಇವರು ರಕ್ತ ನೀಡುವ ಬಗ್ಗೆ ಸಲಹೆ ಮಾರ್ಗದರ್ಶನ ಮಾಡುವುದರ ಜೊತೆಗೆ ಸ್ವತಃ ಹಲವು ಬಾರಿ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ‘ರಕ್ತದಾನ ಮಾಡುವವರಿಗೆ ಸಾಮಾನ್ಯವಾಗಿ ಹೃದಯಾಘಾತವಾಗುವ ಸಾಧ್ಯತೆ ಕಡಿಮೆ’ ಎಂಬ ವೈಜ್ಞಾನಿಕ ಸತ್ಯವನ್ನು ರಕ್ತದಾನಿಗಳಿಗೆ ತಿಳಿಸುವಲ್ಲಿ ಕೃಷ್ಣರವರು ಮುಂಚೂಣಿಯಲ್ಲಿದ್ದಾರೆ.

ಜನರ ಕಣ್ಮಣಿಯಾದ ಅರಣ್ಯಾಧಿಕಾರಿ

0

ಲೇಖನ: ರವಿಗೌಡ, ವಕೀಲರು, ತುಮಕೂರು


ತುಮಕೂರು: ತಾಲೂಕಿನ ಅರಣ್ಯ ಇಲಾಖೆಯ RFO ಪವಿತ್ರ ಅವರ ಕಾರ್ಯವೈಖರಿಗೆ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆಯೆಂದರೆ ಮೂಗುಮುರಿಯುವ ಕಾಲಘಟ್ಟದಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಅರಣ್ಯ ಇಲಾಖೆಗೊಂದು ಮೆರುಗುತಂದಿದ್ದಾರೆ.

ಇತ್ತೀಚಿಗಷ್ಟೇ ತುಮಕೂರು ತಾಲೂಕಿನ ಮಂಚಕಲ್ ಕುಪ್ಪೆಯಲ್ಲಿ ಚಿರತೆ ಕಾಣಿಸಿಕೊಂಡು ಮೇಕೆಗಳನ್ನು ತಿಂದು ಹಾಕಿತ್ತು. ಆ ಭಾಗದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು. RFO ಪವಿತ್ರ ರವರು ತುರ್ತು ಕ್ರಮ ಕೈಗೊಂಡು ಕಾರ್ಯಪ್ರವೃತ್ತರಾಗಿ ಆದಷ್ಟು ಬೇಗ ಚಿರತೆಯನ್ನು ಬೋನಿಗೆ ಬೀಳಿಸಲಾಯಿತು.

ಪ್ರಕರಣ ಮಾಸುವ ಮುನ್ನವೇ ಎರಡು ಮೂರು ದಿನಗಳ ಹಿಂದೆ ಬೆಳ್ಳಾವಿಯಲ್ಲಿ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿತ್ತು ಈ ಸುದ್ದಿ ಎಲ್ಲೆಡೆ ಗಾಳಿಯಂತೆ ಹಬ್ಬಿ ಅರಣ್ಯ ಇಲಾಖೆಯವರನ್ನು ಜನತೆ ದೂಷಿಸುವಂತಯಿತು. ಆದರೂ ಛಲ ಬಿಡದೆ ಕ್ಷಿಪ್ರವಾಗಿ ಕಾರ್ಯಚರಣೆ ಕೈಗೊಂಡು ಪವಿತ್ರ ರವರ ನೇತೃತ್ವದಲ್ಲಿ ಚಿರತೆಯನ್ನು ಬೋನಿಗೆ ಬೀಳಸಲಾಯಿತು.

ಈಗ ಆ ಭಾಗದ ಜನತೆಯಲ್ಲಿ ಮಂದಹಾಸ ಮೂಡಿದೆ. ಅರಣ್ಯ ಇಲಾಖೆಯ ಬಗ್ಗೆ ನಂಬಿಕೆ ಮೂಡಿದೆ.. ಇಲ್ಲಿ ನಾವು ಹೇಳುತ್ತಿರುವುದು ಇಷ್ಟೇ ಒಬ್ಬ ಮಹಿಳಾ ಅಧಿಕಾರಿ ಹಗಲು ರಾತ್ರಿ ಎನ್ನದೆ ತನ್ನ ಜೀವದ ಹಂಗು ತೊರೆದು, ಇಲಾಖೆ ವಹಿಸಿರುವ ಜವಾಬ್ದಾರಿಯನ್ನ ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದಾರೆ.

ಮಕ್ಕಳಲ್ಲಿ ಅರಣ್ಯದ ಬಗ್ಗೆ ಹಾಗೂ ಪರಿಸರದ ಬಗ್ಗೆ ಅಸಕ್ತಿಯಾಗೋ ಜ್ಞಾನಾರ್ಜನೆ ಮೂಡಿಸಲು ಅವರುಗಳಿಗೆ ಅರಣ್ಯದ ಬಗ್ಗೆ ಹಾಗೂ ಪರಿಸರದ ಬಗ್ಗೆ ವರ್ಣ ಚಿತ್ರಗಳ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ.

ತಾಲೂಕಿನ ಹಳ್ಳಿಗಳಿಗೆ ತೆರಳಿ ಜನರಲ್ಲಿ ಅರಣ್ಯದ ಬಗ್ಗೆ ಕಾಡುಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅರಣ್ಯ ಭಾಗದ ಜನರುಗಳಿಗೆ ಕಾಡು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವುದು ಹಸಿರು ಚಿರತೆ, ಆನೆ, ಕರಡಿ, ಹಾವುಗಳು ದಾಳಿ ಮಾಡಿದಾಗ ಅವರಿಗೆ ಅವ ರೀತಿಯಾಗಿ ರಕ್ಷಣೆ ಪಡೆಯಬೇಕೆಂಬ ಮಾಹಿತಿಯನ್ನು ನೀಡುತ್ತಿದ್ದಾರೆ.

ತುಮಕೂರು ತಾಲೂಕಿನ ವಿಶೇಷವಾಗಿ ತುಮಕೂರು ನಗರದ ಹಸಿರೀರಣಕ್ಕಾಗಿ ವಿಶೇಷವಾದ ಒತ್ತನ್ನು ನೀಡಿದ್ದಾರೆ.

ರಸ್ತೆಯ ಬದಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ, ಎನ್ಎಸ್ಎಸ್ ಸಹಯೋಗದೊಂದಿಗೆ NSS ವಿದ್ಯಾರ್ಥಿಗಳಿಗೂ ಸಹ ಅರಣ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇವರ ಹಸಿರು ಕನ್ನಡದ ಭಾಗವಾಗಿ ಮರಳೂರಿನ ಸಿದ್ದಾರ್ಥ ಕಾಲೇಜು ಒಳಗಡೆ ಕ್ರೀಡಾಂಗಣದ ಸುತ್ತಲೂ ನೆಟ್ಟಿರುವ ಗಿಡಗಳು ಇಂದು ಮರಗಳಾಗಿ ರಾರಾಜಿಸುತ್ತಿವೆ.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ BE ಗ್ರಾಜುಯೇಟ್ ಆಗಿ ನಂತರ Mtech ಮುಗಿಸಿಕೊಂಡು.

ಅದೆಷ್ಟೋ ಖಾಸಗಿ ಕಂಪನಿ ಗಳಿಂದ ಇವರಿಗೆ ಕೆಲಸದ ಆಫರ್ ಗಳು ಬಂದರೂ ಸಹ ಗ್ರಾಮೀಣ ಭಾಗದ ರೈತ ಕುಟುಂಬದಿಂದ ಬಂದಿರುವ ಪವಿತ್ರರವರು ತಾವು ಬಂದಿರುವ ಗ್ರಾಮೀಣ ಭಾಗದ ರೈತ ಕುಟುಂಬಗಳಿಗೆ ತನ್ನಿಂದ ಏನಾದರೂ ಒಂದು ವಿಶೇಷವಾದ ಕಾರ್ಯವನ್ನು ಮಾಡಬೇಕೆಂಬ ಪಣತೊಟ್ಟು ಕಷ್ಟಪಟ್ಟು ಓದಿ ಅರಣ್ಯ ಇಲಾಖೆಗೆ ಸೇರಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎರಡು ಮಕ್ಕಳ ತಾಯಿಯಾಗಿ ಇವರ ಪತಿ ರವಿ ಅವರು ತುಮಕೂರು ಪಿಡಬ್ಲ್ಯೂಡಿ ಎಲ್ಲಿ AEE ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಮಾವನವರು ನಿಟ್ಟೂರು ಕೃಷ್ಣಮೂರ್ತಿ ರವರು ಇವರು ಸಹ ನಿವತ್ತ ಇಂಜಿನಿಯರ್ ಆಗಿ ಇವರ ಕುಟುಂಬ ಇವರ ಜೊತೆಗೆ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ನಮ್ಮ ತುಮಕೂರು ತಾಲೂಕಿನವರೇ ಆದ ಪವಿತ್ರರವರು ಅರಣ್ಯ ಇಲಾಖೆಯ ಇನ್ನು ಉನ್ನತ ಹುದ್ದೆಗೆ ಏರಲಿ ಎಂದು ತುಮಕೂರು ನಾಗರೀಕರ ಅಭಿಲಾಷೆ ಯಾಗಿದೆ.

ಒನಕೆ ಓಬವ್ವ ಒಂದು ನೆನಪು

0


ತುರುವೇಕೆರೆ: ಒನಕೆ ಓಬವ್ವನಂತಹ ಹತ್ತಾರು ವೀರ ಮಹಿಳೆಯರು ನಾಡಿನ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿರುವ ಅವರುಗಳ ಚರಿತ್ರೆಯನ್ನು ಈ ತಲೆಮಾರಿನ ಮಕ್ಕಳಿಗೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅಭಿಪ್ರಾಯಪಟ್ಟರು.


ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಓನಕೆ ಓಬವ್ವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಓಬವ್ವನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು
ಶತ್ರುಗಳ ದಾಳಿಯಿಂದ ಚಿತ್ರದುರ್ಗದ ಕೋಟಿಯನ್ನು ರಕ್ಷಣೆ ಮಾಡುವ ಮೂಲಕ ನಾಡಿನ ಹಾಗು ರಾಜನ ಬಗೆಗಿನ ಅತೀವ ಕಾಳಜಿಯನ್ನು ಓಬವ್ವ ತೋರಿದ್ದಾರೆ. ಅದೇ ರೀತಿ ಕನರ್ಾಟಕದ ಉದ್ದಕ್ಕೂ ರಾಜ ಪ್ರಭುತ್ವದ ಕಾಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮರಂತಹ ವೀರಾಗ್ರಹಿಣಿಯರು ನಾಡಿನ ಅಸ್ಥಿತ್ವ ಮತ್ತು ತಮ್ಮ ಪರಂಪರೆಯನ್ನು ಅನ್ಯ ಸಂಸ್ಕೃತಿಯ ದಾಳಿಗೆ ಸಿಕ್ಕಿ ಹಾಳಾಗದಂತೆ ನೋಡಿಕೊಳ್ಳಲು ತಮ್ಮ ಪ್ರಾಣ ತ್ಯಾಗಕ್ಕೂ ಹೆದರಲಿಲ್ಲ.
12 ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ವಚನ ಚಳವಳಿಯಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಅಮುಗೆರಾಯಮ್ಮ ಇಂತಹ ನೂರು ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದವರು.
ಮಹಿಳೆಯರು ಕೇವಲ ಗೃಹ ಕಾರ್ಯಗಳಿಗೆ ಮಾತ್ರ ಸೀಮಿತರಾಗದೆ ಆಧುನಿಕ ಯುಗದಲ್ಲಿ ಪುರುಷನಿಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ದುಡಿಯುವುದರೊಂದಿಗೆ ದೇಶ ಕಟ್ಟುವ ಕೆಲಸದಲ್ಲಿ ಸಹಬಾಗಿಯಾಗಿದ್ದಾರೆ. ಈ ನಾಡು ಹೆಣ್ಣಿಗೆ ಪವಿತ್ರ ಹಾಗು ಪೂಜನೀಯ ಸ್ಥಾನ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇದೇ ವೇಳೆ ದಬ್ಬೇಘಟ್ಟ ಹೋಬಳಿಯ ತಮಟೆ ಕಲಾವಿದೆ ಭಾಗ್ಯಮ್ಮನವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ಥೆದಾರ್ ಸುನಿಲ್ ಕುಮಾರ್, ಚುನಾವಣಾಧಿಕಾರಿ ಪಿ.ಕಾಂತರಾಜು, ಎಸ್.ಡಿ.ಎ ವತ್ಸಲಾ, ದಸಂಸ ಮುಖಂಡರಾದ ಬಾಣಸಂದ್ರ ಕೃಷ್ಣಮಾದಿಗ, ಡೊಂಕಿಹಳ್ಳಿ ರಾಮಣ್ಣ, ಜಗದೀಶ್, ಕೋಳಘಟ್ಟ ಕೇಶವ್, ದಿಲೀಪ್ ಕುಮಾರ್, ಬಾಳೇಕಾಯಿ ಶೇಖರ್, ನೀರುಗುಂದ ಮಹೇಶ್, ರಾಮಚಂದ್ರ ಪಾಲ್ಗೊಂಡಿದ್ದರು.

ಕಷ್ಟ ಕಂಡು ಕಣ್ಣೀರಾದ ಶಾಸಕ ಕೃಷ್ಣಪ್ಪ

0

ತುರುವೇಕೆರೆ: ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತುಮಕೂರು ಜಿಲ್ಲಾ ಬರ ಅಧ್ಯಯನ ತಂಡವು ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಭೂಮಿಗಳಿಗೆ ಗುರುವಾರ ಭೇಟಿ ನೀಡಿ ಮುಂಗಾರು ಹಂಗಾಮು ಬೆಳೆ ಹಾನಿಯ ವೀಕ್ಷಣೆ ಮಾಡಿ, ರೈತರ ಹಲವು ಸಮಸ್ಯೆಗಳನ್ನು ಆಲಿಸಿ, ನಷ್ಟ ಹೊಂದಿರುವ ರೈತರಿಗೆ ಸಕರ್ಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ನಂತರ ಪತ್ರರ್ಕರೊಂದಿಗೆ ಮಾತನಾಡಿದ ಅವರು ಬೆಳಗ್ಗೆ ಗುಬ್ಬಿಗೆ ಹೋಗಿ ಅಲ್ಲಿ ರೈತರು ಬೆಳೆದ ಬೆಳೆಗಳ ವೀಕ್ಷಣೆ ಮಾಡಿದೆವು. ಕಳೆದ ಎರಡು ದಿನಗಳಿಂದ ಸೋನೆ ಮಳೆ ಬಂದು ರಾಗಿ ಸೇರಿದಂತೆ ಮಂಗಾರು ಬೆಳೆಗಳು ಸ್ವಲ್ಪ ಹಸಿರು ಕಾಣುತ್ತವೆ ಆದರೆ ಈಗಾಗಲೇ ಬಹುಪಾಲು ಬೆಳೆಗಳು ಸಂಪೂರ್ಣ ಬಾಡಿ ಹೋಗಿವೆ.

ರಾಗಿ ಬೆಳೆ ರೈತರ ಕೈಗೆ ಸಿಗೋಲ್ಲ ಚಿಕ್ಕನಾಯಕನಹಳ್ಳಿ ತೀವ್ರ ಬರ ಇದೆ. ತುರುವೇಕೆರೆ, ತಿಪಟೂರೂ ಅದೇ ಕತೆ. ರೈತನ ಕಷ್ಟ ನೋಡಿದರೆ ಬಹಳ ನೋವಾಗುತ್ತದೆ. ಒಂದು ಎಕರೆ ಬೇಸಾಯ ಮಾಡಲು ರೈತರ ಕಷ್ಟ ನೋಡೋದಿಕ್ಕೆ ಆಗಲ್ಲ.

ರೈತ ದೈಹಿಕ ಹಾಗು ಆಥರ್ಿಕ ಸಂಪತ್ತನ್ನು ಆಕಾಶ ನೋಡಿ ಭೂಮಿಗೆ ಬೀಜ ಹಾಕಿದ್ದಾನೆ ಆರಂಭದಲ್ಲಿ ಒಂಚೂರು ಮಳೆ ಬಂದು ಈಗ ಸಂಪೂರ್ಣ ಮಳೆಹೋಗಿ ಬೆಳೆಯಲ್ಲಾ ಕಮರಿ ಹೋಗಿದೆ.

ಹಾಗಾಗಿ ನಾನು ಸಕರ್ಾರ ಒತ್ತಾಯ ಮಾಡುವುದು ಇಷ್ಟೇ ನೀವು ಕೇಂದ್ರದ ಕಡೆ ಕೈ ತೋರಿಸಿ ಕಾಲಹರಣ ಮಾಡದೆ ರೈತರ ಸಂಕಷ್ಟ ಆಲಿಸಿ. ಅಂದು ಎಚ್.ಡಿ.ಕುಮಾರ್ ಸ್ವಾಮಿಯವರು ಕೇಂದ್ರ ಸಕರ್ಾರವನ್ನು ಕೇಳದೆ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು.

ನಮ್ಮ ಪಕ್ಷ ರೈತರ ಪರವಾಗಿದ್ದು ರಾಜ್ಯದ ಎಲ್ಲ ಭಾಗಗಳಲ್ಲೂ ಭೇಟಿ ನೀಡಿ ರೈತರ ಕಷ್ಟ ಕೇಳುತ್ತಿದ್ದೇವೆ. ಶೀಘ್ರವೇ ಜೆಡಿಎಸ್ ವರಿಷ್ಠರಾದ ದೇವೇಗೌಡರೊಂದಿಗೆ ನಾವೆಲ್ಲ ಪ್ರಧಾನಿಗಳ ಹತ್ತಿರ ನಿಯೋಗ ಹೋಗಿ ರೈತರು ಅತೀವ ಸಂಕಷ್ಟದಲ್ಲಿದ್ದಾನೆ ನೀವು ಪರಿಹಾರದ ಹಣ ಕೊಡಬೇಕೆಂದು ಕೇಳುತ್ತೇವೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಸಚಿವರು ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡಿ ಪರಿಹಾರ ಕೊಡಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಇಒ ಶಿವರಾಜಯ್ಯ, ತಾಲ್ಲೂಕು ಕೃಷಿ ಅಧಿಕಾರಿ ಪೂಜಾ.ಬಿ, ತಿಪಟೂರು ಮುಖಂಡರಾದ ಶಾಂತಕುಮಾರ್, ಗುಬ್ಬಿ ನಾಗರಾಜು, ಕುಣಿಗಲ್ ಎನ್.ಜಗದೀಶ್, ಜೆಡಿ ಎಸ್ ವಕ್ತಾರ ವೆಂಕಟಾಪುರ ಯೋಗೀಶ್,
ಸ್ಥಳೀಯ ಮುಖಂಡರಾದ ವಿಜಯೇಂದ್ರ, ತ್ಯಾಗರಾಜು ಜಗದೀಶ್, ವಿಜಯಕುಮಾರ್, ಜಯಗಿರಿಶಂಕರ್, ಬೋರೇಗೌಡ ಮಾಯಸಂದ್ರ ಬಾಬು, ಸೋಮಣ್ಣ ಪಾಲ್ಗೊಂಡಿದ್ದರು.

ಆಪ್ತಸಮಾಲೋಚಕರ ನೇಮಿಸಿ- ಮಕ್ಕಳ ಸಂಸತ್ ನಲ್ಲಿ ಮಕ್ಕಳ ಒತ್ತಾಯ

ತುಮಕೂರು:- ಯುನಿಸೆಫ್ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಚೈಲ್ಡ್ ರೈಟ್ಸ್ ಟ್ರಸ್ಟ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ತುಮಕೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬಾಲಭವನ ದಲ್ಲಿ ತುಮಕೂರು ಜಿಲ್ಲೆಯ ಮಕ್ಕಳ ಹಕ್ಕುಗಳ ಸಂಸತ್ 2023 ಹಾಗೂ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪವಿತ್ರ ರವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪವಿತ್ರ ರವರು, ಶಾಲೆಗಳಲ್ಲಿ ಮಕ್ಕಳಿಂದಲೇ ಮಕ್ಕಳ ಸಂಸತ್ ಮಾಡಿಕೊಂಡು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಹಾಗೆಯೇ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಮಕ್ಕಳ ಮೂಲಕ ಮಕ್ಕಳ ಸಮಸ್ಯೆಗಳನ್ನು ಚರ್ಚಿಸಿ, ಮಕ್ಕಳಿಂದಲೇ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ತುರ್ತಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಮಕ್ಕಳ ಸಮಸ್ಯೆಗಳು ಏನೇ ಇದ್ದರೂ ಅಂಜಿಕೆ ಇಲ್ಲದೆ ಭಯಪಡದೆ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಸಮಸ್ಯೆಗಳು ಇರುವಾಗ ಮೌನವಾಗಿದ್ದರೆ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತವೆ. ಮಕ್ಕಳು ಅವರ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದರ ಮೂಲಕ ಶಿಕ್ಷಣದ ಕಡೆ ಹೆಚ್ಚು ಗಮನವನ್ನು ಕೊಡಬೇಕು. ನಿಮಗೆ ಸಮಸ್ಯೆಗಳು ಬಂದಾಗ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡುವ ಮುಖಾಂತರ ಸಹಾಯ ಪಡೆದುಕೊಳ್ಳಬಹುದು. ಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ಅನುಷಾರವರು ಮಾತನಾಡಿ, ಮಕ್ಕಳ ಹಕ್ಕುಗಳು ಎಲ್ಲರಿಗೂ ತಿಳಿದಿರಬೇಕು. ಬದುಕುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು, ರಕ್ಷಣೆ ಹೊಂದುವ ಹಕ್ಕುಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಉಪಯುಕ್ತವಾಗಿದೆ. ಯಾವುದೇ ಮಗು ಸಮಸ್ಯೆಗಳಿಂದ ಬಳಲಬಾರದು. ಸಮಸ್ಯೆ ಬಂದಾಗ ಪರಿಹಾರಗಳನ್ನು ಕಂಡುಕೊಳ್ಳಬೇಕು. ಯಾವುದೇ ಮಗು ಅಪೌಷ್ಟಿಕತೆಯಿಂದಾಗಲೀ, ಶಿಕ್ಷಣದಲ್ಲಾಗಲಿ, ಆರೋಗ್ಯದಲ್ಲಾಗಲಿ ಮತ್ತು ಭಾಗವಹಿಸುವಿಕೆಯಿಂದ ವಂಚಿತರಾಗಬಾರದು. ಈ ಮಕ್ಕಳ ಸಂಸತ್ ಮೂಲಕ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದರು.

ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆಯ ಶಿವರಾಜು ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸಮಸ್ಯೆಗಳು, ಮತ್ತು ಬೇಡಿಕೆಗಳನ್ನು ಸರ್ಕಾರ ತುರ್ತಾಗಿ ಪರಿಶೀಲಿಸಬೇಕಾಗಿದೆ. ಮಕ್ಕಳೇ ಅವರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಗುರ್ತಿಸಿ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ತಲುಪಿಸಿ ಅವುಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚರ್ಚಿಸಿ ಆಗ್ರಹಿಸಲು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಹಾಗೂ ಮಾನ್ಯ ಮುಖ್ಯಮಂತ್ರಿ ಗಳೊಂದಿಗೆ ಮಕ್ಕಳ ಸಮಾಲೋಚನೆಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಿಂದ ಇಬ್ಬರು ಮಕ್ಕಳನ್ನು ಜಿಲ್ಲಾ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸಲು ಜಿಲ್ಲಾ ಮಟ್ಟದ ಮಕ್ಕಳ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಮಂಜುನಾಥ್ ಅಮಲಗೊಂದಿ ರವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳನ್ನು ಸಹ ದೇಶದ ಪ್ರಜೆಗಳೆಂದು ಎಲ್ಲರೂ ಪರಿಗಣಿಸಬೇಕಿದೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳಾಗಿರುತ್ತಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಪ್ರಮಾಣ ಶೇಕಡಾ 34ರಷ್ಟಿದೆ. ಆದರೆ ಮಕ್ಕಳಿಗಾಗಿ ಮೀಸಲಿಡುವ ಒಟ್ಟು ಹಣ ತೀರಾ ಕಡಿಮೆ ಇರುತ್ತದೆ. ಆಗಾಗಿ ಮಕ್ಕಳನ್ನು ಸಹ ಆಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸಿಕೊಳ್ಳಬೇಕಿದೆ. ಜೊತೆಗೆ ನವೆಂಬರ್ ನಲ್ಲಿ ಪ್ರತಿ ಗ್ರಾಮ ಪಂಚಾಯತಿಯೂ ಸಹ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿ ಮಕ್ಕಳ ಹಕ್ಕುಗಳಿಗೆ ಧ್ವನಿಯಾಗಬೇಕಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಕ್ಕಳ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಹೇಳಿಕೊಳ್ಳಲು ಮಕ್ಕಳ ಹಕ್ಕುಗಳ ಸಂಸತ್ ಉತ್ತಮ ವೇದಿಕೆಯಾಗಿದೆ. ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸಿದರು. ಅದರಲ್ಲಿ ಬಹುತೇಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಆಪ್ತಸಮಾಲೋಚಕರನ್ನು ನೇಮಿಸಲು ಜಿಲ್ಲಾ ಮಕ್ಕಳ ಸಂಸತ್ ನಲ್ಲಿ ಮಕ್ಕಳು ಒತ್ತಾಯಿಸಿದರು. ತುಮಕೂರು ಜಿಲ್ಲೆಯಿಂದ ವಿದ್ಯಾರ್ಥಿಗಳಾದ ತಿರುಮಲ ಮತ್ತು ತೇಜಸ್ವಿನಿ ರವರು ಆಯ್ಕೆಯಾಗಿದ್ದಾರೆ. ಇವರು ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ನಲ್ಲಿ ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ಮಕ್ಕಳ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ವಿವರಿಸಲಾಯಿತು. ಮಕ್ಕಳಿಗೆ ಗುಂಪು ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳು ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ರಮೇಶ್ ರವರು, ಡಾ. ತೋತ್ಯ ನಾಯ್ಕ್ ರವರು, ಮಕ್ಕಳ ಸಹಾಯವಾಣಿ ಸಂಯೋಜಕರಾದ ಗೌರಮ್ಮ, ಅಜಯ್ ಕುಮಾರ್, ಪವಿತ್ರ ರವರು, ಮಕ್ಕಳ ರಕ್ಷಣಾ ಘಟಕದ ಶಿವಣ್ಣ ರವರು, ಬಾಲಭವನದ ಮಮತಾ ರವರು ಹಾಗೂ ವಿವಿಧ ಶಾಲಾ ಕಾಲೇಜುಗಳಿಂದ ಮಕ್ಕಳು ಭಾಗವಹಿಸಿದ್ದರು.

ಆಚಾರ್ ಪ್ರಕರಣ: ತನಿಖೆ ನಡೆಸಲಿ:ಡಾ.ಪವಿತ್ರಾರೆಡ್ಡಿ

0

ತುರುವೇಕೆರೆ: ತಾಲ್ಲೂಕಿನ ಕೆ.ಮಾವಿನಹಳ್ಳಿ ಕುಮಾರ್ ಆಚಾರ್ ಪೊಲೀಸ್ ವಶದಲ್ಲಿರುವಾಗ ಸಾವನ್ನಪ್ಪಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಸೂಕ್ತ ತನಿಖೆ ಮಾಡಿ, ಮೃತರ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡುವುದಾಗಿ ಕೆ.ಪಿ.ಸಿ.ಸಿ ಯ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷೆ ಡಾ.ಪವಿತ್ರಾ ಆರ್.ಪ್ರಭಾಕರ್ ರೆಡ್ಡಿಯವರು ತಿಳಿಸಿದರು.


ತಾಲ್ಲೂಕಿನ ಕೆ.ಮೇಲನಹಳ್ಳಿಯಲ್ಲಿರುವ ಕುಮಾರ್ ಆಚಾರ್ ಕುಟುಂಬದ ಸದಸ್ಯರನ್ನು ಬುಧವಾರ ಭೇಟಿ ಮಾಡಿ, ಸಾಂತ್ವನ ಹೇಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು
ಕುಮಾರ್ ಆಚಾರ್ ಸಾವು ಪೊಲೀಸ್ ದೌರ್ಜನ್ಯದಿಂದಲೇ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದಿದೆ. ಮೃತರು ಅವರ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದರು. ಅವರ ಕುಟುಂಬ ಈಗ ಅನಾಥವಾಗಿದೆ. ಪತ್ನಿ, ಪುಟ್ಟ ಮಗು, ತಂದೆ ಸೇರಿದಂತೆ ಹಲವು ಮಂದಿ ಜೀವನ ನಡೆಸುವುದೇ ಕಷ್ಟವಾಗಿ ಬೀದಿಗೆ ಬೀಳುವ ಪ್ರಸಂಗ ಬಂದಿದೆಂದು ಆಪಾದಿಸಿದರು ಅವರು
ಮೃತರ ಕುಟುಂಬಕ್ಕೆ ತಮ್ಮ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದೇನೆ. ಶೀಘ್ರವಾಗಿ ಸಿಓಡಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆಯನ್ನು ಕುಟುಂಬದ ಸದಸ್ಯರಿಗೆ ನೀಡಿದರು.


ಈ ಸಂದರ್ಭದಲ್ಲಿ ರಾಜ್ಯ ಕೆ.ಪಿ.ಸಿ.ಸಿ ಯ ಅಸಂಘಟಿತ ಕಾರ್ಮಿಕರ ಘಟಕದ ಪ್ರಧಾನ ಕಾರ್ಯದರ್ಶಿ ಮಾ.ನ.ಗುರುದತ್, ರಾಜ್ಯ ಓಬಿಸಿಯ ಉಪಾಧ್ಯಕ್ಷ ಚಿಕ್ಕನಾಯನಹಳ್ಳಿಯ ಡಾ.ವಿಜಯರಾಘವೇಂದ್ರ, ತಾಲ್ಲೂಕು ಕಾಂಗ್ರೆಸ್ ನ ಓಬಿಸಿ ಘಟಕದ ಅಧ್ಯಕ್ಷ ಸ್ಡುಡಿಯೋ ಮಹೇಂದ್ರ, ಪುಟ್ಟರಾಜ್, ದಲಿತ ಮುಖಂಡರಾದ ಕೆ.ಬಿ.ಹನುಮಂತಯ್ಯ, ಚಿಕ್ಕನಾಯಕನಹಳ್ಳಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಟಿ.ರಾಧ, ಗಾಯತ್ರಿ, ಸ್ಥಳೀಯ ವಿಶ್ವಕರ್ಮ ಸಮಾಜದ ಮುಖಂಡರಾದ ರಮೇಶ್, ವೇದಮೂರ್ತಿ, ಹುಲಿಕಲ್ ಕೃಷ್ಣಾಚಾರ್, ವೆಂಕಟೇಶ್, ಮಂಜುಳಾ, ಶಶಿಕುಮಾರ್, ಡಿ.ಆರ್.ಹುಚ್ಚಪ್ಪ, ಕಾರ್ಯದರ್ಶಿ ಚಂದ್ರು, ಜಿ.ಎನ್.ವಸಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದಬ್ಬೇಘಟ್ಟಕ್ಕೆ ಜೆಡಿಎಸ್ ಬರ ಅಧ್ಯಯನ ತಂಡ ಭೇಟಿ

ತುರುವೇಕೆರೆ: ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದ ತುಮಕೂರು ಜಿಲ್ಲಾ ಜೆಡಿಎಸ್ ನ ಬರ ಅಧ್ಯಯನ ತಂಡವು ನ.9ರಂದು ತಾಲ್ಲೂಕಿನ ದಬ್ಬೇಘಟ್ಟಕ್ಕೆ ಆಗಮಿಸಲಿದೆ ಎಂದು ತಾಲ್ಲೂಕು ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು
ರಾಜ್ಯ ಜೆಡಿಎಸ್ ವರಿಷ್ಠರ ಸೂಚನೆಯ ಮೇರೆಗೆ ರಚಿತಗೊಂಡಿರುವ ಬರ ಅಧ್ಯಯನ ತಂಡವು ಈಗಾಗಲೇ ರಾಜ್ಯದಲ್ಲಿ ಆವರಿಸಿರುವ ಬರದ ವಸ್ತು ಸ್ಥಿತಿಯನ್ನು ಅರಿತು ರೈತನಿಗೆ ಧೈರ್ಯ ತುಂಬುವ ಹಾಗು ಸರ್ಕಾರದಿಂದ ರೈತರಿಗೆ ಹಾಗಿರುವ ನಷ್ಟವನ್ನು ಕೊಡಿಸುವ ಆಶಯವನ್ನು ಹೊಂದಲಾಗಿದೆ.
ಆಡಳಿತರೂಢ ಕಾಂಗ್ರೆಸ್ ಸರ್ಕಾರ ರೈತರ ಬದುಕಿನಲ್ಲಿ ಚಲ್ಲಾಟವಾಡುತ್ತಿದೆ. ಮಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಹೀಗಿರುವಾಗ ರೈತರ ಸಮಸ್ಯೆಯ ಆಲಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ.
ಇದ್ದಬದ್ದ ಹಣವನ್ನೆಲ್ಲಾ ಖರ್ಚು ಮಾಡಿ ಭಿತ್ತನೆ ಮಾಡಿದ್ದಾನೆ. ಮಳೆಯಿಲ್ಲದೆ ಬಿತ್ತಿರುವ ಬೀಜವೂ ಸಹ ಮೊಳಕೆಯೊಡೆಯದೆ ಕಮರಿ ಹೋಗಿದೆ. ಹಾಗಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಬರ ಅಧ್ಯಯನ ಮಾಡಲು ಮುಂದಾಗಿ ರೈತರ ಕಷ್ಟಕ್ಕೆ ಮನಕರಗಿ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ರಚಿಸಿರುವ ಜಿಲ್ಲಾ ಬರ ಅಧ್ಯಯನ ತಂಡ ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ ಗ್ರಾಮಕ್ಕೆ ಮಧ್ಯಾಹ್ನ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ಮಾಡಲಿದೆ. ಆ ಸಮಯದಲ್ಲಿ ರೈತರು ಸ್ಥಳದಲ್ಲಿದ್ದು ತಮಗಾಗಿರುವ ನಷ್ಠದ ಬಗ್ಗೆ ಮಾಹಿತಿ ನೀಡಿ.
ಈ ತಂಡದಲ್ಲಿ ಮಾಜಿ ಸಚಿವ ಕುಣಿಗಲ್ ಡಿ.ನಾಗರಾಜಯ್ಯ, ಚಿಕ್ಕನಾಯಕನಹಳ್ಳಿಯ ಶಾಸಕ ಸುರೇಶ್ ಬಾಬು, ಗುಬ್ಬಿಯ ಪರಾಜಿತ ಅಭ್ಯರ್ಥಿ ನಾಗರಾಜು, ತಿಪಟೂರಿನ ಪರಾಜಿತ ಅಭ್ಯರ್ಥಿ ಶಾಂತಕುಮಾರ್ ಸೇರಿದಂತೆ ಜಿಲ್ಲೆಯ ಹಲವಾರು ಜೆಡಿಎಸ್ ಮುಖಂಡರು ಆಗಮಿಸಲಿದ್ದಾರೆ.
ಬರ ಅಧ್ಯಯನ ತಂಡವು ಗುರುವಾರ ಬೆಳಗ್ಗೆಯಿಂದಲೇ ಗುಬ್ಬಿ, ಚಿಕ್ಕನಾಯಕನ ಹಳ್ಳಿ, ತಿಪಟೂರು, ತುರುವೇಕೆರೆ ಮತ್ತು ಕುಣಿಗಲ್ ಗೆ ಭೇಟಿ ನೀಡಲಿದೆ. ಈ ತಂಡವು ಸಂಗ್ರಹಿಸಿದ ಮಾಹಿತಿಯನ್ನು ಬರದ ಜೆಡಿಎಸ್ ವರಿಷ್ಠರಿಗೆ ವರದಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಾರಿಗೇಹಳ್ಳಿ ದೊಡ್ಡೇಗೌಡ, ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜಿತ್, ಮುಖಂಡರಾದ ಕಣತೂರು ತಿಮ್ಮೇಗೌಡ, ಬಿ.ಪುರದ ಚಲುವರಾಜು ಇನ್ನಿತರರು ಉಪಸ್ಥಿತರಿದ್ದರು.

ನ.27ಕ್ಕೆ ಕರುನಾಡ ವಿಜಯಸೇನೆ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

0

ತುರುವೇಕೆರೆ: ತಾಲ್ಲೂಕು ಕರುನಾಡ ವಿಜಯಸೇನೆ ವತಿಯಿಂದ ನ.27 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತಧಾನ ಶಿಬಿರವನ್ನು ಪಟ್ಟಣದ ಕೆ. ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಸುರೇಶ್ ತಿಳಿಸಿದರು.
ಕರುನಾಡ ವಿಜಯಸೇನೆ ವತಿಯಿಂದ ನ. 27 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಆಚರಣೆಯ ಭಿತ್ತಿಪತ್ರವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಸೋಮವಾರ ಬೆಳಗ್ಗೆ 9 ಗಂಟೆಗೆ ಕರುನಾಡ ವಿಜಯಸೇನೆ ಕಚೇರಿ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮವನ್ನು ಸಿಪಿಐ ಬಿ.ಎನ್.ಲೋಹಿತ್ ಅವರಿಂದ ನೆರವೇರಲಿದೆ.
11 ಗಂಟೆಯಿಂದ ಸಂಜೆ 4ರ ವರೆಗೆ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಉಚಿತ ಕಣ್ಣಿನ ತಪಾಸಣೆ, ರಕ್ತಧಾನ ಶಿಬಿರ ಹಾಗೂ ಶಾಲಾ ಮಕ್ಕಳಿಂದ ನಾಡು-ನುಡಿ ಕುರಿತಂತೆ ನೃತ್ಯ ಸ್ಪರ್ಧೆಯ ಉಧ್ಘಾಟನಾ ಸಮಾರಂಭದಲ್ಲಿ ತಹಶೀಲ್ದಾರ್ ವೈ.ಎ.ರೇಣುಕುಮಾರ್, ಇಓ ಶಿವರಾಜಯ್ಯ, ಬಿಎಓ ಸೋಮಶೇಖರ್.ಎನ್, ಪ.ಪಂ.ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಡಾ.ಸುಪ್ರಿಯಾ, ಡಾ.ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 6:30 ಕ್ಕೆ ವಿಜಯಸೇನೆ ವತಿಯಿಂದ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜಯರಾಮ್ ಎ.ಎಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜಯಸೇನೆ ರಾಜ್ಯ ಉಪಾಧ್ಯಕ್ಷರಾದ ಸೋಮಶೇಖರ್, ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವಕ ಡಾ.ಎ.ನಾಗರಾಜು, ಕ್ರೀಡಾಪಟು ಸುನಿಲ್ಬಾಲ್ ಬಾಬು, ಹೇಮಾವತಿ ಎಂಜಿನಿಯರ್ ಕೆ.ಎಂ.ಬಿಂದಿ, ಕನ್ನಡದಲ್ಲಿ ಪಿಎಚ್.ಡಿ ಪಡೆದ ಡಾ.ಪಾಂಡುರಂಗಯ್ಯ ಎಚ್.ವಿ, ಡಾ.ಕೆ.ಬಿ.ಮಲ್ಲೇಶಾಚಾರ್ ಸಾಧಕರನ್ನು ವಿದಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಸನ್ಮಾನಿಸಲಿದ್ದಾರೆ.
ಬೀರೂರಿನ ಹೆಸರಾಂತ ನ್ಯೂ ಸೋನಿ ಮೆಲೋಡಿಸ್ ಆರ್ಕೆಸ್ಟ್ರಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೋರಿದ್ದಾರೆ.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆಯ ತಾಲ್ಲೂಕಿನ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು.

ಶಾಸಕ ಎಂ.ಟಿ.ಕೃಷ್ಣಪ್ಪನವರ ಜನತಾ ದರ್ಶನಕ್ಕೆ ರೈತರು, ಸಾರ್ವಜನಿಕರ ದಂಡು

0

ತುರುವೇಕೆರೆ: ಶಾಸಕ ಎಂ.ಟಿ.ಕೃಷ್ಣಪ್ಪನವರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಜನತಾ ದರ್ಶನ ಮಾಡಿ ರೈತರು, ಸಾರ್ವಜನಿಕರ ಆಹ್ವಾಲು ಸ್ವೀಕರಿಸಿದರು.
ರೈತರು ಮತ್ತು ಸಾರ್ವಜನಿಕರು ತಮ್ಮ ಜಮೀನು ಹಾಗು ಇನ್ನಿತರ ಕೆಲಸ ಕಾರ್ಯಗಳಿಗೆ ತುರುವೇಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರ ಬರುತ್ತಾರೆ. ಜೊತೆಗೆ ಶಾಸಕರು ತಾಲ್ಲೂಕು ಕಚೇರಿಯ ತಮ್ಮ ಕೊಠಡಿಯಲ್ಲಿ ಜನರ ಸಮಸ್ಯೆಗಳ ಆಲಿಸಲೆಂದೇ ಕುಳಿತಿದ್ದರು.
ಈ ವೇಳೆ ಕೆಲ ರೈತರು ಕಂದಾಯ ಇಲಾಖೆಗೆ ಸಂಬಂಧಿಸಿದ ಪೌತಿ ಖಾತೆ, ಪಹಣಿ ತಿದ್ದುಪಡಿ, ಪೋಡಿ, ಖಾತೆ ಬದಲಾವಣೆ, ಸಾಗುವಳಿ ಚೀಟಿ ನೀಡುವುದು, ಅಂಗವಿಕಲರ ವೇತನ, ನಿವೇಶನ, ಪಡಿತರ ಚೀಟಿ, ವೃದ್ದಾಪ್ಯವೇತನ, ವಿಧವಾ ವೇತನ, ಕಾಲು ದಾರಿ ಬಿಡಿಸುವುದು, ಅಕ್ರಮ ಸಕ್ರಮ ಜಮೀನು ಖಾತೆ ಮಾಡುವುದು, ಜಮೀನು ದುರಸ್ಥಿಗೊಳಿಸುವುದು, ಇತರೆ ಭೂ ದಾಖಲೆ ಹಾಗು ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಹಲವು ಅರ್ಜಿಗಳನ್ನು ಸ್ವೀಕರಿಸಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ನೇತೃತ್ವದಲ್ಲಿ ಕೆಲವನ್ನು ಸ್ಥಳದಲ್ಲೇ ಪರಿಹರಿಸಿ ಉಳಿದವುಗಳನ್ನು ಸಂಬಂಧಪಟ್ಟಅಧಿಕಾರಿಗಳು ಪರಿಹರಿಸುವಂತೆ ಸೂಚನೆ ನೀಡಿದರಲ್ಲದೆ
ರೈತರು, ಜನರ ಸೇವೆಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಇರುವುದು ಅವರನ್ನು ಕಚೇರಿಗಳಿಗೆ ಅಲೆಸದೆ ಕೆಲಸ ಮಾಡಿಕೊಡಿ. ಸರ್ಕಾರ ನೀಡುವ ಸೌಲಭ್ಯಗಳನ್ನು ಪ್ರಾಮಾಣಿಕವಾಗ ಅರ್ಹ ಫಲಾನುಭವಿಗಳಿಗೆ ನೀಡಿ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳಿಗೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬೆಳೆ ಪರಿಹಾರ ಪಡೆಯಲು ಹೀಗೆ ಮಾಡಿ…

ತುರುವೇಕೆರೆ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತಬಾಂಧವರು ಪರಿಹಾರದ ಹಣವನ್ನು ಪಡೆಯಲು ಖಡ್ಡಾಯವಾಗಿ ಎಫ್.ಐ.ಡಿ ಮಾಡಿಸಬೇಕೆಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಿಳಿಸಿದರು.


ಪಟ್ಟಣದ ಕೃಷಿ ಇಲಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಒಟ್ಟು 223726 ತಾಕುಗಳಿದ್ದು ಇದುವರೆವಿಗೂ ಫ್ರೂಟ್ ತಂತ್ರಾಂಶದಲ್ಲಿ 128328 ತಾಕುಗಳನ್ನು ಮಾತ್ರ ಸೇರ್ಪಡೆಗೊಳಿಸಿ, ರೈತರುಗಳು ಎಫ್.ಐ.ಡಿಗಳನ್ನು ಸೃಜನೆ ಮಾಡಿಸಿದ್ದಾರೆ. ಇನ್ನೂ 95398 ತಾಕುಗಳನ್ನು ಫ್ರೂಟ್ ತಂತ್ರಾಂಶದ ಎಫ್.ಐ.ಡಿಗಳಿಗೆ ಜೋಡಣೆ ಮಾಡಬೇಕಿದೆ.


2023-24ನೇ ಸಾಲಿನ ಮುಂಗಾರು ಹಂಗಾಮಿನ ಬರಪರಿಹಾರದ ಹಣವನ್ನು ಪಡೆದುಕೊಳ್ಳಲು ರೈತರು ಈ ಕೂಡಲೇ ತಮ್ಮ ಜಮೀನಿನ ಸರ್ವೇ ನಂಬರ್ ಗಳನ್ನು ಎಫ್.ಐ.ಡಿ ಗಳಿಗೆ ಸೇರ್ಪಡೆಗೊಳಿಸಬೇಕು. ಹಾಗು ಇದುವರೆವಿಗೂ ಎಫ್.ಐ.ಡಿ ಮಾಡಿಸದ ರೈತರು ಪಹಣಿ, ಆಧಾರ್, ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಫ್.ಐ.ಡಿಗಳನ್ನು ಸೃಜನೆ ಮಾಡಬೇಕಾಗಿ ಕೋರಿದರು.


ಸುದ್ದಿಗೋಷ್ಠಿಯಲ್ಲಿ ಕೃಷಿ ಹೋಬಳಿ ಕೇಂದ್ರದ ಅಧಿಕಾರಿ ಗಿರೀಶ್,ರುದ್ರಪ್ಪ ಮತ್ತು ಸಿಬ್ಬದಿಗಳು ಇದ್ದರು.