ತುಮಕೂರು ಗ್ರಾಮಾಂತರ
BJP ಸುರೇಶ್ ಗೌಡ 23735 ಮುನ್ನಡೆ
JDS 17612
Cong 1142
ಸಿರಾ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – 17404
ಜೆಡಿಎಸ್- 12775
ಬಿಜೆಪಿ- 6952
ಮುನ್ನಡೆ: 4629 ಟಿ.ಬಿ.ಜಯಚಂದ್ರ ಮುನ್ನಡೆ
ಕುಣಿಗಲ್
Cong 16229 ರಂಗನಾಥ್ ಮುನ್ನಡೆ
Bjp 11560
JDS. 9170
ತುಮಕೂರು ಗ್ರಾಮಾಂತರ
BJP ಸುರೇಶ್ ಗೌಡ 23735 ಮುನ್ನಡೆ
JDS 17612
Cong 1142
ಸಿರಾ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – 17404
ಜೆಡಿಎಸ್- 12775
ಬಿಜೆಪಿ- 6952
ಮುನ್ನಡೆ: 4629 ಟಿ.ಬಿ.ಜಯಚಂದ್ರ ಮುನ್ನಡೆ
ಕುಣಿಗಲ್
Cong 16229 ರಂಗನಾಥ್ ಮುನ್ನಡೆ
Bjp 11560
JDS. 9170
ಗುಬ್ಬಿಯಲ್ಲಿ ಮುನ್ನಡೆಗೆ ಬಂದ ಜೆಡಿಎಸ್
ಬಿಜೆಪಿ 4005
ಕಾಂಗ್ರೆಸ್ 7660
ಜೆಡಿಎಸ್ -8003
343 ಮತಗಳಿಂದ ಜೆಡಿಎಸ್ ನಾಗರಾಜು ಮುನ್ನಡೆ
ಗುಬ್ಬಿಯಲ್ಲಿ ಮುನ್ನಡೆಗೆ ಬಂದ ಜೆಡಿಎಸ್
ಬಿಜೆಪಿ 4005
ಕಾಂಗ್ರೆಸ್ 7660
ಜೆಡಿಎಸ್ -8003
343 ಮತಗಳಿಂದ ಜೆಡಿಎಸ್ ನಾಗರಾಜು ಮುನ್ನಡೆ
ತುಮಕೂರು ನಗರ 6 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಜೆಡಿಎಸ್
ಬಿಜೆಪಿ 17077
ಜೆಡಿಎಸ್ 18936
ಕಾಂಗ್ರೆಸ್ 15094
ಜೆಡಿಎಸ್ ನ ಗೋವಿಂದರಾಜು 1854 ಮತಗಳಿಂದ ಮುನ್ನಡೆ
ತುಮಕೂರು ಗ್ರಾಮಾಂತರ ಬಿಜೆಪಿ 5107 ಮುನ್ನಡೆ
ಬಿಜೆಪಿ -23722
ಜೆಡಿಎಸ್-18615
ಶಿರಾ 1862 ಮತಗಳಿಂದ ಕಾಂಗ್ರಸ್ ಮುನ್ನಡೆ
ಜೆಡಿಎಸ್ ಉಗ್ರೇಶ್ 2882
ಬಿಜೆಪಿ ರಾಜೇಶ್ ಗೌಡ 1943
ಕಾಂಗ್ರೆಸ್ ಟಿಬಿ ಜಯಚಂದ್ರ 4744
ತುಮಕೂರು ನಗರ ಜೆಡಿಎಸ್ ಮುನ್ನಡೆ
ಕಾಂಗ್ರೆಸ್ : 1685
ಜೆಡಿಎಸ್: 3612
ಬಿಜೆಪಿ: 3001
ತಿಪಟೂರು
ಕಾಂಗ್ರೆಸ್ 4114
ಬಿಜೆಪಿ2740
ಜೆಡಿಎಸ್1375
ಕಾಂಗ್ರೆಸ್ 1374 ಮುನ್ನಡೆ
ಚಿಕ್ಕನಾಯಕನಹಳ್ಳಿ ಮೂರನೇ ಸುತ್ತು ಮುಕ್ತಾಯ,ಬಿಜೆಪಿ ಮುನ್ನಡೆ
ಕಾಂಗ್ರೆಸ್ : 8310
ಜೆಡಿಎಸ್: 8258
ಬಿಜೆಪಿ: 10112
1802 ಮತಗಳಿಂದ ಮಾಧುಸ್ವಾಮಿ ಮುನ್ನಡೆ
ಕುಣಿಗಲ್
ಕಾಂಗ್ರೆಸ್11861
ಬಿಜೆಪಿ8210
ಜೆಡಿಎಸ್6932
ಕಾಂಗ್ರೆಸ್ ಮುನ್ನಡೆ3651
ತುಮಕೂರು ಬ್ರೇಕಿಂಗ್…
ಅಂಚೆ ಮತ ಎಣಿಕೆ ಆರಂಭ.
ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಮಾಧುಸ್ವಾಮಿ ಮುನ್ನಡೆ.
ತಿಪಟೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ನಾಗೇಶ್ ಮುನ್ನಡೆ.
ತುರುವೇಕೆರೆ – ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಮುನ್ನಡೆ.
ಕುಣಿಗಲ್ – ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಮುನ್ನಡೆ.
ತುಮಕೂರು ನಗರ – ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಮುನ್ನಡೆ.
ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ಮುನ್ನಡೆ.
ಕೊರಟಗೆರೆ ಕಾಂಗ್ರೆಸ್ ನ ಪರಮೇಶ್ವರ್ ಮುನ್ನಡೆ.
ಗುಬ್ಬಿ ಬಿಜೆಪಿ ದಿಲೀಪ್ ಕುಮಾರ್ ಮುನ್ನಡೆ.
ಶಿರಾ ಕಾಂಗ್ರೆಸ್ ನ ಟಿ.ಬಿ. ಜಯಚಂದ್ರ ಮುನ್ನಡೆ.
ಪಾವಗಡ ಜೆಡಿಎಸ್ ನ ತಿಮ್ಮರಾಯಪ್ಪ ಮುನ್ನಡೆ.
ಮಧುಗಿರಿ ಕಾಂಗ್ರೆಸ್ ನ ಕೆ.ಎನ್.ರಾಜಣ್ಣ ಮುನ್ನಡೆ.
ತುಮಕೂರು: ವಿಧಾನ ಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಕಾರ್ಯಕರ್ತರನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಬೆಳಿಗ್ಗೆ 8ಕ್ಕೆ ಸರಿಯಾಗಿ ಮತ ಎಣಿಕೆ ನಡೆಯಲಿದ್ದು, ಮೊದಲಿಗೆ ಅಂಚೆ ಮತ ಎಣಿಕೆ ನಡೆಯಲಿದೆ.
8.30ಕ್ಕೆ ಇವಿಎಂ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 11.30ರ ಒಳಗೆ ಫಲಿತಾಂಶ ಬರಲಿದೆ.

ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( B C NAGESH) ಸ್ಪರ್ಧಿಸಿರುವ ತಿಪಟೂರು ಕ್ಷೇತ್ರ ಕುತೂಹಲ ಮೂಡಿಸಿದೆ. ಪಠ್ಯ ಪರಿಷ್ಕರಣೆಯ ವಿಷಯದಲ್ಲಿ ವಿವಾದಕ್ಕೆ ಒಳಗಾಗಿದ್ದರು. ಅವರ ಗೆಲುವು ಸೋಲಿನ ಬಗ್ಗೆ ಇಡೀ ರಾಜ್ಯ, ಶೈಕ್ಷಣಿಕ ವಲಯ ಕುತೂಹಲದಿಂದ ಕಾದಿದೆ. ಇಲ್ಲಿ ಕಾಂಗ್ರೆಸ್ ನ ಷಡಕ್ಷರಿ ನೇರ ಸ್ಪರ್ಧಿ.
ತಮ್ಮ ಮಾತುಗಳಿಂದಲೇ ರೈತರು, ಸ್ವಾಮೀಜಿಗಳು, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy)ಸಹ ಕುತೂಹಲದ ಕ್ಷೇತ್ರವಾಗಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಮುಖ್ಯಮಂತ್ರಿ ಗಾದಿಗೆ ಹತ್ತಿರದಲ್ಲಿರುವ ಕೊರಟಗೆರೆ ಕ್ಷೇತ್ರದ ಡಾ.ಜಿ.ಪರಮೇಶ್ವರ್ (Dr G.Parmeshwer) ಅವರ ಫಲಿತಾಂಶವನ್ನು ಸಹ ಇಡೀ ರಾಜ್ಯ ಕುತೂಹಲದಿಂದ ಗಮನಿಸುತ್ತಿದೆ. ಇಲ್ಲಿ ಜೆಡಿಎಸ್ ನೇರ ಸ್ಪರ್ಧೆ ಒಡ್ಡಿದೆ.
ಕಳೆದ ಚುನಾವಣೆಯ ನೋಟ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಗೆದ್ದಿತ್ತು. ಆರಂಭದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇತ್ತು. ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆಗೆ ಏರಿತ್ತು. ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ಸೀಟುಗಳನ್ನು ಗೆದಿತ್ತು.
ಈ ಬಾರಿ 224 ಕ್ಷೇತ್ರಗಳಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತುಮಕೂರು: ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮೊದಲಿಗೆ ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಗುವುದು.
ಇಟಿಪಿಬಿಎಸ್ ಮತ ಎಣಿಕೆಗಾಗಿ ಕ್ಯೂಆರ್ ಕೋಡ್ ರೀಡರ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಟ್ರೋಲ್ ಯೂನಿಟ್ಗಳ ಮತ ಎಣಿಕೆ ಮೇಜುಗಳ ಮೇಲೆ ಕ್ರಮವಾಗಿ 1 ರಿಂದ 14ರವರೆಗೆ ಸಂಖ್ಯೆಯನ್ನು ನಮೂದಿಸಲಾಗುವುದು. ಮತಗಟ್ಟೆ ಸಂಖ್ಯೆಯ ಕ್ರಮಾಂಕದಲ್ಲಿಯೇ ಕಂಟ್ರೋಲ್ ಯೂನಿಟ್ಗಳನ್ನು ಎಣಿಕೆಗೆ ಪೂರೈಸಲಾಗುವುದು.

ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಿಂದ ರ್ಯಾಂಡಮ್ ಆಗಿ 5 ಮತದಾನ ಖಾತ್ರಿ(ವಿವಿ ಪ್ಯಾಟ್) ಯಂತ್ರಗಳನ್ನು ಲಾಟರಿ ಮೂಲಕ ಆರಿಸಿ ಎಣಿಕೆ ಮಾಡಲಾಗುವುದು. ಇದನ್ನು ಕಂಟ್ರೋಲ್ ಯೂನಿಟ್ ಫಲಿತಾಂಶದೊಂದಿಗೆ ತಾಳೆ ಮಾಡಲಾಗುತ್ತದೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ 14 ಇವಿಎಂ ಟೇಬಲ್ನಂತೆ ಒಟ್ಟು 154 ಟೇಬಲ್, ಇಟಿಪಿಬಿಎಸ್ ಎಣಿಕೆಗಾಗಿ ತಲಾ 1ರಂತೆ ಒಟ್ಟು 11 ಟೇಬಲ್, ಅಂಚೆ ಮತಪತ್ರ ಎಣಿಕೆಗಾಗಿ ಒಟ್ಟು 30 ಟೇಬಲ್ ಸೇರಿದಂತೆ 195 ಟೇಬಲ್ಗಳಲ್ಲಿ ಮತ ಎಣಿಕಾ ಕಾರ್ಯವನ್ನು ನಡೆಸಲಾಗುವುದು. ಇದಕ್ಕಾಗಿ ಒಟ್ಟು 651 ಅಧಿಕಾರಿ/ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ.
ಸುಗಮವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯನ್ನು ಒದಗಿಸಲು 5 ಮಂದಿ ಡಿವೈ.ಎಸ್ಪಿ, 17 ಮಂದಿ ಪೊಲೀಸ್ ಇನ್ಸ್ಪೆಕ್ಟರ್, 33 ಮಂದಿ ಸಬ್ ಇನ್ಸ್ಪೆಕ್ಟರ್, 55 ಮಂದಿ ಸಹಾಯಕ ಸಬ್ಇನ್ಸ್ಪೆಕ್ಟರ್, 285 ಮಂದಿ ಪೊಲೀಸ್ ಸಿಬ್ಬಂದಿ, 18 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಶಸ್ತ್ರ ಸಜ್ಜಿತ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ 11ವಿಧಾನ ಸಭಾ ಕ್ಷೇತ್ರಗಳ ಎಣಿಕೆ ಎಲ್ಲೆಲ್ಲಿ ನಡೆಯಲಿದೆ ಎಂಬ ವಿವರ ಕೆಳಗಿನಂತಿದೆ.
ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ13ರಂದು ಬೆಳಗ್ಗೆ 8 ಗಂಟೆಯಿಂದ ತುಮಕೂರಿನಲ್ಲಿ ನಡೆಯಲಿದೆ.
138-ಮಧುಗಿರಿ,
137-ಪಾವಗಡ,
134-ಕೊರಟಗೆರೆ
136-ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ.
128-ಚಿಕ್ಕ ನಾಯಕನಹಳ್ಳಿ, 129-ತಿಪಟೂರು, 130-ತುರುವೇಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ವಿಶ್ವ ವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ.
131-ಕುಣಿಗಲ್,
132-ತುಮಕೂರು ನಗರ,
133-ತುಮಕೂರು ಗ್ರಾಮಾಂತರ,
135-ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ವಿಶ್ವ ವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.
ನಗು
ನೀನು ಕಣ್ಣಲ್ಲೇ
ನಗುತೀಯ.
ಬಾಯಲ್ಲಿ
ನಕ್ಕು
ಕಣ್ಣಲ್ಲಿ ಕೋಪ
ತೋರಿಸುತ್ತೀಯ
ಬಯ್ದು ಬಯ್ದು
ಸಾಕಾಗಿ
ಕೊನೆಗೆ
ನಕ್ಕುಬಿಡುತೀಯ.
ನೋವಲ್ಲಿದ್ದರೂ
ಮಗು ನಕ್ಕರೆ
ನೀನೂ ನಕ್ಕುಬಿಡುತೀಯ
ನೀನು ಬೆಳಗ್ಗೆ
ನಕ್ಕ ದಿನ
ನನಗೆ ಆಯಾಸ ಇಲ್ಲ
ಸ್ನೇಹಿತೆಯರ ಜೊತೆ
ನಿನ್ನ ಕಿಸಕಿಸ ನಗು
ನನ್ನೊಂದಿಗೆ ಬರೆ ಹುಸಿ ನಗು
ನೀನು ನಕ್ಕರೆ
ನಾನೂ ನಗುವೇ…
ಡಾ. ರಜನಿ
ತುರುವೇಕೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಂದಿಸುವ, ಮತೀಯ, ಜಾತಿಯವಾದಿ ಶಕ್ತಿಗಳ ಬಗೆಗೆ ಜಿಲ್ಲೆಯ ಮತದಾರ ಎಚ್ಚರಿಕೆಯಿಂದ ಇದ್ದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆ ಕೊಟ್ಟು ದೇಶದ ಎಲ್ಲಾ ನಾಗರಿಕರ ಒಳಿತಿಗೆ ದುಡಿಯುವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಲೇಖಕ ಡಾ.ಕೆ.ಪಿ ನಟರಾಜ್ ಮತದಾರರಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದ ಕನ್ನಡ ಭವನದಲ್ಲಿ ತುಮಕೂರು ಜಾಗೃತ ಮತದಾರರ ವೇದಿಕೆ ಮತ್ತು ಎದ್ದೇಳು ಕರ್ನಾಟಕ ವತಿಯಿಂದ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣೆಯ ಹೊಸ್ತಿಲಿನಲ್ಲಿರುವ ಮತದಾರ ಯಾರಿಗೆ ಮತ ಕೊಡಬೇಕು ಎಂಬ ಗೊಂದಲದಲ್ಲಿದ್ದಾನೆ.
ಈ ಸನ್ನಿವೇಶವನ್ನು ಕುರುಕ್ಷೇತ್ರ ಯುದ್ಧ ನಡೆಯುವ ವೇಳೆ ಕೇಡಿನ ಪಕ್ಷಪಾತಿಯಾಗಿರುವ ರಕ್ತ ಸಂಬಂಧಿಕರು ಕೌರವನ ಜೊತೆಗಿದ್ದಾರೆ.ಇವರಲ್ಲಿ ಯಾರನ್ನು ಕೊಲ್ಲಬೇಕು, ಯಾರನ್ನು ಬಿಡಬೇಕು ಅನ್ನುವ ಗೊಂದಲ ಅರ್ಜುನನ್ನು ದ್ವಂದ್ವ ಆವರಿಸಿದ್ದನ್ನು ಕೃಷ್ಣ ಭಗವದ್ಗೀತೆ ಬೋಧಿಸಿ ಪರಿಹರಿಸಿದ.
ಇದೇ ಸನ್ನಿವೇಶ ಪ್ರಸ್ತುತ ಮತದಾರರ ಮುಂದಿದೆ. ಮತದಾರನಿಗೆ ಕೇಡಾವುದು, ಒಳಿತಾವುದು ಅನ್ನುವ ಕೃಷ್ಣನ ವಿವೇಕ ಜ್ಞಾನ ಬರಬೇಕಿದೆ ಎಂದರು.
ಚುನಾವಣೆಯಲ್ಲಿ ಹಣ, ಜಾತಿ ಆಮಿಷಕ್ಕೆ, ಮತೀಯ
ಶಕ್ತಿಗಳಿಗೆ ಬಲಿಯಾಗದೆ ಯಾವ ವ್ಯಕ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಾಗಿದೆ, ವಿರೋಧಿಯಾಗಿದೆ ಅನ್ನುವ ತಾರತಮ್ಯ ಜ್ಞಾನವನ್ನು ಗುರುತಿಸಿ ಕೊಳ್ಳಬೇಕಾಗುತ್ತದೆ.ಇಲ್ಲವಾದಲ್ಲಿ ಮತ್ತೊಂದು ಗುಲಾಮಗಿರಿ ಶೋಷಕ ವ್ಯವಸ್ಥೆಗೆ ಮತದಾರ ಸಿಕ್ಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಆಯ್ಕೆಯಾಗುವಾಗ ಇಡೀ ದೇಶದೊಳಗೆ ಹೊಸ ಪ್ರಭುತ್ವ ವ್ಯವಸ್ಥೆಯ ನಿರೀಕ್ಷೆ ಇತ್ತು. ಆದರೆ ಅವರ ಆಡಳಿತ ಪ್ರಜಾಪ್ರಭುತ್ವ ಕಡೆಗಣಿಸಿ ಯಾವ ಬಗೆಯ ಆಡಳಿತ ನೀಡಿತು, ಸಮಸ್ತ ನಾಗರೀಕರ, ಮಹಿಳೆ, ದಲಿತರ ಶೋಷಣೆ ಮಾಡಿತು. ಮಿಗಿಲಾಗಿ
ಸಂವಿಧಾನ ಬದಲಾಯಿಸುವ ಸಾರ್ವಜನಿಕ ಹೇಳಿಕೆ ಗಳು ಜೀವ ವಿರೋಧಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುವ ವ್ಯವಸ್ಥೆಯೊಂದು ಎದುರಾಗಿದೆ ಎಂದರು.
ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಜನ ಲೋಕಪಾಲ ಮಸೂದೆಯನ್ನು ಜಾರಿಗೆ ತಂದು ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಯಿತು.
ಆದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜನ ಲೋಕಪಾಲ್ ಇದ್ದು ಇಲ್ಲದಂತಾಗಿದೆ ಎಂದು ಟೀಕಿಸಿದರು.
ನಾವು ಕಾಂಗ್ರೆಸ್ ಗೆ ಏಕೆ ಮತ ಹಾಕಬೇಕೆಂದರೆ ಕಾಂಗ್ರೆಸ್ ಪಕ್ಷ ಹೊಂದಿರುವ ಇತಿಹಾಸ ಚರಿತ್ರೆ ಚಾರಿತ್ಯ ಇವುಗಳನ್ನು ಆಧರಿಸಿ ಹೇಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
ರಾಹುಲ್ ಗಾಂಧಿಯವರು ಒಡೆದ ಮನಸ್ಸುಗಳ ಮರು ಕಟ್ಟಲು ಇಡೀ ದೇಶದಾದ್ಯಂತ ಭಾರತ್ ಜೋಡ ಯಾತ್ರೆ ಮಾಡಿದವರು ಎಂದರು.
ಈ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ ಎಚ್ ವಿ ರಂಗಸ್ವಾಮಿ , ನಟರಾಜಪ್ಪ ಯರಗುಂಟೆ
ಇನ್ನಿತರರು ಇದ್ದರು.