Saturday, September 21, 2024
Google search engine
Homeಜಸ್ಟ್ ನ್ಯೂಸ್ದಬ್ಬೇಘಟ್ಟಕ್ಕೆ ಜೆಡಿಎಸ್ ಬರ ಅಧ್ಯಯನ ತಂಡ ಭೇಟಿ

ದಬ್ಬೇಘಟ್ಟಕ್ಕೆ ಜೆಡಿಎಸ್ ಬರ ಅಧ್ಯಯನ ತಂಡ ಭೇಟಿ

ತುರುವೇಕೆರೆ: ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದ ತುಮಕೂರು ಜಿಲ್ಲಾ ಜೆಡಿಎಸ್ ನ ಬರ ಅಧ್ಯಯನ ತಂಡವು ನ.9ರಂದು ತಾಲ್ಲೂಕಿನ ದಬ್ಬೇಘಟ್ಟಕ್ಕೆ ಆಗಮಿಸಲಿದೆ ಎಂದು ತಾಲ್ಲೂಕು ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು
ರಾಜ್ಯ ಜೆಡಿಎಸ್ ವರಿಷ್ಠರ ಸೂಚನೆಯ ಮೇರೆಗೆ ರಚಿತಗೊಂಡಿರುವ ಬರ ಅಧ್ಯಯನ ತಂಡವು ಈಗಾಗಲೇ ರಾಜ್ಯದಲ್ಲಿ ಆವರಿಸಿರುವ ಬರದ ವಸ್ತು ಸ್ಥಿತಿಯನ್ನು ಅರಿತು ರೈತನಿಗೆ ಧೈರ್ಯ ತುಂಬುವ ಹಾಗು ಸರ್ಕಾರದಿಂದ ರೈತರಿಗೆ ಹಾಗಿರುವ ನಷ್ಟವನ್ನು ಕೊಡಿಸುವ ಆಶಯವನ್ನು ಹೊಂದಲಾಗಿದೆ.
ಆಡಳಿತರೂಢ ಕಾಂಗ್ರೆಸ್ ಸರ್ಕಾರ ರೈತರ ಬದುಕಿನಲ್ಲಿ ಚಲ್ಲಾಟವಾಡುತ್ತಿದೆ. ಮಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಹೀಗಿರುವಾಗ ರೈತರ ಸಮಸ್ಯೆಯ ಆಲಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ.
ಇದ್ದಬದ್ದ ಹಣವನ್ನೆಲ್ಲಾ ಖರ್ಚು ಮಾಡಿ ಭಿತ್ತನೆ ಮಾಡಿದ್ದಾನೆ. ಮಳೆಯಿಲ್ಲದೆ ಬಿತ್ತಿರುವ ಬೀಜವೂ ಸಹ ಮೊಳಕೆಯೊಡೆಯದೆ ಕಮರಿ ಹೋಗಿದೆ. ಹಾಗಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಬರ ಅಧ್ಯಯನ ಮಾಡಲು ಮುಂದಾಗಿ ರೈತರ ಕಷ್ಟಕ್ಕೆ ಮನಕರಗಿ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ರಚಿಸಿರುವ ಜಿಲ್ಲಾ ಬರ ಅಧ್ಯಯನ ತಂಡ ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ ಗ್ರಾಮಕ್ಕೆ ಮಧ್ಯಾಹ್ನ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ಮಾಡಲಿದೆ. ಆ ಸಮಯದಲ್ಲಿ ರೈತರು ಸ್ಥಳದಲ್ಲಿದ್ದು ತಮಗಾಗಿರುವ ನಷ್ಠದ ಬಗ್ಗೆ ಮಾಹಿತಿ ನೀಡಿ.
ಈ ತಂಡದಲ್ಲಿ ಮಾಜಿ ಸಚಿವ ಕುಣಿಗಲ್ ಡಿ.ನಾಗರಾಜಯ್ಯ, ಚಿಕ್ಕನಾಯಕನಹಳ್ಳಿಯ ಶಾಸಕ ಸುರೇಶ್ ಬಾಬು, ಗುಬ್ಬಿಯ ಪರಾಜಿತ ಅಭ್ಯರ್ಥಿ ನಾಗರಾಜು, ತಿಪಟೂರಿನ ಪರಾಜಿತ ಅಭ್ಯರ್ಥಿ ಶಾಂತಕುಮಾರ್ ಸೇರಿದಂತೆ ಜಿಲ್ಲೆಯ ಹಲವಾರು ಜೆಡಿಎಸ್ ಮುಖಂಡರು ಆಗಮಿಸಲಿದ್ದಾರೆ.
ಬರ ಅಧ್ಯಯನ ತಂಡವು ಗುರುವಾರ ಬೆಳಗ್ಗೆಯಿಂದಲೇ ಗುಬ್ಬಿ, ಚಿಕ್ಕನಾಯಕನ ಹಳ್ಳಿ, ತಿಪಟೂರು, ತುರುವೇಕೆರೆ ಮತ್ತು ಕುಣಿಗಲ್ ಗೆ ಭೇಟಿ ನೀಡಲಿದೆ. ಈ ತಂಡವು ಸಂಗ್ರಹಿಸಿದ ಮಾಹಿತಿಯನ್ನು ಬರದ ಜೆಡಿಎಸ್ ವರಿಷ್ಠರಿಗೆ ವರದಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಾರಿಗೇಹಳ್ಳಿ ದೊಡ್ಡೇಗೌಡ, ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜಿತ್, ಮುಖಂಡರಾದ ಕಣತೂರು ತಿಮ್ಮೇಗೌಡ, ಬಿ.ಪುರದ ಚಲುವರಾಜು ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?