ತುರುವೇಕೆರೆ: ತಾಲ್ಲೂಕು ಕರುನಾಡ ವಿಜಯಸೇನೆ ವತಿಯಿಂದ ನ.27 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತಧಾನ ಶಿಬಿರವನ್ನು ಪಟ್ಟಣದ ಕೆ. ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಸುರೇಶ್ ತಿಳಿಸಿದರು.
ಕರುನಾಡ ವಿಜಯಸೇನೆ ವತಿಯಿಂದ ನ. 27 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಆಚರಣೆಯ ಭಿತ್ತಿಪತ್ರವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಸೋಮವಾರ ಬೆಳಗ್ಗೆ 9 ಗಂಟೆಗೆ ಕರುನಾಡ ವಿಜಯಸೇನೆ ಕಚೇರಿ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮವನ್ನು ಸಿಪಿಐ ಬಿ.ಎನ್.ಲೋಹಿತ್ ಅವರಿಂದ ನೆರವೇರಲಿದೆ.
11 ಗಂಟೆಯಿಂದ ಸಂಜೆ 4ರ ವರೆಗೆ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಉಚಿತ ಕಣ್ಣಿನ ತಪಾಸಣೆ, ರಕ್ತಧಾನ ಶಿಬಿರ ಹಾಗೂ ಶಾಲಾ ಮಕ್ಕಳಿಂದ ನಾಡು-ನುಡಿ ಕುರಿತಂತೆ ನೃತ್ಯ ಸ್ಪರ್ಧೆಯ ಉಧ್ಘಾಟನಾ ಸಮಾರಂಭದಲ್ಲಿ ತಹಶೀಲ್ದಾರ್ ವೈ.ಎ.ರೇಣುಕುಮಾರ್, ಇಓ ಶಿವರಾಜಯ್ಯ, ಬಿಎಓ ಸೋಮಶೇಖರ್.ಎನ್, ಪ.ಪಂ.ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಡಾ.ಸುಪ್ರಿಯಾ, ಡಾ.ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 6:30 ಕ್ಕೆ ವಿಜಯಸೇನೆ ವತಿಯಿಂದ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜಯರಾಮ್ ಎ.ಎಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜಯಸೇನೆ ರಾಜ್ಯ ಉಪಾಧ್ಯಕ್ಷರಾದ ಸೋಮಶೇಖರ್, ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವಕ ಡಾ.ಎ.ನಾಗರಾಜು, ಕ್ರೀಡಾಪಟು ಸುನಿಲ್ಬಾಲ್ ಬಾಬು, ಹೇಮಾವತಿ ಎಂಜಿನಿಯರ್ ಕೆ.ಎಂ.ಬಿಂದಿ, ಕನ್ನಡದಲ್ಲಿ ಪಿಎಚ್.ಡಿ ಪಡೆದ ಡಾ.ಪಾಂಡುರಂಗಯ್ಯ ಎಚ್.ವಿ, ಡಾ.ಕೆ.ಬಿ.ಮಲ್ಲೇಶಾಚಾರ್ ಸಾಧಕರನ್ನು ವಿದಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಸನ್ಮಾನಿಸಲಿದ್ದಾರೆ.
ಬೀರೂರಿನ ಹೆಸರಾಂತ ನ್ಯೂ ಸೋನಿ ಮೆಲೋಡಿಸ್ ಆರ್ಕೆಸ್ಟ್ರಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೋರಿದ್ದಾರೆ.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆಯ ತಾಲ್ಲೂಕಿನ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು.
ನ.27ಕ್ಕೆ ಕರುನಾಡ ವಿಜಯಸೇನೆ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on